Digital-Divide/C2/Oral-Dental-Hygiene-and-Care/Kannada
From Script | Spoken-Tutorial
Time | Narration |
00:02 | ರಾಮು ಬೆಳಿಗ್ಗೆ ಎದ್ದು ಶಾಲೆಗೆ ಹೋಗುವ ಸಿದ್ಧತೆ ನಡೆಸುತ್ತಾನೆ. |
00:08 | ಅವನು ನಿದ್ದೆಯ ಮಂಪರಿನಲ್ಲಿ ಇದ್ದಾನೆ. ಆದರೂ ತನ್ನ ಬ್ರಶ್ ತೆಗೆದುಕೊಂಡು, ಅದಕ್ಕೆ ಪೇಸ್ಟ್ ಹಚ್ಚಿ ಹಲ್ಲು ಉಜ್ಜಲು ಆರಂಭಿಸುತ್ತಾನೆ. |
00:15 | ಅವನಿಗೆ ಶಾಲೆಗೆ ಹೋಗಬೇಕಾಗಿದೆ, ಆದ್ದರಿಂದ ಬೇಗನೆ ಹಲ್ಲುಜ್ಜುತ್ತಾನೆ. |
00:20 | ಬಾಯಿ ಮುಕ್ಕಳಿಸಿ ಸ್ನಾನಮಾಡಲು ಹೋಗುತ್ತಾನೆ ಹಾಗೂ ಸಿದ್ಧನಾಗುತ್ತಾನೆ. |
00:25 | ರಾಮುವಿನ ತಾಯಿ ಅವನನ್ನು ತಿಂಡಿ ತಿನ್ನಲು ಕರೆಯುತ್ತಾರೆ. |
00:28 | ರಾಮು ತಿಂಡಿ ತಿನ್ನುತ್ತಾನೆ. |
00:31 | ತಿನ್ನುವಾಗ ಆಹಾರವು ಅವನ ಹಲ್ಲುಗಳ ನಡುವೆ ಅಂಟಿಕೊಳ್ಳುತ್ತದೆ ಮತ್ತು ಅವನು ಜೋರಾಗಿ ಕಿರಿಚಿಕೊಳ್ಳುತ್ತಾನೆ. |
00:36 | ತಾಯಿಯು ಅವನಿಗೆ ನೀರನ್ನು ಕೊಡುತ್ತಾಳೆ ಮತ್ತು ಈಗಾಗಲೇ ತಡವಾಗಿರುವುದರಿಂದ ಬೇಗನೆ ಶಾಲೆಗೆ ಹೋಗಲು ಹೇಳುತ್ತಾಳೆ. |
00:43 | ಇನ್ನೂ ನೋವಿನಲ್ಲಿರುವ ರಾಮು, ತನ್ನ ಚೀಲವನ್ನು ಎತ್ತಿಕೊಂಡು ಮನೆಯಿಂದ ಹೊರಡುತ್ತಾನೆ. |
00:48 | ದಾರಿಯಲ್ಲಿ ಅವನಿಗೆ ಗೆಳೆಯನು ಸಿಗುತ್ತಾನೆ. |
00:51 | ನೋವಿನಲ್ಲಿರುವ ಇವನನ್ನು ನೋಡಿದ ಗೆಳೆಯ ಸುರೇಶನು ಕಾರಣವನ್ನು ಕೇಳುತ್ತಾನೆ. |
00:56 | ರಾಮು ನಡೆದ ಘಟನೆಯನ್ನು ವಿವರಿಸುತ್ತಾನೆ. |
00:59 | ರಾಮು ಹೇಳುವುದನ್ನು ಸುರೇಶನು ತಾಳ್ಮೆಯಿಂದ ಕೇಳುತ್ತಾನೆ. |
01:02 | ನಂತರ ಸುರೇಶನು ತನ್ನ ನೆರೆಹೊರೆಯಲ್ಲಿರುವ ಒಬ್ಬ ದಂತವೈದ್ಯರ ಬಗ್ಗೆ ರಾಮುವಿಗೆ ಹೇಳುತ್ತಾನೆ. |
01:07 | ಶಾಲೆ ಮುಗಿದ ಬಳಿಕ ರಾಮುವನ್ನು ಆ ದಂತವೈದ್ಯರ ಬಳಿಗೆ ಕರೆದೊಯ್ಯುವುದಾಗಿ ಸುರೇಶನು ಭರವಸೆ ಕೊಡುತ್ತಾನೆ. |
01:13 | Bridging the digital divide ಎಂಬ 'ಸ್ಪೋಕನ್ ಟ್ಯುಟೋರಿಯಲ್'ಗೆ ನಿಮಗೆ ಸ್ವಾಗತ. |
01:18 | ಇಲ್ಲಿ, ಬಾಯಿಯ ಆರೋಗ್ಯವನ್ನು ಕಾಯ್ದುಕೊಳುವ ರೀತಿಗಳು, ಪ್ರಾಥಮಿಕ ಆರೈಕೆ ಮತ್ತು ದಂತವೈದ್ಯರ ಸಲಹೆ ಪಡೆಯುವುದರ ಬಗ್ಗೆ ನಾವು ಚರ್ಚಿಸುವೆವು. |
01:27 | ಶಾಲೆಯಿಂದ ಮರಳಿ ಬರುವಾಗ ಸುರೇಶ ಮತ್ತು ರಾಮು ದಂತವೈದ್ಯರನ್ನು ಭೇಟಿಮಾಡುತ್ತಾರೆ. |
01:33 | ದಂತವೈದ್ಯರು ರಾಮುವಿನ ಹಲ್ಲುಗಳನ್ನು ಪರೀಕ್ಷಿಸಿ, ಅವನ ಹಲ್ಲಿನಲ್ಲಿ ಒಂದು ಸಣ್ಣ ಕುಳಿ ಇದೆ ಎಂದು ಅವನಿಗೆ ಹೇಳುತ್ತಾರೆ. |
01:39 | ಆಗ ಅವರು ಹುಡುಗರಿಗೆ ಕುಳಿಗಳು ಉಂಟಾಗುವ ಕಾರಣಗಳನ್ನು ಹೇಳುತ್ತಾರೆ: |
01:45 | * ಹಲ್ಲುಗಳಲ್ಲಿ ಸಿಕ್ಕಿಕೊಂಡ ಆಹಾರ |
01:48 | * ಹಲ್ಲುಗಳನ್ನು ಸರಿಯಾಗಿ ಉಜ್ಜದೇ ಇರುವುದು |
01:52 | * ಹೆಚ್ಚಿನ ಪ್ರಮಾಣದಲ್ಲಿ ಸಿಟ್ರಿಕ್-ಆಸಿಡ್ ಅನ್ನು ಹೊಂದಿರುವ ತಂಪು ಪಾನೀಯಗಳು. |
01:57 | ನಂತರ, ದಂತವೈದ್ಯರು ಈ ತೆರದ ನೋವನ್ನು ತಡೆಗಟ್ಟಲು ಸಹಾಯಮಾಡುವ ಕ್ರಮಗಳನ್ನು ಸೂಚಿಸುತ್ತಾರೆ: |
02:04 | * ಖನಿಜ ಹಾಗೂ ಕ್ಯಾಲ್ಶಿಯಂಗಳು ಹೇರಳವಾಗಿರುವ ಆಹಾರವನ್ನು ಸೇವಿಸುವುದು |
02:08 | * ಹಲ್ಲುಗಳನ್ನು ಸರಿಯಾಗಿ ಉಜ್ಜುವುದು |
02:11 | * ದಿನದಲ್ಲಿ ಎರಡು ಸಲ ಹಲ್ಲು ಉಜ್ಜುವುದು |
02:14 | * ಆಹಾರ ಸೇವಿಸಿದ ನಂತರ ಪ್ರತಿಸಲ ನಿಮ್ಮ ಬಾಯಿಮುಕ್ಕಳಿಸುವುದು. |
02:17 | ಪ್ರತಿ ಆರು ತಿಂಗಳಿಗೊಮ್ಮೆ ದಂತವೈದ್ಯರನ್ನು ಭೇಟಿಮಾಡುವುದು, ಎಲ್ಲ ವಯಸ್ಸಿನವರಿಗೂ ಒಳ್ಳೆಯದು ಎಂದು ಪರಿಗಣಿಸಲಾಗುತ್ತದೆ. |
02:24 | ಈ ಕೆಳಗಿನ ಸಂದರ್ಭಗಳಲ್ಲಿ: |
02:25 | * ಹಲ್ಲುಗಳು ಅಸಮವಾಗಿದ್ದರೆ, ಒತ್ತೊತ್ತಾಗಿದ್ದರೆ |
02:31 | * ಹಲ್ಲುಗಳಲ್ಲಿ ಕುಳಿಗಳು ಕಂಡುಬಂದರೆ |
02:34 | * ತಂಪು ಅಥವಾ ಬಿಸಿಯಾದ ಆಹಾರಕ್ಕೆ ನಿಮ್ಮ ಹಲ್ಲುಗಳು ಸೆನ್ಸಿಟಿವ್ ಆಗಿದ್ದರೆ (ಪ್ರತಿಕ್ರಿಯಿಸಿದರೆ) ದಂತವೈದ್ಯರನ್ನು ಭೇಟಿಮಾಡಿ. |
02:38 | * ಜಗಿಯುವ ಭಾಗದ ಹೊರ ಮತ್ತು ಒಳಭಾಗಗಳನ್ನು ಮೆತ್ತಗೆ ಬ್ರಷ್ ಮಾಡಿ. |
02:45 | * ಒಳ್ಳೆಯ ಉಸಿರನ್ನು ಕಾಪಾಡಲು ಮತ್ತು ರೋಗಾಣುಗಳಿಂದ ಮುಕ್ತಿ ಪಡೆಯಲು ನಾಲಿಗೆಯನ್ನು ಸಹ ಬ್ರಷ್ ಮಾಡಿ. |
02:53 | ಮಿಸ್ವಾಕ್, ಪೀಲು ಗಿಡದ ರೆಂಬೆಯಿಂದ ಕತ್ತರಿಸಿದ ಜಗಿಯುವ ಒಂದು ಕಡ್ಡಿಯಾಗಿದೆ. |
02:58 | * ಈ ಕಡ್ಡಿಯನ್ನು ಜಗಿಯುವುದು ಅವಶ್ಯಕ. |
03:01 | * ನಂತರ, ಈ ಜಗಿದ ಕಡ್ಡಿಯನ್ನು ನೈಸರ್ಗಿಕ ಬ್ರಷ್ ನ ಹಾಗೆ ಬಳಸಬಹುದು. |
03:06 | ನೆನಪಿಡಿ, ನಿಮ್ಮ ಹಲ್ಲುಗಳ ಆರೈಕೆ ಮತ್ತು ಕಾಲಕಾಲಕ್ಕೆ ಸರಿಯಾಗಿ ದಂತವೈದ್ಯರನ್ನು ಭೇಟಿಮಾಡುವುದು ಬಾಯಿಯ ಆರೋಗ್ಯವನ್ನು ಕಾಪಾಡಲು ಸಹಾಯಮಾಡುತ್ತದೆ. |
03:14 | ನಿಮ್ಮ ಆರೋಗ್ಯವನ್ನು ಕಾಯ್ದುಕೊಳ್ಳಿ. ಧನ್ಯವಾದಗಳು. |
03:17 | ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುವ ವೀಡಿಯೋವನ್ನು ವೀಕ್ಷಿಸಿ. |
03:21 | ಇದು “ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪದ ಸಾರಾಂಶವಾಗಿದೆ. |
03:24 | ನಿಮಗೆ ಒಳ್ಳೆಯ ‘ಬ್ಯಾಂಡ್ವಿಡ್ತ್’ ಸಿಗದಿದ್ದರೆ, ನೀವು ಇದನ್ನು ಡೌನ್ಲೋಡ್ ಮಾಡಿ ನೋಡಬಹುದು. |
03:29 | “ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪದ ತಂಡವು: * 'ಸ್ಪೋಕನ್ ಟ್ಯುಟೋರಿಯಲ್’ಗಳನ್ನು ಬಳಸಿ ಕಾರ್ಯಶಾಲೆಗಳನ್ನು ನಡೆಸುತ್ತದೆ. |
03:35 | * ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ. |
03:38 | ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಈ ಲಿಂಕ್ ಗೆ ಬರೆಯಿರಿ:
contact@spoken-tutorial.org |
03:46 | "ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪವು, “ಟಾಕ್ ಟು ಎ ಟೀಚರ್” ಪ್ರಕಲ್ಪದ ಒಂದು ಭಾಗವಾಗಿದೆ. |
03:51 | ಇದು ICT, MHRD ಮೂಲಕ ರಾಷ್ಟ್ರೀಯ ಸಾಕ್ಷರತಾ ಮಿಷನ್, ಭಾರತ ಸರ್ಕಾರದ ಆಧಾರವನ್ನು ಪಡೆದಿದೆ. |
03:57 | ಈ ಮಿಷನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುತ್ತದೆ: |
04:14 | ಈ ಟ್ಯುಟೋರಿಯಲ್ ನ ಅನಿಮೇಶನ್, ಶೀತಲ್ ಮತ್ತು ಆರತಿ ಅವರ ಕೊಡುಗೆಯಾಗಿದೆ. |
04:21 | IIT Bombay ಯಿಂದ, ಸ್ಕ್ರಿಪ್ಟ್ ನ ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕ ----------- .
ಧನ್ಯವಾದಗಳು. |