Digital-Divide/C2/Oral-Dental-Hygiene-and-Care/Kannada

From Script | Spoken-Tutorial
Jump to: navigation, search
Time Narration
00:02 ರಾಮು ಬೆಳಿಗ್ಗೆ ಎದ್ದು ಶಾಲೆಗೆ ಹೋಗುವ ಸಿದ್ಧತೆ ನಡೆಸುತ್ತಾನೆ.
00:08 ಅವನು ನಿದ್ದೆಯ ಮಂಪರಿನಲ್ಲಿ ಇದ್ದಾನೆ. ಆದರೂ ತನ್ನ ಬ್ರಶ್ ತೆಗೆದುಕೊಂಡು, ಅದಕ್ಕೆ ಪೇಸ್ಟ್ ಹಚ್ಚಿ ಹಲ್ಲು ಉಜ್ಜಲು ಆರಂಭಿಸುತ್ತಾನೆ.
00:15 ಅವನಿಗೆ ಶಾಲೆಗೆ ಹೋಗಬೇಕಾಗಿದೆ, ಆದ್ದರಿಂದ ಬೇಗನೆ ಹಲ್ಲುಜ್ಜುತ್ತಾನೆ.
00:20 ಬಾಯಿ ಮುಕ್ಕಳಿಸಿ ಸ್ನಾನಮಾಡಲು ಹೋಗುತ್ತಾನೆ ಹಾಗೂ ಸಿದ್ಧನಾಗುತ್ತಾನೆ.
00:25 ರಾಮುವಿನ ತಾಯಿ ಅವನನ್ನು ತಿಂಡಿ ತಿನ್ನಲು ಕರೆಯುತ್ತಾರೆ.
00:28 ರಾಮು ತಿಂಡಿ ತಿನ್ನುತ್ತಾನೆ.
00:31 ತಿನ್ನುವಾಗ ಆಹಾರವು ಅವನ ಹಲ್ಲುಗಳ ನಡುವೆ ಅಂಟಿಕೊಳ್ಳುತ್ತದೆ ಮತ್ತು ಅವನು ಜೋರಾಗಿ ಕಿರಿಚಿಕೊಳ್ಳುತ್ತಾನೆ.
00:36 ತಾಯಿಯು ಅವನಿಗೆ ನೀರನ್ನು ಕೊಡುತ್ತಾಳೆ ಮತ್ತು ಈಗಾಗಲೇ ತಡವಾಗಿರುವುದರಿಂದ ಬೇಗನೆ ಶಾಲೆಗೆ ಹೋಗಲು ಹೇಳುತ್ತಾಳೆ.
00:43 ಇನ್ನೂ ನೋವಿನಲ್ಲಿರುವ ರಾಮು, ತನ್ನ ಚೀಲವನ್ನು ಎತ್ತಿಕೊಂಡು ಮನೆಯಿಂದ ಹೊರಡುತ್ತಾನೆ.
00:48 ದಾರಿಯಲ್ಲಿ ಅವನಿಗೆ ಗೆಳೆಯನು ಸಿಗುತ್ತಾನೆ.
00:51 ನೋವಿನಲ್ಲಿರುವ ಇವನನ್ನು ನೋಡಿದ ಗೆಳೆಯ ಸುರೇಶನು ಕಾರಣವನ್ನು ಕೇಳುತ್ತಾನೆ.
00:56 ರಾಮು ನಡೆದ ಘಟನೆಯನ್ನು ವಿವರಿಸುತ್ತಾನೆ.
00:59 ರಾಮು ಹೇಳುವುದನ್ನು ಸುರೇಶನು ತಾಳ್ಮೆಯಿಂದ ಕೇಳುತ್ತಾನೆ.
01:02 ನಂತರ ಸುರೇಶನು ತನ್ನ ನೆರೆಹೊರೆಯಲ್ಲಿರುವ ಒಬ್ಬ ದಂತವೈದ್ಯರ ಬಗ್ಗೆ ರಾಮುವಿಗೆ ಹೇಳುತ್ತಾನೆ.
01:07 ಶಾಲೆ ಮುಗಿದ ಬಳಿಕ ರಾಮುವನ್ನು ಆ ದಂತವೈದ್ಯರ ಬಳಿಗೆ ಕರೆದೊಯ್ಯುವುದಾಗಿ ಸುರೇಶನು ಭರವಸೆ ಕೊಡುತ್ತಾನೆ.
01:13 Bridging the digital divide ಎಂಬ 'ಸ್ಪೋಕನ್ ಟ್ಯುಟೋರಿಯಲ್'ಗೆ ನಿಮಗೆ ಸ್ವಾಗತ.
01:18 ಇಲ್ಲಿ, ಬಾಯಿಯ ಆರೋಗ್ಯವನ್ನು ಕಾಯ್ದುಕೊಳುವ ರೀತಿಗಳು, ಪ್ರಾಥಮಿಕ ಆರೈಕೆ ಮತ್ತು ದಂತವೈದ್ಯರ ಸಲಹೆ ಪಡೆಯುವುದರ ಬಗ್ಗೆ ನಾವು ಚರ್ಚಿಸುವೆವು.
01:27 ಶಾಲೆಯಿಂದ ಮರಳಿ ಬರುವಾಗ ಸುರೇಶ ಮತ್ತು ರಾಮು ದಂತವೈದ್ಯರನ್ನು ಭೇಟಿಮಾಡುತ್ತಾರೆ.
01:33 ದಂತವೈದ್ಯರು ರಾಮುವಿನ ಹಲ್ಲುಗಳನ್ನು ಪರೀಕ್ಷಿಸಿ, ಅವನ ಹಲ್ಲಿನಲ್ಲಿ ಒಂದು ಸಣ್ಣ ಕುಳಿ ಇದೆ ಎಂದು ಅವನಿಗೆ ಹೇಳುತ್ತಾರೆ.
01:39 ಆಗ ಅವರು ಹುಡುಗರಿಗೆ ಕುಳಿಗಳು ಉಂಟಾಗುವ ಕಾರಣಗಳನ್ನು ಹೇಳುತ್ತಾರೆ:
01:45 * ಹಲ್ಲುಗಳಲ್ಲಿ ಸಿಕ್ಕಿಕೊಂಡ ಆಹಾರ
01:48 * ಹಲ್ಲುಗಳನ್ನು ಸರಿಯಾಗಿ ಉಜ್ಜದೇ ಇರುವುದು
01:52 * ಹೆಚ್ಚಿನ ಪ್ರಮಾಣದಲ್ಲಿ ಸಿಟ್ರಿಕ್-ಆಸಿಡ್ ಅನ್ನು ಹೊಂದಿರುವ ತಂಪು ಪಾನೀಯಗಳು.
01:57 ನಂತರ, ದಂತವೈದ್ಯರು ಈ ತೆರದ ನೋವನ್ನು ತಡೆಗಟ್ಟಲು ಸಹಾಯಮಾಡುವ ಕ್ರಮಗಳನ್ನು ಸೂಚಿಸುತ್ತಾರೆ:
02:04 * ಖನಿಜ ಹಾಗೂ ಕ್ಯಾಲ್ಶಿಯಂಗಳು ಹೇರಳವಾಗಿರುವ ಆಹಾರವನ್ನು ಸೇವಿಸುವುದು
02:08 * ಹಲ್ಲುಗಳನ್ನು ಸರಿಯಾಗಿ ಉಜ್ಜುವುದು
02:11 * ದಿನದಲ್ಲಿ ಎರಡು ಸಲ ಹಲ್ಲು ಉಜ್ಜುವುದು
02:14 * ಆಹಾರ ಸೇವಿಸಿದ ನಂತರ ಪ್ರತಿಸಲ ನಿಮ್ಮ ಬಾಯಿಮುಕ್ಕಳಿಸುವುದು.
02:17 ಪ್ರತಿ ಆರು ತಿಂಗಳಿಗೊಮ್ಮೆ ದಂತವೈದ್ಯರನ್ನು ಭೇಟಿಮಾಡುವುದು, ಎಲ್ಲ ವಯಸ್ಸಿನವರಿಗೂ ಒಳ್ಳೆಯದು ಎಂದು ಪರಿಗಣಿಸಲಾಗುತ್ತದೆ.
02:24 ಈ ಕೆಳಗಿನ ಸಂದರ್ಭಗಳಲ್ಲಿ:
02:25 * ಹಲ್ಲುಗಳು ಅಸಮವಾಗಿದ್ದರೆ, ಒತ್ತೊತ್ತಾಗಿದ್ದರೆ
02:31 * ಹಲ್ಲುಗಳಲ್ಲಿ ಕುಳಿಗಳು ಕಂಡುಬಂದರೆ
02:34 * ತಂಪು ಅಥವಾ ಬಿಸಿಯಾದ ಆಹಾರಕ್ಕೆ ನಿಮ್ಮ ಹಲ್ಲುಗಳು ಸೆನ್ಸಿಟಿವ್ ಆಗಿದ್ದರೆ (ಪ್ರತಿಕ್ರಿಯಿಸಿದರೆ) ದಂತವೈದ್ಯರನ್ನು ಭೇಟಿಮಾಡಿ.
02:38 * ಜಗಿಯುವ ಭಾಗದ ಹೊರ ಮತ್ತು ಒಳಭಾಗಗಳನ್ನು ಮೆತ್ತಗೆ ಬ್ರಷ್ ಮಾಡಿ.
02:45 * ಒಳ್ಳೆಯ ಉಸಿರನ್ನು ಕಾಪಾಡಲು ಮತ್ತು ರೋಗಾಣುಗಳಿಂದ ಮುಕ್ತಿ ಪಡೆಯಲು ನಾಲಿಗೆಯನ್ನು ಸಹ ಬ್ರಷ್ ಮಾಡಿ.
02:53 ಮಿಸ್ವಾಕ್, ಪೀಲು ಗಿಡದ ರೆಂಬೆಯಿಂದ ಕತ್ತರಿಸಿದ ಜಗಿಯುವ ಒಂದು ಕಡ್ಡಿಯಾಗಿದೆ.
02:58 * ಈ ಕಡ್ಡಿಯನ್ನು ಜಗಿಯುವುದು ಅವಶ್ಯಕ.
03:01 * ನಂತರ, ಈ ಜಗಿದ ಕಡ್ಡಿಯನ್ನು ನೈಸರ್ಗಿಕ ಬ್ರಷ್ ನ ಹಾಗೆ ಬಳಸಬಹುದು.
03:06 ನೆನಪಿಡಿ, ನಿಮ್ಮ ಹಲ್ಲುಗಳ ಆರೈಕೆ ಮತ್ತು ಕಾಲಕಾಲಕ್ಕೆ ಸರಿಯಾಗಿ ದಂತವೈದ್ಯರನ್ನು ಭೇಟಿಮಾಡುವುದು ಬಾಯಿಯ ಆರೋಗ್ಯವನ್ನು ಕಾಪಾಡಲು ಸಹಾಯಮಾಡುತ್ತದೆ.
03:14 ನಿಮ್ಮ ಆರೋಗ್ಯವನ್ನು ಕಾಯ್ದುಕೊಳ್ಳಿ. ಧನ್ಯವಾದಗಳು.
03:17 ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುವ ವೀಡಿಯೋವನ್ನು ವೀಕ್ಷಿಸಿ.
03:21 ಇದು “ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪದ ಸಾರಾಂಶವಾಗಿದೆ.
03:24 ನಿಮಗೆ ಒಳ್ಳೆಯ ‘ಬ್ಯಾಂಡ್ವಿಡ್ತ್’ ಸಿಗದಿದ್ದರೆ, ನೀವು ಇದನ್ನು ಡೌನ್ಲೋಡ್ ಮಾಡಿ ನೋಡಬಹುದು.
03:29 “ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪದ ತಂಡವು: * 'ಸ್ಪೋಕನ್ ಟ್ಯುಟೋರಿಯಲ್’ಗಳನ್ನು ಬಳಸಿ ಕಾರ್ಯಶಾಲೆಗಳನ್ನು ನಡೆಸುತ್ತದೆ.
03:35 * ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ.
03:38 ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಈ ಲಿಂಕ್ ಗೆ ಬರೆಯಿರಿ:

contact@spoken-tutorial.org

03:46 "ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪವು, “ಟಾಕ್ ಟು ಎ ಟೀಚರ್” ಪ್ರಕಲ್ಪದ ಒಂದು ಭಾಗವಾಗಿದೆ.
03:51 ಇದು ICT, MHRD ಮೂಲಕ ರಾಷ್ಟ್ರೀಯ ಸಾಕ್ಷರತಾ ಮಿಷನ್, ಭಾರತ ಸರ್ಕಾರದ ಆಧಾರವನ್ನು ಪಡೆದಿದೆ.
03:57 ಈ ಮಿಷನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುತ್ತದೆ:

http://spoken-tutorial.org/NMEICT-Intro.

04:14 ಈ ಟ್ಯುಟೋರಿಯಲ್ ನ ಅನಿಮೇಶನ್, ಶೀತಲ್ ಮತ್ತು ಆರತಿ ಅವರ ಕೊಡುಗೆಯಾಗಿದೆ.
04:21 IIT Bombay ಯಿಂದ, ಸ್ಕ್ರಿಪ್ಟ್ ನ ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕ ----------- .

ಧನ್ಯವಾದಗಳು.

Contributors and Content Editors

Sandhya.np14