Blender/C2/Types-of-Windows-Properties-Part-1/Kannada
From Script | Spoken-Tutorial
Time | Narration |
00:05 | ಬ್ಲೆಂಡರ್ ನ ಟ್ಯುಟೋರಿಯಲ್ಸ್ ಸರಣಿಗೆ ಸ್ವಾಗತ. |
00:09 | ಈ ಟ್ಯುಟೋರಿಯಲ್, ಬ್ಲೆಂಡರ್ 2.59 ರಲ್ಲಿನ ಪ್ರಾಪರ್ಟೀಸ್ ವಿಂಡೋ ಕುರಿತು ಆಗಿದೆ. |
00:16 | ಈ ಸ್ಕ್ರಿಪ್ಟ್ ನ ಅನುವಾದಕಿ ಐ ಐ ಟಿ ಬಾಂಬೆಯಿಂದ ಸಂಧ್ಯಾ ಪುಣೇಕರ್. |
00:29 | ಈ ಟ್ಯುಟೋರಿಯಲ್ ನೋಡಿದ ನಂತರ, ಪ್ರಾಪರ್ಟೀಸ್ ವಿಂಡೋ ಎಂದರೇನು; |
00:35 | ಪ್ರಾಪರ್ಟೀಸ್ ವಿಂಡೋನಲ್ಲಿಯ ರೆಂಡರ್ ಪ್ಯಾನಲ್ ಎಂದರೇನು; |
00:39 | ಪ್ರಾಪರ್ಟೀಸ್ ವಿಂಡೋದ ರೆಂಡರ್ ಪ್ಯಾನಲ್ ನಲ್ಲಿಯ ವಿವಿಧ ಸೆಟ್ಟಿಂಗ್ಸ್ ಯಾವುವು ಎನ್ನುವುದರ ಬಗೆಗೆ ನಾವು ಕಲಿಯುವೆವು. |
00:45 | ಬ್ಲೆಂಡರ್ ಇಂಟರ್ಫೇಸ್ ನ ಮೂಲ ಅಂಶಗಳನ್ನು ನೀವು ತಿಳಿದಿರುವಿರಿ ಎಂದು ನಾನು ಭಾವಿಸುತ್ತೇನೆ. |
00:50 | ಇಲ್ಲವಾದಲ್ಲಿ, ದಯವಿಟ್ಟು ನಮ್ಮ ಮೊದಲಿನ ಟ್ಯುಟೋರಿಯಲ್ Basic Description of the Blender Interface (ಬೇಸಿಕ್ ದಿಸ್ಕ್ರಿಪ್ಶನ್ ಅಫ್ ದ್ ಬ್ಲೆಂಡರ್ ಇಂಟರ್ಫೇಸ್) ಎನ್ನುವುದನ್ನು ನೋಡಿರಿ. |
00:58 | ಈ ಪ್ರಾಪರ್ಟೀಸ್ ವಿಂಡೋ, ವಿವಿಧ ಪ್ಯಾನಲ್ ಗಳನ್ನು ಒಳಗೊಂಡಿದೆ. ಇದು ನಮ್ಮ ಸ್ಕ್ರೀನ್ ನ ಬಲಬದಿಗೆ ಇರುತ್ತದೆ. |
01:08 | ಪ್ರಾಪರ್ಟೀಸ್ ವಿಂಡೋದ ಮೇಲ್ಗಡೆಗೆ ಐಕಾನ್ ಗಳ ಒಂದು ಸಾಲು ಇದೆ. |
01:14 | ಪ್ರಾಪರ್ಟೀಸ್ ವಿಭಾಗದಲ್ಲಿ ಬರುವ ವಿಭಿನ್ನ ಪ್ಯಾನಲ್ ಗಳನ್ನು ಈ ಐಕಾನ್ ಗಳು ಪ್ರತಿನಿಧಿಸುತ್ತವೆ. |
01:21 | ರೆಂಡರ್, ಸೀನ್, ವರ್ಲ್ಡ್, ಆಬ್ಜೆಕ್ಟ್ ಇತ್ಯಾದಿ. |
01:30 | ಬ್ಲೆಂಡರ್ ನಲ್ಲಿ ಕೆಲಸ ಮಾಡುವಾಗ ಬಹಳ ಉಪಯುಕ್ತವಿರುವ ಹಲವಾರು ಸೆಟ್ಟಿಂಗ್ ಗಳನ್ನು ಈ ಪ್ಯಾನಲ್ ಗಳು ಒಳಗೊಂಡಿವೆ. |
01:37 | ಉತ್ತಮ ವೀಕ್ಷಣೆ ಮತ್ತು ಗ್ರಹಿಕೆಗಳಿಗಾಗಿ ನಮ್ಮ ಪ್ರಾಪರ್ಟೀಸ್ ವಿಂಡೋವನ್ನು ನಾವು ರಿಸೈಜ್ ಮಾಡಲೇಬೇಕು. |
01:43 | ಪ್ರಾಪರ್ಟೀಸ್ ವಿಂಡೋದ ಎಡ ಅಂಚಿನ ಮೇಲೆ ಲೆಫ್ಟ್ ಕ್ಲಿಕ್ ಮಾಡಿರಿ, ಹಿಡಿಯಿರಿ ಮತ್ತು ಎಡಗಡೆಗೆ ಎಳೆಯಿರಿ. |
01:52 | ಪ್ರಾಪರ್ಟೀಸ್ ವಿಂಡೋದಲ್ಲಿಯ ಆಯ್ಕೆಗಳನ್ನು ಈಗ ಹೆಚ್ಚು ಸ್ಪಷ್ಟವಾಗಿ ನಾವು ನೋಡಬಹುದು. |
01:59 | ಬ್ಲೆಂಡರ್ ನ ವಿಂಡೋ ಗಳನ್ನು ಹೇಗೆ ರಿಸೈಜ್ ಮಾಡುವದೆಂದು ತಿಳಿಯಲು How to Change Window Types in Blender (ಹೌ ಟು ಚೇಂಜ್ ವಿಂಡೋ ಟೈಪ್ಸ್ ಇನ್ ಬ್ಲೆಂಡರ್) ಎನ್ನುವ ನಮ್ಮ ಟ್ಯುಟೋರಿಯಲ್ ನೋಡಿರಿ. |
02:12 | Render ಎನ್ನುವುದು ಪ್ರಾಪರ್ಟೀಸ್ ವಿಂಡೋನಲ್ಲಿ ಮೊದಲನೆಯ ಪ್ಯಾನಲ್ ಆಗಿದೆ. |
02:16 | ಡೀಫಾಲ್ಟ್ ಆಗಿ, ಬ್ಲೆಂಡರ್ ಅನ್ನು ನಾವು ಓಪನ್ ಮಾಡಿದಾಗಲೆಲ್ಲ ಬ್ಲೆಂಡರ್ ಇಂಟರ್ಫೇಸ್ ನಲ್ಲಿ ಇದು ತೋರಿಸಲ್ಪಡುತ್ತದೆ. |
02:23 | ಅನಿಮೇಶನ್ ನ ಕೊನೆಯ ಔಟ್ಪುಟ್ ಅನ್ನು ಕ್ರಿಯೇಟ್ ಮಾಡಲು ಈ ಪ್ಯಾನಲ್ ನಲ್ಲಿಯ ಸೆಟ್ಟಿಂಗ್ ಗಳು ಉಪಯೋಗಿಸಲ್ಪಡುತ್ತವೆ. |
02:31 | Image ಎನ್ನುವುದು ‘ಆಕ್ಟಿವ್ ಕ್ಯಾಮೆರಾ ವ್ಯೂ’ ನ ಒಂದೇ ಫ್ರೇಮ್ ಇಮೇಜ್ ಅನ್ನು ರೆಂಡರ್ ಮಾಡಲು ಉಪಯೋಗಿಸಲ್ಪಡುತ್ತದೆ. |
02:39 | Image ನ ಮೇಲೆ ಲೆಫ್ಟ್ ಕ್ಲಿಕ್ ಮಾಡಿರಿ. ಕೀಬೋರ್ಡ್ ಶಾರ್ಟ್ಕಟ್ ಗಾಗಿ, F12 ಅನ್ನು ಒತ್ತಿರಿ. |
02:48 | ಈ ‘ಆಕ್ಟಿವ್ ಕ್ಯಾಮೆರಾ ವ್ಯೂ’ ಒಂದೇ ಫ್ರೇಮ್ ಇಮೇಜ್ ನಂತೆ ರೆಂಡರ್ ಮಾಡಲ್ಪಡುತ್ತದೆ. |
02:55 | 3D ವ್ಯೂ ಗೆ ಮರಳಿ ಹೋಗಲು ನಿಮ್ಮ ಕೀಬೋರ್ಡ್ ಮೇಲಿನ ESC ಅನ್ನು ಒತ್ತಿರಿ. |
03:03 | Animation ಎನ್ನುವುದು ಎಲ್ಲಾ ಫ್ರೇಮ್ ಗಳ ಶ್ರೇಣಿಯನ್ನು ಅಥವಾ ಇಮೇಜ್ ನ ಒಂದು ಸರಣಿಯನ್ನು ರೆಂಡರ್ ಮಾಡಲು ಮತ್ತು ಮೂವೀ ಫೈಲ್ ಅನ್ನು ಕ್ರಿಯೇಟ್ ಮಾಡಲು ಉಪಯೋಗಿಸಲ್ಪಡುತ್ತದೆ. |
03:13 | ಡೀಫಾಲ್ಟ್ ಆಗಿ, ಟೈಮ್ಲೈನ್ ನಲ್ಲಿ ಫ್ರೇಮ್ ರೇಂಜ್, 1 ರಿಂದ 250 ಆಗಿದೆ. |
03:22 | Animation ನ ಮೇಲೆ ಲೆಫ್ಟ್ ಕ್ಲಿಕ್ ಮಾಡಿರಿ. ಫ್ರೇಮ್ 1 ರಿಂದ ಫ್ರೇಮ್ 250 ವರೆಗೆ, ಈ ಇಡೀ ಫ್ರೇಮ್ ರೇಂಜ್, ರೆಂಡರ್ ಮಾಡಲ್ಪಡುತ್ತಿದೆ. |
03:39 | ರೆಂಡರ್ ನ ಪ್ರೊಗ್ರೆಸ್ ಅನ್ನು ತಡೆಯಲು ESC ಅನ್ನು ಒತ್ತಿರಿ. |
03:43 | ಈ 3D ವ್ಯೂ ಗೆ ಮರಳಿ ಹೋಗಲು ESC ಅನ್ನು ಒತ್ತಿರಿ. |
03:48 | ರೆಂಡರ್ ಪ್ಯಾನಲ್ ನಲ್ಲಿಯ Display ಗೆ ಹೋಗಿರಿ. |
03:52 | Display ಎನ್ನುವುದು, ರೆಂಡರ್ ನ ಪ್ರೊಗ್ರೆಸ್ ಅನ್ನು ಸ್ಕ್ರೀನ್ ಮೇಲೆ ಹೇಗೆ ವೀಕ್ಷಿಸಬೇಕೆಂಬುದನ್ನು ಆರಿಸಿಕೊಳ್ಳಲು ನಮಗೆ ಸಹಾಯ ಮಾಡುತ್ತದೆ. |
03:58 | ಡೀಫಾಲ್ಟ್ ಆಗಿ, ಡಿಸ್ಪ್ಲೇ, Image Editor ಮೋಡ್ ನಲ್ಲಿ ಇರುತ್ತದೆ. ನನಗೆ ತೋರಿಸಲು ಅವಕಾಶ ಕೊಡಿ. ನಾನದನ್ನು ತೋರಿಸುತ್ತೇನೆ. |
04:05 | ಈ ‘ಆಕ್ಟಿವ್ ಕ್ಯಾಮೆರಾ ವ್ಯೂ’ ಅನ್ನು ರೆಂಡರ್ ಮಾಡಲು F12 ಅನ್ನು ಒತ್ತಿರಿ. |
04:09 | ರೆಂಡರ್ ಡಿಸ್ಪ್ಲೇ , UV/Image Editor ಎಂದು ಕಾಣಿಸಿಕೊಳ್ಳುತ್ತದೆ. |
04:15 | ಪ್ರತಿಯೊಂದು ಬಾರಿ ನಾವು ‘ಆಕ್ಟಿವ್ ಕ್ಯಾಮೆರಾ ವ್ಯೂ’ ಅನ್ನು ರೆಂಡರ್ ಮಾಡಿದಾಗ 3D ವ್ಯೂ, UV/ಇಮೇಜ್ ಎಡಿಟರ್ ಗೆ ಬದಲಾಯಿಸುತ್ತದೆ. |
04:22 | UV/ಇಮೇಜ್ ಎಡಿಟರ್ ನ ಬಗೆಗೆ ತಿಳಿಯಲು Types of windows - UV/Image Editor (ಟೈಪ್ಸ್ ಆಫ್ ವಿಂಡೋಸ್ - UV/ಇಮೇಜ್ ಎಡಿಟರ್) ಎನ್ನುವ ಟ್ಯುಟೋರಿಯಲ್ ನೋಡಿರಿ. |
04:31 | 3D ವ್ಯೂ ಗೆ ಮರಳಿ ಹೋಗಲು ESC ಅನ್ನು ಒತ್ತಿರಿ. |
04:36 | ರೆಂಡರ್ ಪ್ಯಾನಲ್ ನಲ್ಲಿಯ Display ಗೆ ಹೋಗಿರಿ. Image editor ನ ಮೇಲೆ ಲೆಫ್ಟ್ ಕ್ಲಿಕ್ ಮಾಡಿರಿ. |
04:44 | ಈ ಡ್ರಾಪ್-ಡೌನ್ ಮೆನ್ಯು, ರೆಂಡರ್ ಡಿಸ್ಪ್ಲೇದ ಆಯ್ಕೆಗಳ ಒಂದು ಲಿಸ್ಟ್ ಅನ್ನು ತೋರಿಸುತ್ತದೆ. |
04:51 | Full Screen ಆಯ್ಕೆಮಾಡಲು ಲೆಫ್ಟ್ ಕ್ಲಿಕ್ ಮಾಡಿರಿ. |
04:55 | ‘ಆಕ್ಟಿವ್ ಕ್ಯಾಮೆರಾ ವ್ಯೂ’ ಅನ್ನು ರೆಂಡರ್ ಮಾಡಲು F12 ಅನ್ನು ಒತ್ತಿರಿ. |
05:01 | ಈಗ, ಇಡೀ ಬ್ಲೆಂಡರ್ ಸ್ಕ್ರೀನ್, UV/ಇಮೇಜ್ ಎಡಿಟರ್ ನಿಂದ ಆಕ್ರಮಿಸಲ್ಪಟ್ಟಿದೆ. |
05:09 | ಫುಲ್-ಸ್ಕ್ರೀನ್ ರೆಂಡರ್ ಮೋಡ್ ನಿಂದ ಹೊರಬರಲು ಮತ್ತು ಬ್ಲೆಂಡರ್ ನ ವರ್ಕ್-ಸ್ಪೇಸ್ ಗೆ ಹಿಂತಿರುಗಲು ESC ಅನ್ನು ಒತ್ತಿರಿ. |
05:16 | ರೆಂಡರ್ ಪ್ಯಾನಲ್ ನಲ್ಲಿಯ Display ಗೆ ಹೋಗಿರಿ. Full Screen ನ ಮೇಲೆ ಲೆಫ್ಟ್ ಕ್ಲಿಕ್ ಮಾಡಿರಿ. ಲಿಸ್ಟ್ ನಿಂದ New window ವನ್ನು ಆಯ್ಕೆಮಾಡಿರಿ. |
05:28 | ‘ಆಕ್ಟಿವ್ ಕ್ಯಾಮೆರಾ ವ್ಯೂ’ ಅನ್ನು ರೆಂಡರ್ ಮಾಡಲು F12 ಅನ್ನು ಒತ್ತಿರಿ. |
05:31 | ಈಗ, ರೆಂಡರ್ ಡಿಸ್ಪ್ಲೇ, ವರ್ಕ್-ಸ್ಪೇಸ್ ನಲ್ಲಿ ಒಂದು ಹೊಸ ವಿಂಡೋದಂತೆ ಕಾಣಿಸಿಕೊಳ್ಳುವುದು. |
05:39 | ನಿಮ್ಮ ಅನಿಮೇಶನ್ ನ ಪ್ರಿವ್ಯೂಗಳನ್ನು ರೆಂಡರ್ ಮಾಡುವಾಗ ನೀವು ಇದನ್ನು ಬಹಳ ಉಪಯುಕ್ತವಾಗಿ ಕಾಣುವಿರಿ. |
05:44 | ಇದನ್ನು ಹೇಗೆ ಮಾಡುವುದೆಂದು ನಂತರದ ಟ್ಯುಟೋರಿಯಲ್ ಗಳಲ್ಲಿ ನಾವು ನೋಡುವೆವು. |
05:50 | ರೆಂಡರ್ ಡಿಸ್ಪ್ಲೇ ವಿಂಡೋವನ್ನು ಕ್ಲೋಸ್ ಮಾಡಿರಿ. |
05:55 | ರೆಂಡರ್ ಪ್ಯಾನಲ್ ನಲ್ಲಿಯ Display ಗೆ ಹೋಗಿರಿ. New Window ದ ಮೇಲೆ ಲೆಫ್ಟ್ ಕ್ಲಿಕ್ ಮಾಡಿರಿ. |
06:01 | Image editor ಮೋಡ್ ಅನ್ನು ಆಯ್ಕೆಮಾಡಲು ಲೆಫ್ಟ್ ಕ್ಲಿಕ್ ಮಾಡಿರಿ. ಈ ಡಿಸ್ಪ್ಲೇ, ಇಮೇಜ್ ಎಡಿಟರ್ ಮೋಡ್ ನಲ್ಲಿ ಆಗಿದೆ. |
06:08 | Dimensions ಎನ್ನುವುದು ನಾವು ನೋಡುವ ಮುಂದಿನ ಸೆಟ್ಟಿಂಗ್ ಆಗಿದೆ. ನಮಗೆ ಬೇಕಾದ ಔಟ್ಪುಟ್ ಗೆ ಅನುಗುಣವಾಗಿ ನಾವು ವಿವಿಧ ರೆಂಡರ್ ಪ್ರಿಸೆಟ್ಸ್ ಅನ್ನು ಇಲ್ಲಿ ಕಸ್ಟಮೈಜ್ ಮಾಡಬಹುದು. |
06:20 | Render Presets ನ ಮೇಲೆ ಲೆಫ್ಟ್ ಕ್ಲಿಕ್ ಮಾಡಿರಿ. ಒಂದು ಡ್ರಾಪ್-ಡೌನ್ ಮೆನ್ಯು ಕಾಣಿಸಿಕೊಳ್ಳುತ್ತದೆ. |
06:27 | ಇಲ್ಲಿ ಮುಖ್ಯವಾದ ರೆಂಡರ್ ಪ್ರಿಸೆಟ್ಸ್ ಗಳೆಲ್ಲ ಇರುವ ಒಂದು ಲಿಸ್ಟ್ ಇರುತ್ತದೆ. DVCPRO, HDTV, NTSC, PAL ಇತ್ಯಾದಿ. |
06:41 | ಇದೀಗ, ನಾವು ಇವುಗಳನ್ನು ಬದಿಗೆ ಇಡೋಣ ಮತ್ತು ರೆಂಡರ್ ಡೈಮೆನ್ಶನ್ ಸೆಟ್ಟಿಂಗ್ ಗಳೆಡೆಗೆ ಮುಂದುವರೆಯೋಣ. |
06:49 | ರೆಸಲ್ಯೂಶನ್ ಎನ್ನುವುದು ರೆಂಡರ್ ಡಿಸ್ಪ್ಲೇ ಯ ಹಾಗೂ ‘ಆಕ್ಟಿವ್ ಕ್ಯಾಮೆರಾ ವ್ಯೂ’ ನ ಉದ್ದ ಮತ್ತು ಅಗಲಗಳಾಗಿದೆ. |
06:56 | ಡೀಫಾಲ್ಟ್ ಆಗಿ, ಬ್ಲೆಂಡರ್ 2.59 ನಲ್ಲಿ ರೆಸಲ್ಯೂಶನ್, 1920 x 1080 ಪಿಕ್ಸೆಲ್ಸ್ ಇರುತ್ತದೆ. |
07:09 | ರೆಂಡರ್ ರೆಸಲ್ಯೂಶನ್ ನ ಪ್ರತಿಶತ ಮಾಪಕ 50% ಆಗಿದೆ. |
07:14 | ಹೀಗೆಂದರೆ, ನಿಜವಾದ ರೆಸಲ್ಯೂಶನ್ ನ ಕೇವಲ 50% ಮಾತ್ರ ರೆಂಡರ್ ಆಗುವುದು. ಇದನ್ನು ನಾನು ವಿವರಿಸುತ್ತೇನೆ- |
07:22 | ‘ಆಕ್ಟಿವ್ ಕ್ಯಾಮೆರಾ ವ್ಯೂ’ ಅನ್ನು ರೆಂಡರ್ ಮಾಡಲು F12 ಅನ್ನು ಒತ್ತಿರಿ. ಇದು ಡೀಫಾಲ್ಟ್ ಆಗಿ, ರೆಂಡರ್ ರೆಸಲ್ಯೂಶನ್ ಆಗಿದೆ. |
07:29 | ಇದು ನಿಜವಾದ ರೆಸಲ್ಯೂಶನ್ ನ ಅರ್ಧ ಅಥವಾ 50% ಮಾತ್ರ ಆಗಿದೆ. |
07:35 | ರೆಂಡರ್ ಡಿಸ್ಪ್ಲೇ ವಿಂಡೋವನ್ನು ಕ್ಲೋಸ್ ಮಾಡಿರಿ. |
07:40 | ರೆಂಡರ್ ಪ್ಯಾನಲ್ ನಲ್ಲಿ, Resolution ನ ಕೆಳಗೆ, 50% ಮೇಲೆ ಲೆಫ್ಟ್ ಕ್ಲಿಕ್ ಮಾಡಿ ಹಿಡಿಯಿರಿ ಮತ್ತು ಬಲಕ್ಕೆ ಎಳೆಯಿರಿ. |
07:50 | ಈ ಪ್ರತಿಶತ 100% ಗೆ ಬದಲಾಗುವುದು. ಪ್ರತಿಶತವನ್ನು ಬದಲಾಯಿಸುವ ಇನ್ನೊಂದು ವಿಧಾನವೆಂದರೆ- |
08:00 | 100% ಮೇಲೆ ಲೆಫ್ಟ್ ಕ್ಲಿಕ್ ಮಾಡಿರಿ. ಈಗ ಕೀಬೋರ್ಡ್ ಮೇಲೆ 100 ಅನ್ನು ಟೈಪ್ ಮಾಡಿರಿ ಮತ್ತು Enter ಅನ್ನು ಒತ್ತಿರಿ. |
08:12 | ‘ಆಕ್ಟಿವ್ ಕ್ಯಾಮೆರಾ ವ್ಯೂ’ ಅನ್ನು ರೆಂಡರ್ ಮಾಡಲು F12 ಅನ್ನು ಒತ್ತಿರಿ. |
08:18 | 1920 x 1080 ಪಿಕ್ಸೆಲ್ ಗಳ ಸಂಪೂರ್ಣ 100% ರೆಸಲ್ಯೂಶನ್ ರೆಂಡರ್ ಇಲ್ಲಿ ಇರುತ್ತದೆ. |
08:27 | ರೆಂಡರ್ ಡಿಸ್ಪ್ಲೇ ವಿಂಡೋವನ್ನು ಕ್ಲೋಸ್ ಮಾಡಿರಿ. ಈಗ, ನನಗೆ ರೆಸಲ್ಯೂಶನ್ ಅನ್ನು 720 x 576 ಪಿಕ್ಸೆಲ್ ಗಳಿಗೆ ಬದಲಾಯಿಸಬೇಕಾಗಿದೆ. |
08:38 | 1920 ಯ ಮೇಲೆ ಲೆಫ್ಟ್ ಕ್ಲಿಕ್ ಮಾಡಿರಿ. ನಿಮ್ಮ ಕೀಬೋರ್ಡ್ ಮೇಲೆ 720 ಅನ್ನು ಟೈಪ್ ಮಾಡಿರಿ ಮತ್ತು Enter ಅನ್ನು ಒತ್ತಿರಿ. |
08:49 | ಮತ್ತೆ, 1080 ಯ ಮೇಲೆ ಲೆಫ್ಟ್ ಕ್ಲಿಕ್ ಮಾಡಿರಿ. ನಿಮ್ಮ ಕೀಬೋರ್ಡ್ ಮೇಲೆ 576 ಅನ್ನು ಟೈಪ್ ಮಾಡಿರಿ ಮತ್ತು Enter ಅನ್ನು ಒತ್ತಿರಿ. |
09:00 | ‘ಆಕ್ಟಿವ್ ಕ್ಯಾಮೆರಾ ವ್ಯೂ’ ಅನ್ನು ರೆಂಡರ್ ಮಾಡಲು F12 ಅನ್ನು ಒತ್ತಿರಿ. |
09:07 | ಇಲ್ಲಿ 720 x 576 ಪಿಕ್ಸೆಲ್ ಗಳ ಸಂಪೂರ್ಣ 100% ರೆಸಲ್ಯೂಶನ್ ರೆಂಡರ್ ಇರುತ್ತದೆ. |
09:16 | ರೆಂಡರ್ ಡಿಸ್ಪ್ಲೇ ವಿಂಡೋವನ್ನು ಕ್ಲೋಸ್ ಮಾಡಿರಿ. |
09:21 | ರೆಂಡರ್ ಪ್ಯಾನಲ್ ನಲ್ಲಿ, Dimensions ನ ಕೆಳಗೆ ಇರುವ Frame Range ಗೆ ಹೋಗಿರಿ. |
09:26 | ಫ್ರೇಮ್ ರೇಂಜ್ ಎನ್ನುವುದು ನಿಮ್ಮ ಮೂವೀಗಾಗಿ ರೆಂಡರ್ ಮಾಡಬಹುದಾದ ಅನಿಮೇಶನ್ ನ ಉದ್ದವನ್ನು ನಿರ್ಧರಿಸುತ್ತದೆ. |
09:33 | ನಾನು ಮೊದಲೇ ಹೇಳಿದಂತೆ, ಡೀಫಾಲ್ಟ್ ಆಗಿ, ಫ್ರೇಮ್ ರೇಂಜ್, 1 - 250 ಆಗಿದೆ. |
09:39 | Start 1 ನ ಮೇಲೆ ಲೆಫ್ಟ್ ಕ್ಲಿಕ್ ಮಾಡಿರಿ. ನಿಮ್ಮ ಕೀಬೋರ್ಡ್ ಮೇಲೆ 0 ಅನ್ನು ಟೈಪ್ ಮಾಡಿರಿ ಮತ್ತು Enter ಅನ್ನು ಒತ್ತಿರಿ. |
09:51 | ಇದು, ನಮ್ಮ ಅನಿಮೇಶನ್ ನ ಉದ್ದದ ಪ್ರಾರಂಭದ ಫ್ರೇಮ್ ಅಥವಾ ಮೊದಲನೆಯ ಫ್ರೇಮ್ ಆಗಿದೆ. |
09:57 | End 250 ಯ ಮೇಲೆ ಲೆಫ್ಟ್ ಕ್ಲಿಕ್ ಮಾಡಿರಿ. ನಿಮ್ಮ ಕೀಬೋರ್ಡ್ ಮೇಲೆ 100 ಅನ್ನು ಟೈಪ್ ಮಾಡಿರಿ ಮತ್ತು Enter ಅನ್ನು ಒತ್ತಿರಿ. |
10:08 | ಇದು ನಮ್ಮ ಅನಿಮೇಶನ್ ನ ಉದ್ದದ, ಮುಗಿಸುವ ಫ್ರೇಮ್ ಅಥವಾ ಕೊನೆಯ ಫ್ರೇಮ್ ಆಗಿದೆ. |
10:16 | ಹೀಗೆ, ನಮ್ಮ ಅನಿಮೇಶನ್ ಗಾಗಿ ಈಗ ನಾವು ಹೊಸ ಫ್ರೇಮ್ ರೇಂಜ್ ಒಂದ ನ್ನು ಹೊಂದಿದ್ದೇವೆ. |
10:22 | 3D ವ್ಯೂ ನ ಕೆಳಗಿರುವ ಟೈಮ್ಲೈನ್ ಗೆ ಹೋಗಿರಿ. |
10:26 | ಟೈಮ್ಲೈನ್ ಡಿಸ್ಪ್ಲೇ ಈಗ ಹೇಗೆ ಬದಲಾಯಿಸಿದೆ ಎಂಬುದನ್ನು ಗಮನಿಸಿರಿ ಏಕೆಂದರೆ, ನಾವು ರೆಂಡರ್ ಪ್ಯಾನಲ್ ನಲ್ಲಿಯ ಫ್ರೇಮ್ ರೇಂಜ್ ಅನ್ನು ಬದಲಾಯಿಸಿದ್ದೆವು. |
10:35 | ಟೈಮ್ಲೈನ್ ವಿಂಡೋದ ಬಗ್ಗೆ ತಿಳಿಯಲು, Types of Windows – Timeline (ಟೈಪ್ಸ್ ಆಫ್ ವಿಂಡೋಸ್ - ಟೈಮ್ಲೈನ್) ಎನ್ನುವ ಟ್ಯುಟೋರಿಯಲ್ ನೋಡಿರಿ. |
10:45 | ರೆಂಡರ್ ಪ್ಯಾನಲ್ ನಲ್ಲಿ, Dimensions ನ ಕೆಳಗೆ ಇರುವ Aspect Ratio ಗೆ ಹೋಗಿರಿ. |
10:53 | ನಾವು ರೆಸಲ್ಯೂಶನ್ ಅನ್ನು ಬದಲಾಯಿಸಿದಾಗ ಈ ಆಸ್ಪೆಕ್ಟ್ ರೇಶಿಯೋ ಸಹ ಬದಲಾಗಿದೆ ಎಂಬುದನ್ನು ಗಮನಿಸಿರಿ. |
11:01 | ನಮ್ಮ ಮೂವೀಯಲ್ಲಿ, ಒಂದು ಸೆಕೆಂಡ್ ನಲ್ಲಿ ಅನಿಮೇಟ್ ಆಗುತ್ತಿರುವ ಫ್ರೇಮ್ ಗಳ ಸಂಖ್ಯೆಯನ್ನು ಫ್ರೇಮ್ ರೇಟ್ ಎನ್ನುವುದು ನಿರ್ಧರಿಸುತ್ತದೆ. |
11:09 | ಡೀಫಾಲ್ಟ್ ಆಗಿ, ಇದು 24 fps ಅಥವಾ ಫ್ರೇಮ್ಸ್ ಪರ್ ಸೆಕೆಂಡ್ ಇರುತ್ತದೆ. |
11:16 | 24 fps. ನ ಮೇಲೆ ಲೆಫ್ಟ್ ಕ್ಲಿಕ್ ಮಾಡಿರಿ. ಒಂದು ಡ್ರಾಪ್-ಡೌನ್ ಮೆನ್ಯು ಕಾಣಿಸಿಕೊಳ್ಳುತ್ತದೆ. |
11:25 | ಅನಿಮೇಶನ್ ಮೂವೀ ಮಾಡುವಾಗ ಉಪಯೋಗಿಸಿದ ಎಲ್ಲ ಮುಖ್ಯ ಫ್ರೇಮ್ ರೇಟ್ಸ್ ಗಳ ಒಂದು ಲಿಸ್ಟ್ ಇಲ್ಲಿದೆ. |
11:31 | ನಿಮ್ಮ ಅವಶ್ಯಕತೆಗೆ ಅನುಸಾರವಾಗಿ ನೀವು ಯಾವುದೇ ಒಂದನ್ನು ಆರಿಸಿಕೊಳ್ಳಬಹುದು. |
11:37 | FPS 24 ನ ಮೇಲೆ ಲೆಫ್ಟ್ ಕ್ಲಿಕ್ ಮಾಡಿರಿ. ನಿಮ್ಮ ಕೀಬೋರ್ಡ್ ಮೇಲೆ 15 ಅನ್ನು ಟೈಪ್ ಮಾಡಿರಿ ಮತ್ತು Enter ಅನ್ನು ಒತ್ತಿರಿ. |
11:48 | ಹೀಗೆ, ನಮ್ಮ ಫ್ರೇಮ್ ರೇಟ್, ಈಗ 15 ಫ್ರೇಮ್ಸ್ ಪರ್ ಸೆಕೆಂಡ್ ಗೆ ಬದಲಾಯಿಸಿದೆ. |
11:55 | ಮುಂದಿನದು Output. ಎಡಕ್ಕೆ tmp ಎಂದು ಬರೆದಿರುವ ಹಾಗೂ ಬಲಕ್ಕೆ ಫೈಲ್ ಬ್ರೌಜರ್ ನ ಐಕಾನ್ ಇರುವ ಈ ಅಡ್ಡಲಾದ ಬಾರ್ ನಿಮಗೆ ಕಾಣುತ್ತಿದೆಯೇ ? |
12:07 | ಇಲ್ಲಿ, ನಮ್ಮ ರೆಂಡರ್ ಫೈಲ್ ಗಳಿಗಾಗಿ ಔಟ್ಪುಟ್ ಫೋಲ್ಡರ್ ಅನ್ನು ನಾವು ಸೂಚಿಸಬಹುದು. |
12:13 | File Browser ಐಕಾನ್ ನ ಮೇಲೆ ಲೆಫ್ಟ್ ಕ್ಲಿಕ್ ಮಾಡಿರಿ. |
12:18 | ಫೈಲ್ ಬ್ರೌಜರ್ ನ ಬಗೆಗೆ ತಿಳಿಯಲು Types of Windows - File Browser and Info Panel (ಟೈಪ್ಸ್ ಆಫ್ ವಿಂಡೋಸ್ - ಫೈಲ್ ಬ್ರೌಜರ್ ಆಂಡ್ ಇನ್ಫೋ ಪ್ಯಾನಲ್) ಎನ್ನುವ ಟ್ಯುಟೋರಿಯಲ್ ನೋಡಿರಿ. |
12:28 | ನಿಮ್ಮ ಔಟ್ಪುಟ್ ಫೋಲ್ಡರ್ ಅನ್ನು ಆಯ್ಕೆಮಾಡಿರಿ. ನಾನು My Documents ಅನ್ನು ಆಯ್ಕೆಮಾಡುತ್ತಿದ್ದೇನೆ. |
12:35 | Create new directory ಯ ಮೇಲೆ ಲೆಫ್ಟ್ ಕ್ಲಿಕ್ ಮಾಡಿರಿ. OUTPUT ಎಂದು ಟೈಪ್ ಮಾಡಿ Enter ಒತ್ತಿರಿ. |
12:46 | ಈ ಫೋಲ್ಡರ್ ಅನ್ನು ಓಪನ್ ಮಾಡಲು Output ನ ಮೇಲೆ ಲೆಫ್ಟ್ ಕ್ಲಿಕ್ ಮಾಡಿರಿ. |
12:51 | Accept ನ ಮೇಲೆ ಲೆಫ್ಟ್ ಕ್ಲಿಕ್ ಮಾಡಿರಿ. ಈಗ ನಮ್ಮ ಎಲ್ಲ ರೆಂಡರ್ ಫೈಲ್ ಗಳು, My Documents ನಲ್ಲಿಯ ಔಟ್ಪುಟ್ ಫೋಲ್ಡರ್ ನಲ್ಲಿ ಸೇವ್ ಮಾಡಲ್ಪಡುತ್ತವೆ |
13:03 | ಇಮೇಜ್ ಫಾರ್ಮ್ಯಾಟ್ ಮೆನ್ಯು ಎನ್ನುವುದು ಔಟ್ಪುಟ್ ಫೋಲ್ಡರ್ ಬಾರ್ ನ ಕೆಳಗೆ ಇರುತ್ತದೆ.. |
13:08 | ನಮ್ಮ ರೆಂಡರ್ ಇಮೇಜ್ ಹಾಗೂ ಮೂವೀ ಫೈಲ್ ಗಳಿಗಾಗಿ ಇಲ್ಲಿ ನಮ್ಮ ಔಟ್ಪುಟ್ ಫಾರ್ಮ್ಯಾಟ್ ಅನ್ನು ನಾವು ಆಯ್ಕೆಮಾಡಬಹುದು |
13:13 | PNG ಯ ಮೇಲೆ ಲೆಫ್ಟ್ ಕ್ಲಿಕ್ ಮಾಡಿರಿ. ಇಲ್ಲಿ, ಬ್ಲೆಂಡರ್ ನಲ್ಲಿ ಬೆಂಬಲಿಸಲ್ಪಟ್ಟ ಎಲ್ಲ ಫಾರ್ಮ್ಯಾಟ್ ಗಳ ಒಂದು ಲಿಸ್ಟ್ ಇರುತ್ತದೆ. |
13:20 | ನಾವು ಇಮೇಜ್ ಫಾರ್ಮ್ಯಾಟ್ ಮತ್ತು ಮೂವೀ ಫಾರ್ಮ್ಯಾಟ್ ಗಳನ್ನು ಹೊಂದಿದ್ದೇವೆ. |
13:25 | ನಮ್ಮ ಅವಶ್ಯಕತೆಗೆ ಅನುಸಾರವಾಗಿ ಯಾವುದೇ ಒಂದನ್ನು ನಾವು ಆಯ್ಕೆಮಾಡಬಹುದು. |
13:30 | PNG ಯ ಕೆಳಗೆ, ಬ್ಲೆಂಡರ್ ನಲ್ಲಿ ಉಪಯೋಗಿಸಿದ ಮೂರು ಕಲರ್ ಮೋಡ್ ಗಳು ಇರುತ್ತವೆ. BW ಎನ್ನುವುದು ಗ್ರೇಸ್ಕೇಲ್ ಮೋಡ್ ಆಗಿದೆ. |
13:38 | RGB, ಡೀಫಾಲ್ಟ್ ಆಗಿ ಆಯ್ಕೆಯಾಗಿದೆ. RGB ಕಲರ್ ಮೋಡ್ ಎನ್ನುವುದು ರೆಂಡರ್ ಫೈಲ್ ಗಳನ್ನು RGB ಡೇಟಾ ದೊಂದಿಗೆ ಸೇವ್ ಮಾಡುತ್ತದೆ. |
13:48 | RGBA ಎನ್ನುವುದು ಅಲ್ಫಾ ಚಾನೆಲ್ ಎನ್ನುವ ಒಂದು ಹೆಚ್ಚಿನ ಡೇಟಾದೊಂದಿಗೆ ರೆಂಡರ್ ಫೈಲ್ ಗಳನ್ನು ಸೇವ್ ಮಾಡುತ್ತದೆ. |
13:54 | ಇದು, ಅಲ್ಫಾ ಚಾನೆಲ್ ರೆಂಡರಿಂಗ್ ನ್ನು ಬೆಂಬಲಿಸುವ ಕೆಲವು ಇಮೇಜ್ ಫಾರ್ಮ್ಯಾಟ್ ಗಳ ಜೊತೆಗೆ ಮಾತ್ರ ಕೆಲಸ ಮಾಡುತ್ತದೆ. |
14:01 | ಹೀಗೆ, ಇದು ರೆಂಡರ್ ಪ್ಯಾನಲ್ ನ ಕುರಿತಾಗಿ ಇತ್ತು. |
14:05 | ಹೀಗೆ, ಈ ಟ್ಯುಟೋರಿಯಲ್ ನಲ್ಲಿ ನಾವು ಪ್ರಾಪರ್ಟೀಸ್ ವಿಂಡೋನಲ್ಲಿಯ ರೆಂಡರ್ ಪ್ಯಾನಲ್ ಅನ್ನು ವಿವರಿಸಿದ್ದೇವೆ. |
14:11 | ಇನ್ನುಳಿದ ಪ್ಯಾನಲ್ ಗಳನ್ನು ಮುಂದಿನ ಟ್ಯುಟೋರಿಯಲ್ ಗಳಲ್ಲಿ ವಿವರಿಸಲಾಗುವುದು. |
14:17 | ಈಗ, ಮುಂದುವರಿಯಿರಿ ಮತ್ತು ಒಂದು ಹೊಸ ಬ್ಲೆಂಡ್ ಫೈಲ್ ಅನ್ನು ಕ್ರಿಯೇಟ್ ಮಾಡಿರಿ. ರೆಂಡರ್ ಡಿಸ್ಪ್ಲೇ ಅನ್ನು ನ್ಯೂ ವಿಂಡೋ ಗೆ ಬದಲಾಯಿಸಿರಿ. |
14:25 | ರೆಸಲ್ಯೂಶನ್ ಅನ್ನು 720 x 576 100% ಗೆ ಬದಲಾಯಿಸಿರಿ. ಫ್ರೇಮ್ ರೇಂಜ್ ಅನ್ನು 0 ಯಿಂದ 100 ಗೆ ಬದಲಾಯಿಸಿರಿ. |
14:38 | ಫ್ರೇಮ್ ರೇಟ್ ಅನ್ನು 15 fps ಗೆ ಬದಲಾಯಿಸಿರಿ. ರೆಂಡರ್ ಫೈಲ್ ಗಳಿಗಾಗಿ ಒಂದು ಔಟ್ಪುಟ್ ಫೋಲ್ಡರ್ ಅನ್ನು ಕ್ರಿಯೇಟ್ ಮಾಡಿರಿ. |
14:47 | ಈ ಟ್ಯುಟೋರಿಯಲ್ ರಾಷ್ಟ್ರೀಯ ಸಾಕ್ಷರತಾ ಮಿಶನ್, ICT ಯ ಆಧಾರದಿಂದ ಮತ್ತು Project Oscar ಅವರಿಂದ ತಯಾರಿಸಲ್ಪಟ್ಟಿದೆ. |
14:57 | ಇದರ ಬಗ್ಗೆ ಹೆಚ್ಚಿನ ಮಾಹಿತಿಯು ಈ ಕೆಳಗಿನ ಲಿಂಕ್ ಗಳ ಮೇಲೆ ಲಭ್ಯವಿದೆ.
oscar.iitb.ac.in ಮತ್ತು spoken-tutorial.org/NMEICT-Intro |
15:17 | ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪವು |
15:19 | ಸ್ಪೋಕನ್ ಟ್ಯುಟೋರಿಯಲ್ಸ್ ಬಳಸಿಕೊಂಡು ಕಾರ್ಯಶಾಲೆಗಳನ್ನು ನಡೆಸುತ್ತದೆ. |
15:23 | ಹಾಗೂ ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ. |
15:28 | ಹೆಚ್ಚಿನ ವಿವರಗಳಿಗೆ ದಯವಿಟ್ಟು contact@spoken-tutorial.org ಈ ಈ-ಮೇಲ್ ಮೂಲಕ ಸಂಪರ್ಕಿಸಿ. |
15:34 | ಇದರ ಪ್ರವಾಚಕ ಐ ಐ ಟಿ ಬಾಂಬೆ ಯಿಂದ ವಾಸುದೇವ. ಧನ್ಯವಾದಗಳು. |