Blender/C2/Types-of-Windows-Properties-Part-1/Kannada

From Script | Spoken-Tutorial
Jump to: navigation, search
Time Narration
00:05 ಬ್ಲೆಂಡರ್ ನ ಟ್ಯುಟೋರಿಯಲ್ಸ್ ಸರಣಿಗೆ ಸ್ವಾಗತ.
00:09 ಈ ಟ್ಯುಟೋರಿಯಲ್, ಬ್ಲೆಂಡರ್ 2.59 ರಲ್ಲಿನ ಪ್ರಾಪರ್ಟೀಸ್ ವಿಂಡೋ ಕುರಿತು ಆಗಿದೆ.
00:16 ಈ ಸ್ಕ್ರಿಪ್ಟ್ ನ ಅನುವಾದಕಿ ಐ ಐ ಟಿ ಬಾಂಬೆಯಿಂದ ಸಂಧ್ಯಾ ಪುಣೇಕರ್.
00:29 ಈ ಟ್ಯುಟೋರಿಯಲ್ ನೋಡಿದ ನಂತರ, ಪ್ರಾಪರ್ಟೀಸ್ ವಿಂಡೋ ಎಂದರೇನು;
00:35 ಪ್ರಾಪರ್ಟೀಸ್ ವಿಂಡೋನಲ್ಲಿಯ ರೆಂಡರ್ ಪ್ಯಾನಲ್ ಎಂದರೇನು;
00:39 ಪ್ರಾಪರ್ಟೀಸ್ ವಿಂಡೋದ ರೆಂಡರ್ ಪ್ಯಾನಲ್ ನಲ್ಲಿಯ ವಿವಿಧ ಸೆಟ್ಟಿಂಗ್ಸ್ ಯಾವುವು ಎನ್ನುವುದರ ಬಗೆಗೆ ನಾವು ಕಲಿಯುವೆವು.
00:45 ಬ್ಲೆಂಡರ್ ಇಂಟರ್ಫೇಸ್ ನ ಮೂಲ ಅಂಶಗಳನ್ನು ನೀವು ತಿಳಿದಿರುವಿರಿ ಎಂದು ನಾನು ಭಾವಿಸುತ್ತೇನೆ.
00:50 ಇಲ್ಲವಾದಲ್ಲಿ, ದಯವಿಟ್ಟು ನಮ್ಮ ಮೊದಲಿನ ಟ್ಯುಟೋರಿಯಲ್ Basic Description of the Blender Interface (ಬೇಸಿಕ್ ದಿಸ್ಕ್ರಿಪ್ಶನ್ ಅಫ್ ದ್ ಬ್ಲೆಂಡರ್ ಇಂಟರ್ಫೇಸ್) ಎನ್ನುವುದನ್ನು ನೋಡಿರಿ.
00:58 ಈ ಪ್ರಾಪರ್ಟೀಸ್ ವಿಂಡೋ, ವಿವಿಧ ಪ್ಯಾನಲ್ ಗಳನ್ನು ಒಳಗೊಂಡಿದೆ. ಇದು ನಮ್ಮ ಸ್ಕ್ರೀನ್ ನ ಬಲಬದಿಗೆ ಇರುತ್ತದೆ.
01:08 ಪ್ರಾಪರ್ಟೀಸ್ ವಿಂಡೋದ ಮೇಲ್ಗಡೆಗೆ ಐಕಾನ್ ಗಳ ಒಂದು ಸಾಲು ಇದೆ.
01:14 ಪ್ರಾಪರ್ಟೀಸ್ ವಿಭಾಗದಲ್ಲಿ ಬರುವ ವಿಭಿನ್ನ ಪ್ಯಾನಲ್ ಗಳನ್ನು ಈ ಐಕಾನ್ ಗಳು ಪ್ರತಿನಿಧಿಸುತ್ತವೆ.
01:21 ರೆಂಡರ್, ಸೀನ್, ವರ್ಲ್ಡ್, ಆಬ್ಜೆಕ್ಟ್ ಇತ್ಯಾದಿ.
01:30 ಬ್ಲೆಂಡರ್ ನಲ್ಲಿ ಕೆಲಸ ಮಾಡುವಾಗ ಬಹಳ ಉಪಯುಕ್ತವಿರುವ ಹಲವಾರು ಸೆಟ್ಟಿಂಗ್ ಗಳನ್ನು ಈ ಪ್ಯಾನಲ್ ಗಳು ಒಳಗೊಂಡಿವೆ.
01:37 ಉತ್ತಮ ವೀಕ್ಷಣೆ ಮತ್ತು ಗ್ರಹಿಕೆಗಳಿಗಾಗಿ ನಮ್ಮ ಪ್ರಾಪರ್ಟೀಸ್ ವಿಂಡೋವನ್ನು ನಾವು ರಿಸೈಜ್ ಮಾಡಲೇಬೇಕು.
01:43 ಪ್ರಾಪರ್ಟೀಸ್ ವಿಂಡೋದ ಎಡ ಅಂಚಿನ ಮೇಲೆ ಲೆಫ್ಟ್ ಕ್ಲಿಕ್ ಮಾಡಿರಿ, ಹಿಡಿಯಿರಿ ಮತ್ತು ಎಡಗಡೆಗೆ ಎಳೆಯಿರಿ.
01:52 ಪ್ರಾಪರ್ಟೀಸ್ ವಿಂಡೋದಲ್ಲಿಯ ಆಯ್ಕೆಗಳನ್ನು ಈಗ ಹೆಚ್ಚು ಸ್ಪಷ್ಟವಾಗಿ ನಾವು ನೋಡಬಹುದು.
01:59 ಬ್ಲೆಂಡರ್ ನ ವಿಂಡೋ ಗಳನ್ನು ಹೇಗೆ ರಿಸೈಜ್ ಮಾಡುವದೆಂದು ತಿಳಿಯಲು How to Change Window Types in Blender (ಹೌ ಟು ಚೇಂಜ್ ವಿಂಡೋ ಟೈಪ್ಸ್ ಇನ್ ಬ್ಲೆಂಡರ್) ಎನ್ನುವ ನಮ್ಮ ಟ್ಯುಟೋರಿಯಲ್ ನೋಡಿರಿ.
02:12 Render ಎನ್ನುವುದು ಪ್ರಾಪರ್ಟೀಸ್ ವಿಂಡೋನಲ್ಲಿ ಮೊದಲನೆಯ ಪ್ಯಾನಲ್ ಆಗಿದೆ.
02:16 ಡೀಫಾಲ್ಟ್ ಆಗಿ, ಬ್ಲೆಂಡರ್ ಅನ್ನು ನಾವು ಓಪನ್ ಮಾಡಿದಾಗಲೆಲ್ಲ ಬ್ಲೆಂಡರ್ ಇಂಟರ್ಫೇಸ್ ನಲ್ಲಿ ಇದು ತೋರಿಸಲ್ಪಡುತ್ತದೆ.
02:23 ಅನಿಮೇಶನ್ ನ ಕೊನೆಯ ಔಟ್ಪುಟ್ ಅನ್ನು ಕ್ರಿಯೇಟ್ ಮಾಡಲು ಈ ಪ್ಯಾನಲ್ ನಲ್ಲಿಯ ಸೆಟ್ಟಿಂಗ್ ಗಳು ಉಪಯೋಗಿಸಲ್ಪಡುತ್ತವೆ.
02:31 Image ಎನ್ನುವುದು ‘ಆಕ್ಟಿವ್ ಕ್ಯಾಮೆರಾ ವ್ಯೂ’ ನ ಒಂದೇ ಫ್ರೇಮ್ ಇಮೇಜ್ ಅನ್ನು ರೆಂಡರ್ ಮಾಡಲು ಉಪಯೋಗಿಸಲ್ಪಡುತ್ತದೆ.
02:39 Image ನ ಮೇಲೆ ಲೆಫ್ಟ್ ಕ್ಲಿಕ್ ಮಾಡಿರಿ. ಕೀಬೋರ್ಡ್ ಶಾರ್ಟ್ಕಟ್ ಗಾಗಿ, F12 ಅನ್ನು ಒತ್ತಿರಿ.
02:48 ಈ ‘ಆಕ್ಟಿವ್ ಕ್ಯಾಮೆರಾ ವ್ಯೂ’ ಒಂದೇ ಫ್ರೇಮ್ ಇಮೇಜ್ ನಂತೆ ರೆಂಡರ್ ಮಾಡಲ್ಪಡುತ್ತದೆ.
02:55 3D ವ್ಯೂ ಗೆ ಮರಳಿ ಹೋಗಲು ನಿಮ್ಮ ಕೀಬೋರ್ಡ್ ಮೇಲಿನ ESC ಅನ್ನು ಒತ್ತಿರಿ.
03:03 Animation ಎನ್ನುವುದು ಎಲ್ಲಾ ಫ್ರೇಮ್ ಗಳ ಶ್ರೇಣಿಯನ್ನು ಅಥವಾ ಇಮೇಜ್ ನ ಒಂದು ಸರಣಿಯನ್ನು ರೆಂಡರ್ ಮಾಡಲು ಮತ್ತು ಮೂವೀ ಫೈಲ್ ಅನ್ನು ಕ್ರಿಯೇಟ್ ಮಾಡಲು ಉಪಯೋಗಿಸಲ್ಪಡುತ್ತದೆ.
03:13 ಡೀಫಾಲ್ಟ್ ಆಗಿ, ಟೈಮ್ಲೈನ್ ನಲ್ಲಿ ಫ್ರೇಮ್ ರೇಂಜ್, 1 ರಿಂದ 250 ಆಗಿದೆ.
03:22 Animation ನ ಮೇಲೆ ಲೆಫ್ಟ್ ಕ್ಲಿಕ್ ಮಾಡಿರಿ. ಫ್ರೇಮ್ 1 ರಿಂದ ಫ್ರೇಮ್ 250 ವರೆಗೆ, ಈ ಇಡೀ ಫ್ರೇಮ್ ರೇಂಜ್, ರೆಂಡರ್ ಮಾಡಲ್ಪಡುತ್ತಿದೆ.
03:39 ರೆಂಡರ್ ನ ಪ್ರೊಗ್ರೆಸ್ ಅನ್ನು ತಡೆಯಲು ESC ಅನ್ನು ಒತ್ತಿರಿ.
03:43 ಈ 3D ವ್ಯೂ ಗೆ ಮರಳಿ ಹೋಗಲು ESC ಅನ್ನು ಒತ್ತಿರಿ.
03:48 ರೆಂಡರ್ ಪ್ಯಾನಲ್ ನಲ್ಲಿಯ Display ಗೆ ಹೋಗಿರಿ.
03:52 Display ಎನ್ನುವುದು, ರೆಂಡರ್ ನ ಪ್ರೊಗ್ರೆಸ್ ಅನ್ನು ಸ್ಕ್ರೀನ್ ಮೇಲೆ ಹೇಗೆ ವೀಕ್ಷಿಸಬೇಕೆಂಬುದನ್ನು ಆರಿಸಿಕೊಳ್ಳಲು ನಮಗೆ ಸಹಾಯ ಮಾಡುತ್ತದೆ.
03:58 ಡೀಫಾಲ್ಟ್ ಆಗಿ, ಡಿಸ್ಪ್ಲೇ, Image Editor ಮೋಡ್ ನಲ್ಲಿ ಇರುತ್ತದೆ. ನನಗೆ ತೋರಿಸಲು ಅವಕಾಶ ಕೊಡಿ. ನಾನದನ್ನು ತೋರಿಸುತ್ತೇನೆ.
04:05 ಈ ‘ಆಕ್ಟಿವ್ ಕ್ಯಾಮೆರಾ ವ್ಯೂ’ ಅನ್ನು ರೆಂಡರ್ ಮಾಡಲು F12 ಅನ್ನು ಒತ್ತಿರಿ.
04:09 ರೆಂಡರ್ ಡಿಸ್ಪ್ಲೇ , UV/Image Editor ಎಂದು ಕಾಣಿಸಿಕೊಳ್ಳುತ್ತದೆ.
04:15 ಪ್ರತಿಯೊಂದು ಬಾರಿ ನಾವು ‘ಆಕ್ಟಿವ್ ಕ್ಯಾಮೆರಾ ವ್ಯೂ’ ಅನ್ನು ರೆಂಡರ್ ಮಾಡಿದಾಗ 3D ವ್ಯೂ, UV/ಇಮೇಜ್ ಎಡಿಟರ್ ಗೆ ಬದಲಾಯಿಸುತ್ತದೆ.
04:22 UV/ಇಮೇಜ್ ಎಡಿಟರ್ ನ ಬಗೆಗೆ ತಿಳಿಯಲು Types of windows - UV/Image Editor (ಟೈಪ್ಸ್ ಆಫ್ ವಿಂಡೋಸ್ - UV/ಇಮೇಜ್ ಎಡಿಟರ್) ಎನ್ನುವ ಟ್ಯುಟೋರಿಯಲ್ ನೋಡಿರಿ.
04:31 3D ವ್ಯೂ ಗೆ ಮರಳಿ ಹೋಗಲು ESC ಅನ್ನು ಒತ್ತಿರಿ.
04:36 ರೆಂಡರ್ ಪ್ಯಾನಲ್ ನಲ್ಲಿಯ Display ಗೆ ಹೋಗಿರಿ. Image editor ನ ಮೇಲೆ ಲೆಫ್ಟ್ ಕ್ಲಿಕ್ ಮಾಡಿರಿ.
04:44 ಈ ಡ್ರಾಪ್-ಡೌನ್ ಮೆನ್ಯು, ರೆಂಡರ್ ಡಿಸ್ಪ್ಲೇದ ಆಯ್ಕೆಗಳ ಒಂದು ಲಿಸ್ಟ್ ಅನ್ನು ತೋರಿಸುತ್ತದೆ.
04:51 Full Screen ಆಯ್ಕೆಮಾಡಲು ಲೆಫ್ಟ್ ಕ್ಲಿಕ್ ಮಾಡಿರಿ.
04:55 ‘ಆಕ್ಟಿವ್ ಕ್ಯಾಮೆರಾ ವ್ಯೂ’ ಅನ್ನು ರೆಂಡರ್ ಮಾಡಲು F12 ಅನ್ನು ಒತ್ತಿರಿ.
05:01 ಈಗ, ಇಡೀ ಬ್ಲೆಂಡರ್ ಸ್ಕ್ರೀನ್, UV/ಇಮೇಜ್ ಎಡಿಟರ್ ನಿಂದ ಆಕ್ರಮಿಸಲ್ಪಟ್ಟಿದೆ.
05:09 ಫುಲ್-ಸ್ಕ್ರೀನ್ ರೆಂಡರ್ ಮೋಡ್ ನಿಂದ ಹೊರಬರಲು ಮತ್ತು ಬ್ಲೆಂಡರ್ ನ ವರ್ಕ್-ಸ್ಪೇಸ್ ಗೆ ಹಿಂತಿರುಗಲು ESC ಅನ್ನು ಒತ್ತಿರಿ.
05:16 ರೆಂಡರ್ ಪ್ಯಾನಲ್ ನಲ್ಲಿಯ Display ಗೆ ಹೋಗಿರಿ. Full Screen ನ ಮೇಲೆ ಲೆಫ್ಟ್ ಕ್ಲಿಕ್ ಮಾಡಿರಿ. ಲಿಸ್ಟ್ ನಿಂದ New window ವನ್ನು ಆಯ್ಕೆಮಾಡಿರಿ.
05:28 ‘ಆಕ್ಟಿವ್ ಕ್ಯಾಮೆರಾ ವ್ಯೂ’ ಅನ್ನು ರೆಂಡರ್ ಮಾಡಲು F12 ಅನ್ನು ಒತ್ತಿರಿ.
05:31 ಈಗ, ರೆಂಡರ್ ಡಿಸ್ಪ್ಲೇ, ವರ್ಕ್-ಸ್ಪೇಸ್ ನಲ್ಲಿ ಒಂದು ಹೊಸ ವಿಂಡೋದಂತೆ ಕಾಣಿಸಿಕೊಳ್ಳುವುದು.
05:39 ನಿಮ್ಮ ಅನಿಮೇಶನ್ ನ ಪ್ರಿವ್ಯೂಗಳನ್ನು ರೆಂಡರ್ ಮಾಡುವಾಗ ನೀವು ಇದನ್ನು ಬಹಳ ಉಪಯುಕ್ತವಾಗಿ ಕಾಣುವಿರಿ.
05:44 ಇದನ್ನು ಹೇಗೆ ಮಾಡುವುದೆಂದು ನಂತರದ ಟ್ಯುಟೋರಿಯಲ್ ಗಳಲ್ಲಿ ನಾವು ನೋಡುವೆವು.
05:50 ರೆಂಡರ್ ಡಿಸ್ಪ್ಲೇ ವಿಂಡೋವನ್ನು ಕ್ಲೋಸ್ ಮಾಡಿರಿ.
05:55 ರೆಂಡರ್ ಪ್ಯಾನಲ್ ನಲ್ಲಿಯ Display ಗೆ ಹೋಗಿರಿ. New Window ದ ಮೇಲೆ ಲೆಫ್ಟ್ ಕ್ಲಿಕ್ ಮಾಡಿರಿ.
06:01 Image editor ಮೋಡ್ ಅನ್ನು ಆಯ್ಕೆಮಾಡಲು ಲೆಫ್ಟ್ ಕ್ಲಿಕ್ ಮಾಡಿರಿ. ಈ ಡಿಸ್ಪ್ಲೇ, ಇಮೇಜ್ ಎಡಿಟರ್ ಮೋಡ್ ನಲ್ಲಿ ಆಗಿದೆ.
06:08 Dimensions ಎನ್ನುವುದು ನಾವು ನೋಡುವ ಮುಂದಿನ ಸೆಟ್ಟಿಂಗ್ ಆಗಿದೆ. ನಮಗೆ ಬೇಕಾದ ಔಟ್ಪುಟ್ ಗೆ ಅನುಗುಣವಾಗಿ ನಾವು ವಿವಿಧ ರೆಂಡರ್ ಪ್ರಿಸೆಟ್ಸ್ ಅನ್ನು ಇಲ್ಲಿ ಕಸ್ಟಮೈಜ್ ಮಾಡಬಹುದು.
06:20 Render Presets ನ ಮೇಲೆ ಲೆಫ್ಟ್ ಕ್ಲಿಕ್ ಮಾಡಿರಿ. ಒಂದು ಡ್ರಾಪ್-ಡೌನ್ ಮೆನ್ಯು ಕಾಣಿಸಿಕೊಳ್ಳುತ್ತದೆ.
06:27 ಇಲ್ಲಿ ಮುಖ್ಯವಾದ ರೆಂಡರ್ ಪ್ರಿಸೆಟ್ಸ್ ಗಳೆಲ್ಲ ಇರುವ ಒಂದು ಲಿಸ್ಟ್ ಇರುತ್ತದೆ. DVCPRO, HDTV, NTSC, PAL ಇತ್ಯಾದಿ.
06:41 ಇದೀಗ, ನಾವು ಇವುಗಳನ್ನು ಬದಿಗೆ ಇಡೋಣ ಮತ್ತು ರೆಂಡರ್ ಡೈಮೆನ್ಶನ್ ಸೆಟ್ಟಿಂಗ್ ಗಳೆಡೆಗೆ ಮುಂದುವರೆಯೋಣ.
06:49 ರೆಸಲ್ಯೂಶನ್ ಎನ್ನುವುದು ರೆಂಡರ್ ಡಿಸ್ಪ್ಲೇ ಯ ಹಾಗೂ ‘ಆಕ್ಟಿವ್ ಕ್ಯಾಮೆರಾ ವ್ಯೂ’ ನ ಉದ್ದ ಮತ್ತು ಅಗಲಗಳಾಗಿದೆ.
06:56 ಡೀಫಾಲ್ಟ್ ಆಗಿ, ಬ್ಲೆಂಡರ್ 2.59 ನಲ್ಲಿ ರೆಸಲ್ಯೂಶನ್, 1920 x 1080 ಪಿಕ್ಸೆಲ್ಸ್ ಇರುತ್ತದೆ.
07:09 ರೆಂಡರ್ ರೆಸಲ್ಯೂಶನ್ ನ ಪ್ರತಿಶತ ಮಾಪಕ 50% ಆಗಿದೆ.
07:14 ಹೀಗೆಂದರೆ, ನಿಜವಾದ ರೆಸಲ್ಯೂಶನ್ ನ ಕೇವಲ 50% ಮಾತ್ರ ರೆಂಡರ್ ಆಗುವುದು. ಇದನ್ನು ನಾನು ವಿವರಿಸುತ್ತೇನೆ-
07:22 ‘ಆಕ್ಟಿವ್ ಕ್ಯಾಮೆರಾ ವ್ಯೂ’ ಅನ್ನು ರೆಂಡರ್ ಮಾಡಲು F12 ಅನ್ನು ಒತ್ತಿರಿ. ಇದು ಡೀಫಾಲ್ಟ್ ಆಗಿ, ರೆಂಡರ್ ರೆಸಲ್ಯೂಶನ್ ಆಗಿದೆ.
07:29 ಇದು ನಿಜವಾದ ರೆಸಲ್ಯೂಶನ್ ನ ಅರ್ಧ ಅಥವಾ 50% ಮಾತ್ರ ಆಗಿದೆ.
07:35 ರೆಂಡರ್ ಡಿಸ್ಪ್ಲೇ ವಿಂಡೋವನ್ನು ಕ್ಲೋಸ್ ಮಾಡಿರಿ.
07:40 ರೆಂಡರ್ ಪ್ಯಾನಲ್ ನಲ್ಲಿ, Resolution ನ ಕೆಳಗೆ, 50% ಮೇಲೆ ಲೆಫ್ಟ್ ಕ್ಲಿಕ್ ಮಾಡಿ ಹಿಡಿಯಿರಿ ಮತ್ತು ಬಲಕ್ಕೆ ಎಳೆಯಿರಿ.
07:50 ಈ ಪ್ರತಿಶತ 100% ಗೆ ಬದಲಾಗುವುದು. ಪ್ರತಿಶತವನ್ನು ಬದಲಾಯಿಸುವ ಇನ್ನೊಂದು ವಿಧಾನವೆಂದರೆ-
08:00 100% ಮೇಲೆ ಲೆಫ್ಟ್ ಕ್ಲಿಕ್ ಮಾಡಿರಿ. ಈಗ ಕೀಬೋರ್ಡ್ ಮೇಲೆ 100 ಅನ್ನು ಟೈಪ್ ಮಾಡಿರಿ ಮತ್ತು Enter ಅನ್ನು ಒತ್ತಿರಿ.
08:12 ‘ಆಕ್ಟಿವ್ ಕ್ಯಾಮೆರಾ ವ್ಯೂ’ ಅನ್ನು ರೆಂಡರ್ ಮಾಡಲು F12 ಅನ್ನು ಒತ್ತಿರಿ.
08:18 1920 x 1080 ಪಿಕ್ಸೆಲ್ ಗಳ ಸಂಪೂರ್ಣ 100% ರೆಸಲ್ಯೂಶನ್ ರೆಂಡರ್ ಇಲ್ಲಿ ಇರುತ್ತದೆ.
08:27 ರೆಂಡರ್ ಡಿಸ್ಪ್ಲೇ ವಿಂಡೋವನ್ನು ಕ್ಲೋಸ್ ಮಾಡಿರಿ. ಈಗ, ನನಗೆ ರೆಸಲ್ಯೂಶನ್ ಅನ್ನು 720 x 576 ಪಿಕ್ಸೆಲ್ ಗಳಿಗೆ ಬದಲಾಯಿಸಬೇಕಾಗಿದೆ.
08:38 1920 ಯ ಮೇಲೆ ಲೆಫ್ಟ್ ಕ್ಲಿಕ್ ಮಾಡಿರಿ. ನಿಮ್ಮ ಕೀಬೋರ್ಡ್ ಮೇಲೆ 720 ಅನ್ನು ಟೈಪ್ ಮಾಡಿರಿ ಮತ್ತು Enter ಅನ್ನು ಒತ್ತಿರಿ.
08:49 ಮತ್ತೆ, 1080 ಯ ಮೇಲೆ ಲೆಫ್ಟ್ ಕ್ಲಿಕ್ ಮಾಡಿರಿ. ನಿಮ್ಮ ಕೀಬೋರ್ಡ್ ಮೇಲೆ 576 ಅನ್ನು ಟೈಪ್ ಮಾಡಿರಿ ಮತ್ತು Enter ಅನ್ನು ಒತ್ತಿರಿ.
09:00 ‘ಆಕ್ಟಿವ್ ಕ್ಯಾಮೆರಾ ವ್ಯೂ’ ಅನ್ನು ರೆಂಡರ್ ಮಾಡಲು F12 ಅನ್ನು ಒತ್ತಿರಿ.
09:07 ಇಲ್ಲಿ 720 x 576 ಪಿಕ್ಸೆಲ್ ಗಳ ಸಂಪೂರ್ಣ 100% ರೆಸಲ್ಯೂಶನ್ ರೆಂಡರ್ ಇರುತ್ತದೆ.
09:16 ರೆಂಡರ್ ಡಿಸ್ಪ್ಲೇ ವಿಂಡೋವನ್ನು ಕ್ಲೋಸ್ ಮಾಡಿರಿ.
09:21 ರೆಂಡರ್ ಪ್ಯಾನಲ್ ನಲ್ಲಿ, Dimensions ನ ಕೆಳಗೆ ಇರುವ Frame Range ಗೆ ಹೋಗಿರಿ.
09:26 ಫ್ರೇಮ್ ರೇಂಜ್ ಎನ್ನುವುದು ನಿಮ್ಮ ಮೂವೀಗಾಗಿ ರೆಂಡರ್ ಮಾಡಬಹುದಾದ ಅನಿಮೇಶನ್ ನ ಉದ್ದವನ್ನು ನಿರ್ಧರಿಸುತ್ತದೆ.
09:33 ನಾನು ಮೊದಲೇ ಹೇಳಿದಂತೆ, ಡೀಫಾಲ್ಟ್ ಆಗಿ, ಫ್ರೇಮ್ ರೇಂಜ್, 1 - 250 ಆಗಿದೆ.
09:39 Start 1 ನ ಮೇಲೆ ಲೆಫ್ಟ್ ಕ್ಲಿಕ್ ಮಾಡಿರಿ. ನಿಮ್ಮ ಕೀಬೋರ್ಡ್ ಮೇಲೆ 0 ಅನ್ನು ಟೈಪ್ ಮಾಡಿರಿ ಮತ್ತು Enter ಅನ್ನು ಒತ್ತಿರಿ.
09:51 ಇದು, ನಮ್ಮ ಅನಿಮೇಶನ್ ನ ಉದ್ದದ ಪ್ರಾರಂಭದ ಫ್ರೇಮ್ ಅಥವಾ ಮೊದಲನೆಯ ಫ್ರೇಮ್ ಆಗಿದೆ.
09:57 End 250 ಯ ಮೇಲೆ ಲೆಫ್ಟ್ ಕ್ಲಿಕ್ ಮಾಡಿರಿ. ನಿಮ್ಮ ಕೀಬೋರ್ಡ್ ಮೇಲೆ 100 ಅನ್ನು ಟೈಪ್ ಮಾಡಿರಿ ಮತ್ತು Enter ಅನ್ನು ಒತ್ತಿರಿ.
10:08 ಇದು ನಮ್ಮ ಅನಿಮೇಶನ್ ನ ಉದ್ದದ, ಮುಗಿಸುವ ಫ್ರೇಮ್ ಅಥವಾ ಕೊನೆಯ ಫ್ರೇಮ್ ಆಗಿದೆ.
10:16 ಹೀಗೆ, ನಮ್ಮ ಅನಿಮೇಶನ್ ಗಾಗಿ ಈಗ ನಾವು ಹೊಸ ಫ್ರೇಮ್ ರೇಂಜ್ ಒಂದ ನ್ನು ಹೊಂದಿದ್ದೇವೆ.
10:22 3D ವ್ಯೂ ನ ಕೆಳಗಿರುವ ಟೈಮ್ಲೈನ್ ಗೆ ಹೋಗಿರಿ.
10:26 ಟೈಮ್ಲೈನ್ ಡಿಸ್ಪ್ಲೇ ಈಗ ಹೇಗೆ ಬದಲಾಯಿಸಿದೆ ಎಂಬುದನ್ನು ಗಮನಿಸಿರಿ ಏಕೆಂದರೆ, ನಾವು ರೆಂಡರ್ ಪ್ಯಾನಲ್ ನಲ್ಲಿಯ ಫ್ರೇಮ್ ರೇಂಜ್ ಅನ್ನು ಬದಲಾಯಿಸಿದ್ದೆವು.
10:35 ಟೈಮ್ಲೈನ್ ವಿಂಡೋದ ಬಗ್ಗೆ ತಿಳಿಯಲು, Types of Windows – Timeline (ಟೈಪ್ಸ್ ಆಫ್ ವಿಂಡೋಸ್ - ಟೈಮ್ಲೈನ್) ಎನ್ನುವ ಟ್ಯುಟೋರಿಯಲ್ ನೋಡಿರಿ.
10:45 ರೆಂಡರ್ ಪ್ಯಾನಲ್ ನಲ್ಲಿ, Dimensions ನ ಕೆಳಗೆ ಇರುವ Aspect Ratio ಗೆ ಹೋಗಿರಿ.
10:53 ನಾವು ರೆಸಲ್ಯೂಶನ್ ಅನ್ನು ಬದಲಾಯಿಸಿದಾಗ ಈ ಆಸ್ಪೆಕ್ಟ್ ರೇಶಿಯೋ ಸಹ ಬದಲಾಗಿದೆ ಎಂಬುದನ್ನು ಗಮನಿಸಿರಿ.
11:01 ನಮ್ಮ ಮೂವೀಯಲ್ಲಿ, ಒಂದು ಸೆಕೆಂಡ್ ನಲ್ಲಿ ಅನಿಮೇಟ್ ಆಗುತ್ತಿರುವ ಫ್ರೇಮ್ ಗಳ ಸಂಖ್ಯೆಯನ್ನು ಫ್ರೇಮ್ ರೇಟ್ ಎನ್ನುವುದು ನಿರ್ಧರಿಸುತ್ತದೆ.
11:09 ಡೀಫಾಲ್ಟ್ ಆಗಿ, ಇದು 24 fps ಅಥವಾ ಫ್ರೇಮ್ಸ್ ಪರ್ ಸೆಕೆಂಡ್ ಇರುತ್ತದೆ.
11:16 24 fps. ನ ಮೇಲೆ ಲೆಫ್ಟ್ ಕ್ಲಿಕ್ ಮಾಡಿರಿ. ಒಂದು ಡ್ರಾಪ್-ಡೌನ್ ಮೆನ್ಯು ಕಾಣಿಸಿಕೊಳ್ಳುತ್ತದೆ.
11:25 ಅನಿಮೇಶನ್ ಮೂವೀ ಮಾಡುವಾಗ ಉಪಯೋಗಿಸಿದ ಎಲ್ಲ ಮುಖ್ಯ ಫ್ರೇಮ್ ರೇಟ್ಸ್ ಗಳ ಒಂದು ಲಿಸ್ಟ್ ಇಲ್ಲಿದೆ.
11:31 ನಿಮ್ಮ ಅವಶ್ಯಕತೆಗೆ ಅನುಸಾರವಾಗಿ ನೀವು ಯಾವುದೇ ಒಂದನ್ನು ಆರಿಸಿಕೊಳ್ಳಬಹುದು.
11:37 FPS 24 ನ ಮೇಲೆ ಲೆಫ್ಟ್ ಕ್ಲಿಕ್ ಮಾಡಿರಿ. ನಿಮ್ಮ ಕೀಬೋರ್ಡ್ ಮೇಲೆ 15 ಅನ್ನು ಟೈಪ್ ಮಾಡಿರಿ ಮತ್ತು Enter ಅನ್ನು ಒತ್ತಿರಿ.
11:48 ಹೀಗೆ, ನಮ್ಮ ಫ್ರೇಮ್ ರೇಟ್, ಈಗ 15 ಫ್ರೇಮ್ಸ್ ಪರ್ ಸೆಕೆಂಡ್ ಗೆ ಬದಲಾಯಿಸಿದೆ.
11:55 ಮುಂದಿನದು Output. ಎಡಕ್ಕೆ tmp ಎಂದು ಬರೆದಿರುವ ಹಾಗೂ ಬಲಕ್ಕೆ ಫೈಲ್ ಬ್ರೌಜರ್ ನ ಐಕಾನ್ ಇರುವ ಈ ಅಡ್ಡಲಾದ ಬಾರ್ ನಿಮಗೆ ಕಾಣುತ್ತಿದೆಯೇ ?
12:07 ಇಲ್ಲಿ, ನಮ್ಮ ರೆಂಡರ್ ಫೈಲ್ ಗಳಿಗಾಗಿ ಔಟ್ಪುಟ್ ಫೋಲ್ಡರ್ ಅನ್ನು ನಾವು ಸೂಚಿಸಬಹುದು.
12:13 File Browser ಐಕಾನ್ ನ ಮೇಲೆ ಲೆಫ್ಟ್ ಕ್ಲಿಕ್ ಮಾಡಿರಿ.
12:18 ಫೈಲ್ ಬ್ರೌಜರ್ ನ ಬಗೆಗೆ ತಿಳಿಯಲು Types of Windows - File Browser and Info Panel (ಟೈಪ್ಸ್ ಆಫ್ ವಿಂಡೋಸ್ - ಫೈಲ್ ಬ್ರೌಜರ್ ಆಂಡ್ ಇನ್ಫೋ ಪ್ಯಾನಲ್) ಎನ್ನುವ ಟ್ಯುಟೋರಿಯಲ್ ನೋಡಿರಿ.
12:28 ನಿಮ್ಮ ಔಟ್ಪುಟ್ ಫೋಲ್ಡರ್ ಅನ್ನು ಆಯ್ಕೆಮಾಡಿರಿ. ನಾನು My Documents ಅನ್ನು ಆಯ್ಕೆಮಾಡುತ್ತಿದ್ದೇನೆ.
12:35 Create new directory ಯ ಮೇಲೆ ಲೆಫ್ಟ್ ಕ್ಲಿಕ್ ಮಾಡಿರಿ. OUTPUT ಎಂದು ಟೈಪ್ ಮಾಡಿ Enter ಒತ್ತಿರಿ.
12:46 ಈ ಫೋಲ್ಡರ್ ಅನ್ನು ಓಪನ್ ಮಾಡಲು Output ನ ಮೇಲೆ ಲೆಫ್ಟ್ ಕ್ಲಿಕ್ ಮಾಡಿರಿ.
12:51 Accept ನ ಮೇಲೆ ಲೆಫ್ಟ್ ಕ್ಲಿಕ್ ಮಾಡಿರಿ. ಈಗ ನಮ್ಮ ಎಲ್ಲ ರೆಂಡರ್ ಫೈಲ್ ಗಳು, My Documents ನಲ್ಲಿಯ ಔಟ್ಪುಟ್ ಫೋಲ್ಡರ್ ನಲ್ಲಿ ಸೇವ್ ಮಾಡಲ್ಪಡುತ್ತವೆ
13:03 ಇಮೇಜ್ ಫಾರ್ಮ್ಯಾಟ್ ಮೆನ್ಯು ಎನ್ನುವುದು ಔಟ್ಪುಟ್ ಫೋಲ್ಡರ್ ಬಾರ್ ನ ಕೆಳಗೆ ಇರುತ್ತದೆ..
13:08 ನಮ್ಮ ರೆಂಡರ್ ಇಮೇಜ್ ಹಾಗೂ ಮೂವೀ ಫೈಲ್ ಗಳಿಗಾಗಿ ಇಲ್ಲಿ ನಮ್ಮ ಔಟ್ಪುಟ್ ಫಾರ್ಮ್ಯಾಟ್ ಅನ್ನು ನಾವು ಆಯ್ಕೆಮಾಡಬಹುದು
13:13 PNG ಯ ಮೇಲೆ ಲೆಫ್ಟ್ ಕ್ಲಿಕ್ ಮಾಡಿರಿ. ಇಲ್ಲಿ, ಬ್ಲೆಂಡರ್ ನಲ್ಲಿ ಬೆಂಬಲಿಸಲ್ಪಟ್ಟ ಎಲ್ಲ ಫಾರ್ಮ್ಯಾಟ್ ಗಳ ಒಂದು ಲಿಸ್ಟ್ ಇರುತ್ತದೆ.
13:20 ನಾವು ಇಮೇಜ್ ಫಾರ್ಮ್ಯಾಟ್ ಮತ್ತು ಮೂವೀ ಫಾರ್ಮ್ಯಾಟ್ ಗಳನ್ನು ಹೊಂದಿದ್ದೇವೆ.
13:25 ನಮ್ಮ ಅವಶ್ಯಕತೆಗೆ ಅನುಸಾರವಾಗಿ ಯಾವುದೇ ಒಂದನ್ನು ನಾವು ಆಯ್ಕೆಮಾಡಬಹುದು.
13:30 PNG ಯ ಕೆಳಗೆ, ಬ್ಲೆಂಡರ್ ನಲ್ಲಿ ಉಪಯೋಗಿಸಿದ ಮೂರು ಕಲರ್ ಮೋಡ್ ಗಳು ಇರುತ್ತವೆ. BW ಎನ್ನುವುದು ಗ್ರೇಸ್ಕೇಲ್ ಮೋಡ್ ಆಗಿದೆ.
13:38 RGB, ಡೀಫಾಲ್ಟ್ ಆಗಿ ಆಯ್ಕೆಯಾಗಿದೆ. RGB ಕಲರ್ ಮೋಡ್ ಎನ್ನುವುದು ರೆಂಡರ್ ಫೈಲ್ ಗಳನ್ನು RGB ಡೇಟಾ ದೊಂದಿಗೆ ಸೇವ್ ಮಾಡುತ್ತದೆ.
13:48 RGBA ಎನ್ನುವುದು ಅಲ್ಫಾ ಚಾನೆಲ್ ಎನ್ನುವ ಒಂದು ಹೆಚ್ಚಿನ ಡೇಟಾದೊಂದಿಗೆ ರೆಂಡರ್ ಫೈಲ್ ಗಳನ್ನು ಸೇವ್ ಮಾಡುತ್ತದೆ.
13:54 ಇದು, ಅಲ್ಫಾ ಚಾನೆಲ್ ರೆಂಡರಿಂಗ್ ನ್ನು ಬೆಂಬಲಿಸುವ ಕೆಲವು ಇಮೇಜ್ ಫಾರ್ಮ್ಯಾಟ್ ಗಳ ಜೊತೆಗೆ ಮಾತ್ರ ಕೆಲಸ ಮಾಡುತ್ತದೆ.
14:01 ಹೀಗೆ, ಇದು ರೆಂಡರ್ ಪ್ಯಾನಲ್ ನ ಕುರಿತಾಗಿ ಇತ್ತು.
14:05 ಹೀಗೆ, ಈ ಟ್ಯುಟೋರಿಯಲ್ ನಲ್ಲಿ ನಾವು ಪ್ರಾಪರ್ಟೀಸ್ ವಿಂಡೋನಲ್ಲಿಯ ರೆಂಡರ್ ಪ್ಯಾನಲ್ ಅನ್ನು ವಿವರಿಸಿದ್ದೇವೆ.
14:11 ಇನ್ನುಳಿದ ಪ್ಯಾನಲ್ ಗಳನ್ನು ಮುಂದಿನ ಟ್ಯುಟೋರಿಯಲ್ ಗಳಲ್ಲಿ ವಿವರಿಸಲಾಗುವುದು.
14:17 ಈಗ, ಮುಂದುವರಿಯಿರಿ ಮತ್ತು ಒಂದು ಹೊಸ ಬ್ಲೆಂಡ್ ಫೈಲ್ ಅನ್ನು ಕ್ರಿಯೇಟ್ ಮಾಡಿರಿ. ರೆಂಡರ್ ಡಿಸ್ಪ್ಲೇ ಅನ್ನು ನ್ಯೂ ವಿಂಡೋ ಗೆ ಬದಲಾಯಿಸಿರಿ.
14:25 ರೆಸಲ್ಯೂಶನ್ ಅನ್ನು 720 x 576 100% ಗೆ ಬದಲಾಯಿಸಿರಿ. ಫ್ರೇಮ್ ರೇಂಜ್ ಅನ್ನು 0 ಯಿಂದ 100 ಗೆ ಬದಲಾಯಿಸಿರಿ.
14:38 ಫ್ರೇಮ್ ರೇಟ್ ಅನ್ನು 15 fps ಗೆ ಬದಲಾಯಿಸಿರಿ. ರೆಂಡರ್ ಫೈಲ್ ಗಳಿಗಾಗಿ ಒಂದು ಔಟ್ಪುಟ್ ಫೋಲ್ಡರ್ ಅನ್ನು ಕ್ರಿಯೇಟ್ ಮಾಡಿರಿ.
14:47 ಈ ಟ್ಯುಟೋರಿಯಲ್ ರಾಷ್ಟ್ರೀಯ ಸಾಕ್ಷರತಾ ಮಿಶನ್, ICT ಯ ಆಧಾರದಿಂದ ಮತ್ತು Project Oscar ಅವರಿಂದ ತಯಾರಿಸಲ್ಪಟ್ಟಿದೆ.
14:57 ಇದರ ಬಗ್ಗೆ ಹೆಚ್ಚಿನ ಮಾಹಿತಿಯು ಈ ಕೆಳಗಿನ ಲಿಂಕ್ ಗಳ ಮೇಲೆ ಲಭ್ಯವಿದೆ.

oscar.iitb.ac.in ಮತ್ತು spoken-tutorial.org/NMEICT-Intro

15:17 ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪವು
15:19 ಸ್ಪೋಕನ್ ಟ್ಯುಟೋರಿಯಲ್ಸ್ ಬಳಸಿಕೊಂಡು ಕಾರ್ಯಶಾಲೆಗಳನ್ನು ನಡೆಸುತ್ತದೆ.
15:23 ಹಾಗೂ ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ.
15:28 ಹೆಚ್ಚಿನ ವಿವರಗಳಿಗೆ ದಯವಿಟ್ಟು contact@spoken-tutorial.org ಈ ಈ-ಮೇಲ್ ಮೂಲಕ ಸಂಪರ್ಕಿಸಿ.
15:34 ಇದರ ಪ್ರವಾಚಕ ಐ ಐ ಟಿ ಬಾಂಬೆ ಯಿಂದ ವಾಸುದೇವ. ಧನ್ಯವಾದಗಳು.

Contributors and Content Editors

Vasudeva ahitanal