BASH/C3/Recursive-function/Kannada

From Script | Spoken-Tutorial
Jump to: navigation, search
Time Narration
00:01 ಬ್ಯಾಶ್ ನಲ್ಲಿ Recursive functionನ ಕುರಿತಾದ ಸ್ಪೊಕನ್-ಟ್ಯುಟೊರಿಯಲ್ ಗೆ ಸ್ವಾಗತ.
00:07 ಈ ಟ್ಯುಟೋರಿಯಲ್ ನಲ್ಲಿ ನಾವು
00:10 Recursive ಫಂಕ್ಷನ್ ಎಂದರೆ ಏನು ಎಂಬುದನ್ನು
00:12 ಉದಾಹರಣೆ ಗಳೊಂದಿಗೆ ಕಲಿಯುತ್ತೇವೆ.
00:15 ಈ ಟ್ಯುಟೋರಿಯಲ್ ಅನ್ನು ತಿಳಿದುಕೊಳ್ಳಲು ಬ್ಯಾಶ್ ನಲ್ಲಿ ಶೆಲ್ ಸ್ಕ್ರಿಪ್ಟಿಂಗ್ ನ ಕುರಿತು ಕಲಿತಿರಬೇಕು.
00:20 ತಿಳಿದಿರದಿದ್ದಲ್ಲಿ ಸಂಬಂಧಿತ ಟ್ಯುಟೋರಿಯಲ್ ಗಾಗಿ ನಮ್ಮ ಜಾಲತಾಣವನ್ನು ಭೇಟಿಮಾಡಿ. http://www.spoken-tutorial.org
00:27 ಈ ಟ್ಯುಟೋರಿಯಲ್ ಗಾಗಿ ನಾನು
00:29 'Ubuntu Linux 12.04 OS ಮತ್ತು
00:33 GNU BASH ಆವೃತ್ತಿ 4.2 ಗಳನ್ನು ಉಪಯೋಗಿಸುತ್ತೇನೆ.
00:37 ತಿಳಿದಿರಲಿ GNU bash version 4 ಅಥವಾ ಹೆಚ್ಚಿನ ವರ್ಶನ್ ಇದಕ್ಕೆ ಬೇಕಾಗುತ್ತದೆ.
00:44 ನಾವು ಈಗ recursive function ಎಂದರೇನು ಎಂದು ನೋಡೋಣ.
00:48 recursive function ಇದೊಂದು ತನ್ನನ್ನು ತಾನೇ ಕಾಲ್ ಮಾಡಿಕೊಳ್ಳುವ ಫಂಕ್ಷನ್.
00:52 ಕ್ಲಿಷ್ಟಕರ algorithm ಗಳನ್ನು ಸರಳಗೊಳಿಸುವಲ್ಲಿRecursion ಒಂದು ಉತ್ತಮ ತಂತ್ರಜ್ಞಾನ.
00:59 ಈಗ ನಾನು factorial.sh ಎಂಬ ಫೈಲ್ ಅನ್ನು ತೆರೆಯುತ್ತೇನೆ.
01:04 ನಾನು ಈ ಫೈಲ್ ನಲ್ಲಿ code ಅನ್ನು ಟೈಪ್ ಮಾಡಿಟ್ಟಿದ್ದೇನೆ.
01:07 ಇದು shebang line.
01:10 factorial() ಇದು function ನ ಹೆಸರು.
01:12 ನಾವು ಇದರ ಒಳಗಡೆ “Inside factorial function” ಎಂಬ ಸಂದೇಶವನ್ನು ಪ್ರಿಂಟ್ ಮಾಡುತ್ತೇವೆ.
01:19 ಈ ಸ್ಟೇಟ್ ಮೆಂಟ್ ಬಳಕೆದಾರರಿಂದ ಇನ್ ಪುಟ್ ಅನ್ನು ಪಡೆದು ಅದರ ಬೆಲೆಯನ್ನು 'n' ಎಂಬ ವೇರಿಯೇಬಲ್ ನಲ್ಲಿ ಸ್ಟೋರ್ ಮಾಡುತ್ತದೆ.
01:26 ಇಲ್ಲಿ ನಾವು 'if-else' ಕಂಡಿಷನ್ ಅನ್ನು ಹೊಂದಿದ್ದೇವೆ.
01:30 If ಕಂಡಿಷನ್ 'n' ನ ಬೆಲೆಯು ಸೊನ್ನೆಗೆ ಸಮವೇ ಎಂದು ಪರೀಕ್ಷಿಸುತ್ತದೆ.
01:36 True, ಆಗಿದ್ದಲ್ಲಿ "factorial value of n is 1" ಎಂಬ ಸಂದೇಶವನ್ನು ಡಿಸ್ಪ್ಲೇ ಮಾಡುತ್ತದೆ.
01:42 ಇದು if' ಸ್ಟೇಟ್ ಮೆಂಟ್ ನ 'else' ಭಾಗ.
01:46 ಇದು 'factorial' function. ಅನ್ನು ಕಾಲ್ ಮಾಡುತ್ತದೆ.
01:50 ಮತ್ತು 'fi' ಇದು'if-else' ಸ್ಟೇಟ್ ಮೆಂಟ್ ನ ಕೊನೆಯನ್ನು ಸೂಚಿಸುತ್ತದೆ.
01:55 ಈಗ "factorial.sh" ಫೈಲ್ ಅನ್ನು ರನ್ ಮಾಡೋಣ.
01:59 CTRL , ALT ಮತ್ತು T ಕೀಲಿಗಳನ್ನು ಒಟ್ಟಿಗೆ ಒತ್ತಿ ಟರ್ಮಿನಲ್ ಅನ್ನು ತೆರೆಯಿರಿ.
02:07 chmod ಸ್ಪೇಸ್ ಪ್ಲಸ್ x ಸ್ಪೇಸ್ factorial ಡಾಟ್ sh ಎಂದು ಟೈಪ್ ಮಾಡಿ.
02:15 Enter ಅನ್ನು ಒತ್ತಿರಿ.
02:17 ಡಾಟ್ ಸ್ಲ್ಯಾಶ್ factorial.sh ಎಂದು ಟೈಪ್ ಮಾಡಿ.
02:21 Enter ಅನ್ನು ಒತ್ತಿರಿ.
02:24 ನಾವು "Enter the number:" ಎಂಬ ಸಂದೇಶವನ್ನು ನೋಡುತ್ತೇವೆ.
02:26 ನಾನು 0 ಯನ್ನು ನಮೂದಿಸುತ್ತೇನೆ.
02:29 ಫಲಿತವು
02:31 "factorial value of 0 is 1" ಎಂದು ಡಿಸ್ಪ್ಲೇ ಆಗುತ್ತದೆ.
02:35 ಈಗ up-arrow ಕೀಲಿಯನ್ನು ಒತ್ತಿ ಹಳೆಯ ಕಮಾಂಡ್ ಅನ್ನು ಪುನಾರಾವರ್ತಿಸಿ.
02:40 Enter ಅನ್ನು ಒತ್ತಿರಿ.
02:42 ಈ ಬಾರಿ ನಾನು 5 ಅನ್ನು ನಮೂದಿಸುತ್ತೇನೆ.
02:45 ಈ ಬಾರಿ ಫಲಿತವು
02:47 "Inside factorial function" ಎಂದು ಡಿಸ್ಪ್ಲೇ ಆಗುತ್ತದೆ.
02:51 ಈಗ 'factorial' function ಗೆ ಲೋಜಿಕ್ ಅನ್ನುಸೇರಿಸೋಣ.
02:56 ಒಂದು ಸಂಖ್ಯೆಯ factorial ಅನ್ನು ಕಂಡುಹಿಡಿಯೋಣ.
03:01 code ಗೆ ಹಿಂದಿರುಗಿ.
03:03 echo "Inside the factorial function" ಎಂಬ ಸ್ಟೇಟ್ ಮೆಂಟ್ ಅನ್ನು ಕೋಡ್ ಬ್ಲಾಕ್ ಇಂದ ಬದಲಾಯಿಸೋಣ.
03:10 Save ಮೇಲೆ ಕ್ಲಿಕ್ ಮಾಡಿ.
03:13 temp ಇದು ಒಂದು variable ಮತ್ತು ಇದು ಬಳಕೆದಾರ ನಮೂದಿಸಿದ ಬೆಲೆಯನ್ನು ಸ್ಟೋರ್ ಮಾಡುತ್ತದೆ.
03:19 'If' ಕಂಡಿಷನ್ ವೇರಿಯೇಬಲ್ ನ ಬೆಲೆಯು 1ಕ್ಕೆ ಸಮವೇ ಎಂದು ಪರೀಕ್ಷಿಸುತ್ತದೆ.
03:25 True ಆಗಿದ್ದರೆ ಅದು 1 ಎಂದು ಪ್ರಿಂಟ್ ಮಾಡುತ್ತದೆ.
03:29 ಇದು if ಸ್ಟೇಟ್ ಮೆಂಟ್ ನ else ಭಾಗ.
03:33 ಇದು temp ನ ಬೆಲೆಯಿಂದ ಒಂದನ್ನು ಕಳೆಯುತ್ತದೆ.
03:37 ಮತ್ತು ಫಲಿತಾಂಶವನ್ನು 'f' ನಲ್ಲಿ ಸ್ಟೋರ್ ಮಾಡುತ್ತದೆ.
03:42 'f' ವೇರಿಯೇಬಲ್ 'factorial' function ನ ಫಲಿತಾಂಶವನ್ನು ಸ್ಟೋರ್ ಮಾಡುತ್ತದೆ.
03:46 ಇದು recursive call
03:50 f ವೇರಿಯೇಬಲ್ ನ ಬೆಲೆ ಮತ್ತು temp ಗಳನ್ನು ಗುಣಿಸಿ ಗುಣಲಬ್ದವು ಮತ್ತೆ 'f' ನಲ್ಲಿ ಸ್ಟೋರ್ ಆಗುತ್ತದೆ.
03:57 ನಂತರ f ನ ಬೆಲೆಯು print ಆಗುತ್ತದೆ.
04:00 ಇದು if-else ಸ್ಟೇಟ್ ಮೆಂಟ್ ಮತ್ತು function ನ ಕೊನೆ.
04:05 ಈಗ ಸ್ಲೈಡ್ಸ್ ಗೆ ಹಿಂದಿರುಗಿ.
04:08 ಈಗ ಪ್ರೋಗ್ರಾಂ ನ ಕಾರ್ಯ ವಿಧಾನವನ್ನು ನೋಡೋಣ.
04:12 n ಬೆಲೆಯನ್ನು ಬಳಕೆದಾರರಿಂದ ಪಡೆಯುತ್ತೇವೆ.
04:17 ನಮೂದಿಸಿದ ಬೆಲೆಯು ಸೊನ್ನೆ ಆಗಿದ್ದರೆ ಇದು ಒಂದು ಸಂದೇಶವನ್ನು ಪ್ರಿಂಟ್ ಮಾಡುತ್ತದೆ.
04:24 ಇಲ್ಲವಾದಲ್ಲಿ factorial ಎಂಬ function ಗೆ ಹೋಗುತ್ತದೆ.
04:29 ಇಲ್ಲಿ ಬೆಲೆಯು ಒಂದು ಆಗಿದ್ದರೆ ಇದು 'one' ಎಂದು ಪ್ರಿಂಟ್ ಮಾಡುತ್ತದೆ.
04:36 ಇಲ್ಲವಾದಲ್ಲಿ ಇದು ಅದರ ಬೆಲೆಯು ಒಂದು ಆಗುವ ತನಕ recursive call ಮಾಡುತ್ತದೆ.
04:44 ನಂತರ ಎಲ್ಲಾ ಬೆಲೆಗಳನ್ನು ಗುಣಿಸಿ ಫಲಿತವನ್ನು ಡಿಸ್ಪ್ಲೇ ಮಾಡುತ್ತೇವೆ.
04:49 terminal ಗೆ ಹಿಂದಿರುಗಿ.
04:52 up-arrow ಕೀಲಿಯನ್ನು ಒತ್ತಿ.
04:54 ಹಳೆಯ ಕಮಾಂಡ್ ./factorial.sh ಅನ್ನು ಪುನರಾವರ್ತಿಸಿ.
04:58 Enter ಅನ್ನು ಒತ್ತಿರಿ.
05:00 ನಾನು ಇನ್ ಪುಟ್ ಅನ್ನು 5 ಎಂದು ನಮೂದಿಸುತ್ತೇನೆ.
05:05 ನಾವು ಐದರ factorial ಅನ್ನು ಅಂದರೆ
05:08 120 ಅನ್ನು ಪಡೆಯುತ್ತೇವೆ.
05:11 ನಾವು terminal ನಲ್ಲಿ ಪ್ರೋಗ್ರಾಂ ನ ಹರಿವನ್ನು ನೋಡಬಹುದು. ನಾವು ಪ್ರೋಗ್ರಾಂ ನ ಹರಿವನ್ನು ವಿಶ್ಲೇಷಿಸಬಹುದು.
05:18 ಸ್ಲೈಡ್ಸ್ ಗೆ ಹಿಂದಿರುಗಿ.
05:20 ಸಾರಾಂಶವನ್ನು ನೋಡೋಣ. ಈ ಟ್ಯುಟೋರಿಯಲ್ ನಲ್ಲಿ ನಾವು
05:23 Recursive ಫಂಕ್ಷನ್ ನ ಕುರಿತು
05:25 ಕೆಲವು ಉದಾಹರಣೆಗಳೊಂದಿಗೆ ಕಲಿತಿದ್ದೇವೆ.
05:28 ಸ್ವಂತ ಅಭ್ಯಾಸಕ್ಕಾಗಿ- 'N' ಸಂಖ್ಯೆಗಳ ಮೊತ್ತವನ್ನು ಕಂಡುಹಿಡಿಯುವ recursive function ಫಂಕ್ಷನ್ ಅನ್ನು ಹೊಂದಿರುವ ಪ್ರೋಗ್ರಾಂ ಅನ್ನು ಬರೆಯಿರಿ.
05:36 ಮಾಹಿತಿಗಾಗಿ ಲಿಂಕ್ನಲ್ಲಿರುವ ವೀಡಿಯೋ ನೋಡಿ spoken-tutorial.org/What_is_a_Spoken_Tutorial
05:39 ಅದು Spoken Tutorial projectನ ಕುರಿತು ತಿಳಿಸಿಕೊಡುತ್ತದೆ.
05:43 ನಿಮ್ಮಲ್ಲಿ ಒಳ್ಳೆಯ ಬೇಂಡ್-ವಿಡ್ತ್ ಇರದಿದ್ದರೆ ಡೌನ್ಲೋಡ್ ಮಾಡಿಕೊಂಡೂ ನೋಡಬಹುದು.
05:47 Spoken Tutorial Project Team ಇದು spoken tutorialಗಳ ಕುರಿತು ಕಾರ್ಯಾಗಾರವನ್ನು ಏರ್ಪಡಿಸುತ್ತದೆ.
05:53 online testನಲ್ಲಿ ತೇರ್ಗಡೆಯಾದವರಿಗೆ ಪ್ರಮಾಣಪತ್ರವನ್ನೂ ನೀಡುತ್ತದೆ
05:58 ಹೆಚ್ಚಿನ ವಿವರಗಳಿಗಾಗಿ contact@spoken-tutorial.org ಗೆ ಬರೆಯಿರಿ
06:06 Spoken Tutorial Projectಇದು Talk to a Teacher ಯೋಜನೆಯ ಭಾಗವಾಗಿದೆ.
06:10 ರಾಷ್ಟ್ರೀಯ ಸಾಕ್ಷರತಾ ಮಿಶನ್ ICT, MHRD, ಭಾರತ ಸರಕಾರದಿಂದ ಅನುದಾನಿತವಾಗಿದೆ
06:18 ಹೆಚ್ಚಿನಮಾಹಿತಿಯನ್ನು ಕೆಳಕಂಡ ಜಾಲತಾಣದಿಂದ ಪಡೆಯಬಹುದು. Spoken-tutorial.org\NMEICT-Intro
06:24 ಈ ಪಾಠವನ್ನು FOSSEE ಮತ್ತು Spoken Tutorial Teams, IIT Bombay ಇವರು ಸಮರ್ಪಿಸಿರುತ್ತಾರೆ.
06:29 ಭಾಷಾಂತರ ಮತ್ತು ಧ್ವನಿ ವಿದ್ವಾನ್ ನವೀನ್ ಭಟ್ಟ ಉಪ್ಪಿನಪಟ್ಟಣ. ನಮಸ್ಕಾರ.
06:33 ಧನ್ಯವಾದಗಳು.

Contributors and Content Editors

NaveenBhat, PoojaMoolya, Pratik kamble