BASH/C2/Introduction-to-BASH-Shell-Scripting/Kannada

From Script | Spoken-Tutorial
Jump to: navigation, search
Time Narration
00:01 ಮಿತ್ರರೇ !BASH shell scripting ಬಗೆಗಿನ ಸ್ಪೊಕನ್-ಟ್ಯುಟೊರಿಯಲ್ ಗೆ ನಿಮಗೆಲ್ಲ ಸ್ವಾಗತ.
00:08 ಇಲ್ಲಿ ನಾವು
00:10 ವಿಭಿನ್ನ ಪ್ರಕಾರದ Shell ಗಳ ಕುರಿತು,
00:13 Bash Shell script ಅನ್ನು ಬರೆಯಲು ಮತ್ತು,
00:16 ಎಕ್ಸಿಕ್ಯೂಟ್ ಮಾಡುವದನ್ನು ಕಲಿಯುತ್ತೇವೆ.
00:18 ಈ ಪಾಠವನ್ನು ಕಲಿಯಲು ನೀವು Linux Operating System ಅನ್ನು ಉಪಯೋಗಿಸಲು ತಿಳಿದಿರಬೇಕು.
00:25 ತಿಳಿದಿಲ್ಲವಾದಲ್ಲಿ ಸಂಬಂಧಿತ Linux ಟ್ಯುಟೊರಿಯಲ್ ಗಾಗಿ ಕೆಳಕಂಡ ಜಾಲತಾಣವನ್ನು ಭೇಟಿಮಾಡಿ.
00:32 ಈ ಪಾಠಕ್ಕಾಗಿ ನಾನು
00:35 Ubuntu Linux 12.04 OS ಮತ್ತು
00:39 GNU Bash version 4.1.10 ಗಳನ್ನು ಉಪಯೋಗಿಸುತ್ತೇನೆ.
00:43 ತಿಳಿದಿರಲಿ GNU bash version 4 ಅಥವಾ ಹೆಚ್ಚಿನ ವರ್ಶನ್ ಇದಕ್ಕೆ ಬೇಕಾಗುತ್ತದೆ.
00:50 ಪೀಠಿಕೆಯೊಂದಿಗೆ ಪ್ರಾರಂಭಿಸೋಣ.
00:53 Bash Shell ಎಂದರೇನು? ತಿಳಿಯೋಣ.
00:56 Bash Shell ಎಂಬುದೊಂದು Command language interpreter ಆಗಿದೆ, ಮತ್ತದು ಕಮಾಂಡ್ ಗಳನ್ನು ಎಕ್ಸಿಕ್ಯೂಟ್ ಮಾಡುತ್ತದೆ.
01:02 ಈ ಕಮಾಂಡ್-ಗಳು ಸ್ಟೇಂಡರ್ಡ್-ಇನ್ಪುಟ್-ಡಿವೈಸ್ ಗಳಿಂದ ಓದಲ್ಪಡುತ್ತವೆ.
01:07 ಈ ಇನ್ಪುಟ್-ಡಿವೈಸ್-ಗಳು
01:09 keyboard ಆಗಿರಬಹುದು
01:11 ಅಥವಾ ಒಂದು ಸಾಮಾನ್ಯ text file ಕೂಡಾ ಆಗಬಹುದು.
01:14 ಈಗ ನಾನು Bash Shell ಎಂದರೇನೆಂದು ತಿಳಿಸುತ್ತೇನೆ.
01:16 Ctrl+Alt+T ಕೀಲಿಗಳನ್ನು ಒಟ್ಟಿಗೇ ಒತ್ತಿ terminal ವಿಂಡೌವನ್ನು ತೆರೆಯಿರಿ.
01:24 ಅದು Gnome terminal ಅನ್ನು ತೆರೆಯುತ್ತದೆ.
01:27 ಯಾವ ಪ್ರಕಾರದ shellಅನ್ನು ನಾವು ಉಪಯೋಗಿಸುತ್ತೇವೆಂದು ತಿಳಿಯಲು, echo ಸ್ಪೇಸ್ dollarಚಿಹ್ನೆ SHELL ಎಂದು ಕೆಪಿಟಲ್-ನಲ್ಲಿ ಬರೆಯಿರಿ.
01:38 Enter ಒತ್ತಿರಿ.
01:40 ಮುಂದಿನ ಸಾಲಿನಲ್ಲಿ slash bin slash bash ಎಂದು ಔಟ್-ಪುಟ್ ಅನ್ನು ಕಾಣುತ್ತೀರಿ.
01:47 ಇದು ನಾವು Bash Shell ಉಪಯೋಗಿಸುತ್ತಿದ್ದೇವೆಂದು ತಿಳಿಸುತ್ತದೆ..
01:51 ಈಗ ನಾವು ವಿಭಿನ್ನ ಪ್ರಕಾರದ Shells ಗಳ ಬಗ್ಗೆ ತಿಳಿಯೋಣ.
01:56 ನಮ್ಮ ಸ್ಲೈಡ್ ಗೆ ಮರಳೋಣ. Bourne Shell(ಬೌರ್ನ್-ಶೆಲ್)
02:00 ಇದು Stephen Bourne ನಿಂದ ಬರೆಯಲ್ಪಟ್ಟ ಮೂಲUNIX ಶೆಲ್ ಆಗಿದೆ.
02:06 ಇಂದಿನ ಆಧುನಿಕ ಶೆಲ್-ಗಳಿಂದ ಪಡೆಯಬಹುದಾದ interactivity ಇದರಲ್ಲಿ ಸಿಗುವದಿಲ್ಲ.
02:11 C Shell, Bourne Shell ನಲ್ಲಿ ಇರದಿರುವ ಫೀಚರ್ಸ್ಗಳನ್ನು ಇದು ನೀಡುತ್ತದೆ.
02:16 K Shell, ಇದನ್ನು ರಚಿಸಿರುವರು David Korn ಎಂಬವರು.
02:20 ಇದು B Shell ಮತ್ತು C Shell ಇವೆರಡರ ಫೀಚರ್ಸ್ ಗಳಜೊತೆ ಮತ್ತಿಷ್ಟು ಪೀಚರ್ಸ್ ಗಳನ್ನು ಕೊಡುತ್ತದೆ.
02:27 Bash Shell
02:30 Bash Shell ಎಂಬುದನ್ನು GNU Project ರಚಿಸಿರುತ್ತದೆ.
02:32 ಇದು B Shell ಲೆಂಗ್ವೆಜ್ ಅನ್ನು ಅವಲಂಬಿಸಿದೆ.
02:35 *ಇದು C ಮತ್ತುK Shells. ಇವೆರಡರ ಫೀಚರ್ಸ್ ಗಳನ್ನು ಒಳಗೊಂಡಿದೆ.
02:40 TC Shell. ಇದು FreeBSD ಇದರ ಡೀಫೊಲ್ಟ್ ಶೆಲ್ ಆಗಿದೆ ಮತ್ತಿದರ ಸಂತತಿ..
02:46 Z shell ಆಗಿದೆ.
02:49 Shell ಸಂವಹನಕ್ಕಾಗಿ (interactive) ರಚಿತವಾಗಿದೆ.
02:52 ಇದು ksh,bash ಮತ್ತು tcsh. ಗಳ ಹಲವಾರು ಫೀಚರ್ಸ್ ಗಳನ್ನು ಒಳಗೊಂಡಿದೆ.
02:58 ನಾವೀಗ Bash Shell script ಎಂದರೇನೆಂದು ನೋಡೋಣ.
03:02 Bash Shell script ಇದು text fileನಲ್ಲಿ Bash ಕಮಾಂಡ್ ಗಳನ್ನು ಹೊಂದಿರುತ್ತದೆ.
03:08 ಇದು Shell ಗೆ ಕಮಾಂಡ್ ಅನ್ನು ಟೈಪ್ ಮಾಡುವ ಬದಲು, ಈ text file,ಅನ್ನು ಎಕ್ಸಿಕ್ಯೂಟ್ ಮಾಡಲು ತಿಳಿಸುತ್ತದೆ.
03:15 ಈಗ ಒಂದು ಸಾಮಾನ್ಯ Bash script. ಅನ್ನು ಹೇಗೆ ಬರೆಯುವದೆಂದು ನೋಡೋಣ.
03:20 echo ಕಮಾಂಡ್ ಅನ್ನು ಪರೀಕ್ಷಿಸೋಣ. ಇದು terminal ನಲ್ಲಿ Hello World ಎಂದು ಮುದ್ರಿಸುತ್ತದೆ.
03:25 terminal ಗೆ ಹೋಗೋಣ.
03:29 ಈಗ echo ಸ್ಪೇಸ್ ಮತ್ತು ಡಬಲ್ ಕೋಟ್ಸ್ ನಲ್ಲಿ Hello world ಎಂದು ಟೈಪ್ ಮಾಡಿ.
03:35 Enter ಒತ್ತಿರಿ.
03:37 ಇದು terminal.ನಲ್ಲಿ Hello World ಎಂದು ಮುದ್ರಿಸುತ್ತದೆ.
03:40 ಕಮಾಂಡ್ ಹೇಗೆ ಕಾರ್ಯನಿರ್ವಹಿಸುತ್ತದೆ ನೋಡಿ!.
03:43 ಈಗ, ನಮಗೆ ಈ ಕಮಾಂಡ್ ಅನ್ನು ಫೈಲ್ ಒಂದರಲ್ಲಿ ಉಪಯೋಗಿಸುವದಾದರೆ ಏನು?
03:47 ಈ ಕಮಾಂಡ್ ಅನ್ನು ಫೈಲ್ ನಲ್ಲಿಟ್ಟು ಎಕ್ಸಿಕ್ಯೂಟ್ ಮಾಡಿ.
03:52 ಇದಕ್ಕಾಗಿ ನಾನು gedit ಟೆಕ್ಸ್ಟ್-ಎಡಿಟರ್ ಅನ್ನು ಉಪಯೋಗಿಸುತ್ತೇನೆ.
03:57 ನೀವು ನಿಮಗೆ ಬೇಕಾದ text-editor ಅನ್ನು ಉಪಯೋಗಿಸಬಹುದು.
04:00 ನಾನು ನನ್ನ ಫೈಲ್ ಅನ್ನು Desktop ನಲ್ಲಿ ರಚಿಸಬಯಸುತ್ತೇನೆ.
04:03 ಅದಕ್ಕಾಗಿ cd ಸ್ಪೇಸ್ Desktop ಎಂದು ಟೈಪ್ ಮಾಡಿ.
04:07 Enter. ಒತ್ತಿರಿ.
04:09 ಈಗ gedit ಸ್ಪೇಸ್ hello ಅಂಡರ್-ಸ್ಕೋರ್ world ಡೊಟ್ sh ಸ್ಪೇಸ್ &'(ಎಮ್ಪರ್ಸೆಂಡ್ ) ಎಂದು ಟೈಪ್ ಮಾಡಿ.
04:20 Gedit ಎಂಬುದು ಟೆಕ್ಸ್ಟ್-ಎಡಿಟರ್ ಆಗಿದೆ. hello ಅಂಡರ್-ಸ್ಕೋರ್ world ಡೊಟ್ shಎಂಬುದು ಫೈಲ್-ನೇಮ್ ಆಗಿದೆ. ಮತ್ತು…
04:27 ನಾವು & (ಎಮ್ಪರ್ಸೆಂಡ್) ಅನ್ನು prompt ಅನ್ನು ಖಾಲಿ ಮಾಡಲು ಬಳಸುತ್ತೇವೆ..
04:32 Enter. ಒತ್ತಿ.ನಾವು gedit. ಅನ್ನು ಉಪಯೋಗಿಸಿ hello_world.sh ಎಂಬ ಹೊಸ ಫೈಲ್ ಅನ್ನು ರಚಿಸಿದ್ದೇವೆ.
04:40 ಈಗ hash ಆಶ್ಚರ್ಯ ಚಿಹ್ನೆ front ಸ್ಲೆಶ್ bin front ಸ್ಲ್ಯಾಶ್ bash
04:47 ಇದು ಪ್ರತಿಯೊಂದು bash script ಮೊದಲ ಲೈನ್ ಆಗಿದೆ..
04:51 ಇದನ್ನು shebang ಅಥವಾ bang ಲೈನ್ ಎಂದು ಕರೆಯುತ್ತಾರೆ.
04:55 Enter ಒತ್ತಿರಿ.
04:57 ಈಗ fileಗೆ ಟೈಪ್ ಮಾಡುವದರ ಮೂಲಕ ಕಮೆಂಟ್ ಒಂದನ್ನು ಸೇರಿಸೋಣ..
05:00 hash ಸ್ಪೇಸ್my first Bash script
05:06 ನೆನೆಪಿಡಿ hash,ನ ನಂತರದ ಯಾವುದೇ ಸಾಲುಗಳು comment.ಆಗುತ್ತದೆ.
05:11 ಹಾಗೇ commentsಗಳು Bash ಇಂಟರ್ಪ್ರಿಟರ್ ನಿಂದ ನಿರ್ಲಕ್ಷಿಸಲ್ಪಡುತ್ತವೆ.
05:15 ಈಗ ನಾವು ಮೊದಲು ಉಪಯೋಗಿಸಿದ ಕಮಾಂಡ್-ಗಳನ್ನು ಸೇರಿಸಬಹುದು.
05:19 Enter ಒತ್ತಿರಿ. echo ಸ್ಪೇಸ್ ಡಬಲ್-ಕೊಟ್ಸ್-ನಲ್ಲಿ Hello world ಎಂದು ಟೈಪ್ ಮಾಡಿ.
05:27 Enter ಒತ್ತಿರಿ.echo ಸ್ಪೇಸ್dollar ಚಿಹ್ನೆ (ಕೆಪಿಟಲ್ ನಲ್ಲಿ) SHELL ಎಂದು ಟೈಪ್ ಮಾಡಿ.
05:34 Enter. ಒತ್ತಿರಿ. echo ಸ್ಪೇಸ್ backtick date backtick ಗಳನ್ನು ಟೈಪ್ ಮಾಡಿ.
05:41 backtick ಚಿಹ್ನೆ ಕೀಬೋರ್ಡ್ ನಲ್ಲಿದೆ ಮತ್ತು tilde ಕೆರೆಕ್ಟರ್ ಅನ್ನು ಹೊಂದಿದೆ.
05:47 ಈಗ Save ಒತ್ತಿ ಫೈಲ್ ಅನ್ನು ರಕ್ಷಿಸಿ.
05:50 ಎಕ್ಸುಕ್ಯೂಟ್ ಮಾಡೋಣ. ಅದಕ್ಕಾಗಿ terminalಗೆ ಬನ್ನಿ.
05:55 ಮೊದಲು ನಾವು ಫೈಲ್ ಅನ್ನು ಎಕ್ಸಿಕ್ಯೂಟೆಬಲ್ ಮಾಡಬೇಕು.
05:58 ಅದಕ್ಕಾಗಿ chmod ಸ್ಪೇಸ್ plus x ಸ್ಪೇಸ್ hello ಅಣ್ಡರ್-ಸ್ಕೋರ್ world ಡೊಟ್ sh ಎಂದು ಟಂಕಿಸಿ.
06:09 Enter. ಒತ್ತಿ.
06:12 ಈಗ
06:14 dot ಸ್ಲೇಶ್ hello ಅಣ್ಡರ್-ಸ್ಕೋರ್ world ಡೋಟ್ sh ಎಂದು ಟೈಪ್ ಮಾಡಿ.
06:19 Enter. ಒತ್ತಿ.
06:22 Hello Worldಎಂದು terminalನಲ್ಲಿ ಕಾಣುತ್ತಿದ್ದೀರಿ..
06:27 shell ಟೈಪ್ ಮುಂದೆ ಡಿಸ್ಪ್ಲೇ ಆಗಿದೆ. ಅರ್ಥಾತ್ slash bin slash bash ಎಂದು.
06:32 ಮತ್ತು ದಿನ, ತಿಂಗಳು, ಸಮಯ, Time zone ಮತ್ತು ವರ್ಷ ಗಳೂ ಡಿಸ್ಪ್ಲೇ ಆಗಿವೆ.
06:38 ವ್ಯವಸ್ಥೆಗನುಗುಣವಾಗಿ ಫಲಿತಾಂಶ ಬೇರೆ ಬೇರೆ ಆಗಿರಬಹುದು.
06:43 ಸಾರಾಂಶವನ್ನು ತಿಳಿಯಲು ಸ್ಲೈಡ್ ಗೆ ಮರಳೋಣ.
06:46 ಈ ಟ್ಯುಟೊರಿಯಲ್ ನಲ್ಲಿ ನಾವು,,
06:48 ವಿಭಿನ್ನ ಪ್ರಕಾರದ Shells ಗಳ ಕುರಿತು.
06:50 Bash Shell ನ ಕುರಿತು,, Bash Shell scriptನ ಕುರಿತು,,
06:52 ಮತ್ತು ಸರಳShell script ಅನ್ನು ಬರೆದು ಎಕ್ಸಿಕ್ಯೂಟ್ ಮಾಡಲು ಕಲಿತೆವು.
06:57 ಸ್ವಂತ ಅಭ್ಯಾಸಕ್ಕಾಗಿ Welcome to Bash learning ಎಂಬ ಸಂದೇಶವನ್ನು ಮುದ್ರಿಸಲು script ಬರೆಯಿರಿ..
07:03 “***************” (asterisks) ಗಳು ಇನ್ನೊಂದು ಪಂಕ್ತಿಯಲ್ಲಿ ಬರುವಂತೆ ಮಾಡಿ
07:06 ಮಾಹಿತಿಗಾಗಿ ಲಿಂಕ್ನಲ್ಲಿರುವ ವೀಡಿಯೋ ನೋಡಿ..
07:10 ಅದು Spoken Tutorial projectನ ಕುರಿತು ತಿಳಿಸಿಕೊಡುತ್ತದೆ.
07:13 ನಿಮ್ಮಲ್ಲಿ ಒಳ್ಳೆಯ ಬೇಂಡ್-ವಿಡ್ತ್ ಇರದಿದ್ದರೆ ಡೌನ್ಲೊಡ್ ಮಾಡಿಕೊಂಡೂ ನೋಡಬಹುದು.
07:17 Spoken Tutorial Project Team ಇದು,
07:20 spoken tutorialಗಳ ಕುರಿತು ಕಾರ್ಯಾಗಾರವನ್ನು ಏರ್ಪಡಿಸುತ್ತದೆ.
07:22 online testನಲ್ಲಿ ತೇರ್ಗಡೆಯಾದವರಿಗೆ ಪ್ರಮಾಣಪತ್ರವನ್ನೂ ನೀಡುತ್ತದೆ.
07:26 ಹೆಚ್ಚಿನ ವಿವರಗಳಿಗಾಗಿ contact@spoken-tutorial.org ಗೆಬರೆಯಿರಿ.
07:34 Spoken Tutorial Projectಇದು Talk to a Teacher ಯೋಜನೆಯ ಭಾಗವಾಗಿದೆ.
07:39 ರಾಷ್ಟ್ರೀಯ ಸಾಕ್ಷರತಾ ಮಿಶನ್ ICT, MHRD, ಭಾರತ ಸರಕಾರದಿಂದ ಅನುದಾನಿತವಾಗಿದೆ.
07:45 ಹೆಚ್ಚಿನಮಾಹಿತಿಯನ್ನು ಕೆಳಕಂಡ ಜಾಲತಾಣದಿಂದ ಪಡೆಯಬಹುದು. http://spoken-tutorial.org\NMEICT-Intro
07:51 ಈ ಪಾಠವನ್ನು FOSSEE ಮತ್ತು Spoken Tutorial Teams, IIT Bombay ಇವರು ಸಮರ್ಪಿಸಿರುತ್ತಾರೆ.
07:56 ಭಾಷಾಂತರ ಮತ್ತು ಧ್ವನಿ ವಿದ್ವಾನ್ ನವೀನ್ ಭಟ್ಟ ಉಪ್ಪಿನಪಟ್ಟಣ. ನಮಸ್ಕಾರ..

Contributors and Content Editors

NaveenBhat, PoojaMoolya