Arduino/C2/Arduino-with-LCD/Kannada

From Script | Spoken-Tutorial
Jump to: navigation, search
Time Narration
00:01 ಎಲ್.ಸಿ.ಡಿ ಜೊತೆ ಆರ್ಡುಯಿನೊ ಅನ್ನು ಇಂಟರ್ಫೇಸಿಂಗ್ ಮಾಡುವ ಸ್ಪೋಕನ್ ಟ್ಯುಟೋರಿಯಲ್ ಗೆ ಸ್ವಾಗತ.
00:07 ಈ ಟ್ಯುಟೋರಿಯಲ್ ನಲ್ಲಿ ನಾವು:

ಎಲ್.ಸಿ.ಡಿ ಯನ್ನು ಆರ್ಡುಯಿನೊ ಬೋರ್ಡ್ ಗೆ ಸಂಪರ್ಕಿಸಲು, ಎಲ್.ಸಿ.ಡಿ ಯಲ್ಲಿ ಟೆಕ್ಸ್ಟ್ ಮೆಸೇಜ್ ಡಿಸ್ಪ್ಲೇ ಮಾಡಲು ಪ್ರೋಗ್ರಾಂ ಬರೆಯಲು ಕಲಿಯಲಿದ್ದೇವೆ.

00:18 ಈ ಟ್ಯುಟೋರಿಯಲ್ ಅನುಸರಿಸಲು ನೀವು:

ಎಲೆಕ್ಟ್ರಾನಿಕ್ಸ್ ಮತ್ತು C ಮತ್ತು C++ ಪ್ರೋಗ್ರಾಮಿಂಗ್ ಲ್ಯಾಂಗ್ವೇಜ್ ನ ಮೂಲಭೂತ ಜ್ಞಾನ ಹೊಂದಿರಬೇಕು.

00:30 ನಾನಿಲ್ಲಿ:

ಆರ್ಡುಯಿನೊ UNO ಬೋರ್ಡ್, ಉಬಂಟು ಲೀನಕ್ಸ್ 14.04 ಅಪರೇಟಿಂಗ್ ಸಿಸ್ಟಂ ಮತ್ತು Arduino IDE ಬಳಸುತ್ತಿದ್ದೇನೆ.

00:40 ಅಲ್ಲದೆ ನಮಗೆ ಬಾಹ್ಯ ಉಪಕರಣಗಳಾದ ಎಲ್.ಸಿ.ಡಿ 16 by 2, ಪೊಟೆಂಶಿಯೋಮೀಟರ್, ಬ್ರೆಡ್-ಬೋರ್ಡ್, ಪಿನ್ ಹೆಡರ್ ಮತ್ತು ಜಂಪರ್ ವೈರ್ ಗಳು,
00:55 ಸೋಲ್ಡರಿಂಗ್ ಅಯರ್ನ್, ಸೋಲ್ಡರಿಂಗ್ ಸ್ಟ್ಯಾಂಡ್, ಸೋಲ್ಡರಿಂಗ್ ಲೆಡ್ ಮತ್ತು ಸೋಲ್ಡರಿಂಗ್ ಪೇಸ್ಟ್ ಬೇಕು.
01:04 ನಾವೀಗ ಸರ್ಕಿಟ್ ಸಂಪರ್ಕದ ವಿವರಗಳನ್ನು ನೋಡೋಣ.
01:09 ಎಲ್.ಸಿ.ಡಿ ಯಲ್ಲಿ 16 ಪಿನ್ ಗಳು ಇರುವುದನ್ನು ನಾವು ನೋಡಬಹುದು.
01:14 ಪಿನ್ 1 ಗ್ರೌಂಡ್ ಪಿನ್ ಆಗಿದ್ದು, ಇದನ್ನು GND ಆಗಿ ಪ್ರತಿನಿಧಿಸಲಾಗುತ್ತದೆ.

ಪಿನ್ 2, 5 ವೋಲ್ಟ್ಸ್ ನ ಪವರ್ ಸಪ್ಲೈ ಪಿನ್ ಆಗಿದ್ದು, ಇದನ್ನು VCC ಆಗಿ ಪ್ರತಿನಿಧಿಸಲಾಗುತ್ತದೆ.

01:29 VO ಎನ್ನುವುದು ಎಲ್.ಸಿ.ಡಿ ಕಂಟ್ರಾಸ್ಟ್ ಪಿನ್ ಆಗಿದೆ. ಇಲ್ಲಿ ನೀವು ಪೊಟೆಂಶಿಯೋಮೀಟರ್ ಗೆ ಸಂಪರ್ಕಿಸಬೇಕು.

ಇದು, ವ್ಯತ್ಯಯಗೊಳ್ಳುವ ವೋಲ್ಟೆಜ್ ಗೆ ಎಲ್.ಸಿ.ಡಿ ಯ ಕಂಟ್ರಾಸ್ಟ್ ನಿಯಂತ್ರಿಸಲು ಅನುವು ಮಾಡಿಕೊಡುತ್ತದೆ.

01:42 RS ಎಂದರೆ ರಿಜಿಸ್ಟರ್ ಸೆಲೆಕ್ಟ್ ಎಂದರ್ಥ.

ಇದನ್ನು ಕಮಾಂಡ್ ರಿಜಿಸ್ಟರ್ ಅಥವಾ ಡೇಟಾ ರಿಜಿಸ್ಟರ್ ಆಗಿ ಬಳಸಬಹುದು.

01:52 ಕಮಾಂಡ್ ರಿಜಿಸ್ಟರ್ ಅನ್ನು, ಡಿಸ್ಪ್ಲೇ ಮಾಡಬೇಕಾದ ಕಮಾಂಡ್ ಅನ್ನು ಪ್ಲೇಸ್ ಮಾಡಲು ಬಳಸಲಾಗುತ್ತದೆ. ಮತ್ತು ಡೇಟಾ ರಿಜಿಸ್ಟರ್ ಅನ್ನು, ಡೇಟಾ ಪ್ಲೇಸ್ ಮಾಡಲು ಬಳಸಲಾಗುತ್ತದೆ.
02:02 RW ಎಂದರೆ ರೀಡ್ ರೈಟ್ ಪಿನ್ ಎಂದರ್ಥ.

ನಾವು ಎಲ್.ಸಿ.ಡಿ ಯಿಂದ ಡೇಟಾವನ್ನು ರೀಡ್ ಮಾಡಬಹುದು ಅಥವಾ ಎಲ್.ಸಿ.ಡಿ ಗೆ ರೈಟ್ ಮಾಡಬಹುದು.

02:12 E ಎಂದರೆ ಎನೇಬಲ್ ಪಿನ್ ಎಂದರ್ಥ. ಇದು ಎಲ್.ಸಿ.ಡಿ ಗೆ ಮಾಹಿತಿಯನ್ನು ಸ್ವೀಕರಿಸಲು ಸಾಧ್ಯವಾಗಿಸುತ್ತದೆ.
02:20 ಇವು ಡೇಟಾ ಪಿನ್ ಗಳಾಗಿವೆ. ಡೇಟಾ ಮತ್ತು ಕಮಾಂಡ್ ಗಳನ್ನು ಈ ಪಿನ್ ಗಳ ಮೂಲಕ ಎಲ್.ಸಿ.ಡಿ ಗೆ ಕಳುಹಿಸಲಾಗುತ್ತದೆ.
02:29 ಇವು ಎಲ್.ಸಿ.ಡಿ ಬ್ಯಾಕ್ ಲೈಟ್ ಪಿನ್ ಗಳು. ಇವುಗಳನ್ನು, ಎಲ್.ಸಿ.ಡಿ ಗೆ ವಿದ್ಯುತ್ ಒದಗಿಸಲು, ಡಿಸ್ಪ್ಲೇ ಕಂಟ್ರಾಸ್ಟ್ ನಿಯಂತ್ರಿಸಲು ಮತ್ತು ಎಲ್.ಸಿ.ಡಿ ಬ್ಯಾಕ್ ಲೈಟ್ ಗಳನ್ನು ಆನ್ ಅಥವಾ ಆಫ್ ಮಾಡಲು ಬಳಸಲಾಗುತ್ತದೆ.
02:43 ಪಿನ್ 15, ಬ್ಯಾಕ್-ಲೈಟ್ ಎಲ್.ಸಿ.ಡಿ ಯ ಆನೋಡ್ ಆಗಿದೆ.

ಪಿನ್ 16, ಬ್ಯಾಕ್-ಲೈಟ್ ಎಲ್.ಸಿ.ಡಿ ಯ ಕ್ಯಾಥೋಡ್ ಆಗಿದೆ.

02:53 ಇಲ್ಲಿಯತನಕ ನಾವು ಎಲ್.ಸಿ.ಡಿ ಯ ಪಿನ್ ವಿವರಗಳನ್ನು ನೋಡಿದೆವು.
02:58 ನಾವು ಹೇಗೆ ಸೋಲ್ಡರಿಂಗ್ ಮಾಡಬಹುದು ಎಂದು ನೋಡಲು ನಾವೀಗ ಸೋಲ್ಡರಿಂಗ್ ಸ್ಟೇಷನ್ ಗಳತ್ತ ಸಾಗೋಣ.
03:04 ಇಲ್ಲಿ ನಾವು 16 by 2 ಎಲ್.ಸಿ.ಡಿ ಯನ್ನು ಹೊಂದಿದ್ದೇವೆ.

ಅಂದರೆ, ಇದು ಪ್ರತಿ ಸಾಲಿನಲ್ಲಿ 16 ಅಕ್ಷರಗಳನ್ನು ಡಿಸ್ಪ್ಲೇ ಮಾಡಬಹುದು ಮತ್ತು ಇಂತಹ 2 ಸಾಲುಗಳಿವೆ.

03:16 ನಾವು ಸುಲಭವಾಗಿ ಬ್ರೆಡ್ ಬೋರ್ಡ್ ಗೆ ಸಂಪರ್ಕಿಸಲು ಸಾಧ್ಯವಾಗುವಂತೆ ಎಕ್ಸ್ಟೆನ್ಶನ್ ಪಿನ್ ಅನ್ನು ಎಲ್.ಸಿ.ಡಿ ಗೆ ಸೋಲ್ಡರ್ ಮಾಡಬೇಕು.

ಈಗಲೇ ವಿದ್ಯುತ್ ಗೆ ಸಂಪರ್ಕಿಸಲಾಗಿರುವ ಸೋಲ್ಡರಿಂಗ್ ಐರ್ನ್, ಸೋಲ್ಡರ್ ಪೇಸ್ಟ್ ಮತ್ತು ಸೋಲ್ಡರ್ ವೈರ್.

03:33 ಮೊದಲಿಗೆ, ಇಲ್ಲಿ ತೋರಿಸಿರುವಂತೆ, ಎಕ್ಸ್ಟೆರ್ನಲ್ ಪಿನ್ ಅನ್ನು ಎಲ್.ಸಿ.ಡಿ ಯಲ್ಲಿ ಇಡಿ.
03:38 ನಂತರ, ವೀಡಿಯೊದಲ್ಲಿ ತೋರಿಸಿರುವಂತೆ ಸೋಲ್ಡರ್ ಪೇಸ್ಟ್ ಅನ್ನು ಎಕ್ಸ್ಟೆರ್ನಲ್ ಪಿನ್ ಗಳ ಮೊನೆಗೆ ಹಚ್ಚಿ.
03:46 ಇದನ್ನು ಈಗ ಇನ್ನೊಮ್ಮೆ ಸಂಪರ್ಕಿಸಿ.
03:49 ಇಲ್ಲಿ ತೋರಿಸಿರುವಂತೆ, ಸಮತಟ್ಟಾದ ನೆಲದಲ್ಲಿ, ಎಲ್.ಸಿ.ಡಿ ಯನ್ನು ಎಕ್ಸ್ಟೆರ್ನಲ್ ಪಿನ್ ಅನ್ನು ಗಟ್ಟಿಯಾಗಿ ಇಡಿ.

ನಾವು ಸೋಲ್ಡರಿಂಗ್ ಮಾಡುವಾಗ ಇದು ಈಗ ಅಲುಗಾಡುವುದಿಲ್ಲ.

04:02 ಸ್ವಲ್ಪ ಪೇಸ್ಟ್ ನೊಂದಿಗೆ ಸೋಲ್ಡರ್ ರಾಡ್ ತೆಗೆದುಕೊಳ್ಳಿ ಮತ್ತು ಇಲ್ಲಿ ತೋರಿಸಿರುವಂತೆ ತಂತಿಯ ಮೊನೆಗೆ ತಾಗಿಸಿ.
04:09 ತಂತಿ ಕರಗುವಂತಾಗಲು ಇದನ್ನು ಕೆಲವು ಸೆಕೆಂಡುಗಳ ಕಾಲ ಹಿಡಿಯಿರಿ ಮತ್ತು ಇಲ್ಲಿ ತೋರಿಸಿರುವಂತೆ ಎಕ್ಸ್ಟೆರ್ನಲ್ ಪಿನ್ ಗೆ ಹಚ್ಚಿರಿ.
04:19 ನಾನೀಗ ಎರಡು ಪಿನ್ ಗಳಿಗೆ ಸೋಲ್ಡರಿಂಗ್ ಮಾಡಿದ್ದೇನೆ. ಎರಡು ಪಿನ್ ಗಳಿಗೆ ಮಾಡಿರುವ ಸೋಲ್ಡರಿಂಗ್ ನ ಕ್ಲೋಸ್ ಅಪ್ ನೋಡಿ.
04:27 ಇದೇ ರೀತಿ, ಉಳಿದ ಪಿನ್ ಗಳಿಗೆ ಸೋಲ್ಡರಿಂಗ್ ಮಾಡಿ.
04:32 ನಾವೀಗ ಈ ಪ್ರಯೋಗಕ್ಕಾಗಿ ಸರ್ಕಿಟ್ ಡಯಗ್ರಾಂನತ್ತ ಸಾಗೋಣ.
04:37 ಇಲ್ಲಿ ತೋರಿಸಿರುವಂತೆ, ಎಲ್.ಸಿ.ಡಿ ಯ ಕಂಟ್ರಾಸ್ಟ್ ನಿಯಂತ್ರಿಸಲು ಪೊಟೆಂಶಿಯೋಮೀಟರ್ ಅನ್ನು ಸಂಪರ್ಕಿಸಲಾಗಿದೆ.
04:44 ಪೊಟೆಂಶಿಯೋಮೀಟರ್ ಎಂದರೆ, ವೋಲ್ಟೆಜ್ ಮಾಪನಕ್ಕೆ ಬಳಸುವ ಸಣ್ಣ ಗಾತ್ರದ ಎಲೆಕ್ಟ್ರಾನಿಕ್ ಘಟಕವಾಗಿದೆ.
04:51 ಪಿನ್ ಸಂಖ್ಯೆ 11 ಅನ್ನು ಎನೇಬಲ್ ಗೆ ಸಂಪರ್ಕಿಸಲಾಗಿದೆ ಮತ್ತು ಪಿನ್ ಸಂಖ್ಯೆ 12 ಅನ್ನು ರಿಜಿಸ್ಟರ್ ಸೆಲೆಕ್ಟ್ ಗೆ ಸಂಪರ್ಕಿಸಲಾಗಿದೆ.
05:00 ರೀಡ್ ರೈಟ್ ಪಿನ್ ಅನ್ನು ಗ್ರೌಂಡ್ ಗೆ ಸಂಪರ್ಕಿಸಲಾಗಿದೆ. ಅಂದರೆ ನಾವು ಎಲ್.ಸಿ.ಡಿ ಗೆ ರೈಟ್ ಮಾಡುತ್ತಿದ್ದೇವೆ.
05:07 ನಮ್ಮ ಪ್ರಯೋಗಕ್ಕೆ ನಾವು 4 ಡೇಟಾ ಲೈನ್ ಗಳನ್ನು ಮಾತ್ರ ಬಳಸುತ್ತಿದ್ದೇವೆ.

ಪಿನ್ 15 ಮತ್ತು ಪಿನ್ 16 ಅನ್ನು ಎಲ್.ಸಿ.ಡಿ ಯ ಬ್ಯಾಕ್ ಲೈಟ್ ಗೆ ಸಂಪರ್ಕಿಸಲಾಗಿದೆ. ಇಲ್ಲಿ ತೋರಿಸಿರುವಂತೆ, ಪಿನ್ 15 ಅನ್ನು VCC ಗೆ ಮತ್ತು ಪಿನ್ 16 ಅನ್ನು ಗ್ರೌಂಡ್ ಗೆ ಸಂಪರ್ಕಿಸಿ.

05:27 ಸರ್ಕಿಟ್ ಡಯಗ್ರಾಂ ಪ್ರಕಾರ ನಾನು ಆರ್ಡುಯಿನೊ ಮತ್ತು ಎಲ್.ಸಿ.ಡಿ ಯ ಸೆಟಪ್ ಮಾಡಿದ್ದೇನೆ.

ನಮ್ಮ ಉದ್ದೇಶವು ಎಲ್.ಸಿ.ಡಿ ಡಿಸ್ಪ್ಲೇಯಲ್ಲಿ ಎರಡು ಸ್ಟ್ರಿಂಗ್ ಗಳನ್ನು ಬರೆಯುವುದು ಆಗಿದೆ.

05:38 ನಾವೀಗ Arduino IDE ಯಲ್ಲಿ ಪ್ರೋಗ್ರಾಂ ಬರೆಯಲಿದ್ದೇವೆ.

Arduino IDE ಗೆ ಮರಳಿ.

05:46 ಮೊದಲಿಗೆ ನಾವು ಲಿಕ್ವಿಡ್ ಕ್ರಿಸ್ಟಲ್ ಲೈಬ್ರರಿಗಾಗಿ ಉಲ್ಲೇಖದ ಕೈಪಿಡಿಯನ್ನು (reference manual) ನೋಡೋಣ.
05:52 Menu bar ನಲ್ಲಿ Help ಮತ್ತು Reference ಮೇಲೆ ಕ್ಲಿಕ್ ಮಾಡಿ.

ಇದು ಆಫ್ಲೈನ್ ಪೇಜ್ ಅನ್ನು ತೆರೆಯುತ್ತದೆ.

06:00 Reference ವಿಭಾಗದಲ್ಲಿ Libraries ಮೇಲೆ ಕ್ಲಿಕ್ ಮಾಡಿ.
06:04 ನಂತರ ಕೆಳಕ್ಕೆ ಸ್ಕ್ರಾಲ್ ಮಾಡಿ ಮತ್ತು ಲಭ್ಯ Standard Libraries ನೋಡಿ.
06:10 LiquidCrystal ಮೇಲೆ ಕ್ಲಿಕ್ ಮಾಡಿ. ಲಭ್ಯ ಫಂಕ್ಷನ್ ಗಳ ಕುರಿತು ಇನ್ನಷ್ಟು ತಿಳಿಯಲು ವಿವರಣೆಯನ್ನು ಓದಿ.
06:18 ಇದು 4 ಬಿಟ್ ಅಥವಾ 8 ಬಿಟ್ ಡೇಟಾ ಲೈನುಗಳ ಜೊತೆ ಕೆಲಸ ಮಾಡುತ್ತದೆ ಎಂದು ಇದು ಹೇಳುತ್ತದೆ.
06:24 ನಂತರ, LiquidCrystal ಫಂಕ್ಷನ್ ಮತ್ತು ಇದರ ಪ್ಯಾರಾಮೀಟರ್ ಗಳನ್ನು ನೋಡೋಣ.
06:30 ಇದರ ಫಂಕ್ಷನ್ ಗಳನ್ನು ಅರಿಯಲು ಕೈಪಿಡಿಯನ್ನು ಉಲ್ಲೇಖಿಸುವುದು ಒಳ್ಳೆಯ ಅಭ್ಯಾಸವಾಗಿದೆ.

LiquidCrystal ಫಂಕ್ಷನ್ ಮೇಲೆ ಕ್ಲಿಕ್ ಮಾಡಿ.

06:39 ಇದನ್ನು 8 ಬಿಟ್ ಅಥವಾ 4 ಬಿಟ್ ಗೆ ಹೇಗೆ ಬಳಸಬಹುದು ಎಂದು ಸಿಂಟ್ಯಾಕ್ಸ್ ತೋರಿಸುತ್ತದೆ.
06:46 ನಮ್ಮ ಪ್ರಯೋಗಕ್ಕಾಗಿ, ನಾವು ಫಸ್ಟ್ ಲೈನ್ ಸಿಂಟ್ಯಾಕ್ಸ್ ಬಳಸಲಿದ್ದೇವೆ.
06:51 Arduino IDE ಗೆ ಮರಳಿ.
06:54 ಮೊದಲಿಗೆ ನಾವು ಇಲ್ಲಿ ಲಿಕ್ವಿಡ್ ಕ್ರಿಸ್ಟಲ್ ಲೈಬ್ರರಿಯನ್ನು ಸೇರಿಸಿಕೊಳ್ಳೋಣ.
06:59 Menu ಬಾರ್ ನಲ್ಲಿ Sketch ಮತ್ತು Include Library ಮೇಲೆ ಕ್ಲಿಕ್ ಮಾಡಿ.

ನಂತರ LiquidCrystal ಆರಿಸಿ. ಇಲ್ಲಿ ತೋರಿಸಿರುವಂತೆ ಇದು LiquidCrystal.h ಫೈಲ್ ಅನ್ನು ಸೇರಿಸುತ್ತದೆ.

07:14 ಈಗ, ಇಲ್ಲಿ ತೋರಿಸಿರುವಂತೆ ಕೋಡ್ ಅನ್ನು ಟೈಪ್ ಮಾಡಿ. ನಾನೀಗ ಪ್ಯಾರಾಮೀಟರ್ ಗಳನ್ನು ವಿವರಿಸುತ್ತೇನೆ.
07:21 lcd ಯು type Liquid crystal ನ ಮಾರ್ಪಾಡು ಆಗಿದೆ.
07:26 ಮೊದಲ ಪ್ಯಾರಾಮೀಟರ್, Register Select ಆಗಿದೆ.

ʻರಿಜಿಸ್ಟರ್ ಸೆಲೆಕ್ಟ್ʼ ಅನ್ನು ಆರ್ಡುಯಿನೊ ಬೋರ್ಡ್ ನ ಪಿನ್ 12 ಕ್ಕೆ ಸಂಪರ್ಕಿಸಲಾಗಿದೆ.

07:35 ʻEnableʼ ಇಲ್ಲಿ ಎರಡನೇ ಪ್ಯಾರಾಮೀಟರ್ ಆಗಿದೆ. ಇದನ್ನು ಪಿನ್ 11ಕ್ಕೆ ಸಂಪರ್ಕಿಸಲಾಗಿದೆ.
07:41 ಎಲ್.ಸಿ.ಡಿ ಯ ಡೇಟಾ ಲೈನ್ ಗಳು ನಂತರದ 4 ಪ್ಯಾರಾಮೀಟರ್ ಗಳಾಗಿವೆ.
07:46 ಎಲ್.ಸಿ.ಡಿ ಯ d4, d5, d6 ಮತ್ತು d7 ಗಳನ್ನು ಆರ್ಡುಯಿನೊ ಬೋರ್ಡ್ ನ 5, 4, 3 ಮತ್ತು 2 ಪಿನ್ ಗಳಿಗೆ ಸಂಪರ್ಕಿಸಲಾಗಿದೆ.
07:58 ನಾವು ಲೈಬ್ರರಿಯನ್ನು ಪಿನ್ ಗಳ ಜೊತೆ ಇನಿಶಿಯಲೈಸ್ ಮಾಡುತ್ತಿದ್ದೇವೆ. ಕೋಡ್ ನ ಈ ಸಾಲು, void setup() ಫಂಕ್ಷನ್ ನ ಹೊರಗಡೆ ಇರಬಹುದು.
08:07 void setup() ಫಂಕ್ಷನ್ ನಲ್ಲಿ, ಪ್ರಯೋಗಕ್ಕೆ ಬೇಕಾಗುವ ಆರಂಭಿಕ ಸೆಟಪ್ ಗಳನ್ನು ನಾವು ಬರೆಯಲಿದ್ದೇವೆ.

ಇಲ್ಲಿ begin ಎನ್ನುವ ಫಂಕ್ಷನ್ ಇದೆ.

08:18 ಈ ಫಂಕ್ಷನ್ ನ ವಿವರಣೆ ಮತ್ತು ಪ್ಯಾರಾಮೀಟರ್ ಗಳಿಗಾಗಿ ಕೈಪಿಡಿಯನ್ನು ನೋಡೋಣ.

ಉಲ್ಲೇಖದ ಕೈಪಿಡಿಯತ್ತ ಮರಳೋಣ.

08:27 ಕೈಪಿಡಿ ಹೀಗೆ ಹೇಳುತ್ತದೆ:

1. ಇಂಟರ್ಫೇಸ್ ಅನ್ನು ಎಲ್.ಸಿ.ಡಿ ಸ್ಕ್ರೀನ್ ಗೆ ಇನಿಶಿಯಲೈಸ್ ಮಾಡುತ್ತದೆ. 2. ಡಿಸ್ಪ್ಲೇಯ ಉದ್ದಳತೆಯನ್ನು (ಅಗಲ ಮತ್ತು ಎತ್ತರ) ನಿರೂಪಿಸುತ್ತದೆ ಮತ್ತು 3. ಇತರ ಯಾವುದೇ ಎಲ್.ಸಿ.ಡಿ ಲೈಬ್ರರಿ ಕಮಾಂಡ್ ಗಳ ಮೊದಲು ಕಾಲ್ ಮಾಡಬೇಕು.

08:45 ನಾವೀಗ ಪ್ಯಾರಾಮೀಟರ್ ಗಳನ್ನು ನೋಡೋಣ.

lcd: type liquid crystal ನ ಮಾರ್ಪಾಡು. cols: ಡಿಸ್ಪ್ಲೇಯು ಹೊಂದಿರುವ ಲಂಬ ಸಾಲುಗಳ ಸಂಖ್ಯೆ.

08:58 ನಾವು ನಮ್ಮ ಎಲ್.ಸಿ.ಡಿ ಯಲ್ಲಿ 16 ಲಂಬ ಸಾಲುಗಳನ್ನು ಹೊಂದಿದ್ದೇವೆ.

rows: ಡಿಸ್ಪ್ಲೇಯು ಹೊಂದಿರುವ ಸಾಲುಗಳ ಸಂಖ್ಯೆ. ನಾವು 2 ಸಾಲುಗಳನ್ನು ಹೊಂದಿದ್ದೇವೆ.

09:09 Arduino IDE ಗೆ ಮರಳಿ.
09:13 ಹೀಗೆ ಟೈಪ್ ಮಾಡಿ: lcd.begin open bracket 16 comma 2 close bracket semicolon
09:23 Set Cursor ಕಮಾಂಡ್, ಕರ್ಸರ್ ಅನ್ನು ಎಲ್.ಸಿ.ಡಿ ಯ ನಿರ್ದಿಷ್ಟ ಸಾಲು ಮತ್ತು ಕಂಬ ಸಾಲಿನಲ್ಲಿ ಇಡುತ್ತದೆ.
09:30 Zero comma zero ಎಂದರೆ ಶೂನ್ಯದ ಸಾಲು ಮತ್ತು ಶೂನ್ಯದ ಕಂಬ ಸಾಲು ಎಂದರ್ಥ.
09:36 ಇಲ್ಲಿ print ಎನ್ನುವ ಇನ್ನೊಂದು ಕಮಾಂಡ್ ಇದ್ದು ಟೆಕ್ಸ್ಟ್ ಅನ್ನು ಎಲ್.ಸಿ.ಡಿ ಯಲ್ಲಿ ಪ್ರಿಂಟ್ ಮಾಡುತ್ತದೆ.
09:44 lcd.print ಎಂದು ಟೈಪ್ ಮಾಡಿ ಮತ್ತು “First Row” ಎಂಬುದಾಗಿ ಟೆಕ್ಸ್ಟ್ ಅನ್ನು ನಮೂದಿಸಿ.
09:52 ನಾನೀಗ ಪ್ರೋಗ್ರಾಂ ಅನ್ನು ನಮೂದಿಸುತ್ತೇನೆ.
09:55 ಈ ಪ್ರೋಗ್ರಾಂ, 16 by 2 ಕಾನ್ಫಿಗರೇಶನ್ ನ ಎಲ್.ಸಿ.ಡಿ ಯಲ್ಲಿ ಪ್ರಿಂಟ್ ಮಾಡುತ್ತದೆ.

ಕರ್ಸರ್ ಅನ್ನು ಮೊದಲ ಸ್ಥಾನಕ್ಕೆ ಗುರಿಯಾಗಿಸಿ. lcd.print ಎನ್ನುವುದು “First row” ಅನ್ನು ಎಲ್.ಸಿ.ಡಿ ಯಲ್ಲಿ ಪ್ರಿಂಟ್ ಮಾಡುತ್ತದೆ.

10:12 ನಾವೀಗ ಪ್ರೋಗ್ರಾಂ ಅನ್ನು ಕಂಪೈಲ್ ಮತ್ತು ಅಪ್ಲೋಡ್ ಮಾಡೋಣ.
10:19 ನಾವು “First row” ಔಟ್ಪುಟ್ ಮೊದಲ ಸಾಲಿನಲ್ಲಿ ಡಿಸ್ಪ್ಲೇ ಆಗುವುದನ್ನು ಕಾಣಬಹುದು.
10:25 ಎರಡನೇ ಸಾಲಿನಲ್ಲಿ ಏನೂ ಡಿಸ್ಪ್ಲೇ ಆಗುತ್ತಿಲ್ಲ.
10:29 ಎರಡನೇ ಸಾಲಿನಲ್ಲೂ ಪ್ರಿಂಟ್ ಮಾಡುವುದಕ್ಕಾಗಿ ನಾವು ಪ್ರೋಗ್ರಾಂ ಅನ್ನು ಬದಲಾಯಿಸೋಣ.
10:34 ಕೋಡ್ ಅನ್ನು ಕಾಪಿ ಮತ್ತು ಪೇಸ್ಟ್ ಮಾಡಿ. “lcd.begin” ಸಾಲನ್ನು ತೆಗೆಯಿರಿ. ಏಕೆಂದರೆ ಇದನ್ನು ಪ್ರೋಗ್ರಾಂನ ಆರಂಭದಲ್ಲಿ ಇನಿಶಿಯಲೈಸ್ ಮಾಡಲಾಗಿದೆ.
10:46 ಇಲ್ಲಿ ತೋರಿಸಿರುವಂತೆ, setcursor ಕಮಾಂಡ್ ಅನ್ನು 0 ದ ಕಂಬ ಸಾಲು ಮತ್ತು 1ನೇ ಸಾಲಿಗೆ ಬದಲಾಯಿಸಿ.
10:54 print command ಟೆಕ್ಸ್ಟ್ ಅನ್ನು “second row” ಗೆ ಬದಲಾಯಿಸಿ.
10:59 ಈಗ ಪ್ರೋಗ್ರಾಂ ಅನ್ನು ಕಂಪೈಲ್ ಮತ್ತು ಅಪ್ಲೋಡ್ ಮಾಡೋಣ.
11:06 ಎರಡನೇ ಸಾಲಿನಲ್ಲೂ ಟೆಕ್ಸ್ಟ್ ಡಿಸ್ಪ್ಲೇ ಆಗುತ್ತಿದೆ.
11:10 void loop() ನಲ್ಲಿ ನಾವು ಯಾವುದೇ ಕೋಡ್ ಅನ್ನು ಬಳಸಿಲ್ಲ.

ಆದರೆ ನಾವು ಲೂಪ್ ಲೂಪ್ ಟೆಂಪ್ಲೇಟ್ ಅನ್ನು ಇಡಲೇಬೇಕು. ಇದು ಏಕೆಂದರೆ, ಆರ್ಡುಯಿನೊ ಸಿಂಟ್ಯಾಕ್ಸ್ ಪ್ರಕಾರ ಲೂಪ್ ಫಂಕ್ಷನ್ ಬೇಕು.

11:24 ಒಮ್ಮೆ ಟೆಕ್ಸ್ಟ್ ಕಳುಹಿಸಿದರೆ, ಅದು ಶಾಶ್ವತವಾಗಿ ಅಲ್ಲೇ ಇರುತ್ತದೆ.
11:29 ನಾವೀಗ ಕರ್ಸರ್ ಸ್ಥಾನವನ್ನು ಎರಡನೇ ಸಾಲಿನ 3ನೇ ಕಂಬ ಸಾಲಿಗೆ ಬದಲಾಯಿಸೋಣ.
11:34 ಇನ್ನೊಮ್ಮೆ ಪ್ರೋಗ್ರಾಂ ಅನ್ನು ಕಂಪೈಲ್ ಮತ್ತು ಅಪ್ಲೋಡ್ ಮಾಡಿ.
11:38 ಎರಡನೇ ಸಾಲಿನ ಕಂಬ ಸಾಲಿನ ಸ್ಥಾನದಲ್ಲಿ ಬದಲಾವಣೆಯಾಗಿರುವುದನ್ನು ಗಮನಿಸಿ.
11:43 ಕೈಪಿಡಿಯಲ್ಲಿ ನಮ್ಮ function ಪಟ್ಟಿಗೆ ಮರಳಿ.
11:47 scrollDisplayLeft, scrollDisplayRight ಮುಂತಾದ ಇನ್ನೂ ಅನೇಕ ಫಂಕ್ಷನ್ ಗಳು ಇಲ್ಲಿ ಇರುವುದನ್ನು ನಾವು ನೋಡಬಹುದು.

ಈ ಫಂಕ್ಷನ್ ಗಳನ್ನು ನೀವಾಗಿಯೇ ಅಧ್ಯಯನ ಮಾಡಿ.

12:01 ಇದರೊಂದಿಗೆ ನಾವು ಈ ಟ್ಯುಟೋರಿಯಲ್ ನ ಕೊನೆಗೆ ತಲುಪಿದ್ದೇವೆ. ನಾವೀಗ ಸಂಕ್ಷೇಪಿಸೋಣ.
12:06 ಈ ಟ್ಯುಟೋರಿಯಲ್ ನಲ್ಲಿ ನಾವು:

ಎಲ್.ಸಿ.ಡಿ ಯನ್ನು ಆರ್ಡುಯಿನೊ ಬೋರ್ಡ್ ಗೆ ಸಂಪರ್ಕಿಸಲು ಮತ್ತು ಎಲ್.ಸಿ.ಡಿ ಯಲ್ಲಿ ಟೆಕ್ಸ್ಟ್ ಮೆಸೇಜ್ ಅನ್ನು ಡಿಸ್ಪ್ಲೇ ಮಾಡಲು ಪ್ರೋಗ್ರಾಂ ಬರೆಯಲು ಕಲಿತೆವು.

12:18 ಈ ಅಸೈನ್ಮೆಂಟ್ ಪೂರ್ಣಗೊಳಿಸಿ.

ಎರಡನೇ ಸಾಲಿನಲ್ಲಿ “Hello World” ಟೆಕ್ಸ್ಟ್ ಅನ್ನು ಡಿಸ್ಪ್ಲೇ ಮಾಡುವುದಕ್ಕಾಗಿ ಇದೇ ಪ್ರೋಗ್ರಾಂ ಅನ್ನು ಬದಲಾಯಿಸಿ. ಕರ್ಸರ್ ಅನ್ನು 4ನೇ ಕಂಬ ಸಾಲಿನಲ್ಲಿ ಇಡಿ. ಪ್ರೋಗ್ರಾಂ ಅನ್ನು ಕಂಪೈಲ್ ಮತ್ತು ಅಪ್ಲೋಡ್ ಮಾಡಿ. ಎಲ್.ಸಿ.ಡಿ ಯಲ್ಲಿ ಟೆಕ್ಸ್ಟ್ ಡಿಸ್ಪ್ಲೇ ಆಗಿರುವುದನ್ನು ಗಮನಿಸಿ.

12:40 ಈ ಕೆಳಗಿನ ಲಿಂಕ್ ನಲ್ಲಿ ಇರುವ ವೀಡಿಯೊ, ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ಅನ್ನು ವಿವರಿಸುತ್ತದೆ. ದಯವಿಟ್ಟು ಇದನ್ನು ಡೌನ್ಲೋಡ್ ಮಾಡಿ ಮತ್ತು ವೀಕ್ಷಿಸಿ.
12:48 ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ತಂಡವು ಕಾರ್ಯಾಗಾರಗಳನ್ನು ನಡೆಸುತ್ತದೆ ಮತ್ತು ಪ್ರಮಾಣಪತ್ರಗಳನ್ನು ನೀಡುತ್ತದೆ.

ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ನಮಗೆ ಬರೆಯಿರಿ.

12:58 ನಿಮ್ಮ ಟೈಮ್ಡ್ ಕ್ವೆರಿಯನ್ನು ಈ ಫೋರಂ ನಲ್ಲಿ ಪೋಸ್ಟ್ ಮಾಡಿ.
13:02 ‘ಸ್ಪೋಕನ್ ಟ್ಯುಟೋರಿಯಲ್’ ಪ್ರೊಜೆಕ್ಟ್, NMEICT, MHRD, ಭಾರತ ಸರ್ಕಾರದ ನೆರವು ಪಡೆದಿದೆ.

ಈ ಲಿಂಕ್ ನಲ್ಲಿ ಈ ಮಿಶನ್ ಕುರಿತ ಹೆಚ್ಚಿನ ಮಾಹಿತಿ ಲಭ್ಯ.

13.13 ಈ ಸ್ಕ್ರಿಪ್ಟ್ ನ ಅನುವಾದಕರು ಮಂಗಳೂರಿನಿಂದ ಮೆಲ್ವಿನ್ ಮತ್ತು ಧ್ವನಿ ಶ್ರೀ ನವೀನ್ ಭಟ್, ಉಪ್ಪಿನಪಟ್ಟಣ.

ಧನ್ಯವಾದಗಳು.

Contributors and Content Editors

Melkamiyar, NaveenBhat, Sandhya.np14