QGIS/C4/Interpolation/Kannada
Time | Narration |
00:01 | QGIS ನಲ್ಲಿ Interpolation Methods ಗಳ ಕುರಿತಾದ ಸ್ಪೋಕನ್ ಟ್ಯುಟೋರಿಯಲ್ ಗೆ ಸ್ವಾಗತ. |
00:07 | ಈ ಟ್ಯುಟೋರಿಯಲ್ ನಲ್ಲಿ ನಾವು, ಇಂಟರ್ಪೊಲೇಷನ್ ವಿಧಾನಗಳು, |
00:12 | Inverse Distance Weighting (IDW) (ಇನ್ವರ್ಸ್ ಡಿಸ್ಟೆನ್ಸ್ ವೇಯ್ಟಿಂಗ್) ಮತ್ತು
Triangulated Irregular Network (TIN) (ಟ್ರೈಆಂಗ್ಯುಲೇಟೆಡ್ ಇರೆಗ್ಯುಲರ್ ನೆಟ್ವರ್ಕ್) – ಇವುಗಳ ಕುರಿತು ಕಲಿಯುವೆವು. |
00:18 | ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು, ನಾನು
ಉಬಂಟು ಲಿನಕ್ಸ್ ಒ.ಎಸ್ 16.04 ಆವೃತ್ತಿ ಮತ್ತು |
00:24 | QGIS ಆವೃತ್ತಿ 2.18 – ಇವುಗಳನ್ನು ಬಳಸುತ್ತಿದ್ದೇನೆ. |
00:28 | ಈ ಟ್ಯುಟೋರಿಯಲ್ ಅನ್ನು ಕಲಿಯಲು ನೀವು QGIS ಇಂಟರ್ಫೇಸ್ ನ ಕುರಿತು ತಿಳಿದಿರಬೇಕು. |
00:34 | ಹಿಂದಿನ ಟ್ಯುಟೋರಿಯಲ್ ಗಳಿಗಾಗಿ, ನಮ್ಮ ವೆಬ್ ಸೈಟ್ ಅನ್ನು ಭೇಟಿಮಾಡಿ. |
00:40 | ಈ ಟ್ಯುಟೋರಿಯಲ್ ಗೆ ಅಗತ್ಯವಿರುವ ಡಾಟಾ ಫೈಲ್ ಗಳನ್ನು Code files ಲಿಂಕ್ ನಲ್ಲಿ ಕೊಡಲಾಗಿದೆ. |
00:46 | ದಯವಿಟ್ಟು ಫೋಲ್ಡರ್ ಅನ್ನು ಡೌನ್ಲೋಡ್ ಮಾಡಿಕೊಂಡು, ಕಂಟೆಂಟ್ ಗಳನ್ನು ಎಕ್ಸ್ಟ್ರ್ಯಾಕ್ಟ್ ಮಾಡಿ. |
00:51 | ನಾನು ಫೋಲ್ಡರ್ ಅನ್ನು Desktop ನಲ್ಲಿ ಸೇವ್ ಮಾಡಿದ್ದೇನೆ.
ಅದನ್ನು ತೆರೆಯಲು, ಫೋಲ್ಡರ್ ಅನ್ನು ಡಬಲ್ ಕ್ಲಿಕ್ ಮಾಡಿ. |
00:59 | ಎಕ್ಸ್ಟ್ರ್ಯಾಕ್ಟ್ ಮಾಡಿದ ಫೋಲ್ಡರ್ ನಲ್ಲಿ Air Stations.shp ಫೈಲ್ ಗೆ ಹೋಗಿ. |
01:04 | ಈ ಫೈಲ್ ಮಹಾರಾಷ್ಟ್ರದಲ್ಲಿರುವ ಹವಾಮಾನ ಕೇಂದ್ರಗಳನ್ನು ತೋರಿಸುತ್ತದೆ. |
01:10 | Interpolation ಎನ್ನುವುದು ಪ್ರತ್ಯೇಕ ಬಿಂದುಗಳಿಂದ ನಿರಂತರ ಮೇಲ್ಮೈಯನ್ನು ರಚಿಸುವ ಒಂದು ವಿಧಾನವಾಗಿದೆ |
01:17 | QGIS ನಲ್ಲಿ interpolation ನ ಎರಡು ವಿಧಾನಗಳು ಲಭ್ಯವಿವೆ. |
01:22 | ಅವು Inverse Distance Weighting (IDW) (ಇನ್ವರ್ಸ್ ಡಿಸ್ಟೆನ್ಸ್ ವೇಯ್ಟಿಂಗ್) ಮತ್ತು Triangulated Irregular Network (TIN) (ಟ್ರೈಆಂಗ್ಯುಲೇಟೆದ್ ಇರೆಗ್ಯುಲರ್ ನೆಟ್ವರ್ಕ್) ಗಳಾಗಿವೆ. |
01:28 | Interpolation Plugin ಅನ್ನು Point layer ನಿಂದ interpolated raster (ಇಂಟರ್ಪೊಲೇಟೆಡ್ ರಾಸ್ಟರ್) ಅನ್ನು ರಚಿಸಲು ಬಳಸಲಾಗುತ್ತದೆ. |
01:35 | QGIS ಇಂಟರ್ಫೇಸ್ ಅನ್ನು ತೆರೆಯಿರಿ. |
01:38 | ಇಲ್ಲಿ ನಾನು QGIS ಇಂಟರ್ಫೇಸ್ ಅನ್ನು ತೆರೆದಿದ್ದೇನೆ. |
01:43 | ಇಲ್ಲಿ ತೋರಿಸಿದಂತೆ, Plugins ಮೆನ್ಯುವನ್ನು ಬಳಸಿ, ಇಂಟರ್ಪೊಲೇಷನ್ ಪ್ಲಗ್ ಇನ್ ಅನ್ನು ಸಕ್ರಿಯಗೊಳಿಸಿ. |
01:49 | Interpolation plugin ನ ಚೆಕ್ ಬಾಕ್ಸ್ ಅನ್ನು ಚೆಕ್ ಮಾಡಿ.
ಡಯಲಾಗ್ ಬಾಕ್ಸ್ ಅನ್ನು ಕ್ಲೋಸ್ ಮಾಡಿ. |
01:56 | Raster ಮೆನ್ಯುವನ್ನು ತೆರೆಯಿರಿ. |
01:59 | Interpolation ಆಯ್ಕೆಯು ಈಗ Raster ಮೆನ್ಯುವಿನಲ್ಲಿ ಸೇರ್ಪಡೆಯಾಗಿದೆ. |
02:04 | Add Vector Layer ಟೂಲ್ ಅನ್ನು ಕ್ಲಿಕ್ ಮಾಡಿ. Add vector layer ಡಯಲಾಗ್ ಬಾಕ್ಸ್ ತೆರೆದುಕೊಳ್ಳುತ್ತದೆ. |
02:11 | Browse ಬಟನ್ ಅನ್ನು ಕ್ಲಿಕ್ ಮಾಡಿ ಮತ್ತು Code files ಫೋಲ್ಡರ್ ಗೆ ಹೋಗಿ. ಇಲ್ಲಿ ನಾವು ಎರಡು ಫೈಲ್ ಗಳನ್ನು ಆಯ್ಕೆ ಮಾಡುವೆವು. |
02:20 | AirStations.shp ಫೈಲ್ ಅನ್ನು ಆಯ್ಕೆ ಮಾಡಿ. |
02:24 | ಕೀ ಬೋರ್ಡ್ ನಲ್ಲಿ Ctrl ಹಿಡಿದುಕೊಂಡು, MH_Districts.shp ಫೈಲ್ ನ ಮೇಲೆ ಕ್ಲಿಕ್ ಮಾಡಿ. |
02:32 | Open ಬಟನ್ ನ ಮೇಲೆ ಕ್ಲಿಕ್ ಮಾಡಿ. |
02:35 | Add vector layer ಡಯಲಾಗ್ ಬಾಕ್ಸ್ ನಲ್ಲಿ, Open ಬಟನ್ ನ ಮೇಲೆ ಕ್ಲಿಕ್ ಮಾಡಿ. |
02:40 | ಕ್ಯಾನ್ವಾಸ್ ನ ಮೇಲೆ ಮಹಾರಾಷ್ಟ್ರ ರಾಜ್ಯದ ನಕ್ಷೆಯನ್ನು ನೋಡಬಹುದು. |
02:45 | ಪ್ರತಿ ಜಿಲ್ಲೆಯ Air stations ಇರುವ ಪ್ರದೇಶವನ್ನು ಪಾಯಿಂಟ್ ಫೀಚರ್ಸ್ ನಲ್ಲಿ ತೋರಿಸಲಾಗಿದೆ. |
02:52 | ಈ ಪಾಯಿಂಟ್ ಫೀಚರ್ ಗಳನ್ನು ಲೇಬಲ್ ಮಾಡೋಣ. |
02:56 | Air Stations layer ನ ಮೇಲೆ ರೈಟ್ ಕ್ಲಿಕ್ ಮಾಡಿ. |
03:00 | Layer Properties ಡಯಲಾಗ್ ಬಾಕ್ಸ್ ಅನ್ನು ತೆರೆಯಲು, Properties ಆಯ್ಕೆಯ ಮೇಲೆ ಕ್ಲಿಕ್ ಮಾಡಿ. |
03:06 | ಎಡ ಪ್ಯಾನಲ್ ನಲ್ಲಿರುವ Labels ಆಯ್ಕೆಯನ್ನು ಆಯ್ಕೆ ಮಾಡಿ. |
03:11 | ಮೇಲ್ಭಾಗದಲ್ಲಿರುವ ಡ್ರಾಪ್ ಡೌನ್ ಅನ್ನು ಕ್ಲಿಕ್ ಮಾಡಿ. |
03:15 | ಡ್ರಾಪ್ ಡೌನ್ ನಲ್ಲಿ Show labels for this layer ಆಯ್ಕೆ ಮಾಡಿ. |
03:20 | Label with ಡ್ರಾಪ್ ಡೌನ್ ನಲ್ಲಿ, Air ಅಂಡರ್ಸ್ಕೋರ್ Pollut ಅನ್ನು ಆಯ್ಕೆ ಮಾಡಿ.
ಕೆಳಕ್ಕೆ ಸ್ಕ್ರೋಲ್ ಮಾಡಿ. |
03:28 | ಇಲ್ಲಿ ಲೇಬಲ್ ಸ್ಟೈಲ್ ಅನ್ನು ಬದಲಿಸಲು, ಹಲವಾರು ಆಯ್ಕೆಗಳನ್ನು ನೀವು ನೋಡಬಹುದು. |
03:33 | ಬೇಕಾದ ಸ್ಟೈಲ್ ಅನ್ನು ಆಯ್ಕೆ ಮಾಡಿ ಮತ್ತು OK ಬಟನ್ ಅನ್ನು ಕ್ಲಿಕ್ ಮಾಡಿ. |
03:38 | ಕ್ಯಾನ್ವಾಸ್ ನಲ್ಲಿ, ಲೇಬಲ್ ಗಳೊಂದಿಗೆ ಪಾಯಿಂಟ್ ಗಳು ಕಾಣಿಸುತ್ತವೆ. |
03:43 | Air Stations ಡಾಟ್ shp layer ಗೆ attribute ಅಟ್ರಿಬ್ಯೂಟ್ ಟೇಬಲ್ ಅನ್ನು ತೆರೆಯಿರಿ. |
03:49 | attribute ಟೇಬಲ್ ನಲ್ಲಿ ಪ್ರತಿ ಕೇಂದ್ರ(ಸ್ಟೇಶನ್) ಗೂ Nitrogen Oxides ನ ಮಟ್ಟವನ್ನು ಕೊಡಲಾಗಿದೆ. |
03:57 | ನಾವು ಈಗ Nox attribute ನಿಂದ Air Stations layer ಅನ್ನು ಇಂಟರ್ಪೊಲೇಟ್ ಮಾಡುವೆವು. |
04:03 | ಇಲ್ಲಿ ನಾವು, ಇಂಟರ್ಪೊಲೇಷನ್ ಗೆ IDW method ಅನ್ನು ಬಳಸುವೆವು.
attribute ಟೇಬಲ್ ಅನ್ನು ಕ್ಲೋಸ್ ಮಾಡಿ. |
04:11 | Inverse Distance Weighting ವಿಧಾನವು ಸ್ಯಾಂಪಲ್ ಪಾಯಿಂಟ್ ಗಳಿಗೆ ತೂಕವನ್ನು (ವೇಯ್ಟ್ಸ್) ನೀಡುತ್ತದೆ. |
04:17 | ಇದನ್ನು ಉಷ್ಣತೆ, ಮಳೆ, ಮತ್ತು ಜನಸಂಖ್ಯೆ ಗಳಂತಹ ಡಾಟಾಗಳನ್ನು ಇಂಟರ್ಪೊಲೇಟ್ ಮಾಡಲು ಬಳಸಲಾಗುತ್ತದೆ. |
04:26 | QGIS ಇಂಟರ್ಫೇಸ್ ಗೆ ಹಿಂದಿರುಗಿ. |
04:29 | Raster ಮೆನ್ಯುವಿನ ಮೇಲೆ ಕ್ಲಿಕ್ ಮಾಡಿ. |
04:32 | interpolation ಪ್ಲಗಿನ್ ನ ಮೇಲೆ ಕ್ಲಿಕ್ ಮಾಡಿ. |
04:35 | Interpolation plugin ಡಯಲಾಗ್ ಬಾಕ್ಸ್ ತೆರೆದುಕೊಳ್ಳುತ್ತದೆ. |
04:39 | Input ವಿಭಾಗದಡಿಯಲ್ಲಿ,
Air Stations ಅನ್ನು Vector layers ನ ಆಯ್ಕೆಯಾಗಿ ಆರಿಸಿಕೊಳ್ಳಿ. |
04:46 | ಇಲ್ಲಿ ಡಿಫಾಲ್ಟ್ ಆಗಿ, Air Stations layer ಈಗಾಗಲೇ ಆಯ್ಕೆಯಾಗಿದೆ. |
04:52 | Interpolation attribute ಅನ್ನು NOx ಎಂದು ಆಯ್ಕೆ ಮಾಡಿ. |
04:57 | Add ಬಟನ್ ನ ಮೇಲೆ ಕ್ಲಿಕ್ ಮಾಡಿ. |
05:00 | ಇದು Air Stations ಡಾಟ್ shp layer ಅನ್ನು Nitrogen Oxide ಅಟ್ರಿಬ್ಯೂಟ್ ನೊಂದಿಗೆ ಸೇರಿಸುತ್ತದೆ. |
05:06 | Type ಡ್ರಾಪ್ ಡೌನ್ ನಲ್ಲಿ Points ಎಂದು ಆಯ್ಕೆ ಮಾಡಿ.
ಇಲ್ಲಿ Points ಡಿಫಾಲ್ಟ್ ಆಗಿ ಆಯ್ಕೆಯಾಗಿರುತ್ತದೆ. |
05:14 | Output ವಿಭಾಗಕ್ಕೆ ಹೋಗಿ. |
05:17 | Interpolation method ಅನ್ನು Inverse Distance Weighting ಎಂದು ಆಯ್ಕೆ ಮಾಡಿ.
ಉಳಿದ ಎಲ್ಲ ಸೆಟ್ಟಿಂಗ್ ಗಳನ್ನು default ಆಗಿಯೇ ಬಿಡಿ. |
05:26 | Output file ನ ಮುಂದೆ ಇರುವ ಮೂರು ಚುಕ್ಕಿಗಳಿರುವ ಬಟನ್ ಅನ್ನು ಕ್ಲಿಕ್ ಮಾಡಿ. |
05:30 | ಬೇಕಾದ ಫೋಲ್ಡರ್ ನಲ್ಲಿ ಔಟ್ಪುಟ್ ಅನ್ನು IDW ಅಂಡರ್ಸ್ಕೋರ್ Stations ಎಂದು ಸೇವ್ ಮಾಡಿ.
ನಾನು ಇದನ್ನು Desktop ನಲ್ಲಿ ಸೇವ್ ಮಾಡುವೆನು. |
05:40 | Add result to project ಇದು ಅನ್ಚೆಕ್ ಆಗಿದ್ದರೆ ಚೆಕ್ ಮಾಡಿ. |
05:45 | OK ಬಟನ್ ನ ಮೇಲೆ ಕ್ಲಿಕ್ ಮಾಡಿ. |
05:47 | ಪರದೆಯ ಮೇಲೆ ಮ್ಯಾಪ್ ನ ಜಾಗಗಳು ಕಪ್ಪು ಮತ್ತು ಬಿಳುಪಿನಲ್ಲಿ ಡಿಸ್ಪ್ಲೇ ಆಗುತ್ತವೆ. |
05:53 | ಬಿಳಿ ಬಣ್ಣದಲ್ಲಿರುವ ಜಾಗಗಳು, Nitrogen Oxides ನ ಹೆಚ್ಚಿನ ಮಟ್ಟವನ್ನು ಸೂಚಿಸುತ್ತವೆ. |
05:58 | ಕಪ್ಪು ಬಣ್ಣದಲ್ಲಿರುವ ಜಾಗಗಳು, Nitrogen Oxides ನ ಕಡಿಮೆ ಮಟ್ಟವನ್ನು ಸೂಚಿಸುತ್ತವೆ. |
06:03 | ಇನ್ನು ಹೆಚ್ಚಿನ ಸ್ಪಷ್ಟತೆಗಾಗಿ ನಾವು ಲೇಯರ್ ನ ಸಿಂಬೊಲಜಿಯನ್ನು ಬದಲಿಸುವೆವು. |
06:08 | IDW layer ಗೆ Layer properties ಅನ್ನು ತೆರೆಯಿರಿ. |
06:13 | ಎಡ ಪ್ಯಾನಲ್ ನಿಂದ, Style ಆಯ್ಕೆಯನ್ನು ಕ್ಲಿಕ್ ಮಾಡಿ. |
06:17 | Render type ಅನ್ನು Single band Pseudocolor (ಸಿಂಗಲ್ ಬ್ಯಾಂಡ್ ಸುಡೋಕಲರ್) ಎಂದು ಆಯ್ಕೆ ಮಾಡಿ. |
06:22 | Interpolation ಡ್ರಾಪ್ ಡೌನ್ ನಿಂದ Discrete ಅನ್ನು ಆಯ್ಕೆ ಮಾಡಿ. |
06:26 | color ಡ್ರಾಪ್ ಡೌನ್ ನಿಂದ Spectral ಅನ್ನು ಆಯ್ಕೆ ಮಾಡಿ. Invert ಚೆಕ್ ಬಾಕ್ಸ್ ಅನ್ನು ಚೆಕ್ ಮಾಡಿ. |
06:33 | Classify ಬಟನ್ ನ ಮೇಲೆ ಕ್ಲಿಕ್ ಮಾಡಿ. |
06:36 | ಉಳಿದ ಎಲ್ಲ ಸೆಟಿಂಗ್ ಗಳನ್ನು ಡಿಫಾಲ್ಟ್ ಆಗಿ ಬಿಡಿ. |
06:40 | Apply ಬಟನ್ ಅನ್ನೂ, ನಂತರ OK ಬಟನ್ ಅನ್ನೂ ಕ್ಲಿಕ್ ಮಾಡಿ. |
06:44 | Spectral ಬಣ್ಣಗಳ ಪ್ರದೇಶಗಳನ್ನೊಳಗೊಂಡ ಮ್ಯಾಪ್ ಕ್ಯಾನ್ವಾಸ್ ನ ಮೇಲೆ ಡಿಸ್ಪ್ಲೇ ಆಗುತ್ತದೆ. |
06:50 | ಕೆಂಪು ಬಣ್ಣದ ಪ್ರದೇಶವು Nitrogen Oxides ನ ಅಧಿಕ ಸಾಂಧ್ರತೆಯುಳ್ಳ ಪ್ರದೇಶವನ್ನು ಸೂಚಿಸುತ್ತದೆ. |
06:56 | ನೀಲಿ ಬಣ್ಣದ ಪ್ರದೇಶವು Nitrogen Oxides ನ ಕಡಿಮೆ ಸಾಂಧ್ರತೆಯುಳ್ಳ ಪ್ರದೇಶವನ್ನು ಸೂಚಿಸುತ್ತದೆ. |
07:01 | ಟೂಲ್ ಬಾರ್ ನಿಂದ Save ಟೂಲ್ ಅನ್ನು ಬಳಸಿ, project ಅನ್ನು ಸೇವ್ ಮಾಡಿ. |
07:06 | ಸರಿಯಾದ ಹೆಸರನ್ನು ಕೊಡಿ, ಅನುಕೂಲಕರವಾದ ಜಾಗವನ್ನು ಆರಿಸಿಕೊಳ್ಳಿ. |
07:12 | Save ಬಟನ್ ಅನ್ನು ಕ್ಲಿಕ್ ಮಾಡಿ. |
07:15 | ಈಗ ನಾವು Triangulated Irregular Network interpolation (ಟ್ರೈಆಂಗ್ಯುಲೇಟೆಡ್ ಇರೆಗ್ಯುಲರ್ ನೆಟ್ವರ್ಕ್ ಇಂಟರ್ಪೊಲೇಷನ್) ವಿಧಾನದ ಕುರಿತು ಕಲಿಯೋಣ. |
07:22 | TIN ಇದನ್ನು ತ್ರಿಕೋನಗಳಿಂದಾದ ಮೇಲ್ಮೈಯನ್ನು ರಚಿಸಲು ಬಳಸಲಾಗುತ್ತದೆ. |
07:28 | ಇದು nearest neighbor point (ನಿಯರೆಸ್ಟ್ ನೈಬರ್ ಪಾಯಿಂಟ್) ಮಾಹಿತಿಯ ಆಧಾರದ ಮೇಲಿರುತ್ತದೆ. |
07:33 | TIN ವಿಧಾನವನ್ನು ಸಾಮಾನ್ಯವಾಗಿ ಡಾಟಾ ಎಲಿವೇಷನ್ ಗಾಗಿ ಬಳಸಲಾಗುತ್ತದೆ. |
07:38 | ಒಂದು QGIS ವಿಂಡೋವನ್ನು ತೆರೆಯಿರಿ.
ಟೂಲ್ ಬಾರ್ ನಲ್ಲಿ New ಟೂಲ್ ಅನ್ನು ಕ್ಲಿಕ್ ಮಾಡಿ. |
07:45 | Points ಡಾಟ್ shp layer ಅನ್ನು ಲೋಡ್ ಮಾಡಲು, Add Vector Layer ಅನ್ನು ಬಳಸಿ. |
07:52 | Points layer ನ Attribute table ಅನ್ನು ತೆರೆಯಿರಿ. |
07:56 | ಪ್ರತಿ ಪಾಯಿಂಟ್ ಫೀಚರ್ ನ Elevation ಡಾಟಾವನ್ನು ಗಮನಿಸಿ. |
08:01 | Attribute ಟೇಬಲ್ ಅನ್ನು ಕ್ಲೋಸ್ ಮಾಡಿ. |
08:04 | ಈಗ ಮತ್ತೊಮ್ಮೆ Raster ಮೆನ್ಯುವಿನಿಂದ, Interpolation window ವನ್ನು ತೆರೆಯಿರಿ. |
08:09 | Input ವಿಭಾಗದಲ್ಲಿ, Vector layers ಡ್ರಾಪ್ ಡೌನ್ ನಲ್ಲಿ, Points layer ಅನ್ನು ಆಯ್ಕೆ ಮಾಡಿ.
elevation ಅನ್ನು Interpolation attribute ಎಂದು ಆಯ್ಕೆ ಮಾಡಿ. |
08:20 | Add ಬಟನ್ ಅನ್ನು ಕ್ಲಿಕ್ ಮಾಡಿ.
ಇದು ಇಂಟರ್ಪೊಲೇಟಿಂಗ್ ಗಾಗಿ, elevation attribute ನೊಂದಿಗೆ Points layer ಅನ್ನು ಸೇರಿಸುತ್ತದೆ. |
08:28 | Type ಡ್ರಾಪ್ ಡೌನ್ ನಲ್ಲಿ Points ಎಂದು ತಂತಾನೆ ಆಯ್ಕೆಯಾಗಿರುತ್ತದೆ. ಅದನ್ನು ಹಾಗೆ ಮಾಡಿ. |
08:34 | Output ವಿಭಾಗದಡಿಯಲ್ಲಿ, Interpolation method ಅನ್ನು Triangular interpolation ಎಂದು ಆಯ್ಕೆ ಮಾಡಿ. |
08:41 | output ಫೈಲ್ ಅನ್ನು TIN-Stations ಎಂದು ಸೇವ್ ಮಾಡಿ ಮತ್ತು OK button ಅನ್ನು ಕ್ಲಿಕ್ ಮಾಡಿ. |
08:49 | triangulated interpolation (ಟ್ರೈಆಂಗ್ಯುಲೇಟೆಡ್ ಇಂಟರ್ಪೊಲೇಷನ್) ಅನ್ನು ತೋರಿಸುವ ಮ್ಯಾಪ್ ಕ್ಯಾನ್ವಾಸ್ ನ ಮೇಲೆ ಕಾಣಿಸುತ್ತದೆ. |
08:54 | ಈ ಲೇಯರ್ ಗೆ symbology ಯನ್ನು ಬದಲಿಸಿ. |
08:58 | ನಾವು IDW layer ಗೆ ಅನುಸರಿಸಿದ ಹಂತಗಳನ್ನೇ ಅನುಸರಿಸಿ. |
09:12 | ಈಗ ಮ್ಯಾಪ್ Spectral ಬಣ್ಣಗಳಲ್ಲಿ ಪ್ರದರ್ಶಿತವಾಗಿದೆ.
ಕೆಂಪು ಬಣ್ಣದಲ್ಲಿರುವ ಪ್ರದೇಶಗಳು ಹೆಚ್ಚು ಎಲಿವೇಷನ್ ಅನ್ನು ಪ್ರತಿನಿಧಿಸುತ್ತದೆ. |
09:21 | ನೀಲಿ ಬಣ್ಣದಲ್ಲಿರುವ ಪ್ರದೇಶಗಳು ಕಡಿಮೆ ಎಲಿವೇಷನ್ ಅನ್ನು ಸೂಚಿಸುತ್ತವೆ. |
09:25 | ಟೂಲ್ ಬಾರ್ ನಲ್ಲಿರುವ Save ಟೂಲ್ ಅನ್ನು ಬಳಸಿ ಮ್ಯಾಪ್ ಅನ್ನು ಸೇವ್ ಮಾಡಿ. |
09:30 | ಸಂಕ್ಷಿಪ್ತವಾಗಿ,
ಈ ಟ್ಯುಟೋರಿಯಲ್ ನಲ್ಲಿ ನಾವು, ಇಂಟರ್ಪೊಲೇಷನ್ ವಿಧಾನಗಳು, |
09:37 | Inverse Distance Weighting (IDW) (ಇನ್ವರ್ಸ್ ಡಿಸ್ಟೆನ್ಸ್ ವೇಯ್ಟಿಂಗ್)
Triangulated Irregular Network (TIN) (ಟ್ರೈಆಂಗ್ಯುಲೇಟೆಡ್ ಇರೆಗ್ಯುಲರ್ ನೆಟ್ವರ್ಕ್) – ಇವುಗಳ ಕುರಿತು ಕಲಿತಿದ್ದೇವೆ. |
09:43 | ನಿಮಗಾಗಿ ಅಸೈನ್ಮೆಂಟ್,
SO2 attribute ನೊಂದಿಗೆ, Air Stations layer ಗೆ IDW interpolated ಮ್ಯಾಪ್ ಅನ್ನು ರಚಿಸಿ. |
09:52 | ನಿಮ್ಮ ಮ್ಯಾಪ್ ಈ ರೀತಿಯಾಗಿ ಕಾಣಬೇಕು |
09:56 | ಕೆಳಗಿನ ಲಿಂಕ್ನಲ್ಲಿರುವ ವೀಡಿಯೊ ಸ್ಪೋಕನ್ ಟ್ಯುಟೋರಿಯಲ್ ಯೋಜನೆಯನ್ನು ಕುರಿತು ವಿವರಿಸುತ್ತದೆ.
ದಯವಿಟ್ಟು ಅದನ್ನು ಡೌನ್ಲೋಡ್ ಮಾಡಿ ಮತ್ತು ವೀಕ್ಷಿಸಿ. |
10:03 | ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ತಂಡ, ಕಾರ್ಯಾಗಾರಗಳನ್ನು ನಡೆಸುತ್ತದೆ ಮತ್ತು ನಮ್ಮ ಆನ್ಲೈನ್ ಪರೀಕ್ಷೆಗಳಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರಗಳನ್ನು ನೀಡುತ್ತದೆ.
ವಿವರಗಳಿಗಾಗಿ, ದಯವಿಟ್ಟು ನಮಗೆ ಬರೆಯಿರಿ. |
10:13 | ನೀವು ಪ್ರಶ್ನೆಯನ್ನು ಹೊಂದಿರುವ ನಿಮಿಷ ಮತ್ತು ಸೆಕೆಂಡ್ ಅನ್ನು ಆರಿಸಿ.
ನಿಮ್ಮ ಪ್ರಶ್ನೆಯನ್ನು ಸಂಕ್ಷಿಪ್ತವಾಗಿ ವಿವರಿಸಿ. |
10:17 |
ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ಗೆ NMEICT, MHRD, ಭಾರತ ಸರ್ಕಾರ ಧನಸಹಾಯ ನೀಡುತ್ತದೆ. ಅನುವಾದ ಮತ್ತು ಧ್ವನಿ ಶ್ರೀ ನವೀನ ಭಟ್ಟ ಉಪ್ಪಿನಪಟ್ಟಣ. ಧನ್ಯವಾದಗಳು. |