QGIS/C4/Create-Contour-Lines/Kannada
From Script | Spoken-Tutorial
Revision as of 19:21, 28 December 2020 by NaveenBhat (Talk | contribs)
Time | Narration |
00:01 | QGIS ನಲ್ಲಿ Create Contour Lines ಕುರಿತಾದ ಸ್ಪೋಕನ್ ಟ್ಯುಟೋರಿಯಲ್ ಗೆ ಸ್ವಾಗತ. |
00:07 | ಈ ಟ್ಯುಟೋರಿಯಲ್ ನಲ್ಲಿ ನಾವು, |
00:11 | Clipper ಟೂಲ್ ಅನ್ನು ಬಳಸಿ, DEM ನಲ್ಲಿ ಸ್ಥಳವನ್ನು ಕ್ಲಿಪ್ ಮಾಡುವುದು |
00:16 | DEM ಗೆ contour ಕೊಂಟೋರ್ ಲೈನ್ ಗಳನ್ನು ತೋರಿಸುವುದು, |
00:20 | contour ಮ್ಯಾಪ್ ನಲ್ಲಿ ಗರಿಷ್ಟ ಎಲಿವೇಟ್ ಆದ ಸ್ಥಳವನ್ನು ಗುರುತು ಹಾಕುವುದು – ಇವುಗಳ ಕುರಿತು ಕಲಿಯುವೆವು. |
00:26 | ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು ನಾನು,
Ubuntu Linux ಒ.ಎಸ್ 16.04 ಆವೃತ್ತಿ |
00:32 | QGIS ನ 2.18 ಆವೃತ್ತಿಯನ್ನು |
00:36 | ಮತ್ತು ಕಾರ್ಯನಿರ್ವಹಿಸುತ್ತಿರುವ ಅಂತರ್ಜಾಲ ಸಂಪರ್ಕಗಳನ್ನು ಬಳಸಿದ್ದೇನೆ. |
00:40 | ಈ ಟ್ಯುಟೊರಿಯಲ್ ಅನ್ನು ಕಲಿಯಲು ನೀವು QGIS ಇಂಟರ್ಫೇಸ್ ನ ಕುರಿತು ಕಲಿತಿರಬೇಕು. |
00:46 | ಈ ಸರಣಿಯ ಹಿಂದಿನ ಟ್ಯುಟೋರಿಯಲ್ ಗಳನ್ನು ನೋಡಲು, ಈ ಜಾಲತಾಣವನ್ನು ಭೇಟಿ ಮಾಡಿ. |
00:53 | ಈ ಟ್ಯುಟೋರಿಯಲ್ ಅನ್ನು ಅಭ್ಯಾಸ ಮಾಡಲು ಅಗತ್ಯವಿರುವ DEM ಡಾಟಾವು Code files ಲಿಂಕ್ ನಲ್ಲಿ ಲಭ್ಯವಿದೆ. |
01:00 | ದಯವಿಟ್ಟು ಅದನ್ನು ಡೌನ್ಲೋಡ್ ಮಾಡಿ ಮತ್ತು ಫೋಲ್ಡರ್ ನ ಕಂಟೆಂಟ್ ಗಳನ್ನು ಎಕ್ಸ್ಟ್ರ್ಯಾಕ್ಟ್ ಮಾಡಿಕೊಳ್ಳಿ. |
01:05 | ನಾನು ಈ ಫೋಲ್ಡರ್ ಅನ್ನು Desktop ನಲ್ಲಿ ಸೇವ್ ಮಾಡಿದ್ದೇನೆ. |
01:09 | ಫೋಲ್ಡರ್ ನ ಮೇಲೆ ಡಬಲ್ ಕ್ಲಿಕ್ ಮಾಡಿ ಅದನ್ನು ತೆರೆಯಿರಿ. |
01:13 | srtm.tif ಫೈಲ್ ನ ಮೇಲೆ ರೈಟ್ ಕ್ಲಿಕ್ ಮಾಡಿ, Open with QGIS Desktop ಅನ್ನು ಆಯ್ಕೆ ಮಾಡಿ. |
01:22 | ಪರದೆಯ ಮೇಲೆ ಮ್ಯಾಪ್ ತೆರೆದುಕೊಳ್ಳುತ್ತದೆ. |
01:25 | ನೀವು tif ಫೈಲ್ ಅನ್ನು Layer ಮೆನ್ಯುವಿನಲ್ಲಿ, Add Raster Layer ಆಯ್ಕೆಯನ್ನು ಬಳಸಿ ಕೂಡ ತೆರೆಯಬಹುದು. |
01:33 | ಕ್ಯಾನ್ವಾಸ್ ನಲ್ಲಿ ನೀವು, ಟೆರೇನ್ ನ DEM ಅನ್ನು ನೋಡುವಿರಿ. |
01:38 | Raster menu ವಿನಲ್ಲಿರುವ Contour tool ಅನ್ನು ಬಳಸಿ ಈ DEM ಗೆ Contour lines ಗಳನ್ನು ರಚಿಸ ಬಹುದು. |
01:46 | Contour linesಗಳ ಕುರಿತು, |
01:49 | ಇದೊಂದು, ಸಮುದ್ರ ಮಟ್ಟಕ್ಕಿಂತ ಮೇಲೆ ಅಥವಾ ಕೆಳಗೆ ಇರುವ ಸಮಾನ ಎತ್ತರದ ಬಿಂದುಗಳನ್ನು ಸೇರಿಸುವ ರೇಖೆಯಾಗಿದೆ. |
01:57 | ಕೊಂಟೋರ್ ಲೈನ್ ಗಳು, ಮ್ಯಾಪ್ ನಲ್ಲಿ ಗರಿಷ್ಟ ಮತ್ತು ಕನಿಷ್ಟ ಎಲಿವೇಟ್ ಆಗಿರುವ ಜಾಗಗಳನ್ನು ಗುರುತಿಸಲು ಸಹಾಯ ಮಾಡುತ್ತವೆ. |
02:04 | ನಾವು ಈ ಮ್ಯಾಪ್ ನಲ್ಲಿ, ಆಯ್ಕೆ ಮಾಡಿಕೊಂಡ ಸ್ಥಳಗಳಿಗೆ ಕೊಂಟೋರ್ ಲೈನ್ ಗಳನ್ನು ಎಳೆಯಬಹುದು. |
02:10 | ಜಾಗಗಳನ್ನು ಕ್ಲಿಪ್ ಮಾಡಲು ನಾವು Raster ಮೆನ್ಯುವಿನಲ್ಲಿರುವ Clipper ಟೂಲ್ ಅನ್ನು ಬಳಸಬಹುದು. |
02:16 | Raster ಮೆನ್ಯುವಿನ ಮೇಲೆ ಕ್ಲಿಕ್ ಮಾಡಿ.
ಡ್ರಾಪ್ ಡೌನ್ ನಲ್ಲಿ Extraction ಅನ್ನು ಕ್ಲಿಕ್ ಮಾಡಿ. |
02:23 | Clipper ನ ಮೇಲೆ ಕ್ಲಿಕ್ ಮಾಡಿ. |
02:26 | Clipper ಡಯಲಾಗ್ ಬಾಕ್ಸ್ ತೆರೆದುಕೊಳ್ಳುತ್ತದೆ. |
02:29 | Input file ಅನ್ನು DEM ಲೇಯರ್ ಎಂದು ಆಯ್ಕೆ ಮಾಡಿ. |
02:33 | ಇಲ್ಲಿ ಡಿಫಾಲ್ಟ್ ಆಗಿ, ಈ ಲೇಯರ್ ಈಗಾಗಲೇ ಆಯ್ಕೆಯಾಗಿದೆ. |
02:38 | Output file ಗೆ Select ಬಟನ್ ಅನ್ನು ಕ್ಲಿಕ್ ಮಾಡಿ. |
02:42 | Select the raster file to save the results to (ಸೆಲೆಕ್ಟ್ ದ ರಾಸ್ಟರ್ ಫೈಲ್ ಟು ಸೇವ್ ದ ರಿಸಲ್ಟ್ಸ್ ಟು)ಡಯಲಾಗ್ ಬಾಕ್ಸ್ ತೆರೆದುಕೊಳ್ಳುತ್ತದೆ. |
02:48 | ಡಯಲಾಗ್ ಬಾಕ್ಸ್ ನಲ್ಲಿ, ಫೈಲ್ ಅನ್ನು Clip-DEM.tif ಎಂದು ಹೆಸರಿಸಿ. |
02:56 | ಕೆಳಗಡೆ, ಬಲ ಮೂಲೆಯಲ್ಲಿರುವ Save ಬಟನ್ ಅನ್ನು ಕ್ಲಿಕ್ ಮಾಡಿ. |
03:01 | Clipper ಡಯಲಾಗ್ ಬಾಕ್ಸ್ ನಲ್ಲಿ, No data value ಚೆಕ್ ಬಾಕ್ಸ್ ಅನ್ನು ಚೆಕ್ ಮಾಡಿ.
ವ್ಯಾಲ್ಯುವು ಸೊನ್ನೆಯಾಗಿರಲಿ. |
03:10 | Clipping mode ತಲೆಬರಹದಡಿಯಲ್ಲಿ, Extent ರೇಡಿಯೋ ಬಟನ್ ಅನ್ನು ಕ್ಲಿಕ್ ಮಾಡಿ. |
03:16 | QGIS ವಿಂಡೋ ಗೆ ಹೋಗಿ. |
03:19 | ಈಗ ಕರ್ಸರ್ plus(+) ಚಿಹ್ನೆಯಾಗಿ ಕಾಣಿಸುವುದು. |
03:23 | ನಿಮ್ಮ ಎಡ ಮೌಸ್ ಬಟನ್ ಅನ್ನು ಹಿಡಿದು, ನಿಮ್ಮ ಆಯ್ಕೆಯ ಜಾಗವನ್ನು ಆವೃತವಾಗುವಂತೆ ಆಯತಾಕೃತಿಯನ್ನು ಬರೆಯಿರಿ. |
03:30 | ಈಗ ನಾನು ನಿದರ್ಶನಕ್ಕಾಗಿ, ಮುಂಬೈ ಭಾಗವನ್ನು ಆಯ್ಕೆ ಮಾಡುವೆನು. |
03:35 | Clipper ಡಯಲಾಗ್ ಬಾಕ್ಸ್ ನಲ್ಲಿ, Load into canvas when finished ಚೆಕ್ ಬಾಕ್ಸ್ ಅನ್ನು ಚೆಕ್ ಮಾಡಿ. |
03:42 | ಉಳಿದ ಡಿಫಾಲ್ಟ್ ಸೆಟ್ಟಿಂಗ್ ಗಳನ್ನು ಹಾಗೆಯೇ ಇಡಿ. |
03:46 | ಕೆಳಗಡೆ, ಬಲ ಮೂಲೆಯಲ್ಲಿರುವ OK ಬಟನ್ ಅನ್ನು ಕ್ಲಿಕ್ ಮಾಡಿ. |
03:51 | ಒಮ್ಮೆ ಈ ಕ್ರಿಯೆಯು (ಪ್ರೊಸೆಸ್) ಪೂರ್ಣಗೊಂಡರೆ, OK ಬಟನ್ ಅನ್ನು ಒತ್ತಿ, ಪಾಪ್ ಅಪ್ ವಿಂಡೋ ಅನ್ನು ಕ್ಲೋಸ್ ಮಾಡಿ. |
03:58 | Clipper ಡಯಲಾಗ್ ಬಾಕ್ಸ್ ನಲ್ಲಿ, ಕೆಳಗಡೆ ಬಲ ಮೂಲೆಯಲ್ಲಿರುವ Close ಬಟನ್ ಅನ್ನು ಕ್ಲಿಕ್ ಮಾಡಿ. |
04:05 | ಕ್ಯಾನ್ವಾಸ್ ನಲ್ಲಿ ಹೊಸ ಲೇಯರ್ ಲೋಡ್ ಆಗಿರುವುದನ್ನು ನೀವು ನೋಡಬಹುದು. |
04:10 | Clip-DEM ಲೇಯರ್ ಅನ್ನು ಹೊರತುಪಡಿಸಿ, Layers Panel ನಲ್ಲಿರುವ ಎಲ್ಲ ಲೇಯರ್ ಗಳನ್ನು ನಿಷ್ಕ್ರಿಯಗೊಳಿಸಿ. |
04:16 | ಈಗ ನಾವು, Contour ಟೂಲ್ ಅನ್ನು ಬಳಸಿ, ಈ ಮ್ಯಾಪ್ ಗೆ ಕೊಂಟೋರ್ ಲೈನ್ ಗಳನ್ನು ರಚಿಸಲು ಸಿದ್ಧರಾಗಿದ್ದೇವೆ. |
04:23 | Raster ಮೆನ್ಯುವನ್ನು ಕ್ಲಿಕ್ ಮಾಡಿ. |
04:26 | Extraction ಗೆ ಸ್ಕ್ರೋಲ್ ಮಾಡಿ. |
04:29 | ಸಬ್ ಮೆನ್ಯುವಿನಲ್ಲಿ Contour ಅನ್ನು ಕ್ಲಿಕ್ ಮಾಡಿ. |
04:34 | Contour ಡಯಲಾಗ್ ಬಾಕ್ಸ್ ತೆರೆದುಕೊಳ್ಳುತ್ತದೆ.
Input file ಡ್ರಾಪ್ ಡೌನ್ ನಲ್ಲಿ, Clip-DEM ಲೇಯರ್ ಅನ್ನು ಆಯ್ಕೆ ಮಾಡಿ. |
04:43 | Output file ಗೆ Select ಬಟನ್ ಅನ್ನು ಕ್ಲಿಕ್ ಮಾಡಿ.
ಡಯಲಾಗ್ ಬಾಕ್ಸ್ ತೆರೆದುಕೊಳ್ಳುತ್ತದೆ. |
04:51 | ಡಯಲಾಗ್ ಬಾಕ್ಸ್ ನಲ್ಲಿ, ಫೈಲ್ ಅನ್ನು Contour.shp ಎಂದು ಹೆಸರಿಸಿ.
Save ಬಟನ್ ಅನ್ನು ಕ್ಲಿಕ್ ಮಾಡಿ. |
05:00 | Contour ಡಯಲಾಗ್ ಬಾಕ್ಸ್ ನಲ್ಲಿ, Interval between contour lines (ಇಂಟರ್ವಲ್ ಬಿಟ್ವೀನ್ ಕೊಂಟೋರ್ ಲೈನ್ಸ್) ಅನ್ನು 50 ಎಂದು ಆಯ್ಕೆ ಮಾಡಿ. |
05:07 | ಇದು 50 ಮೀಟರ್ ಗಳ ಅಂತರದಲ್ಲಿ ಕೊಂಟೋರ್ ಲೈನ್ ಗಳನ್ನು ರಚನೆ ಮಾಡುತ್ತದೆ. |
05:12 | Attribute name ನ ಮುಂದಿರುವ ಚೆಕ್ ಬಾಕ್ಸ್ ಅನ್ನು ಕ್ಲಿಕ್ ಮಾಡಿ. |
05:17 | ಪ್ರತಿ ಕೊಂಟೋರ್ ಲೈನ್ ಗೂ ಎಲಿವೇಷನ್ ವ್ಯಾಲ್ಯು E L E V ಎಂದು ರೆಕಾರ್ಡ್ ಆಗುತ್ತದೆ. |
05:24 | Load into canvas when finished ಮುಂದಿರುವ ಚೆಕ್ ಬಾಕ್ಸ್ ಅನ್ನು ಚೆಕ್ ಮಾಡಿ. |
05:29 | ಕೊಂಟೋರ್ ಡಯಲಾಗ್ ಬಾಕ್ಸ್ ನಲ್ಲಿ ಕೆಳ ಬಲ ಮೂಲೆಯಲ್ಲಿರುವ OK ಬಟನ್ ಅನ್ನು ಕ್ಲಿಕ್ ಮಾಡಿ. |
05:36 | ಒಮ್ಮೆ ಪ್ರೊಸೆಸ್ ಪೂರ್ಣಗೊಂಡರೆ, OK ಬಟನ್ ಗಳನ್ನು ಕ್ಲಿಕ್ ಮಾಡಿ, ಪಾಪ್-ಅಪ್ ವಿಂಡೋಗಳನ್ನು ಕ್ಲೋಸ್ ಮಾಡಿ. |
05:43 | Contour ಡಯಲಾಗ್ ಬಾಕ್ಸ್ ಅನ್ನು ಕ್ಲೋಸ್ ಮಾಡಲು, Close ಬಟನ್ ಅನ್ನು ಕ್ಲಿಕ್ ಮಾಡಿ. |
05:48 | Layers panel ಗೆ Contour ಎನ್ನುವ ಹೊಸ ಲೇಯರ್ ಸೇರ್ಪಡೆಯಾಗಿದೆ. |
05:53 | ಈಗ ಕೊಂಟೋರ್ ಲೈನ್ ಗಳ ಬಣ್ಣವನ್ನು ಬದಲಾಯಿಸೋಣ. |
05:57 | Contour ಲೇಯರ್ ಅನ್ನು ರೈಟ್ ಕ್ಲಿಕ್ ಮಾಡಿ.
Styles ಅನ್ನು ಆಯ್ಕೆ ಮಾಡಿ. |
06:03 | ಬಣ್ಣವನ್ನು ಬದಲಿಸಲು ತ್ರಿಕೋನವನ್ನು ತಿರುಗಿಸಿ. |
06:07 | ನಿಮ್ಮ ಇಷ್ಟದ ಬಣ್ಣವನ್ನು ಆಯ್ಕೆಮಾಡಿ. |
06:11 | Layers panel ನಲ್ಲಿ ಉಳಿದ ಚೆಕ್ ಬಾಕ್ಸ್ ಗಳನ್ನು ಅನ್ಚೆಕ್ ಮಾಡುವ ಮೂಲಕ ಉಳಿದ ಲೇಯರ್ ಗಳನ್ನು ಅಡಗಿಸಿ. |
06:17 | Contour ನ Attribute table ಅನ್ನು ತೆರೆಯಿರಿ. |
06:21 | ಅಟ್ರಿಬ್ಯೂಟ್ ಟೇಬಲ್ ನಲ್ಲಿ, ಪ್ರತಿ ಲೈನ್ ಫೀಚರ್ E L E V ಎಂಬ ಅಟ್ರಿಬ್ಯೂಟ್ ಅನ್ನು ಹೊಂದಿರುತ್ತದೆ. |
06:28 | ಈ ಕಾಲಮ್ ನಲ್ಲಿ ಕೊಟ್ಟಿರುವ ವ್ಯಾಲ್ಯುವು, ಆ ಕೊಂಟೋರ್ ಲೈನ್ ನ ಮೀಟರ್ ಗಳಲ್ಲಿ ಎತ್ತರವಾಗಿರುತ್ತದೆ. |
06:35 | ವ್ಯಾಲ್ಯುಗಳನ್ನು ಇಳಿಕೆ ಕ್ರಮದಲ್ಲಿ ಜೋಡಿಸಲು, ಕಾಲಮ್ ಹೆಡರ್ ನ ಮೇಲೆ ಕೆಲವು ಬಾರಿ ಕ್ಲಿಕ್ ಮಾಡಿ. |
06:42 | ಮೊದಲ ರೋ ನಮ್ಮ ಡಾಟಾದಲ್ಲಿ ಗರಿಷ್ಟ ಎಲಿವೇಷನ್ ಅನ್ನು ಸೂಚಿಸುತ್ತದೆ. |
06:47 | ಟೇಬಲ್ ನ ಕೆಳಕ್ಕೆ ಸ್ಕ್ರೋಲ್ ಮಾಡಿ, ಕೊನೆಯ ರೋ ಕನಿಷ್ಟ ಎಲಿವೇಷನ್ ಅನ್ನು ಸೂಚಿಸುತ್ತದೆ. |
06:54 | ಮೇಲೆ ಸ್ಕ್ರೋಲ್ ಮಾಡಿ ಮತ್ತು ಮೊದಲ ರೋ ದ ಮೇಲೆ ಕ್ಲಿಕ್ ಮಾಡಿ ಅದನ್ನು ಆಯ್ಕೆ ಮಾಡಿ. |
06:59 | ಟೂಲ್ ಬಾರ್ ನಲ್ಲಿ Zoom map to the selected rows (ಝೂಮ್ ಮ್ಯಾಪ್ ಟು ದ ಸೆಲೆಕ್ಟೆಡ್ ರೋಸ್) ಬಟನ್ ಅನ್ನು ಕ್ಲಿಕ್ ಮಾಡಿ. |
07:06 | QGIS ವಿಂಡೋಗೆ ಹೋಗಿ. |
07:09 | ನೀವು ಆಯ್ಕೆ ಮಾಡಿದ ಕೊಂಟೋರ್ ಲೈನ್ ಹಳದಿಬಣ್ಣದಲ್ಲಿ ಎದ್ದು ಕಾಣುತ್ತಿರುವುದನ್ನು ನೋಡಬಹುದು. |
07:14 | ಇದು ಈ data-set ಗರಿಷ್ಟ ಎಲಿವೇಷನ್ ಹೊಂದಿರುವ ಸ್ಥಳವಾಗಿದೆ. |
07:20 | ಈ ಪ್ರೊಜೆಕ್ಟ್ ಅನ್ನು ಸೇವ್ ಮಾಡಿ. |
07:23 | ಟೂಲ್ ಬಾರ್ ನಲ್ಲಿ “Save As” ಟೂಲ್ ಅನ್ನು ಕ್ಲಿಕ್ ಮಾಡಿ. |
07:27 | ಸರಿಹೊಂದುವ ಹೆಸರನ್ನು ಕೊಡಿ. |
07:30 | ಇದನ್ನು ನಿಮಗೆ ಬೇಕಾದಲ್ಲಿ ಸೇವ್ ಮಾಡಿಕೊಳ್ಳಿ.
Save ಬಟನ್ ಅನ್ನು ಒತ್ತಿ. |
07:37 | ಸಂಕ್ಷಿಪ್ತವಾಗಿ, |
07:39 | ಈ ಟ್ಯುಟೋರಿಯಲ್ ನಲ್ಲಿ ನಾವು, |
07:42 | Clipper ಟೂಲ್ ಅನ್ನು ಬಳಸಿ, DEM ನಲ್ಲಿ ಸ್ಥಳವನ್ನು ಕ್ಲಿಪ್ ಮಾಡುವುದು |
07:47 | DEM ಗೆ contour ಕೊಂಟೋರ್ ಲೈನ್ ಗಳನ್ನು ತೋರಿಸುವುದು, |
07:51 | contour ಮ್ಯಾಪ್ ನಲ್ಲಿ ಗರಿಷ್ಟ ಎಲಿವೇಟ್ ಆದ ಸ್ಥಳವನ್ನು ಗುರುತು ಹಾಕುವುದು – ಇವುಗಳ ಕುರಿತು ಕಲಿತಿದ್ದೇವೆ. |
07:56 | ಇಲ್ಲಿ ಒಂದು ಅಸೈನ್ಮೆಂಟ್ ಇದೆ. |
07:59 | DEM ನ ಮೇಲೆ ನಿಮ್ಮ ಆಯ್ಕೆಯ ಸ್ಥಳಕ್ಕೆ, contour (ಕೊಂಟೋರ್) ಲೈನ್ ಗಳನ್ನು ರಚಿಸಿ. ಆ ಸ್ಥಳಕ್ಕೆ ಗರಿಷ್ಟ ಎಲಿವೇಷನ್ ಅನ್ನು ಕಂಡುಹಿಡಿಯಿರಿ. |
08:09 | ಕೆಳಗಿನ ಲಿಂಕ್ನಲ್ಲಿರುವ ವೀಡಿಯೊ ಸ್ಪೋಕನ್ ಟ್ಯುಟೋರಿಯಲ್ ಯೋಜನೆಯನ್ನು ಕುರಿತು ವಿವರಿಸುತ್ತದೆ.
ದಯವಿಟ್ಟು ಅದನ್ನು ಡೌನ್ಲೋಡ್ ಮಾಡಿ ಮತ್ತು ವೀಕ್ಷಿಸಿ. |
08:16 | ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ತಂಡ, ಕಾರ್ಯಾಗಾರಗಳನ್ನು ನಡೆಸುತ್ತದೆ ಮತ್ತು ನಮ್ಮ ಆನ್ಲೈನ್ ಪರೀಕ್ಷೆಗಳಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರಗಳನ್ನು ನೀಡುತ್ತದೆ.
ವಿವರಗಳಿಗಾಗಿ, ದಯವಿಟ್ಟು ನಮಗೆ ಬರೆಯಿರಿ. |
08:26 | ನೀವು ಪ್ರಶ್ನೆಯನ್ನು ಹೊಂದಿರುವ ನಿಮಿಷ ಮತ್ತು ಸೆಕೆಂಡ್ ಅನ್ನು ಆರಿಸಿ.
ನಿಮ್ಮ ಪ್ರಶ್ನೆಯನ್ನು ಸಂಕ್ಷಿಪ್ತವಾಗಿ ವಿವರಿಸಿ. |
08:30 | ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ಗೆ NMEICT, MHRD, ಭಾರತ ಸರ್ಕಾರ ಧನಸಹಾಯ ನೀಡುತ್ತದೆ. |
08:38 | ಅನುವಾದ ಮತ್ತು ಧ್ವನಿ ಶ್ರೀ ನವೀನ ಭಟ್ಟ ಉಪ್ಪಿನಪಟ್ಟಣ. ಧನ್ಯವಾದಗಳು. |