QGIS/C3/Table-Joins-and-Spatial-Joins/Kannada
Time | Narration |
00:01 | QGIS ನಲ್ಲಿ Table Joins ಮತ್ತು Spatial Joins ಕುರಿತ ಈ ಟ್ಯುಟೋರಿಯಲ್ ಗೆ ಸುಸ್ವಾಗತ. |
00:08 | ಈ ಟ್ಯುಟೋರಿಯಲ್ ನಲ್ಲಿ, ಎರಡು ಡೇಟಾ-ಸೆಟ್ ಗಳನ್ನು, ಸಾಮಾನ್ಯ ಕ್ಷೇತ್ರ ಮತ್ತು ಅದೇ spatial data ಗಳನ್ನು ಹೊಂದಿರುವ attribute tables ಗೆ ಸೇರಿಸಲು ನಾವು ಕಲಿಯುತ್ತೇವೆ. |
00:19 | ಇಲ್ಲಿ ನಾನು,
Ubuntu Linux OS ವರ್ಶನ್ 16.04 |
00:26 | QGIS ವರ್ಶನ್ 2.18 ಗಳನ್ನು ಉಪಯೋಗಿಸುತ್ತಿದ್ದೇನೆ. |
00:30 | ಈ ಟ್ಯುಟೋರಿಯಲ್ ಕಲಿಯುವವರಿಗೆ QGIS ಇಂಟರ್ಫೇಸ್ ಪರಿಚಯವಿರಬೇಕು. |
00:36 | ಪೂರ್ವಾಪೇಕ್ಷಿತ QGIS ಟ್ಯುಟೋರಿಯಲ್ಗಳಿಗಾಗಿ, ದಯವಿಟ್ಟು ಈ ವೆಬ್ಸೈಟ್ಗೆ ಭೇಟಿ ನೀಡಿ. |
00:42 | ಪ್ಲೇಯರ್ ಕೆಳಗೆ ಇರುವ Code files ಲಿಂಕ್ನಲ್ಲಿ ನೀಡಲಾದ ಫೋಲ್ಡರ್ ಡೌನ್ಲೋಡ್ ಮಾಡಿ. |
00:48 | ಡೌನ್ಲೋಡ್ ಮಾಡಿದ ಜಿಪ್ ಫೈಲ್ನ ಕಂಟೆಂಟ್ಗಳನ್ನು ಹೊರತೆಗೆಯಿರಿ ಮತ್ತು ಅದನ್ನು ಫೋಲ್ಡರ್ನಲ್ಲಿ ಸೇವ್ ಮಾಡಿ. |
00:54 | ನಾನು ಈಗಾಗಲೇ Code files ಗಳನ್ನು ಡೌನ್ಲೋಡ್ ಮಾಡಿದ್ದೇನೆ, ಎಕ್ಸ್ಟ್ಯಾಕ್ಟ್ ಮಾಡಿ Desktop ನಲ್ಲಿ ಸೇವ್ ಮಾಡಿದ್ದೇನೆ. |
01:01 | ಫೋಲ್ಡರ್ ತೆರೆಯಲು ಡಬಲ್ ಕ್ಲಿಕ್ ಮಾಡಿ. |
01:04 | ಎಕ್ಸ್ಟ್ರ್ಯಾಕ್ಟ್ ಮಾಡಿದ ಫೋಲ್ಡರ್ ನಲ್ಲಿ Stations.shp ಅನ್ನು ಲೊಕೇಟ್ ಮಾಡಿ. |
01:09 | Stations.shp ಫೈಲ್ ಭಾರತದಾದ್ಯಂತ ಹವಾಮಾನ ಕೇಂದ್ರಗಳು ಅಥವಾ ವಾಯು ಕೇಂದ್ರಗಳ ಸ್ಥಳಗಳನ್ನು ತೋರಿಸುತ್ತದೆ. |
01:17 | ಈ ಟ್ಯುಟೋರಿಯಲ್ ಅನ್ನು ಅಭ್ಯಾಸ ಮಾಡಲು ಅಗತ್ಯವಿರುವ ಇತರ ಫೈಲ್ಗಳನ್ನು ಸಹ ನಾವು ಇಲ್ಲಿ ಹೊಂದಿದ್ದೇವೆ. |
01:23 | attribute tables ಗಳನ್ನು ಸೇರಿಸುವುದು ಎಂದರೆ ಎರಡು ಡೇಟಾ-ಸೆಟ್ಗಳ ನಡುವೆ ಎಟ್ರಿಬ್ಯೂಟ್ ಡೇಟಾ ಅನ್ನು ಸಂಯೋಜಿಸುವುದು. |
01:30 | ಟೇಬಲ್ ಸೇರಿಸಲು ಎರಡು ಮಾರ್ಗಗಳಿವೆ,
Table Join ಅಂದರೆ, ಒಂದು ಅಥವಾ ಹೆಚ್ಚು ಸಾಮಾನ್ಯ ಕಾಲಮ್ಡೆಟಾ ಹೊಂದಿರುವ ಟೆಬಲ್ ಗಳನ್ನು ಸೇರಿಸುವುದು. |
01:40 | Spatial Join ಅಂದರೆ ಒಂದೇ spatial data ಹೊಂದಿರುವ ಟೆಬಲ್ಸ್ ಗಳನ್ನು ಸೇರಿಸುವುದು. |
01:46 | ಈ ಟ್ಯುಟೋರಿಯಲ್ ನಲ್ಲಿ ನಾವು ಎರಡೂ ವಿಧಾನಗಳನ್ನು ಪ್ರದರ್ಶಿಸುತ್ತೇವೆ. |
01:50 | ಹೆಚ್ಚಿನ ಮಾಹಿತಿಗಾಗಿ ದಯವಿಟ್ಟು ಈ ವೆಬ್ಸೈಟ್ಗೆ ಭೇಟಿ ನೀಡಿ. |
01:54 | QGIS ಇಂಟರ್ಫೇಸ್ ಅನ್ನು ತೆರೆಯಿರಿ. |
01:57 | ಮೊದಲಿಗೆ, ನಾವು ಸಾಮಾನ್ಯ ಕ್ಷೇತ್ರವನ್ನು ಹೊಂದಿರುವ attribute tables ಗಳನ್ನು ಸೇರಿಸುತ್ತೇವೆ. |
02:02 | ಎಡಭಾಗದಲ್ಲಿರುವ ಟೂಲ್ಬಾರ್ನಿಂದ Add Vector Layer ಟೂಲ್ ಕ್ಲಿಕ್ ಮಾಡಿ. |
02:07 | Add Vector Layer ಡೈಲಾಗ್ ಬೊಕ್ಸ್ ತೆರೆಯುತ್ತದೆ. |
02:10 | Dataset ಫೀಲ್ಡ್ ನ ಪಕ್ಕದಲ್ಲಿರುವ Browse ಬಟನ್ ಕ್ಲಿಕ್ ಮಾಡಿ.
ಒಂದು ಡೈಲಾಗ್ ಬೊಕ್ಸ್ ತೆರೆಯುತ್ತದೆ. |
02:17 | Desktop ನಲ್ಲಿರುವ Code files ಫೋಲ್ಡರ್ನಿಂದ Stations.shp ಗೆ ನೆವಿಗೇಟ್ ಮಾಡಿ. |
02:22 | Open ಬಟನ್ ಕ್ಲಿಕ್ ಮಾಡಿ. |
02:25 | Add vector layer ಡೈಲಾಗ್ ಬೊಕ್ಸ್ ನಲ್ಲಿ, Open ಬಟನ್ ಕ್ಲಿಕ್ ಮಾಡಿ. |
02:30 | Stations.shp layer ಅನ್ನು ಲೇಯರ್ಸ್ ಪ್ಯಾನೆಲ್ನಲ್ಲಿ ಸೇರಿಸಲಾಗುತ್ತದೆ. |
02:35 | ಅನುಗುಣವಾದ ನಕ್ಷೆ ಕ್ಯಾನ್ವಾಸ್ನಲ್ಲಿ ಗೋಚರಿಸುತ್ತದೆ. |
02:39 | ಈ ನಕ್ಷೆಯು ಭಾರತದ ವಿವಿಧ ರಾಜ್ಯಗಳಲ್ಲಿರುವ ಹವಾಮಾನ ಕೇಂದ್ರಗಳಿಗೆ ಅನುಗುಣವಾಗಿ ಪಾಯಿಂಟ್ ವೈಶಿಷ್ಟ್ಯಗಳನ್ನು ತೋರಿಸುತ್ತದೆ. |
02:47 | ಈ ಲೇಯರ್ ಗಾಗಿ attribute table ಅನ್ನು ತೆರೆಯೋಣ. |
02:51 | ಲೇಯರ್ಸ್ ಪ್ಯಾನೆಲ್ ನಲ್ಲಿ, Stations.shp ಮೇಲೆ ರೈಟ್ ಕ್ಲಿಕ್ ಮಾಡಿ. |
02:56 | ಕೊಂಟೆಕ್ಸ್ಟ್ ಮೆನುವಿನಿಂದ Open Attribute Table ಆಯ್ಕೆಯನ್ನು ಆರಿಸಿ. |
03:01 | Attribute table ತೆರೆಯುತ್ತದೆ. |
03:03 | ಕೇವಲ ಒಂದು ಎಟ್ರಿಬ್ಯೂಟ್ ಡಿಸ್ಟ್ರಿಕ್ಟ್ ಗಾಗಿ ಡೇಟಾ ಲಭ್ಯವಿದೆ ಎಂಬುದನ್ನು ಗಮನಿಸಿ. |
03:10 | attribute table ಅನ್ನು ಮಿನಿಮೈಸ್ ಮಾಡಿ. |
03:13 | ಈಗ ನಾವು ಮತ್ತೊಂದು ಡೇಟಾ-ಸೆಟ್ ಅನ್ನು ಸೇರಿಸುತ್ತೇವೆ, ಅದು ಲೇಯರ್ಸ್ ಪ್ಯಾನೆಲ್ ಗೆ ಸ್ಪ್ರೆಡ್ಶೀಟ್ ಆಗಿದೆ.
ಈ ಡೇಟಾ ಸೆಟ್ CSV ಫಾರ್ಮ್ಯಾಟ್ ನಲ್ಲಿದೆ. |
03:23 | ಮೆನು ಬಾರ್ನಲ್ಲಿ Layer ಮೆನು ಕ್ಲಿಕ್ ಮಾಡಿ.
Add layer ಮೇಲೆ ಕ್ಲಿಕ್ ಮಾಡಿ. |
03:30 | ಸಬ್ ಮೆನುವಿನಿಂದ Add Delimited Text Layer ಆಯ್ಕೆಯ ಮೇಲೆ ಕ್ಲಿಕ್ ಮಾಡಿ. |
03:35 | ಒಂದು ಡೈಲಾಗ್ ಬೊಕ್ಸ್ ತೆರೆಯುತ್ತದೆ. |
03:38 | File Name ಕ್ಷೇತ್ರದ ಪಕ್ಕದಲ್ಲಿರುವ Browse ಬಟನ್ ಕ್ಲಿಕ್ ಮಾಡಿ. |
03:43 | ಒಂದು ಡೈಲಾಗ್ ಬೊಕ್ಸ್ ತೆರೆಯುತ್ತದೆ. |
03:46 | Desktopನಲ್ಲಿರುವ Code files ಫೋಲ್ಡರ್ನಿಂದ Rainfall.csv ಫೈಲ್ಗೆ ನ್ಯಾವಿಗೇಟ್ ಮಾಡಿ.
Open ಬಟನ್ ಕ್ಲಿಕ್ ಮಾಡಿ. |
03:54 | Delimited Text File ಡೈಲಾಗ್ ಬೊಕ್ಸ್ ನಲ್ಲಿ, CSV ಯನ್ನು ಫೈಲ್ ಫೊರ್ಮ್ಯಾಟ್ ಆಗಿ ಆರಿಸಿ. |
04:01 | Geometry definition ಅನ್ನು No geometry ಎಂದು ಆರಿಸಿ.
ಇತರ ಎಲ್ಲ ಕ್ಷೇತ್ರಗಳನ್ನು ಹಾಗೇ ಬಿಡಿ. |
04:09 | OK ಬಟನ್ ಕ್ಲಿಕ್ ಮಾಡಿ. |
04:12 | 'QGIS' ಕ್ಯಾನ್ವಾಸ್ನಲ್ಲಿ, Rainfall layer ಅನ್ನು ಲೇಯರ್ಗಳ ಪೆನಲ್ ನಲ್ಲಿ ಸೇರಿಸಲಾಗುತ್ತದೆ. |
04:18 | Rainfall layer ಮೇಲೆ ರೈಟ್ ಕ್ಲಿಕ್ ಮಾಡಿ. |
04:21 | ಕೊಂಟೆಕ್ಸ್ಟ್ ಮೆನ್ಯುವಿನಲ್ಲಿ Open Attribute Table ಅನ್ನು ಕ್ಲಿಕ್ ಮಾಡಿ. |
04:26 | Attribute table ತೆರೆಯುತ್ತದೆ.
attribute table ವಿವಿಧ ಜಿಲ್ಲೆಗಳಿಗೆ ಜನವರಿ ಯಿಂದ ಡಿಸೆಂಬರ್ ವರೆಗೆ ಮಳೆಯ ಡೇಟಾವನ್ನು ಹೊಂದಿದೆ. |
04:37 | Stations attribute table ಅನ್ನು ಮೆಕ್ಸಿಮೈಜ್ ಮಾಡಿ ಮತ್ತು ಟೇಬಲ್ಸ್ ಎರಡನ್ನೂ ಹೋಲಿಕೆ ಮಾಡಿ. |
04:43 | ದಯವಿಟ್ಟು ಗಮನಿಸಿ, District ಕ್ಷೇತ್ರವು Rainfall ಮತ್ತು Stations layers ಎರಡರಲ್ಲೂ ಸಾಮಾನ್ಯವಾಗಿದೆ. |
04:50 | ಈಗ ನಾವು attribute data ವನ್ನು Rainfall layer ನಿಂದ Stations layer ಗೆ ಸೇರಿಸುತ್ತೇವೆ. |
04:56 | Stations attribute tableನಲ್ಲಿ District ಎಂಬ ಹೆಸರಿನ ಒಂದೇ ಒಂದು ಕಾಲಮ್ ಇದೆ. |
05:02 | ನಾವು Rainfall data ಅನ್ನು Stations attribute tableಗೆ ಸೇರಿಸುತ್ತೇವೆ. |
05:07 | attribute tables ಅನ್ನು ಕ್ಲೋಸ್ ಮಾಡಿ. |
05:10 | Layers Panel ನಲ್ಲಿ Stations layer ಅನ್ನು ಆರಿಸಿ. |
05:14 | ಈ ಲೇಯರ್ Rainfall layer ಲೇಯರ್ ನಿಂದ ಹೊಸ ಡೇಟಾವನ್ನು ಪಡೆಯುತ್ತದೆ. |
05:19 | Stations layer ಅನ್ನು ರೈಟ್ ಕ್ಲಿಕ್ ಮಾಡಿ. |
05:22 | ಕೊಂಟೆಕ್ಸ್ಟ್ ಮೆನುವಿನಿಂದ Properties ಆಯ್ಕೆಯನ್ನು ಕ್ಲಿಕ್ ಮಾಡಿ. |
05:26 | Layer Properties ಡೈಲಾಗ್ ಬೊಕ್ಸ್ ತೆರೆಯುತ್ತದೆ.
ಎಡ ಪೆನಲ್ ನಿಂದ Joins ಅನ್ನು ಕ್ಲಿಕ್ ಮಾಡಿ. |
05:33 | ಹೊಸ ವಿಂಡೋದಲ್ಲಿ, ಕೆಳಗಿನ ಎಡ ಮೂಲೆಯಲ್ಲಿರುವ ಪ್ಲಸ್ ಚಿಹ್ನೆಯ ಮೇಲೆ ಕ್ಲಿಕ್ ಮಾಡಿ. |
05:39 | Add vector join ಡೈಲಾಗ್ ಬೊಕ್ಸ್ ತೆರೆಯುತ್ತದೆ. |
05:43 | ಇಲ್ಲಿ ನಾವು Join layer, Join field ಮತ್ತು Target field ಆಯ್ಕೆಗಳನ್ನು ಕಾಣುತ್ತೇವೆ. |
05:51 | Join layer ಇದು Rainfall layer ಆಗಿರುತ್ತದೆ, ಇದರಿಂದ ಡೇಟಾವನ್ನು Stations attribute table ಗೆ ಸೇರಿಸಲಾಗುತ್ತದೆ. |
05:59 | ಇಲ್ಲಿ Rainfall layer ಈಗಾಗಲೇ ಸೆಲೆಕ್ಟ್ ಆಗಿದೆ. |
06:03 | Join field ಇದು ಒಂದು ಫೀಲ್ಡ್ ಅಥವಾ ಸೇರಿಸಬೇಕಾದ Rainfall table ನಲ್ಲಿ ಎಟ್ರಿಬ್ಯೂಟ್ ಆಗಿದೆ. |
06:10 | Join field ನಲ್ಲಿ, ಡ್ರೊಪ್ ಡೌನ್ ನಿಂದ District ಅನ್ನು ಆರಿಸಿ. |
06:15 | ಟಾರ್ಗೆಟ್ ಫೀಲ್ಡ್ ಎನ್ನುವುದು ಸ್ಟೇಷನ್ಸ್ ಟೇಬಲ್ 'ನಲ್ಲಿ ಸೇರಿಸಬೇಕಾದ ಕ್ಷೇತ್ರವಾಗಿದೆ. |
06:20 | Target field ನಲ್ಲಿ, District ಇದು ಈಗಾಗಲೇ ಆಯ್ಕೆಯಾಗಿದೆ. |
06:25 | ಈ ಕ್ಷೇತ್ರವು ಎರಡೂ ಟೇಬಲ್ ಗೂ ಸಾಮಾನ್ಯವಾಗಿದೆ. |
06:29 | Choose which fields are joined ಚೆಕ್ ಬೊಕ್ಸ್ ಅನ್ನು ಚೆಕ್ ಮಾಡಿ. |
06:34 | ಕೆಳಗಿನ ಟೆಕ್ಸ್ಟ್ ಬೊಕ್ಸ್ ಅನ್ನು ಈಗ ಎಲ್ಲಾ ಕಾಲಮ್ಗಳು ಮತ್ತು ಚೆಕ್ಬಾಕ್ಸ್ಗಳೊಂದಿಗೆ ಪೊಪ್ಯುಲೇಟ್ ಮಾಡಲಾಗಿದೆ. |
06:41 | ಟೆಕ್ಸ್ಟ್ ಬೊಕ್ಸ್ ನಲ್ಲಿ January ಯಿಂದ Annual Average ಕಾಲಮ್ಗಳಿಗಾಗಿ ಬೊಕ್ಸ್ ಗಳನ್ನು ಚೆಕ್ ಮಾಡಿ. |
06:48 | Add vector join ಡೈಲಾಗ್ ಬೊಕ್ಸ್ ಅನ್ನು ಕ್ಲೋಸ್ ಮಾಡಲು OK ಬಟನ್ ಒತ್ತಿರಿ. |
06:53 | Layer Properties ಡೈಲಾಗ್ ಬೊಕ್ಸ್ ನಲ್ಲಿ , ಸೇರಿಸಿದ ಲೇಯರ್ ಮತ್ತು ಕಾಲಮ್ಗಳ ಮಾಹಿತಿಯನ್ನು ಮೇಲ್ಭಾಗದಲ್ಲಿ ಸೂಚಿಸಲಾಗುತ್ತದೆ. |
07:02 | Apply ಬಟನ್ ಅನ್ನೂ, ನಂತರ OK ಬಟನ್ ಅನ್ನೂ ಕ್ಲಿಕ್ ಮಾಡಿ. |
07:06 | QGISಇಂಟರ್ಫೇಸ್ನಲ್ಲಿ, ಈ ಹಿಂದೆ ತೋರಿಸಿರುವಂತೆ Stations layerಗಾಗಿ attribute table ಅನ್ನು ತೆರೆಯಿರಿ. |
07:14 | ಈ ಟೇಬಲ್ ಎಲ್ಲಾ ನಿಲ್ದಾಣಗಳಿಗೆ Rainfall data ವನ್ನು ತೋರಿಸುತ್ತದೆ ಎಂಬುದನ್ನು ಗಮನಿಸಿ. |
07:20 | attribute table ಅನ್ನು ಕ್ಲೋಸ್ ಮಾಡಿ. |
07:23 | ಮುಂದೆ, ಸ್ಥಳದ ಪ್ರಕಾರ ಎರಡು ಡೇಟಾ-ಸೆಟ್ಗಳ attribute tableಅನ್ನು ಹೇಗೆ ಸೇರಬೇಕೆಂದು ನಾವು ಕಲಿಯುತ್ತೇವೆ. |
07:30 | ಲೇಯರ್ ಪ್ಯಾನೆಲ್ಗೆ ಮತ್ತೊಂದು ಲೇಯರ್ ಅನ್ನು ಸೇರಿಸೋಣ. |
07:34 | ಇದಕ್ಕಾಗಿ Add Vector Layer ಟೂಲ್ ಅನ್ನು ಕ್ಲಿಕ್ ಮಾಡಿ. |
07:38 | Add Vector Layer ಡೈಲಾಗ್ ಬೊಕ್ಸ್ ನಲ್ಲಿ, Browse ಬಟನ್ ಕ್ಲಿಕ್ ಮಾಡಿ. |
07:43 | 'ಡೆಸ್ಕ್ಟಾಪ್' ನಲ್ಲಿರುವ Code files ಫೋಲ್ಡರ್ನಿಂದ Admin.shp ಗೆ ನ್ಯಾವಿಗೇಟ್ ಮಾಡಿ. |
07:49 | Open ಬಟನ್ ಕ್ಲಿಕ್ ಮಾಡಿ. |
07:51 | Add Vector Layer ಡೈಲಾಗ್ ಬೊಕ್ಸ್ ನಲ್ಲಿ Open ಬಟನ್ ಕ್ಲಿಕ್ ಮಾಡಿ. |
07:56 | Admin layer ಈಗ Layers Panel ಗೆ ಸೇರ್ಪಡೆಯಾಗಿದೆ. |
08:00 | Admin layer ನಕ್ಷೆಯು ಭಾರತದ ಆಡಳಿತಾತ್ಮಕ ರಾಜ್ಯ ಗಡಿಗಳನ್ನು ತೋರಿಸುತ್ತದೆ. |
08:07 | ಲೇಯರ್ಸ್ ಪೆನಲ್ ನಲ್ಲಿ Admin layer ಅನ್ನು ಕ್ಲಿಕ್ ಮಾಡಿ. |
08:11 | ಡ್ರ್ಯಾಗ್ ಮಾಡಿ ಮತ್ತು ಅದನ್ನು Stations layer ಕೆಳಗೆ ತನ್ನಿ. |
08:15 | ಈಗ ನಾವು ವಿವಿಧ ರಾಜ್ಯಗಳಲ್ಲಿರುವ ಪಾಯಿಂಟ್ ವೈಶಿಷ್ಟ್ಯಗಳನ್ನು ವೀಕ್ಷಿಸಬಹುದು. |
08:20 | Admin layer ಗಾಗಿ Attribute table ತೆರೆಯಿರಿ. |
08:24 | attribute tableರಾಜ್ಯಗಳಿಗೆ ಸಂಬಂಧಿಸಿದ ಮಾಹಿತಿಯನ್ನು ತೋರಿಸುತ್ತದೆ. |
08:29 | Admin attribute table ಅನ್ನು ಮಿನಿಮೈಸ್ ಮಾಡಿ.
ಪುನಃ Stations attribute table ಅನ್ನು ತೆರೆಯಿರಿ. |
08:36 | ಈಗ ನಾವು ಸ್ಟೇಷನ್ಸ್ ಲೇಯರ್ ಮತ್ತು ಅಡ್ಮಿನ್ ಲೇಯರ್ ಗಾಗಿ ಸ್ಥಳದಿಂದ attributes ಗಳನ್ನು ಸೇರಿಸುತ್ತೇವೆ. |
08:43 | ಎರಡೂ attribute tables ಗಳನ್ನು ಕ್ಲೋಸ್ ಮಾಡಿ. |
08:47 | Vector ಮೆನ್ಯೂ ಕ್ಲಿಕ್ ಮಾಡಿ. |
08:48 | ಮೆನು ಕೆಳಗೆ ಸ್ಕ್ರಾಲ್ ಮಾಡಿ ಮತ್ತು Data Management Tools ಕ್ಲಿಕ್ ಮಾಡಿ. |
08:53 | ಸಬ್ ಮೆನ್ಯುವಿನಿಂದ Join attributes by location ಅನ್ನು ಸೆಲೆಕ್ಟ್ ಮಾಡಿ. |
08:58 | Join attributes by location ಡೈಲಾಗ್ ಬೊಕ್ಸ್ ತೆರೆಯುತ್ತದೆ. |
09:02 | Target vector layer ಗಾಗಿ ಡ್ರಾಪ್-ಡೌನ್ ಕ್ಲಿಕ್ ಮಾಡಿ |
09:05 | attribute table ಗೆ ಸೇರಿಸಲು ಇಲ್ಲಿ ನಾವು ಟಾರ್ಗೆಟ್ ವೆಕ್ಟರ್ ಲೇಯರ್ ಅನ್ನು ನಿರ್ದಿಷ್ಟಪಡಿಸಬೇಕು. |
09:12 | ನಮ್ಮ ಸಂದರ್ಭದಲ್ಲಿ ನಾವು ಹೊಸ ಡೇಟಾ ಅನ್ನು ಸ್ಟೇಷನ್ಸ್ ಲೇಯರ್ಗೆ ಸೇರಿಸಬೇಕಾಗಿದೆ. |
09:17 | ಆದ್ದರಿಂದ Stations layer ಟಾರ್ಗೆಟ್ ಲೇಯರ್ ಆಗಿದೆ. |
09:21 | ಆದ್ದರಿಂದ ನಾವು ಡ್ರಾಪ್-ಡೌನ್ ನಿಂದ Stations [EPSG: 4326] ಅನ್ನು ಟಾರ್ಗೆಟ್ ಲೇಯರ್ ಎಂದು ಆಯ್ಕೆ ಮಾಡುತ್ತೇವೆ. |
09:29 | Join vector layer ಗಾಗಿ ಡ್ರಾಪ್-ಡೌನ್ ಕ್ಲಿಕ್ ಮಾಡಿ. |
09:33 | ಇಲ್ಲಿ ನಾವು ಟಾರ್ಗೆಟ್ ಲೇಯರ್ ನೊಂದಿಗೆ ಸೇರಿಸಲು ಬಯಸುವ ಲೇಯರ್ ಅನ್ನು ಆರಿಸಬೇಕಾಗುತ್ತದೆ. |
09:40 | ಡ್ರೊಪ್ ದೌನ್ ನಿಂದ Admin [EPSG: 4326] ಅನ್ನು ಆರಿಸಿ. |
09:45 | ಇಲ್ಲಿ ನಮಗೆ attributes ಗಳನ್ನು ಜೊಇನ್ ಮಾಡಲು ಹಲವಾರು ಆಯ್ಕೆಗಳಿವೆ. |
09:50 | ವಿವಿಧ ರಾಜ್ಯಗಳಲ್ಲಿರುವ ಹವಾಮಾನ ಕೇಂದ್ರಗಳನ್ನು ಕಂಡುಹಿಡಿಯಲು ನಾವು ಆಸಕ್ತಿ ಹೊಂದಿದ್ದೇವೆ. |
09:56 | ಆದ್ದರಿಂದ Geometric predicate ಅಡಿಯಲ್ಲಿ, ನಾವು within ಚೆಕ್-ಬಾಕ್ಸ್ ಆಯ್ಕೆ ಮಾಡುತ್ತೇವೆ.
ಸ್ಕ್ರೋಲ್ ಡೌನ್ ಮಾಡಿ. |
10:04 | Open output file after running algorithm ಗಾಗಿ ಚೆಕ್-ಬಾಕ್ಸ್ ಅನ್ನು ಚೆಕ್ ಮಾಡಿ. |
10:10 | ಉಳಿದ ಸೆಟ್ಟಿಂಗ್ಸ್ ಗಳನ್ನು ಹಾಗೇ ಬಿಡಿ.
Run ಬಟನ್ ಕ್ಲಿಕ್ ಮಾಡಿ. |
10:17 | ಕೆಳಭಾಗದಲ್ಲಿರುವ ಸ್ಟೇಟಸ್ ಬಾರ್, ಅಲ್ಗೋರಿದಮ್ ನ ಪ್ರಗತಿಯನ್ನು ತೋರಿಸುತ್ತದೆ.
ಪ್ರಕ್ರಿಯೆಯು ಪೂರ್ಣಗೊಳ್ಳುವವರೆಗೆ ಕಾಯಿರಿ. |
10:25 | ಕ್ಯಾನ್ವಾಸ್ನಲ್ಲಿ, Joined layer ಎಂಬ ಹೊಸ ಲೇಯರ್, ಲೇಯರ್ಸ್ ಪ್ಯಾನೆಲ್ ನಲ್ಲಿ ಸೇರ್ಪಡೆಗೊಂಡಿದೆ. |
10:32 | Joined layer ಮೇಲೆ ರೈಟ್ ಕ್ಲಿಕ್ ಮಾಡಿ ಮತ್ತು attribute table ತೆರೆಯಿರಿ. |
10:37 | ಈ ಟೇಬಲ್ ಸ್ಟೇಷನ್ಸ್ ಲೇಯರ್ನಲ್ಲಿನ ಪ್ರತಿಯೊಂದು ಬಿಂದುವಿಗೆ Admin layer ನಿಂದ ಎಲ್ಲಾ ಎಟ್ರಿಬ್ಯೂಟ್ಸ್ ಗಳನ್ನು ಒಳಗೊಂಡಿದೆ. |
10:45 | ಪ್ರತಿಯೊಂದು ಪಾಯಿಂಟ್ ವೈಶಿಷ್ಟ್ಯವು ರಾಜ್ಯದ ಬಗ್ಗೆ ಮಾಹಿತಿಯನ್ನು ಹೊಂದಿದೆ. |
10:49 | attribute table ಅನ್ನು ಕ್ಲೋಸ್ ಮಾಡಿ. |
10:52 | ಯೋಜನೆಯನ್ನು ಸೇವ್ ಮಾಡಲು, ಮೆನು ಬಾರ್ನಿಂದ Project ಮೆನು ಕ್ಲಿಕ್ ಮಾಡಿ.
Save As ಅನ್ನು ಆಯ್ಕೆ ಮಾಡಿ. |
11:01 | ಸೂಕ್ತವಾದ ಹೆಸರನ್ನು ನೀಡಿ ಮತ್ತು ಅನುಕೂಲಕರ ಸ್ಥಳವನ್ನು ಆಯ್ಕೆ ಮಾಡಿ. |
11:06 | Save ಬಟನ್ ಒತ್ತಿರಿ. |
11:10 | ಸಾರಾಂಶವನ್ನು ನೋಡೋಣ. |
11:12 | ಈ ಟ್ಯುಟೋರಿಯಲ್ ನಲ್ಲಿ, ಎರಡು ಡೇಟಾ-ಸೆಟ್ ಗಳನ್ನು, ಸಾಮಾನ್ಯ ಕ್ಷೇತ್ರ ಮತ್ತು ಅದೇ spatial data ಗಳನ್ನು ಹೊಂದಿರುವ attribute tables ಗೆ ಸೇರಿಸಲು ನಾವು ಕಲಿತೆವು. |
11:22 | ಪಾಠ-ನಿಯೋಜನೆಯಾಗಿ,
ಜೂನ್ನಿಂದ ಡಿಸೆಂಬರ್ವರೆಗೆ stations data ದೊಂದಿಗೆ rainfall data ಸೇರಿಸಿ. |
11:30 | Code files ಫೊಲ್ಡರ್ ನಲ್ಲಿರುವ Rainfall.csv ಮತ್ತು Stations.shp ಫೈಲ್ ಗಳನ್ನು ಉಪಯೋಗಿಸಿ. |
11:37 | ಸಮಾಪ್ತಿಯ ನಂತರ ನಿಮ್ಮ ಅಸೈನ್ಮೆಂಟ್ ಹೀಗೆ ಕಾಣಬೇಕು. |
11:41 | ಕೆಳಗಿನ ಲಿಂಕ್ನಲ್ಲಿರುವ ವೀಡಿಯೊ ಸ್ಪೋಕನ್ ಟ್ಯುಟೋರಿಯಲ್ ಯೋಜನೆಯನ್ನು ಕುರಿತು ವಿವರಿಸುತ್ತದೆ.
ದಯವಿಟ್ಟು ಅದನ್ನು ಡೌನ್ಲೋಡ್ ಮಾಡಿ ಮತ್ತು ವೀಕ್ಷಿಸಿ. |
11:48 | ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ತಂಡ, ಕಾರ್ಯಾಗಾರಗಳನ್ನು ನಡೆಸುತ್ತದೆ ಮತ್ತು ನಮ್ಮ ಆನ್ಲೈನ್ ಪರೀಕ್ಷೆಗಳಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರಗಳನ್ನು ನೀಡುತ್ತದೆ.
ವಿವರಗಳಿಗಾಗಿ, ದಯವಿಟ್ಟು ನಮಗೆ ಬರೆಯಿರಿ. |
11:58 | ನೀವು ಪ್ರಶ್ನೆಯನ್ನು ಹೊಂದಿರುವ ನಿಮಿಷ ಮತ್ತು ಸೆಕೆಂಡ್ ಅನ್ನು ಆರಿಸಿ.
ನಿಮ್ಮ ಪ್ರಶ್ನೆಯನ್ನು ಸಂಕ್ಷಿಪ್ತವಾಗಿ ವಿವರಿಸಿ. |
12:02 | ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ಗೆ NMEICT, MHRD, ಭಾರತ ಸರ್ಕಾರ ಧನಸಹಾಯ ನೀಡುತ್ತದೆ.
ಹೆಚ್ಚಿನ ವಿವರಗಳಿಗಾಗಿ, ಇಲ್ಲಿ ತೋರಿಸಿರುವ ಲಿಂಕ್ಗೆ ಭೇಟಿ ನೀಡಿ. |
12:10 | ಅನುವಾದ ಮತ್ತು ಧ್ವನಿ ಶ್ರೀ ನವೀನ ಭಟ್ಟ ಉಪ್ಪಿನಪಟ್ಟಣ. ಧನ್ಯವಾದಗಳು. |