QGIS/C2/Raster-Data-Styling/Kannada

From Script | Spoken-Tutorial
Revision as of 21:59, 11 December 2020 by NaveenBhat (Talk | contribs)

(diff) ← Older revision | Latest revision (diff) | Newer revision → (diff)
Jump to: navigation, search
Time Narration
00:01 QGIS ನಲ್ಲಿ, Raster Data Styling ನ ಕುರಿತಾದ ಟ್ಯುಟೋರಿಯಲ್ ಗೆ ಸ್ವಾಗತ.
00:07 ಈ ಟ್ಯುಟೋರಿಯಲ್ ನಲ್ಲಿ ನಾವು ನಿರಂತರವಾದ raster ಅನ್ನು ಸ್ಟೈಲ್ ಮಾಡುವುದು,
00:13 Raster Calculator (ರ್ಯಾಸ್ಟರ್ ಕ್ಯಾಲ್ಕ್ಯುಲೇಟರ್ ) ನಲ್ಲಿ ಸಮೀಕರಣಗಳನ್ನು ಬರೆಯುವುದು ಮತ್ತು
00:17 raster ನ ಗುಣಲಕ್ಷಣಗಳ ಕುರಿತು ಕಲಿಯುವೆವು.
00:20 ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು ನಾನು,

Ubuntu Linux OS ನ16.04 ಆವೃತ್ತಿ,

00:28 QGIS ನ 2.18 ಆವೃತ್ತಿಯನ್ನು ಬಳಸಿದ್ದೇನೆ.
00:32 ಈ ಟ್ಯುಟೋರಿಯಲ್ ಅನ್ನು ಕಲಿಯಲು ನೀವು QGIS ಇಂಟರ್ಫೇಸ್ ನ ಕುರಿತು ತಿಳಿದಿರಬೇಕು.
00:38 ಇಲ್ಲವಾದಲ್ಲಿ ಸಂಬಂಧಿತ ಟ್ಯುಟೋರಿಯಲ್ ಗಳಿಗಾಗಿ, ನಮ್ಮ ವೆಬ್ ಸೈಟ್ ಅನ್ನು ಭೇಟಿಮಾಡಿ.
00:43 ಪ್ಲೇಯರ್ ನ ಕೆಳಗಿರುವ, Code files ಲಿಂಕ್ ನಲ್ಲಿ ಕೊಟ್ಟಿರುವ ಫೋಲ್ಡರ್ ಅನ್ನು ಡೌನ್ ಲೋಡ್ ಮಾಡಿ.
00:49 ಡೌನ್ಲೋಡ್ ಆದ ಝಿಪ್ ಫೈಲ್ ನಲ್ಲಿರುವ ಕಂಟೆಂಟ್ ಗಳನ್ನು ಎಕ್ಸ್ಟ್ರ್ಯಾಕ್ಟ್ ಮಾಡಿಕೊಳ್ಳಿ.
00:56 ಇಲ್ಲಿ ನನ್ನ Code files ಫೋಲ್ಡರ್ ಇದೆ.
00:59 ಫೋಲ್ಡರ್ ಅನ್ನು ತೆರೆಯಲು ಅದನ್ನು ಡಬಲ್ ಕ್ಲಿಕ್ ಮಾಡಿ.
01:02 ಈ ಫೋಲ್ಡರ್ ನಲ್ಲಿ, Population Density grid files ಇದು 2000 ಮತ್ತು 1990 ಇಸ್ವಿಯಲ್ಲಿನ ಇಡಿ ಪ್ರಪಂಚದ ಜನಸಂಖ್ಯೆಗೆ ಸಂಬಂಧಿಸಿದ ಫೈಲ್ ಆಗಿದೆ.
01:12 ಇಲ್ಲಿ .asc ಫೈಲ್ ಎಕ್ಸ್ಟೆನ್ಷನ್ ಅನ್ನು ಹೊಂದಿರುವ , ASCII ಫಾರ್ಮ್ಯಾಟ್ ನಲ್ಲಿರುವ ಎರಡು ಫೈಲ್ ಗಳಿವೆ.
01:20 ಈಗ ಈ ಫೈಲ್ ಗಳನ್ನು QGIS ನಲ್ಲಿ ತೆರೆಯೋಣ.
01:24 Code files ಫೋಲ್ಡರ್ ಅನ್ನು ಕ್ಲೋಸ್ ಮಾಡಿ.
01:27 ಇಲ್ಲಿ ನಾನು QGIS ಇಂಟರ್ಫೇಸ್ ಅನ್ನು ತೆರೆದಿದ್ದೇನೆ.

Layer ಮೆನ್ಯುವಿನ ಮೇಲೆ ಕ್ಲಿಕ್ ಮಾಡಿ.

01:34 ಡ್ರಾಪ್ ಡೌನ್ ನಿಂದ Add Layer ಅನ್ನು ಆಯ್ಕೆ ಮಾಡಿ.
01:38 ಸಬ್-ಮೆನ್ಯುವಿನಿಂದ Add Raster Layer ಅನ್ನು ಆಯ್ಕೆ ಮಾಡಿ.
01:43 ಒಂದು ಡಯಲಾಗ್ ಬಾಕ್ಸ್ ತೆರೆದುಕೊಳ್ಳುತ್ತದೆ. ನಾನು Desktop ನಲ್ಲಿರುವ Code file ಫೋಲ್ಡರ್ ಗೆ ಹೋಗುತ್ತೇನೆ.
01:52 .asc ಫೈಲ್ ಎಕ್ಸ್ಟೆನ್ಷನ್ ಇರುವ ಎರಡು ಫೈಲ್ ಗಳನ್ನು ಆಯ್ಕೆ ಮಾಡಿ.
01:58 Ctrl ಕೀಯನ್ನು ಹಿಡಿದಿಟ್ಟುಕೊಂಡು ಎರಡೂ ಫೈಲ್ ಗಳ ಮೇಲೆ ಕ್ಲಿಕ್ ಮಾಡಿ.
02:04 Open ಬಟನ್ ನ ಮೇಲೆ ಕ್ಲಿಕ್ ಮಾಡಿ.
02:07 Coordinate Reference System Selector (ಕೋ-ಆರ್ಡಿನೇಟ್ ರೆಫರೆನ್ಸ್ ಸಿಸ್ಟಮ್ ಸೆಲೆಕ್ಟರ್) ತೆರೆದುಕೊಳ್ಳುತ್ತದೆ.
02:11 ಸೆಟ್ಟಿಂಗ್ಸ್ ನಲ್ಲಿ, CRS ಆಯ್ಕೆಯು ತಂತಾನೇ ಆಯ್ಕೆಯಾಗಿರುತ್ತದೆ.
02:17 ಅಂತಹ ಸಂದರ್ಭದಲ್ಲಿ, ಈ ವಿಂಡೋ ತೆರೆದುಕೊಳ್ಳದೇ ಇರಬಹುದು.
02:21 Coordinate Reference System Selector (ಕೋ-ಆರ್ಡಿನೇಟ್ ರೆಫರೆನ್ಸ್ ಸಿಸ್ಟಮ್ ಸೆಲೆಕ್ಟರ್) ತೆರೆದುಕೊಳ್ಳದೇ ಇದ್ದರೆ, ಈ ಹಂತವನ್ನು ಬಿಟ್ಟು ಮುಂದಿನ ಹಂತದಿಂದ ಮುಂದುವರಿಸಿ.
02:30 ಇಲ್ಲಿ ಈ ಪಟ್ಟಿಯಿಂದ ನಾನು WGS 84 EPSG 4326 ಇದನ್ನು ಆಯ್ಕೆ ಮಾಡುವೆನು.
02:39 OK ಬಟನ್ ಅನ್ನು ಕ್ಲಿಕ್ ಮಾಡಿ.
02:42 ನಾವು ಇಲ್ಲಿ ಎರಡು ಲೇಯರ್ ಗಳನ್ನು ಒಟ್ಟಿಗೇ ಸೇರಿಸುತ್ತಿರುವುದರಿಂದ Coordinate Reference System Selector (ಕೋ-ಆರ್ಡಿನೇಟ್ ರೆಫರೆನ್ಸ್ ಸಿಸ್ಟಮ್ ಸೆಲೆಕ್ಟರ್) ಇನ್ನೊಮ್ಮೆ ತೆರೆದುಕೊಳ್ಳುತ್ತದೆ.
02:51 ಮತ್ತೆ WGS 84 EPSG 4326 ಅನ್ನು ಆಯ್ಕೆ ಮಾಡಿ.
02:58 OK ಬಟನ್ ಅನ್ನು ಕ್ಲಿಕ್ ಮಾಡಿ.
03:01 ಕ್ಯಾನ್ವಾಸ್ ನಲ್ಲಿ ನೀವು ವರ್ಲ್ಡ್ ಮ್ಯಾಪ್ grayscale ಬಂದಿರುವುದನ್ನು ನೋಡಬಹುದು.
03:07 ಕಡಿಮೆ pixels ಗಳು ಹೆಚ್ಚು ಜನಸಂಖ್ಯೆಯನ್ನೂ, ಗಾಢವಾದ pixels ಗಳು ಕಡಿಮೆ ಜನಸಂಖ್ಯೆಯನ್ನು ಸೂಚಿಸುತ್ತವೆ.
03:15 Layers Panel ನಲ್ಲಿ ನೀವು ಲೋಡ್ ಆಗಿರುವ ಎರಡೂ raster layers ಗಳನ್ನು ನೋಡಬಹುದು.
03:21 raster ನಲ್ಲಿನ ಪ್ರತಿ pixel ಆ ಗ್ರಿಡ್ ನ ಪಾಪ್ಯುಲೇಷನ್ ಡೆನ್ಸಿಟಿ ವ್ಯಾಲ್ಯುವನ್ನು ಹೊಂದಿರುತ್ತದೆ.
03:27 pixel ನ ವ್ಯಾಲ್ಯುವನ್ನು ನೋಡಲು, ಟೂಲ್ ಬಾರ್ ನ ಮೇಲ್ಗಡೆಯ ಬಲ ಮೂಲೆಯಲ್ಲಿರುವ Identify Features ಟೂಲ್ ಅನ್ನು ಕ್ಲಿಕ್ ಮಾಡಿ.
03:35 ಮ್ಯಾಪ್ ನಲ್ಲಿ ಝೂಮ್ ಮಾಡಲು, ಮೌಸ್ ನ ಚಕ್ರವನ್ನು ಬಳಸಿ.
03:38 raster ಮ್ಯಾಪ್ ನ ಯಾವುದೇ ಭಾಗದಲ್ಲಾದರೂ ಕ್ಲಿಕ್ ಮಾಡಿ.
03:41 Identify Results ಪ್ಯಾನಲ್ ನಲ್ಲಿ ಪಿಕ್ಸೆಲ್ ವ್ಯಾಲ್ಯೂ ಕಾಣಿಸುತ್ತದೆ.
03:48 ಗಮನಿಸಿ, ಕಡಿಮೆ pixels ಗಳು ಹೆಚ್ಚು ಜನಸಂಖ್ಯೆಯನ್ನೂ, ಗಾಢವಾದ pixels ಗಳು ಕಡಿಮೆ ಜನಸಂಖ್ಯೆಯನ್ನು ಹೊಂದಿವೆ.
03:57 Identify Results ಪ್ಯಾನಲ್ ಅನ್ನು ಕ್ಲೋಸ್ ಮಾಡಿ.
04:00 ಮ್ಯಾಪ್ ಅನ್ನು ಝೂಮ್ ಔಟ್ ಮಾಡಿ. Pan Map ಟೂಲ್ ಅನ್ನು ಕ್ಲಿಕ್ ಮಾಡಿ ಮತ್ತು ಮ್ಯಾಪ್ ಅನ್ನು ಕ್ಯಾನ್ವಾಸ್ ನ ಮೇಲೆ ಸರಿಯಾಗಿ ಹೊಂದಿಸಿ.
04:09 ಸರಿಯಾದ ಸ್ಟೈಲಿಂಗ್ ನಲ್ಲಿ ಪಾಪ್ಯುಲೇಷನ್ ಡೆನ್ಸಿಟಿ ಪ್ಯಾಟರ್ನ್ ಚೆನ್ನಾಗಿ ಕಾಣಿಸುವಂತೆ ಮಾಡಬಹುದು.
04:16 Layers Panel ನಲ್ಲಿ ಮೊದಲನೆಯ ಲೇಯರ್ ನ ಮೇಲೆ ರೈಟ್ ಕ್ಲಿಕ್ ಮಾಡಿ.
04:21 ಕಂಟೆಕ್ಸ್ಟ್ ಮೆನ್ಯುವಿನಿಂದ, Properties ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
04:26 Layer Properties ಡಯಲಾಗ್ ಬಾಕ್ಸ್ ತೆರೆದುಕೊಳ್ಳುತ್ತದೆ.
04:30 ಡಯಲಾಗ್ ಬಾಕ್ಸ್ ನಲ್ಲಿ Style ಅನ್ನು ಆಯ್ಕೆ ಮಾಡಿ.
04:35 Band Rendering ವಿಭಾಗದಡಿಯಲ್ಲಿ, Render type ಅನ್ನು Singleband pseudocolor (ಸಿಂಗಲ್ ಬ್ಯಾಂಡ್ ಸ್ಯುಡೋಕಲರ್) ಎಂದು ಬದಲಿಸಿ.
04:42 Interpolation (ಇಂಟರ್ ಪೊಲೇಷನ್) Linear ಆಗಿರಲಿ.
04:46 Color ಡ್ರಾಪ್ ಡೌನ್ ನಲ್ಲಿ, Spectral(ಸ್ಪೆಕ್ಟ್ರಲ್) ಅನ್ನು ಆಯ್ಕೆ ಮಾಡಿ.
04:51 ಕೆಳಕ್ಕೆ ಸ್ಕ್ರೋಲ್ ಮಾಡಿ.
04:54 Mode ಅನ್ನು Continuous ಎಂದು ಬದಲಿಸಿ.

Classify ಬಟನ್ ನ ಮೇಲೆ ಕ್ಲಿಕ್ ಮಾಡಿ.

05:00 ನೀವು ಐದು ಕಲರ್ ವ್ಯಾಲ್ಯುಗಳು ರಚನೆಯಾಗಿರುವುದನ್ನು ನೋಡುವಿರಿ.
05:05 Apply ಬಟನ್ ಅನ್ನು ಕ್ಲಿಕ್ ಮಾಡಿ, ನಂತರ ಡಯಲಾಗ್ ಬಾಕ್ಸ್ ನ ಕೆಳ ಬಲ ಮೂಲೆಯಲ್ಲಿರುವ OK ಬಟನ್ ಅನ್ನು ಕ್ಲಿಕ್ ಮಾಡಿ.
05:14 QGIS ಕ್ಯಾನ್ವಾಸ್ ನಲ್ಲಿ, ಸ್ಪೆಕ್ಟ್ರಲ್ ಕಲರ್ ರೆಂಡರಿಂಗ್ ನ ಐದು ವಿಭಾಗಗಳಲ್ಲಿ raster ಮ್ಯಾಪ್ ಡಿಸ್ಪ್ಲೇ ಆಗಿರುವುದನ್ನುನೋಡಬಹುದು.
05:24 ಮೊದಲನೆಯ ಲೇಯರ್ ಗೆ ಮಾಡಿದ ಹಂತಗಳನ್ನೇ ಅನುಸರಿಸಿ, ಎರಡನೆಯ ಲೇಯರ್ ಗೂ ಕೂಡ raster style ಅನ್ನು ಬದಲಿಸಬಹುದು.
05:45 ನಮ್ಮ ವಿಶ್ಲೇಷಣೆಗಾಗಿ, ನಾವು 1990 ಮತ್ತು 2000 ನೇ ಇಸ್ವಿಗಳ ನಡುವಿನ ಗರಿಷ್ಟ ಜನಸಂಖ್ಯೆ ಬದಲಾವಣೆಯಾದ ಪ್ರದೇಶಗಳನ್ನು ಕಂಡುಹಿಡಿಯಲು ಇಚ್ಛಿಸುವೆವು.
05:54 ಇದಕ್ಕಾಗಿ ನಾವು ಎರಡೂ ಲೇಯರ್ ಗಳಲ್ಲೂ, ಪ್ರತಿ ಗ್ರಿಡ್ ನ ಪಿಕ್ಸೆಲ್ ಗಳ ವ್ಯತ್ಯಾಸವನ್ನು ಕಂಡುಹಿಡಿಯಬೇಕು.
06:02 ಈ ಕ್ಯಾಲ್ಕ್ಯುಲೇಷನ್ ಗಳಿಗೆ ನಾವು , Raster Calculator tool (ರ್ಯಾಸ್ಟರ್ ಕ್ಯಾಲ್ಕ್ಯುಲೇಟರ್ ಟೂಲ್) ಅನ್ನು ಬಳಸುವೆವು.
06:07 ಮೆನ್ಯು ಬಾರ್ ನಿಂದ Raster ಮೆನ್ಯುವನ್ನು ಆಯ್ಕೆ ಮಾಡಿ.

ಡ್ರಾಪ್ ಡೌನ್ ನಿಂದ Raster calculator ಅನ್ನು ಆಯ್ಕೆ ಮಾಡಿ.

06:16 Raster Calculator ಡಯಲಾಗ್ ಬಾಕ್ಸ್ ತೆರೆದುಕೊಳ್ಳುತ್ತದೆ.
06:20 Raster bands ವಿಭಾಗದಡಿಯಲ್ಲಿ, ಬ್ಯಾಂಡ್ ಗಳ ಹೆಸರುಗಳು ಡಿಸ್ಪ್ಲೇ ಆಗುತ್ತದೆ.
06:26 ನಮ್ಮ ಪ್ರತಿಯೊಂದೂ ರ್ಯಾಸ್ಟರ್ ಗಳೂ ಒಂದೇ ಬ್ಯಾಂಡ್ ಹೊಂದಿರುವುದರಿಂದ, ನಾವು ಪ್ರತಿ raster ಗೆ ಒಂದು ಎಂಟ್ರಿಯನ್ನು ಮಾತ್ರ ನೀವು ನೋಡಬಹುದು.
06:33 raster calculator ಇದು raster pixels ಗಳ ಮೇಲೆ ಗಣಿತೀಯ ಕ್ರಿಯೆಗಳನ್ನು ಅನ್ವಯಿಸಬಲ್ಲದು.
06:40 ಈ ಉದಾಹರಣೆಯಲ್ಲಿ ನಾವು ಒಂದು ಸರಳ ಸೂತ್ರ ಅಂದರೆ, ನಾವು 1990 ಇಸ್ವಿಯ ಜನಸಂಖ್ಯಾ ಸಾಂದ್ರತೆ(ಪಾಪ್ಯುಲೇಷನ್ ಡೆನ್ಸಿಟಿ) ಯನ್ನು 2000 ನೇ ಇಸ್ವಿಯ ಇಸ್ವಿಯ ಜನಸಂಖ್ಯಾ ಸಾಂದ್ರತೆ(ಪಾಪ್ಯುಲೇಷನ್ ಡೆನ್ಸಿಟಿ) ಯಿಂದ ಕಳೆಯಬೇಕಾಗಿದೆ.
06:52 Raster bands ವಿಭಾಗದಡಿಯಲ್ಲಿ, 2000 ನೆಯ ಇಸ್ವಿಯ raster layer ನ ಮೇಲೆ ಡಬಲ್ ಕ್ಲಿಕ್ ಮಾಡುವುದರ ಮೂಲಕ, ಲೇಯರ್ ಅನ್ನು ಆಯ್ಕೆ ಮಾಡಿ.
07:00 ಈಗ ಈ ಸಮೀಕರಣವನ್ನು Raster calculator expression ವಿಭಾಕಕ್ಕೆ ಸೇರಿಸಬೇಕು.
07:06 Operators ವಿಭಾಗದಲ್ಲಿ, ವ್ಯವಕಲನದ ಚಿಹ್ನೆಯ ಬಟನ್ ನ ಮೇಲೆ ಕ್ಲಿಕ್ ಮಾಡಿ.
07:12 ಈಗ ಮತ್ತೊಮ್ಮೆ Raster bands ವಿಭಾಗದಲ್ಲಿ, 1990 ನೆಯ ಇಸ್ವಿಯ raster layer ನ ಮೇಲೆ ಡಬಲ್ ಕ್ಲಿಕ್ ಮಾಡಿ.
07:20 ಈಗ ಈ ಲೆಕ್ಕದ ಸೂತ್ರವು Raster calculator expression ವಿಭಾಗದಲ್ಲಿ ಡಿಸ್ಪ್ಲೇ ಆಗಿದೆ.
07:27 Result Layer ವಿಭಾಗದಡಿಯಲ್ಲಿ, ನೀವು Output layer ಬಾಕ್ಸ್ ಅನ್ನು ನೋಡಬಹುದು.
07:33 ಈ ಬಾಕ್ಸ್ ನಲ್ಲಿ, ನಿಮ್ಮ output layer ಅನ್ನು pop-change.tif ಎಂದು ಟೈಪ್ ಮಾಡಿ.
07:41 Output format ಡ್ರಾಪ್ ಡೌನ್ ನಲ್ಲಿ, Geo TIFF ಅನ್ನು ಆಯ್ಕೆ ಮಾಡಿ.
07:47 Output CRS ಆಯ್ಕೆಯು ತಂತಾನೇ ಆಯ್ಕೆಯಾಗಿರುತ್ತದೆ. ಅದನ್ನು ಹಾಗೆ ಬಿಡಿ.
07:54 Add result to project ನ ಮುಂದೆ ಇರುವ ಬಾಕ್ಸ್ ಅನ್ನು ಟಿಕ್ ಮಾಡಿ.
08:00 ಡಯಲಾಗ್ ಬಾಕ್ಸ್ ನ ಕೆಳಗಡೆಯಿರುವ, OK ಬಟನ್ ಅನ್ನು ಕ್ಲಿಕ್ ಮಾಡಿ.
08:04 ನೀವು, Layers Panel ನಲ್ಲಿ ಹೊಸ layer ಸೇರ್ಪಡೆಯಾಗಿರುವುದನ್ನು ನೋಡಬಹುದು.
08:08 3 ನೆಯ ಲೇಯರ್ ನ ಮ್ಯಾಪ್ ನೋಡಲು, Layers Panel ನಲ್ಲಿ pop-2000 ಮತ್ತು pop-1990 ಲೇಯರ್ ಗಳ ಚೆಕ್ ಬಾಕ್ಸ್ ಅನ್ನು ಅನ್ಚೆಕ್ ಮಾಡಿ.
08:21 ಈ ಲೇಯರ್ ನ ಸ್ಟೈಲ್ ಅನ್ನು ಬದಲಿಸುವುದರ ಮೂಲಕ, ನಾವು ಇನ್ನೂ ಹೆಚ್ಚು ಮಾಹಿತಿಪೂರ್ಣವಾದ ಮ್ಯಾಪ್ ಅನ್ನು ರಚಿಸಬಹುದು.
08:27 pop-change layer ನ ಮೇಲೆ ರೈಟ್ ಕ್ಲಿಕ್ ಮಾಡಿ. ಕಂಟೆಕ್ಸ್ಟ್ ಮೆನ್ಯುವಿನಿಂದ,

Properties ಅನ್ನು ಆಯ್ಕೆ ಮಾಡಿ.

08:36 Layer Properties ಡಯಲಾಗ್ ಬಾಕ್ಸ್ ತೆರೆದುಕೊಳ್ಳುತ್ತದೆ.
08:40 ನಾವು ಲೇಯರ್ ಅನ್ನು ಹೇಗೆ ಸ್ಟೈಲ್ ಮಾಡಬೇಕೆಂದರೆ, ನಿರ್ದಿಷ್ಟವಾದ ವ್ಯಾಪ್ತಿಯ ಪಿಕ್ಸೆಲ್ ವ್ಯಾಲ್ಯುಗಳು ಒಂದೇ ಬಣ್ಣವನ್ನು ಹೊಂದಿರಬೇಕು.
08:47 Metadata ಟ್ಯಾಬ್ ನ ಮೇಲೆ ಕ್ಲಿಕ್ ಮಾಡಿ, Properties ವಿಭಾಗಕ್ಕೆ ಸ್ಕ್ರೋಲ್ ಮಾಡಿ.
08:55 maximum ಮತ್ತು minimum ವ್ಯಾಲ್ಯುಗಳನ್ನು ಗುರುತು ಮಾಡಿಕೊಳ್ಳಿ.
08:59 ಗರಿಷ್ಟ ವ್ಯಾಲ್ಯುವು 6000 ಕ್ಕೆ ಹತ್ತಿರವಾಗಿದೆ.
09:02 ಕನಿಷ್ಟ ವ್ಯಾಲ್ಯು -2000 ಕ್ಕೆ ಸ್ವಲ್ಪ ಹೆಚ್ಚಿದೆ.
09:06 Style ಟ್ಯಾಬ್ ಗೆ ಹೋಗಿ,

Band Rendering ನ ಅಡಿಯಲ್ಲಿ, Singleband pseudocolor (ಸಿಂಗಲ್ ಬ್ಯಾಂಡ್ ಸ್ಯುಡೋಕಲರ್) ಅನ್ನು Render type ಎಂದು ಆಯ್ಕೆ ಮಾಡಿ.

09:14 Interpolation (ಇಂಟರ್ಪೋಲೇಷನ್) ಅನ್ನು Discrete ಎಂದು ಸೆಟ್ ಮಾಡಿ.
09:19 ಕೆಳಕ್ಕೆ ಸ್ಕ್ರೋಲ್ ಮಾಡಿ.

Add Values Manually ಬಟನ್ ಗೆ ಹೋಗಿ.

09:25 Classify ಬಟನ್ ನ ನಂತರ ಇರುವ ಇದು ಹಸಿರು ಬಣ್ಣದ ಚಿಹ್ನೆಯಾಗಿದೆ.
09:31 ನಾಲ್ಕು ಅನನ್ಯವಾದ classes ಗಳನ್ನು ರಚಿಸಲು, Add Values Manually ಬಟನ್ ಅನ್ನು 4 ಬಾರಿ ಕ್ಲಿಕ್ ಮಾಡಿ.
09:39 ಈ ವ್ಯಾಲ್ಯುಗಳು ಮಧ್ಯದ ಪ್ಯಾನಲ್ ನಲ್ಲಿ ಕಾಣಿಸುತ್ತದೆ.
09:43 ಈಗ ನೀವು ಇಲ್ಲಿ ಪ್ರತಿ ರೋ ದಲ್ಲೂ ವ್ಯಾಲ್ಯುಗಳನ್ನೂ ಬದಲಿಸಿ.
09:47 ಇಲ್ಲಿ ನಮೂದಿಸಿದ ವ್ಯಾಲ್ಯು ವಿಗಿಂತ ಕಡಿಮೆ ಇರುವ ಪಾಪ್ಯುಲೇಷನ್ ವ್ಯಾಲ್ಯುಗಳನ್ನು, ಆ ಎಂಟ್ರಿಯ ಬಣ್ಣದಲ್ಲಿಯೆ ಕೊಡಲಾಗುತ್ತದೆ.
09:54 ವ್ಯಾಲ್ಯುವನ್ನು ಬದಲಿಸಲು, Values ಕಾಲಮ್ ನ ಮೊದಲ ಎಂಟ್ರಿಯನ್ನು ಡಬಲ್ ಕ್ಲಿಕ್ ಮಾಡಿ.
10:00 ನಾವು ಗಮನಿಸಿದಂತೆ, ನಮ್ಮ metadata ಅನಾಲಿಸಿಸ್ ನಲ್ಲಿ ಕನಿಷ್ಟ ವ್ಯಾಲ್ಯುವು -2000 ಕ್ಕಿಂತ ಸ್ವಲ್ಪ ಜಾಸ್ತಿಯಿದೆ.

ಮೊದಲ ಎಂಟ್ರಿಯಲ್ಲಿ -2000 ಎಂದು ಟೈಪ್ ಮಾಡಿ.

10:12 ಕಲರ್ ಬಾಕ್ಸ್ ಅನ್ನು ಡಬಲ್ ಕ್ಲಿಕ್ ಮಾಡಿ ಮತ್ತು ಬಣ್ಣವನ್ನು ಬದಲಿಸಿ.
10:20 ಮೊದಲ ರೋ ದಲ್ಲಿ, Label ಕಾಲಮ್ ಅನ್ನು ಡಬಲ್ ಕ್ಲಿಕ್ ಮಾಡಿ.

No Data values ಎಂದು ಟೈಪ್ ಮಾಡಿ.

10:28 ಇದೇ ರೀತಿಯಾಗಿ, ಇಲ್ಲಿ ತೋರಿಸಿದಂತೆ ಎಲ್ಲಾ ವ್ಯಾಲ್ಯುಗಳನ್ನು ಮತ್ತು ಲೇಬಲ್ ಗಳನ್ನು ಭರ್ತಿ ಮಾಡಿ.
10:33 2 ನೆಯ ರೋ ದಲ್ಲಿ, -10 ಇದು Negative ಬದಲಾವಣೆಯನ್ನು ಸೂಚಿಸುತ್ತದೆ.
10:46 3 ನೆಯ ರೋ ದಲ್ಲಿ, 10 ಇದು Neutral ಎಂದು ಸೂಚಿಸುತ್ತದೆ.
10:59 ಕೊನೆಯದಾಗಿ, 6000 ಇದು Positive ಬದಲಾವಣೆಯನ್ನು ಸೂಚಿಸುತ್ತದೆ.
11:03 ಏಕೆಂದರೆ, ನಮ್ಮ ಮೆಟಾ ಡಾಟಾ ಅನಾಲಿಸಿಸ್ ನ ಗರಿಷ್ಟ ವ್ಯಾಲ್ಯುವು, 6000 ಕ್ಕೆ ಹತ್ತಿರವಾಗಿದೆ.
11:23 ವಿಂಡೋದ ಕೆಳ ಬಲ ಮೂಲೆಯಲ್ಲಿರುವ Apply ಬಟನ್ ಅನ್ನು ಕ್ಲಿಕ್ ಮಾಡಿ , ನಂತರ OK ಬಟನ್ ಅನ್ನು ಕ್ಲಿಕ್ ಮಾಡಿ.
11:30 ಈಗ ನೀವು ಇನ್ನೂ ಸುಧಾರಿತ ದೃಶ್ಯಗಳನ್ನೊಳಗೊಂಡ ಪಾಪ್ಯುಲೇಷನ್ ಡಾಟಾವನ್ನು ಕ್ಯಾನ್ವಾಸ್ ನ ಮೇಲೆ ನೋಡಬಹುದು.
11:37 ಇಲ್ಲಿ ನೀವು ಜನಸಂಖ್ಯಾ ಸಾಂದ್ರತೆಯಲ್ಲಿ, ಋಣಾತ್ಮಕ ಮತ್ತು ಧನಾತ್ಮಕ ಬದಲಾವಣೆಯನ್ನು ಹೊಂದಿದ ಪ್ರದೇಶಗಳನ್ನು ಸ್ಪಷ್ಟವಾಗಿ ನೋಡಬಹುದು.
11:46 ನೀಲಿಬಣ್ಣದಿಂದ ಗುರುತಿಸಲ್ಪಟ್ಟ ಪ್ರದೇಶಗಳು, ಧನಾತ್ಮಕ ಬದಲಾವಣೆಯನ್ನು ಸೂಚಿಸುತ್ತವೆ.
11:52 ಹಸಿರು ಬಣ್ಣದ ಪ್ರದೇಶಗಳು , ಋಣಾತ್ಮಕ ಬದಲಾವಣೆಯನ್ನು ಸೂಚಿಸುತ್ತವೆ.
11:56 ಗುಲಾಬಿ ಬಣ್ಣದಲ್ಲಿರುವ ಪ್ರದೇಶಗಳು ಜನಸಂಖ್ಯೆಯಲ್ಲಿ ಹೆಚ್ಚು ಬದಲಾವಣೆ ಹೊಂದಿರದ ಪ್ರದೇಶಗಳಾಗಿವೆ.
12:02 ಸಂಕ್ಷಿಪ್ತವಾಗಿ,
12:04 ಈ ಟ್ಯುಟೋರಿಯಲ್ ನಲ್ಲಿ ನಾವು, ನಿರಂತರವಾದ raster ಅನ್ನು ಸ್ಟೈಲ್ ಮಾಡುವುದು,

Raster Calculator (ರ್ಯಾಸ್ಟರ್ ಕ್ಯಾಲ್ಕ್ಯುಲೇಟರ್ ) ನಲ್ಲಿ ಸಮೀಕರಣಗಳನ್ನು ಬರೆಯುವುದು ಮತ್ತು raster ನ ಗುಣಲಕ್ಷಣಗಳ ಕುರಿತು ಕಲಿತಿದ್ದೇವೆ.

12:17 ಅಸೈನ್ಮೆಂಟ್ :

Code files ಲಿಂಕ್ ನಲ್ಲಿ ಕೊಟ್ಟಿರುವ ಪಾಪ್ಯುಲೇಷನ್ ಡಾಟಾವನ್ನು ಬಳಸಿ, ಕೇವಲ ಜನಸಂಖ್ಯೆಯ ಋಣಾತ್ಮಕ ಬದಲಾವಣೆಯನ್ನು ತೋರಿಸುವ ಒಂದು ರ್ಯಾಸ್ಟರ್ ಫೈಲ್ ಅನ್ನು ರಚಿಸಿ.

12:28 ಸುಳಿವು: Raster Calculator ಅನ್ನು ಬಳಸಿ, 0 ಗಿಂತ ಕಡಿಮೆ ಇರುವ ಜನಸಂಖ್ಯೆಯ ಬದಲಾವಣೆಯನ್ನು ಆಯ್ಕೆ ಮಾಡಲು ಒಂದು ಸೂತ್ರವನ್ನು ಬರೆದುಕೊಳ್ಳಿ. ’
12:36 ನಿಮ್ಮ ಪೂರ್ಣಗೊಂಡ ಅಸೈನ್ ಮೆಂಟ್ ಈ ರೀತಿಯಾಗಿ ಕಾಣಬೇಕು.
12:41 ಕೆಳಗಿನ ಲಿಂಕ್ನಲ್ಲಿರುವ ವೀಡಿಯೊ ಸ್ಪೋಕನ್ ಟ್ಯುಟೋರಿಯಲ್ ಯೋಜನೆಯನ್ನು ಕುರಿತು ವಿವರಿಸುತ್ತದೆ.

ದಯವಿಟ್ಟು ಅದನ್ನು ಡೌನ್ಲೋಡ್ ಮಾಡಿ ಮತ್ತು ವೀಕ್ಷಿಸಿ.

12:49 ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ತಂಡ, ಕಾರ್ಯಾಗಾರಗಳನ್ನು ನಡೆಸುತ್ತದೆ ಮತ್ತು ನಮ್ಮ ಆನ್ಲೈನ್ ಪರೀಕ್ಷೆಗಳಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರಗಳನ್ನು ನೀಡುತ್ತದೆ.

ವಿವರಗಳಿಗಾಗಿ, ದಯವಿಟ್ಟು ನಮಗೆ ಬರೆಯಿರಿ.

13:00 ನೀವು ಪ್ರಶ್ನೆಯನ್ನು ಹೊಂದಿರುವ ನಿಮಿಷ ಮತ್ತು ಸೆಕೆಂಡ್ ಅನ್ನು ಆರಿಸಿ.

ನಿಮ್ಮ ಪ್ರಶ್ನೆಯನ್ನು ಸಂಕ್ಷಿಪ್ತವಾಗಿ ವಿವರಿಸಿ.

13:04 ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ಗೆ NMEICT, MHRD, ಭಾರತ ಸರ್ಕಾರ ಧನಸಹಾಯ ನೀಡುತ್ತದೆ.

ಹೆಚ್ಚಿನ ವಿವರಗಳಿಗಾಗಿ, ಇಲ್ಲಿ ತೋರಿಸಿರುವ ಲಿಂಕ್ಗೆ ಭೇಟಿ ನೀಡಿ.

13:16 ಅನುವಾದ ಮತ್ತು ಧ್ವನಿ ಶ್ರೀ ನವೀನ ಭಟ್ಟ ಉಪ್ಪಿನಪಟ್ಟಣ. ಧನ್ಯವಾದಗಳು.

Contributors and Content Editors

NaveenBhat