QGIS/C2/Geometric-Properties-of-Vectors/Kannada
Time | Narration |
00:01 | Geometric Properties of Vectors (ಜೊಮೆಟ್ರಿಕ್ ಪ್ರಾಪರ್ಟಿಸ್ ಆಫ್ ವೆಕ್ಟರ್ಸ್) ಎಂಬ ಟ್ಯುಟೋರಿಯಲ್ ಗೆ ಸ್ವಾಗತ. |
00:06 | ಈ ಟ್ಯುಟೋರಿಯಲ್ ನಲ್ಲಿ ನಾವು,
ಮ್ಯಾಪ್ ನಲ್ಲಿ, attribute table ನಿಂದ ಆಯ್ಕೆ ಮಾಡಿದ ಫೀಚರ್ ಗಳನ್ನು ತೋರಿಸುವುದು, |
00:14 | attribute table ಗೆ ಕಾಲಮ್ ಗಳನ್ನು ಸೇರಿಸುವುದು, |
00:18 | attributes ಗಳಿಗೆ ಅಂಕಿಅಂಶಗಳನ್ನು ಲೆಕ್ಕಹಾಕುವುದು – ಇವುಗಳ ಕುರಿತು ಕಲಿಯುವೆವು. |
00:22 | ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು ನಾನು,
Ubuntu Linux ಒ.ಎಸ್ 16.04 ಆವೃತ್ತಿ , QGIS ನ 2.18 ಆವೃತ್ತಿಯನ್ನು ಬಳಸಿದ್ದೇನೆ. |
00:34 | ಈ ಟ್ಯುಟೊರಿಯಲ್ ಅನ್ನು ಕಲಿಯಲು ನೀವು QGIS ಇಂಟರ್ಫೇಸ್ ನ ಕುರಿತು ಕಲಿತಿರಬೇಕು. |
00:41 | ಇಲ್ಲವಾದಲ್ಲಿ ಸಂಬಂಧಿತ ಟ್ಯುಟೋರಿಯಲ್ ಗಾಗಿ, ನಮ್ಮ ವೆಬ್ಸೈಟ್ ಅನ್ನು ಭೇಟಿ ಮಾಡಿ. |
00:46 | ಈ ಟ್ಯುಟೋರಿಯಲ್ ಅನ್ನು ಅಭ್ಯಾಸ ಮಾಡಲು, ನೀವು ಈ ಪ್ಲೇಯರ್ ನ ಕೆಳಗಡೆ ಇರುವ Code files ಲಿಂಕ್ನಲ್ಲಿರುವ, ಫೋಲ್ಡರ್ ಅನ್ನು ಡೌನ್ಲೋಡ್ ಮಾಡಿಕೊಳ್ಳಬೇಕು. |
00:56 | ಡೌನ್ಲೋಡ್ ಮಾಡಿಕೊಂಡಿರುವ ಝಿಪ್ ಫೈಲ್ ನಿಂದ, ಕಂಟೆಂಟ್ ಗಳನ್ನು ಎಕ್ಸ್ಟ್ರ್ಯಾಕ್ಟ್ ಮಾಡಿಕೊಳ್ಳಿ. |
01:00 | ಎಕ್ಸ್ಟ್ರ್ಯಾಕ್ಟ್ ಮಾಡಿದ ಫೋಲ್ಡರ್ ನಿಂದ IND_rails.shp ಫೈಲ್ ಅನ್ನು ಹುಡುಕಿ. |
01:08 | ನಾನು ಈಗಾಗಲೇ code file ಅನ್ನು ಡೌನ್ಲೋಡ್ ಮಾಡಿ, ಎಕ್ಸ್ಟ್ರ್ಯಾಕ್ಟ್ ಮಾಡಿ, Desktop ನಲ್ಲಿ ಸೇವ್ ಮಾಡಿದ್ದೇನೆ. |
01:15 | ನಾನು Code files ಫೋಲ್ಡರ್ ನ ಮೇಲೆ ಡಬಲ್ ಕ್ಲಿಕ್ ಮಾಡಿ, ಅದರ ಕಂಟೆಂಟ್ ಗಳನ್ನು ನೋಡುವೆನು. |
01:21 | IND_rails.shp ಫೈಲ್ ನ ಮೇಲೆ ಡಬಲ್ ಕ್ಲಿಕ್ ಮಾಡಿ. |
01:27 | ಕಂಟೆಕ್ಸ್ಟ್ ಮೆನ್ಯುವಿನಿಂದ, Open with QGIS Desktop ಆಯ್ಕೆಯನ್ನು ಆರಿಸಿ. |
01:35 | QGIS ತೆರೆದುಕೊಳ್ಳುತ್ತದೆ. |
01:38 | QGIS tips ಡಯಲಾಗ್ ಬಾಕ್ಸ್ ಅನ್ನು ಕ್ಲೋಸ್ ಮಾಡಲು OK ಬಟನ್ ಅನ್ನು ಕ್ಲಿಕ್ ಮಾಡಿ. |
01:44 | ಕ್ಯಾನ್ವಾಸ್ ನ ಮೇಲೆ ರೈಲ್ವೇ ರೋಡ್ ಲೈನ್ ಅನ್ನು ಪ್ರತಿನಿಧಿಸುವ ಇಂಡಿಯಾ ಮ್ಯಾಪ್ ಅನ್ನು ತೋರಿಸುತ್ತದೆ. |
01:51 | ಕಾರ್ಯನಿರ್ವಹಿಸುತ್ತಿರುವ ರೈಲು ರೋಡ್ ಲೈನ್ ನ ಉದ್ದವನ್ನು ನಾವು ಲೆಕ್ಕ ಹಾಕುತ್ತೇವೆ. |
01:57 | ಈ ಮಾಹಿತಿಯನ್ನು ನೋಡಲು, ನಾವು attribute table ಅನ್ನು ತೆರೆಯಬೇಕು. |
02:02 | Layers Panel ನಲ್ಲಿ, IND_rails layer ನ ಮೇಲೆ ರೈಟ್ ಕ್ಲಿಕ್ ಮಾಡಿ. |
02:09 | context menu ವಿನಿಂದ, Open Attribute Table ಆಯ್ಕೆಯನ್ನು ಆರಿಸಿ. |
02:14 | Attribute table ತೆರೆದುಕೊಳ್ಳುತ್ತದೆ. |
02:17 | ಈ ಟೇಬಲ್ EXS_DESCRI ಎಂಬ attribute ಅನ್ನು ಹೊಂದಿದೆ. |
02:25 | ಕಾರ್ಯನಿರ್ವಹಿಸುತ್ತಿರುವ ಫೀಚರ್ ಗಳನ್ನು ಆಯ್ಕೆ ಮಾಡಲು ನಾವು ಈ attribute ನ ವ್ಯಾಲ್ಯುವನ್ನು ಬಳಸಬಹುದು. |
02:31 | ಈ ಕಾಲಮ್ ನಿರ್ದಿಷ್ಟ ರೈಲ್ವೆ ಮಾರ್ಗದ ಸ್ಥಿತಿಯನ್ನು ತೋರಿಸುತ್ತದೆ. |
02:36 | ಇವುಗಳನ್ನು, Operational, Unexamined ಅಥವಾ Unsurveyed ಮತ್ತು not Usable ಎಂದು ವರ್ಗೀಕರಿಸಲಾಗಿದೆ. |
02:48 | ನಾವು ಕಾರ್ಯನಿರ್ವಹಿಸುತ್ತಿರುವ (ಆಪರೇಷನಲ್) ಲೈನ್ ಗಳನ್ನು ಆಯ್ಕೆ ಮಾಡಿಕೊಳ್ಳಬೇಕು. |
02:52 | attribute ಟೇಬಲ್ ವಿಂಡೋ ದಲ್ಲಿ,
ಟೂಲ್ ಬಾರ್ ನಲ್ಲಿ, Select features using an expression ಟೂಲ್ ಅನ್ನು ಕ್ಲಿಕ್ ಮಾಡಿ. |
03:00 | Select By Expression ಎಂಬ ಹೊಸ ಡಯಲಾಗ್ ಬಾಕ್ಸ್ ತೆರೆದುಕೊಳ್ಳುತ್ತದೆ. |
03:05 | Function Editor ಪ್ಯಾನಲ್ ನಲ್ಲಿ, Fields and Values ಆಯ್ಕೆಯ ಮುಂದಿರುವ ಕಪ್ಪು ತ್ರಿಕೋನದ ಮೇಲೆ ಕ್ಲಿಕ್ ಮಾಡಿ. |
03:13 | ಪಟ್ಟಿಯಿಂದ EXS_DESCRI attribute ಆಯ್ಕೆಯನ್ನು ಆರಿಸಿ. |
03:21 | ಇದನ್ನು ಡಬಲ್ ಕ್ಲಿಕ್ ಮಾಡಿ ಮತ್ತು ಅದನ್ನು Expression ಟೆಕ್ಸ್ಟ್ ಏರಿಯಾ ಕ್ಕೆ ಸೇರಿಸಿ. |
03:26 | ಸಮೀಕರಣವನ್ನು
"EXS_DESCRI" equal to, ಸಿಂಗಲ್ ಕೋಟ್ ನಲ್ಲಿ Operational ಎಂದು ಟೈಪ್ ಮಾಡಿ, ಪೂರ್ಣಗೊಳಿಸಿ. |
03:37 | ದಯವಿಟ್ಟು ಗಮನದಲ್ಲಿಡಿ, ಇಲ್ಲಿಯ ಸಿಂಟ್ಯಾಕ್ಸ್ ಕೇಸ್ ಸೆನ್ಸಿಟಿವ್ ಆಗಿದೆ. |
03:42 | ಎಲ್ಲ ಶಬ್ದಗಳನ್ನು ಅವು attribute table ನಲ್ಲಿರುವಂತೆಯೇ ಟೈಪ್ ಮಾಡಿ. |
03:47 | ಇಲ್ಲಿ Operational ಶಬ್ದದಲ್ಲಿ “O” ಅಕ್ಷರವು ಕ್ಯಾಪಿಟಲ್ ಆಗಿದೆ. |
03:52 | ಟೇಬಲ್ ನ ಕೆಳಗಡೆ, ಮೊದಲು Select ಬಟನ್ ಅನ್ನೂ, ನಂತರ Close ಬಟನ್ ಅನ್ನೂ ಕ್ಲಿಕ್ ಮಾಡಿ. |
03:59 | attribute table ನಲ್ಲಿ Operational category ಗಳನ್ನು ಆಯ್ಕೆ ಮಾಡಲಾಗಿದೆ. |
04:04 | attribute table ಅನ್ನು ಕ್ಲೋಸ್ ಮಾಡಿ. |
04:07 | ಮ್ಯಾಪ್ ನಲ್ಲಿ Operational category ಯಲ್ಲಿ ಎಲ್ಲ ರೈಲ್ವೆ ಲೈನ್ ಗಳು ಆಯ್ಕೆಯಾಗಿರುವುದನ್ನು ನೀವು ನೋಡಬಹುದು. |
04:14 | ಈ ಲೈನ್ ಗಳು ಹಳದಿ ಬಣ್ಣದಲ್ಲಿ ಕಾಣಿಸುತ್ತಿವೆ. |
04:17 | ಈಗ ನಮ್ಮ ಆಯ್ಕೆಯನ್ನು ಹೊಸ shapefile ನಲ್ಲಿ ಸೇವ್ ಮಾಡೋಣ. |
04:22 | IND_rail layer ಅನ್ನು ರೈಟ್ ಕ್ಲಿಕ್ ಮಾಡಿ ಮತ್ತು Save As.... ಆಯ್ಕೆಯನ್ನು ಕ್ಲಿಕ್ ಮಾಡಿ. |
04:31 | Save Vector Layer as ….. ಡಯಲಾಗ್ ಬಾಕ್ಸ್ ತೆರೆದುಕೊಳ್ಳುತ್ತದೆ. |
04:35 | File name ಫೀಲ್ಡ್ ನ ಮುಂದೆ ಇರುವ, Browse ಬಟನ್ ಅನ್ನು ಕ್ಲಿಕ್ ಮಾಡಿ. |
04:40 | Save Layer As... ಡಯಲಾಗ್ ಬಾಕ್ಸ್ ತೆರೆದುಕೊಳ್ಳುತ್ತದೆ. |
04:44 | ಔಟ್ ಪುಟ್ ಫೈಲ್ ಅನ್ನು railway.shp ಎಂದು ಹೆಸರಿಸಿ. |
04:49 | ಲೋಕೇಶನ್ ಅನ್ನುಆಯ್ಕೆ ಮಾಡಿಕೊಳ್ಳಿ, ನಾನು Desktop ಅನ್ನು ಆಯ್ಕೆ ಮಾಡುವೆನು.
Save ಬಟನ್ ಅನ್ನು ಕ್ಲಿಕ್ ಮಾಡಿ. |
04:57 | ಈಗ ಈ ಲೇಯರ್ ಗೆ CRS ಅನ್ನು ಆಯ್ಕೆ ಮಾಡೋಣ.
Select CRS ಬಟನ್ ಅನ್ನು ಕ್ಲಿಕ್ ಮಾಡಿ. |
05:04 | Coordinate Reference System Selector (ಕೋ-ಆರ್ಡಿನೇಟ್ ರೆಫರೆನ್ಸ್ ಸಿಸ್ಟಮ್ ಸೆಲೆಕ್ಟರ್) ಡಯಲಾಗ್ ಬಾಕ್ಸ್ ತೆರೆದುಕೊಳ್ಳುತ್ತದೆ. |
05:09 | ನಾವು ಇದರ ಉದ್ದವನ್ನು ಲೆಕ್ಕ ಹಾಕಲು ಇಷ್ಟಪಡುವುದರಿಂದ, equidistance projection (ಇಕ್ವಿಡಿಸ್ಟೆನ್ಸ್ ಪ್ರೊಜೆಕ್ಷನ್) ಅನ್ನು ಆಯ್ಕೆ ಮಾಡೋಣ. |
05:16 | Filter ಸರ್ಚ್ ಬಾಕ್ಸ್ ನಲ್ಲಿ, Indian 1975 ಎಂದು ಟೈಪ್ ಮಾಡಿ. |
05:22 | ಪ್ರಪಂಚದ Coordinate Reference Systems (ಕೋ-ಆರ್ಡಿನೇಟ್ ರೆಫರೆನ್ಸ್ ಸಿಸ್ಟಮ್ಸ್) ನಡಿಯಲ್ಲಿ, Geographic Coordinate Systems (ಜಿಯೋಗ್ರಾಫಿಕ್ ಕೋ-ಆರ್ಡಿನೇಟ್ ಸಿಸ್ಟಮ್ಸ್) ವಿಭಾಗದಲ್ಲಿ Indian 1975 EPSG:4240 ಅನ್ನು ಆಯ್ಕೆ ಮಾಡಿ. |
05:36 | OK ಬಟನ್ ಅನ್ನು ಕ್ಲಿಕ್ ಮಾಡಿ. |
05:39 | Save vector layer as... ಡಯಲಾಗ್ ಬಾಕ್ಸ್ ನಲ್ಲಿ, ಡಿಫಾಲ್ಟ್ ಆಗಿ, Add saved file to map ಆಯ್ಕೆಯೂ ಈಗಾಗಲೇ ಚೆಕ್ ಆಗಿರುತ್ತದೆ. |
05:48 | Save only selected features ಚೆಕ್ ಬಾಕ್ಸ್ ಅನ್ನು ಚೆಕ್ ಮಾಡಿ. |
05:53 | OK ಬಟನ್ ಅನ್ನು ಕ್ಲಿಕ್ ಮಾಡಿ. |
05:56 | ಒಮ್ಮೆ ಎಕ್ಸ್ಪೋರ್ಟ್ ಕ್ರಿಯೆಯು ಪೂರ್ಣಗೊಂಡರೆ, ನೀವು Layers Panel ನಲ್ಲಿ railway ಎಂಬ ಹೊಸ ಲೇಯರ್ ಸೇರಿರುವದನ್ನು ನೋಡಬಹುದು. |
06:04 | Layers Panel ಪ್ಯಾನಲ್ ನಲ್ಲಿ, IND_rail ಲೇಯರ್ ನ ಮುಂದೆ ಇರುವ ಬಾಕ್ಸ್ ಅನ್ನು ಅನ್ಚೆಕ್ ಮಾಡಬಹುದು, ಏಕೆಂದರೆ ಮುಂದೆ ಇದು ನಮಗೆ ಬೇಕಾಗಿಲ್ಲ, ಹಾಗಾಗಿ ಅದನ್ನು ಟರ್ನ್ ಆಫ್ ಮಾಡೋಣ. |
06:15 | ಕ್ಯಾನ್ವಾಸ್ ನ ಮೇಲೆ, ಕಾರ್ಯನಿರ್ವಹಿಸುತ್ತಿರುವ ರೈಲ್ವೆ ಲೈನ್ ಗಳನ್ನು ಇಂಡಿಯಾ ಮ್ಯಾಪ್ ನ ಮೇಲೆ ನೋಡಬಹುದು. |
06:22 | railway ಲೇಯರ್ ಅನ್ನು ರೈಟ್ ಕ್ಲಿಕ್ ಮಾಡಿ, Open Attribute Table ಅನ್ನು ಆಯ್ಕೆ ಮಾಡಿ. |
06:29 | ಈಗ ಪ್ರತಿ ಫೀಚರ್ ನ ಉದ್ದವನ್ನು ಒಳಗೊಂಡಿರುವ ಒಂದು ಕಾಲಮ್ ಅನ್ನು ಸೇರಿಸೋಣ. |
06:34 | ಟೂಲ್ ಬಾರ್ ನಲ್ಲಿರುವ Toggle editing ಟೂಲ್ ಅನ್ನು ಕ್ಲಿಕ್ ಮಾಡಿ, ಲೇಯರ್ ಅನ್ನು ಎಡಿಟಿಂಗ್ ಮೋಡ್ ನಲ್ಲಿಡಿ. |
06:41 | ನಂತರ ಟೂಲ್ ಬಾರ್ ನ ಬಲ ಮೂಲೆಯಲ್ಲಿರುವ , Open field calculator (ಓಪನ್ ಫೀಲ್ಡ್ ಕ್ಯಾಲ್ಕ್ಯುಲೇಟರ್) ಬಟನ್ ಅನ್ನು ಕ್ಲಿಕ್ ಮಾಡಿ. |
06:49 | Field Calculator ಡಯಲಾಗ್ ಬಾಕ್ಸ್ ನಲ್ಲಿ, Create a new field check box ಅನ್ನು ಚೆಕ್ ಮಾಡಿ. |
06:55 | Output field name ಟೆಕ್ಸ್ಟ್ ಬಾಕ್ಸ್ ನಲ್ಲಿ, length ಹೈಫನ್ km ಎಂದು ಟೈಪ್ ಮಾಡಿ. |
07:02 | Output field type ಅನ್ನು Decimal number (real) ಎಂದು ಆಯ್ಕೆ ಮಾಡಿ. |
07:07 | ಔಟ್ಪುಟ್ Precision ಅನ್ನು 2 ಎಂದು ಬದಲಿಸಿ. |
07:10 | Function editor panel ಪ್ಯಾನಲ್ ನಲ್ಲಿ, Geometry ಯ ಮುಂದಿರುವ ತ್ರಿಕೋನವನ್ನು ಕ್ಲಿಕ್ ಮಾಡಿ ಮತ್ತು $length ಎಂದು ಆಯ್ಕೆ ಮಾಡಿ. |
07:20 | $length ಅನ್ನು Expression ಟೆಕ್ಸ್ಟ್ ಬಾಕ್ಸ್ ಗೆ ಸೇರಿಸಲು, ಅದನ್ನು ಡಬಲ್ ಕ್ಲಿಕ್ ಮಾಡಿ. |
07:26 | ಸಮೀಕರಣವನ್ನು $length ಭಾಗಿಸು 1000 ಎಂದು ಪೂರ್ಣಗೊಳಿಸಬೇಕು. |
07:32 | ಅದಕ್ಕಾಗಿ, ಟೆಕ್ಸ್ಟ್ ವಿಂಡೋದ ಮೇಲ್ಭಾಗದಲ್ಲಿರುವ Division Operator ಬಟನ್ ಅನ್ನು ಕ್ಲಿಕ್ ಮಾಡಿ. |
07:37 | ಕೀಬೋರ್ಡ್ ನಲ್ಲಿ 1000 ಎಂದು ಟೈಪ್ ಮಾಡಿ. |
07:40 | ನಾವು ಔಟ್ ಪುಟ್ ಉದ್ದ(ಲೆಂಥ್) ಅನ್ನು 1000 ದಿಂದ ಭಾಗಿಸಬೇಕು, ಏಕೆಂದರೆ,
railway ಲೇಯರ್ CRS ಇದು ಮೀಟರ್ ನಲ್ಲಿದೆ ಮತ್ತು ನಮಗೆ ಔಟ್ಪುಟ್ ಕಿಲೋಮೀಟರ್ ಗಳಲ್ಲಿ ಬೇಕು. |
07:52 | OK ಬಟನ್ ಅನ್ನು ಕ್ಲಿಕ್ ಮಾಡಿ. |
07:55 | ಎಡಿಟಿಂಗ್ ಅನ್ನು ನಿಲ್ಲಿಸಲು, Toggle editing ಟೂಲ್ ಅನ್ನು ಕ್ಲಿಕ್ ಮಾಡಿ. |
08:00 | Stop editing ಡಯಲಾಗ್ ಬಾಕ್ಸ್ ನಲ್ಲಿ, Save ಬಟನ್ ಅನ್ನು ಕ್ಲಿಕ್ ಮಾಡಿ, attribute table ನಲ್ಲಿ ಮಾಡಿದ ಬದಲಾವಣೆಗಳನ್ನು ಸೇವ್ ಮಾಡಿ. |
08:07 | attribute table ಗೆ ಹಿಂದಿರುಗಿ, ಇಲ್ಲಿ Length ಹೈಫನ್ km ಎಂಬ ಹೊಸ ಕಾಲಮ್ ಸೇರ್ಪಡೆಯಾಗಿದೆ. |
08:15 | ಈಗ ನಾವು Railway layer ನ ಪ್ರತಿಯೊಂದು ಲೈನ್ ನ ಉದ್ದವನ್ನು ಹೊಂದಿದ್ದೇವೆ. |
08:20 | ನಾವು ಇದನ್ನೆಲ್ಲ ಒಟ್ಟಿಗೆ ಕೂಡಿಸಿ, ಒಟ್ಟೂ ಉದ್ದವನ್ನು ಕಂಡುಹಿಡಿಯಬಹುದು. |
08:25 | attribute table ಅನ್ನು ಕ್ಲೋಸ್ ಮಾಡಿ. |
08:28 | ಮೆನ್ಯು ಬಾರ್ ನಲ್ಲಿ Vector ಮೆನ್ಯುವನ್ನು ಕ್ಲಿಕ್ ಮಾಡಿ.
Analysis Tools ಆಯ್ಕೆಯನ್ನು ಕ್ಲಿಕ್ ಮಾಡಿ. |
08:36 | ಸಬ್ – ಮೆನ್ಯುವಿನಿಂದ, Basic Statistics for numeric tools ಅನ್ನು ಕ್ಲಿಕ್ ಮಾಡಿ. |
08:42 | ಒಂದು ಡಯಲಾಗ್ ಬಾಕ್ಸ್ ತೆರೆದುಕೊಳ್ಳುತ್ತದೆ. |
08:45 | Input vector layer ಅನ್ನು railway ಎಂದು ಆಯ್ಕೆ ಮಾಡಿ. |
08:50 | Field to calculate statistics on ಅನ್ನು length ಹೈಫನ್ km ಎಂದು ಆಯ್ಕೆ ಮಾಡಿ. |
08:57 | ಡಯಲಾಗ್ ಬಾಕ್ಸ್ ನ ಕೆಳ ಬಲ ಮೂಲೆಯಲ್ಲಿರುವ Run ಬಟನ್ ಅನ್ನು ಕ್ಲಿಕ್ ಮಾಡಿ. |
09:03 | Results ವಿಂಡೋ ತೆರೆದುಕೊಳ್ಳುತ್ತದೆ. |
09:06 | ಇಲ್ಲಿ ನೀವು ಹಲವಾರು ಅಂಕಿಅಂಶಗಳ ಫಲಿತಾಂಶವನ್ನು ನೋಡಬಹುದು. |
09:11 | ಇಲ್ಲಿ ತೋರಿಸಿರುವ Sum value ಇದು ರೈಲ್ವೆ ರೋಡ್ ನ ಒಟ್ಟೂ ಉದ್ದವಾಗಿದೆ. |
09:16 | ಗಮನಿಸಿ, ನೀವು ಬೇರೆ projection ಅನ್ನು ಆಯ್ಕೆ ಮಾಡಿದ್ದರೆ, ಉತ್ತರದಲ್ಲಿ ಕೊಂಚ ಬದಲಾವಣೆ ಇರಬಹುದು. |
09:23 | ಸಾಮಾನ್ಯವಾಗಿ, ರೋಡ್ ಲೈನ್ ಗಳು ಅಥವಾ ಇನ್ಯಾವುದೇ ಲೀನಿಯರ್ ಉದ್ದವನ್ನು ನೆಲದ ಮೇಲೆ ಅಳತೆ ಮಾಡಲಾಗುತ್ತದೆ. |
09:30 | ಈ ವ್ಯಾಲ್ಯುಗಳು ಡಾಟಾಸೆಟ್ ಗೆ ಅಟ್ರಿಬ್ಯೂಟ್ಸ್ ಗಳಾಗಿ ಕೊಡಲ್ಪಟ್ಟಿವೆ. |
09:35 | ಮೇಲೆ ತೋರಿಸಿರುವ ನಿದರ್ಶನವು, ಅಂತಹ ಅಟ್ರಿಬ್ಯೂಟ್ ಗಳ ಗೈರು ಹಾಜರಿಯಲ್ಲಿ ಕಾರ್ಯನಿರ್ವಹಿಸುತ್ತದೆ. ಮತ್ತು ಇದು ನಿಜವಾದ ಲೈನ್ ಗಳ ಉದ್ದಕ್ಕೆ ಅಂದಾಜು ವ್ಯಾಲ್ಯುವಾಗಿದೆ. |
09:46 | ಸಂಕ್ಷಿಪ್ತವಾಗಿ ,
ಈ ಟ್ಯುಟೋರಿಯಲ್ ನಲ್ಲಿ ನಾವು, |
09:51 | ಮ್ಯಾಪ್ ನಲ್ಲಿ, attribute table ನಿಂದ ಆಯ್ಕೆ ಮಾಡಿದ ಫೀಚರ್ ಗಳನ್ನು ತೋರಿಸುವುದು,
attribute table ಗೆ ಕಾಲಮ್ ಗಳನ್ನು ಸೇರಿಸುವುದು, attributes ಗಳಿಗೆ ಅಂಕಿಅಂಶಗಳನ್ನು ಲೆಕ್ಕಹಾಕುವುದು – ಇವುಗಳ ಕುರಿತು ಕಲಿತಿದ್ದೇವೆ. |
10:04 | ಅಸೈನ್ಮೆಂಟ್ :
Code files ಲಿಂಕ್ ನಿಂದ ಡೌನ್ಲೋಡ್ ಮಾಡಿದ world_1.shp ಫೈಲ್ ಅನ್ನು ಬಳಸಿ, |
10:14 | ಬೇರೆ ಬೇರೆ ದೇಶಗಳ ವಿಸ್ತೀರ್ಣವನ್ನು ಚದರ ಕಿಲೋ ಮೀಟರ್ (ಸ್ಕ್ವೇರ್ ಕಿಲೋಮೀಟರ್) ಗಳಲ್ಲಿ ಕಂಡುಹಿಡಿಯಿರಿ. |
10:20 | ನಿಮ್ಮ ಪೂರ್ಣಗೊಂಡ ಅಸೈನ್ಮೆಂಟ್ ಇಲ್ಲಿ ತೋರಿಸಿರುವಂತೆ ಕಾಣಬೇಕು. |
10:26 | ಕೆಳಗಿನ ಲಿಂಕ್ನಲ್ಲಿರುವ ವೀಡಿಯೊ ಸ್ಪೋಕನ್ ಟ್ಯುಟೋರಿಯಲ್ ಯೋಜನೆಯನ್ನು ಕುರಿತು ವಿವರಿಸುತ್ತದೆ.
ದಯವಿಟ್ಟು ಅದನ್ನು ಡೌನ್ಲೋಡ್ ಮಾಡಿ ಮತ್ತು ವೀಕ್ಷಿಸಿ. |
10:34 | ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ತಂಡ, ಕಾರ್ಯಾಗಾರಗಳನ್ನು ನಡೆಸುತ್ತದೆ ಮತ್ತು ನಮ್ಮ ಆನ್ಲೈನ್ ಪರೀಕ್ಷೆಗಳಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರಗಳನ್ನು ನೀಡುತ್ತದೆ. |
10:41 | ವಿವರಗಳಿಗಾಗಿ, ದಯವಿಟ್ಟು ನಮಗೆ ಬರೆಯಿರಿ. |
10:45 | ನೀವು ಪ್ರಶ್ನೆಯನ್ನು ಹೊಂದಿರುವ ನಿಮಿಷ ಮತ್ತು ಸೆಕೆಂಡ್ ಅನ್ನು ಆರಿಸಿ.
ನಿಮ್ಮ ಪ್ರಶ್ನೆಯನ್ನು ಸಂಕ್ಷಿಪ್ತವಾಗಿ ವಿವರಿಸಿ. |
10:49 | ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ಗೆ NMEICT, MHRD, ಭಾರತ ಸರ್ಕಾರ ಧನಸಹಾಯ ನೀಡುತ್ತದೆ.
ಹೆಚ್ಚಿನ ವಿವರಗಳಿಗಾಗಿ, ಇಲ್ಲಿ ತೋರಿಸಿರುವ ಲಿಂಕ್ಗೆ ಭೇಟಿ ನೀಡಿ. |
11:01 | ಅನುವಾದ ಮತ್ತು ಧ್ವನಿ ಶ್ರೀ ನವೀನ ಭಟ್ಟ ಉಪ್ಪಿನಪಟ್ಟಣ. ಧನ್ಯವಾದಗಳು. |