QGIS/C2/Geometric-Properties-of-Vectors/Kannada

From Script | Spoken-Tutorial
Revision as of 22:15, 10 December 2020 by NaveenBhat (Talk | contribs)

(diff) ← Older revision | Latest revision (diff) | Newer revision → (diff)
Jump to: navigation, search
Time Narration
00:01 Geometric Properties of Vectors (ಜೊಮೆಟ್ರಿಕ್ ಪ್ರಾಪರ್ಟಿಸ್ ಆಫ್ ವೆಕ್ಟರ್ಸ್) ಎಂಬ ಟ್ಯುಟೋರಿಯಲ್ ಗೆ ಸ್ವಾಗತ.
00:06 ಈ ಟ್ಯುಟೋರಿಯಲ್ ನಲ್ಲಿ ನಾವು,

ಮ್ಯಾಪ್ ನಲ್ಲಿ, attribute table ನಿಂದ ಆಯ್ಕೆ ಮಾಡಿದ ಫೀಚರ್ ಗಳನ್ನು ತೋರಿಸುವುದು,

00:14 attribute table ಗೆ ಕಾಲಮ್ ಗಳನ್ನು ಸೇರಿಸುವುದು,
00:18 attributes ಗಳಿಗೆ ಅಂಕಿಅಂಶಗಳನ್ನು ಲೆಕ್ಕಹಾಕುವುದು – ಇವುಗಳ ಕುರಿತು ಕಲಿಯುವೆವು.
00:22 ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು ನಾನು,

Ubuntu Linux ಒ.ಎಸ್ 16.04 ಆವೃತ್ತಿ , QGIS ನ 2.18 ಆವೃತ್ತಿಯನ್ನು ಬಳಸಿದ್ದೇನೆ.

00:34 ಈ ಟ್ಯುಟೊರಿಯಲ್ ಅನ್ನು ಕಲಿಯಲು ನೀವು QGIS ಇಂಟರ್ಫೇಸ್ ನ ಕುರಿತು ಕಲಿತಿರಬೇಕು.
00:41 ಇಲ್ಲವಾದಲ್ಲಿ ಸಂಬಂಧಿತ ಟ್ಯುಟೋರಿಯಲ್ ಗಾಗಿ, ನಮ್ಮ ವೆಬ್ಸೈಟ್ ಅನ್ನು ಭೇಟಿ ಮಾಡಿ.
00:46 ಈ ಟ್ಯುಟೋರಿಯಲ್ ಅನ್ನು ಅಭ್ಯಾಸ ಮಾಡಲು, ನೀವು ಈ ಪ್ಲೇಯರ್ ನ ಕೆಳಗಡೆ ಇರುವ Code files ಲಿಂಕ್ನಲ್ಲಿರುವ, ಫೋಲ್ಡರ್ ಅನ್ನು ಡೌನ್ಲೋಡ್ ಮಾಡಿಕೊಳ್ಳಬೇಕು.
00:56 ಡೌನ್ಲೋಡ್ ಮಾಡಿಕೊಂಡಿರುವ ಝಿಪ್ ಫೈಲ್ ನಿಂದ, ಕಂಟೆಂಟ್ ಗಳನ್ನು ಎಕ್ಸ್ಟ್ರ್ಯಾಕ್ಟ್ ಮಾಡಿಕೊಳ್ಳಿ.
01:00 ಎಕ್ಸ್ಟ್ರ್ಯಾಕ್ಟ್ ಮಾಡಿದ ಫೋಲ್ಡರ್ ನಿಂದ IND_rails.shp ಫೈಲ್ ಅನ್ನು ಹುಡುಕಿ.
01:08 ನಾನು ಈಗಾಗಲೇ code file ಅನ್ನು ಡೌನ್ಲೋಡ್ ಮಾಡಿ, ಎಕ್ಸ್ಟ್ರ್ಯಾಕ್ಟ್ ಮಾಡಿ, Desktop ನಲ್ಲಿ ಸೇವ್ ಮಾಡಿದ್ದೇನೆ.
01:15 ನಾನು Code files ಫೋಲ್ಡರ್ ನ ಮೇಲೆ ಡಬಲ್ ಕ್ಲಿಕ್ ಮಾಡಿ, ಅದರ ಕಂಟೆಂಟ್ ಗಳನ್ನು ನೋಡುವೆನು.
01:21 IND_rails.shp ಫೈಲ್ ನ ಮೇಲೆ ಡಬಲ್ ಕ್ಲಿಕ್ ಮಾಡಿ.
01:27 ಕಂಟೆಕ್ಸ್ಟ್ ಮೆನ್ಯುವಿನಿಂದ, Open with QGIS Desktop ಆಯ್ಕೆಯನ್ನು ಆರಿಸಿ.
01:35 QGIS ತೆರೆದುಕೊಳ್ಳುತ್ತದೆ.
01:38 QGIS tips ಡಯಲಾಗ್ ಬಾಕ್ಸ್ ಅನ್ನು ಕ್ಲೋಸ್ ಮಾಡಲು OK ಬಟನ್ ಅನ್ನು ಕ್ಲಿಕ್ ಮಾಡಿ.
01:44 ಕ್ಯಾನ್ವಾಸ್ ನ ಮೇಲೆ ರೈಲ್ವೇ ರೋಡ್ ಲೈನ್ ಅನ್ನು ಪ್ರತಿನಿಧಿಸುವ ಇಂಡಿಯಾ ಮ್ಯಾಪ್ ಅನ್ನು ತೋರಿಸುತ್ತದೆ.
01:51 ಕಾರ್ಯನಿರ್ವಹಿಸುತ್ತಿರುವ ರೈಲು ರೋಡ್ ಲೈನ್ ನ ಉದ್ದವನ್ನು ನಾವು ಲೆಕ್ಕ ಹಾಕುತ್ತೇವೆ.
01:57 ಈ ಮಾಹಿತಿಯನ್ನು ನೋಡಲು, ನಾವು attribute table ಅನ್ನು ತೆರೆಯಬೇಕು.
02:02 Layers Panel ನಲ್ಲಿ, IND_rails layer ನ ಮೇಲೆ ರೈಟ್ ಕ್ಲಿಕ್ ಮಾಡಿ.
02:09 context menu ವಿನಿಂದ, Open Attribute Table ಆಯ್ಕೆಯನ್ನು ಆರಿಸಿ.
02:14 Attribute table ತೆರೆದುಕೊಳ್ಳುತ್ತದೆ.
02:17 ಈ ಟೇಬಲ್ EXS_DESCRI ಎಂಬ attribute ಅನ್ನು ಹೊಂದಿದೆ.
02:25 ಕಾರ್ಯನಿರ್ವಹಿಸುತ್ತಿರುವ ಫೀಚರ್ ಗಳನ್ನು ಆಯ್ಕೆ ಮಾಡಲು ನಾವು ಈ attribute ನ ವ್ಯಾಲ್ಯುವನ್ನು ಬಳಸಬಹುದು.
02:31 ಈ ಕಾಲಮ್ ನಿರ್ದಿಷ್ಟ ರೈಲ್ವೆ ಮಾರ್ಗದ ಸ್ಥಿತಿಯನ್ನು ತೋರಿಸುತ್ತದೆ.
02:36 ಇವುಗಳನ್ನು, Operational, Unexamined ಅಥವಾ Unsurveyed ಮತ್ತು not Usable ಎಂದು ವರ್ಗೀಕರಿಸಲಾಗಿದೆ.
02:48 ನಾವು ಕಾರ್ಯನಿರ್ವಹಿಸುತ್ತಿರುವ (ಆಪರೇಷನಲ್) ಲೈನ್ ಗಳನ್ನು ಆಯ್ಕೆ ಮಾಡಿಕೊಳ್ಳಬೇಕು.
02:52 attribute ಟೇಬಲ್ ವಿಂಡೋ ದಲ್ಲಿ,

ಟೂಲ್ ಬಾರ್ ನಲ್ಲಿ, Select features using an expression ಟೂಲ್ ಅನ್ನು ಕ್ಲಿಕ್ ಮಾಡಿ.

03:00 Select By Expression ಎಂಬ ಹೊಸ ಡಯಲಾಗ್ ಬಾಕ್ಸ್ ತೆರೆದುಕೊಳ್ಳುತ್ತದೆ.
03:05 Function Editor ಪ್ಯಾನಲ್ ನಲ್ಲಿ, Fields and Values ಆಯ್ಕೆಯ ಮುಂದಿರುವ ಕಪ್ಪು ತ್ರಿಕೋನದ ಮೇಲೆ ಕ್ಲಿಕ್ ಮಾಡಿ.
03:13 ಪಟ್ಟಿಯಿಂದ EXS_DESCRI attribute ಆಯ್ಕೆಯನ್ನು ಆರಿಸಿ.
03:21 ಇದನ್ನು ಡಬಲ್ ಕ್ಲಿಕ್ ಮಾಡಿ ಮತ್ತು ಅದನ್ನು Expression ಟೆಕ್ಸ್ಟ್ ಏರಿಯಾ ಕ್ಕೆ ಸೇರಿಸಿ.
03:26 ಸಮೀಕರಣವನ್ನು

"EXS_DESCRI" equal to, ಸಿಂಗಲ್ ಕೋಟ್ ನಲ್ಲಿ Operational ಎಂದು ಟೈಪ್ ಮಾಡಿ, ಪೂರ್ಣಗೊಳಿಸಿ.

03:37 ದಯವಿಟ್ಟು ಗಮನದಲ್ಲಿಡಿ, ಇಲ್ಲಿಯ ಸಿಂಟ್ಯಾಕ್ಸ್ ಕೇಸ್ ಸೆನ್ಸಿಟಿವ್ ಆಗಿದೆ.
03:42 ಎಲ್ಲ ಶಬ್ದಗಳನ್ನು ಅವು attribute table ನಲ್ಲಿರುವಂತೆಯೇ ಟೈಪ್ ಮಾಡಿ.
03:47 ಇಲ್ಲಿ Operational ಶಬ್ದದಲ್ಲಿ “O” ಅಕ್ಷರವು ಕ್ಯಾಪಿಟಲ್ ಆಗಿದೆ.
03:52 ಟೇಬಲ್ ನ ಕೆಳಗಡೆ, ಮೊದಲು Select ಬಟನ್ ಅನ್ನೂ, ನಂತರ Close ಬಟನ್ ಅನ್ನೂ ಕ್ಲಿಕ್ ಮಾಡಿ.
03:59 attribute table ನಲ್ಲಿ Operational category ಗಳನ್ನು ಆಯ್ಕೆ ಮಾಡಲಾಗಿದೆ.
04:04 attribute table ಅನ್ನು ಕ್ಲೋಸ್ ಮಾಡಿ.
04:07 ಮ್ಯಾಪ್ ನಲ್ಲಿ Operational category ಯಲ್ಲಿ ಎಲ್ಲ ರೈಲ್ವೆ ಲೈನ್ ಗಳು ಆಯ್ಕೆಯಾಗಿರುವುದನ್ನು ನೀವು ನೋಡಬಹುದು.
04:14 ಈ ಲೈನ್ ಗಳು ಹಳದಿ ಬಣ್ಣದಲ್ಲಿ ಕಾಣಿಸುತ್ತಿವೆ.
04:17 ಈಗ ನಮ್ಮ ಆಯ್ಕೆಯನ್ನು ಹೊಸ shapefile ನಲ್ಲಿ ಸೇವ್ ಮಾಡೋಣ.
04:22 IND_rail layer ಅನ್ನು ರೈಟ್ ಕ್ಲಿಕ್ ಮಾಡಿ ಮತ್ತು Save As.... ಆಯ್ಕೆಯನ್ನು ಕ್ಲಿಕ್ ಮಾಡಿ.
04:31 Save Vector Layer as ….. ಡಯಲಾಗ್ ಬಾಕ್ಸ್ ತೆರೆದುಕೊಳ್ಳುತ್ತದೆ.
04:35 File name ಫೀಲ್ಡ್ ನ ಮುಂದೆ ಇರುವ, Browse ಬಟನ್ ಅನ್ನು ಕ್ಲಿಕ್ ಮಾಡಿ.
04:40 Save Layer As... ಡಯಲಾಗ್ ಬಾಕ್ಸ್ ತೆರೆದುಕೊಳ್ಳುತ್ತದೆ.
04:44 ಔಟ್ ಪುಟ್ ಫೈಲ್ ಅನ್ನು railway.shp ಎಂದು ಹೆಸರಿಸಿ.
04:49 ಲೋಕೇಶನ್ ಅನ್ನುಆಯ್ಕೆ ಮಾಡಿಕೊಳ್ಳಿ, ನಾನು Desktop ಅನ್ನು ಆಯ್ಕೆ ಮಾಡುವೆನು.

Save ಬಟನ್ ಅನ್ನು ಕ್ಲಿಕ್ ಮಾಡಿ.

04:57 ಈಗ ಈ ಲೇಯರ್ ಗೆ CRS ಅನ್ನು ಆಯ್ಕೆ ಮಾಡೋಣ.

Select CRS ಬಟನ್ ಅನ್ನು ಕ್ಲಿಕ್ ಮಾಡಿ.

05:04 Coordinate Reference System Selector (ಕೋ-ಆರ್ಡಿನೇಟ್ ರೆಫರೆನ್ಸ್ ಸಿಸ್ಟಮ್ ಸೆಲೆಕ್ಟರ್) ಡಯಲಾಗ್ ಬಾಕ್ಸ್ ತೆರೆದುಕೊಳ್ಳುತ್ತದೆ.
05:09 ನಾವು ಇದರ ಉದ್ದವನ್ನು ಲೆಕ್ಕ ಹಾಕಲು ಇಷ್ಟಪಡುವುದರಿಂದ, equidistance projection (ಇಕ್ವಿಡಿಸ್ಟೆನ್ಸ್ ಪ್ರೊಜೆಕ್ಷನ್) ಅನ್ನು ಆಯ್ಕೆ ಮಾಡೋಣ.
05:16 Filter ಸರ್ಚ್ ಬಾಕ್ಸ್ ನಲ್ಲಿ, Indian 1975 ಎಂದು ಟೈಪ್ ಮಾಡಿ.
05:22 ಪ್ರಪಂಚದ Coordinate Reference Systems (ಕೋ-ಆರ್ಡಿನೇಟ್ ರೆಫರೆನ್ಸ್ ಸಿಸ್ಟಮ್ಸ್) ನಡಿಯಲ್ಲಿ, Geographic Coordinate Systems (ಜಿಯೋಗ್ರಾಫಿಕ್ ಕೋ-ಆರ್ಡಿನೇಟ್ ಸಿಸ್ಟಮ್ಸ್) ವಿಭಾಗದಲ್ಲಿ Indian 1975 EPSG:4240 ಅನ್ನು ಆಯ್ಕೆ ಮಾಡಿ.
05:36 OK ಬಟನ್ ಅನ್ನು ಕ್ಲಿಕ್ ಮಾಡಿ.
05:39 Save vector layer as... ಡಯಲಾಗ್ ಬಾಕ್ಸ್ ನಲ್ಲಿ, ಡಿಫಾಲ್ಟ್ ಆಗಿ, Add saved file to map ಆಯ್ಕೆಯೂ ಈಗಾಗಲೇ ಚೆಕ್ ಆಗಿರುತ್ತದೆ.
05:48 Save only selected features ಚೆಕ್ ಬಾಕ್ಸ್ ಅನ್ನು ಚೆಕ್ ಮಾಡಿ.
05:53 OK ಬಟನ್ ಅನ್ನು ಕ್ಲಿಕ್ ಮಾಡಿ.
05:56 ಒಮ್ಮೆ ಎಕ್ಸ್ಪೋರ್ಟ್ ಕ್ರಿಯೆಯು ಪೂರ್ಣಗೊಂಡರೆ, ನೀವು Layers Panel ನಲ್ಲಿ railway ಎಂಬ ಹೊಸ ಲೇಯರ್ ಸೇರಿರುವದನ್ನು ನೋಡಬಹುದು.
06:04 Layers Panel ಪ್ಯಾನಲ್ ನಲ್ಲಿ, IND_rail ಲೇಯರ್ ನ ಮುಂದೆ ಇರುವ ಬಾಕ್ಸ್ ಅನ್ನು ಅನ್ಚೆಕ್ ಮಾಡಬಹುದು, ಏಕೆಂದರೆ ಮುಂದೆ ಇದು ನಮಗೆ ಬೇಕಾಗಿಲ್ಲ, ಹಾಗಾಗಿ ಅದನ್ನು ಟರ್ನ್ ಆಫ್ ಮಾಡೋಣ.
06:15 ಕ್ಯಾನ್ವಾಸ್ ನ ಮೇಲೆ, ಕಾರ್ಯನಿರ್ವಹಿಸುತ್ತಿರುವ ರೈಲ್ವೆ ಲೈನ್ ಗಳನ್ನು ಇಂಡಿಯಾ ಮ್ಯಾಪ್ ನ ಮೇಲೆ ನೋಡಬಹುದು.
06:22 railway ಲೇಯರ್ ಅನ್ನು ರೈಟ್ ಕ್ಲಿಕ್ ಮಾಡಿ, Open Attribute Table ಅನ್ನು ಆಯ್ಕೆ ಮಾಡಿ.
06:29 ಈಗ ಪ್ರತಿ ಫೀಚರ್ ನ ಉದ್ದವನ್ನು ಒಳಗೊಂಡಿರುವ ಒಂದು ಕಾಲಮ್ ಅನ್ನು ಸೇರಿಸೋಣ.
06:34 ಟೂಲ್ ಬಾರ್ ನಲ್ಲಿರುವ Toggle editing ಟೂಲ್ ಅನ್ನು ಕ್ಲಿಕ್ ಮಾಡಿ, ಲೇಯರ್ ಅನ್ನು ಎಡಿಟಿಂಗ್ ಮೋಡ್ ನಲ್ಲಿಡಿ.
06:41 ನಂತರ ಟೂಲ್ ಬಾರ್ ನ ಬಲ ಮೂಲೆಯಲ್ಲಿರುವ , Open field calculator (ಓಪನ್ ಫೀಲ್ಡ್ ಕ್ಯಾಲ್ಕ್ಯುಲೇಟರ್) ಬಟನ್ ಅನ್ನು ಕ್ಲಿಕ್ ಮಾಡಿ.
06:49 Field Calculator ಡಯಲಾಗ್ ಬಾಕ್ಸ್ ನಲ್ಲಿ, Create a new field check box ಅನ್ನು ಚೆಕ್ ಮಾಡಿ.
06:55 Output field name ಟೆಕ್ಸ್ಟ್ ಬಾಕ್ಸ್ ನಲ್ಲಿ, length ಹೈಫನ್ km ಎಂದು ಟೈಪ್ ಮಾಡಿ.
07:02 Output field type ಅನ್ನು Decimal number (real) ಎಂದು ಆಯ್ಕೆ ಮಾಡಿ.
07:07 ಔಟ್ಪುಟ್ Precision ಅನ್ನು 2 ಎಂದು ಬದಲಿಸಿ.
07:10 Function editor panel ಪ್ಯಾನಲ್ ನಲ್ಲಿ, Geometry ಯ ಮುಂದಿರುವ ತ್ರಿಕೋನವನ್ನು ಕ್ಲಿಕ್ ಮಾಡಿ ಮತ್ತು $length ಎಂದು ಆಯ್ಕೆ ಮಾಡಿ.
07:20 $length ಅನ್ನು Expression ಟೆಕ್ಸ್ಟ್ ಬಾಕ್ಸ್ ಗೆ ಸೇರಿಸಲು, ಅದನ್ನು ಡಬಲ್ ಕ್ಲಿಕ್ ಮಾಡಿ.
07:26 ಸಮೀಕರಣವನ್ನು $length ಭಾಗಿಸು 1000 ಎಂದು ಪೂರ್ಣಗೊಳಿಸಬೇಕು.
07:32 ಅದಕ್ಕಾಗಿ, ಟೆಕ್ಸ್ಟ್ ವಿಂಡೋದ ಮೇಲ್ಭಾಗದಲ್ಲಿರುವ Division Operator ಬಟನ್ ಅನ್ನು ಕ್ಲಿಕ್ ಮಾಡಿ.
07:37 ಕೀಬೋರ್ಡ್ ನಲ್ಲಿ 1000 ಎಂದು ಟೈಪ್ ಮಾಡಿ.
07:40 ನಾವು ಔಟ್ ಪುಟ್ ಉದ್ದ(ಲೆಂಥ್) ಅನ್ನು 1000 ದಿಂದ ಭಾಗಿಸಬೇಕು, ಏಕೆಂದರೆ,

railway ಲೇಯರ್ CRS ಇದು ಮೀಟರ್ ನಲ್ಲಿದೆ ಮತ್ತು ನಮಗೆ ಔಟ್ಪುಟ್ ಕಿಲೋಮೀಟರ್ ಗಳಲ್ಲಿ ಬೇಕು.

07:52 OK ಬಟನ್ ಅನ್ನು ಕ್ಲಿಕ್ ಮಾಡಿ.
07:55 ಎಡಿಟಿಂಗ್ ಅನ್ನು ನಿಲ್ಲಿಸಲು, Toggle editing ಟೂಲ್ ಅನ್ನು ಕ್ಲಿಕ್ ಮಾಡಿ.
08:00 Stop editing ಡಯಲಾಗ್ ಬಾಕ್ಸ್ ನಲ್ಲಿ, Save ಬಟನ್ ಅನ್ನು ಕ್ಲಿಕ್ ಮಾಡಿ, attribute table ನಲ್ಲಿ ಮಾಡಿದ ಬದಲಾವಣೆಗಳನ್ನು ಸೇವ್ ಮಾಡಿ.
08:07 attribute table ಗೆ ಹಿಂದಿರುಗಿ, ಇಲ್ಲಿ Length ಹೈಫನ್ km ಎಂಬ ಹೊಸ ಕಾಲಮ್ ಸೇರ್ಪಡೆಯಾಗಿದೆ.
08:15 ಈಗ ನಾವು Railway layer ನ ಪ್ರತಿಯೊಂದು ಲೈನ್ ನ ಉದ್ದವನ್ನು ಹೊಂದಿದ್ದೇವೆ.
08:20 ನಾವು ಇದನ್ನೆಲ್ಲ ಒಟ್ಟಿಗೆ ಕೂಡಿಸಿ, ಒಟ್ಟೂ ಉದ್ದವನ್ನು ಕಂಡುಹಿಡಿಯಬಹುದು.
08:25 attribute table ಅನ್ನು ಕ್ಲೋಸ್ ಮಾಡಿ.
08:28 ಮೆನ್ಯು ಬಾರ್ ನಲ್ಲಿ Vector ಮೆನ್ಯುವನ್ನು ಕ್ಲಿಕ್ ಮಾಡಿ.

Analysis Tools ಆಯ್ಕೆಯನ್ನು ಕ್ಲಿಕ್ ಮಾಡಿ.

08:36 ಸಬ್ – ಮೆನ್ಯುವಿನಿಂದ, Basic Statistics for numeric tools ಅನ್ನು ಕ್ಲಿಕ್ ಮಾಡಿ.
08:42 ಒಂದು ಡಯಲಾಗ್ ಬಾಕ್ಸ್ ತೆರೆದುಕೊಳ್ಳುತ್ತದೆ.
08:45 Input vector layer ಅನ್ನು railway ಎಂದು ಆಯ್ಕೆ ಮಾಡಿ.
08:50 Field to calculate statistics on ಅನ್ನು length ಹೈಫನ್ km ಎಂದು ಆಯ್ಕೆ ಮಾಡಿ.
08:57 ಡಯಲಾಗ್ ಬಾಕ್ಸ್ ನ ಕೆಳ ಬಲ ಮೂಲೆಯಲ್ಲಿರುವ Run ಬಟನ್ ಅನ್ನು ಕ್ಲಿಕ್ ಮಾಡಿ.
09:03 Results ವಿಂಡೋ ತೆರೆದುಕೊಳ್ಳುತ್ತದೆ.
09:06 ಇಲ್ಲಿ ನೀವು ಹಲವಾರು ಅಂಕಿಅಂಶಗಳ ಫಲಿತಾಂಶವನ್ನು ನೋಡಬಹುದು.
09:11 ಇಲ್ಲಿ ತೋರಿಸಿರುವ Sum value ಇದು ರೈಲ್ವೆ ರೋಡ್ ನ ಒಟ್ಟೂ ಉದ್ದವಾಗಿದೆ.
09:16 ಗಮನಿಸಿ, ನೀವು ಬೇರೆ projection ಅನ್ನು ಆಯ್ಕೆ ಮಾಡಿದ್ದರೆ, ಉತ್ತರದಲ್ಲಿ ಕೊಂಚ ಬದಲಾವಣೆ ಇರಬಹುದು.
09:23 ಸಾಮಾನ್ಯವಾಗಿ, ರೋಡ್ ಲೈನ್ ಗಳು ಅಥವಾ ಇನ್ಯಾವುದೇ ಲೀನಿಯರ್ ಉದ್ದವನ್ನು ನೆಲದ ಮೇಲೆ ಅಳತೆ ಮಾಡಲಾಗುತ್ತದೆ.
09:30 ಈ ವ್ಯಾಲ್ಯುಗಳು ಡಾಟಾಸೆಟ್ ಗೆ ಅಟ್ರಿಬ್ಯೂಟ್ಸ್ ಗಳಾಗಿ ಕೊಡಲ್ಪಟ್ಟಿವೆ.
09:35 ಮೇಲೆ ತೋರಿಸಿರುವ ನಿದರ್ಶನವು, ಅಂತಹ ಅಟ್ರಿಬ್ಯೂಟ್ ಗಳ ಗೈರು ಹಾಜರಿಯಲ್ಲಿ ಕಾರ್ಯನಿರ್ವಹಿಸುತ್ತದೆ. ಮತ್ತು ಇದು ನಿಜವಾದ ಲೈನ್ ಗಳ ಉದ್ದಕ್ಕೆ ಅಂದಾಜು ವ್ಯಾಲ್ಯುವಾಗಿದೆ.
09:46 ಸಂಕ್ಷಿಪ್ತವಾಗಿ ,

ಈ ಟ್ಯುಟೋರಿಯಲ್ ನಲ್ಲಿ ನಾವು,

09:51 ಮ್ಯಾಪ್ ನಲ್ಲಿ, attribute table ನಿಂದ ಆಯ್ಕೆ ಮಾಡಿದ ಫೀಚರ್ ಗಳನ್ನು ತೋರಿಸುವುದು,

attribute table ಗೆ ಕಾಲಮ್ ಗಳನ್ನು ಸೇರಿಸುವುದು, attributes ಗಳಿಗೆ ಅಂಕಿಅಂಶಗಳನ್ನು ಲೆಕ್ಕಹಾಕುವುದು – ಇವುಗಳ ಕುರಿತು ಕಲಿತಿದ್ದೇವೆ.

10:04 ಅಸೈನ್ಮೆಂಟ್ :

Code files ಲಿಂಕ್ ನಿಂದ ಡೌನ್ಲೋಡ್ ಮಾಡಿದ world_1.shp ಫೈಲ್ ಅನ್ನು ಬಳಸಿ,

10:14 ಬೇರೆ ಬೇರೆ ದೇಶಗಳ ವಿಸ್ತೀರ್ಣವನ್ನು ಚದರ ಕಿಲೋ ಮೀಟರ್ (ಸ್ಕ್ವೇರ್ ಕಿಲೋಮೀಟರ್) ಗಳಲ್ಲಿ ಕಂಡುಹಿಡಿಯಿರಿ.
10:20 ನಿಮ್ಮ ಪೂರ್ಣಗೊಂಡ ಅಸೈನ್ಮೆಂಟ್ ಇಲ್ಲಿ ತೋರಿಸಿರುವಂತೆ ಕಾಣಬೇಕು.
10:26 ಕೆಳಗಿನ ಲಿಂಕ್ನಲ್ಲಿರುವ ವೀಡಿಯೊ ಸ್ಪೋಕನ್ ಟ್ಯುಟೋರಿಯಲ್ ಯೋಜನೆಯನ್ನು ಕುರಿತು ವಿವರಿಸುತ್ತದೆ.

ದಯವಿಟ್ಟು ಅದನ್ನು ಡೌನ್ಲೋಡ್ ಮಾಡಿ ಮತ್ತು ವೀಕ್ಷಿಸಿ.

10:34 ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ತಂಡ, ಕಾರ್ಯಾಗಾರಗಳನ್ನು ನಡೆಸುತ್ತದೆ ಮತ್ತು ನಮ್ಮ ಆನ್ಲೈನ್ ಪರೀಕ್ಷೆಗಳಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರಗಳನ್ನು ನೀಡುತ್ತದೆ.
10:41 ವಿವರಗಳಿಗಾಗಿ, ದಯವಿಟ್ಟು ನಮಗೆ ಬರೆಯಿರಿ.
10:45 ನೀವು ಪ್ರಶ್ನೆಯನ್ನು ಹೊಂದಿರುವ ನಿಮಿಷ ಮತ್ತು ಸೆಕೆಂಡ್ ಅನ್ನು ಆರಿಸಿ.

ನಿಮ್ಮ ಪ್ರಶ್ನೆಯನ್ನು ಸಂಕ್ಷಿಪ್ತವಾಗಿ ವಿವರಿಸಿ.

10:49 ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ಗೆ NMEICT, MHRD, ಭಾರತ ಸರ್ಕಾರ ಧನಸಹಾಯ ನೀಡುತ್ತದೆ.

ಹೆಚ್ಚಿನ ವಿವರಗಳಿಗಾಗಿ, ಇಲ್ಲಿ ತೋರಿಸಿರುವ ಲಿಂಕ್ಗೆ ಭೇಟಿ ನೀಡಿ.

11:01 ಅನುವಾದ ಮತ್ತು ಧ್ವನಿ ಶ್ರೀ ನವೀನ ಭಟ್ಟ ಉಪ್ಪಿನಪಟ್ಟಣ. ಧನ್ಯವಾದಗಳು.

Contributors and Content Editors

NaveenBhat