QGIS/C2/Importing-Spreadsheets/Kannada
From Script | Spoken-Tutorial
Revision as of 21:26, 9 December 2020 by NaveenBhat (Talk | contribs)
Time | Narration |
00:01 | QGIS ನಲ್ಲಿ Importing spreadsheets ನ ಕುರಿತಾದ ಸ್ಪೋಕನ್ ಟ್ಯುಟೋರಿಯಲ್ ಗೆ ಸ್ವಾಗತ. |
00:07 | ಈ ಟ್ಯುಟೋರಿಯಲ್ ನಲ್ಲಿ, |
00:10 | Point Layer' ಅನ್ನು ರಚಿಸಲು, CSV ಫಾರ್ಮ್ಯಾಟ್ ನಲ್ಲಿ ಸ್ಪ್ರೆಡ್ ಶೀಟ್ ಗಳನ್ನು ಇಂಪೋರ್ಟ್ ಮಾಡುವುದು, |
00:16 | Point Layer (ಪಾಯಿಂಟ್ ಲೇಯರ್) ಅನ್ನು Polyline Layer(ಪಾಲಿಲೈನ್ ಲೇಯರ್) ಆಗಿ ಪರಿವರ್ತಿಸುವುದು, |
00:20 | QGIS ನಲ್ಲಿ, WMS (ವೆಬ್ ಮ್ಯಾಪ್ ಸರ್ವಿಸ್) ಲೇಯರ್ ಅನ್ನು ಲೋಡ್ ಮಾಡುವುದು – ಇವುಗಳ ಕುರಿತು ಕಲಿಯುವೆವು. |
00:25 | ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು ನಾನು,
Ubuntu Linux ಒ.ಎಸ್. 16.04 ಆವೃತ್ತಿ, |
00:32 | QGIS 2.18 ಆವೃತ್ತಿಗಳನ್ನು ಬಳಸುತ್ತಿದ್ದೇನೆ. |
00:36 | ಮತ್ತು ಇಂಟರ್ನೆಟ್ ಸಂಪರ್ಕ ಬೇಕು. |
00:39 | ಈ ಟ್ಯುಟೊರಿಯಲ್ ಅನ್ನು ಕಲಿಯಲು ನೀವು QGIS ಇಂಟರ್ಫೇಸ್ ನ ಕುರಿತು ಕಲಿತಿರಬೇಕು. |
00:47 | ಇಲ್ಲವಾದಲ್ಲಿ ಸಂಬಂಧಿತ ಟ್ಯುಟೋರಿಯಲ್ ಗಾಗಿ, ನಮ್ಮ ವೆಬ್ಸೈಟ್ ಅನ್ನು ಭೇಟಿ ಮಾಡಿ. |
00:52 | ಸಾಮಾನ್ಯವಾಗಿ, GIS ಡಾಟಾವು ಟೇಬಲ್ ಅಥವಾ ಸ್ಪ್ರೆಡ್ಶೀಟ್ ಫಾರ್ಮ್ಯಾಟ್ ನಲ್ಲಿ ಲಭ್ಯವಿರುತ್ತದೆ. |
00:59 | ಸ್ಪ್ರೆಡ್ಶೀಟ್ ನಲ್ಲಿರುವ ಡಾಟಾ ವನ್ನು QGIS ಗೆ ಇಂಪೋರ್ಟ್ ಮಾಡಿಕೊಳ್ಳಬಹುದು. |
01:05 | ಡಾಟಾ ಫೈಲ್, X ಮತ್ತು Y coordinates ಗಳನ್ನೊಳಗೊಂಡ, ಎರಡು ಕಾಲಮ್ ಗಳನ್ನು ಹೊಂದಿರಲೇ ಬೇಕು. |
01:12 | ಈ ಟ್ಯುಟೋರಿಯಲ್ ಅನ್ನು ಅಭ್ಯಸ ಮಾಡಲು, ನೀವು ಈ ಪ್ಲೇಯರ್ ನ ಕೆಳಗಡೆ ಇರುವ Code files ಲಿಂಕ್ನಲ್ಲಿರುವ, ಫೋಲ್ಡರ್ ಅನ್ನು ಡೌನ್ಲೋಡ್ ಮಾಡಿಕೊಳ್ಳಬೇಕು. |
01:21 | ಡೌನ್ಲೋಡ್ ಮಾಡಿಕೊಂಡಿರುವ ಝಿಪ್ ಫೈಲ್ ನಿಂದ, ಕಂಟೆಂಟ್ ಗಳನ್ನು ಎಕ್ಸ್ಟ್ರ್ಯಾಕ್ಟ್ ಮಾಡಿಕೊಳ್ಳಿ. |
01:25 | ಎಕ್ಸ್ಟ್ರ್ಯಾಕ್ಟ್ ಮಾಡಿದ ಫೋಲ್ಡರ್ ನಲ್ಲಿ Places.txt ಮತ್ತು Places.csv ಫೈಲ್ ಗಳನ್ನು ಲೊಕೇಟ್ ಮಾಡಿ. |
01:33 | ನಾನು ಈಗಾಗಲೇ code file ಅನ್ನು ಡೌನ್ಲೋಡ್ ಮಾಡಿ, ಎಕ್ಸ್ಟ್ರ್ಯಾಕ್ಟ್ ಮಾಡಿ, Desktop ನಲ್ಲಿ ಸೇವ್ ಮಾಡಿದ್ದೇನೆ. |
01:41 | ನಾನು Code files ಫೋಲ್ಡರ್ ನ ಮೇಲೆ ಡಬಲ್ ಕ್ಲಿಕ್ ಮಾಡಿ, ಅದರ ಕಂಟೆಂಟ್ ಗಳನ್ನು ನೋಡುವೆನು. |
01:46 | ಇಲ್ಲಿ ನೀವು, Places.csv ಮತ್ತು Places.txt. ಎನ್ನುವ 2 ಫೈಲ್ ಗಳನ್ನು ನೋಡಬಹುದು. |
01:54 | Places.csv ಫೈಲ್ ನ ಮೇಲೆ ಡಬಲ್ ಕ್ಲಿಕ್ ಮಾಡಿ. |
02:02 | CSV ಫಾರ್ಮ್ಯಾಟ್ ನಲ್ಲಿರುವ ಒಂದು ಸ್ಪ್ರೆಡ್ಶೀಟ್ ತೆರೆದುಕೊಳ್ಳುತ್ತದೆ. |
02:06 | ಇದರಲ್ಲಿ latitude (ಲ್ಯಾಟಿಟ್ಯೂಡ್) ಮತ್ತು longitude (ಲೊಂಜಿಟ್ಯೂಡ್) ಡಾಟಾದೊಂದಿಗೆ ನಗರಗಳ ಹೆಸರು ಇವೆ. |
02:14 | CSV ಫೈಲ್ ಅನ್ನು ಕ್ಲೋಸ್ ಮಾಡಿ. |
02:17 | ಡಬಲ್ ಕ್ಲಿಕ್ ಮಾಡಿ, Places.txt ಫೈಲ್ ಅನ್ನು ತೆರೆಯಿರಿ. |
02:22 | ಇದರಲ್ಲಿಯೂ ಕೂಡ latitude (ಲ್ಯಾಟಿಟ್ಯೂಡ್) ಮತ್ತು longitude (ಲೊಂಜಿಟ್ಯೂಡ್) ಡಾಟಾದೊಂದಿಗೆ ನಗರಗಳ ಹೆಸರು ಇವೆ. |
02:32 | ಟೆಕ್ಸ್ಟ್ ಫೈಲ್ ಅನ್ನು ಕ್ಲೋಸ್ ಮಾಡಿ. |
02:35 | Code-files ಫೋಲ್ಡರ್ ಅನ್ನು ಕ್ಲೋಸ್ ಮಾಡಿ ಮತ್ತು QGIS ಇಂಟರ್ಫೇಸ್ ಅನ್ನು ತೆರೆಯಿರಿ. |
02:41 | ಮೆನ್ಯುಬಾರ್ ನಲ್ಲಿ Layer ಮೆನ್ಯುವಿನ ಮೇಲೆ ಕ್ಲಿಕ್ ಮಾಡಿ. |
02:45 | ಡ್ರಾಪ್ ಡೌನ್ ಪಟ್ಟಿಯಿಂದ , Add layer ಅನ್ನು ಆಯ್ಕೆ ಮಾಡಿ. |
02:49 | ಸಬ್-ಮೆನ್ಯುವಿನಲ್ಲಿ, Add Delimited Text Layer ಅನ್ನು ಆಯ್ಕೆ ಮಾಡಿ. |
02:54 | ಒಂದು ಡಯಲಾಗ್ ಬಾಕ್ಸ್ ತೆರೆದುಕೊಳ್ಳುತ್ತದೆ. |
02:57 | File Name ಟೆಕ್ಸ್ಟ್ ಬಾಕ್ಸ್ ನ ಮುಂದೆ ಇರುವ Browse ಬಟನ್ ಅನ್ನು ಕ್ಲಿಕ್ ಮಾಡಿ. |
03:02 | ಒಂದು ಡಯಲಾಗ್ ಬಾಕ್ಸ್ ತೆರೆದುಕೊಳ್ಳುತ್ತದೆ. |
03:05 | ನೀವು ಈಗಾಗಲೇ ಡೌನ್ಲೋಡ್ ಮಾಡಿ, ಸೇವ್ ಮಾಡಿರುವ csv ಫೈಲ್ ಗೆ ನ್ಯಾವಿಗೇಟ್ ಮಾಡಿ. |
03:11 | Open ಬಟನ್ ಅನ್ನು ಕ್ಲಿಕ್ ಮಾಡಿ. |
03:14 | ಕ್ರಿಯೇಟ್ ಲೇಯರ್ ಡಯಲಾಗ್ ಬಾಕ್ಸ್ ನಲ್ಲಿ, ಈಗ File Name ಟೆಕ್ಸ್ಟ್ ಬಾಕ್ಸ್ ನಲ್ಲಿ, file path ಕಾಣಿಸುತ್ತಿದೆ. |
03:21 | File format ವಿಭಾಗದಲ್ಲಿ, CSV ಆಯ್ಕೆಯು ಡಿಫಾಲ್ಟ್ ಆಗಿ ಆಯ್ಕೆಯಾಗಿರುತ್ತದೆ. |
03:28 | ಇಲ್ಲವಾದಲ್ಲಿ ಅದನ್ನು ಆಯ್ಕೆಮಾಡಲು, CSV ರೇಡಿಯೋ ಬಟನ್ ನ ಮೇಲೆ ಕ್ಲಿಕ್ ಮಾಡಿ. |
03:33 | .txt ಫೈಲ್ ಅನ್ನು ಬಳಸುವುದಾದರೆ, Custom Delimiters (ಕಸ್ಟಮ್ ಡೆಲಿಮೀಟರ್) ಆಯ್ಕೆಯನ್ನು ಆರಿಸಿಕೊಳ್ಳಿ. |
03:39 | Geometry definition (ಜ್ಯಾಮೆಟ್ರಿ ಡೆಫಿನೇಷನ್) ವಿಭಾಗವು, Latitude ಮತ್ತು Longitude ಡಾಟಾದೊಂದಿಗೆ, ತನ್ನಿಂದ ತಾನೆ ಸಿದ್ಧವಾಗುತ್ತದೆ. |
03:47 | ದಯವಿಟ್ಟು ಗಮನಿಸಿ X-coordinate ಇದು longitude ಆಗಿದೆ ಮತ್ತು Y-coordinate ಇದು latitude ಆಗಿದೆ. |
03:55 | Longitude ಒಂದು ಬಿಂದುವಿನ ಪೂರ್ವ-ಪಶ್ಚಿಮ ಸ್ಥಾನವನ್ನು ಸೂಚಿಸುತ್ತದೆ. |
04:01 | ಮತ್ತು Latitude ಒಂದು ಬಿಂದುವಿನ ಉತ್ತರ-ದಕ್ಷಿಣ ಸ್ಥಾನವನ್ನು ಸೂಚಿಸುತ್ತದೆ. |
04:06 | OK ಬಟನ್ ಅನ್ನು ಕ್ಲಿಕ್ ಮಾಡಿ. |
04:09 | Coordinate Reference System Selector(ಕೋ-ಆರ್ಡಿನೇಟ್ ರೆಫರೆನ್ಸ್ ಸಿಸ್ಟಮ್ ಸೆಲೆಕ್ಟರ್) ಡಯಲಾಗ್ ಬಾಕ್ಸ್ ತೆರೆದುಕೊಳ್ಳುತ್ತದೆ. |
04:14 | WGS 84 EPSG 4326 ಅನ್ನು ಆಯ್ಕೆ ಮಾಡಿ. |
04:21 | OK ಬಟನ್ ಅನ್ನು ಕ್ಲಿಕ್ ಮಾಡಿ. |
04:24 | ಡಾಟಾವು ಇಂಪೋರ್ಟ್ ಆಗಿದೆ, ಮತ್ತು QGIS canvas ನ ಮೇಲೆ ಡಿಸ್ಪ್ಲೇ ಆಗಿದೆ. |
04:30 | ಭಾರತದ ಮ್ಯಾಪ್ ಪಾಯಿಂಟ್ ಗಳೊಂದಿಗೆ ತೆರೆದುಕೊಳ್ಳುತ್ತದೆ. |
04:34 | ಈ ಗುರುತುಗಳು, CSV ಫೈಲ್ ನಲ್ಲಿ ಪಟ್ಟಿ ಮಾಡಿರುವ ಬೇರೆ ಬೇರೆ ನಗರಗಳಾಗಿವೆ. |
04:40 | ಈ ಗುರುತುಗಳ ಸ್ಟೈಲ್ ಮತ್ತು ಬಣ್ಣವನ್ನು ಬದಲಿಸಬಹುದು. |
04:45 | ಇದನ್ನು ಮುಂದೆ ಬರುವ ಟ್ಯುಟೋರಿಯಲ್ ಗಳಲ್ಲಿ ವಿವರಿಸಲಾಗಿದೆ. |
04:51 | ನಿಮಗಾಗಿ ಅಸೈನ್ಮೆಂಟ್, |
04:53 | QGIS ನಲ್ಲಿ Places.txt ಫೈಲ್ ಅನ್ನು ಇಂಪೋರ್ಟ್ ಮಾಡುವುದು, |
04:58 | Code files ಲಿಂಕ್ ನಿಂದ ಡೌನ್ಲೋಡ್ ಮಾಡಿರುವ ಫೋಲ್ಡರ್ ನಲ್ಲಿ Places.txt ಫೈಲ್ ನಲ್ಲಿ ಲಭ್ಯವಿದೆ. |
05:06 | ಈಗ ಈ Point layer ಅನ್ನು Polyline ಲೇಯರ್ ಆಗಿ ಪರಿವರ್ತಿಸೋಣ. |
05:12 | ಇಲ್ಲಿ ನಾವು ಈ ಎಲ್ಲ ನಗರಗಳನ್ನು ಒಂದು ಮಾರ್ಗದ(ಪಾಥ್) ಮೂಲಕ ಸಂಪರ್ಕಿಸುತ್ತೇವೆ. |
05:17 | ಈ ಮಾರ್ಗವು(ಪಾಥ್) ದಕ್ಷಿಣದ ಕೊನೆಯ ನಗರದಿಂದ ಉತ್ತರದ ಕೊನೆಯ ನಗರವನ್ನು ಜೋಡಿಸುತ್ತದೆ. |
05:23 | ಇದು ಪ್ರತಿಯೊಂದು ನಗರದ latitude ಡಾಟಾವನ್ನು ಅವಲಂಭಿಸಿರುತ್ತದೆ. |
05:28 | ಮೆನ್ಯುಬಾರನಲ್ಲಿರುವ Processing ಮೆನ್ಯುವಿನ ಮೇಲೆ ಕ್ಲಿಕ್ ಮಾಡಿ. |
05:32 | ಡ್ರಾಪ್-ಡೌನ್ ನಿಂದ Toolbox ಅನ್ನು ಆಯ್ಕೆ ಮಾಡಿ. |
05:36 | Processing Toolbox ಪ್ಯಾನೆಲ್ ಪರದೆಯ ಬಲಭಾಗದಲ್ಲಿ ತೆರೆದುಕೊಳ್ಳುತ್ತದೆ. |
05:41 | ಇದು ಹಲವು ವಿಭಾಗಗಳಲ್ಲಿ ಗುಂಪು ಮಾಡಿದ, algorithms ಗಳ ಪಟ್ಟಿಯನ್ನು ತೋರಿಸುತ್ತದೆ. |
05:47 | QGIS geoalgorithm (ಕ್ಯುಜಿಐಎಸ್ ಜಿಯೋಆಲ್ಗಾರಿದಮ್) ಅನ್ನು ಅದರ ಮುಂದಿರುವ ಕಪ್ಪು ತ್ರಿಕೋನಾಕೃತಿಯನ್ನು ಕ್ಲಿಕ್ ಮಾಡುವುದರ ಮೂಲಕ ವಿಸ್ತರಿಸಿ. |
05:55 | ಡಿಸ್ಪ್ಲೇ ಆಗಿರುವ ಪಟ್ಟಿಯಿಂದ , Vector creation tools ಆಯ್ಕೆಯನ್ನು ವಿಸ್ತರಿಸಿ. |
06:01 | algorithm ಅನ್ನು ಎಕ್ಸಿಕ್ಯೂಟ್ ಮಾಡಲು, ವಿಸ್ತರಿಸಲ್ಪಟ್ಟ ಮೆನ್ಯುವಿನಿಂದ, Points to path ಟೂಲ್ ಅನ್ನು ಡಬಲ್ ಕ್ಲಿಕ್ ಮಾಡಿ. |
06:08 | Points to path ಡಯಲಾಗ್ ಬಾಕ್ಸ್ ತೆರೆದುಕೊಳ್ಳುತ್ತದೆ. |
06:12 | Input layer ನಲ್ಲಿ Places ಅನ್ನು ಆಯ್ಕೆ ಮಾಡಿ. |
06:16 | Group field ಡ್ರಾಪ್ ಡೌನ್ ನಿಂದ, type ಕೊಮಾ C ಕೊಮಾ16 ಅನ್ನು ಆಯ್ಕೆ ಮಾಡಿ. |
06:23 | ಈ ಫೀಲ್ಡ್ shape ಫೈಲ್ ನಲ್ಲಿರುವ ಎಲ್ಲ ಫೀಚರ್ ಗಳನ್ನುಹೊಂದಿರುವ ನಗರಗಳ ಹೆಸರುಗಳನ್ನು ಒಳಗೊಂಡಿದೆ. |
06:29 | Order field ಡ್ರಾಪ್-ಡೌನ್ ನಲ್ಲಿ, Latitude ಕೊಮಾ N ಕೊಮಾ 19 ಕೊಮಾ11 ಅನ್ನು ಆಯ್ಕೆ ಮಾಡಿ. |
06:37 | ಇದು ಮಾರ್ಗವು(ಪಾಥ್) latitude ನ ಆರೋಹಣ ಕ್ರಮದಲ್ಲಿ ಚಲಿಸುತ್ತದೆ ಎಂಬುದನ್ನು ಸೂಚಿಸುತ್ತದೆ. |
06:42 | Paths ಫೀಲ್ಡ್ ನ ಮುಂದೆ ಇರುವ ಬಟನ್ ನ ಮೇಲೆ ಕ್ಲಿಕ್ ಮಾಡಿ. |
06:46 | ಸಬ್ಮೆನ್ಯುವಿನಿಂದ , Save to file ಆಯ್ಕೆಯನ್ನು ಆರಿಸಿಕೊಳ್ಳಿ. |
06:51 | Save file ಡಯಲಾಗ್ ಬಾಕ್ಸ್ ತೆರೆದುಕೊಳ್ಳುತ್ತದೆ. |
06:55 | ಫೈಲ್ ಅನ್ನು ಸೇವ್ ಮಾಡಲು ಸೂಕ್ತವಾದ ಲೊಕೇಷನ್ ಅನ್ನು ಆಯ್ಕೆಮಾಡಿಕೊಳ್ಳಿ. ನಾನು Desktop ಅನ್ನು ಆಯ್ಕೆ ಮಾಡಿಕೊಳ್ಳುವೆನು. |
07:02 | ಫೈಲ್ ಅನ್ನು Path-1 ಎಂದು ಹೆಸರಿಸಿ. |
07:06 | Save ಬಟನ್ ಅನ್ನು ಕ್ಲಿಕ್ ಮಾಡಿ. |
07:09 | Paths ಫೀಲ್ಡ್ ನಲ್ಲಿ, ಫೈಲ್ ನೇಮ್ ನೊಂದಿಗೆ ಪಾಥ್ ಸಹ ಕಾಣಿಸುತ್ತದೆ. |
07:14 | Open output file after running algorithm (ಓಪನ್ ಔಟ್ಪುಟ್ ಫೈಲ್ ಆಫ್ಟರ್ ರನ್ನಿಂಗ್ ಆಲ್ಗಾರಿದಮ್) ಚೆಕ್ ಬಾಕ್ಸ್ ಅನ್ನು ಕ್ಲಿಕ್ ಮಾಡಿ. |
07:19 | ಡಯಲಾಗ್ ಬಾಕ್ಸ್ ನ ಕೆಳ ಬಲ ಮೂಲೆಯಲ್ಲಿರುವ Run ಬಟನ್ ಅನ್ನು ಕ್ಲಿಕ್ ಮಾಡಿ. |
07:24 | ಕ್ಯಾನ್ವಾಸ್ ನ ಮೇಲೆ ಮ್ಯಾಪ್ ಅನ್ನು ಗಮನಿಸಿ. |
07:27 | ನಗರಗಳ ನಡುವಿನ ಔಟ್ಪುಟ್ ಪಾಥ್ ತೋರಿಸುತ್ತಿದೆ. |
07:31 | ಈ algorithm ಅನ್ನು ಬಳಸಿ ಮ್ಯಾಪ್ ನಲ್ಲಿ ಯಾವುದಾದರೂ ಎರಡು ಬಿಂದು (ಪಾಯಿಂಟ್) ಗಳನ್ನು ಮಾರ್ಗದ (ಪಾಥ್) ಮೂಲಕ ಸೇರಿಸಬಹುದು. |
07:38 | ಅಸೈನ್ಮೆಂಟ್ – ಪಶ್ಚಿಮದಿಂದ ಪೂರ್ವದ ನಗರಗಳ ನಡುವೆ ಒಂದು ಮಾರ್ಗ(ಪಾಥ್) ಅನ್ನು ರಚಿಸಿ. |
07:45 | ಸುಳಿವು : Points to path ಡಯಲಾಗ್ ಬಾಕ್ಸ್ ನಲ್ಲಿ, Order field ಡ್ರಾಪ್ ಡೌನ್ ನಲ್ಲಿ Longitude ಕೊಮಾ N ಕೊಮಾ 19 ಕೊಮಾ 11 ಆಯ್ಕೆಯನ್ನು ಬಳಸಿ. |
07:57 | ಈಗ QGIS ನಲ್ಲಿ , WMS ಲೇಯರ್ ಅನ್ನು ಸೇರಿಸೋಣ. |
08:03 | WMS ಕುರಿತು ಹೇಳುವುದಾದರೆ, |
08:06 | WMS ಅಂದರೆ Web Map Services ಎಂದರ್ಥ. |
08:11 | WMS ಇದೊಂದು, ಪರಸ್ಪರ ಕಾರ್ಯ ನಡೆಸುವ ಮ್ಯಾಪಿಂಗ್ ವಿಧಾನಕ್ಕೆ ಒಂದು ಓಪನ್ GIS ಸ್ಟ್ಯಾಂಡರ್ಡ್ ಸ್ಪೆಸಿಫಿಕೇಷನ್ ಆಗಿದೆ. |
08:17 | ಇದು ಇಂಟರ್ನೆಟ್ ನ ಮೂಲಕ ಸರ್ವರ್ ನಿಂದ ಮ್ಯಾಪ್ ನ ಇಮೇಜ್ ಗಳ ಕೋರಿಕೆಯ ಮೇಲೆ ಅವಲಂಬಿತವಾಗಿದೆ. |
08:23 | ಇದನ್ನು ವಿವರಿಸಲು, ಇಂಟರ್ನೆಟ್ ನ ಸಂಪರ್ಕ ಅವಶ್ಯಕವಾಗಿದೆ. |
08:28 | ಯಾವುದಾದರೂ ವೆಬ್ ಬ್ರೌಸರ್ ಅನ್ನು ತೆರೆಯಿರಿ. |
08:31 | ಅಡ್ರೆಸ್ ಬಾರ್ ನಲ್ಲಿ bhuvan.nrsc.gov.in ಎಂದು ಟೈಪ್ ಮಾಡಿ.
Enter ಅನ್ನು ಒತ್ತಿ. |
08:41 | Bhuvan ಹೋಮ್ ಪೇಜ್ ತೆರೆದುಕೊಳ್ಳುತ್ತದೆ. |
08:44 | Thematic Services (ಥಿಮ್ಯಾಟಿಕ್ ಸರ್ವಿಸಸ್) ಟ್ಯಾಬ್ ನ ಮೇಲೆ ಕ್ಲಿಕ್ ಮಾಡಿ. |
08:48 | ಒಂದು ಹೊಸ ವಿಂಡೋದಲ್ಲಿ Thematic Services ಪೇಜ್ ತೆರೆದುಕೊಳ್ಳುತ್ತದೆ. |
08:52 | ಎಡಗಡೆಯಿರುವ ಪ್ಯಾನಲ್ ನಲ್ಲಿ, Search ಟ್ಯಾಬ್ ನಲ್ಲಿ, Select Theme ಡ್ರಾಪ್-ಡೌನ್ ನಡಿಯಲ್ಲಿ,
Land Use Land Cover (50K):2005-06 ಅನ್ನು ಆಯ್ಕೆ ಮಾಡಿ. |
09:06 | Select Geography ಡ್ರಾಪ್ ಡೌನ್ ನಡಿಯಲ್ಲಿ , Karnataka ಅನ್ನು ಆಯ್ಕೆ ಮಾಡಿ. |
09:12 | Web Services ಟ್ಯಾಬ್ ಅನ್ನು ಕ್ಲಿಕ್ ಮಾಡಿ. |
09:15 | For QGIS, uDig, ArcGIS and Other Users, Web Map Service (WMS)URL ವಿಭಾಗದಡಿಯಲ್ಲಿ, |
09:25 | ಈ ಲೇಯರ್ ಗೆ Layer id ಅನ್ನು ಗುರುತು ಮಾಡಿಕೊಳ್ಳಿ, ಮತ್ತು URL ಅನ್ನು ಹೈಲೈಟ್ ಮಾಡಿ, |
09:31 | ರೈಟ್ ಕ್ಲಿಕ್ ಮಾಡಿ ಮತ್ತು URL ಅನ್ನು ಕಾಪಿ ಮಾಡಿ. |
09:36 | QGIS ಇಂಟರ್ಫೇಸ್ ಗೆ ಹಿಂದಿರುಗಿ,
Layers ಪ್ಯಾನಲ್ ನಲ್ಲಿ, Paths ಮತ್ತು Place layers ಗಳನ್ನು ಅನ್ಚೆಕ್ ಮಾಡುವುದರ ಮೂಲಕ ಅವುಗಳನ್ನು ಅಡಗಿಸಿ. |
09:47 | ಮೆನ್ಯು ಬಾರ್ ನಲ್ಲಿ, Layer ಮೆನ್ಯುವನ್ನು ಕ್ಲಿಕ್ ಮಾಡಿ, ಡ್ರಾಪ್ ಡೌನ್ ನಲ್ಲಿ, Add Layer ಅನ್ನು ಆಯ್ಕೆ ಮಾಡಿ. |
09:55 | ಸಬ್-ಮೆನ್ಯುವಿನಲ್ಲಿ, Add WMS/WMTS layer ಅನ್ನು ಆಯ್ಕೆ ಮಾಡಿ. |
10:01 | Add Layer ಡಯಲಾಗ್ ಬಾಕ್ಸ್ ತೆರೆದುಕೊಳ್ಳುತ್ತದೆ. |
10:04 | Layers ಟ್ಯಾಬ್ ನಲ್ಲಿ, New ಬಟನ್ ಅನ್ನು ಕ್ಲಿಕ್ ಮಾಡಿ. |
10:08 | Create a new WMS Connection ಡಯಲಾಗ್ ಬಾಕ್ಸ್ ತೆರೆದುಕೊಳ್ಳುತ್ತದೆ. |
10:13 | Name ಫೀಲ್ಡ್ ನಲ್ಲಿ Bhuvan ಎಂದು ಟೈಪ್ ಮಾಡಿ. |
10:16 | , Bhuvan ವೆಬ್ಸೈಟ್ ನ URL ಲಿಂಕ್ ನಿಂದ ಕಾಪಿ ಮಾಡಿದ್ದನ್ನು, ಈ URL ಫೀಲ್ಡ್ ನಲ್ಲಿ ಪೇಸ್ಟ್ ಮಾಡಿ. |
10:23 | ಡಯಲಾಗ್ ಬಾಕ್ಸ್ ನ ಕೆಳ ಬಲ ಮೂಲೆಯಲ್ಲಿರುವ OK ಬಟನ್ ಅನ್ನು ಕ್ಲಿಕ್ ಮಾಡಿ. |
10:29 | Save Connection ಡಯಲಾಗ್ ಬಾಕ್ಸ್ ನಲ್ಲಿ, OK ಬಟನ್ ಅನ್ನು ಕ್ಲಿಕ್ ಮಾಡಿ. |
10:34 | Add Layers ಡಯಲಾಗ್ ಬಾಕ್ಸ್ ನಲ್ಲಿ, Connect ಬಟನ್ ಅನ್ನು ಕ್ಲಿಕ್ ಮಾಡಿ. |
10:40 | id ವಿಭಾಗದಲ್ಲಿ, id 971 ಅನ್ನು ಆಯ್ಕೆ ಮಾಡಿ |
10:46 | ಈ id ಯು Bhuvan ವೆಬ್ಸೈಟ್ ನ WMS layer ನ id layer ಅನ್ನು ಪ್ರತಿನಿಧಿಸುತ್ತದೆ. |
10:53 | ಡಯಲಾಗ್ ಬಾಕ್ಸ್ ನ ಕೆಳ ಬಲ ಮೂಲೆಯಲ್ಲಿರುವ Add ಬಟನ್ ಅನ್ನು ಕ್ಲಿಕ್ ಮಾಡಿ. |
10:59 | Close ಬಟನ್ ಅನ್ನು ಕ್ಲಿಕ್ ಮಾಡಿ. |
11:02 | canvas ನಲ್ಲಿ , ಕರ್ನಾಟಕದ Land Use Land Cover layer ಡಿಸ್ಪ್ಲೇ ಆಗಿದೆ. |
11:08 | ಇದೇ ರೀತಿಯಾಗಿ, ನಾವು ಲಭ್ಯವಿರುವ ವಿವಿಧ ಥೀಮ್ ಗಳ ಯಾವುದೇ ಲೇಯರ್ ಅನ್ನು ಲೋಡ್ ಮಾಡಬಹುದು. |
11:15 | ಸಂಕ್ಷಿಪ್ತವಾಗಿ,
ಈ ಟ್ಯುಟೋರಿಯಲ್ ನಲ್ಲಿ ನಾವು, |
11:21 | Point Layer ಲೇಯರ್ ಅನ್ನು ರಚಿಸಲು, CSV ಫಾರ್ಮ್ಯಾಟ್ ನಲ್ಲಿ ಸ್ಪ್ರೆಡ್ಶೀಟ್ ಅನ್ನು ಇಂಪೋರ್ಟ್ ಮಾಡುವುದು, |
11:27 | Point Layer ಅನ್ನು Polyline Layer ಆಗಿ ಪರಿವರ್ತಿಸುವುದು ಮತ್ತು |
11:31 | QGIS ನಲ್ಲಿ, Bhuvan ವೆಬ್ಸೈಟ್ ನಿಂದ WMS (Web Map Service) ಲೇಯರ್ ಅನ್ನು ಲೋಡ್ ಮಾಡುವುದು – ಇವುಗಳ ಕುರಿತು ಕಲಿತಿದ್ದೇವೆ. |
11:47 | ಕೆಳಗಿನ ಲಿಂಕ್ನಲ್ಲಿರುವ ವೀಡಿಯೊ ಸ್ಪೋಕನ್ ಟ್ಯುಟೋರಿಯಲ್ ಯೋಜನೆಯನ್ನು ಕುರಿತು ವಿವರಿಸುತ್ತದೆ.
ದಯವಿಟ್ಟು ಅದನ್ನು ಡೌನ್ಲೋಡ್ ಮಾಡಿ ಮತ್ತು ವೀಕ್ಷಿಸಿ. |
11:45 | ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ತಂಡ, ಕಾರ್ಯಾಗಾರಗಳನ್ನು ನಡೆಸುತ್ತದೆ ಮತ್ತು ನಮ್ಮ ಆನ್ಲೈನ್ ಪರೀಕ್ಷೆಗಳಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರಗಳನ್ನು ನೀಡುತ್ತದೆ.
ವಿವರಗಳಿಗಾಗಿ, ದಯವಿಟ್ಟು ನಮಗೆ ಬರೆಯಿರಿ. |
11:58 | ನೀವು ಪ್ರಶ್ನೆಯನ್ನು ಹೊಂದಿರುವ ನಿಮಿಷ ಮತ್ತು ಸೆಕೆಂಡ್ ಅನ್ನು ಆರಿಸಿ.
ನಿಮ್ಮ ಪ್ರಶ್ನೆಯನ್ನು ಸಂಕ್ಷಿಪ್ತವಾಗಿ ವಿವರಿಸಿ. |
12:02 | ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ಗೆ NMEICT, MHRD, ಭಾರತ ಸರ್ಕಾರ ಧನಸಹಾಯ ನೀಡುತ್ತದೆ.
ಹೆಚ್ಚಿನ ವಿವರಗಳಿಗಾಗಿ, ಇಲ್ಲಿ ತೋರಿಸಿರುವ ಲಿಂಕ್ಗೆ ಭೇಟಿ ನೀಡಿ. |
12:14 | ಅನುವಾದ ಮತ್ತು ಧ್ವನಿ ಶ್ರೀ ನವೀನ ಭಟ್ಟ ಉಪ್ಪಿನಪಟ್ಟಣ. ಧನ್ಯವಾದಗಳು. |