Synfig/C2/Overview-of-Synfig/Kannada

From Script | Spoken-Tutorial
Revision as of 21:24, 19 November 2020 by NaveenBhat (Talk | contribs)

(diff) ← Older revision | Latest revision (diff) | Newer revision → (diff)
Jump to: navigation, search
Time Narration
00:01 Overview and Installation of Synfig (ಓವರ್ ವ್ಯೂ ಆಂಡ್ ಇನ್ಸ್ಟಾಲೇಶನ್ ಆಫ್ ಸಿನ್ಫಿಗ್) ನ ಕುರಿತ ಸ್ಪೋಕನ್ ಟ್ಯುಟೋರಿಯಲ್ ಗೆ ಸ್ವಾಗತ.
00:08 ಈ ಟ್ಯುಟೋರಿಯಲ್ ನಲ್ಲಿ ನಾವು: Synfig ನ ಇಂಟರ್ಫೇಸ್ ನ ಕುರಿತು ಕಲಿಯುವೆವು.
00:13 Synfig ನಲ್ಲಿ ಡ್ರಾಯಿಂಗ್ ಮತ್ತು ಆನಿಮೇಷನ್ ಮಾಡುವುದು ಮತ್ತು ಅನೇಕ ಕಂಟೆಂಟ್ ಗಳು ಈ ಟ್ಯುಟೋರಿಯಲ್ ಗಳ ಸರಣಿಯಲ್ಲಿ ಲಭ್ಯವಿದೆ.
00:22 ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು ನಾನು : Ubuntu Linux ಒಎಸ್ ನ ಆವೃತ್ತಿ 16.04
00:30 Synfig ನ ಆವೃತಿ 1.0.2 ಗಳನ್ನು ಬಳಸುತ್ತಿದ್ದೇನೆ.
00:35 ಈ ಟ್ಯುಟೋರಿಯಲ್ ಅನ್ನು ಕಲಿಯಲು ನೀವು Inkscape ನ ಕುರಿತು
00:40 ಮತ್ತು ಆನಿಮೇಷನ್ ನ ತತ್ವಗಳ ಕುರಿತು ಜ್ಞಾನವನ್ನು ಹೊಂದಿರಬೇಕು.
00:43 ಮೊದಲಿಗೆ, Synfig ನ ಕುರಿತು ತಿಳಿದುಕೊಳ್ಳೋಣ.
00:46 Synfig ಒಂದು, 2ಡಿ ಆನಿಮೇಷನ್ ಸಾಫ್ಟ್ವೇರ್ ಆಗಿದೆ. ಇದು ಉಚಿತ ಓಪನ್ ಸೋರ್ಸ್ ಸಾಫ್ಟ್ವೇರ್ ಆಗಿದೆ.
00:53 ಈಗ Synfig ನ ಕೆಲವು ವೈಶಿಷ್ಟ್ಯಗಳನ್ನು ತಿಳಿದುಕೊಳ್ಳೋಣ.
00:57 ಇದು Linux, Windows ಮತ್ತು Mac ಆಪರೇಟಿಂಗ್ ಸಿಸ್ಟಮ್ ಗಳಲ್ಲಿ ಕಾರ್ಯನಿರ್ವಹಿಸುತ್ತದೆ.
01:02 ಇದು ಹಲವಾರು ಆಕೃತಿಗಳನ್ನು ಚಿತ್ರಿಸಬಲ್ಲದು ಮತ್ತು ಟೆಕ್ಸ್ಟ್(ಅಕ್ಷರಗಳ) ಆನಿಮೇಷನ್ ಅನ್ನು ರಚಿಸಬಲ್ಲದು.
01:07 ಇದು png ಇಮೇಜ್ ಗಳನ್ನು ಇಂಪೋರ್ಟ್ ಮಾಡಿಕೊಂಡು, ಅವುಗಳನ್ನು ಆನಿಮೇಷನ್ ಮಾಡುತ್ತದೆ.
01:12 Cutout ಆನಿಮೇಷನ್ ಅನ್ನು ಮಾಡುತ್ತದೆ.
01:16 ಇದು Character walk cycle ಅನ್ನು ಕೂಡ ತಯಾರಿಸುತ್ತದೆ.

ಔಟ್ಪುಟ್ ಅನ್ನು gif, avi ಮತ್ತು ಬೇರೆ ಫಾರ್ಮ್ಯಾಟ್ ಗಳಲ್ಲೂ ರೆಂಡರ್ ಮಾಡಬಹುದು.

01:26 Synfig ಗಳು 2 ಡಿ ಆನಿಮೇಟರ್ ಗಳಿಂದ ಬಳಕೆಯಾಗುವುದು.
01:30 ಆನಿಮೇಷನ್ ನಲ್ಲಿ ಆಸಕ್ತಿಯಿರುವ ಶಾಲಾ-ಕಾಲೇಜು ವಿದ್ಯಾರ್ಥಿಗಳಿಂದ ಬಳಕೆಯಾಗುವುದು.
01:34 ಮುಂದೆ ನಾವು, Ubuntu OS ನಲ್ಲಿ Synfig ಅನ್ನು ಹೇಗೆ ಇನ್ಸ್ಟಾಲ್ ಮಾಡುವುದು ಎಂದು ನೋಡೋಣ.
01:39 ಇನ್ಸ್ಟಾಲೇಷನ್ ವಿಧಾನವನ್ನು ಅನುಸರಿಸಲು, ನೀವು Internet ಸಂಪರ್ಕ ವನ್ನು ಕಡ್ಡಾಯವಾಗಿ ಹೊಂದಿರಬೇಕು.
01:44 ಟರ್ಮಿನಲ್ ಅನ್ನು ತೆರೆಯಲು, Ctrl + Alt + T ಕೀಲಿಗಳನ್ನು ಒಟ್ಟಿಗೆ ಒತ್ತಿ.
01:50 ಈಗ ಟರ್ಮಿನಲ್ ನಲ್ಲಿ, sudo space apt hyphen get install synfigstudio ಎಂದು ಟೈಪ್ ಮಾಡಿ, Enter ಅನ್ನು ಒತ್ತಿ.

ಅಗತ್ಯವಿದ್ದಲ್ಲಿ system password ಅನ್ನು ನಮೂದಿಸಿ.

02:07 ಇದು ಎಷ್ಟು ಡಿಸ್ಕ್ ಸ್ಪೇಸ್ ಬಳಕೆಯಾಗಿದೆ ಎನ್ನುವ ಮೆಸೇಜ್ ಅನ್ನು ತೋರಿಸುತ್ತದೆ.
02:13 ಇದನ್ನು ಖಚಿತಪಡಿಸಲು, Y ಅನ್ನು ಟೈಪ್ ಮಾಡಿ, Enter ಅನ್ನು ನಮೂದಿಸಿ.

Synfig ಅನ್ನು ಇನ್ಸ್ಟಾಲ್ ಮಾಡುತ್ತದೆ.

02:18 ಈಗ Synfig ಯಶಸ್ವಿಯಾಗಿ ಇನ್ಸ್ಟಾಲ್ ಆಗಿದೆಯೇ ಎಂದು ಪರೀಕ್ಷಿಸೋಣ.
02:22 terminal ನಲ್ಲಿ, synfigstudio ಎಂದು ಟೈಪ್ ಮಾಡಿ, Enter ಅನ್ನು ಒತ್ತಿ.
02:28 ನಾವು Synfig console ತೆರೆದುಕೊಳ್ಳುವುದನ್ನು ನೋಡಬಹುದು.
02:31 ಈಗ ನಾವು Windows ಆಪರೇಟಿಂಗ್ ಸಿಸ್ಟಮ್ ನಲ್ಲಿ, Synfig ಅನ್ನು ಇನ್ಸ್ಟಾಲ್ ಮಾಡುವುದನ್ನು ನೋಡೋಣ.
02:37 ಇನ್ಸ್ಟಾಲೇಷನ್ ವಿಧಾನವನ್ನು ಅನುಸರಿಸಲು, ನೀವು Internet ಸಂಪರ್ಕ ವನ್ನು ಕಡ್ಡಾಯವಾಗಿ ಹೊಂದಿರಬೇಕು.

ನಿಮ್ಮ ಡಿಫಾಲ್ಟ್ ವೆಬ್ ಬ್ರೌಸರ್ ಅನ್ನು ತೆರೆಯಿರಿ.

02:45 address bar ನಲ್ಲಿ, url: https://www.synfig.org/download-stable ಎಂದು ಟೈಪ್ ಮಾಡಿ,
Enter  ಅನ್ನು ಒತ್ತಿ.
03:02 Choose your OS ಡ್ರಾಪ್ ಡೌನ್ ಬಾಕ್ಸ್ ನಲ್ಲಿ, ನಿಮ್ಮ ಒ.ಎಸ್ ನ ವಿವರಗಳನ್ನು ಆಯ್ಕೆ ಮಾಡಿ -Windows 64bit / Windows 32bit.

ನಾನು Windows 64bit ಅನ್ನು ಆಯ್ಕೆ ಮಾಡುವೆನು.

03:15 Name a fair price ಫೀಲ್ಡ್ ನಲ್ಲಿ, 0(ಸೊನ್ನೆ) ಎಂದು ಟೈಪ್ ಮಾಡಿ, GET SYNFIG ಅನ್ನು ಒತ್ತಿ.

ಒಂದು ಪಾಪ್ ಅಪ್ ವಿಂಡೋ ಕಾಣಿಸುತ್ತದೆ.

03:23 ಇಲ್ಲಿ ತೋರಿಸಿದಂತೆ, ನಿಮ್ಮ ಇ-ಮೇಲ್ ಐಡಿಯನ್ನು ಟೈಪ್ ಮಾಡಿ. Continue ಅನ್ನು ಕ್ಲಿಕ್ ಮಾಡಿ.
03:29 ನಂತರ ಡ್ರಾಪ್ ಡೌನ್ ಬಾಕ್ಸ್ ನಲ್ಲಿ ನಿಮ್ಮ ಲೊಕೇಷನ್ ಅನ್ನು ಆಯ್ಕೆ ಮಾಡಿ ಮತ್ತು Continue ಅನ್ನು ಒತ್ತಿ. Complete Checkout ಅನ್ನು ಒತ್ತಿ.
03:37 ನೀವು Paddle help@paddle.com ನಿಂದ ಒಂದು ಇ-ಮೇಲ್ ಅನ್ನು ಪಡೆಯುವಿರಿ.

ನಿಮ್ಮ ಇ-ಮೇಲ್ ಅನ್ನು ಪರೀಕ್ಷಿಸಿ ಮತ್ತು ಮೇಲ್ ನಲ್ಲಿ Download ಬಟನ್ ಅನ್ನು ಒತ್ತಿ.

03:47 ಒಂದು ಪಾಪ್ ಅಪ್ ಬರುತ್ತದೆ. Save ಅನ್ನು ಕ್ಲಿಕ್ ಮಾಡಿ.
03:51 Downloads folder ಗೆ ಹೋಗಿ, Synfig .exe ಫೈಲ್ ನ ಮೇಲೆ ಡಬಲ್ ಕ್ಲಿಕ್ ಮಾಡಿ.
03:57 ಒಂದು ಪಾಪ್-ಅಪ್ ವಿಂಡೋ ಕಾಣಿಸುತ್ತದೆ. Run ಬಟನ್ ನ ಮೇಲೆ ಕ್ಲಿಕ್ ಮಾಡಿ.

Synfig Studio Setup ವಿಂಡೋ ಬರುತ್ತದೆ.

04:04 License Agreement ವಿಭಾಗದಲ್ಲಿ, I Agree ಅನ್ನು ಆಯ್ಕೆ ಮಾಡಿ.

Next ಅನ್ನೂ, ನಂತರ Install ಅನ್ನೂ ಕ್ಲಿಕ್ ಮಾಡಿ.

04:14 Close ಅನ್ನು ಕ್ಲಿಕ್ ಮಾಡಿ, ಈಗ Synfig ಯಶಸ್ವಿಯಾಗಿ ಇನ್ಸ್ಟಾಲ್ ಆಗಿದೆ.
04:20 ಪರೀಕ್ಷಿಸಲು, Windows ಬಟನ್ ಅನ್ನು ಕ್ಲಿಕ್ ಮಾಡಿ, Synfig ಎಂದು ಟೈಪ್ ಮಾಡಿ.

ನೀವು Synfig ತೆರೆದುಕೊಳ್ಳುವುದನ್ನು ನೋಡಬಹುದು.

04:28 ಈಗ ನಾವು ಈ ಸರಣಿಯ, ಪ್ರತಿಯೊಂಡು ಟ್ಯುಟೋರಿಯಲ್ ನ ಬಗ್ಗೆ ಸಂಕ್ಷಿಪ್ತವಾಗಿ ನೋಡೋಣ.
04:33 ಈ ಸರಣಿಯ ಮೊದಲನೆಯ ಟ್ಯುಟೋರಿಯಲ್ “Bouncing ball animation” ಆಗಿದೆ.
04:38 ಇಲ್ಲಿ ನಾವು Synfig interface ಅನ್ನು ಬಳಸಲು ,

Synfig ನಲ್ಲಿ ಚೆಂಡನ್ನು ಚಿತ್ರಿಸಲು,

04:45 keyframes ಮತ್ತು waypoints ಗಳನ್ನು ಸೇರಿಸಲು,
04:48 squash ಎಫೆಕ್ಟ್ ನೊಂದಿಗೆ, ಬಾಲ್ ಆನಿಮೇಷನ್ ಅನ್ನು ಮಾಡುವುದು, gif ಫಾರ್ಮ್ಯಾಟ್ ನಲ್ಲಿ ಆನಿಮೇಷನ್ ಅನ್ನು Render ಮಾಡುವುದನ್ನು ಕಲಿಯುವೆವು.
04:54 ಇಲ್ಲಿ ಈ ಟ್ಯುಟೋರಿಯಲ್ ನ ಒಂದು ತುಣುಕನ್ನು ನೋಡೋಣ.
@04:56 Bouncing ball ಟ್ಯುಟೋರಿಯಲ್ ನ 05:41 ನಿಂದ 05:51 ವರೆಗಿನ ಆಡಿಯೋವನ್ನು ಸೇರಿಸಿ.
05:03 ಮುಂದಿನ ಟ್ಯುಟೋರಿಯಲ್ “E-card animation ಆಗಿದೆ.
05:08 ಇದು png ಇಮೇಜ್ ಗಳನ್ನು ಇಂಪೋರ್ಟ್ ಮಾಡಲು ಸಹಾಯ ಮಾಡುತ್ತದೆ.

ಇಮೇಜ್ ಗಳನ್ನು ಆನಿಮೇಟ್ ಮಾಡುವುದು, ಟೆಕ್ಸ್ಟ್ ಆನಿಮೇಷನ್ ಮಾಡುವುದು,

05:17 ಆನಿಮೇಷನ್ ಅನ್ನು ಪ್ರಿವಿವ್ಯೂ ಮಾಡುವುದು ಮತ್ತು avi ಫಾರ್ಮ್ಯಾಟ್ ನಲ್ಲಿ ಆನಿಮೇಷನ್ ಅನ್ನು ರೆಂಡರ್ ಮಾಡುವುದು – ಇವುಗಳ ಕುರಿತು ಕಲಿಯುತ್ತೇವೆ.
05:24 ಈಗ ನಾನು ಆ ಟ್ಯುಟೋರಿಯಲ್ ಅನ್ನು ಪ್ಲೇ ಮಾಡುವೆನು.
@05:26 E-card animation ಟ್ಯುಟೋರಿಯಲ್ ನ 02:56 ನಿಂದ 03:03 ವರೆಗಿನ ಆಡಿಯೋವನ್ನು ಸೇರಿಸಿ.
05:34 ಮುಂದಿನ ಟ್ಯುಟೋರಿಯಲ್ “Create a Star animation” ಆಗಿದೆ.
05:38 ಈ ಟ್ಯುಟೋರಿಯಲ್ ನಲ್ಲಿ ನಾವು ಗ್ರೇಡಿಯೆಂಟ್ ಕಲರ್ ಆನಿಮೇಷನ್ ಅನ್ನು ರಚಿಸುವುದು, ಗ್ರುಪ್ ಲೇಯರ್ ಗಳು ಮತ್ತು ಸ್ಟಾರ್ ಆನಿಮೇಷನ್ ಇವುಗಳ ಕುರಿತು ಕಲಿಯುವೆವು.
05:48 ಇಲ್ಲಿ ಈ ಟ್ಯುಟೋರಿಯಲ್ ನ ಸಣ್ಣ ತುಣುಕಿದೆ.
@05:51 - Create a Star animation ಟ್ಯುಟೋರಿಯಲ್ ನ 03:36 ನಿಂದ 03:44 ವರೆಗಿನ ಆಡಿಯೋವನ್ನು ಸೇರಿಸಿ.
06:00 ಮುಂದಿನ ಟ್ಯುಟೋರಿಯಲ್ “Draw a toy train” ಆಗಿದೆ.
06:04 ಈ ಟ್ಯುಟೋರಿಯಲ್ ನಲ್ಲಿ ನಾವು, ಮೂಲಭೂತ ಆಕೃತಿಗಳನ್ನು ಚಿತ್ರಿಸುವುದು, ಆಕೃತಿಗಳಿಗೆ ಬಣ್ಣ ಹಚ್ಚುವುದು
06:11 ಒಬ್ಜೆಕ್ಟ್ ಗಳನ್ನು ಗ್ರುಪ್ ಮತ್ತು ಡುಪ್ಲಿಕೇಟ್ ಮಾಡುವುದು ಮತ್ತು Guideline ಅನ್ನು ಬಳಸಿ ಆಕೃತಿಗಳನ್ನು ಅಲೈನ್ ಮಾಡುವುದು – ಇವುಗಳ ಕುರಿತು ಕಲಿಯುವೆವು.
06:17 ಈಗ ಅದರ ಒಂದು ತುಣುಕನ್ನು ನೋಡೋಣ.
@06:19 Draw a toy train ಟ್ಯುಟೋರಿಯಲ್ ನ 04:20 ನಿಂದ 04:29 ವರೆಗಿನ ಆಡಿಯೋವನ್ನು ಸೇರಿಸಿ.
06:28 ಮುಂದಿನ ಟ್ಯುಟೋರಿಯಲ್ “Animate a toy train” ಆಗಿದೆ.
06:33 ಈ ಟ್ಯುಟೋರಿಯಲ್ ನಲ್ಲಿ ನಾವು, ಹಿಂದಿನ ಟ್ಯುಟೋರಿಯಲ್ ನಲ್ಲಿ ರಚಿಸಿದ ಟಾಯ್ ಟ್ರೇನ್ ಅನ್ನು ಆನಿಮೇಟ್ ಮಾಡಲು ಕಲಿಯುವೆವು.
06:40 ಇದರ ಒಂದು ಸಣ್ಣ ತುಣುಕು ಇಲ್ಲಿದೆ.
@06:44 - Animate a toy train ಟ್ಯುಟೋರಿಯಲ್ ನ 02:47 ನಿಂದ 02:56 ವರೆಗಿನ ಆಡಿಯೋವನ್ನು ಸೇರಿಸಿ.
06:55 ಮುಂದಿನ ಟ್ಯುಟೋರಿಯಲ್ “Plant animation” ಆಗಿದೆ.
07:00 ಇಲ್ಲಿ - Insert item ಅನ್ನು ಬಳಸಿ ವರ್ಟೆಕ್ಸ್ ಅನ್ನು ಸೇರಿಸುವುದು,
07:05 Split tangent ಆಯ್ಕೆಯನ್ನು ಬಳಸುವುದು,

Mark active point as off ಆಯ್ಕೆಯನ್ನು ಬಳಸುವುದು,

07:12 ಆಕೃತಿಯನ್ನು ಆನಿಮೇಟ್ ಮಾಡುವುದು – ಇವುಗಳನ್ನು ಕಲಿಯುವೆವು.
07:14 ಇಲ್ಲಿ ಈ ಟ್ಯುಟೋರಿಯಲ್ ನ ತುಣಕನ್ನು ನೋಡೋಣ.
@07:17 Plant Animation ಟ್ಯುಟೋರಿಯಲ್ ನ 10:51 ನಿಂದ 10:57 ವರೆಗಿನ ಆಡಿಯೋವನ್ನು ಸೇರಿಸಿ.
07:24 ಮುಂದಿನ ಟ್ಯುಟೋರಿಯಲ್ “Logo animation” ಆಗಿದೆ.
07:28 ಈ ಟ್ಯುಟೋರಿಯಲ್ ನಲ್ಲಿ ನಾವು - Mirror tool ಅನ್ನು ಬಳಸುವುದು,
07:32 ಲೋಗೋ ಆನಿಮೇಟ್ ಮಾಡುವುದು, Spherize (ಸ್ಪೀರೈಝ್) ಎಫೆಕ್ಟ್ – ಇವುಗಳ ಕುರಿತು ಕಲಿಯುವೆವು.
07:38 ಈಗ ಈ ಟ್ಯುಟೋರಿಯಲ್ ನ ಒಂದು ತುಣುಕನ್ನು ನೋಡೋಣ.
@07:41 ಟ್ಯುಟೋರಿಯಲ್ ನ Logo animation 05:01 ನಿಂದ 05:09 ವರೆಗಿನ ಆಡಿಯೋವನ್ನು ಸೇರಿಸಿ.
07:51 ಮುಂದಿನ ಟ್ಯುಟೋರಿಯಲ್ “Basic bone animation” ಆಗಿದೆ.
07:55 ಇಲ್ಲಿ, ಒಂದು ವ್ಯಕ್ತಿಗೆ ಮೂಳೆ ಗಳನ್ನು ಸೇರಿಸುವುದನ್ನು ಕಲಿಯುವೆವು.
07:59 Skeleton ಆಯ್ಕೆಯನ್ನು ಬಳಸಿ, ವ್ಯಕ್ತಿಯನ್ನು ಆನಿಮೇಟ್ ಮಾಡುವುದು – ಇವುಗಳ ಕುರಿತು ಕಲಿಯುತ್ತೇವೆ.
08:03 ಈ ಟ್ಯುಟೋರಿಯಲ್ ನ ಒಂದು ತುಣುಕನ್ನು ನೋಡೋಣ.
@08:07 Basic bone animation ಟ್ಯುಟೋರಿಯಲ್ ನ 05:38 ನಿಂದ 05:48 ವರೆಗಿನ ಆಡಿಯೋವನ್ನು ಸೇರಿಸಿ.
08:18 ಮುಂದಿನ ಟ್ಯುಟೋರಿಯಲ್ "Cutout animation" ಆಗಿದೆ.
08:22 ಈ ಟ್ಯುಟೋರಿಯಲ್ ನಲ್ಲಿ ನಾವು Cutout tool ಅನ್ನು ಇಮೇಜ್ ನ ಮೇಲೆ ಬಳಸುವುದು, ಕಟೌಟ್ ಆಕೃತಿಗಳನ್ನು ಆನಿಮೇಟ್ ಮಾಡುವುದು – ಇವುಗಳ ಕುರಿತು ಕಲಿಯುವೆವು.
08:30 ಇಲ್ಲಿ ಈ ಟ್ಯುಟೋರಿಯಲ್ ನ ಒಂದು ತುಣುಕು ಇದೆ.
@08:34 Cutout Animation ಟ್ಯುಟೋರಿಯಲ್ ನ 03:53 ನಿಂದ 04:01 ವರೆಗಿನ ಆಡಿಯೋವನ್ನು ಸೇರಿಸಿ.
08:43 ಮುಂದಿನ ಟ್ಯುಟೋರಿಯಲ್ "Rocket animation" ಆಗಿದೆ.

ಈ ಟ್ಯುಟೋರಿಯಲ್ ನಲ್ಲಿ ನಾವು ಫೈರ್ ಎಫೆಕ್ಟ್, ನಾಯ್ಸ್ ಗ್ರೇಡಿಯೆಂಟ್ ಮತ್ತು ಫೀದರ್ ಎಫೆಕ್ಟ್ ಗಳ ಕುರಿತು ಕಲಿಯುವೆವು.

08:56 ಇಲ್ಲಿ ಈ ಟ್ಯುಟೋರಿಯಲ್ ನ ಒಂದು ತುಣುಕು ಇದೆ.
@09:00- Rocket Animation ಟ್ಯುಟೋರಿಯಲ್ ನ 03:10 ನಿಂದ 03:20 ವರೆಗಿನ ಆಡಿಯೋವನ್ನು ಸೇರಿಸಿ.
09:12 ಮುಂದಿನ ಟ್ಯುಟೋರಿಯಲ್ "Underwater animation" ಆಗಿದೆ.
09:17 ಈ ಟ್ಯುಟೋರಿಯಲ್ ನಲ್ಲಿ ನಾವು PNGs ಮತ್ತು SVGs ಫೈಲ್ ಗಳನ್ನು ಇಂಪೋರ್ಟ್ ಮಾಡುವುದು,
09:23 Distortion effect ಅನ್ನು ಬಳಸಿ ವಿಡಿಯೋವನ್ನು ಆನಿಮೇಟ್ ಮಾಡುವುದು
09:27 Noise gradient ಮತ್ತು Random option ಅನ್ನು ಬಳಸಿ ರಾಂಡಮ್ ಆನಿಮೇಷನ್ ಮಾಡುವುದು,
09:32 ಮತ್ತು ಈ ಎಲ್ಲ ಆಯ್ಕೆಗಳನ್ನು ಬಳಸಿ, underwater animation ಅನ್ನು ರಚಿಸುವುದು ಇವುಗಳ ಕುರಿತು ಕಲಿಯುವೆವು.
09:36 ಇಲ್ಲಿ ಈ ಟ್ಯುಟೋರಿಯಲ್ ನ ಒಂದು ತುಣುಕು ಇದೆ.
@09:39 Underwater Animation ಟ್ಯುಟೋರಿಯಲ್ ನ 02:37 ನಿಂದ 02:45 ವರೆಗಿನ ಆಡಿಯೋವನ್ನು ಸೇರಿಸಿ.
09:47 ಇಲ್ಲಿಗೆ ನಾವು ಟ್ಯುಟೋರಿಯಲ್ ನ ಕೊನೆಯನ್ನು ತಲುಪಿದ್ದೇವೆ.
09:52 ಈ ಟ್ಯುಟೋರಿಯಲ್ ನಲ್ಲಿ, ನಾವು Synfig ನ ಕುರಿತು ಕಲಿತಿದ್ದೇವೆ ಮತ್ತು ಈ ಸರಣಿಯ ಟ್ಯುಟೋರಿಯಲ್ ಗಳ ಪಕ್ಷಿನೋಟವನ್ನು ನೋಡಿದ್ದೇವೆ.
10:00 ಈ ವಿಡಿಯೋ Spoken Tutorial ಪ್ರಾಜೆಕ್ಟ್ ನ ಕುರಿತು ಸಂಕ್ಷಿಪ್ತವಾಗಿ ತಿಳಿಸಿಕೊಡುತ್ತದೆ.

ದಯವಿಟ್ಟು ಅದನ್ನು ಡೌನ್ಲೋಡ್ ಮಾಡಿ, ನೋಡಿ.

10:06 ಸ್ಪೋಕನ್ ಟ್ಯುಟೋರಿಯಲ್ಸ್ ಕಾರ್ಯಶಾಲೆಗಳನ್ನು ನಡೆಸಿ, ಪ್ರಮಾಣಪತ್ರವನ್ನು ಕೊಡುತ್ತದೆ.

ಹೆಚ್ಚಿನ ಮಾಹಿತಿಗಾಗಿ ನಮಗೆ ಬರೆಯಿರಿ.

10:14 ನಿಮಗೆ ಈ ಸ್ಪೋಕನ್ ಟ್ಯುಟೋರಿಯಲ್ ನಲ್ಲಿ ಪ್ರಶ್ನೆಗಳಿವೆಯೇ?

ಈ ಸೈಟ್ ಅನ್ನು ಭೇಟಿ ಮಾಡಿ.

10:19 ನಿಮ್ಮ ಪ್ರಶ್ನೆಯಿರುವ ನಿಮಿಷ ಮತ್ತು ಸೆಕೆಂಡ್ ಗಳನ್ನು ಆಯ್ಕೆಮಾಡಿಕೊಳ್ಳಿ.

ನಿಮ್ಮ ಪ್ರಶ್ನೆಗಳನ್ನು ಸಂಕ್ಷಿಪ್ತವಾಗಿ ವಿವರಿಸಿ. ನಮ್ಮ ತಂಡದಿಂದ ಯಾರಾದರೂ ಉತ್ತರಿಸುವರು.

10:28 ಸ್ಪೋಕನ್ ಟ್ಯುಟೋರಿಯಲ್ ಇರುವುದು, ಟ್ಯುಟೋರಿಯಲ್ ಗೆ ಸಂಬಂಧಿಸಿದ ನಿರ್ದಿಷ್ಟವಾದ ಪ್ರಶ್ನೆಗಳಿಗಾಗಿಯಾಗಿದೆ.
10:33 ದಯವಿಟ್ಟು, ಸಂಬಂಧವಿಲ್ಲದ ಮತ್ತು ಸಾಮಾನ್ಯ ಪ್ರಶ್ನೆಗಳನ್ನು ಪೋಸ್ಟ್ ಮಾಡಬೇಡಿ.
10:37 ಇದು ಅಸ್ತವ್ಯಸ್ತತೆಯನ್ನು ಕಡಿಮೆ ಮಾಡಲು ಸಹಾಯಮಾಡುತ್ತದೆ. ಅನವಶ್ಯಕ ವಿಷಯಗಿಳಿಲ್ಲದಿದ್ದರೆ ನಾವು ಈ ಚರ್ಚೆಯನ್ನು ಇನ್ಸ್ಟ್ರಕ್ಷನಲ್ ಮಟೀರಿಯಲ್ ಆಗಿ ಬಳಸಬಹುದು.
10:45 ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್, NMEICT, MHRD, ಭಾರತ ಸರ್ಕಾರ – ಇವರಿಂದ ಅನುದಾನವನ್ನು ಪಡೆದಿರುತ್ತದೆ.

ಈ ಮಿಷನ್ ನ ಕುರಿತು ಹೆಚ್ಚಿನ ಮಾಹಿತಿ ಈ ಲಿಂಕ್ ನಲ್ಲಿದೆ.

10:56 ಅನುವಾದ ಮತ್ತು ಧ್ವನಿ ಶ್ರೀ ನವೀನ್ ಭಟ್ಟ, ಉಪ್ಪಿನಪಟ್ಟಣ.

ಧನ್ಯವಾದಗಳು.

Contributors and Content Editors

NaveenBhat