Synfig/C3/Plant-animation/Kannada
From Script | Spoken-Tutorial
Revision as of 15:59, 10 November 2020 by NaveenBhat (Talk | contribs)
Time | Narration |
00:00 | Synfig ಅನ್ನು ಬಳಸಿ, “Create a Plant animation” ನ ಕುರಿತಾದ ಸ್ಪೋಕನ್ ಟ್ಯುಟೋರಿಯಲ್ ಗೆ ಸ್ವಾಗತ. |
00:05 | ಈ ಟ್ಯುಟೋರಿಯಲ್ ನಲ್ಲಿ, Synfig ಅನ್ನು ಬಳಸಿ, ಅಕೃತಿಗಳನ್ನು ಎನಿಮೇಟ್ ಮಾಡುವುದು ಹೇಗೆ ಎಂದು ನಾವು ಪರಿಚಯಿಸಿಕೊಳ್ಳುತ್ತೇವೆ. |
00:11 | ನಾವು – ಆಕೃತಿಗಳನ್ನು ಬಿಡಿಸುವುದು ಮತ್ತು ಲೇಯರ್ ಗಳನ್ನು ಗ್ರುಪ್ ಮಾಡುವುದು, |
00:15 | Insert item ಅನ್ನು ಬಳಸಿ, vertex ಅನ್ನು ಸೇರಿಸುವುದು, |
00:18 | split tangent ಆಯ್ಕೆ, |
00:21 | mark active point as off ಆಯ್ಕೆ ಮತ್ತು |
00:24 | ಆಕೃತಿಗಳನ್ನು ಅನಿಮೇಟ್ ಮಾಡುವುದು – ಇವುಗಳ ಕುರಿತು ಕಲಿಯುವೆವು. |
00:26 | ಇಲ್ಲಿ ನಾವು Plant animation ಅನ್ನು ರಚಿಸುವೆವು. |
00:29 | ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು ನಾನು - |
00:31 | Ubuntu Linux 14.04 ಒ.ಎಸ್, |
00:35 | Synfig ಆವೃತಿ 1.0.2 – ಇವುಗಳನ್ನು ಬಳಸುತ್ತಿದ್ದೇನೆ. |
00:39 | ಈಗ synfig ಅನ್ನು ತೆರೆಯೋಣ. |
00:41 | Dash home ಹೋಗಿ, ಮತ್ತು Synfig ಎಂದು ಟೈಪ್ ಮಾಡಿ. |
00:45 | ನೀವು logo ಅನ್ನು ಕ್ಲಿಕ್ ಮಾಡಿ ಕೂಡ, Synfig ಅನ್ನು ಓಪನ್ ಮಾಡಬಹುದು. |
00:50 | ಈಗ Plant animation ಅನ್ನು ರಚಿಸಲು ಆರಂಭಿಸೋಣ. |
00:54 | ನಾವು ಮೊದಲು Synfig ನಲ್ಲಿ ಗ್ರಾಫಿಕ್ ಅನ್ನು ರಚಿಸಬೇಕು. |
00:59 | ನಾವು ಹೂವಿನೊಂದಿಗೆ ಒಂದು ಗಿಡವನ್ನು ರಚಿಸೋಣ. |
01:02 | ನಮ್ಮ Synfig ಫೈಲ್ ಅನ್ನು save ಮಾಡೋಣ. |
01:05 | File ಗೆ ಹೋಗಿ, Save ಅನ್ನು ಕ್ಲಿಕ್ ಮಾಡಿ. |
01:08 | ಯಾವ ಫೋಲ್ಡರ್ ನಲ್ಲಿ ಸೇವ್ ಮಾಡಬೇಕೆಂದು ಆಯ್ಕೆ ಮಾಡಿ. |
01:11 | ಫೈಲ್ ನೇಮ್ ಅನ್ನು Plant-animation ಎಂದು ಟೈಪ್ ಮಾಡಿ ಮತ್ತು Save ಬಟನ್ ಅನ್ನು ಕ್ಲಿಕ್ ಮಾಡಿ. |
01:16 | ಯಾವುದೇ ಆಕೃತಿಯನ್ನು ಬರೆಯುವ ಮೊದಲು ಬಿಳಿಯ ಬ್ಯಾಕ್ ಗ್ರೌಂಡ್ ಅನ್ನು ರಚಿಸಿಕೊಳ್ಳಿ. |
01:21 | ಲೇಯರ್ ನ ಹೆಸರನ್ನು Background ಎಂದು ಬದಲಿಸಿ. |
01:26 | toolbox ಗೆ ಹೋಗಿ, Spline tool ಅನ್ನು ಆಯ್ಕೆ ಮಾಡಿ. |
01:30 | ಕೇವಲ "Create Region Layer" ಮಾತ್ರ ಆಯ್ಕೆಯಾಗಿದೆ ಎಂದು ಖಚಿತಪಡಿಸಿಕೊಳ್ಳಿ. |
01:35 | toolbox ನಲ್ಲಿ, fill colour ಅನ್ನು ಹಸಿರು ಬಣ್ಣಕ್ಕೆ(ಗ್ರೀನ್) ಸೆಟ್ ಮಾಡಿ. |
01:38 | ಈಗ ಇಲ್ಲಿ ತೋರಿಸಿರುವಂತೆ, Spline ಟೂಲ್ ನಿಂದು ಒಂದು ತ್ರಿಕೋನವನ್ನು ರಚಿಸಿ. |
01:43 | ನಾವು ಮೂರು ವರ್ಟೈಸಿಸ್( ಶೃಂಗ) ಗಳನ್ನು ಚಿತ್ರಿಸಿದ ನಂತರ ಈ ಆಕೃತಿಯನ್ನು ಮುಚ್ಚಬೇಕು. |
01:49 | ಇದನ್ನು ಮಾಡಲು, ಮೊದಲ ವರ್ಟೆಕ್ಸ್ ಅನ್ನು ರೈಟ್ ಕ್ಲಿಕ್ ಮಾಡಿ ಮತ್ತು Loop Spline ಅನ್ನು ಆಯ್ಕೆ ಮಾಡಿ. |
01:55 | ಇದು ಹಸಿರು ಬಣ್ಣದ ತ್ರಿಕೋನಾಕಾರವನ್ನು ಪೂರ್ಣಗೊಳಿಸುತ್ತದೆ. |
01:57 | ದುಂಡಾದ ತ್ರಿಕೋನವನ್ನು ಮಾಡಲು, ನಾವು ಟ್ಯಾಂಜಂಟ್ ನ ಹ್ಯಾಂಡಲ್ಸ್ ಗಳನ್ನು ಸ್ವಲ್ಪ ತಿರುಚಬೇಕು. |
02:03 | Transform tool ಅನ್ನು ಕ್ಲಿಕ್ ಮಾಡಿ, ನಂತರ ಪ್ರತಿಯೊಂದು ವರ್ಟೆಕ್ಸ್ ಅನ್ನು ರೈಟ್ ಕ್ಲಿಕ್ ಮಾಡಿ. |
02:09 | Split tangents ಅನ್ನು ಆಯ್ಕೆ ಮಾಡಿ, ಅದರಿಂದ ಪ್ರತಿ ವರ್ಟೆಕ್ಸ ನ ಟ್ಯಾಂಜೆಂಟ್ ಹ್ಯಾಂಡಲ್ಸ್ ಗಳನ್ನು ಪ್ರತ್ಯೇಕವಾಗಿ ಸರಿಸಬಹುದು. |
02:18 | Layers ಪ್ಯಾನಲ್ ಅನ್ನು ಗಮನಿಸಿ. |
02:20 | ಹೊಸ ಲೇಯರ್ ರಚನೆಯಾಗಿದೆ. ಇದನ್ನು Stem ಎಂದು ಹೆಸರಿಸೋಣ. |
02:24 | ಫೈಲ್ ಅನ್ನು ಸೇವ್ ಮಾಡಲು, Ctrl ಮತ್ತು S ಗಳನ್ನು ಒಟ್ಟಿಗೆ ಒತ್ತಿ. |
02:29 | ಈಗ ನಾವು ಕಾಂಡ(ಸ್ಟೆಮ್) ದ ಆಕಾರವನ್ನು ಆನಿಮೇಟ್ ಮಾಡುವುದನ್ನು ಕಲಿಯುವೆವು. |
02:34 | Turn on animate editing mode ಐಕಾನ್ ಅನ್ನು ಕ್ಲಿಕ್ ಮಾಡಿ. |
02:38 | Stem ಲೇಯರ್ ಅನ್ನು ಕ್ಲಿಕ್ ಮಾಡಿ, ಆಕೃತಿಯನ್ನು ಆಯ್ಕೆ ಮಾಡಿಕೊಳ್ಳಿ. |
02:42 | ಕ್ಯಾನ್ವಾಸ್ ನ ಮೇಲ್ಭಾಗದಲ್ಲಿ, Toggle tangent handles ಆಯ್ಕೆಯು, ON ಆಗಿರುವುದನ್ನು ಖಚಿತಪಡಿಸಿಕೊಳ್ಳಿ. |
02:50 | ನಂತರ, Time track panel ಗೆ ಹೋಗಿ, ಮತ್ತು 24 ನೇ ಫ್ರೇಮ್ ನ ಮೇಲೆ Time cursor ಅನ್ನು ಇಡಿ. |
02:57 | Transform tool ಅನ್ನು ಆಯ್ಕೆ ಮಾಡಿ. |
03:00 | ಕಾಂಡದ ಮೇಲ್ಬಾಗದ ವರ್ಟೆಕ್ಸ್ ಅನ್ನು ಕ್ಲಿಕ್ ಮಾಡಿ, ಇದನ್ನು ಇಲ್ಲಿ ತೋರಿಸಿರುವಂತೆ, ಕ್ಯಾನ್ವಾಸ್ ನ ಮೇಲೆ ಮೇಲ್ಮುಖವಾಗಿ ಡ್ರ್ಯಾಗ್ ಮಾಡಿ. |
03:06 | ನೀವು zoom in ಮತ್ತು zoom out ಮಾಡಲು, ಕ್ರಮವಾಗಿ + ಮತ್ತು – ಚಿಹ್ನೆಯನ್ನು ಬಳಸಬಹುದು. |
03:13 | ನಂತರ, ruler ಗೆ ಹೋಗಿ, |
03:17 | ಕ್ಯಾನ್ವಾಸ್ ನ ಮೇಲೆ, ಇಲ್ಲಿ ತೋರಿಸಿರುವಂತೆ ಐದು Guidlines ಗಳನ್ನು ಡ್ರ್ಯಾಗ್ ಮಾಡಿ. |
03:24 | ಫೈಲ್ ಅನ್ನು ಸೇವ್ ಮಾಡಲು, Ctrl ಮತ್ತು S ಕೀಲಿಗಳನ್ನು ಒತ್ತಿ. |
03:29 | Toolbar ನಲ್ಲಿ, Transform tool ಅನ್ನು ಕ್ಲಿಕ್ ಮಾಡಿ. |
03:32 | canvas ನಲ್ಲಿ, ಆಕೃತಿಯ ಮೇಲೆ ರೈಟ್-ಕ್ಲಿಕ್ ಮಾಡಿ. |
03:36 | ನಂತರ Insert item and keep shape ಅನ್ನು ಕ್ಲಿಕ್ ಮಾಡಿ. |
03:40 | ಇಲ್ಲಿ ಮಾಡಿರುವಂತೆ, Guidelines ಗಳ ಮೇಲೆ, ಇನ್ನೂ 10 ವರ್ಟೈಸಿಸ್ ಗಳನ್ನು ಸಂಯೋಜಿಸಿ. |
03:45 | ಇದನ್ನು Insert item and keep shape ಕ್ಲಿಕ್ ಮಾಡಿ, ಮಾಡಬಹುದು. |
03:49 | ಈಗ, ಪ್ರತಿ ವರ್ಟೆಕ್ಸ್ ನ ಮೇಲೂ ರೈಟ್-ಕ್ಲಿಕ್ ಮಾಡಿ. |
03:53 | Split tangents ಅನ್ನು ಆಯ್ಕೆ ಮಾಡಿ, ಅದರಿಂದ ಪ್ರತಿ ವರ್ಟೆಕ್ಸ ನ ಟ್ಯಾಂಜೆಂಟ್ ಹ್ಯಾಂಡಲ್ಸ್ ಗಳನ್ನು ಪ್ರತ್ಯೇಕವಾಗಿ ಸರಿಸಬಹುದು. |
04:00 | ನಂತರ Time track panel ಗೆ ಹೋಗಿ ಮತ್ತು 23 ನೆಯ ಫ್ರೇಮ್ ನಲ್ಲಿ Time cursor ಅನ್ನು ಇಡಿ. |
04:06 | parameter panel ಗೆ ಹೋಗಿ. |
04:08 | ಗ್ರುಪ್ ಅನ್ನು ತೆರೆಯಲು, Vertices ಗಳ ಟ್ರೈ ಆಂಗಲ್ ಐಕಾನ್ ನ ಮೇಲೆ ಕ್ಲಿಕ್ ಮಾಡಿ. |
04:13 | ಹೊಸದಾಗಿ ಸೇರಿಸಿದ ವರ್ಟೈಸಿಸ್ ಗಳನ್ನು ಪರೀಕ್ಷಿಸಿ. |
04:15 | ನಾವು ಅವುಗಳನ್ನು 23 ನೆಯ ಫ್ರೇಮ್ ನಲ್ಲಿ ನಿಷ್ಕ್ರಿಯಗೊಳಿಸಬೇಕು. |
04:19 | ಹೊಸದಾಗಿ ಸೇರಿಸಿದ ವರ್ಟೈಸಿಸ್ ಗಳ ಮೇಲೆ ರೈಟ್-ಕ್ಲಿಕ್ ಮಾಡಿ. |
04:22 | Mark active point as off ಅನ್ನು ಕ್ಲಿಕ್ ಮಾಡಿ. |
04:26 | ಇದೇರೀತಿಯಾಗಿ ಹೊಸದಾಗಿ ಸೇರಿಸಿದ ಎಲ್ಲ ವರ್ಟೈಸಿಸ್ ಗಳಿಗೂ ಮಾಡಿ. |
04:39 | ಫೈಲ್ ಅನ್ನು ಸೇವ್ ಮಾಡಲು, Ctrl ಮತ್ತು S ಕೀಲಿಗಳನ್ನು ಒತ್ತಿ. |
04:43 | ಈಗ ಮತ್ತೊಮ್ಮೆ Time track panel ಗೆ ಹೋಗಿ, Time cursor ಅನ್ನು 30ನೆಯ ಫ್ರೇಮ್ ನಲ್ಲಿಡಿ. |
04:49 | canvas ಗೆ ಹಿಂದಿರುಗಿ. |
04:50 | ಈಗ ಎಲೆಗಳ ನೇರವಾದ ಭಾಗಗಳನ್ನು ರಚಿಸಲು ಇಲ್ಲಿ ತೋರಿಸಿರುವಂತೆ, ವರ್ಟೈಸಿಸ್ ಗಳನ್ನು ಸರಿಸಿ. |
04:57 | ಮತ್ತೆ ಈಗ Time track panel ಗೆ ಹೋಗಿ, Time cursor 37ನೆಯ ಫ್ರೇಮ್ ನಲ್ಲಿಡಿ. |
05:04 | ಮತ್ತೆ canvasಗೆ ಹಿಂದಿರುಗೋಣ. |
05:06 | ಎಲೆಗಳನ್ನು ರಚಿಸಲು, ವರ್ಟೈಸಿಸ್ ಗಳನ್ನು ಈ ರೀತಿಯಾಗಿ ಸರಿಸಿ. |
05:11 | ನೆನಪಿಡಿ, ಹೊಸತಾಗಿ ಸೇರಿಸಿದ ವರ್ಟೈಸಿಸ್ ಗಳಿಗೆ ಮಾತ್ರ mark active point ಅನ್ನು off ಎಂದು ಸೆಟ್ ಮಾಡಲಾಗಿದೆ. |
05:18 | Time track panel ಗೆ ಹಿಂದಿರುಗಿ. |
05:20 | Time cursor ಅನ್ನು 45 ನೆಯ ಫ್ರೇಮ್ ನಲ್ಲಿಡಿ, ಮತ್ತು ಮೇಲಿನ ವರ್ಟೆಕ್ಸ್ ಅನ್ನು ಇಲ್ಲಿ ತೋರಿಸಿರುವಂತೆ ಸರಿಸಿ. |
05:30 | ಇದೇ ರೀತಿಯಾಗಿ, ನಾವು Stem ನಲ್ಲಿಯೇ ಇನ್ನೂ ಎರಡು ಎಲೆಗಳನ್ನು ಸೇರಿಸುವೆವು. |
05:35 | Time track panel ಗೆ ಹೋಗಿ ಮತ್ತು Time cursor 80 ನೆಯ ಫ್ರೇಮ್ ನಲ್ಲಿಡಿ. |
05:40 | ಈಗ ಮೊಗ್ಗಿನ ಸುತ್ತ ಹಸಿರು ಬಣ್ಣದ ದಳಗಳನ್ನು ಮಾಡಲು ಸ್ಟೆಮ್ ನ vertices ಗಳನ್ನು ಸರಿಸಿ. |
05:53 | ಮತ್ತೊಮ್ಮೆ Time track panel ಹೋಗಿ ಮತ್ತು Time cursor ಅನ್ನು 90 ನೆಯ ಫ್ರೇಮ್ ನಲ್ಲಿಡಿ. |
05:59 | ನಂತರ Keyframes ಗೆ ಹೋಗಿ ಮತ್ತು ಒಂದು ಹೊಸ keyframe ಅನ್ನು ಸೇರಿಸಿ. |
06:02 | ಈಗ, Spline ಟೂಲ್ ಅನ್ನು ಕ್ಲಿಕ್ ಮಾಡಿ. |
06:05 | "Create Region Layer" ಮಾತ್ರ ಆಯ್ಕೆಯಾಗಿದೆ ಎಂಬುದನ್ನು ಖಚಿತ ಪಡಿಸಿಕೊಳ್ಳಿ. |
06:11 | toolbox ನಲ್ಲಿ, ಫಿಲ್ ಕಲರ್ ಅನ್ನು ಗುಲಾಬಿ (ಪಿಂಕ್) ಬಣ್ಣಕ್ಕೆ ಸೆಟ್ ಮಾಡಿ. |
06:14 | ನಂತರ ಇಲ್ಲಿ ತೋರಿಸಿರುವಂತೆ, Spline ಟೂಲ್ ಅನ್ನು ಬಳಸಿ, ಒಂದು ಮೊಗ್ಗನ್ನು ಬರೆಯಿರಿ. |
06:19 | ಮೂರು ವರ್ಟೈಸಿಸ್ ಗಳನ್ನು ಬರೆದಾದ ನಂತರ, ಈ ಆಕೃತಿಯನ್ನು ಮುಚ್ಚುವುದನ್ನು ನೆನಪಿಡಿ. |
06:25 | ಇದನ್ನು ಮಾಡಲು, ಮೊದಲ ವರ್ಟೆಕ್ಸ್ ನ ಮೇಲೆ ರೈಟ್ ಕ್ಲಿಕ್ ಮಾಡಿ ಮತ್ತು Loop Spline'" ಅನ್ನು ಆಯ್ಕೆ ಮಾಡಿ. |
06:31 | ಗಮನಿಸಿ, ಈಗ ಆಕೃತಿಯು ಮುಚ್ಚಲ್ಪಟ್ಟಿದೆ. |
06:36 | vertices ಗಳನ್ನು ಹೊಂದಿಸಿ, ಮೊಗ್ಗಿನ ಆಕಾರವನ್ನು ರಚಿಸಿ. |
06:40 | ಲೇಯರ್ ನ ಹೆಸರನ್ನು Bud ಎಂದು ಬದಲಿಸಿ. |
06:43 | Bud ಲೇಯರ್ ಅನ್ನು, Stem ಲೇಯರ್ ನ ಕೆಳಗಡೆ ಇಡಿ. |
06:47 | ಮತ್ತೆ Time track panel ಗೆ ಹೋಗಿ ಮತ್ತು Time cursor ಅನ್ನು 99 ನೆಯ ಫ್ರೇಮ್ ನಲ್ಲಿಡಿ. |
06:54 | ಈಗ ಮೊಗ್ಗಿನ top vertex ಅನ್ನು, ಇಲ್ಲಿ ಮಾಡಿರುವಂತೆ, ಸರಿಸಿ. |
06:58 | ಫೈಲ್ ಅನ್ನು ಸೇವ್ ಮಾಡಲು, Ctrl ಮತ್ತು S ಕೀಲಿಗಳನ್ನು ಒತ್ತಿ. |
07:03 | ಈಗ Layers panel ಹೋಗಿ, Stem ಲೇಯರ್ ಅನ್ನು ಆಯ್ಕೆ ಮಾಡಿ. |
07:07 | ಇದಾದ ನಂತರ, canvas ಗೆ ಹಿಂದಿರುಗಿ, ಮತ್ತು ಕಾಂಡದ ಆಕೃತಿಯ ಮೇಲೆ ರೈಟ್ ಕ್ಲಿಕ್ ಮಾಡಿ. |
07:13 | Insert item and keep shape ಅನ್ನು ಕ್ಲಿಕ್ ಮಾಡಿ, ಇನ್ನೊಂದು ವರ್ಟೆಕ್ಸ್ ಅನ್ನು ಸೇರಿಸಿ. |
07:18 | ಇದೇ ರೀತಿಯಾಗಿ ನಾವು ಇನ್ನೂ ನಾಲ್ಕು ವರ್ಟೈಸಿಸ್ ಗಳನ್ನು ಸೇರಿಸಬೇಕು. |
07:22 | time cursor ಅನ್ನು 98 ನೆಯ ಫ್ರೇಮ್ ನಲ್ಲಿಡಿ. ಮತ್ತು ಈ ವರ್ಟೈಸಿಸ್ ಗಳಿಗೆ active point ಅನ್ನು off ಎಂದು ಮಾರ್ಕ್ ಮಾಡಿ. |
07:33 | ಇಲ್ಲಿ ತೋರಿಸಿರುವಂತೆ ವರ್ಟೈಸಿಸ್ ಗಳನ್ನು ಸರಿಸಿ, ನಾವು ಈ ರೀತಿಯ ಆಕೃತಿಯನ್ನು ಪಡೆಯಬೇಕು. |
07:41 | ಫೈಲ್ ಅನ್ನು ಸೇವ್ ಮಾಡಲು, Ctrl ಮತ್ತು S ಕೀಲಿಗಳನ್ನು ಒತ್ತಿ. |
07:45 | ನಿಮ್ಮ ಫೈಲ್ ಅನ್ನು ಆಗಾಗ್ಗೆ ಸೇವ್ ಮಾಡುವುದು ಉತ್ತಮ ಹವ್ಯಾಸವಾಗಿದೆ. |
07:49 | ಮುಂದೆ ಹೋದಂತೆ ನಾನು ಇದನ್ನು, ಬಾಹ್ಯವಾಗಿ ತಿಳಿಸುವುದಿಲ್ಲ. |
07:54 | ದಯವಿಟ್ಟು ನಿರ್ದಿಷ್ಟಾವಧಿಗೊಮ್ಮೆ ಇದನ್ನು ನೀವೇ ಮಾಡಿ. |
07:58 | Time track panel ಗೆ ಹಿಂದಿರುಗಿ ಮತ್ತು Time cursor ಅನ್ನು 100 ನೆಯ ಫ್ರೇಮ್ ನಲ್ಲಿಡಿ. |
08:03 | Layers ಪ್ಯಾನೆಲ್ ಗೆ ಹೋಗಿ ಮತ್ತು Bud ಲೇಯರ್ ಅನ್ನು ಆಯ್ಕೆ ಮಾಡಿ. |
08:06 | Duplicate ನ ಮೇಲೆ ಎರಡು ಬಾರಿ ಕ್ಲಿಕ್ ಮಾಡಿ. |
08:10 | ಲೇಯರ್ ಗಳನ್ನು ಕ್ರಮವಾಗಿ, petal_1 ಮತ್ತು petal_2 ಎಂದು ಹೆಸರಿಸಿ. |
08:19 | Time cursor ಅನ್ನು 108 ನೆಯ ಫ್ರೇಮ್ ನಲ್ಲಿಡಿ. |
08:22 | ದಳಗಳ ನೋಡ್ಸ್ ಗಳನ್ನು ಇಲ್ಲಿ ತೋರಿಸಿರುವಂತೆ ಸರಿಸಿ. |
08:26 | Time track panel ಗೆ ಹಿಂದಿರುಗಿ ಮತ್ತು Time cursor ಅನ್ನು 115ನೆಯ ಫ್ರೇಮ್ ನಲ್ಲಿಡಿ. |
08:34 | Layers ಪ್ಯಾನೆಲ್ ಗೆ ಹೋಗಿ, ಮತ್ತು petal_1 ಮತ್ತು petal_2 ಲೇಯರ್ ಗಳೆರಡನ್ನೂ ಆಯ್ಕೆ ಮಾಡಿ. |
08:40 | Duplicate ಅನ್ನು ಕ್ಲಿಕ್ ಮಾಡಿ. |
08:43 | ಹೊಸ ಲೇಯರ್ ಗಳನ್ನು petal_3 ಮತ್ತು petal_4 ಎಂದು ಹೆಸರಿಸಿ. |
08:47 | ಈಗ Time track panel ಗೆ ಹಿಂದಿರುಗೋಣ. |
08:52 | Time cursor ಅನ್ನು120 ನೆಯ ಫ್ರೇಮ್ ನಲ್ಲಿಡಿ. |
08:56 | 3 ಮತ್ತು 4 ನೆಯ ಪೆಟಲ್ ಗಳ vertices ಗಳನ್ನು, ಇಲ್ಲಿ ತೋರಿಸಿರುವಂತೆ ಸರಿಸಿ. |
09:03 | Layers ಪ್ಯಾನಲ್ ಗೆ ಹೋಗಿ ಮತ್ತು petal _3 ಮತ್ತು petal_4 ಲೇಯರ್ ಗಳನ್ನು ಆಯ್ಕೆ ಮಾಡಿಕೊಳ್ಳಿ. |
09:10 | Duplicate ಅನ್ನು ಕ್ಲಿಕ್ ಮಾಡಿ. |
09:12 | ಹೊಸ ಲೇಯರ್ ಗಳನ್ನು, petal_5 ಮತ್ತು petal_6 ಎಂದು ಹೆಸರಿಸಿ. |
09:17 | Time track panel ಗೆ ಹಿಂದಿರುಗಿ, Time cursor ಅನ್ನು 140 ನೆಯ ಫ್ರೇಮ್ ನಲ್ಲಿಡಿ. |
09:23 | 5 ಮತ್ತು 6ನೆಯ ಪೆಟಲ್ ಗಳ ವರ್ಟೈಸಿಸ್ ಗಳನ್ನು ಇಲ್ಲಿ ತೋರಿಸಿರುವಂತೆ ಸರಿಸಿ. |
09:33 | ಮತ್ತೆ, Time track panel ಗೆ ಹೋಗಿ, Time cursor ಅನ್ನು 108 ನೆಯ ಫ್ರೇಮ್ ನಲ್ಲಿಡಿ. |
09:42 | ನಂತರ Toolbar ಗೆ ಹೋಗಿ, Transform tool ಅನ್ನು ಕ್ಲಿಕ್ ಮಾಡಿ. |
09:46 | ಡ್ರಾಯಿಂಗ್ ನ ಕಾಂಡದ ಭಾಗವನ್ನು ಆಯ್ಕೆ ಮಾಡಿ. |
09:48 | ಮೊಗ್ಗಿನ ಹಸಿರು ದಳಗಳ ವರ್ಟೈಸಿಸ್ ಗಳನ್ನು, ಇಲ್ಲಿ ತೋರಿಸಿರುವಂತೆ ಸರಿಸಿ. |
09:55 | Time track panel ಗೆ ಹೋಗಿ, Time cursor ಅನ್ನು 128 ನೆಯ ಫ್ರೇಮ್ ನಲ್ಲಿಡಿ. |
10:01 | ಮೊಗ್ಗಿನ ಹಸಿರು ದಳಗಳ ವರ್ಟೈಸಿಸ್ ಗಳನ್ನು, ಇಲ್ಲಿ ತೋರಿಸಿರುವಂತೆ ಸರಿಸಿ. |
10:13 | ಕರ್ಸರ್ ಅನ್ನು 0 ಫ್ರೇಮ್ ನಲ್ಲಿಡಿ. Bud ಲೇಯರ್ ಅನ್ನು ಆಯ್ಕೆ ಮಾಡಿ. |
10:17 | Parameters ಪ್ಯಾನಲ್ ಗೆ ಹೋಗಿ, ಮತ್ತು Amount ಅನ್ನು 0 ಎಂದು ಬದಲಿಸಿ. |
10:20 | petals ಲೇಯರ್ ಗಳಿಗೂ ಇದೇ ರೀತಿಯಾಗಿ ಮಾಡಿ. |
10:34 | ಈಗ 89 ನೆಯ ಫ್ರೇಮ್ ಗೂ ಇದೇ ರೀತಿಯಾಗಿ ಮಾಡೋಣ. |
10:46 | Turn off animate editing mode ಐಕಾನ್ ಅನ್ನು ಕ್ಲಿಕ್ ಮಾಡಿ. |
10:51 | ಕ್ಯಾನ್ವಾಸ್ ನ ಕೆಳಭಾಗದಲ್ಲಿರುವ Seek to begin ಅನ್ನು ಕ್ಲಿಕ್ ಮಾಡಿ. |
10:55 | Play ಐಕಾನ್ ಅನ್ನು ಕ್ಲಿಕ್ ಮಾಡಿ, ಆನಿಮೇಷನ್ ಅನ್ನು ಪ್ಲೇ ಮಾಡಿ. |
10:58 | ಈಗ background ನಲ್ಲಿ, gradient (ಗ್ರೇಡಿಯೆಂಟ್) ಅನ್ನು ಸೇರಿಸೋಣ. |
11:02 | Background ಲೇಯರ್ ಅನ್ನು ಆಯ್ಕೆ ಮಾಡಿ. gradient ಅನ್ನು ಕ್ಲಿಕ್ ಮಾಡಿ. |
11:06 | ಇಲ್ಲಿ ತೋರಿಸಿರುವಂತೆ ಬ್ಯಾಕ್ ಗ್ರೌಂಡ್ ನಲ್ಲಿ ಗ್ರೇಡಿಯೆಂಟ್ ಅನ್ನು ಡ್ರ್ಯಾಗ್ ಮಾಡಿ. |
11:11 | outline colour ಅನ್ನು ಕಂದು ಬಣ್ಣ(ಬ್ರೌನ್), fill colour ಅನ್ನು ನೀಲಿ ಬಣ್ಣವನ್ನೂ ಆಯ್ಕೆ ಮಾಡಿ. |
11:15 | ಈಗ ನಾವು Synfig ಫೈಲ್ ಅನ್ನು save ಸೇವ್ ಮಾಡೋಣ. |
11:18 | ಈಗ ನಾವು , preview ಅನ್ನು ಪರೀಕ್ಷಿಸೋಣ. |
11:21 | File ಹೋಗಿ ಮತ್ತು Preview ಅನ್ನು ಕ್ಲಿಕ್ ಮಾಡಿ. |
11:25 | Quality ಅನ್ನು 0.5 ಎಂದೂ ಮತ್ತು Frame per second ಅನ್ನು 24 ಎಂದೂ ಸೆಟ್ ಮಾಡಿ. |
11:30 | Preview ಬಟನ್ ಅನ್ನು ಕ್ಲಿಕ್ ಮಾಡಿ, ನಂತರ Play ಬಟನ್ ಅನ್ನು ಕ್ಲಿಕ್ ಮಾಡಿ. |
11:35 | ನಾವು ಪರದೆಯ ಮೇಲೆ ಆನಿಮೇಷನ್ ನ ಪ್ರಿವಿವ್ಯೂ ವನ್ನು ನೋಡಬಹುದು. |
11:40 | Preview ವಿಂಡೋ ವನ್ನು ಮುಚ್ಚಿರಿ. |
11:42 | ಈಗ ಆನಿಮೇಷನ್ ಅನ್ನು ರೆಂಡರ್ ಮಾಡೋಣ. |
11:46 | ಅದನ್ನು ಮಾಡಲು, File ಅನ್ನೂ ನಂತರ Render ಅನ್ನೂ ಕ್ಲಿಕ್ ಮಾಡಿ. |
11:51 | Choose ಅನ್ನು ಕ್ಲಿಕ್ ಮಾಡಿ ಮತ್ತು Save render as ವಿಂಡೋವನ್ನು ತೆರೆಯಿರಿ. |
11:56 | ನೀವು ರೆಂಡರ್ ಆದ ಫೈಲ್ ಸೇವ್ ಆಗಬೇಕಾದ ಲೊಕೇಷನ್ ಅನ್ನು ಕ್ಲಿಕ್ ಮಾಡಿ. |
12:00 | ಹೆಸರನ್ನು plant-animation.avi ಎಂದು ಬದಲಿಸಿ. |
12:05 | Target ಡ್ರಾಪ್ ಡೌನ್ ಮೆನುವನ್ನು ಕ್ಲಿಕ್ ಮಾಡಿ, ಮತ್ತು ಎಕ್ಸ್ಟೆನ್ಷನ್ ಅನ್ನು ffmpeg ಎಂದು ಆಯ್ಕೆ ಮಾಡಿ. |
12:10 | ನಂತರ, Time ಟ್ಯಾಬ್ ಅನ್ನು ಕ್ಲಿಕ್ ಮಾಡಿ ಮತ್ತು End time ಅನ್ನು 150 ಎಂದು ಬದಲಿಸಿ. |
12:16 | ನಂತರ Render ಅನ್ನು ಕ್ಲಿಕ್ ಮಾಡಿ. |
12:21 | ಈಗ ನಮ್ಮ ಆನಿಮೇಷನ್ ಅನ್ನು ಪರೀಕ್ಷಿಸೋಣ. |
12:24 | Desktop ಗೆ ಹೋಗಿ. |
12:27 | ನಮ್ಮ ಫೈಲ್ ಅನ್ನು ಸೇವ್ ಮಾಡಿರುವ ಫೋಲ್ಡರ್ ಅನ್ನು ತೆರೆಯೋಣ. |
12:31 | ಈಗ plant-animation. avi ಅನ್ನು ಆಯ್ಕೆ ಮಾಡಿ. |
12:35 | ರೈಟ್ ಕ್ಲಿಕ್ ಮಾಡಿ, ಮತ್ತು Firefox ವೆಬ್ ಬ್ರೌಸರ್ ಅನ್ನು ಬಳಸಿ, ಆನಿಮೇಷನ್ ಅನ್ನು ಪ್ಲೇ ಮಾಡಿ. |
12:48 | ಇದರೊಂದಿಗೆ ನಾವು ಟ್ಯುಟೋರಿಯಲ್ ನ ಕೊನೆಯನ್ನು ತಲುಪಿದ್ದೇವೆ. |
12:51 | ಸಂಕ್ಷಿಪ್ತವಾಗಿ, |
12:53 | ಈ ಟ್ಯೂಟೋರಿಯಲ್ ನಲ್ಲಿ ನಾವು, Synfig ನಲ್ಲಿ ಒಂದು ಗಿಡವನ್ನು ಆನಿಮೇಟ್ ಮಾಡುವುದನ್ನು ಕಲಿತಿದ್ದೇವೆ. |
12:58 | ನಾವು: |
13:00 | Spline ಟೂಲ್ ನಿಂದ ಆಕೃತಿಯನ್ನು ರಚಿಸುವುದು, |
13:03 | Insert item ಅನ್ನು ಬಳಸಿ, ವರ್ಟೆಕ್ಸ್ ಅನ್ನು ಸೇರಿಸುವುದು, |
13:07 | split tangent ಆಯ್ಕೆ, |
13:09 | mark active point as off ಆಯ್ಕೆ, |
13:13 | ಆಕೃತಿಯನ್ನು ಆನಿಮೇಟ್ ಮಾಡುವುದು – ಇವುಗಳ ಕುರಿತು ಕಲಿತಿದ್ದೇವೆ. |
13:15 | ಇಲ್ಲಿ ನಿಮಗಾಗಿ ಒಂದು ಅಸೈನ್ಮೆಂಟ್ ಇದೆ. |
13:17 | ಒಂದು ಸರಳವಾದ ಕಾರ್ಟೂನ್ ಮುಖವನ್ನು ಬರೆಯಿರಿ, ಇದು ಬೇರೆ ಬಣ್ಣವಿರುವ ಉದ್ದವಾದ ಕೂದಲನ್ನು ಹೊಂದಿರಬೇಕು. |
13:22 | ಮತ್ತು ಕೂದಲನ್ನು ಆನಿಮೇಟ್ ಮಾಡಿ. |
13:26 | ನಿಮ್ಮ ಪೂರ್ಣಗೊಂಡ ಅಸೈನ್ಮೆಂಟ್ ಈ ರೀತಿಯಾಗಿ ಕಾಣಬೇಕು. |
13:29 | ಉದ್ದ ಕೂದಲುಳ್ಳ ಕಾರ್ಟೂನ್ ಮುಖ. |
13:33 | ಈ ಕೆಳಗಿನ ಲಿಂಕ್ ನಲ್ಲಿರುವ ವಿಡಿಯೋ Spoken Tutorial ಪ್ರಾಜೆಕ್ಟ್ ನ ಕುರಿತು ಸಂಕ್ಷಿಪ್ತವಾಗಿ ವಿವರಿಸುತ್ತದೆ. |
13:37 | ದಯವಿಟ್ಟು ಅದನ್ನು ನೋಡಿ. |
13:40 | ಸ್ಪೋಕನ್ ಟ್ಯುಟೋರಿಯಲ್ಸ್ ಗಳು ಕಾರ್ಯಶಾಲೆಗಳನ್ನು ನಡೆಸಿ, ಪ್ರಮಾಣಪತ್ರವನ್ನು ಕೊಡುತ್ತದೆ. |
13:45 | ದಯವಿಟ್ಟು ನಮ್ಮನ್ನು ಸಂಪರ್ಕಿಸಿ. |
13:47 | ದಯವಿಟ್ಟು ಸಮಯವನ್ನೊಳಗೊಂಡ ನಿಮ್ಮ ಪ್ರಶ್ನೆಗಳನ್ನುಈ ಫೋರಮ್ ನಲ್ಲಿ ಪೋಸ್ಟ್ ಮಾಡಬಹುದು. |
13:51 | ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್, NMEICT, MHRD, ಭಾರತ ಸರ್ಕಾರ – ಇವರಿಂದ ಅನುದಾನವನ್ನು ಪಡೆದಿರುತ್ತದೆ. |
13:58 | ಅನುವಾದ ಮತ್ತು ಧ್ವನಿ ಶ್ರೀ ನವೀನ್ ಭಟ್ಟ, ಉಪ್ಪಿನಪಟ್ಟಣ.
ಧನ್ಯವಾದಗಳು. |