Health-and-Nutrition/C2/Cross-cradle-hold/Kannada

From Script | Spoken-Tutorial
Revision as of 11:50, 27 August 2020 by Debosmita (Talk | contribs)

(diff) ← Older revision | Latest revision (diff) | Newer revision → (diff)
Jump to: navigation, search
Time Narration
00:01 ಸ್ತನ್ಯಪಾನಕ್ಕಾಗಿ Cross Cradle hold (ಕ್ರಾಸ್ ಕ್ರೇಡಲ್ ಹೋಲ್ಡ್) ಎಂಬ ಈ 'ಸ್ಪೋಕನ್ ಟ್ಯುಟೋರಿಯಲ್'ಗೆ ನಿಮಗೆ ಸ್ವಾಗತ.
00:07 ಈ ಟ್ಯುಟೋರಿಯಲ್ ನಲ್ಲಿ, ನಾವು -

ತಾಯಿಯು ಮಗುವಿಗೆ ಹಾಲುಣಿಸುವಾಗ ಆರಿಸಿಕೊಳ್ಳಬೇಕಾದ ಸರಿಯಾದ ವಿಧಾನ,

00:16 ಹಾಲುಣಿಸುವ ಮೊದಲು ತಾಯಿಯ ಪೂರ್ವ ಸಿದ್ಧತೆಗಳು ಮತ್ತು
00:20 'ಕ್ರಾಸ್ ಕ್ರೇಡಲ್ ಹೋಲ್ಡ್' ವಿಧಾನದಲ್ಲಿಯ ಕ್ರಮವಾದ ಹಂತಗಳು, ಇವುಗಳ ಬಗ್ಗೆ ಕಲಿಯುತ್ತೇವೆ.
00:24 ನಾವು ಈಗ ಆರಂಭಿಸೋಣ.
00:26 ಪ್ರಪಂಚದಾದ್ಯಂತ, ತಾಯಂದಿರು ವಿವಿಧ ರೀತಿಯಲ್ಲಿ ತಮ್ಮ ಶಿಶುವನ್ನು ಹಿಡಿದುಕೊಂಡು ಸ್ತನ್ಯಪಾನ ಮಾಡಿಸುತ್ತಾರೆ.
00:32 ತಾಯಿಯು ತನ್ನ ಮಗುವಿಗೆ ಹಾಲುಣಿಸುವ ಅತ್ಯುತ್ತಮ ವಿಧಾನದಲ್ಲಿ- ತಾಯಿ ಮತ್ತು ಮಗು ಇಬ್ಬರೂ ಹಾಲುಣಿಸುವ ಸಂಪೂರ್ಣ ಅವಧಿಯಲ್ಲಿ ಆರಾಮವಾಗಿ ಇರುತ್ತಾರೆ.
00:43 ಮಗು, ತಾಯಿಯ ಸ್ತನಕ್ಕೆ ಸರಿಯಾಗಿ ಅಂಟಿಕೊಳ್ಳಲು (attach)
00:48 ಮತ್ತು ಸಾಕಷ್ಟು ಹಾಲನ್ನು ಪಡೆಯಲು ಸಾಧ್ಯವಾಗಿರುತ್ತದೆ.
00:51 'ಕ್ರಾಸ್ ಕ್ರೇಡಲ್ ಹೋಲ್ಡ್' ಎಂಬ ವಿಧಾನದ ಬಗ್ಗೆ ನಾವು ಕಲಿಯೋಣ.
00:56 'ಕ್ರಾಸ್ ಕ್ರೇಡಲ್ ಹೋಲ್ಡ್' ಇದು-

ಮಗುವಿನ ದೇಹದ ಸಂಪೂರ್ಣ ನಿಯಂತ್ರಣ,

ಸ್ತನಕ್ಕೆ ಸರಿಯಾದ ಆಧಾರ ಮತ್ತು

ಸರಿಯಾದ ಲ್ಯಾಚಿಂಗ್ ಗಳನ್ನು ಪಡೆಯಲು ಮಗುವನ್ನು ಹಿಡಿದುಕೊಳ್ಳುವ ಅತ್ಯುತ್ತಮ ವಿಧಾನವಾಗಿದೆ.

01:06 ಮಗುವಿಗೆ ಹಾಲುಣಿಸುವ ಮೊದಲು, ತಾಯಿಯು ತನ್ನ ಕೈಗಳನ್ನು ಸರಿಯಾಗಿ ತೊಳೆದು ಒಣಗಿಸಿಕೊಳ್ಳಬೇಕು.
01:12 ನಂತರ, ಅವಳು ಒಂದು ಲೋಟ ಕುದಿಸಿ ಆರಿಸಿದ ನೀರನ್ನು ಕುಡಿಯಬೇಕು.
01:16 ಹಾಲುಣಿಸುವ ತಾಯಂದಿರು, ದಿನದಲ್ಲಿ ಸರಾಸರಿ 750 ರಿಂದ 850 ಮಿಲಿಲೀಟರ್ ಹಾಲನ್ನು ಉತ್ಪಾದಿಸುತ್ತಾರೆ.
01:24 ಆದ್ದರಿಂದ, ಅವರು ತಮ್ಮ ದೈನಂದಿನ ನೀರಿನ ಸೇವನೆಯನ್ನು ಹೆಚ್ಚಿಸುವುದು ಅವಶ್ಯವಾಗಿದೆ.
01:29 ನಂತರ, ನಾವು ತಾಯಿಯ ದೇಹಸ್ಥಿತಿ ಯ ಬಗ್ಗೆ (position) ಚರ್ಚಿಸೋಣ.
01:33 ತಾಯಿಯು ನೆಲದ ಮೇಲೆ ಅಥವಾ ಹಾಸಿಗೆಯ ಮೇಲೆ, ಸುಖಾಸನದಲ್ಲಿ (cross legged position)
01:38 ಅಥವಾ, ಕುರ್ಚಿಯಲ್ಲಿ ನೆಲದ ಮೇಲೆ ತನ್ನ ಪಾದಗಳನ್ನು ಊರಿಕೊಂಡು ಕುಳಿತುಕೊಳ್ಳಬೇಕು.
01:43 ಕುರ್ಚಿ ತುಂಬಾ ಎತ್ತರವಾಗಿದ್ದು ಅವಳ ಪಾದಗಳು ನೆಲಕ್ಕೆ ತಲುಪದಿದ್ದರೆ, ಆಗ ಆಕೆಯು ತನ್ನ ಪಾದಗಳನ್ನು ಒಂದು ಸಣ್ಣ ಸ್ಟೂಲ್ ಮೇಲೆ ಅಥವಾ ನೆಲದ ಮೇಲೆ ಇಟ್ಟ ದಿಂಬುಗಳ ಮೇಲೆ ಇರಿಸಬಹುದು.
01:54 ಕುಳಿತಿರುವಾಗ ಬೆನ್ನು ನೋವನ್ನು ತಪ್ಪಿಸಲು, ಅವಳ ಬೆನ್ನು ನೇರವಾಗಿರಬೇಕು
02:03 ಮತ್ತು ಅವಳ ಭುಜಗಳು ಏರಿಸಿದ ಅಥವಾ ಇಳಿಸಿದ ಸ್ಥಿತಿಯಲ್ಲಿರದೆ, ವಿರಾಮದಲ್ಲಿ ಇರುವುದನ್ನು ಅವಳು ಖಚಿತಪಡಿಸಿಕೊಳ್ಳಬೇಕು.
02:08 ಈ ವಿರಾಮದ ಸ್ಥಿತಿಯು ಹಾಲುಣಿಸುವ ಅವಧಿಯ ಉದ್ದಕ್ಕೂ ಹಾಗೆಯೇ ಇರಬೇಕು.
02:13 ತಾಯಿಯು ಮಗುವಿಗೆ ಹಾಲುಣಿಸುವ ಸ್ತನವನ್ನು ಮಾತ್ರ ಹೊರಗೆ ತೆಗೆಯಬೇಕು.
02:19 ಅವಳು ಸ್ತನದ ಮೇಲೆ ತನ್ನ ಸ್ತನಬಂಧ ಅಥವಾ ಕುಪ್ಪಸದ ಒತ್ತಡವು ಬಾರದಂತೆ ಖಚಿತಪಡಿಸಿಕೊಳ್ಳಬೇಕು.
02:26 ತಾಯಿಯು ಆರಾಮವಾಗಿ ಕುಳಿತುಕೊಂಡ ನಂತರ, ಮಗುವನ್ನು ಅವಳ ಬಳಿಗೆ ತರಬೇಕು.
02:31 ತಾಯಿಯು ಹಾಲುಣಿಸುವ ಸ್ತನದ ವಿರುದ್ಧ ಬದಿಯ ಕೈಯಿಂದ, ತನ್ನ ಮಗುವಿನ ತಲೆಯನ್ನು ಹಿಡಿದಿರಬೇಕು.
02:39 ಮಗುವಿನ ಕಾಲುಗಳನ್ನು ಅವಳು ಅದೇ ಕೈಯ ಕಂಕುಳಲ್ಲಿ ಹಿಡಿದುಕೊಳ್ಳಬೇಕು.
02:45 ಈ ಚಿತ್ರದಲ್ಲಿ, ತಾಯಿಯು ಮಗುವಿಗೆ ತನ್ನ ಬಲ ಸ್ತನದಿಂದ ಹಾಲುಣಿಸುವಳು. ಆದ್ದರಿಂದ, ಮಗುವಿನ ಕಾಲುಗಳನ್ನು ಅವಳು ಎಡ ಕಂಕುಳಲ್ಲಿ ಹಿಡಿದುಕೊಳ್ಳಬೇಕು.
02:57 ಅವಳು ಮಗುವಿನ ತಲೆಯ ಕೆಳ ಭಾಗವನ್ನು ಹಿಡಿದುಕೊಳ್ಳಲು ತನ್ನ ಎಡಗೈಯ ಹೆಬ್ಬೆರಳು ಮತ್ತು ಬೆರಳುಗಳನ್ನು ಬಳಸುತ್ತಿದ್ದಾಳೆ.
03:05 ಮಗುವನ್ನು ಎತ್ತಿಕೊಳ್ಳಲು ತಾಯಿಗೆ ಹೆಚ್ಚಿನ ಆಧಾರವು ಬೇಕಾಗಿದ್ದರೆ, ಅವಳು ಮಗುವಿನ ಕೆಳಗೆ, ತನ್ನ ತೊಡೆಯ ಮೇಲೆ ಒಂದು ತಲೆದಿಂಬನ್ನು ಇಟ್ಟುಕೊಳ್ಳಬಹುದು.
03:15 ನೆನಪಿಡಿ, ತಾಯಿಯು ಯಾವಾಗಲೂ ತನ್ನ ಬೆನ್ನನ್ನು ಬಗ್ಗಿಸಿ ಸ್ತನವನ್ನು ಮಗುವಿನ ಹತ್ತಿರ ತರಬಾರದು.
03:21 ಇದರಿಂದ ಅವಳಿಗೆ ತೊಂದರೆಯಾಗುತ್ತದೆ ಮತ್ತು ಬೆನ್ನು ನೋವು ಬರುತ್ತದೆ.
03:26 ಅವಳು ಯಾವಾಗಲೂ ಬೆನ್ನನ್ನು ನೇರವಾಗಿ ಇಟ್ಟುಕೊಳ್ಳಬೇಕು ಮತ್ತು ತನ್ನ ಎದೆಗೆ ತಲುಪುವಂತೆ ಮಗುವನ್ನು ಎತ್ತಿಕೊಳ್ಳಬೇಕು.
03:33 ನಂತರ, ನಾವು ತಾಯಿಯ ಹೆಬ್ಬೆರಳು ಮತ್ತು ಬೆರಳುಗಳ ಸರಿಯಾದ ಸ್ಥಾನವನ್ನು ನೋಡೋಣ.
03:39 ತಾಯಿಯ ಹೆಬ್ಬೆರಳು, ಮಗುವಿನ ಒಂದು ಕಿವಿಯ ಹಿಂದೆ ಮತ್ತು ಉಳಿದ ಬೆರಳುಗಳು ಇನ್ನೊಂದು ಕಿವಿಯ ಹಿಂದೆ ಇರಬೇಕು.
03:46 ಅವಳು ಬೆರಳುಗಳನ್ನು ಅಥವಾ ಹೆಬ್ಬೆರಳನ್ನು, ಕಿವಿಯ ಹಿಂದಿನಿಂದ ಮಗುವಿನ ಕುತ್ತಿಗೆಗೆ ಸರಿಸಬಾರದು.
03:52 ಮಗುವಿನ ಭುಜಗಳ ನಡುವೆ (shoulder blades) ಅವಳ ಮಣಿಕಟ್ಟು ಇರಬೇಕು.
03:56 ಮಗುವಿನ ತಲೆಯ ಹಿಂಭಾಗದಲ್ಲಿ, ಅವಳು ಕೈಯಿಂದ ಒತ್ತಡವನ್ನು ಹಾಕಬಾರದು.
04:04 ಇದರಿಂದ, ಹಾಲುಣಿಸುವಾಗ ಮಗು ಆರಾಮವಾಗಿ ಇರುವುದು.
04:08 ನಂತರ, ಮಗುವನ್ನು ಸರಿಯಾಗಿ ಹೇಗೆ ಇರಿಸುವುದು ಎಂದು ನಾವು ಕಲಿಯೋಣ.
04:15 ಮಗುವಿನ ಹೊಟ್ಟೆಯು, ತಾಯಿಯ ದೇಹಕ್ಕೆ ಮೃದುವಾಗಿ ಒತ್ತಿರಬೇಕು.
04:20 ಅವರಿಬ್ಬರ ದೇಹಗಳ ನಡುವಿನ ಕಡಿಮೆ ಅಂತರವು, ಸ್ತನವನ್ನು ತಲುಪುವ ಮಗುವಿನ ಪ್ರಯತ್ನವನ್ನು ಕಡಿಮೆ ಮಾಡುತ್ತದೆ.
04:26 ಮತ್ತು, ಮಗುವಿಗೆ ಸರಿಯಾಗಿ ಅಂಟಿಕೊಳ್ಳಲು ಸುಲಭವಾಗುತ್ತದೆ.
04:32 ಎರಡನೆಯ ಹಂತವು, ಮಗುವಿನ ದೇಹವನ್ನು ಹೊಂದಿಸುವುದು ಆಗಿದೆ.
04:37 ನಾವು ಆಹಾರವನ್ನು ಸೇವಿಸುವಾಗ, ನಮ್ಮ ತಲೆ, ಕುತ್ತಿಗೆ ಮತ್ತು ದೇಹವು ಯಾವಾಗಲೂ ಒಂದೇಸಾಲಿನಲ್ಲಿ ಇರುತ್ತವೆ.
04:43 ಆದರೆ ಸ್ತನ್ಯಪಾನ ಮಾಡಿಸುವಾಗ, ಅನೇಕ ತಾಯಂದಿರು ಮಗುವಿನ ತಲೆಯನ್ನು ಕೆಲವು ಸಲ ಪಕ್ಕಕ್ಕೆ ತಿರುಗಿಸಿರುತ್ತಾರೆ.
04:50 ಹಾಲುಣಿಸುವಾಗ ಇದು ಮಗುವಿಗೆ ಅನಾನುಕೂಲವನ್ನು ಮಾಡುತ್ತದೆ.
04:55 ಸ್ತನ್ಯಪಾನ ಮಾಡಿಸುವಾಗ, ಮಗುವಿನ ತಲೆ, ಕುತ್ತಿಗೆ ಮತ್ತು ದೇಹವು ಒಂದೇ ಸಾಲಿನಲ್ಲಿರಬೇಕು.
05:01 ಇದರಿಂದ ಮಗುವಿಗೆ ಹಾಲನ್ನು ನುಂಗಲು ಸುಲಭವಾಗುತ್ತದೆ.
05:05 ಮಗುವಿನ ದೇಹವನ್ನು ಹೊಂದಿಸುವ ಬಗ್ಗೆ, ಈಗ ನಾವು ಮೂರನೆಯ ಅಂಶಕ್ಕೆ ಬರುತ್ತೇವೆ.
05:10 ತಾಯಿಯು ತನ್ನ ಮಗುವಿನ ಪೂರ್ತಿ ಶರೀರವನ್ನು ಸರಿಯಾಗಿ ಹಿಡಿದಿಕೊಳ್ಳಬೇಕು.
05:14 ಇಲ್ಲದಿದ್ದರೆ, ಮಗುವು ತಾಯಿಯ ಸ್ತನಕ್ಕೆ ಗಟ್ಟಿಯಾಗಿ ಅಂಟಿಕೊಳ್ಳಲು (attach) ಬಹಳ ಪ್ರಯತ್ನಿಸಬೇಕಾಗುವುದು.
05:22 ನಂತರ, ನಾವು ಮಗುವಿನ ಮೂಗು ಮತ್ತು ಗದ್ದಗಳ ಸ್ಥಾನವನ್ನು ನೋಡೋಣ.
05:28 ಶಿಶುವಿನ ಮೂಗು, ಮೊಲೆಯ ತೊಟ್ಟು ಒಂದೇ ಸಾಲಿನಲ್ಲಿರಬೇಕು.
05:33 ಮತ್ತು, ಗದ್ದವು ಮುಂದೆ ಬಂದಿದ್ದು ಸ್ತನಕ್ಕೆ ಅತೀ ಹತ್ತಿರವಾಗಿರಬೇಕು.
05:38 ಲ್ಯಾಚಿಂಗ್ ಸಮಯದಲ್ಲಿ, ಶಿಶು ಅರಿಯೋಲಾದ ಕೆಳಭಾಗದಲ್ಲಿ ಹೆಚ್ಚಿನ ಭಾಗವನ್ನು ತೆಗೆದುಕೊಳ್ಳುವುದನ್ನು ಇದು ಖಚಿತಪಡಿಸುತ್ತದೆ.
05:45 ಹೀಗಾಗಿ, ಹೆಚ್ಚು ಹಾಲನ್ನು ಕುಡಿಯಲು ಕೆಳದವಡೆಯನ್ನು ಬಳಸುತ್ತದೆ.
05:51 ದಯವಿಟ್ಟು ಗಮನಿಸಿ: ಅರಿಯೋಲಾ, ಮೊಲೆತೊಟ್ಟಿನ ಸುತ್ತಲೂ ಇರುವ ಕಪ್ಪು ಜಾಗವಾಗಿದೆ.
05:57 ಈಗ ಮಗುವನ್ನು ಸರಿಯಾಗಿ ಹಿಡಿದುಕೊಂಡಿರುವುದರಿಂದ, ಸ್ತನವನ್ನು ಹೇಗೆ ಹಿಡಿದುಕೊಳ್ಳಬೇಕು ಎಂದು ನಾವು ಕಲಿಯೋಣ.
06:04 ತಾಯಿಯು ತನ್ನ ಇನ್ನೊಂದು ಕೈಯ ಬೆರಳುಗಳನ್ನು ಬಳಸಿ, U ಆಕಾರದಲ್ಲಿ ಇರುವಂತೆ ಕೆಳಗಿನಿಂದ ತನ್ನ ಸ್ತನವನ್ನು ಹಿಡಿಯಬೇಕು.
06:12 ಈ ಚಿತ್ರದಲ್ಲಿ, ತಾಯಿಯು ತನ್ನ ಬಲಗಡೆಯ ಸ್ತನವನ್ನು ಹಿಡಿದುಕೊಳ್ಳಲು ತನ್ನ ಬಲಗೈಯನ್ನು ಬಳಸುತ್ತಾಳೆ.
06:19 ಹೆಬ್ಬೆರಳು ಮತ್ತು ಬೆರಳುಗಳ ಸರಿಯಾದ ಸ್ಥಾನವನ್ನು ತಿಳಿದುಕೊಳ್ಳಲು, ತಾಯಿಯ ಬಲ ಮೊಲೆಯಲ್ಲಿ, ಮೊಲೆತೊಟ್ಟನ್ನು ಗಡಿಯಾರದ ಕೇಂದ್ರ ಎಂದು ಊಹಿಸಿ.
06:31 ತಾಯಿಯು ತನ್ನ ಬಲ ಹೆಬ್ಬೆರಳನ್ನು, ಈ ಗಡಿಯಾರದಲ್ಲಿ ಗಂಟೆ 9 ಆದ ಹಾಗೆ ಇಡಬೇಕು.
06:38 ಅವಳ ಬಲ ತೋರುಬೆರಳು ಮತ್ತು ಮಧ್ಯಮ ಬೆರಳನ್ನು ಗಂಟೆ 3 ಆದಾಗಿನ ಹಾಗೆ ಇಡಬೇಕು.
06:46 ಬೆರಳುಗಳು ಯಾವಾಗಲೂ ಮಗುವಿನ ತುಟಿಗಳಿಗೆ ಸಮಾನಾಂತರದಲ್ಲಿ ಇರಬೇಕು. ಯಾಕೆ?
06:51 ಸರಳವಾದ ಒಂದು ಉದಾಹರಣೆಯನ್ನು ಬಳಸಿ, ನಾವು ಇದನ್ನು ತಿಳಿದುಕೊಳ್ಳೋಣ.
06:56 ನಾವು ವಡಾ-ಪಾವ್ ಅಥವಾ ಬರ್ಗರ್ ಅನ್ನು ತಿನ್ನುವಾಗ, ನಮ್ಮ ಬಾಯಿ ಮತ್ತು ತುಟಿಗಳು ಅಡ್ಡಲಾಗಿ ತೆರೆದುಕೊಳ್ಳುತ್ತವೆ.
07:02 ದೊಡ್ಡ ತುತ್ತನ್ನು ತೆಗೆದುಕೊಳ್ಳಲು, ನಾವು ವಡಾ-ಪಾವ್ ಅಥವಾ ಬರ್ಗರ್ ಅನ್ನು ಅಡ್ಡಲಾಗಿ ಹಿಡಿದುಕೊಳ್ಳುತ್ತೇವೆ.
07:08 ಇಲ್ಲಿ, ಹೆಬ್ಬೆರಳು ಮತ್ತು ಬೆರಳುಗಳನ್ನು ತುಟಿಗಳಿಗೆ ಸಮಾನಾಂತರವಾಗಿ ಇರಿಸಲಾಗುತ್ತದೆ.
07:12 ನಾವು ವಡಾ-ಪಾವ್ ಅಥವಾ ಬರ್ಗರ್ ಅನ್ನು ಲಂಬವಾಗಿ ಹಿಡಿದಿದ್ದರೆ, ದೊಡ್ಡ ತುತ್ತನ್ನು ತೆಗೆದುಕೊಳ್ಳಲು ನಮಗೆ ಸಾಧ್ಯವಾಗುವುದಿಲ್ಲ.
07:19 ಹಾಗೆಯೇ, ಮಗುವಿನ ತುಟಿಗಳ ದಿಕ್ಕನ್ನು ಗಮನಿಸಿ.
07:25 ತುಟಿಗಳು ಇಲ್ಲಿ ಲಂಬವಾಗಿವೆ. ಆದ್ದರಿಂದ, ಬೆರಳುಗಳು ಮತ್ತು ಹೆಬ್ಬೆರಳನ್ನು ಕೂಡ ಸ್ತನದ ಮೇಲೆ ಲಂಬವಾಗಿ ಇಡಬೇಕು.
07:34 ಇದು, ಮಗುವಿಗೆ ತನ್ನ ಬಾಯಿಯಲ್ಲಿ ಅರಿಯೋಲಾದ ದೊಡ್ಡ ಭಾಗವನ್ನು ತೆಗೆದುಕೊಳ್ಳಲು ಸಹಾಯ ಮಾಡುತ್ತದೆ.
07:39 ಮಗುವಿನ ತುಟಿಗಳಿಗೆ ಸಮಾಂತರವಾಗಿ ಇರುವುದರ ಜೊತೆಗೆ ತಾಯಿಯ ಹೆಬ್ಬೆರಳು ಮತ್ತು ಬೆರಳುಗಳು ಯಾವಾಗಲೂ ಮೊಲೆತೊಟ್ಟಿನಿಂದ 3 ಬೆರಳುಗಳ ದೂರದಲ್ಲಿರಬೇಕು.
07:50 ಮತ್ತೆ, ವಡಾ-ಪಾವ್ ಅಥವಾ ಬರ್ಗರ್ ಅನ್ನು ತಿನ್ನುವಾಗ, ನಾವು ಅದನ್ನು ಬಹಳ ಹತ್ತಿರದಲ್ಲಿ ಹಿದಿದುಕೊಂಡರೆ, ನಮ್ಮ ಬೆರಳುಗಳು ದೊಡ್ಡ ತುತ್ತನ್ನು ತೆಗೆದುಕೊಳ್ಳದಂತೆ ಬಾಯಿಗೆ ಅಡ್ಡಬರುತ್ತವೆ.
08:00 ನಾವು ಅದನ್ನು ತುಂಬಾ ದೂರದಲ್ಲಿ ಹಿಡಿದರೆ, ಅದು ನಮ್ಮ ಬಾಯಿಯಲ್ಲಿ ಹೋಗಲು ಯೋಗ್ಯವಾದ ಆಕಾರದಲ್ಲಿ ಇರುವುದಿಲ್ಲ.
08:07 ಆದ್ದರಿಂದ, ದೊಡ್ಡ ತುತ್ತನ್ನು ತೆಗೆದುಕೊಳ್ಳಲು, ನಾವು ಅದನ್ನು ಸರಿಯಾದ ದೂರದಲ್ಲಿ ಹಿಡಿದುಕೊಳ್ಳುತ್ತೇವೆ.
08:12 ಹೀಗೆಯೇ, ಈ ಚಿತ್ರದಲ್ಲಿ ತೋರಿಸಿರುವಂತೆ, ಮಗುವಿಗಾಗಿ ಮೊಲೆತೊಟ್ಟಿನಿಂದ 3 ಬೆರಳುಗಳ ಅಂತರವು ಸರಿಯಾಗಿದೆ.
08:20 ಮಗುವು ತನ್ನ ಬಾಯಿಯಲ್ಲಿ ಅರಿಯೋಲಾದ ದೊಡ್ಡ ಭಾಗವನ್ನು ತೆಗೆದುಕೊಳ್ಳುವಾಗ ತಾಯಿಯ ಬೆರಳುಗಳು ಅಡ್ಡಬರುವುದಿಲ್ಲ,
08:29 ತಾಯಿಯು ಕೇವಲ ಮೊಲೆತೊಟ್ಟನ್ನು ಮಾತ್ರ ಒತ್ತುವುದಿಲ್ಲ. ಏಕೆಂದರೆ, ಇದರಿಂದ ತುಂಬಾ ಕಡಿಮೆ ಹಾಲು ಸಿಗುತ್ತದೆ.
08:35 ಹೆಚ್ಚು ಹಾಲು ಸಿಗಲು, ಅರಿಯೋಲಾದ ಕೆಳಗೆ, ಹಾಲಿನ ದೊಡ್ಡ ನಾಳಗಳನ್ನು ತಾಯಿಯು ಒತ್ತುತ್ತಾಳೆ.
08:42 ಮತ್ತು, ಮಗುವಿಗೆ ಗಟ್ಟಿಯಾಗಿ ಅಂಟಿಕೊಳ್ಳಲು ಸಹಾಯವಾಗುವಂತೆ, ಸ್ತನವನ್ನು ಸರಿಯಾಗಿ ಹಿಡಿಯಲಾಗಿದೆ ಎಂದು ಈ ದೂರವು ಖಚಿತಪಡಿಸುತ್ತದೆ.
08:49 ಮಗುವಿನ ಮೂಗು ಇರುವ ಸ್ತನದ ಬದಿಯಲ್ಲಿ, ತಾಯಿಯ ಹೆಬ್ಬೆರಳು ಮೊಲೆತೊಟ್ಟಿನಿಂದ 3 ಬೆರಳುಗಳ ಅಂತರದಲ್ಲಿ ಇರಬೇಕು.
08:59 ಮತ್ತು, ಮಗುವಿನ ಗದ್ದ ಇರುವ ಸ್ತನದ ಬದಿಯಲ್ಲಿ, ಅವಳ 2 ಬೆರಳುಗಳು ಮೊಲೆತೊಟ್ಟಿನಿಂದ 3 ಬೆರಳುಗಳ ಅಂತರದಲ್ಲಿ ಇರಬೇಕು.
09:09 ವಡಾ- ಪಾವ್ ಅಥವಾ ಬರ್ಗರ್ ನ ಉದಾಹರಣೆಗೆ ಹಿಂತಿರುಗೋಣ.
09:13 ವಡಾ-ಪಾವ್ ಅಥವಾ ಬರ್ಗರ್ ಅನ್ನು ಸರಿಯಾಗಿ ಹಿಡಿದ ನಂತರ, ನಾವು ಯಾವಾಗಲೂ ದೊಡ್ಡ ತುತ್ತು (bite) ತೆಗೆದುಕೊಳ್ಳಲು ಅದನ್ನು ಅದುಮಿ ಹಿಡಿಯುತ್ತೇವೆ.
09:21 ಹೀಗೆಯೇ, ಕೆಳಗಿನಿಂದ U ಆಕಾರದಲ್ಲಿ ಒತ್ತಿ, ತಾಯಿಯು ತನ್ನ ಸ್ತನವನ್ನು ಮೆತ್ತಗೆ ಕುಗ್ಗಿಸಬೇಕು.
09:28 ಇದು, ಮಗುವಿಗೆ ಸ್ತನದ ದೊಡ್ಡ ಭಾಗವನ್ನು ತನ್ನ ಬಾಯಿಯಲ್ಲಿ ತೆಗೆದುಕೊಳ್ಳಲು ಸಹಾಯ ಮಾಡುತ್ತದೆ.
09:34 ಆದರೆ ನೆನಪಿಡಿ, ತಾಯಿಯು ತನ್ನ ಸ್ತನವನ್ನು V ಆಕಾರದಲ್ಲಿ ಅದುಮಬಾರದು.
09:39 V ಆಕಾರದ ಒತ್ತುವಿಕೆಯು ಸ್ತನವನ್ನು ಹಿಸುಕುತ್ತದೆ ಮತ್ತು ನಿಪ್ಪಲ್ ಫೀಡಿಂಗ್ ಅನ್ನು ಉಂಟುಮಾಡುತ್ತದೆ.
09:45 ಅಲ್ಲದೆ, ಹೆಬ್ಬೆರಳು ಮತ್ತು ಬೆರಳುಗಳಿಂದ ಸ್ತನವನ್ನು ಸಮನಾಗಿ ಒತ್ತಲಾಗುತ್ತಿದೆ ಎಂದು ಖಚಿತಪಡಿಸಿಕೊಳ್ಳಿ.
09:52 ಇಲ್ಲದಿದ್ದರೆ, ಮೊಲೆತೊಟ್ಟು ಬಲ ಅಥವಾ ಎಡಭಾಗಕ್ಕೆ ಸರಿಯುತ್ತದೆ ಮತ್ತು ಜೋಡಣೆಯು ಸರಿಯಾಗುವುದಿಲ್ಲ.
10:00 ನೆನಪಿಡಿ, ಮಗುವಿನ ಕಡೆಗೆ ಸ್ತನವನ್ನು ಬದಿಯಿಂದ ತಳ್ಳುವ ಮೂಲಕ ಅದನ್ನು ಮಗುವಿನೆಡೆಗೆ ತರಬೇಡಿ.
10:08 ಯಾವಾಗಲೂ ಮಗುವನ್ನು ಸ್ತನದ ಕಡೆಗೆ ತನ್ನಿ.
10:12 ಈಗ, ಶಿಶು 'ಕ್ರಾಸ್ ಕ್ರೇಡಲ್ ಹೋಲ್ಡ್' ನಲ್ಲಿದೆ ಮತ್ತು ಸ್ತನ್ಯಪಾನಕ್ಕಾಗಿ ಹೊಂದಿಕೊಳ್ಳಲು (latch) ಸಿದ್ಧವಾಗಿದೆ.
10:18 ಇದೇ ಸರಣಿಯ ಮತ್ತೊಂದು ಟ್ಯುಟೋರಿಯಲ್ ನಲ್ಲಿ, ಸರಿಯಾದ ಲ್ಯಾಚಿಂಗ್ ತಂತ್ರದ ಬಗ್ಗೆ ವಿವರಿಸಲಾಗಿದೆ.
10:24 ಒಮ್ಮೆ ಮಗು ಸರಿಯಾಗಿ ಅಂಟಿಕೊಂಡಿತೆಂದರೆ ಮತ್ತು ಸ್ತನವು ತುಂಬಾ ಭಾರವಾಗಿರದಿದ್ದರೆ ಆಗ ತಾಯಿಯು ಅವಳ ಸ್ತನವನ್ನು ತನ್ನ ಕೈಯಿಂದ ಬಿಡಬೇಕು. ಮತ್ತು ತನ್ನ ಕೈಯನ್ನು ಆಧಾರಕ್ಕಾಗಿ ಮಗುವಿನ ಕೆಳಗೆ ತರಬೇಕು.
10:40 ಈ ಸ್ಥಾನದಲ್ಲಿ, ತಾಯಿಯು ತನ್ನ ಎರಡೂ ತೋಳುಗಳನ್ನು ತನ್ನ ಶರೀರದ ತುಂಬಾ ಹತ್ತಿರಕ್ಕೆ ತರಬೇಕು.
10:46 ಹಾಲುಣಿಸುವ ಸಮಯದಲ್ಲಿ ಇದು ಅವಳನ್ನು ಆರಾಮವಾಗಿರಿಸುತ್ತದೆ.
10:50 ಇಲ್ಲಿಗೆ ನಾವು ಈ ಟ್ಯುಟೋರಿಯಲ್ ನ ಕೊನೆಗೆ ಬಂದಿದ್ದೇವೆ.
10:54 ಈ ಸ್ಕ್ರಿಪ್ಟ್ ನ ಅನುವಾದಕಿ IIT Bombay ಯಿಂದ ಸಂಧ್ಯಾ ಪುಣೇಕರ್ ಹಾಗೂ ಧ್ವನಿ ಗ್ಲೋರಿಯಾ.

ಧನ್ಯವಾದಗಳು.

Contributors and Content Editors

Debosmita, Sandhya.np14