Health-and-Nutrition/C2/Cross-cradle-hold/Kannada
From Script | Spoken-Tutorial
Time | Narration |
00:01 | ಸ್ತನ್ಯಪಾನಕ್ಕಾಗಿ Cross Cradle hold (ಕ್ರಾಸ್ ಕ್ರೇಡಲ್ ಹೋಲ್ಡ್) ಎಂಬ ಈ 'ಸ್ಪೋಕನ್ ಟ್ಯುಟೋರಿಯಲ್'ಗೆ ನಿಮಗೆ ಸ್ವಾಗತ. |
00:07 | ಈ ಟ್ಯುಟೋರಿಯಲ್ ನಲ್ಲಿ, ನಾವು -
ತಾಯಿಯು ಮಗುವಿಗೆ ಹಾಲುಣಿಸುವಾಗ ಆರಿಸಿಕೊಳ್ಳಬೇಕಾದ ಸರಿಯಾದ ವಿಧಾನ, |
00:16 | ಹಾಲುಣಿಸುವ ಮೊದಲು ತಾಯಿಯ ಪೂರ್ವ ಸಿದ್ಧತೆಗಳು ಮತ್ತು |
00:20 | 'ಕ್ರಾಸ್ ಕ್ರೇಡಲ್ ಹೋಲ್ಡ್' ವಿಧಾನದಲ್ಲಿಯ ಕ್ರಮವಾದ ಹಂತಗಳು, ಇವುಗಳ ಬಗ್ಗೆ ಕಲಿಯುತ್ತೇವೆ. |
00:24 | ನಾವು ಈಗ ಆರಂಭಿಸೋಣ. |
00:26 | ಪ್ರಪಂಚದಾದ್ಯಂತ, ತಾಯಂದಿರು ವಿವಿಧ ರೀತಿಯಲ್ಲಿ ತಮ್ಮ ಶಿಶುವನ್ನು ಹಿಡಿದುಕೊಂಡು ಸ್ತನ್ಯಪಾನ ಮಾಡಿಸುತ್ತಾರೆ. |
00:32 | ತಾಯಿಯು ತನ್ನ ಮಗುವಿಗೆ ಹಾಲುಣಿಸುವ ಅತ್ಯುತ್ತಮ ವಿಧಾನದಲ್ಲಿ- ತಾಯಿ ಮತ್ತು ಮಗು ಇಬ್ಬರೂ ಹಾಲುಣಿಸುವ ಸಂಪೂರ್ಣ ಅವಧಿಯಲ್ಲಿ ಆರಾಮವಾಗಿ ಇರುತ್ತಾರೆ. |
00:43 | ಮಗು, ತಾಯಿಯ ಸ್ತನಕ್ಕೆ ಸರಿಯಾಗಿ ಅಂಟಿಕೊಳ್ಳಲು (attach) |
00:48 | ಮತ್ತು ಸಾಕಷ್ಟು ಹಾಲನ್ನು ಪಡೆಯಲು ಸಾಧ್ಯವಾಗಿರುತ್ತದೆ. |
00:51 | 'ಕ್ರಾಸ್ ಕ್ರೇಡಲ್ ಹೋಲ್ಡ್' ಎಂಬ ವಿಧಾನದ ಬಗ್ಗೆ ನಾವು ಕಲಿಯೋಣ. |
00:56 | 'ಕ್ರಾಸ್ ಕ್ರೇಡಲ್ ಹೋಲ್ಡ್' ಇದು-
ಮಗುವಿನ ದೇಹದ ಸಂಪೂರ್ಣ ನಿಯಂತ್ರಣ, ಸ್ತನಕ್ಕೆ ಸರಿಯಾದ ಆಧಾರ ಮತ್ತು ಸರಿಯಾದ ಲ್ಯಾಚಿಂಗ್ ಗಳನ್ನು ಪಡೆಯಲು ಮಗುವನ್ನು ಹಿಡಿದುಕೊಳ್ಳುವ ಅತ್ಯುತ್ತಮ ವಿಧಾನವಾಗಿದೆ. |
01:06 | ಮಗುವಿಗೆ ಹಾಲುಣಿಸುವ ಮೊದಲು, ತಾಯಿಯು ತನ್ನ ಕೈಗಳನ್ನು ಸರಿಯಾಗಿ ತೊಳೆದು ಒಣಗಿಸಿಕೊಳ್ಳಬೇಕು. |
01:12 | ನಂತರ, ಅವಳು ಒಂದು ಲೋಟ ಕುದಿಸಿ ಆರಿಸಿದ ನೀರನ್ನು ಕುಡಿಯಬೇಕು. |
01:16 | ಹಾಲುಣಿಸುವ ತಾಯಂದಿರು, ದಿನದಲ್ಲಿ ಸರಾಸರಿ 750 ರಿಂದ 850 ಮಿಲಿಲೀಟರ್ ಹಾಲನ್ನು ಉತ್ಪಾದಿಸುತ್ತಾರೆ. |
01:24 | ಆದ್ದರಿಂದ, ಅವರು ತಮ್ಮ ದೈನಂದಿನ ನೀರಿನ ಸೇವನೆಯನ್ನು ಹೆಚ್ಚಿಸುವುದು ಅವಶ್ಯವಾಗಿದೆ. |
01:29 | ನಂತರ, ನಾವು ತಾಯಿಯ ದೇಹಸ್ಥಿತಿ ಯ ಬಗ್ಗೆ (position) ಚರ್ಚಿಸೋಣ. |
01:33 | ತಾಯಿಯು ನೆಲದ ಮೇಲೆ ಅಥವಾ ಹಾಸಿಗೆಯ ಮೇಲೆ, ಸುಖಾಸನದಲ್ಲಿ (cross legged position) |
01:38 | ಅಥವಾ, ಕುರ್ಚಿಯಲ್ಲಿ ನೆಲದ ಮೇಲೆ ತನ್ನ ಪಾದಗಳನ್ನು ಊರಿಕೊಂಡು ಕುಳಿತುಕೊಳ್ಳಬೇಕು. |
01:43 | ಕುರ್ಚಿ ತುಂಬಾ ಎತ್ತರವಾಗಿದ್ದು ಅವಳ ಪಾದಗಳು ನೆಲಕ್ಕೆ ತಲುಪದಿದ್ದರೆ, ಆಗ ಆಕೆಯು ತನ್ನ ಪಾದಗಳನ್ನು ಒಂದು ಸಣ್ಣ ಸ್ಟೂಲ್ ಮೇಲೆ ಅಥವಾ ನೆಲದ ಮೇಲೆ ಇಟ್ಟ ದಿಂಬುಗಳ ಮೇಲೆ ಇರಿಸಬಹುದು. |
01:54 | ಕುಳಿತಿರುವಾಗ ಬೆನ್ನು ನೋವನ್ನು ತಪ್ಪಿಸಲು, ಅವಳ ಬೆನ್ನು ನೇರವಾಗಿರಬೇಕು |
02:03 | ಮತ್ತು ಅವಳ ಭುಜಗಳು ಏರಿಸಿದ ಅಥವಾ ಇಳಿಸಿದ ಸ್ಥಿತಿಯಲ್ಲಿರದೆ, ವಿರಾಮದಲ್ಲಿ ಇರುವುದನ್ನು ಅವಳು ಖಚಿತಪಡಿಸಿಕೊಳ್ಳಬೇಕು. |
02:08 | ಈ ವಿರಾಮದ ಸ್ಥಿತಿಯು ಹಾಲುಣಿಸುವ ಅವಧಿಯ ಉದ್ದಕ್ಕೂ ಹಾಗೆಯೇ ಇರಬೇಕು. |
02:13 | ತಾಯಿಯು ಮಗುವಿಗೆ ಹಾಲುಣಿಸುವ ಸ್ತನವನ್ನು ಮಾತ್ರ ಹೊರಗೆ ತೆಗೆಯಬೇಕು. |
02:19 | ಅವಳು ಸ್ತನದ ಮೇಲೆ ತನ್ನ ಸ್ತನಬಂಧ ಅಥವಾ ಕುಪ್ಪಸದ ಒತ್ತಡವು ಬಾರದಂತೆ ಖಚಿತಪಡಿಸಿಕೊಳ್ಳಬೇಕು. |
02:26 | ತಾಯಿಯು ಆರಾಮವಾಗಿ ಕುಳಿತುಕೊಂಡ ನಂತರ, ಮಗುವನ್ನು ಅವಳ ಬಳಿಗೆ ತರಬೇಕು. |
02:31 | ತಾಯಿಯು ಹಾಲುಣಿಸುವ ಸ್ತನದ ವಿರುದ್ಧ ಬದಿಯ ಕೈಯಿಂದ, ತನ್ನ ಮಗುವಿನ ತಲೆಯನ್ನು ಹಿಡಿದಿರಬೇಕು. |
02:39 | ಮಗುವಿನ ಕಾಲುಗಳನ್ನು ಅವಳು ಅದೇ ಕೈಯ ಕಂಕುಳಲ್ಲಿ ಹಿಡಿದುಕೊಳ್ಳಬೇಕು. |
02:45 | ಈ ಚಿತ್ರದಲ್ಲಿ, ತಾಯಿಯು ಮಗುವಿಗೆ ತನ್ನ ಬಲ ಸ್ತನದಿಂದ ಹಾಲುಣಿಸುವಳು. ಆದ್ದರಿಂದ, ಮಗುವಿನ ಕಾಲುಗಳನ್ನು ಅವಳು ಎಡ ಕಂಕುಳಲ್ಲಿ ಹಿಡಿದುಕೊಳ್ಳಬೇಕು. |
02:57 | ಅವಳು ಮಗುವಿನ ತಲೆಯ ಕೆಳ ಭಾಗವನ್ನು ಹಿಡಿದುಕೊಳ್ಳಲು ತನ್ನ ಎಡಗೈಯ ಹೆಬ್ಬೆರಳು ಮತ್ತು ಬೆರಳುಗಳನ್ನು ಬಳಸುತ್ತಿದ್ದಾಳೆ. |
03:05 | ಮಗುವನ್ನು ಎತ್ತಿಕೊಳ್ಳಲು ತಾಯಿಗೆ ಹೆಚ್ಚಿನ ಆಧಾರವು ಬೇಕಾಗಿದ್ದರೆ, ಅವಳು ಮಗುವಿನ ಕೆಳಗೆ, ತನ್ನ ತೊಡೆಯ ಮೇಲೆ ಒಂದು ತಲೆದಿಂಬನ್ನು ಇಟ್ಟುಕೊಳ್ಳಬಹುದು. |
03:15 | ನೆನಪಿಡಿ, ತಾಯಿಯು ಯಾವಾಗಲೂ ತನ್ನ ಬೆನ್ನನ್ನು ಬಗ್ಗಿಸಿ ಸ್ತನವನ್ನು ಮಗುವಿನ ಹತ್ತಿರ ತರಬಾರದು. |
03:21 | ಇದರಿಂದ ಅವಳಿಗೆ ತೊಂದರೆಯಾಗುತ್ತದೆ ಮತ್ತು ಬೆನ್ನು ನೋವು ಬರುತ್ತದೆ. |
03:26 | ಅವಳು ಯಾವಾಗಲೂ ಬೆನ್ನನ್ನು ನೇರವಾಗಿ ಇಟ್ಟುಕೊಳ್ಳಬೇಕು ಮತ್ತು ತನ್ನ ಎದೆಗೆ ತಲುಪುವಂತೆ ಮಗುವನ್ನು ಎತ್ತಿಕೊಳ್ಳಬೇಕು. |
03:33 | ನಂತರ, ನಾವು ತಾಯಿಯ ಹೆಬ್ಬೆರಳು ಮತ್ತು ಬೆರಳುಗಳ ಸರಿಯಾದ ಸ್ಥಾನವನ್ನು ನೋಡೋಣ. |
03:39 | ತಾಯಿಯ ಹೆಬ್ಬೆರಳು, ಮಗುವಿನ ಒಂದು ಕಿವಿಯ ಹಿಂದೆ ಮತ್ತು ಉಳಿದ ಬೆರಳುಗಳು ಇನ್ನೊಂದು ಕಿವಿಯ ಹಿಂದೆ ಇರಬೇಕು. |
03:46 | ಅವಳು ಬೆರಳುಗಳನ್ನು ಅಥವಾ ಹೆಬ್ಬೆರಳನ್ನು, ಕಿವಿಯ ಹಿಂದಿನಿಂದ ಮಗುವಿನ ಕುತ್ತಿಗೆಗೆ ಸರಿಸಬಾರದು. |
03:52 | ಮಗುವಿನ ಭುಜಗಳ ನಡುವೆ (shoulder blades) ಅವಳ ಮಣಿಕಟ್ಟು ಇರಬೇಕು. |
03:56 | ಮಗುವಿನ ತಲೆಯ ಹಿಂಭಾಗದಲ್ಲಿ, ಅವಳು ಕೈಯಿಂದ ಒತ್ತಡವನ್ನು ಹಾಕಬಾರದು. |
04:04 | ಇದರಿಂದ, ಹಾಲುಣಿಸುವಾಗ ಮಗು ಆರಾಮವಾಗಿ ಇರುವುದು. |
04:08 | ನಂತರ, ಮಗುವನ್ನು ಸರಿಯಾಗಿ ಹೇಗೆ ಇರಿಸುವುದು ಎಂದು ನಾವು ಕಲಿಯೋಣ. |
04:15 | ಮಗುವಿನ ಹೊಟ್ಟೆಯು, ತಾಯಿಯ ದೇಹಕ್ಕೆ ಮೃದುವಾಗಿ ಒತ್ತಿರಬೇಕು. |
04:20 | ಅವರಿಬ್ಬರ ದೇಹಗಳ ನಡುವಿನ ಕಡಿಮೆ ಅಂತರವು, ಸ್ತನವನ್ನು ತಲುಪುವ ಮಗುವಿನ ಪ್ರಯತ್ನವನ್ನು ಕಡಿಮೆ ಮಾಡುತ್ತದೆ. |
04:26 | ಮತ್ತು, ಮಗುವಿಗೆ ಸರಿಯಾಗಿ ಅಂಟಿಕೊಳ್ಳಲು ಸುಲಭವಾಗುತ್ತದೆ. |
04:32 | ಎರಡನೆಯ ಹಂತವು, ಮಗುವಿನ ದೇಹವನ್ನು ಹೊಂದಿಸುವುದು ಆಗಿದೆ. |
04:37 | ನಾವು ಆಹಾರವನ್ನು ಸೇವಿಸುವಾಗ, ನಮ್ಮ ತಲೆ, ಕುತ್ತಿಗೆ ಮತ್ತು ದೇಹವು ಯಾವಾಗಲೂ ಒಂದೇಸಾಲಿನಲ್ಲಿ ಇರುತ್ತವೆ. |
04:43 | ಆದರೆ ಸ್ತನ್ಯಪಾನ ಮಾಡಿಸುವಾಗ, ಅನೇಕ ತಾಯಂದಿರು ಮಗುವಿನ ತಲೆಯನ್ನು ಕೆಲವು ಸಲ ಪಕ್ಕಕ್ಕೆ ತಿರುಗಿಸಿರುತ್ತಾರೆ. |
04:50 | ಹಾಲುಣಿಸುವಾಗ ಇದು ಮಗುವಿಗೆ ಅನಾನುಕೂಲವನ್ನು ಮಾಡುತ್ತದೆ. |
04:55 | ಸ್ತನ್ಯಪಾನ ಮಾಡಿಸುವಾಗ, ಮಗುವಿನ ತಲೆ, ಕುತ್ತಿಗೆ ಮತ್ತು ದೇಹವು ಒಂದೇ ಸಾಲಿನಲ್ಲಿರಬೇಕು. |
05:01 | ಇದರಿಂದ ಮಗುವಿಗೆ ಹಾಲನ್ನು ನುಂಗಲು ಸುಲಭವಾಗುತ್ತದೆ. |
05:05 | ಮಗುವಿನ ದೇಹವನ್ನು ಹೊಂದಿಸುವ ಬಗ್ಗೆ, ಈಗ ನಾವು ಮೂರನೆಯ ಅಂಶಕ್ಕೆ ಬರುತ್ತೇವೆ. |
05:10 | ತಾಯಿಯು ತನ್ನ ಮಗುವಿನ ಪೂರ್ತಿ ಶರೀರವನ್ನು ಸರಿಯಾಗಿ ಹಿಡಿದಿಕೊಳ್ಳಬೇಕು. |
05:14 | ಇಲ್ಲದಿದ್ದರೆ, ಮಗುವು ತಾಯಿಯ ಸ್ತನಕ್ಕೆ ಗಟ್ಟಿಯಾಗಿ ಅಂಟಿಕೊಳ್ಳಲು (attach) ಬಹಳ ಪ್ರಯತ್ನಿಸಬೇಕಾಗುವುದು. |
05:22 | ನಂತರ, ನಾವು ಮಗುವಿನ ಮೂಗು ಮತ್ತು ಗದ್ದಗಳ ಸ್ಥಾನವನ್ನು ನೋಡೋಣ. |
05:28 | ಶಿಶುವಿನ ಮೂಗು, ಮೊಲೆಯ ತೊಟ್ಟು ಒಂದೇ ಸಾಲಿನಲ್ಲಿರಬೇಕು. |
05:33 | ಮತ್ತು, ಗದ್ದವು ಮುಂದೆ ಬಂದಿದ್ದು ಸ್ತನಕ್ಕೆ ಅತೀ ಹತ್ತಿರವಾಗಿರಬೇಕು. |
05:38 | ಲ್ಯಾಚಿಂಗ್ ಸಮಯದಲ್ಲಿ, ಶಿಶು ಅರಿಯೋಲಾದ ಕೆಳಭಾಗದಲ್ಲಿ ಹೆಚ್ಚಿನ ಭಾಗವನ್ನು ತೆಗೆದುಕೊಳ್ಳುವುದನ್ನು ಇದು ಖಚಿತಪಡಿಸುತ್ತದೆ. |
05:45 | ಹೀಗಾಗಿ, ಹೆಚ್ಚು ಹಾಲನ್ನು ಕುಡಿಯಲು ಕೆಳದವಡೆಯನ್ನು ಬಳಸುತ್ತದೆ. |
05:51 | ದಯವಿಟ್ಟು ಗಮನಿಸಿ: ಅರಿಯೋಲಾ, ಮೊಲೆತೊಟ್ಟಿನ ಸುತ್ತಲೂ ಇರುವ ಕಪ್ಪು ಜಾಗವಾಗಿದೆ. |
05:57 | ಈಗ ಮಗುವನ್ನು ಸರಿಯಾಗಿ ಹಿಡಿದುಕೊಂಡಿರುವುದರಿಂದ, ಸ್ತನವನ್ನು ಹೇಗೆ ಹಿಡಿದುಕೊಳ್ಳಬೇಕು ಎಂದು ನಾವು ಕಲಿಯೋಣ. |
06:04 | ತಾಯಿಯು ತನ್ನ ಇನ್ನೊಂದು ಕೈಯ ಬೆರಳುಗಳನ್ನು ಬಳಸಿ, U ಆಕಾರದಲ್ಲಿ ಇರುವಂತೆ ಕೆಳಗಿನಿಂದ ತನ್ನ ಸ್ತನವನ್ನು ಹಿಡಿಯಬೇಕು. |
06:12 | ಈ ಚಿತ್ರದಲ್ಲಿ, ತಾಯಿಯು ತನ್ನ ಬಲಗಡೆಯ ಸ್ತನವನ್ನು ಹಿಡಿದುಕೊಳ್ಳಲು ತನ್ನ ಬಲಗೈಯನ್ನು ಬಳಸುತ್ತಾಳೆ. |
06:19 | ಹೆಬ್ಬೆರಳು ಮತ್ತು ಬೆರಳುಗಳ ಸರಿಯಾದ ಸ್ಥಾನವನ್ನು ತಿಳಿದುಕೊಳ್ಳಲು, ತಾಯಿಯ ಬಲ ಮೊಲೆಯಲ್ಲಿ, ಮೊಲೆತೊಟ್ಟನ್ನು ಗಡಿಯಾರದ ಕೇಂದ್ರ ಎಂದು ಊಹಿಸಿ. |
06:31 | ತಾಯಿಯು ತನ್ನ ಬಲ ಹೆಬ್ಬೆರಳನ್ನು, ಈ ಗಡಿಯಾರದಲ್ಲಿ ಗಂಟೆ 9 ಆದ ಹಾಗೆ ಇಡಬೇಕು. |
06:38 | ಅವಳ ಬಲ ತೋರುಬೆರಳು ಮತ್ತು ಮಧ್ಯಮ ಬೆರಳನ್ನು ಗಂಟೆ 3 ಆದಾಗಿನ ಹಾಗೆ ಇಡಬೇಕು. |
06:46 | ಬೆರಳುಗಳು ಯಾವಾಗಲೂ ಮಗುವಿನ ತುಟಿಗಳಿಗೆ ಸಮಾನಾಂತರದಲ್ಲಿ ಇರಬೇಕು. ಯಾಕೆ? |
06:51 | ಸರಳವಾದ ಒಂದು ಉದಾಹರಣೆಯನ್ನು ಬಳಸಿ, ನಾವು ಇದನ್ನು ತಿಳಿದುಕೊಳ್ಳೋಣ. |
06:56 | ನಾವು ವಡಾ-ಪಾವ್ ಅಥವಾ ಬರ್ಗರ್ ಅನ್ನು ತಿನ್ನುವಾಗ, ನಮ್ಮ ಬಾಯಿ ಮತ್ತು ತುಟಿಗಳು ಅಡ್ಡಲಾಗಿ ತೆರೆದುಕೊಳ್ಳುತ್ತವೆ. |
07:02 | ದೊಡ್ಡ ತುತ್ತನ್ನು ತೆಗೆದುಕೊಳ್ಳಲು, ನಾವು ವಡಾ-ಪಾವ್ ಅಥವಾ ಬರ್ಗರ್ ಅನ್ನು ಅಡ್ಡಲಾಗಿ ಹಿಡಿದುಕೊಳ್ಳುತ್ತೇವೆ. |
07:08 | ಇಲ್ಲಿ, ಹೆಬ್ಬೆರಳು ಮತ್ತು ಬೆರಳುಗಳನ್ನು ತುಟಿಗಳಿಗೆ ಸಮಾನಾಂತರವಾಗಿ ಇರಿಸಲಾಗುತ್ತದೆ. |
07:12 | ನಾವು ವಡಾ-ಪಾವ್ ಅಥವಾ ಬರ್ಗರ್ ಅನ್ನು ಲಂಬವಾಗಿ ಹಿಡಿದಿದ್ದರೆ, ದೊಡ್ಡ ತುತ್ತನ್ನು ತೆಗೆದುಕೊಳ್ಳಲು ನಮಗೆ ಸಾಧ್ಯವಾಗುವುದಿಲ್ಲ. |
07:19 | ಹಾಗೆಯೇ, ಮಗುವಿನ ತುಟಿಗಳ ದಿಕ್ಕನ್ನು ಗಮನಿಸಿ. |
07:25 | ತುಟಿಗಳು ಇಲ್ಲಿ ಲಂಬವಾಗಿವೆ. ಆದ್ದರಿಂದ, ಬೆರಳುಗಳು ಮತ್ತು ಹೆಬ್ಬೆರಳನ್ನು ಕೂಡ ಸ್ತನದ ಮೇಲೆ ಲಂಬವಾಗಿ ಇಡಬೇಕು. |
07:34 | ಇದು, ಮಗುವಿಗೆ ತನ್ನ ಬಾಯಿಯಲ್ಲಿ ಅರಿಯೋಲಾದ ದೊಡ್ಡ ಭಾಗವನ್ನು ತೆಗೆದುಕೊಳ್ಳಲು ಸಹಾಯ ಮಾಡುತ್ತದೆ. |
07:39 | ಮಗುವಿನ ತುಟಿಗಳಿಗೆ ಸಮಾಂತರವಾಗಿ ಇರುವುದರ ಜೊತೆಗೆ ತಾಯಿಯ ಹೆಬ್ಬೆರಳು ಮತ್ತು ಬೆರಳುಗಳು ಯಾವಾಗಲೂ ಮೊಲೆತೊಟ್ಟಿನಿಂದ 3 ಬೆರಳುಗಳ ದೂರದಲ್ಲಿರಬೇಕು. |
07:50 | ಮತ್ತೆ, ವಡಾ-ಪಾವ್ ಅಥವಾ ಬರ್ಗರ್ ಅನ್ನು ತಿನ್ನುವಾಗ, ನಾವು ಅದನ್ನು ಬಹಳ ಹತ್ತಿರದಲ್ಲಿ ಹಿದಿದುಕೊಂಡರೆ, ನಮ್ಮ ಬೆರಳುಗಳು ದೊಡ್ಡ ತುತ್ತನ್ನು ತೆಗೆದುಕೊಳ್ಳದಂತೆ ಬಾಯಿಗೆ ಅಡ್ಡಬರುತ್ತವೆ. |
08:00 | ನಾವು ಅದನ್ನು ತುಂಬಾ ದೂರದಲ್ಲಿ ಹಿಡಿದರೆ, ಅದು ನಮ್ಮ ಬಾಯಿಯಲ್ಲಿ ಹೋಗಲು ಯೋಗ್ಯವಾದ ಆಕಾರದಲ್ಲಿ ಇರುವುದಿಲ್ಲ. |
08:07 | ಆದ್ದರಿಂದ, ದೊಡ್ಡ ತುತ್ತನ್ನು ತೆಗೆದುಕೊಳ್ಳಲು, ನಾವು ಅದನ್ನು ಸರಿಯಾದ ದೂರದಲ್ಲಿ ಹಿಡಿದುಕೊಳ್ಳುತ್ತೇವೆ. |
08:12 | ಹೀಗೆಯೇ, ಈ ಚಿತ್ರದಲ್ಲಿ ತೋರಿಸಿರುವಂತೆ, ಮಗುವಿಗಾಗಿ ಮೊಲೆತೊಟ್ಟಿನಿಂದ 3 ಬೆರಳುಗಳ ಅಂತರವು ಸರಿಯಾಗಿದೆ. |
08:20 | ಮಗುವು ತನ್ನ ಬಾಯಿಯಲ್ಲಿ ಅರಿಯೋಲಾದ ದೊಡ್ಡ ಭಾಗವನ್ನು ತೆಗೆದುಕೊಳ್ಳುವಾಗ ತಾಯಿಯ ಬೆರಳುಗಳು ಅಡ್ಡಬರುವುದಿಲ್ಲ, |
08:29 | ತಾಯಿಯು ಕೇವಲ ಮೊಲೆತೊಟ್ಟನ್ನು ಮಾತ್ರ ಒತ್ತುವುದಿಲ್ಲ. ಏಕೆಂದರೆ, ಇದರಿಂದ ತುಂಬಾ ಕಡಿಮೆ ಹಾಲು ಸಿಗುತ್ತದೆ. |
08:35 | ಹೆಚ್ಚು ಹಾಲು ಸಿಗಲು, ಅರಿಯೋಲಾದ ಕೆಳಗೆ, ಹಾಲಿನ ದೊಡ್ಡ ನಾಳಗಳನ್ನು ತಾಯಿಯು ಒತ್ತುತ್ತಾಳೆ. |
08:42 | ಮತ್ತು, ಮಗುವಿಗೆ ಗಟ್ಟಿಯಾಗಿ ಅಂಟಿಕೊಳ್ಳಲು ಸಹಾಯವಾಗುವಂತೆ, ಸ್ತನವನ್ನು ಸರಿಯಾಗಿ ಹಿಡಿಯಲಾಗಿದೆ ಎಂದು ಈ ದೂರವು ಖಚಿತಪಡಿಸುತ್ತದೆ. |
08:49 | ಮಗುವಿನ ಮೂಗು ಇರುವ ಸ್ತನದ ಬದಿಯಲ್ಲಿ, ತಾಯಿಯ ಹೆಬ್ಬೆರಳು ಮೊಲೆತೊಟ್ಟಿನಿಂದ 3 ಬೆರಳುಗಳ ಅಂತರದಲ್ಲಿ ಇರಬೇಕು. |
08:59 | ಮತ್ತು, ಮಗುವಿನ ಗದ್ದ ಇರುವ ಸ್ತನದ ಬದಿಯಲ್ಲಿ, ಅವಳ 2 ಬೆರಳುಗಳು ಮೊಲೆತೊಟ್ಟಿನಿಂದ 3 ಬೆರಳುಗಳ ಅಂತರದಲ್ಲಿ ಇರಬೇಕು. |
09:09 | ವಡಾ- ಪಾವ್ ಅಥವಾ ಬರ್ಗರ್ ನ ಉದಾಹರಣೆಗೆ ಹಿಂತಿರುಗೋಣ. |
09:13 | ವಡಾ-ಪಾವ್ ಅಥವಾ ಬರ್ಗರ್ ಅನ್ನು ಸರಿಯಾಗಿ ಹಿಡಿದ ನಂತರ, ನಾವು ಯಾವಾಗಲೂ ದೊಡ್ಡ ತುತ್ತು (bite) ತೆಗೆದುಕೊಳ್ಳಲು ಅದನ್ನು ಅದುಮಿ ಹಿಡಿಯುತ್ತೇವೆ. |
09:21 | ಹೀಗೆಯೇ, ಕೆಳಗಿನಿಂದ U ಆಕಾರದಲ್ಲಿ ಒತ್ತಿ, ತಾಯಿಯು ತನ್ನ ಸ್ತನವನ್ನು ಮೆತ್ತಗೆ ಕುಗ್ಗಿಸಬೇಕು. |
09:28 | ಇದು, ಮಗುವಿಗೆ ಸ್ತನದ ದೊಡ್ಡ ಭಾಗವನ್ನು ತನ್ನ ಬಾಯಿಯಲ್ಲಿ ತೆಗೆದುಕೊಳ್ಳಲು ಸಹಾಯ ಮಾಡುತ್ತದೆ. |
09:34 | ಆದರೆ ನೆನಪಿಡಿ, ತಾಯಿಯು ತನ್ನ ಸ್ತನವನ್ನು V ಆಕಾರದಲ್ಲಿ ಅದುಮಬಾರದು. |
09:39 | V ಆಕಾರದ ಒತ್ತುವಿಕೆಯು ಸ್ತನವನ್ನು ಹಿಸುಕುತ್ತದೆ ಮತ್ತು ನಿಪ್ಪಲ್ ಫೀಡಿಂಗ್ ಅನ್ನು ಉಂಟುಮಾಡುತ್ತದೆ. |
09:45 | ಅಲ್ಲದೆ, ಹೆಬ್ಬೆರಳು ಮತ್ತು ಬೆರಳುಗಳಿಂದ ಸ್ತನವನ್ನು ಸಮನಾಗಿ ಒತ್ತಲಾಗುತ್ತಿದೆ ಎಂದು ಖಚಿತಪಡಿಸಿಕೊಳ್ಳಿ. |
09:52 | ಇಲ್ಲದಿದ್ದರೆ, ಮೊಲೆತೊಟ್ಟು ಬಲ ಅಥವಾ ಎಡಭಾಗಕ್ಕೆ ಸರಿಯುತ್ತದೆ ಮತ್ತು ಜೋಡಣೆಯು ಸರಿಯಾಗುವುದಿಲ್ಲ. |
10:00 | ನೆನಪಿಡಿ, ಮಗುವಿನ ಕಡೆಗೆ ಸ್ತನವನ್ನು ಬದಿಯಿಂದ ತಳ್ಳುವ ಮೂಲಕ ಅದನ್ನು ಮಗುವಿನೆಡೆಗೆ ತರಬೇಡಿ. |
10:08 | ಯಾವಾಗಲೂ ಮಗುವನ್ನು ಸ್ತನದ ಕಡೆಗೆ ತನ್ನಿ. |
10:12 | ಈಗ, ಶಿಶು 'ಕ್ರಾಸ್ ಕ್ರೇಡಲ್ ಹೋಲ್ಡ್' ನಲ್ಲಿದೆ ಮತ್ತು ಸ್ತನ್ಯಪಾನಕ್ಕಾಗಿ ಹೊಂದಿಕೊಳ್ಳಲು (latch) ಸಿದ್ಧವಾಗಿದೆ. |
10:18 | ಇದೇ ಸರಣಿಯ ಮತ್ತೊಂದು ಟ್ಯುಟೋರಿಯಲ್ ನಲ್ಲಿ, ಸರಿಯಾದ ಲ್ಯಾಚಿಂಗ್ ತಂತ್ರದ ಬಗ್ಗೆ ವಿವರಿಸಲಾಗಿದೆ. |
10:24 | ಒಮ್ಮೆ ಮಗು ಸರಿಯಾಗಿ ಅಂಟಿಕೊಂಡಿತೆಂದರೆ ಮತ್ತು ಸ್ತನವು ತುಂಬಾ ಭಾರವಾಗಿರದಿದ್ದರೆ ಆಗ ತಾಯಿಯು ಅವಳ ಸ್ತನವನ್ನು ತನ್ನ ಕೈಯಿಂದ ಬಿಡಬೇಕು. ಮತ್ತು ತನ್ನ ಕೈಯನ್ನು ಆಧಾರಕ್ಕಾಗಿ ಮಗುವಿನ ಕೆಳಗೆ ತರಬೇಕು. |
10:40 | ಈ ಸ್ಥಾನದಲ್ಲಿ, ತಾಯಿಯು ತನ್ನ ಎರಡೂ ತೋಳುಗಳನ್ನು ತನ್ನ ಶರೀರದ ತುಂಬಾ ಹತ್ತಿರಕ್ಕೆ ತರಬೇಕು. |
10:46 | ಹಾಲುಣಿಸುವ ಸಮಯದಲ್ಲಿ ಇದು ಅವಳನ್ನು ಆರಾಮವಾಗಿರಿಸುತ್ತದೆ. |
10:50 | ಇಲ್ಲಿಗೆ ನಾವು ಈ ಟ್ಯುಟೋರಿಯಲ್ ನ ಕೊನೆಗೆ ಬಂದಿದ್ದೇವೆ. |
10:54 | ಈ ಸ್ಕ್ರಿಪ್ಟ್ ನ ಅನುವಾದಕಿ IIT Bombay ಯಿಂದ ಸಂಧ್ಯಾ ಪುಣೇಕರ್ ಹಾಗೂ ಧ್ವನಿ ಗ್ಲೋರಿಯಾ.
ಧನ್ಯವಾದಗಳು. |