Health-and-Nutrition/C2/General-guidelines-for-Complementary-feeding/Kannada
From Script | Spoken-Tutorial
Revision as of 19:38, 9 August 2020 by NaveenBhat (Talk | contribs)
|
|
00:02 | ಪೂರಕ ಆಹಾರಗಳನ್ನು ನೀಡಲು ಸಾಮಾನ್ಯ ನಿಯಮಗಳನ್ನು ತಿಳಿಸುವ ಈ ಸ್ಪೊಕನ್ ಟ್ಯುಟೋರಿಯಲ್ ಗೆ ಸ್ವಾಗತ. |
00:09 | ಈ ಟ್ಯುಟೋರಿಯಲ್ ನಲ್ಲಿ ನಾವು, |
00:14 | ೬ ತಿಂಗಳ ಶಿಶುವಿಗೆ ಪೂರಕ ಆಹಾರವನ್ನು ಪ್ರಾರಂಭಿಸುವ ಪ್ರಾಮುಖ್ಯತೆ |
00:19 | ಮತ್ತು ೬ ರಿಂದ ೨೪ ತಿಂಗಳ ಮಕ್ಕಳಿಗೆ ಪೂರಕ ಆಹಾರವನ್ನು ಕೊಡುವ ನಿಯಮಾವಳಿಗಳ ಬಗ್ಗೆ ಕಲಿಯುವೆವು. |
00:27 | ಈಗ ಪ್ರಾರಂಭಿಸೋಣ. |
00:29 | ಒಂದು ಶಿಶುವಿಗೆ ಜನ್ಮದಿಂದ ೬ ತಿಂಗಳವರೆಗೆ ಕೇವಲ ಎದೆಹಾಲನ್ನು ಮಾತ್ರ ಕೊಡಬೇಕು. |
00:37 | ೬ ತಿಂಗಳು ಎಂದರೆ ಮಗುವಿನ ಜೀವನದ ೬ ನೇ ತಿಂಗಳು ಎಂದರ್ಥವಲ್ಲ. |
00:45 | ಮಗುವಿನ ವಯಸ್ಸು ೬ ತಿಂಗಳನ್ನು ಪೂರೈಸಿ ೭ ನೇ ತಿಂಗಳಿಗೆ ಪ್ರವೇಶಿಸಿರಬೇಕು. |
00:52 | ಈ ವಯಸ್ಸಿನಲ್ಲಿ, ಮಗುವಿಗೆ ಕೇವಲ ಎದೆಹಾಲು ಸಾಕಾಗುವದಿಲ್ಲ. |
00:59 | ಎದೆಹಾಲಿನ ಜೊತೆಗೆ ಮಗುವಿಗೆ ಮನೆಯಲ್ಲಿಯೇ ಸಿದ್ಧಪಡಿಸಿದ ಪೌಷ್ಟಿಕ ಆಹಾರವನ್ನು ಕೊಡುವುದು ಅತ್ಯಗತ್ಯ. |
01:06 | ಇಂತಹ ಆಹಾರವನ್ನು ಪೂರಕ ಆಹಾರ ಎಂದು ಕರೆಯುತ್ತಾರೆ. |
01:11 | ಇದನ್ನು ಮಗುವಿಗೆ ೬ ತಿಂಗಳಿಂದ ೨೪ ತಿಂಗಳವರೆಗೆ ಕೊಡಬೇಕು. |
01:18 | ಇದು ಮಗುವಿನ ಎತ್ತರ, ಆರೋಗ್ಯ ಮತ್ತು ಬುದ್ಧಿಮತ್ತೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. |
01:26 | ೬ ತಿಂಗಳಿನಲ್ಲಿ ಪೂರಕ ಆಹಾರವನ್ನು ಕೊಡುವುದು ತುಂಬಾ ಮುಖ್ಯವಾಗಿದೆ. |
01:33 | ಇಲ್ಲದಿದ್ದರೆ ಮಗುವಿನ ಬೆಳವಣಿಗೆ ಕುಂಠಿತವಾಗುತ್ತದೆ. |
01:39 | ಮಗುವು ಬೆಳೆದ ನಂತರ ಘನ ಆಹಾರವನ್ನು ತಿರಸ್ಕರಿಸುವ ಸಾಧ್ಯತೆಯೂ ಇರುತ್ತದೆ. |
01:47 | ನೆನಪಿಡಿ, ಪೂರಕ ಆಹಾರವು ಸ್ತನ್ಯಪಾನಕ್ಕೆ ಪೂರಕವಾಗಿರುತ್ತದೆ. |
01:53 | ಹಾಗಾಗಿ, ಹಾಲುಣಿಸುವಿಕೆಯನ್ನು ಕನಿಷ್ಠ ೨ ವರ್ಷದವರೆಗೆ ಮುಂದುವರೆಸಬೇಕು. |
02:00 | ಪೂರಕ ಆಹಾರದ ಪ್ರಕಾರ, |
02:02 | ಸ್ಥಿರತೆ |
02:04 | ಮತ್ತು ಪ್ರಮಾಣಗಳು ಮಗುವಿನ ವಯಸ್ಸಿನೊಂದಿಗೆ ಬದಲಾಗುತ್ತದೆ. |
02:10 | ಪ್ರತಿಯೊಂದು ವಯಸ್ಸಿಗೂ ಪ್ರತ್ಯೇಕವಾದ ಶಿಫಾರಸುಗಳಿವೆ. |
02:16 | ಅವುಗಳನ್ನು ಇದೇ ಸರಣಿಯ ಇನ್ನೊಂದು ಟ್ಯುಟೊರಿಯಲ್ ನಲ್ಲಿ ವಿವರಿಸಲಾಗಿದೆ. |
02:23 | ಈಗ ನಾವು, ಎಲ್ಲಾ ವಯಸ್ಸಿಗೆ ಉಪಯುಕ್ತವಾದ ಪೂರಕ ಆಹಾರದ ನಿಯಮಗಳನ್ನು ನೋಡೋಣ. |
02:31 | ಯಾವುದೇ ಹೊಸ ಆಹಾರವನ್ನು ಮಗುವಿಗೆ ಮೊದಲು ಕೊಡುವಾಗ ಪ್ರತ್ಯೆಕವಾಗಿ ಕೊಡಬೇಕು. |
02:37 | ನಂತರ ಅದನ್ನು ಬೇರೆ ಆಹಾರದ ಜೊತೆ ಬೆರೆಸಬಹುದು. |
02:42 | ಇದು ಮಗುವಿಗೆ ಯಾವುದೇ ಆಹಾರ ಹೊಂದುವದಿಲ್ಲವೋ ಎಂದು ತಿಳಿಯಲು ಸಹಾಯ ಮಾಡುತ್ತದೆ. |
02:48 | ಉತ್ತಮ ಪೋಷಕಾಂಶಕ್ಕಾಗಿ ನಾನಾ ಆಹಾರಗಳನ್ನು ಸೇವಿಸುವುದು ಅಗತ್ಯವಾಗಿದೆ. |
02:54 | ಪ್ರತಿ ೪ ದಿನಗಳಿಗೊಮ್ಮೆ, ಮಗುವಿನ ಆಹಾರಕ್ರಮದಲ್ಲಿ ಹೊಸದನ್ನು ಸೇರಿಸಿ. |
03:01 | ಮೊದಲು ಕೊಡುತ್ತಿದ್ದ ಆಹಾರದ ಜೊತೆ ಒಂದು ಚಮಚ ಹೊಸ ಆಹಾರವನ್ನು ಕೊಡಿ. |
03:08 | ನಿಧಾನವಾಗಿ ಪ್ರತಿದಿನ ಅದರ ಪ್ರಮಾಣವನ್ನು ಹೆಚ್ಚಿಸಿ. |
03:12 | ಎಲ್ಲಾ ೮ ಆಹಾರಸಮೂಹಗಳಿಂದ ಪೌಷ್ಟಿಕ ಘನ ಆಹಾರವನ್ನು ನಿಧಾನವಾಗಿ ಸೇರಿಸಬೇಕು. |
03:20 | ಮೊದಲ ಆಹಾರದ ಸಮೂಹದಲ್ಲಿ ಧಾನ್ಯಗಳು, ಗಡ್ಡೆ ಗೆಣಸುಗಳು ಬರುತ್ತವೆ. |
03:27 | ದ್ವಿದಳ ಧಾನ್ಯಗಳು,ಬೀಜಗಳು ಮತ್ತು ಕಾಯಿಗಳು ಎರಡನೇ ಸಮೂಹವಾಗಿವೆ. |
03:32 | ಮೂರನೆಯದು ಹಾಲಿನ ಉತ್ಪನ್ನಗಳಾಗಿವೆ. |
03:37 | ನಾಲ್ಕನೆಯದು ಮಾಂಸ, ಮೀನು ಮತ್ತು ಕೋಳಿಮಾಂಸ ವಾಗಿವೆ. |
03:42 | ಮೊಟ್ಟೆ ೫ನೇ ಸಮೂಹವಾಗಿದೆ. |
03:46 | ವಿಟಾಮಿನ್ A ಯನ್ನು ಸಮ್ರುದ್ಧವಾಗಿ ಹೊಂದಿರುವ ತರಕಾರಿಗಳು ೬ ನೇ ಸಮೂಹವಾಗಿವೆ. |
03:52 | ಏಳನೆಯದು ಹಣ್ಣು ಮತ್ತು ತರಕಾರಿಗಳು. |
03:57 | ಕೊನೆಯದಾಗಿ, ಎದೆಹಾಲು ಎಂಟನೇ ಸಮೂಹವಾಗಿದೆ ಮತ್ತು ಅತ್ಯಂತ ಮುಖ್ಯವಾಗಿದೆ. |
04:04 | ಇದನ್ನು ಬೇರೆ ಆಹಾರಗಳ ಜೊತೆಗೆ ಕೊಡಲೇಬೇಕು. |
04:11 | ಹಾಗಾಗಿ ಮಗುವಿನ ಆಹಾರಕ್ರಮವು ಈ ೮ ಸಮೂಹಗಳನ್ನು ಹೊಂದಿರಬೇಕು. |
04:17 | ಒಂದು ವೇಳೆ ಅದು ೫ ಸಮೂಹಕ್ಕಿಂತ ಕಡಿಮೆಯಿದ್ದರೆ ತುಂಬಾ ಸಮಸ್ಯೆಗೆ ಕಾರಣವಾಗುತ್ತದೆ. |
04:24 | ಅದನ್ನು ತಕ್ಷಣವೇ ಸರಿಪಡಿಸಿಕೊಳ್ಳಬೇಕು. |
04:28 | ಕೆಲವು ಶಿಶುಗಳಿಗೆ ಎದೆಹಾಲು ದೊರೆಯುವದೇ ಇಲ್ಲ. |
04:33 | ಆಗ ಉಳಿದ ೭ ಸಮೂಹದ ಆಹಾರವನ್ನು ಪ್ರತಿದಿನ ಯೋಜಿಸಿಕೊಳ್ಳಿ. |
04:40 | ಮತ್ತು, 500 ml ಪ್ರಾಣಿಮೂಲದ ಹಾಲನ್ನು ಪ್ರತಿದಿನ ೨ ಬಾರಿ ಅಧಿಕವಾಗಿ ಕೊಡಿ. |
04:49 | ಪ್ರಾಣಿ ಮೂಲದ ಹಾಲನ್ನು ಕೊಡುವ ಮೊದಲು ಕಾಯಿಸಿ ಕೊಡಿ. |
04:55 | ಈಗ ನಾವು, ಮಗುವಿನ ಆಹಾರಕ್ರಮದಲ್ಲಿ ಹೊಸ ಆಹಾರದ ಸಮೂಹವನ್ನು ಸೇರಿಸುವ ಕುರಿತು ಚರ್ಚಿಸೋಣ. |
05:02 | ಎದೆಹಾಲಿನ ಜೊತೆ, ಮೊದಲ ೫ ಸಮೂಹದಲ್ಲಿನ ಪೂರಕ ಆಹಾರವನ್ನು ಕೊಡಲು ಪ್ರಾರಂಭಿಸಿ. |
05:09 | ಮಗುವಿಗೆ ೬ ತಿಂಗಳ ನಂತರ ಹೆಚ್ಚಿನ ಪೋಷಕಾಂಶ ಬೇಕಾಗುತ್ತದೆ. |
05:16 | ಆಹಾರದ ಪ್ರಮಾಣ ಪ್ರಾರಂಭಿಕ ದಿನಗಳಲ್ಲಿ ಕಡಿಮೆ ಇರಬಹುದು. |
05:24 | ಹಾಗಾಗಿ, ೫ ಸಮೂಹಗಳಲ್ಲಿನ ಪೊಷಕಾಂಶಯುಕ್ತ ಘನ ಆಹಾರವನ್ನು ಕೊಡಬಹುದು. |
05:31 | ಈ ಆಹಾರಗಳು ಪ್ರೋಟೀನ್, ಕೊಬ್ಬು ಮೊದಲಾದ ಪೊಷಕಾಂಶಗಳನ್ನು ಹೆಚ್ಚಾಗಿ ಹೊಂದಿವೆ. |
05:38 | ಇವುಗಳು ಮಗುವಿನ ಎತ್ತರ ಮತ್ತು ನರಗಳ ಬೆಳವಣಿಗೆಗೆ ತುಂಬಾ ಮುಖ್ಯವಾಗಿವೆ. |
05:45 | ಉತ್ತಮ ಕೊಬ್ಬು ಮಗುವಿನ ಮೆದುಳಿನ ಬೆಳವಣಿಗೆಗೆ ಮುಖ್ಯವಾಗಿದೆ. |
05:50 | ಈ ಆಹಾರಗಳ ನಂತರ, ತರಕಾರಿ ಮತ್ತು ಹಣ್ಣುಗಳನ್ನು ಕೊಡಲು ಪ್ರಾರಂಭಿಸಿ. |
05:57 | ತರಕಾರಿ ಮತ್ತು ಹಣ್ಣುಗಳು ವಿಟಾಮಿನ್ ಮತ್ತು ಖನಿಜಗಳನ್ನು ಹೆಚ್ಚು ಹೊಂದಿರುತ್ತವೆ. |
06:03 | ಆದರೆ ಅವು, ಪ್ರೋಟೀನ್ ಮತ್ತು ಕೊಬ್ಬುಗಳ ವಿಚಾರದಲ್ಲಿ ಮೊದಲ ೫ ಸಮೂಹಗಳಷ್ಟು ಶ್ರೀಮಂತವಾಗಿಲ್ಲ. |
06:11 | ಹಾಗಾಗಿ, ತೂಕದ ನಷ್ಟವನ್ನು ತಡೆಯಲು ಅವುಗಳನ್ನು ನಂತರ ಪ್ರಾರಂಭಿಸಲಾಗುತ್ತದೆ. |
06:18 | ಮತ್ತು ಹಣ್ಣುಗಳು ಸಿಹಿಯಾಗಿರುತ್ತವೆ. |
06:23 | ಮಗುವು ಸಿಹಿಗಿಂತ ಮೊದಲು ಬೇರೆ ಬೇರೆ ರುಚಿಯನ್ನು ನೊಡುವುದು ಮುಖ್ಯವಾಗಿದೆ. |
06:31 | ಬೇರೆ ಬೇರೆ ರುಚಿಗಳನ್ನು ಅಭ್ಯಾಸ ಮಾಡುವದರಿಂದ ಮಗುವು ಹಲವು ಆಹಾರಗಳನ್ನು ಸ್ವೀಕರಿಸಲು ಸಹಾಯವಾಗುತ್ತದೆ. |
06:37 | ಇದರಿಂದ ಮಗುವು ಐಚ್ಛಿಕವಾಗಿ ತಿನ್ನುವುದು ತಪ್ಪುತ್ತದೆ. |
06:44 | ಹಾಗಾಗಿ ಮಗುವಿನ ಆಹಾರಕ್ರಮದಲ್ಲಿ ಉಳಿದೆಲ್ಲಾ ಆಹಾರಗಳ ನಂತರ ಹಣ್ಣನ್ನು ಸೇರಿಸಲಾಗುತ್ತದೆ. |
06:51 | ತಾಜಾ ಮತ್ತು ಆಯಾ ಕಾಲದ ಮತ್ತು ಪ್ರದೆಶದ ಹಣ್ಣನ್ನು ದಿನಕ್ಕೆರಡು ಬಾರಿ ನೀಡುವುದು ಉತ್ತಮವಾಗಿದೆ. |
06:59 | ಹಣ್ಣುಗಳನ್ನು ಊಟದ ನಂತರ ಆಹಾರವಾಗಿ ಕೊಡಬಹುದು. |
07:05 | ಹಣ್ಣಿನ ಪ್ಯೂರಿಯನ್ನು ಮಗುವಿನ ನಿತ್ಯದ ಊಟದ ಜೊತೆ ಬೆರೆಸಬಾರದು. |
07:11 | ಈ ವಯಸ್ಸಿಗೆ ಹಣ್ಣಿನ ರಸ ಸೂಕ್ತವಲ್ಲ. |
07:16 | ಅದು ಮನೆಯಲ್ಲಿ ತಯಾರಿಸಿದ ಅಥವಾ ಸಿದ್ಧ ಹಣ್ಣಿನ ರಸವಾಗಿರಬಹುದು. |
07:23 | ನೆನಪಿಡಿ, ಎದೆಹಾಲುಣಿಸುವದನ್ನು ೨ ವರ್ಷದ ವರೆಗೆ ಮುಂದುವರೆಸಿ. |
07:28 | ಗಟ್ಟಿಯಾದ ಹಣ್ಣುಗಳು ಮಗುವಿಗೆ ಉಸಿರುಗಟ್ಟಿಸುವದರಿಂದ ಅವುಗಳನ್ನು ತ್ಯಜಿಸಿ. |
07:34 | ಕಾಯಿಗಳು, ದ್ರಾಕ್ಷಿ, ಕಡಲೆಕಾಳು ಮತ್ತು ಹಸಿ ಗಜ್ಜರಿ ಅಂತಹ ಆಹಾರಗಳಿಗೆ ಉದಾಹರಣೆ. |
07:44 | ಮಗುವಿಗೆ ತಾಜಾ ಮನೆಯಲ್ಲೇ ಬೇಯಿಸಿ ಶುದ್ಧವಾಗಿ ತಯಾರಿಸಿದ ಆಹಾರ ಸೂಕ್ತವಾಗಿದೆ. |
07:51 | ಮಗುವಿನ ಆಹಾರವನ್ನು ಸಂಗ್ರಹಿಸುವದಾದರೆ, ಅದಕ್ಕೆ ಸಂಬಂಧಿಸಿದ ನಮ್ಮ ಟ್ಯುಟೋರಿಯಲ್ ಅನ್ನು ನೋಡಿ. |
07:57 | ಸುರಕ್ಷಿತವಾಗಿ ಮಗುವಿಗೆ ಆಹಾರ ಸಿದ್ಧಪಡಿಸಿ ಬಡಸುವ ವಿಧಾನವನ್ನೂ ಅದೇ ಟ್ಯುಟೋರಿಯಲ್ ನಲ್ಲಿ ವಿವರಿಸಲಾಗಿದೆ. |
08:06 | ಹೆಚ್ಚಿನ ವಿವರಗಳಿಗಾಗಿ ನಮ್ಮ ಜಾಲತಾಣಕ್ಕೆ ಭೇಟಿ ನೀಡಿ. |
08:10 | ೬ ತಿಂಗಳ ಮಗುವಿಗೆ ಆಹಾರದ ಜೊತೆಗೆ ಕುದಿಸಿ ಆರಿಸಿದ ನೀರನ್ನು ಕೊಡಬಹುದು. |
08:18 | ದಿನಕ್ಕೆರಡು ಬಾರಿ 30 ರಿಂದ 60 ml ನೀರಿನೊಂದಿಗೆ ಪ್ರಾರಂಭಿಸಿ. |
08:25 | ಬಿಸಿ ವಾತಾವರಣದಲ್ಲಿ ಮಗುವಿನ ಅಗತ್ಯಕ್ಕೆ ತಕ್ಕಂತೆ ನೀರಿನ ಪ್ರಮಾಣವನ್ನು ಹೆಚ್ಚಿಸಬೇಕು. |
08:31 | ಎದೆ ಹಾಲು ಮತ್ತು ನೀರು ಮಗುವಿಗೆ ಅತ್ಯುತ್ತಮ ಪೇಯಗಳಾಗಿವೆ. |
08:37 | ಆದರೆ ಅದನ್ನು ಸರಿಯಾದ ಸಮಯಕ್ಕೆ ನೀಡಬೇಕು. |
08:42 | ಮಗುವಿಗೆ ಊಟಕ್ಕಿಂತ ಮೊದಲು ಎದೆಹಾಲು ಅಥವಾ ನೀರನ್ನು ಕೊಡಬೇಡಿ. |
08:48 | ಹಸಿದ ಮಗುವು ಹೊಸ ಆಹಾರಗಳನ್ನು ಸ್ವೀಕರಿಸುತ್ತದೆ. |
08:54 | ಮಗುವಿಗೆ ೨೦ ರಿಂದ ೩೦ ನಿಮಿಷ ಮೊದಲು ಅಥವಾ ನಂತರ , ಎದೆಹಾಲನ್ನು ಅಥವಾ ನೀರನ್ನು ಕೊಡಬಹುದು. |
09:02 | ಮಗುವಿನ ಸರಿಯಾದ ಬೆಳವಣಿಗೆಗೆ, ಸಾಕಷ್ಟು ಪೂರಕ ಆಹಾರಗಳೂ ಬೇಕು. |
09:08 | ನಾವು ಟ್ಯುಟೋರಿಯಲ್ ನ ಕೊನೆಯಲ್ಲಿದ್ದೇವೆ. ಅನುವಾದ ಮತ್ತು ಧ್ವನಿ ಶ್ರೀಮತಿ ನಯನಾ ಭಟ್ಟ.
ಧನ್ಯವಾದಗಳು. |