STEMI-2017/C2/STEMI-App-and-its-mandatory-fields/Kannada
From Script | Spoken-Tutorial
Revision as of 16:41, 7 August 2020 by PoojaMoolya (Talk | contribs)
|
|
00:01 | ನಮಸ್ಕಾರ. STEMI App and its mandatory fields ಎಂಬ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ. |
00:08 | ಈ ಟ್ಯುಟೋರಿಯಲ್ ನಲ್ಲಿ ನಾವು- *ಟ್ಯಾಬ್ಲೆಟ್ ನ ಮೇಲೆ STEMI App ಅನ್ನು ತೆರೆಯುವುದು |
00:15 | STEMI Homepage ಅನ್ನು ಅರ್ಥಮಾಡಿಕೊಳ್ಳುವುದು |
00:17 | STEMI App ನ ಕಡ್ಡಾಯವಾದ ಫೀಲ್ಡ್ ಗಳಲ್ಲಿ ಡೇಟಾಅನ್ನು ನಮೂದಿಸುವುದು, ಇವುಗಳನ್ನು ಕಲಿಯುವೆವು. |
00:23 | ಈ ಟ್ಯುಟೋರಿಯಲ್ ಅನ್ನು ಅಭ್ಯಾಸ ಮಾಡಲು, ನಿಮಗೆ -
STEMI App ಅನ್ನು ಇನ್ಸ್ಟಾಲ್ ಮಾಡಿರುವ Android tablet (ಆಂಡ್ರೈಡ್ ಟ್ಯಾಬ್ಲೆಟ್) ಹಾಗೂ ಸಕ್ರಿಯವಿರುವ ಇಂಟರ್ನೆಟ್ ಸಂಪರ್ಕ ಇವುಗಳ ಅವಶ್ಯಕತೆಯಿದೆ. |
00:36 | STEMI App, STEMI ಲೋಗೊಅನ್ನು ಹೊಂದಿರುವ ಒಂದು ಕೆಂಪು ಆಯತದಂತೆ ಕಾಣುತ್ತದೆ. |
00:42 | STEMI App ಅನ್ನು ಆಯ್ಕೆಮಾಡುವ ಮೊದಲು, ಟ್ಯಾಬ್ಲೆಟ್ ಇಂಟರ್ನೆಟ್ ನ ಸಂಪರ್ಕವನ್ನು ಹೊಂದಿರುವುದನ್ನು ಖಚಿತಪಡಿಸಿಕೊಳ್ಳಿ. |
00:50 | ಇಲ್ಲದಿದ್ದರೆ, ನಿಮ್ಮ ಇಂಟರ್ನೆಟ್ ನ ಸಂಪರ್ಕವನ್ನು ಪರೀಕ್ಷಿಸಲು ಸೂಚಿಸುತ್ತಿರುವ ಒಂದು ಪಾಪ್-ಅಪ್ ಕಾಣಿಸಿಕೊಳ್ಳುತ್ತದೆ. |
00:56 | ಡಿವೈಸ್ ಅನ್ನು ಇಂಟರ್ನೆಟ್ ಗೆ ಜೋಡಿಸಿದ ನಂತರ STEMI App ಅನ್ನು ಆಯ್ಕೆಮಾಡಿ. |
01:01 | STEMI ಹೋಮ್-ಪೇಜ್ ಕಾಣಿಸಿಕೊಳ್ಳುತ್ತದೆ. |
01:04 | ಇದು stemiAuser ಎಂದು ಹೇಳುತ್ತಿರುವುದನ್ನು ಇಲ್ಲಿ ಗಮನಿಸಿ, ಏಕೆಂದರೆ ನಾನು A Hospital ಯೂಸರ್ ಆಗಿದ್ದೇನೆ. |
01:12 | ನೀವು ಬೇರೊಂದು ಆಸ್ಪತ್ರೆಯ ಯೂಸರ್ ಆಗಿದ್ದರೆ, ಉದಾ: B Hospital, ಆಗ ಇಲ್ಲಿ stemiBuser ಕಾಣಿಸಿಕೊಳ್ಳುತ್ತದೆ. |
01:22 | ಹೀಗೆಯೇ, C Hospital ಮತ್ತು D Hospital ಗಳಿಗಾಗಿ ಕ್ರಮವಾಗಿ stemiCuser ಅಥವಾ stemiDuser ಎಂದು ಕಾಣಿಸಿಕೊಳ್ಳುತ್ತದೆ. |
01:33 | ಮತ್ತು ಒಂದುವೇಳೆ, STEMI App ಅನ್ನು EMRI Ambulance ನಿಂದ ಆಕ್ಸೆಸ್ ಮಾಡಿದರೆ (ಪಡೆದರೆ), ಆಗ stemiEuser ಕಾಣಿಸಿಕೊಳ್ಳುತ್ತದೆ. |
01:42 | ಈ ಎಲ್ಲ ಸಂದರ್ಭಗಳಲ್ಲಿ, ನಾವು STEMI ಹೋಮ್-ಪೇಜ್ ನಲ್ಲಿ ಇರುತ್ತೇವೆ. ಈಗ ನಾವು ಸಿದ್ಧರಾಗಿದ್ದೇವೆ. |
01:49 | STEMI ಹೋಮ್-ಪೇಜ್, ಪೇಜ್ ನ ಮಧ್ಯದಲ್ಲಿ 3 ಟ್ಯಾಬ್ ಗಳನ್ನು ಹೊಂದಿದೆ. |
01:54 | New Patient ಟ್ಯಾಬ್ – ರೋಗಿಯ ಬಗ್ಗೆ ಪೂರ್ಣ ಮಾಹಿತಿಯನ್ನು ನಮೂದಿಸಲು, |
01:59 | Search ಟ್ಯಾಬ್ – ಈಗಾಗಲೇ ಸೇವ್ ಮಾಡಲಾದ ರೋಗಿಯ ವಿವರಗಳನ್ನು ಹುಡುಕಲು ಮತ್ತು ಆಯ್ಕೆಮಾಡಲು ಸಹಾಯಮಾಡುತ್ತದೆ. |
02:05 | ECG ಟ್ಯಾಬ್ – ಅತ್ಯಂತ ಕಡಿಮೆ ಡೇಟಾ ನಮೂದಿಸಿ, ಶೀಘ್ರವಾಗಿ ECG ತೆಗೆದುಕೊಳ್ಳಲು ಸಹಾಯಮಾಡುತ್ತದೆ. |
02:12 | ಪೇಜ್ ನ ಮೇಲ್ತುದಿಯ ಎಡಭಾಗದಲ್ಲಿ ಒಂದು ಮೆನ್ಯು ಟ್ಯಾಬ್ ಸಹ ಇರುತ್ತದೆ. ಇದನ್ನು ಬಳಸುವ ರೀತಿಯನ್ನು ಮುಂದಿನ ಟ್ಯುಟೋರಿಯಲ್ ಗಳಲ್ಲಿ ನಾವು ನೋಡುವೆವು. |
02:21 | ಈಗ ನಾವು ಕಡ್ಡಾಯವಾದ ಫೀಲ್ಡ್ ಗಳೆಂದರೇನು ಅದನ್ನುತಿಳಿದುಕೊಳ್ಳೋಣ. |
02:26 | ಒಂದು ಚಿಕ್ಕ ಕೆಂಪು ಆಸ್ಟೆರಿಸ್ಕ್ ನೊಂದಿಗೆ ತೋರಿಸಲಾದ ಫೀಲ್ಡ್ ಗಳನ್ನು ಕಡ್ಡಾಯವಾದ ಫೀಲ್ಡ್ ಗಳೆಂದು ಕರೆಯಲಾಗುತ್ತದೆ. |
02:34 | ಈ ಫೀಲ್ಡ್ ಗಳಲ್ಲಿ ಡೇಟಾಅನ್ನು ನಮೂದಿಸುವುದು ಕಡ್ಡಾಯವಾಗಿದೆ. |
02:38 | ಒಂದು ನಿರ್ದಿಷ್ಟ ಪೇಜ್ ಅನ್ನು ಸೇವ್ ಮಾಡಲು ಮತ್ತು ಮುಂದಿನ ಪೇಜ್ ಗೆ ಹೋಗಲು ಈ ಡೇಟಾ ಅಗತ್ಯವಾಗಿದೆ. |
02:45 | ನಿಮಗೆ ತೋರಿಸಲು, ನಾನು main ECG ಟ್ಯಾಬ್ ಅನ್ನು ಆಯ್ಕೆಮಾಡಿ ಅದನ್ನು ತೆರೆಯುವೆನು. |
02:51 | ಮೇನ್ ECG ಟ್ಯಾಬ್ ನ ಅಡಿಯಲ್ಲಿ, ಈ 4 ಫೀಲ್ಡ್ ಗಳು:
Patient Name, Age, Gender ಮತ್ತು , Admission ಇವುಗಳು ಕಡ್ಡಾಯವಾಗಿವೆ. |
03:01 | ಇವುಗಳನ್ನು ಕೆಂಪು ಆಸ್ಟೆರಿಸ್ಕ್ ನೊಂದಿಗೆ ತೋರಿಸಲಾಗಿದೆ. |
03:05 | ನಾವು ಯಾವುದೋ ಒಂದು ರೋಗಿಯ ಬಗ್ಗೆ ಈ ಕೆಳಗಿನ ಡೇಟಾಅನ್ನು ನಮೂದಿಸೋಣ.
Patient Name: Ramesh Age: 53 Gender: Male |
03:15 | ಆದರೆ, ಇದರಲ್ಲಿ ನಾವು Admission ಎಂಬ ಒಂದು ಫೀಲ್ಡ್ ಅನ್ನು ಹಾಗೆಯೇ ಬಿಡೋಣ. |
03:19 | ಪೇಜ್ ಅನ್ನು ಸೇವ್ ಮಾಡಿ ಮುಂದೆ ಹೋಗಲು, ಪೇಜ್ ನ ಕೆಳತುದಿಯಲ್ಲಿರುವ Take ECG ಬಟನ್ ಅನ್ನು ಆಯ್ಕೆಮಾಡಿ. |
03:26 | ಕೂಡಲೇ, “Select the Admission type” ಎಂದು ಹೇಳುವ ಒಂದು ಪಾಪ್-ಅಪ್ ಕಾಣಿಸಿಕೊಳ್ಳುತ್ತದೆ. |
03:32 | ನೀವು ನೋಡುತ್ತಿರುವಂತೆ, ಈ 4 ಫೀಲ್ಡ್ ಗಳಲ್ಲಿ ಯಾವುದೇ ಒಂದನ್ನು ಖಾಲಿ ಬಿಟ್ಟರೆ, ಪೇಜ್ ಅನ್ನು ಸೇವ್ ಮಾಡಲು ಸಾಧ್ಯವಿಲ್ಲ. |
03:39 | ಈಗ, ಬಿಟ್ಟಿರುವ ಮಾಹಿತಿಯನ್ನು ತುಂಬೋಣ.
Admission - Direct |
03:45 | ಪೇಜ್ ಅನ್ನು ಸೇವ್ ಮಾಡಲು, ಪೇಜ್ ನ ಕೆಳತುದಿಯಲ್ಲಿರುವ Take ECG ಬಟನ್ ಅನ್ನು ಆಯ್ಕೆಮಾಡಿ. |
03:51 | ಕೂಡಲೇ, ಪೇಜ್ ನ ಕೆಳತುದಿಯಲ್ಲಿ “Saved Successfully” ಎಂಬ ಮೆಸೇಜ್, ಕಾಣಿಸಿಕೊಳ್ಳುತ್ತದೆ. |
03:57 | ಹೀಗೆಯೇ, ಕೆಂಪು ಆಸ್ಟೆರಿಸ್ಕ್ ಅನ್ನು ಹೊಂದಿರುವ ಫೀಲ್ಡ್ ಗಳಲ್ಲಿ ನಾವು ಡೇಟಾಅನ್ನು ಕಡ್ಡಾಯವಾಗಿ ತುಂಬಬೇಕು. |
04:05 | ಸಂಕ್ಷಿಪ್ತವಾಗಿ, |
04:08 | ಈ ಟ್ಯುಟೋರಿಯಲ್ ನಲ್ಲಿ, ನಾವು-
ಟ್ಯಾಬ್ಲೆಟ್ ನ ಮೇಲೆ STEMI App ಅನ್ನು ತೆರೆಯುವುದು STEMI Homepage ಅನ್ನು ಅರ್ಥಮಾಡಿಕೊಳ್ಳುವುದು STEMI App ನ ಕಡ್ಡಾಯವಾದ ಫೀಲ್ಡ್ ಗಳಲ್ಲಿ ಡೇಟಾಅನ್ನು ನಮೂದಿಸುವುದು ಇವುಗಳನ್ನು ಕಲಿತಿದ್ದೇವೆ. |
04:20 | STEMI INDIA ಅನ್ನು ಮುಖ್ಯವಾಗಿ ಹೃದಯಾಘಾತದ ರೋಗಿಗಳಿಗೆ ಸೂಕ್ತ ಕಾಳಜಿಯನ್ನು ಪಡೆಯುವಲ್ಲಿ ಆಗುವ ವಿಳಂಬವನ್ನು ಕಡಿಮೆ ಮಾಡಲು ಮತ್ತು ಹೃದಯಾಘಾತದಿಂದಾಗುವ ಮರಣದ ಸಂಖ್ಯೆಯನ್ನು ಕಡಿಮೆ ಮಾಡಲು ‘not for profit’ ಸಂಸ್ಥೆ ಎಂದು ಸ್ಥಾಪಿಸಲಾಯಿತು. |
04:34 | “ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್, IIT ಬಾಂಬೆ” ಇದು NMEICT, MHRD, ಭಾರತ ಸರ್ಕಾರದ ಅನುದಾನವನ್ನು ಪಡೆದಿದೆ.
ಹೆಚ್ಚಿನ ಮಾಹಿತಿಗಾಗಿ ದಯವಿಟ್ಟು ಈ ಕೆಳಗಿನ ಲಿಂಕ್ ಅನ್ನು ಸಂಪರ್ಕಿಸಿ. http://spoken-tutorial.org |
04:47 | ಈ ಟ್ಯುಟೋರಿಯಲ್, STEMI INDIA ಮತ್ತು Spoken Tutorial Project, IIT Bombay ಇವರ ಕೊಡುಗೆಯಾಗಿದೆ.
ಈ ಸ್ಕ್ರಿಪ್ಟ್ ನ ಅನುವಾದಕಿ ಐ ಐ ಟಿ ಬಾಂಬೆ ಯಿಂದ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕ ----------- . ವಂದನೆಗಳು. |