STEMI-2017/C2/STEMI-App-and-its-mandatory-fields/Kannada

From Script | Spoken-Tutorial
Jump to: navigation, search
Time
NARRATION
00:01 ನಮಸ್ಕಾರ. STEMI App and its mandatory fields ಎಂಬ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ.
00:08 ಈ ಟ್ಯುಟೋರಿಯಲ್ ನಲ್ಲಿ ನಾವು- *ಟ್ಯಾಬ್ಲೆಟ್ ನ ಮೇಲೆ STEMI App ಅನ್ನು ತೆರೆಯುವುದು
00:15 STEMI Homepage ಅನ್ನು ಅರ್ಥಮಾಡಿಕೊಳ್ಳುವುದು
00:17 STEMI App ನ ಕಡ್ಡಾಯವಾದ ಫೀಲ್ಡ್ ಗಳಲ್ಲಿ ಡೇಟಾಅನ್ನು ನಮೂದಿಸುವುದು, ಇವುಗಳನ್ನು ಕಲಿಯುವೆವು.
00:23 ಈ ಟ್ಯುಟೋರಿಯಲ್ ಅನ್ನು ಅಭ್ಯಾಸ ಮಾಡಲು, ನಿಮಗೆ -

STEMI App ಅನ್ನು ಇನ್ಸ್ಟಾಲ್ ಮಾಡಿರುವ Android tablet (ಆಂಡ್ರೈಡ್ ಟ್ಯಾಬ್ಲೆಟ್) ಹಾಗೂ ಸಕ್ರಿಯವಿರುವ ಇಂಟರ್ನೆಟ್ ಸಂಪರ್ಕ ಇವುಗಳ ಅವಶ್ಯಕತೆಯಿದೆ.

00:36 STEMI App, STEMI ಲೋಗೊಅನ್ನು ಹೊಂದಿರುವ ಒಂದು ಕೆಂಪು ಆಯತದಂತೆ ಕಾಣುತ್ತದೆ.
00:42 STEMI App ಅನ್ನು ಆಯ್ಕೆಮಾಡುವ ಮೊದಲು, ಟ್ಯಾಬ್ಲೆಟ್ ಇಂಟರ್ನೆಟ್ ನ ಸಂಪರ್ಕವನ್ನು ಹೊಂದಿರುವುದನ್ನು ಖಚಿತಪಡಿಸಿಕೊಳ್ಳಿ.
00:50 ಇಲ್ಲದಿದ್ದರೆ, ನಿಮ್ಮ ಇಂಟರ್ನೆಟ್ ನ ಸಂಪರ್ಕವನ್ನು ಪರೀಕ್ಷಿಸಲು ಸೂಚಿಸುತ್ತಿರುವ ಒಂದು ಪಾಪ್-ಅಪ್ ಕಾಣಿಸಿಕೊಳ್ಳುತ್ತದೆ.
00:56 ಡಿವೈಸ್ ಅನ್ನು ಇಂಟರ್ನೆಟ್ ಗೆ ಜೋಡಿಸಿದ ನಂತರ STEMI App ಅನ್ನು ಆಯ್ಕೆಮಾಡಿ.
01:01 STEMI ಹೋಮ್-ಪೇಜ್ ಕಾಣಿಸಿಕೊಳ್ಳುತ್ತದೆ.
01:04 ಇದು stemiAuser ಎಂದು ಹೇಳುತ್ತಿರುವುದನ್ನು ಇಲ್ಲಿ ಗಮನಿಸಿ, ಏಕೆಂದರೆ ನಾನು A Hospital ಯೂಸರ್ ಆಗಿದ್ದೇನೆ.
01:12 ನೀವು ಬೇರೊಂದು ಆಸ್ಪತ್ರೆಯ ಯೂಸರ್ ಆಗಿದ್ದರೆ, ಉದಾ: B Hospital, ಆಗ ಇಲ್ಲಿ stemiBuser ಕಾಣಿಸಿಕೊಳ್ಳುತ್ತದೆ.
01:22 ಹೀಗೆಯೇ, C Hospital ಮತ್ತು D Hospital ಗಳಿಗಾಗಿ ಕ್ರಮವಾಗಿ stemiCuser ಅಥವಾ stemiDuser ಎಂದು ಕಾಣಿಸಿಕೊಳ್ಳುತ್ತದೆ.
01:33 ಮತ್ತು ಒಂದುವೇಳೆ, STEMI App ಅನ್ನು EMRI Ambulance ನಿಂದ ಆಕ್ಸೆಸ್ ಮಾಡಿದರೆ (ಪಡೆದರೆ), ಆಗ stemiEuser ಕಾಣಿಸಿಕೊಳ್ಳುತ್ತದೆ.
01:42 ಈ ಎಲ್ಲ ಸಂದರ್ಭಗಳಲ್ಲಿ, ನಾವು STEMI ಹೋಮ್-ಪೇಜ್ ನಲ್ಲಿ ಇರುತ್ತೇವೆ. ಈಗ ನಾವು ಸಿದ್ಧರಾಗಿದ್ದೇವೆ.
01:49 STEMI ಹೋಮ್-ಪೇಜ್, ಪೇಜ್ ನ ಮಧ್ಯದಲ್ಲಿ 3 ಟ್ಯಾಬ್ ಗಳನ್ನು ಹೊಂದಿದೆ.
01:54 New Patient ಟ್ಯಾಬ್ – ರೋಗಿಯ ಬಗ್ಗೆ ಪೂರ್ಣ ಮಾಹಿತಿಯನ್ನು ನಮೂದಿಸಲು,
01:59 Search ಟ್ಯಾಬ್ – ಈಗಾಗಲೇ ಸೇವ್ ಮಾಡಲಾದ ರೋಗಿಯ ವಿವರಗಳನ್ನು ಹುಡುಕಲು ಮತ್ತು ಆಯ್ಕೆಮಾಡಲು ಸಹಾಯಮಾಡುತ್ತದೆ.
02:05 ECG ಟ್ಯಾಬ್ – ಅತ್ಯಂತ ಕಡಿಮೆ ಡೇಟಾ ನಮೂದಿಸಿ, ಶೀಘ್ರವಾಗಿ ECG ತೆಗೆದುಕೊಳ್ಳಲು ಸಹಾಯಮಾಡುತ್ತದೆ.
02:12 ಪೇಜ್ ನ ಮೇಲ್ತುದಿಯ ಎಡಭಾಗದಲ್ಲಿ ಒಂದು ಮೆನ್ಯು ಟ್ಯಾಬ್ ಸಹ ಇರುತ್ತದೆ. ಇದನ್ನು ಬಳಸುವ ರೀತಿಯನ್ನು ಮುಂದಿನ ಟ್ಯುಟೋರಿಯಲ್ ಗಳಲ್ಲಿ ನಾವು ನೋಡುವೆವು.
02:21 ಈಗ ನಾವು ಕಡ್ಡಾಯವಾದ ಫೀಲ್ಡ್ ಗಳೆಂದರೇನು ಅದನ್ನುತಿಳಿದುಕೊಳ್ಳೋಣ.
02:26 ಒಂದು ಚಿಕ್ಕ ಕೆಂಪು ಆಸ್ಟೆರಿಸ್ಕ್ ನೊಂದಿಗೆ ತೋರಿಸಲಾದ ಫೀಲ್ಡ್ ಗಳನ್ನು ಕಡ್ಡಾಯವಾದ ಫೀಲ್ಡ್ ಗಳೆಂದು ಕರೆಯಲಾಗುತ್ತದೆ.
02:34 ಈ ಫೀಲ್ಡ್ ಗಳಲ್ಲಿ ಡೇಟಾಅನ್ನು ನಮೂದಿಸುವುದು ಕಡ್ಡಾಯವಾಗಿದೆ.
02:38 ಒಂದು ನಿರ್ದಿಷ್ಟ ಪೇಜ್ ಅನ್ನು ಸೇವ್ ಮಾಡಲು ಮತ್ತು ಮುಂದಿನ ಪೇಜ್ ಗೆ ಹೋಗಲು ಈ ಡೇಟಾ ಅಗತ್ಯವಾಗಿದೆ.
02:45 ನಿಮಗೆ ತೋರಿಸಲು, ನಾನು main ECG ಟ್ಯಾಬ್ ಅನ್ನು ಆಯ್ಕೆಮಾಡಿ ಅದನ್ನು ತೆರೆಯುವೆನು.
02:51 ಮೇನ್ ECG ಟ್ಯಾಬ್ ನ ಅಡಿಯಲ್ಲಿ, ಈ 4 ಫೀಲ್ಡ್ ಗಳು:

Patient Name, Age, Gender ಮತ್ತು , Admission ಇವುಗಳು ಕಡ್ಡಾಯವಾಗಿವೆ.

03:01 ಇವುಗಳನ್ನು ಕೆಂಪು ಆಸ್ಟೆರಿಸ್ಕ್ ನೊಂದಿಗೆ ತೋರಿಸಲಾಗಿದೆ.
03:05 ನಾವು ಯಾವುದೋ ಒಂದು ರೋಗಿಯ ಬಗ್ಗೆ ಈ ಕೆಳಗಿನ ಡೇಟಾಅನ್ನು ನಮೂದಿಸೋಣ.

Patient Name: Ramesh Age: 53 Gender: Male

03:15 ಆದರೆ, ಇದರಲ್ಲಿ ನಾವು Admission ಎಂಬ ಒಂದು ಫೀಲ್ಡ್ ಅನ್ನು ಹಾಗೆಯೇ ಬಿಡೋಣ.
03:19 ಪೇಜ್ ಅನ್ನು ಸೇವ್ ಮಾಡಿ ಮುಂದೆ ಹೋಗಲು, ಪೇಜ್ ನ ಕೆಳತುದಿಯಲ್ಲಿರುವ Take ECG ಬಟನ್ ಅನ್ನು ಆಯ್ಕೆಮಾಡಿ.
03:26 ಕೂಡಲೇ, “Select the Admission type” ಎಂದು ಹೇಳುವ ಒಂದು ಪಾಪ್-ಅಪ್ ಕಾಣಿಸಿಕೊಳ್ಳುತ್ತದೆ.
03:32 ನೀವು ನೋಡುತ್ತಿರುವಂತೆ, ಈ 4 ಫೀಲ್ಡ್ ಗಳಲ್ಲಿ ಯಾವುದೇ ಒಂದನ್ನು ಖಾಲಿ ಬಿಟ್ಟರೆ, ಪೇಜ್ ಅನ್ನು ಸೇವ್ ಮಾಡಲು ಸಾಧ್ಯವಿಲ್ಲ.
03:39 ಈಗ, ಬಿಟ್ಟಿರುವ ಮಾಹಿತಿಯನ್ನು ತುಂಬೋಣ.

Admission - Direct

03:45 ಪೇಜ್ ಅನ್ನು ಸೇವ್ ಮಾಡಲು, ಪೇಜ್ ನ ಕೆಳತುದಿಯಲ್ಲಿರುವ Take ECG ಬಟನ್ ಅನ್ನು ಆಯ್ಕೆಮಾಡಿ.
03:51 ಕೂಡಲೇ, ಪೇಜ್ ನ ಕೆಳತುದಿಯಲ್ಲಿ “Saved Successfully” ಎಂಬ ಮೆಸೇಜ್, ಕಾಣಿಸಿಕೊಳ್ಳುತ್ತದೆ.
03:57 ಹೀಗೆಯೇ, ಕೆಂಪು ಆಸ್ಟೆರಿಸ್ಕ್ ಅನ್ನು ಹೊಂದಿರುವ ಫೀಲ್ಡ್ ಗಳಲ್ಲಿ ನಾವು ಡೇಟಾಅನ್ನು ಕಡ್ಡಾಯವಾಗಿ ತುಂಬಬೇಕು.
04:05 ಸಂಕ್ಷಿಪ್ತವಾಗಿ,
04:08 ಈ ಟ್ಯುಟೋರಿಯಲ್ ನಲ್ಲಿ, ನಾವು-

ಟ್ಯಾಬ್ಲೆಟ್ ನ ಮೇಲೆ STEMI App ಅನ್ನು ತೆರೆಯುವುದು STEMI Homepage ಅನ್ನು ಅರ್ಥಮಾಡಿಕೊಳ್ಳುವುದು STEMI App ನ ಕಡ್ಡಾಯವಾದ ಫೀಲ್ಡ್ ಗಳಲ್ಲಿ ಡೇಟಾಅನ್ನು ನಮೂದಿಸುವುದು ಇವುಗಳನ್ನು ಕಲಿತಿದ್ದೇವೆ.

04:20 STEMI INDIA ಅನ್ನು ಮುಖ್ಯವಾಗಿ ಹೃದಯಾಘಾತದ ರೋಗಿಗಳಿಗೆ ಸೂಕ್ತ ಕಾಳಜಿಯನ್ನು ಪಡೆಯುವಲ್ಲಿ ಆಗುವ ವಿಳಂಬವನ್ನು ಕಡಿಮೆ ಮಾಡಲು ಮತ್ತು ಹೃದಯಾಘಾತದಿಂದಾಗುವ ಮರಣದ ಸಂಖ್ಯೆಯನ್ನು ಕಡಿಮೆ ಮಾಡಲು ‘not for profit’ ಸಂಸ್ಥೆ ಎಂದು ಸ್ಥಾಪಿಸಲಾಯಿತು.
04:34 “ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್, IIT ಬಾಂಬೆ” ಇದು NMEICT, MHRD, ಭಾರತ ಸರ್ಕಾರದ ಅನುದಾನವನ್ನು ಪಡೆದಿದೆ.

ಹೆಚ್ಚಿನ ಮಾಹಿತಿಗಾಗಿ ದಯವಿಟ್ಟು ಈ ಕೆಳಗಿನ ಲಿಂಕ್ ಅನ್ನು ಸಂಪರ್ಕಿಸಿ. http://spoken-tutorial.org

04:47 ಈ ಟ್ಯುಟೋರಿಯಲ್, STEMI INDIA ಮತ್ತು Spoken Tutorial Project, IIT Bombay ಇವರ ಕೊಡುಗೆಯಾಗಿದೆ.

ಈ ಸ್ಕ್ರಿಪ್ಟ್ ನ ಅನುವಾದಕಿ ಐ ಐ ಟಿ ಬಾಂಬೆ ಯಿಂದ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕ ----------- . ವಂದನೆಗಳು.

Contributors and Content Editors

PoojaMoolya