STEMI-2017/C2/Introduction-to-Maestros-Device/Kannada

From Script | Spoken-Tutorial
Revision as of 16:38, 7 August 2020 by PoojaMoolya (Talk | contribs)

(diff) ← Older revision | Latest revision (diff) | Newer revision → (diff)
Jump to: navigation, search
TIME
NARRATION
00:01 ನಮಸ್ತೇ, Maestros STEMI kit ಬಗೆಗಿನ ಟ್ಯುಟೋರಿಯಲ್’ಗೆ ಸ್ವಾಗತ
00:07 ಈ ಟ್ಯುಟೋರಿಯಲ್’ನಲ್ಲಿ ನಾವು Maestros STEMI kit’ನ ವಿವಿಧ ಭಾಗಗಳ ಬಗ್ಗೆ ಮತ್ತು ಅವುಗಳ ಉದ್ದೇಶ ಮತ್ತು ಬಳಕೆಯ ಬಗ್ಗೆ ತಿಳಿಯಲಿದ್ದೇವೆ
00:16 ಈ ಟ್ಯುಟೋರಿಯಲ್ ಅನ್ನು ಅಭ್ಯಸಿಸಲು Maestros STEMI kit ಬೇಕಿದೆ.
00:22 ಹಾಸ್ಪಿಟಲ್ ಮಾದರಿಯು ಒಂದು ಲೋಹದ ಕವಚವುಳ್ಳ Android ಟ್ಯಾಬ್, NIBP, ECG ಮತ್ತು SpO2 ಅಳೆಯಬಲ್ಲ maestros ಯಂತ್ರ, wifi ಪ್ರಿಂಟರ್, ಟ್ರಾಲಿ ಮತ್ತು ವಿದ್ಯುತ್ ಸಂಪರ್ಕ ತಂತಿಯನ್ನು ಒಳಗೊಂಡಿದೆ
00:46 ಆಂಬುಲೆನ್ಸ್ ಮಾದರಿಯು ಒಂದು ಲೋಹದ ಕವಚವುಳ್ಳ Android ಟ್ಯಾಬ್, NIBP, ECG ಮತ್ತು SpO2 ಅಳೆಯಬಲ್ಲ maestros ಯಂತ್ರ ಮತ್ತು ವಿದ್ಯುತ್ ಸಂಪರ್ಕ ತಂತಿಯನ್ನು ಒಳಗೊಂಡಿದೆ
01:05 ಆಂಬುಲೆನ್ಸ್ ಮಾದರಿ wifi ಪ್ರಿಂಟರ್ ಮತ್ತು ಟ್ರಾಲಿ ಅನ್ನು ಒಳಗೊಂಡಿಲ್ಲ
01:13 ಆಂಬುಲೆನ್ಸ್ ಮಾದರಿಯಲ್ಲಿ ಟ್ಯಾಬ್’ನ ಲೋಹದ ಕವಚವು ಒಂದು clamp ಅನ್ನು ಹೊಂದಿದೆ
01:20 HP ಟ್ಯಾಬ್ಲೆಟ್ ವಿಷಯಭರ್ತಿ ಮಾಡುವ ಯಂತ್ರವಾಗಿದೆ. ಇದರ ಮೇಲ್ಭಾಗದಲ್ಲಿ ಒಂದು ‘ಪವರ್’ ಗುಂಡಿಯಿದ್ದು, 2 ಮೈಕ್ರೋ USB ಮತ್ತು HDMI ಸಂಪರ್ಕ ಮಾಡಲು ಪೋರ್ಟ್’ಗಳು ಕೆಳಭಾಗದಲ್ಲಿವೆ.
01:36 2 USB ಪೋರ್ಟ್’ಗಳಲ್ಲಿ ಬಲಭಾಗದ ಪೋರ್ಟ್ ಶಕ್ತಿ-ಮರುಪೂರಣಕ್ಕೆ (charging) ಉಪಯೋಗಿಸಲ್ಪಡುತ್ತದೆ.
01:44 Android ಟ್ಯಾಬ್ ಅನ್ನು ಮೈಕ್ರೋ USB ಚಾರ್ಜರ್ ಮೂಲಕ ಅಥವಾ maestro ಯಂತ್ರದಲ್ಲಿ ತೂಗುಹಾಕಲಾಗಿರುವ USB ತಂತಿಯಿಂದ ಚಾರ್ಜ್ ಮಾಡಬಹುದಾಗಿದೆ
01:58 ಈ ತಂತಿಯನ್ನು ಉಪಯೋಗಿಸಿದರೆ maestros ಯಂತ್ರದಿಂದಲೇ ವಿದ್ಯುತ್ ಸರಬರಾಜು ಆಗುತ್ತದೆ
02:06 ಟ್ಯಾಬ್ ಅನ್ನು ವಿದ್ಯುತ್ ಸಂಪರ್ಕದ ಮುಖಾಂತರವೇ ಚಾರ್ಜ್ ಮಾಡುವ ಅನಿವಾರ್ಯತೆ ಇರಬಾರದೆಂದು ಈ ಸವಲತ್ತು ನೀಡಲಾಗಿದೆ
02:15 ಟ್ಯಾಬ್ ಚಾರ್ಜ್ ಆಗುತ್ತಿರುವಾಗ ಯಂತ್ರವನ್ನು ಎಲ್ಲೆಡೆ ಹೊತ್ತೊಯ್ಯಬಹುದಾಗಿದೆ
02:21 ಒಂದು ಲೋಹದ ಕವಚದೊಂದಿಗೆ ಟ್ಯಾಬ್ ಅನ್ನು maestros ಯಂತ್ರಕ್ಕೆ ಸೇರಿಸಲಾಗಿದೆ
02:27 ಟ್ಯಾಬ್ ಮತ್ತು maestro ಯಂತ್ರವು ಬೇರೆಬೇರೆ ಯಂತ್ರಗಳಾಗಿವೆ.
02:32 ಆದರೆ ಲೋಹದ ಕವಚದೊಂದಿಗೆ ಅವೆರಡೂ ಒಂದೇ ಯಂತ್ರದಂತೆ ಕಾರ್ಯನಿರ್ವಹಿಸುತ್ತವೆ
02:39 maestros ಯಂತ್ರದಲ್ಲಿ 5 ಪೋರ್ಟ್’ಗಳಿವೆ

1. ಚಾರ್ಜ್ ಮಾಡಲು ಪೋರ್ಟ್. 2. ECG ಪೋರ್ಟ್ 3. BP ಪೋರ್ಟ್ 4. SpO2 ಪೋರ್ಟ್ ಮತ್ತು 5. ಟೆಂಪ್

02:51 ಎಡಬದಿಯಲ್ಲಿ ಪವರ್ ಗುಂಡಿ ಮತ್ತು ಚಾರ್ಜ್ ಮಾಡುವ ಪೋರ್ಟ್ ಇವೆ
02:57 ಬಲಬದಿಯಲ್ಲಿ ECG, BP ಮತ್ತು SpO2 ಪೋರ್ಟ್’ಗಳಿವೆ
03:04 maestros ಯಂತ್ರದ ಎಡಬದಿಯಲ್ಲಿ ಎರಡು ಹಸಿರು-ಹಳದಿ ಬಣ್ಣದ LED ದೀಪಗಳಿವೆ. ಒಂದು maestros ಯಂತ್ರವು ಚಾಲಿತವಾದಾಗ ಬೆಳಗಿದರೆ, ಇನ್ನೊಂದು ಯಂತ್ರವು ಚಾರ್ಜ್ ಆಗುತ್ತಿರುವಾಗ ಬೆಳಗುತ್ತದೆ
03:23 ಈಗ ನಾವು ಆಕ್ರಮಣಶೀಲವಲ್ಲದ ರಕ್ತದೊತ್ತಡ ಘಟಕವನ್ನು (NIBP) ನೋಡೋಣ
03:32 BP ಪಟ್ಟಿಯು ಎರಡು ಭಾಗಗಳನ್ನು ಒಳಗೊಂಡಿದೆ. BP ಪಟ್ಟಿಯ ತಂತಿ ಮತ್ತು ವಿಸ್ತರಣಾ ತಂತಿ
03:39 ಮೊದಲಿಗೆ BP ಪಟ್ಟಿಯ ತಂತಿಯನ್ನು ವಿಸ್ತರಣಾ ತಂತಿಗೆ ಸೇರಿಸಿ
03:46 ವಿಸ್ತರಣಾ ತಂತಿಯ ಇನ್ನೊಂದು ತುದಿಯನ್ನಿ BP ಪೋರ್ಟ್’ಗೆ ಸೇರಿಸಿ
03:52 ಮೊದಲು ಹೇಳಿದಂತೆ, ಇದು maestros ಯಂತ್ರದ ಕೆಲ ಎಡ ಭಾಗದಲ್ಲಿದೆ
04:00 ನಾವೀಗ BP ಅಳೆಯಲು ಸಿದ್ಧರಿದ್ದೇವೆ
04:05 ಮುಂದೆ ನಾವು SpO2 ಘಟಕವನ್ನು ನೋಡೋಣ

SpO2 ತಂತಿಯಲ್ಲಿ ಎರಡು ಭಾಗ, SpO2 ಪ್ರೋಬ್ ಮತ್ತು ವಿಸ್ತರಣಾ ತಂತಿ

04:18 ವಿಸ್ತರಣಾ ತಂತಿಯನ್ನು SpO2 ಪ್ರೋಬ್’ಗೆ ಸೇರಿಸಿ, ಚಿತ್ರದಲ್ಲಿ ತೋರಿಸಿದಂತೆ
04:24 ಪಾರದರ್ಶಕ ಹೊದಿಕೆಯನ್ನು ಸರಿಯಾಗಿ ಸರಿಸಿ ಸಂಪರ್ಕ ತಂತಿಗಳನ್ನು ಭದ್ರವಾಗಿಸಿ
04:31 ವಿಸ್ತರಣಾ ತಂತಿಯ ಇನ್ನೊಂದು ತುದಿಯನ್ನು maestros ಯಂತ್ರಕ್ಕೆ ಜೋಡಿಸಿ
04:38 maestros ಯಂತ್ರದ ಎಡ ಮೇಲ್ಬದಿಯಲ್ಲಿರುವ ಪೋರ್ಟ್’ಗೆ ಜೋಡಿಸಿ
04:45 ಈಗ, ನಾವು SpO2 ಅಳೆಯಲು ಸಿದ್ಧರಿದ್ದೇವೆ
04:50 ಮುಂದೆ ನಾವು ECG ಘಟಕವನ್ನು ನೋಡೋಣ.

ECG ತಂತಿಯನ್ನು maestros ಯಂತ್ರದ ಎಡ ಮೇಲ್ಭಾಗದ ECG ಪೋರ್ಟ್’ಗೆ ತೋರಿಸಿದಂತೆ ಜೋಡಿಸಿ

05:04 ಎರಡೂ ಬದಿಗಳ ಸ್ಕ್ರೂಗಳನ್ನೂ ಬಿಗಿಯಾಗಿ ತಿರುಗಿಸುವ ಮೂಲಕ ಸಂಪರ್ಕವನ್ನು ಬಿಗಿಯಾಗಿಸಿ.
05:11 ನಾವೀಗ ECG ಅಳೆಯಲು ಸಿದ್ಧರಿದ್ದೇವೆ
05:15 ಸಾರಾಂಶ ತಿಳಿಯೋಣ
05:16 ಈ ಟ್ಯುಟೋರಿಯಲ್’ನಲ್ಲಿ ನಾವು maestros STEMI kit’ನ ವಿವಿಧ ಘಟಕಗಳ ಬಗ್ಗೆ ಹಾಗೂ ಅವುಗಳ ಸಂಪರ್ಕದ ಬಗ್ಗೆ ತಿಳಿದೆವು.
05:29 STEMI ಇಂಡಿಯಾ

ಒಂದು ಸೇವಾಸಂಸ್ಥೆಯಾಗಿದ್ದು ಹೃದಯಾಘಾತಕ್ಕೊಳಗಾದ ರೋಗಿಗಳ ವಿಶೇಷ ಕಾಳಜಿಯನ್ನು ವಹಿಸುವ ವಿಷಯದಲ್ಲಿ ವಿಳಂಬವಾಗದಂತೆ ಹಾಗೂ ಇದರಿಂದ ಸಾವು ಸಂಭವಿಸುವುದು ಕಡಿಮೆಯಾಗುವ ಬಗ್ಗೆ ಕಾರ್ಯ ನಿರ್ವಹಿಸುತ್ತದೆ

05:44 ಸ್ಪೋಕನ್ ಟ್ಯುಟೋರಿಯಲ್ ಯೋಜನೆ, IIT ಬಾಂಬೆ NMEICT, MHRD, ಭಾರತ ಸರ್ಕಾರ ಇದರಿಂದ ಅನುದಾನಿತವಾಗಿದೆ. ವಿವರಗಳಿಗೆ http://spoken-tutorial.org ನೋಡಿರಿ
06:00 ಈ ಟ್ಯುಟೋರಿಯಲ್ STEMI ಇಂಡಿಯಾ ಮತ್ತು ಸ್ಪೋಕನ್ ಟ್ಯುಟೋರಿಯಲ್ ಇವುಗಳ ಸಹಯೋಗದಲ್ಲಿ ಮೂಡಿಬಂದಿದೆ.

ನಾನು ರಾಕೇಶ್ ವಿರಮಿಸುತ್ತೇನೆ. ಧನ್ಯವಾದ

Contributors and Content Editors

PoojaMoolya