STEMI-2017/C2/Introduction-to-Maestros-Device/Kannada
From Script | Spoken-Tutorial
|
|
00:01 | ನಮಸ್ತೇ, Maestros STEMI kit ಬಗೆಗಿನ ಟ್ಯುಟೋರಿಯಲ್’ಗೆ ಸ್ವಾಗತ |
00:07 | ಈ ಟ್ಯುಟೋರಿಯಲ್’ನಲ್ಲಿ ನಾವು Maestros STEMI kit’ನ ವಿವಿಧ ಭಾಗಗಳ ಬಗ್ಗೆ ಮತ್ತು ಅವುಗಳ ಉದ್ದೇಶ ಮತ್ತು ಬಳಕೆಯ ಬಗ್ಗೆ ತಿಳಿಯಲಿದ್ದೇವೆ |
00:16 | ಈ ಟ್ಯುಟೋರಿಯಲ್ ಅನ್ನು ಅಭ್ಯಸಿಸಲು Maestros STEMI kit ಬೇಕಿದೆ. |
00:22 | ಹಾಸ್ಪಿಟಲ್ ಮಾದರಿಯು ಒಂದು ಲೋಹದ ಕವಚವುಳ್ಳ Android ಟ್ಯಾಬ್, NIBP, ECG ಮತ್ತು SpO2 ಅಳೆಯಬಲ್ಲ maestros ಯಂತ್ರ, wifi ಪ್ರಿಂಟರ್, ಟ್ರಾಲಿ ಮತ್ತು ವಿದ್ಯುತ್ ಸಂಪರ್ಕ ತಂತಿಯನ್ನು ಒಳಗೊಂಡಿದೆ |
00:46 | ಆಂಬುಲೆನ್ಸ್ ಮಾದರಿಯು ಒಂದು ಲೋಹದ ಕವಚವುಳ್ಳ Android ಟ್ಯಾಬ್, NIBP, ECG ಮತ್ತು SpO2 ಅಳೆಯಬಲ್ಲ maestros ಯಂತ್ರ ಮತ್ತು ವಿದ್ಯುತ್ ಸಂಪರ್ಕ ತಂತಿಯನ್ನು ಒಳಗೊಂಡಿದೆ |
01:05 | ಆಂಬುಲೆನ್ಸ್ ಮಾದರಿ wifi ಪ್ರಿಂಟರ್ ಮತ್ತು ಟ್ರಾಲಿ ಅನ್ನು ಒಳಗೊಂಡಿಲ್ಲ |
01:13 | ಆಂಬುಲೆನ್ಸ್ ಮಾದರಿಯಲ್ಲಿ ಟ್ಯಾಬ್’ನ ಲೋಹದ ಕವಚವು ಒಂದು clamp ಅನ್ನು ಹೊಂದಿದೆ |
01:20 | HP ಟ್ಯಾಬ್ಲೆಟ್ ವಿಷಯಭರ್ತಿ ಮಾಡುವ ಯಂತ್ರವಾಗಿದೆ. ಇದರ ಮೇಲ್ಭಾಗದಲ್ಲಿ ಒಂದು ‘ಪವರ್’ ಗುಂಡಿಯಿದ್ದು, 2 ಮೈಕ್ರೋ USB ಮತ್ತು HDMI ಸಂಪರ್ಕ ಮಾಡಲು ಪೋರ್ಟ್’ಗಳು ಕೆಳಭಾಗದಲ್ಲಿವೆ. |
01:36 | 2 USB ಪೋರ್ಟ್’ಗಳಲ್ಲಿ ಬಲಭಾಗದ ಪೋರ್ಟ್ ಶಕ್ತಿ-ಮರುಪೂರಣಕ್ಕೆ (charging) ಉಪಯೋಗಿಸಲ್ಪಡುತ್ತದೆ. |
01:44 | Android ಟ್ಯಾಬ್ ಅನ್ನು ಮೈಕ್ರೋ USB ಚಾರ್ಜರ್ ಮೂಲಕ ಅಥವಾ maestro ಯಂತ್ರದಲ್ಲಿ ತೂಗುಹಾಕಲಾಗಿರುವ USB ತಂತಿಯಿಂದ ಚಾರ್ಜ್ ಮಾಡಬಹುದಾಗಿದೆ |
01:58 | ಈ ತಂತಿಯನ್ನು ಉಪಯೋಗಿಸಿದರೆ maestros ಯಂತ್ರದಿಂದಲೇ ವಿದ್ಯುತ್ ಸರಬರಾಜು ಆಗುತ್ತದೆ |
02:06 | ಟ್ಯಾಬ್ ಅನ್ನು ವಿದ್ಯುತ್ ಸಂಪರ್ಕದ ಮುಖಾಂತರವೇ ಚಾರ್ಜ್ ಮಾಡುವ ಅನಿವಾರ್ಯತೆ ಇರಬಾರದೆಂದು ಈ ಸವಲತ್ತು ನೀಡಲಾಗಿದೆ |
02:15 | ಟ್ಯಾಬ್ ಚಾರ್ಜ್ ಆಗುತ್ತಿರುವಾಗ ಯಂತ್ರವನ್ನು ಎಲ್ಲೆಡೆ ಹೊತ್ತೊಯ್ಯಬಹುದಾಗಿದೆ |
02:21 | ಒಂದು ಲೋಹದ ಕವಚದೊಂದಿಗೆ ಟ್ಯಾಬ್ ಅನ್ನು maestros ಯಂತ್ರಕ್ಕೆ ಸೇರಿಸಲಾಗಿದೆ |
02:27 | ಟ್ಯಾಬ್ ಮತ್ತು maestro ಯಂತ್ರವು ಬೇರೆಬೇರೆ ಯಂತ್ರಗಳಾಗಿವೆ. |
02:32 | ಆದರೆ ಲೋಹದ ಕವಚದೊಂದಿಗೆ ಅವೆರಡೂ ಒಂದೇ ಯಂತ್ರದಂತೆ ಕಾರ್ಯನಿರ್ವಹಿಸುತ್ತವೆ |
02:39 | maestros ಯಂತ್ರದಲ್ಲಿ 5 ಪೋರ್ಟ್’ಗಳಿವೆ
1. ಚಾರ್ಜ್ ಮಾಡಲು ಪೋರ್ಟ್. 2. ECG ಪೋರ್ಟ್ 3. BP ಪೋರ್ಟ್ 4. SpO2 ಪೋರ್ಟ್ ಮತ್ತು 5. ಟೆಂಪ್ |
02:51 | ಎಡಬದಿಯಲ್ಲಿ ಪವರ್ ಗುಂಡಿ ಮತ್ತು ಚಾರ್ಜ್ ಮಾಡುವ ಪೋರ್ಟ್ ಇವೆ |
02:57 | ಬಲಬದಿಯಲ್ಲಿ ECG, BP ಮತ್ತು SpO2 ಪೋರ್ಟ್’ಗಳಿವೆ |
03:04 | maestros ಯಂತ್ರದ ಎಡಬದಿಯಲ್ಲಿ ಎರಡು ಹಸಿರು-ಹಳದಿ ಬಣ್ಣದ LED ದೀಪಗಳಿವೆ. ಒಂದು maestros ಯಂತ್ರವು ಚಾಲಿತವಾದಾಗ ಬೆಳಗಿದರೆ, ಇನ್ನೊಂದು ಯಂತ್ರವು ಚಾರ್ಜ್ ಆಗುತ್ತಿರುವಾಗ ಬೆಳಗುತ್ತದೆ |
03:23 | ಈಗ ನಾವು ಆಕ್ರಮಣಶೀಲವಲ್ಲದ ರಕ್ತದೊತ್ತಡ ಘಟಕವನ್ನು (NIBP) ನೋಡೋಣ |
03:32 | BP ಪಟ್ಟಿಯು ಎರಡು ಭಾಗಗಳನ್ನು ಒಳಗೊಂಡಿದೆ. BP ಪಟ್ಟಿಯ ತಂತಿ ಮತ್ತು ವಿಸ್ತರಣಾ ತಂತಿ |
03:39 | ಮೊದಲಿಗೆ BP ಪಟ್ಟಿಯ ತಂತಿಯನ್ನು ವಿಸ್ತರಣಾ ತಂತಿಗೆ ಸೇರಿಸಿ |
03:46 | ವಿಸ್ತರಣಾ ತಂತಿಯ ಇನ್ನೊಂದು ತುದಿಯನ್ನಿ BP ಪೋರ್ಟ್’ಗೆ ಸೇರಿಸಿ |
03:52 | ಮೊದಲು ಹೇಳಿದಂತೆ, ಇದು maestros ಯಂತ್ರದ ಕೆಲ ಎಡ ಭಾಗದಲ್ಲಿದೆ |
04:00 | ನಾವೀಗ BP ಅಳೆಯಲು ಸಿದ್ಧರಿದ್ದೇವೆ |
04:05 | ಮುಂದೆ ನಾವು SpO2 ಘಟಕವನ್ನು ನೋಡೋಣ
SpO2 ತಂತಿಯಲ್ಲಿ ಎರಡು ಭಾಗ, SpO2 ಪ್ರೋಬ್ ಮತ್ತು ವಿಸ್ತರಣಾ ತಂತಿ |
04:18 | ವಿಸ್ತರಣಾ ತಂತಿಯನ್ನು SpO2 ಪ್ರೋಬ್’ಗೆ ಸೇರಿಸಿ, ಚಿತ್ರದಲ್ಲಿ ತೋರಿಸಿದಂತೆ |
04:24 | ಪಾರದರ್ಶಕ ಹೊದಿಕೆಯನ್ನು ಸರಿಯಾಗಿ ಸರಿಸಿ ಸಂಪರ್ಕ ತಂತಿಗಳನ್ನು ಭದ್ರವಾಗಿಸಿ |
04:31 | ವಿಸ್ತರಣಾ ತಂತಿಯ ಇನ್ನೊಂದು ತುದಿಯನ್ನು maestros ಯಂತ್ರಕ್ಕೆ ಜೋಡಿಸಿ |
04:38 | maestros ಯಂತ್ರದ ಎಡ ಮೇಲ್ಬದಿಯಲ್ಲಿರುವ ಪೋರ್ಟ್’ಗೆ ಜೋಡಿಸಿ |
04:45 | ಈಗ, ನಾವು SpO2 ಅಳೆಯಲು ಸಿದ್ಧರಿದ್ದೇವೆ |
04:50 | ಮುಂದೆ ನಾವು ECG ಘಟಕವನ್ನು ನೋಡೋಣ.
ECG ತಂತಿಯನ್ನು maestros ಯಂತ್ರದ ಎಡ ಮೇಲ್ಭಾಗದ ECG ಪೋರ್ಟ್’ಗೆ ತೋರಿಸಿದಂತೆ ಜೋಡಿಸಿ |
05:04 | ಎರಡೂ ಬದಿಗಳ ಸ್ಕ್ರೂಗಳನ್ನೂ ಬಿಗಿಯಾಗಿ ತಿರುಗಿಸುವ ಮೂಲಕ ಸಂಪರ್ಕವನ್ನು ಬಿಗಿಯಾಗಿಸಿ. |
05:11 | ನಾವೀಗ ECG ಅಳೆಯಲು ಸಿದ್ಧರಿದ್ದೇವೆ |
05:15 | ಸಾರಾಂಶ ತಿಳಿಯೋಣ |
05:16 | ಈ ಟ್ಯುಟೋರಿಯಲ್’ನಲ್ಲಿ ನಾವು maestros STEMI kit’ನ ವಿವಿಧ ಘಟಕಗಳ ಬಗ್ಗೆ ಹಾಗೂ ಅವುಗಳ ಸಂಪರ್ಕದ ಬಗ್ಗೆ ತಿಳಿದೆವು. |
05:29 | STEMI ಇಂಡಿಯಾ
ಒಂದು ಸೇವಾಸಂಸ್ಥೆಯಾಗಿದ್ದು ಹೃದಯಾಘಾತಕ್ಕೊಳಗಾದ ರೋಗಿಗಳ ವಿಶೇಷ ಕಾಳಜಿಯನ್ನು ವಹಿಸುವ ವಿಷಯದಲ್ಲಿ ವಿಳಂಬವಾಗದಂತೆ ಹಾಗೂ ಇದರಿಂದ ಸಾವು ಸಂಭವಿಸುವುದು ಕಡಿಮೆಯಾಗುವ ಬಗ್ಗೆ ಕಾರ್ಯ ನಿರ್ವಹಿಸುತ್ತದೆ |
05:44 | ಸ್ಪೋಕನ್ ಟ್ಯುಟೋರಿಯಲ್ ಯೋಜನೆ, IIT ಬಾಂಬೆ NMEICT, MHRD, ಭಾರತ ಸರ್ಕಾರ ಇದರಿಂದ ಅನುದಾನಿತವಾಗಿದೆ. ವಿವರಗಳಿಗೆ http://spoken-tutorial.org ನೋಡಿರಿ |
06:00 | ಈ ಟ್ಯುಟೋರಿಯಲ್ STEMI ಇಂಡಿಯಾ ಮತ್ತು ಸ್ಪೋಕನ್ ಟ್ಯುಟೋರಿಯಲ್ ಇವುಗಳ ಸಹಯೋಗದಲ್ಲಿ ಮೂಡಿಬಂದಿದೆ.
ನಾನು ರಾಕೇಶ್ ವಿರಮಿಸುತ್ತೇನೆ. ಧನ್ಯವಾದ |