PHP-and-MySQL/C4/Sending-Email-Part-2/Kannada

From Script | Spoken-Tutorial
Revision as of 17:59, 2 June 2020 by NaveenBhat (Talk | contribs)

(diff) ← Older revision | Latest revision (diff) | Newer revision → (diff)
Jump to: navigation, search
Time Narration
00:00 ನಾವು ಇಲ್ಲಿ ನಮ್ಮ HTML form ಅನ್ನು ರಚಿಸಿದ್ದೇವೆ. ನಮ್ಮ ಫಾರ್ಮ್ ಸಬ್ಮಿಟ್ ಆದಾಗ POST ವೇರಿಯೇಬಲ್ ನ ಮೂಲಕ ಡೇಟಾ ಪ್ರೊಸೆಸ್ ಆಗಿರುವುದನ್ನು ನೋಡಿದ್ದೇವೆ.
00:12 ಈಗ ಈ ಟ್ಯುಟೋರಿಯಲ್ ಗಾಗಿ, ನಾನು ಕೆಲವು ಕಂಡಿಷನ್ ಗಳನ್ನು ಪರೀಕ್ಷಿಸುವೆನು.
00:22 if string length ..
00:25 ಬೇಡ, ಮೊದಲಿಗೆ ನಾನು if $name and $message ಎಂದು ಟೈಪ್ ಮಾಡಿ ಇವುಗಳ ಇರುವಿಕೆಯನ್ನು ಪರೀಕ್ಷಿಸುವೆನು.
00:30 ಅಂದರೆ ಇದು ಮತ್ತು ಇದು ಅಸ್ತಿತ್ವದಲ್ಲಿ ಇವೆಯೇ ಎಂದು ನೋಡುವುದು. ಇವೆರಡೂ ಇದ್ದಾಗ ಮಾತ್ರ ಇದು True ಆಗಿರುತ್ತದೆ.
00:38 ಇಲ್ಲಿ ನಾವು "AND" (&&) ಆಪರೇಟರ್ ಅನ್ನು ಬಳಸಿದ್ದೇವೆ. ಇದು true ಆಗಿದೆಯೇ AND ಇದು true ಆಗಿದೆಯೇ ಎಂದು ನೋಡುತ್ತದೆ.
00:45 ಇದು TRUE ಆಗಿದ್ದರೆ, ನಾವು ಇಲ್ಲಿರುವ ಕೋಡ್ ಅನ್ನು ಎಕ್ಸಿಕ್ಯೂಟ್ ಮಾಡುವೆವು.
00:49 ಇಲ್ಲವಾದಲ್ಲಿ ಈ ಸ್ಕ್ರಿಪ್ಟ್ ಅನ್ನು ನಾನು kill ಮಾಡುವೆನು. ಮತ್ತು "You must enter a name and message" ಎಂದು ಹೇಳುತ್ತೇನೆ.
01:04 ಇಲ್ಲಿ underline ಕೊಡುತ್ತೇನೆ.
01:07 ಮತ್ತು ನಮ್ಮ ಕೋಡ್ ಬ್ಲಾಕ್ ನೊಳಗೆ, ಇದು TRUE ಆಗಿದ್ದರೆ ಇನ್ನೊಂದು ಪರೀಕ್ಷೆಯನ್ನು ಮಾಡುವೆವು.
01:14 ಇಲ್ಲಿ ಇವುಗಳ ಇರುವಿಕೆಯನ್ನು ನಾವು ಪರೀಕ್ಷೆ ಮಾಡಿದ್ದೇವೆ.
01:20 ಈಗ ಇಲ್ಲಿ ಇನ್ನೊಂದು ಪರೀಕ್ಷೆಯನ್ನು ರನ್ ಮಾಡಬೇಕು.
01:25 ಅದನ್ನು ಹೇಗೆ ಬರೆಯುವುದು? ನಾನು length ಅನ್ನು ಪರೀಕ್ಷೆ ಮಾಡುವೆನು. ಹಾಗಾಗಿ ಇದನ್ನು length check ಎಂದು ಕಾಮೆಂಟ್ ಮಾಡುವೆನು.
01:32 ಇಲ್ಲಿ ನಾನು string-length ಫಂಕ್ಷನ್ ಅನ್ನು ಬಳಸಿ, $name ಎನ್ನುತ್ತೇನೆ.
01:40 ಇಲ್ಲಿ ನಾವು if string-length of name is greater - no, lesser or equal to our max length which is '20'., ಇಲ್ಲಿ 20 ರ ಬದಲಾಗಿ ಯಾವುದೇ ಸಂಖ್ಯೆ ಇರಬಹುದು,
01:55 AND (&&) string-length of '$message' is lesser or equal to 300 characters ಇದೆಯೇ ಎಂದು ಎರಡು ಕಂಡಿಷನ್ ಗಳನ್ನು ಚೆಕ್ ಮಾಡುತ್ತೇವೆ. ಇಲ್ಲಿ ಕೂಡ ಯಾವುದೇ ಸಂಖ್ಯೆ ಇರಬಹುದು.
02:12 ನಂತರ ನಾವು ಈ ಕೋಡ್ ಬ್ಲಾಕ್ ಅನ್ನು ಎಕ್ಸಿಕ್ಯೂಟ್ ಮಾಡುವೆವು.
02:16 ಇಲ್ಲವಾದಲ್ಲಿ, "Max length for name is 20 and max length for message is 300" ಎಂದು ಹೇಳುವೆನು.
02:30 300 ಮತ್ತು 20, ಇವುಗಳನ್ನು ವೇರಿಯೇಬಲ್ ಗಳಲ್ಲಿ ಸ್ಟೋರ್ ಮಾಡುವುದು ಉತ್ತಮ.
02:36 ಅವುಗಳನ್ನು ಇಲ್ಲಿ ಸೆಟ್ ಮಾಡೋಣ. " "$namelen" equals 20" ಮತ್ತು " "$messagelen" equals to 300" ಎನ್ನೋಣ.
02:47 ಈಗ ಇವುಗಳನ್ನು ಇಲ್ಲಿ ಸೇರಿಸಿ. ಹಾಗಾಗಿ ಇಲ್ಲಿ $namelen ಎಂದು ಬದಲಿಸಿ.
02:55 ಮತ್ತು ಇಲ್ಲಿ ಕೂಡ $messagelen ಎಂದು ಬದಲಿಸಿ.
03:04 ಇಲ್ಲಿ ಕೆಳಗೆ ಕೂಡ ಇವೆರಡನ್ನು ಬದಲಾಯಿಸಿ. ನೀವು ಪರೀಕ್ಷೆಯನ್ನು ಮಾಡುತ್ತಿದ್ದರೆ, ಇದು ಕ್ರಿಯಾತ್ಮಕವಾಗಿ ಬದಲಾಗುತ್ತದೆ.
03:12 ಇಲ್ಲಿ "$messagelen" ಎಂದು ಬದಲಿಸಿ.
03:15 ಈಗ ಇದನ್ನು ಪರೀಕ್ಷಿಸೋಣ. "namelen" ಇದು ಗರಿಷ್ಠ 20 ಅಕ್ಷರಗಳನ್ನು ಹೊಂದಿದೆ. ಹಾಗಾಗಿ ನಾವು 20 ಅಕ್ಷರಗಳವರೆಗೆ ಮಾತ್ರ ನಮೂದಿಸಬಹುದು. ಇಲ್ಲಿ "Alex" ಎನ್ನೋಣ.
03:26 Message ನಲ್ಲಿ, ನಾನು 300 ಕ್ಕಿಂತ ಹೆಚ್ಚು ಅಕ್ಷರಗಳಿರುವ ಟೆಕ್ಸ್ಟ್ ಅನ್ನು ಕೊಡುವೆನು. ಇದನ್ನು ಕಾಪಿ ಮಾಡಿ, ಪೇಸ್ಟ್ ಮಾಡುವೆನು.
03:33 ಈಗ ಇದು 300 ಕ್ಕಿಂತ ಹೆಚ್ಚು ಅಕ್ಷರಗಳನ್ನು ಹೊಂದಿದೆ.
03:38 ನಾನು Send me this ಬಟನ್ ಅನ್ನು ಕ್ಲಿಕ್ ಮಾಡಿದರೆ, "The max length of the name is 20..." ಎಂಬ ಮೆಸೇಜ್ ಸಿಗುತ್ತದೆ. ಇದು ಇಲ್ಲಿ ಸೇರಿಸಿದ ವೇರಿಯೇಬಲ್ ಆಗಿದೆ.
03:49 ಇದರ ಗರಿಷ್ಟ ಉದ್ದ 300 ಅಕ್ಷರಗಳಾಗಿವೆ. ಇದು ಇಲ್ಲಿಂದ ಪಡೆದ ಇನ್ನೊಂದು ವೇರಿಯೇಬಲ್ ಆಗಿದೆ.
03:56 ನಾವು ಚೆಕ್ ಮಾಡಿ ಈ ವೇರಿಯೇಬಲ್ ಅನ್ನು ಎಕೋ ಮಾಡುತ್ತಿದ್ದೇವೆ.
04:02 ಈಗ ಎಲ್ಲವೂ ಸರಿಯಾಗಿದೆ ಎಂದು ಭಾವಿಸಿ ನಾವು ಬಳಕೆದಾರರಿಗೆ ಕಳುಹಿಸಿದ ಇ-ಮೇಲ್ ಅನ್ನು ಪಡೆಯುತ್ತೇವೆ.
04:07 ನಾನು ಮತ್ತೆ ಹೇಳುತ್ತಿದ್ದೇನೆ, ಇದು ಅಡ್ರೆಸ್ ಮತ್ತು ಈಗಾಗಲೇ ಇಲ್ಲಿ ಸಬ್ಜೆಕ್ಟ್ ಅನ್ನು ನಾವು ಪಡೆದಿದ್ದೇವೆ.
04:13 ಇವುಗಳನ್ನು ಕೆಳಗೆ ತರಬಹುದು; ಇ-ಮೇಲ್ ಕಳುಹಿಸಲು ಸಿದ್ಧವಾಗಿರದಿದ್ದಲ್ಲಿ ಈ ವೇರಿಯೇಬಲ್ ಗಳನ್ನು ಸೆಟ್ ಮಾಡುವ ಅವಶ್ಯಕತೆಯಿಲ್ಲ.
04:20 ಇದು ನಮ್ಮ 'setup variables' ಅಗಿದೆ.
04:32 ಇಲ್ಲಿ ನಾವು "from" ಅನ್ನು ಕೂಡ ಸೇರಿಸಬಹುದು. ಆದರೆ ಇದು ಇ-ಮೇಲ್ ಅಡ್ರೆಸ್ ಗೆ ಹಾಗೇ ಆಗುವುದು.
04:38 ನಮಗೆ ಈಗಾಗಲೇ "name" ಸಿಕ್ಕಿದೆ ಮತ್ತು ನಮಗೆ "message" ಮಾತ್ರ ಬೇಕಾಗಿದೆ. ಅದೂ ಕೂಡ ಇಲ್ಲಿದೆ.
04:46 ನಮಗೆ ಸ್ವಲ್ಪ header ಬಗ್ಗೆ ಸಹ ಮಾಹಿತಿ ಬೇಕಾಗಿದೆ. ನಾನು ಅದನ್ನು ಶೀಘ್ರದಲ್ಲಿಯೇ ತೋರಿಸುವೆನು. ಈಗ ನೇರವಾಗಿ "mail()" ಫಂಕ್ಷನ್ ಗೆ ಹೋಗೋಣ.
04:58 "mail()" ಫಂಕ್ಷನ್ ಹೀಗಿದೆ. mail, ನಂತರ ಮೊದಲ ವೇರಿಯೇಬಲ್, ನಾವು ಮೆಸೇಜ್ ಅನ್ನು ಕಳಿಸಬೇಕಾದ ವಿಳಾಸ. ಹಾಗಾಗಿ ನಾನು ಇಲ್ಲಿ $to ಎಂದು ಟೈಪ್ ಮಾಡುವೆನು.
05:11 ನಂತರ ಇ-ಮೇಲ್ ನ ವಿಷಯ. ಇಲ್ಲಿ ಅದು $subject ಆಗಿದೆ.
05:15 ಅದು ಇಲ್ಲಿದೆ. ನಂತರ ಇ-ಮೇಲ್ ನಲ್ಲಿರುವ ವಿಷಯ, ಇದು $body ಆಗಿದೆ.
05:20 ಇಲ್ಲಿ ನಾವು $body ಯನ್ನು ಹೀಗೆ ಬರೆಯೋಣ. "This is an email from $name". ನಾವು ಇ-ಮೇಲ್ ನ ಒಳಗೆ ಕೂಡ '$name' ಅನ್ನು ಸೇರಿಸುತ್ತಿದ್ದೇವೆ.
05:36 ನಂತರ backslash n (\n) ಎಂದರೆ new line ಅನ್ನು ಬಳಸಿ. ಇದು ಎರಡು ಹೊಸ ಸಾಲುಗಳಿಗಾಗಿ.
05:42 ನಂತರ ಇಲ್ಲಿ ಸೇರಿಸುವ '$message' ಅನ್ನು ನಾವು ಇಕೋ ಮಾಡಬೇಕು.
05:49 ನಮ್ಮ '$body' ಇಲ್ಲಿ ಸಾಮಾನ್ಯ ಮೆಸೇಜ್ ಅನ್ನು ಒಳಗೊಂಡಿದೆ. ಫಾರ್ಮ್ ನಲ್ಲಿ ನಮೂದಿಸಿದ ಬಳಕೆದಾರರ ಹೆಸರು, ನಂತರ ಎರಡು ಖಾಲಿ ಸಾಲುಗಳು. ಆನಂತರ, ಇಲ್ಲಿ ನಮ್ಮ ಫಾರ್ಮ್ ನಲ್ಲಿ ನಮೂದಿಸಿದ '$message' ಇದೆ. OK?
06:03 ಇವುಗಳನ್ನು ತೆಗೆದುಬಿಡೋಣ.
06:06 ಹೀಗೆ ಚೆನ್ನಾಗಿ ಕಾಣುತ್ತಿದೆ.
06:09 "mail()" ಫಂಕ್ಷನ್ ಹೇಗ ಕೆಲಸ ಮಾಡುತ್ತದೆ ಎಂದು ನೀವು ಯೋಚಿಸಬಹುದು. ಆದರೆ, ಪಿ.ಎಚ್.ಪಿ ಯಲ್ಲಿ ಇ-ಮೇಲ್ ಕಳುಹಿಸುವುದು ತುಂಬ ಸುಲಭ.
06:21 ಆದರೆ ನಾವು ಇ-ಮೇಲ್ ಅನ್ನು ಕಳುಹಿಸುವಾಗ, ಅಲ್ಲಿ ಕೆಲವು ಸಮಸ್ಯೆಗಳಿರುವುದನ್ನು ನೋಡಬಹುದು.
06:27 ನಮಗೆ ಇಲ್ಲಿ, "mail() function "send mail_from" not set in 'php dot ini' or custom "From:" header missing" ಎಂಬ ವಾರ್ನಿಂಗ್ ಸಿಕ್ಕಿದೆ.
06:36 "send mail from" ಅನ್ನು ನನ್ನ 'ini' ನಲ್ಲಿ ನಾನು ಸೆಟ್ ಮಾಡಿಲ್ಲ. ಅದನ್ನು ಬಿಟ್ಟುಬಿಟ್ಟಿದ್ದೇನೆ. ನಾನು ಸ್ವತಃ ಅದನ್ನು ಮಾಡುವೆನು.
06:44 ನಾವು ಅದನ್ನು ಮಾಡಿದ ನಂತರ, ಇನ್ನೊಂದು ಎರರ್ ಅನ್ನು ಪಡೆಯುವೆವು.
06:48 ಅದನ್ನು ಸರಿಪಡಿಸುವುದನ್ನು ವಿಡಿಯೋ ದ ಮುಂದಿನ ಭಾಗದಲ್ಲಿ ನಾನು ತೋರಿಸುವೆನು.
06:52 ನಂತರ ಸಿಗುವ ಉಳಿದ ಎರರ್ ಗಳ ಬಗ್ಗೆ ಮುಂದಿನ ಭಾಗದಲ್ಲಿ ನೋಡೋಣ.
06:56 ಈ ಸ್ಕ್ರಿಪ್ಟ್ ನ ಅನುವಾದಕಿ, ಅಂಜನಾ ಅನಂತ್ ನಾಗ್ ಮತ್ತು ಧ್ವನಿ ಡಾ. ನವೀನ್ ಭಟ್, ಉಪ್ಪಿನಪಟ್ಟಣ. ಧನ್ಯವಾದಗಳು.

Contributors and Content Editors

NaveenBhat, Sandhya.np14