COVID19/C2/Making-a-protective-face-cover-at-home/Kannada

From Script | Spoken-Tutorial
Revision as of 10:33, 8 May 2020 by Sandhya.np14 (Talk | contribs)

(diff) ← Older revision | Latest revision (diff) | Newer revision → (diff)
Jump to: navigation, search
Time
Narration
00:00 ಮನೆಯಲ್ಲಿ ರಕ್ಷಣಾ ಮುಖಕವಚವನ್ನು (protective face cover ಅಥವಾ ಮಾಸ್ಕ್) ತಯಾರಿಸುವ ಬಗ್ಗೆ ಇರುವ ಸ್ಪೋಕನ್ ಟ್ಯುಟೋರಿಯಲ್ ಗೆ ಸ್ವಾಗತ.
00:06 ಈ ಟ್ಯುಟೋರಿಯಲ್ ನಲ್ಲಿ ನಾವು,
00:10 ರಕ್ಷಣಾ ಮುಖಕವಚವನ್ನು (ಮಾಸ್ಕ್) ಹಾಕಿಕೊಳ್ಳುವ ಅವಶ್ಯಕತೆ,
00:14 ಆರೋಗ್ಯ ಕಾರ್ಯಕರ್ತರಿಗೆ ಮತ್ತು ಕೋವಿಡ್ -19 ರೋಗಿಗಳಿಗೆ ಮುಖ್ಯ ಸೂಚನೆಗಳು,
00:20 ರಕ್ಷಣಾ ಮುಖಕವಚಗಳ ಕುರಿತು ಸುರಕ್ಷತಾ ಮುನ್ನೆಚ್ಚರಿಕೆಗಳು,
00:25 ಹೊಲಿಗೆ ಯಂತ್ರ ಬಳಸಿ ಅಥವಾ ಹಾಗೆಯೆ ರಕ್ಷಣಾ ಮುಖಕವಚವನ್ನು ತಯಾರಿಸುವ ವಿಧಾನ,
00:32 ಮುಖಕವಚವನ್ನು ಧರಿಸುವ ಮೊದಲು ಮತ್ತು ತೆಗೆಯುವಾಗ ಪಾಲಿಸಬೇಕಾದ ಮುನ್ನೆಚ್ಚರಿಕೆಗಳು,
00:38 ಈ ಮುಖಕವಚವನ್ನು ಶುಚಿಗೊಳಿಸಿ ಇಟ್ಟುಕೊಳ್ಳುವ ಸರಿಯಾದ ವಿಧಾನ – ಇವುಗಳ ಬಗ್ಗೆ ಕಲಿಯುವೆವು.
00:44 ಮೊದಲಿಗೆ ನಾವು ರಕ್ಷಣಾ ಮುಖಕವಚವನ್ನು ಬಳಸುವ ಅಗತ್ಯವನ್ನು ತಿಳಿಯಬೇಕು.
00:50 ಕೊರೋನಾ ವೈರಾಣುವಿನಿಂದ ನಮ್ಮನ್ನು ನಾವು ರಕ್ಷಿಸಿಕೊಳ್ಳಲು ಮುಖಕವಚವನ್ನು ಧರಿಸುವುದು ತುಂಬ ಮುಖ್ಯವಾಗಿದೆ.
00:56 ಭಾರತವು ಜನನಿಬಿಡ ದೇಶವಾಗಿರುವುದರಿಂದ, ಮುಖಕವಚ ಧರಿಸುವುದನ್ನು ವಿಶೇಷವಾಗಿ ಶಿಫಾರಸು ಮಾಡಲಾಗಿದೆ.
01:03 ಕೊರೋನಾ ವೈರಸ್ ಅನ್ನು ತಡೆಗಟ್ಟಲು ಮತ್ತು ನಿಯಂತ್ರಿಸಲು ಹಲವಾರು ವಿಧದ ಮುಖಕವಚ ಗಳನ್ನು ಬಳಸಲಾಗುತ್ತಿದೆ.
01:10 ಮನೆಯಲ್ಲಿ ಈ ಮಾಸ್ಕ್ ಅನ್ನು ತಯಾರಿಸುವುದು ಸುಲಭ ಹಾಗೂ ಇದನ್ನು ಮತ್ತೆ ಮತ್ತೆ ಬಳಸಬಹುದು.
01:18 ಇಲ್ಲಿ ಮುಖ್ಯವಾದ ಮುನ್ನೆಚ್ಚರಿಕೆಗಳನ್ನು ದಯವಿಟ್ಟು ನೆನಪಿನಲ್ಲಿಡಿ.
01:23 ಮನೆಯಲ್ಲಿ ತಯಾರಿಸಿದ ಮಾಸ್ಕ್ ಆರೋಗ್ಯ-ಕಾರ್ಯಕರ್ತರಿಗಲ್ಲ.
01:28 ಇದು ಕೋವಿಡ್ -19 ರೋಗಿಯ ಜೊತೆಗೆ ಕೆಲಸ ಮಾಡುವ ಅಥವಾ ಸಂಪರ್ಕ ಹೊಂದಿರುವ ವ್ಯಕ್ತಿಗಳಿಗೂ ಅಲ್ಲ.
01:37 ಕೋವಿಡ್-19 ರೋಗಿಗಳು ಮನೆಯಲ್ಲಿ ಮಾಡಿದ ಮಾಸ್ಕ್ ಗಳನ್ನು ಬಳಸಬಾರದು.
01:42 ಅವರಿಗೆ ಸೂಚಿಸಲಾದ ನಿರ್ದಿಷ್ಟ ರಕ್ಷಣಾ ವಸ್ತ್ರಗಳನ್ನು ಮಾತ್ರ ಧರಿಸಲೇಬೇಕು.
01:48 ನೀವು ಯಾವಾಗಲೂ ನೆನಪಿಡಬೇಕಾದ ಇನ್ನೂ ಕೆಲವು ಸುರಕ್ಷತಾ ಮುನ್ನೆಚ್ಚರಿಕೆಗಳಿವೆ.
01:53 ಮನೆಯಲ್ಲಿ ಮಾಡಿದ ಮುಖಕವಚಗಳು ಸಂಪೂರ್ಣ ರಕ್ಷಣೆಯನ್ನು ಕೊಡುವುದಿಲ್ಲ.
01:58 ಸೋಂಕಿತ ವ್ಯಕ್ತಿಯು ಕೆಮ್ಮಿದಾಗ ಅಥವಾ ಸೀನಿದಾಗ ಹೊರಬಂದ ಸಣ್ಣಹನಿಗಳನ್ನು ಉಸಿರಾಡುವ ಸಾಧ್ಯತೆಗಳನ್ನು ಅವು ಕಡಿಮೆ ಮಾಡುತ್ತವೆ.
02:06 ಮುಖಕವಚವನ್ನು ತೊಳೆಯದೆ ಬಳಸಬೇಡಿ.
02:10 ಬೇರೆಯವರೊಂದಿಗೆ ನಿಮ್ಮ ಮುಖಕವಚವನ್ನು ಹಂಚಿಕೊಳ್ಳಬೇಡಿ.
02:14 ಬೇರೆಯವರಿಂದ ಕನಿಷ್ಟ 2 ಮೀಟರ್ ನಷ್ಟು ದೂರವನ್ನು ಯಾವಾಗಲು ಕಾಪಾಡಿಕೊಳ್ಳಿ.
02:21 ಪದೇ ಪದೇ ನಿಮ್ಮ ಕೈಗಳನ್ನು ಸಾಬೂನಿನಿಂದ 40 ಸೆಕೆಂಡ್ ಗಳ ಕಾಲ ತೊಳೆದುಕೊಳ್ಳಿ.
02:26 ಈಗ ನಾವು ಮಾಸ್ಕ್ ಅನ್ನು ಮನೆಯಲ್ಲಿಯೇ ತಯಾರಿಸುವ ಸರಳ ವಿಧಾನವನ್ನು ನೋಡುವೆವು.
02:33 ಇದನ್ನು ಮನೆಯಲ್ಲಿಯೇ ಸಿಗುವ ಹತ್ತಿಯ ಬಟ್ಟೆಯನ್ನು ಬಳಸಿ ಮಾಡಬಹುದು.
02:38 ಇದನ್ನು ತಯಾರಿಸುವಾಗ, ಇದು ಬಾಯಿ ಮತ್ತು ಮೂಗನ್ನು ಸಂಪೂರ್ಣವಾಗಿ ಮುಚ್ಚುತ್ತದೆ ಎಂಬುದನ್ನು ಖಚಿತಪಡಿಸಿಕೊಳ್ಳಿ.
02:44 ಇದು ಮುಖದ ಮೇಲೆ ಸುಲಭವಾಗಿ ಕಟ್ಟಿಕೊಳ್ಳುವಂತಿರಬೇಕು.
02:49 ಹೊಲಿಗೆ ಯಂತ್ರವನ್ನು ಬಳಸಿ ಮತ್ತು ಬಳಸದೆಯೆ ಮುಖಕವಚವನ್ನು ಮನೆಯಲ್ಲಿಯೆ ತಯಾರಿಸಬಹುದು.
02:55 ಇದನ್ನು ಹೊಲಿಗೆ ಯಂತ್ರವನ್ನು ಬಳಸಿ ತಯಾರಿಸುವುದು ಹೇಗೆ ಎಂದು ನೋಡೋಣ.
03:02 ನಮಗೆ 100% ಹತ್ತಿಯ ಬಟ್ಟೆ ಬೇಕು.
03:06 ಬಟ್ಟೆಯ ಬಣ್ಣ ಯಾವುದಾದರೂ ಆಗಿರಬಹುದು.
03:10 ತಯಾರಿಸುವ ಮೊದಲು, ಬಟ್ಟೆಯನ್ನು ಚೆನ್ನಾಗಿ ತೊಳೆಯಿರಿ
03:13 ಮತ್ತು ಉಪ್ಪು ನೀರಿನಲ್ಲಿ ಐದು ನಿಮಿಷಗಳ ಕಾಲ ಕುದಿಸಿ.
03:17 ಬಟ್ಟೆಯನ್ನು ಚೆನ್ನಾಗಿ ಒಣಗಿಸಿ, ನಂತರ ಅದನ್ನು ಬಳಸಿ.
03:21 ಬೇಕಾಗುವ ಇತರ ವಸ್ತುಗಳು :
03:23 ಬಟ್ಟೆಯ ಪಟ್ಟಿಗಳ ನಾಲ್ಕು ತುಂಡುಗಳು,
03:26 ಕತ್ತರಿ ಮತ್ತು ಒಂದು ಹೊಲಿಗೆ ಯಂತ್ರ.
03:29 ನಾನು ಈ ರಕ್ಷಣಾ ಮುಖಕವಚವನ್ನು ತಯಾರಿಸುವ ವಿಧಾನವನ್ನು ವಿವರಿಸುವೆನು.
03:34 ಬಟ್ಟೆಯನ್ನು ಕತ್ತರಿಸುವುದರೊಂದಿಗೆ ಇದನ್ನು ಆರಂಭಿಸಿ.
03:39 ವಯಸ್ಕರಿಗೆ ಇದು 9 ಇಂಚು x 7 ಇಂಚು ಅಳತೆಯಲ್ಲಿರಬೇಕು.
03:44 ಮಕ್ಕಳಿಗಾಗಿ ಇದು 7ಇಂಚು x 5 ಇಂಚು ಅಳತೆಯಲ್ಲಿರಬೇಕು.
03:50 ಈಗ ಪಟ್ಟಿಗಳನ್ನು ಕತ್ತರಿಸೋಣ.
03:53 ವಯಸ್ಕರ ಮುಖಕವಚಕ್ಕಾಗಿ, ಕಟ್ಟಲಿಕ್ಕಾಗಿ ಮತ್ತು ಪೈಪಿಂಗ್ ಗಾಗಿ 4 ಪಟ್ಟಿಗಳನ್ನು ಕತ್ತರಿಸಿ.
03:59 1.5 ಇಂಚು x 5 ಇಂಚು ಅಳತೆಯ ಎರಡು ತುಂಡುಗಳು ಮತ್ತು
04:05 1.5 ಇಂಚು x 40 ಇಂಚು ಅಳತೆಯ ಎರಡು ತುಂಡುಗಳು ಬೇಕು.
04:11 1.5ಇಂಚು x 5 ಇಂಚು ಪಟ್ಟಿಯನ್ನು, ಬಟ್ಟೆಗೆ ಪೈಪಿಂಗ್ ಮಾಡಲು ಒಂದು ತುದಿಗೆ ಅಂಟಿಸಿ.
04:19 ಬಟ್ಟೆಯನ್ನು ಮಡಿಚಿ, ಸುಮಾರು 1.5 ಇಂಚ್ ನ ಮಡಿಕೆಗಳು ಬರುವಂತೆ, ಕೆಳಮುಖವಾಗಿ ಮೂರು ನೆರಿಗೆಗಳನ್ನು ಮಾಡಿ.
04:28 ಮಡಿಚಿದ ಬಟ್ಟೆಯನ್ನು ಇನ್ನೊಂದು ಬದಿಗೆ ತಿರುಗಿಸಿ ಮತ್ತು ಈ ಬದಿಯಲ್ಲೂ ಪದರವನ್ನು ರಚಿಸಿ.
04:34 ಈಗ ಬಟ್ಟೆಯ ಎತ್ತರವು 9 ರಿಂದ 5 ಇಂಚುಗಳಿಗೆ ಬಂದಿರುವುದನ್ನು ಗಮನಿಸಿ.
04:42 ನೆರಿಗೆಗಳನ್ನು ಭದ್ರಪಡಿಸಲು, ಎರಡೂ ಬದಿಗೆ ಪೈಪಿಂಗ್ ಮಾಡಿ.
04:46 ನೆರಿಗೆಗಳು ಕೆಳಮುಖವಾಗಿರುವಂತೆ ನೋಡಿಕೊಳ್ಳಿ.
04:51 ನಂತರ ಮಾಸ್ಕ್ ನ ಮೇಲೆ ಮತ್ತು ಕೆಳಗೆ, ಉದ್ದನೆಯ 40 ಇಂಚಿನ ಪಟ್ಟಿಯನ್ನು ಜೋಡಿಸಿ.
04:59 ಮತ್ತೊಮ್ಮೆ ಈ ಎರಡು ಪಟ್ಟಿಗಳನ್ನು ಮೂರು ಬಾರಿ ಮಡಚಿ ಹೊಲಿಯಿರಿ.
05:05 ಈಗ ನಿಮ್ಮ ಮಾಸ್ಕ್ ಬಳಕೆಗೆ ಸಿದ್ಧವಾಗಿದೆ.
05:09 ಇದನ್ನು ಧರಿಸುವಾಗ, ನಿಮ್ಮ ಮುಖ ಮತ್ತು ಮುಖಕವಚದ ನಡುವೆ ಅಂತರವಿರಬಾರದು.
05:15 ನಿಮಗೆ ಎದುರಾಗಿರುವ ಬದಿಯಲ್ಲಿ ನೆರಿಗೆಗಳು ಕೆಳಮುಖವಾಗಿರಬೇಕು.
05:21 ಒಮ್ಮೆ ಬಳಸಿದ ಮುಖಕವಚವನ್ನು ಮಗುಚಿ ಇನ್ನೊಮ್ಮೆ ಬಳಸಬಾರದು.
05:24 ಪ್ರತಿ ಬಾರಿ ಬಳಸಿದ ನಂತರ ಅದನ್ನು ಸರಿಯಾಗಿ ತೊಳೆಯಿರಿ.
05:28 ನಿಮ್ಮ ಮುಖ ಅಥವಾ ಕಣ್ಣುಗಳನ್ನು ಸ್ಪರ್ಶಿಸಬೇಡಿ.
05:31 ಮನೆಗೆ ತಲುಪಿದ ತಕ್ಷಣ ನಿಮ್ಮ ಕೈಗಳನ್ನು ಚೆನ್ನಾಗಿ ತೊಳೆದುಕೊಳ್ಳಿ.
05:35 ಈಗ ಹೊಲಿಗೆ ಯಂತ್ರವಿಲ್ಲದೆ ಮುಖಕವಚವನ್ನು ತಯಾರಿಸುವುದು ಹೇಗೆ ಎಂದು ನೋಡೋಣ.
05:41 ಬೇಕಾಗುವ ವಸ್ತುಗಳು:

100% ಹತ್ತಿಯ ಬಟ್ಟೆ ಅಥವ ಪುರುಷರ ಹತ್ತಿಯ ಕರವಸ್ತ್ರ,

05:47 ಮತ್ತು 2 ರಬ್ಬರ್ ಬ್ಯಾಂಡ್ ಗಳು.
05:50 ಈಗ ನಾನು ರಕ್ಷಣಾ ಮುಖಕವಚವನ್ನು ಮಾಡುವ ವಿಧಾನವನ್ನು ವಿವರಿಸುವೆನು.
05:55 ಮಧ್ಯಕ್ಕಿಂತ ಸ್ವಲ್ಪ ಮೇಲೆ ಬರುವಂತೆ ಕರವಸ್ತ್ರದ ಒಂದು ಬದಿಯನ್ನು ಮಡಚಿ.
06:01 ಈಗ ಮೊದಲ ಮಡಿಕೆಯ ಮೇಲೆ ಬರುವಂತೆ, ಎರಡನೆಯ ಬದಿಯನ್ನು ಮಡಚಿ.
06:07 ಇದನ್ನು ಮತ್ತೆ ಮಧ್ಯದಿಂದ ಸಮವಾಗಿ ಮಡಚಿ.
06:11 ಒಂದು ರಬ್ಬರ್ ಬ್ಯಾಂಡ್ ಅನ್ನು ತೆಗೆದುಕೊಂಡು, ಬಟ್ಟೆಯ ಎಡಭಾಗದಲ್ಲಿ ಕಟ್ಟಿಕೊಳ್ಳಿ.
06:15 ಈಗ ಇನ್ನೊಂದು ಬದಿಯನ್ನು, ಮತ್ತೊಂದು ರಬ್ಬರ್ ಬ್ಯಾಂಡ್ ನಿಂದ ಕಟ್ಟಿಕೊಳ್ಳಿ.
06:20 ಈಗ ಎರಡು ರಬ್ಬರ್ ಬ್ಯಾಂಡ್ ಗಳ ನಡುವೆ ಇರುವ ಪ್ರದೇಶವು ಸಾಕಷ್ಟು ದೊಡ್ಡದಾಗಿರುವುದನ್ನು ಖಚಿತಪಡಿಸಿಕೊಳ್ಳಿ.
06:25 ಇದು ನಿಮ್ಮ ಮೂಗು ಮತ್ತು ಬಾಯಿಯನ್ನು ಮುಚ್ಚಲು ಸಹಾಯ ಮಾಡುತ್ತದೆ.
06:30 ರಬ್ಬರ್ ಬ್ಯಾಂಡಿನ ಬಟ್ಟೆಯ ತುದಿಯ ಒಂದು ಅಂಚನ್ನು ತೆಗೆದುಕೊಂಡು ಅದರ ಮೇಲೆ ಮಡಚಿ.
06:36 ಎರಡೂ ಕಡೆ ಇದನ್ನು ಮಾಡಿ.
06:38 ಈಗ ಬಟ್ಟೆಯ ಒಂದು ಮಡಿಕೆಯನ್ನು ತೆಗೆದುಕೊಂಡು, ಇನ್ನೊಂದರೊಳಗೆ ಸೇರಿಸಿ.
06:43 ಈಗ ನಿಮ್ಮ ಮುಖಕವಚ ಬಳಕೆಗೆ ಸಿದ್ಧವಾಗಿದೆ.
06:47 ಈ ಮುಖಕವಚವನ್ನು ಧರಿಸಲು ಪ್ರತಿ ರಬ್ಬರ್ ಬ್ಯಾಂಡ್ ಅನ್ನು ನಿಮ್ಮ ಕಿವಿಗಳಿಗೆ ಸುತ್ತಿಕೊಳ್ಳಿ.
06:53 ಮೊದಲೇ ಹೇಳಿದಂತೆ, ನಿಮ್ಮ ಮುಖಕವಚ ನಿಮ್ಮ ಮೂಗು ಮತ್ತು ಬಾಯಿಯ ಸುತ್ತಲೂ ಹೊಂದಿಕೊಳ್ಳುತ್ತಿದೆಯೇ ಎಂದು ಖಚಿತಪಡಿಸಿಕೊಳ್ಳಿ.
07:00 ಮುಖ ಮತ್ತು ಮುಖಕವಚಗಳ ನಡುವೆ ಯಾವುದೇ ಅಂತರವಿರಬಾರದು.
07:04 ಮನೆಯಲ್ಲಿ ಮಾಡಿದ ರಕ್ಷಣಾ ಮುಖಕವಚಗಳನ್ನುಧರಿಸುವಾಗ ಮೇಲೆ ಸೂಚಿಸಿರುವ ಎಲ್ಲ ಸೂಚನೆಗಳನ್ನು ಮತ್ತು ಮುನ್ನೆಚ್ಚರಿಕೆಗಳನ್ನು ಪಾಲಿಸಿ.
07:10 ಮುಖಕವಚವನ್ನು ಧರಿಸುವ ಮೊದಲು ನಿಮ್ಮ ಕೈಗಳನ್ನು ಸರಿಯಾಗಿ ತೊಳೆದುಕೊಳ್ಳಿ.
07:14 ಮುಖಕವಚ ಆರ್ದ್ರ ಅಥವಾ ಒದ್ದೆಯಾದ ತಕ್ಷಣ ಮುಖಕವಚವನ್ನು ಬದಲಿಸಿ.
07:21 ಪ್ರತಿಸಲ ಬಳಸಿದ ನಂತರ, ಇನ್ನೊಮ್ಮೆ ಬಳಸುವ ಮೊದಲು ಅದನ್ನು ಚೆನ್ನಾಗಿ ತೊಳೆಯಿರಿ.
07:27 ಕುಟುಂಬದ ಪ್ರತಿ ಸದಸ್ಯರೂ ಪ್ರತ್ಯೇಕ ಮುಖಕವಚವನ್ನು ಹೊಂದಿರಬೇಕು.
07:32 ಮುಖಕವಚವನ್ನು ತೆಗೆಯುವಾಗ ಮುಂಭಾಗ ಅಥವಾ ಯಾವುದೇ ಮೇಲ್ಮೈಯನ್ನು ಸ್ಪರ್ಷಿಸಬೇಡಿ.
07:38 ಅವುಗಳನ್ನು ಹಿಂದನ ದಾರ ಅಥವಾ ರಬ್ಬರ್ ಬ್ಯಾಂಡ್ ಗಳನ್ನು ಬಿಚ್ಚಿ, ತೆಗೆಯಿರಿ.
07:43 ದಾರವಿರುವ ಮುಖಕವಚಗಳಲ್ಲಿ ಯಾವಾಗಲೂ ಕೆಳಗಿನ ದಾರವನ್ನು ಬಿಚ್ಚಿ, ನಂತರ ಮೇಲಿನ ದಾರವನ್ನು ಬಿಚ್ಚಿ.
07:51 ಮುಖಕವಚಗಳನ್ನು ತೆಗೆದ ನಂತರ, ತಕ್ಷಣ ನಿಮ್ಮ ಕೈಗಳನ್ನು 40 ಸೆಕೆಂಡುಗಳ ಕಾಲ ಸಾಬೂನು ಮತ್ತು ನೀರಿನಿಂದ ತೊಳೆದುಕೊಳ್ಳಿ.
07:58 65% ಆಲ್ಕೋಹಾಲ್ ಆಧಾರಿತ ಹ್ಯಾಂಡ್ ಸ್ಯಾನಿಟೈಜರ್ ಅನ್ನು ಕೂಡ ಬಳಸಬಹುದು.
08:04 ಈಗ ನಾನು ಮುಖಕವಚವನ್ನು ಸರಿಯಾಗಿ ಸ್ವಚ್ಛ ಮಾಡುವುದು ಹೇಗೆ ಎಂದು ತೋರಿಸುವೆನು.
08:09 ದಯವಿಟ್ಟು ಈ ವಿಧಾನವನ್ನು ಕಡ್ಡಾಯವಾಗಿ ಪಾಲಿಸಿ.
08:12 ಮುಖಕವಚವನ್ನು ಸಾಬೂನು ಮತ್ತು ಬಿಸಿನೀರಿನಿಂದ ಚೆನ್ನಾಗಿ ತೊಳೆಯಿರಿ.
08:17 ಸೂರ್ಯನ ಬಿಸಿಲಿನಲ್ಲಿ ಕನಿಷ್ಟ 5 ಗಂಟೆಗಳ ಕಾಲ ಒಣಗಿಸಿ.
08:21 ಇಲ್ಲವಾದರೆ, ನೀವು ಇದನ್ನು ಸ್ವಚ್ಛಗೊಳಿಸಲು ಪ್ರೆಷರ್ ಕುಕ್ಕರ್ ಅನ್ನು ಬಳಸಬಹುದು.
08:25 ಪ್ರೆಷರ್ ಕುಕ್ಕರ್ ನಲ್ಲಿ ನೀರು ಹಾಕಿ, ನಿಮ್ಮ ಮುಖಕವಚವನ್ನು ಅದರಲ್ಲಿ ಹಾಕಿ.
08:29 ಸ್ವಲ್ಪ ಉಪ್ಪನ್ನು ಸೇರಿಸಿ ಮತ್ತು ಕನಿಷ್ಟ 10 ನಿಮಿಷ ಕುದಿಸಿ.
08:33 ಆನಂತರ ಅದನ್ನು ಹೊರತೆಗೆದು, ಸ್ವಚ್ಛವಾದ ಜಾಗದಲ್ಲಿ ಒಣಗಿಸಿ.
08:38 ಅಥವಾ ನೀವು ಮುಖಕವಚವನ್ನು 15 ನಿಮಿಷಗಳ ಕಾಲ ಬಿಸಿನೀರಿನಲ್ಲಿ ಕುದಿಸಬಹುದು.
08:44 ಪ್ರೆಷರ್ ಕುಕರ್ ಅಥವಾ ಕುದಿಯುವ ನೀರು ಇಲ್ಲವಾದಲ್ಲಿ, ಸಾಬೂನನ್ನು ಬಳಸಿ,
08:51 ತೊಳೆದು ಸ್ವಚ್ಛಗೊಳಿಸಿ.
08:54 ಅದರ ಮೇಲೆ 5 ನಿಮಿಷಗಳ ಕಾಲ ಶಾಖವನ್ನು ಕೊಡಿ.
08:59 ಶಾಖವನ್ನು ಕೊಡಲು ಇಸ್ತ್ರಿ ಪೆಟ್ಟಿಗೆಯನ್ನು ಬಳಸಬಹುದು.
09:04 ನೀವು ಕನಿಷ್ಟ ಎರಡು ಮಾಸ್ಕ್ ಗಳನ್ನು ತಯಾರಿಸಿಕೊಳ್ಳುವುದು ಸೂಕ್ತ.
09:09 ನೀವು ಒಂದನ್ನು ತೊಳೆದು ಒಣಗಿಸುವಾಗ, ಇನ್ನೊಂದನ್ನು ಧರಿಸಬಹುದು.
09:13 ಈಗ ಸ್ವಚ್ಛಗೊಳಿಸಿದ ಮುಖಕವಚವನ್ನು ಹೇಗೆ ಸಂಗ್ರಹಿಸಿಡುವುದು ಎಂದು ನೋಡೋಣ.
09:18 ಮನೆಯಲ್ಲಿರುವ ಯಾವುದೇ ಪ್ಲಾಸ್ಟಿಕ್ ಚೀಲವನ್ನು ತೆಗೆದುಕೊಳ್ಳಿ, ಅದನ್ನು ಸಾಬೂನು ಮತ್ತು ನೀರಿನಿಂದ ಚೆನ್ನಾಗಿ ಸ್ವಚ್ಛಗೊಳಿಸಿ.
09:23 ಇದು ಎರಡೂ ಕಡೆಗಳಲ್ಲಿ ಚೆನ್ನಾಗಿ ಒಣಗಲು ಬಿಡಿ.
09:27 ನಿಮ್ಮ ಸ್ವಚ್ಛವಾಗಿರುವ ಹೆಚ್ಚುವರಿ ಮುಖಕವಚವನ್ನು ಈ ಸ್ವಚ್ಛಗೊಳಿಸಿದ ಚೀಲದಲ್ಲಿಡಿ ಮತ್ತು ಗಾಳಿಯಾಡದಂತೆ ಬಿಗಿಮಾಡಿಡಿ.
09:32 ಈಗ ದಿನನಿತ್ಯದ ಬಳಕೆಗಾಗಿ ನಿಮ್ಮ ಮುಖಕವಚಗಳನ್ನು ಒಂದಾದ ಮೇಲೆ ಒಂದನ್ನು ಬಳಸಬಹುದು.
09:38 ಇಲ್ಲಿಗೆ ಟ್ಯುಟೋರಿಯಲ್ ನ ಕೊನೆಯನ್ನು ತಲುಪಿದ್ದೇವೆ.
09:41 ನಾವು ಈ ಟ್ಯುಟೋರಿಯಲ್ ನ ಸಾರಾಂಶವನ್ನು ನೋಡೋಣ.
09:45 ಕೊರೋನಾ ವೈರಾಣುವಿನಿಂದಾಗಿ ರಕ್ಷಣಾ ಮುಖಕವಚವನ್ನು ಧರಿಸುವ ಅಗತ್ಯವನ್ನು ಹಾಗೂ
09:51 ಮುಖ್ಯವಾದ ಮುನ್ನೆಚ್ಚರಿಕೆಗಳನ್ನು ಕಲಿತಿದ್ದೇವೆ.
09:54 ಆರೋಗ್ಯಕಾರ್ಯಕರ್ತರು ಮನೆಯಲ್ಲಿ ಮಾಡಿದ ಮುಖಕವಚಗಳನ್ನು ಬಳಸಬಾರದು.
09:59 ಕೋವಿಡ್-19 ರೋಗಿಗಳ ಸಂಪರ್ಕದಲ್ಲಿರುವವರು ಇದನ್ನು ಬಳಸಬಾರದು.
10:05 ಕೋವಿಡ್-19 ರೋಗಿಗಳೂ ಸಹ ಈ ಮುಖಕವಚಗಳನ್ನು ಬಳಸಬಾರದು.
10:10 ಅವರೆಲ್ಲರೂ ಕಡ್ಡಾಯವಾಗಿ ನಿರ್ದಿಷ್ಟವಾದ ರಕ್ಷಣಾ ವಸ್ತ್ರಗಳನ್ನು ಬಳಸಬೇಕು.
10:15 ನಾವು ರಕ್ಷಣೆಯ ಮುನ್ನೆಚ್ಚರಿಕೆಗಳನ್ನು ಕೂಡ ಕಲಿತಿದ್ದೇವೆ.
10:19 ಮನೆಯಲ್ಲಿ ತಯಾರಿಸಿದ ಮಾಸ್ಕ್ ಗಳು ಸಂಪೂರ್ಣ ರಕ್ಷಣೆಯನ್ನು ಕೊಡುವುದಿಲ್ಲ.
10:23 ಮಾಸ್ಕ್ ಅನ್ನು ತೊಳೆಯದೆ ಬಳಸಬಾರದು ಮತ್ತು ಇನ್ನೊಬ್ಬರೊಂದಿಗೆ ಹಂಚಿಕೊಳ್ಳಬಾರದು.
10:29 ಜನರಿಂದ ಕಡ್ಡಾಯವಾಗಿ ಕನಿಷ್ಟ 2 ಮೀಟರ್ ದೂರವನ್ನು ಕಾಪಾಡಿಕೊಳ್ಳಿ.
10:34 ಪದೆ ಪದೆ ಕೈಗಳನ್ನು ಸಾಬೂನಿನಿಂದ 40 ಸೆಕೆಂಡುಗಳ ಕಾಲ ತೊಳೆದುಕೊಳ್ಳಿ.
10:39 ಹೊಲಿಗೆ ಯಂತ್ರವನ್ನು ಬಳಸಿ ಮತ್ತು ಬಳಸದೆಯೆ ಮಾಸ್ಕ್ ಗಳನ್ನು ತಯಾರಿಸುವುದನ್ನು ನಾವು ಕಲಿತಿದ್ದೇವೆ.
10:45 ಮಾಸ್ಕ್ ಗಳನ್ನು ತೊಡುವ ಮೊದಲು ಮತ್ತು ತೆಗೆಯುವಾಗ ಪಾಲಿಸಬೇಕಾದ ಮುನ್ನೆಚ್ಚರಿಕೆಗಳು ಹಾಗೂ
10:51 ಅವುಗಳನ್ನು ಶುಚಿಗೊಳಿಸಿ ಇಟ್ಟುಕೊಳ್ಳುವ ಸರಿಯಾದ ಮಾರ್ಗವನ್ನು ಕಲಿತಿದ್ದೇವೆ.

ಅನುವಾದ ಮೈಸೂರಿನಿಂದ ಅಂಜನಾ ಅನಂತನಾಗ್ ಮತ್ತು ಧ್ವನಿ ಶ್ರೀ ನವೀನ ಭಟ್ಟ ಉಪ್ಪಿನಪಟ್ಟಣ. ಧನ್ಯವಾದಗಳು.

Contributors and Content Editors

Sandhya.np14