COVID19/C2/Making-a-protective-face-cover-at-home/Kannada
From Script | Spoken-Tutorial
|
|
00:00 | ಮನೆಯಲ್ಲಿ ರಕ್ಷಣಾ ಮುಖಕವಚವನ್ನು (protective face cover ಅಥವಾ ಮಾಸ್ಕ್) ತಯಾರಿಸುವ ಬಗ್ಗೆ ಇರುವ ಸ್ಪೋಕನ್ ಟ್ಯುಟೋರಿಯಲ್ ಗೆ ಸ್ವಾಗತ. |
00:06 | ಈ ಟ್ಯುಟೋರಿಯಲ್ ನಲ್ಲಿ ನಾವು, |
00:10 | ರಕ್ಷಣಾ ಮುಖಕವಚವನ್ನು (ಮಾಸ್ಕ್) ಹಾಕಿಕೊಳ್ಳುವ ಅವಶ್ಯಕತೆ, |
00:14 | ಆರೋಗ್ಯ ಕಾರ್ಯಕರ್ತರಿಗೆ ಮತ್ತು ಕೋವಿಡ್ -19 ರೋಗಿಗಳಿಗೆ ಮುಖ್ಯ ಸೂಚನೆಗಳು, |
00:20 | ರಕ್ಷಣಾ ಮುಖಕವಚಗಳ ಕುರಿತು ಸುರಕ್ಷತಾ ಮುನ್ನೆಚ್ಚರಿಕೆಗಳು, |
00:25 | ಹೊಲಿಗೆ ಯಂತ್ರ ಬಳಸಿ ಅಥವಾ ಹಾಗೆಯೆ ರಕ್ಷಣಾ ಮುಖಕವಚವನ್ನು ತಯಾರಿಸುವ ವಿಧಾನ, |
00:32 | ಮುಖಕವಚವನ್ನು ಧರಿಸುವ ಮೊದಲು ಮತ್ತು ತೆಗೆಯುವಾಗ ಪಾಲಿಸಬೇಕಾದ ಮುನ್ನೆಚ್ಚರಿಕೆಗಳು, |
00:38 | ಈ ಮುಖಕವಚವನ್ನು ಶುಚಿಗೊಳಿಸಿ ಇಟ್ಟುಕೊಳ್ಳುವ ಸರಿಯಾದ ವಿಧಾನ – ಇವುಗಳ ಬಗ್ಗೆ ಕಲಿಯುವೆವು. |
00:44 | ಮೊದಲಿಗೆ ನಾವು ರಕ್ಷಣಾ ಮುಖಕವಚವನ್ನು ಬಳಸುವ ಅಗತ್ಯವನ್ನು ತಿಳಿಯಬೇಕು. |
00:50 | ಕೊರೋನಾ ವೈರಾಣುವಿನಿಂದ ನಮ್ಮನ್ನು ನಾವು ರಕ್ಷಿಸಿಕೊಳ್ಳಲು ಮುಖಕವಚವನ್ನು ಧರಿಸುವುದು ತುಂಬ ಮುಖ್ಯವಾಗಿದೆ. |
00:56 | ಭಾರತವು ಜನನಿಬಿಡ ದೇಶವಾಗಿರುವುದರಿಂದ, ಮುಖಕವಚ ಧರಿಸುವುದನ್ನು ವಿಶೇಷವಾಗಿ ಶಿಫಾರಸು ಮಾಡಲಾಗಿದೆ. |
01:03 | ಕೊರೋನಾ ವೈರಸ್ ಅನ್ನು ತಡೆಗಟ್ಟಲು ಮತ್ತು ನಿಯಂತ್ರಿಸಲು ಹಲವಾರು ವಿಧದ ಮುಖಕವಚ ಗಳನ್ನು ಬಳಸಲಾಗುತ್ತಿದೆ. |
01:10 | ಮನೆಯಲ್ಲಿ ಈ ಮಾಸ್ಕ್ ಅನ್ನು ತಯಾರಿಸುವುದು ಸುಲಭ ಹಾಗೂ ಇದನ್ನು ಮತ್ತೆ ಮತ್ತೆ ಬಳಸಬಹುದು. |
01:18 | ಇಲ್ಲಿ ಮುಖ್ಯವಾದ ಮುನ್ನೆಚ್ಚರಿಕೆಗಳನ್ನು ದಯವಿಟ್ಟು ನೆನಪಿನಲ್ಲಿಡಿ. |
01:23 | ಮನೆಯಲ್ಲಿ ತಯಾರಿಸಿದ ಮಾಸ್ಕ್ ಆರೋಗ್ಯ-ಕಾರ್ಯಕರ್ತರಿಗಲ್ಲ. |
01:28 | ಇದು ಕೋವಿಡ್ -19 ರೋಗಿಯ ಜೊತೆಗೆ ಕೆಲಸ ಮಾಡುವ ಅಥವಾ ಸಂಪರ್ಕ ಹೊಂದಿರುವ ವ್ಯಕ್ತಿಗಳಿಗೂ ಅಲ್ಲ. |
01:37 | ಕೋವಿಡ್-19 ರೋಗಿಗಳು ಮನೆಯಲ್ಲಿ ಮಾಡಿದ ಮಾಸ್ಕ್ ಗಳನ್ನು ಬಳಸಬಾರದು. |
01:42 | ಅವರಿಗೆ ಸೂಚಿಸಲಾದ ನಿರ್ದಿಷ್ಟ ರಕ್ಷಣಾ ವಸ್ತ್ರಗಳನ್ನು ಮಾತ್ರ ಧರಿಸಲೇಬೇಕು. |
01:48 | ನೀವು ಯಾವಾಗಲೂ ನೆನಪಿಡಬೇಕಾದ ಇನ್ನೂ ಕೆಲವು ಸುರಕ್ಷತಾ ಮುನ್ನೆಚ್ಚರಿಕೆಗಳಿವೆ. |
01:53 | ಮನೆಯಲ್ಲಿ ಮಾಡಿದ ಮುಖಕವಚಗಳು ಸಂಪೂರ್ಣ ರಕ್ಷಣೆಯನ್ನು ಕೊಡುವುದಿಲ್ಲ. |
01:58 | ಸೋಂಕಿತ ವ್ಯಕ್ತಿಯು ಕೆಮ್ಮಿದಾಗ ಅಥವಾ ಸೀನಿದಾಗ ಹೊರಬಂದ ಸಣ್ಣಹನಿಗಳನ್ನು ಉಸಿರಾಡುವ ಸಾಧ್ಯತೆಗಳನ್ನು ಅವು ಕಡಿಮೆ ಮಾಡುತ್ತವೆ. |
02:06 | ಮುಖಕವಚವನ್ನು ತೊಳೆಯದೆ ಬಳಸಬೇಡಿ. |
02:10 | ಬೇರೆಯವರೊಂದಿಗೆ ನಿಮ್ಮ ಮುಖಕವಚವನ್ನು ಹಂಚಿಕೊಳ್ಳಬೇಡಿ. |
02:14 | ಬೇರೆಯವರಿಂದ ಕನಿಷ್ಟ 2 ಮೀಟರ್ ನಷ್ಟು ದೂರವನ್ನು ಯಾವಾಗಲು ಕಾಪಾಡಿಕೊಳ್ಳಿ. |
02:21 | ಪದೇ ಪದೇ ನಿಮ್ಮ ಕೈಗಳನ್ನು ಸಾಬೂನಿನಿಂದ 40 ಸೆಕೆಂಡ್ ಗಳ ಕಾಲ ತೊಳೆದುಕೊಳ್ಳಿ. |
02:26 | ಈಗ ನಾವು ಮಾಸ್ಕ್ ಅನ್ನು ಮನೆಯಲ್ಲಿಯೇ ತಯಾರಿಸುವ ಸರಳ ವಿಧಾನವನ್ನು ನೋಡುವೆವು. |
02:33 | ಇದನ್ನು ಮನೆಯಲ್ಲಿಯೇ ಸಿಗುವ ಹತ್ತಿಯ ಬಟ್ಟೆಯನ್ನು ಬಳಸಿ ಮಾಡಬಹುದು. |
02:38 | ಇದನ್ನು ತಯಾರಿಸುವಾಗ, ಇದು ಬಾಯಿ ಮತ್ತು ಮೂಗನ್ನು ಸಂಪೂರ್ಣವಾಗಿ ಮುಚ್ಚುತ್ತದೆ ಎಂಬುದನ್ನು ಖಚಿತಪಡಿಸಿಕೊಳ್ಳಿ. |
02:44 | ಇದು ಮುಖದ ಮೇಲೆ ಸುಲಭವಾಗಿ ಕಟ್ಟಿಕೊಳ್ಳುವಂತಿರಬೇಕು. |
02:49 | ಹೊಲಿಗೆ ಯಂತ್ರವನ್ನು ಬಳಸಿ ಮತ್ತು ಬಳಸದೆಯೆ ಮುಖಕವಚವನ್ನು ಮನೆಯಲ್ಲಿಯೆ ತಯಾರಿಸಬಹುದು. |
02:55 | ಇದನ್ನು ಹೊಲಿಗೆ ಯಂತ್ರವನ್ನು ಬಳಸಿ ತಯಾರಿಸುವುದು ಹೇಗೆ ಎಂದು ನೋಡೋಣ. |
03:02 | ನಮಗೆ 100% ಹತ್ತಿಯ ಬಟ್ಟೆ ಬೇಕು. |
03:06 | ಬಟ್ಟೆಯ ಬಣ್ಣ ಯಾವುದಾದರೂ ಆಗಿರಬಹುದು. |
03:10 | ತಯಾರಿಸುವ ಮೊದಲು, ಬಟ್ಟೆಯನ್ನು ಚೆನ್ನಾಗಿ ತೊಳೆಯಿರಿ |
03:13 | ಮತ್ತು ಉಪ್ಪು ನೀರಿನಲ್ಲಿ ಐದು ನಿಮಿಷಗಳ ಕಾಲ ಕುದಿಸಿ. |
03:17 | ಬಟ್ಟೆಯನ್ನು ಚೆನ್ನಾಗಿ ಒಣಗಿಸಿ, ನಂತರ ಅದನ್ನು ಬಳಸಿ. |
03:21 | ಬೇಕಾಗುವ ಇತರ ವಸ್ತುಗಳು : |
03:23 | ಬಟ್ಟೆಯ ಪಟ್ಟಿಗಳ ನಾಲ್ಕು ತುಂಡುಗಳು, |
03:26 | ಕತ್ತರಿ ಮತ್ತು ಒಂದು ಹೊಲಿಗೆ ಯಂತ್ರ. |
03:29 | ನಾನು ಈ ರಕ್ಷಣಾ ಮುಖಕವಚವನ್ನು ತಯಾರಿಸುವ ವಿಧಾನವನ್ನು ವಿವರಿಸುವೆನು. |
03:34 | ಬಟ್ಟೆಯನ್ನು ಕತ್ತರಿಸುವುದರೊಂದಿಗೆ ಇದನ್ನು ಆರಂಭಿಸಿ. |
03:39 | ವಯಸ್ಕರಿಗೆ ಇದು 9 ಇಂಚು x 7 ಇಂಚು ಅಳತೆಯಲ್ಲಿರಬೇಕು. |
03:44 | ಮಕ್ಕಳಿಗಾಗಿ ಇದು 7ಇಂಚು x 5 ಇಂಚು ಅಳತೆಯಲ್ಲಿರಬೇಕು. |
03:50 | ಈಗ ಪಟ್ಟಿಗಳನ್ನು ಕತ್ತರಿಸೋಣ. |
03:53 | ವಯಸ್ಕರ ಮುಖಕವಚಕ್ಕಾಗಿ, ಕಟ್ಟಲಿಕ್ಕಾಗಿ ಮತ್ತು ಪೈಪಿಂಗ್ ಗಾಗಿ 4 ಪಟ್ಟಿಗಳನ್ನು ಕತ್ತರಿಸಿ. |
03:59 | 1.5 ಇಂಚು x 5 ಇಂಚು ಅಳತೆಯ ಎರಡು ತುಂಡುಗಳು ಮತ್ತು |
04:05 | 1.5 ಇಂಚು x 40 ಇಂಚು ಅಳತೆಯ ಎರಡು ತುಂಡುಗಳು ಬೇಕು. |
04:11 | 1.5ಇಂಚು x 5 ಇಂಚು ಪಟ್ಟಿಯನ್ನು, ಬಟ್ಟೆಗೆ ಪೈಪಿಂಗ್ ಮಾಡಲು ಒಂದು ತುದಿಗೆ ಅಂಟಿಸಿ. |
04:19 | ಬಟ್ಟೆಯನ್ನು ಮಡಿಚಿ, ಸುಮಾರು 1.5 ಇಂಚ್ ನ ಮಡಿಕೆಗಳು ಬರುವಂತೆ, ಕೆಳಮುಖವಾಗಿ ಮೂರು ನೆರಿಗೆಗಳನ್ನು ಮಾಡಿ. |
04:28 | ಮಡಿಚಿದ ಬಟ್ಟೆಯನ್ನು ಇನ್ನೊಂದು ಬದಿಗೆ ತಿರುಗಿಸಿ ಮತ್ತು ಈ ಬದಿಯಲ್ಲೂ ಪದರವನ್ನು ರಚಿಸಿ. |
04:34 | ಈಗ ಬಟ್ಟೆಯ ಎತ್ತರವು 9 ರಿಂದ 5 ಇಂಚುಗಳಿಗೆ ಬಂದಿರುವುದನ್ನು ಗಮನಿಸಿ. |
04:42 | ನೆರಿಗೆಗಳನ್ನು ಭದ್ರಪಡಿಸಲು, ಎರಡೂ ಬದಿಗೆ ಪೈಪಿಂಗ್ ಮಾಡಿ. |
04:46 | ನೆರಿಗೆಗಳು ಕೆಳಮುಖವಾಗಿರುವಂತೆ ನೋಡಿಕೊಳ್ಳಿ. |
04:51 | ನಂತರ ಮಾಸ್ಕ್ ನ ಮೇಲೆ ಮತ್ತು ಕೆಳಗೆ, ಉದ್ದನೆಯ 40 ಇಂಚಿನ ಪಟ್ಟಿಯನ್ನು ಜೋಡಿಸಿ. |
04:59 | ಮತ್ತೊಮ್ಮೆ ಈ ಎರಡು ಪಟ್ಟಿಗಳನ್ನು ಮೂರು ಬಾರಿ ಮಡಚಿ ಹೊಲಿಯಿರಿ. |
05:05 | ಈಗ ನಿಮ್ಮ ಮಾಸ್ಕ್ ಬಳಕೆಗೆ ಸಿದ್ಧವಾಗಿದೆ. |
05:09 | ಇದನ್ನು ಧರಿಸುವಾಗ, ನಿಮ್ಮ ಮುಖ ಮತ್ತು ಮುಖಕವಚದ ನಡುವೆ ಅಂತರವಿರಬಾರದು. |
05:15 | ನಿಮಗೆ ಎದುರಾಗಿರುವ ಬದಿಯಲ್ಲಿ ನೆರಿಗೆಗಳು ಕೆಳಮುಖವಾಗಿರಬೇಕು. |
05:21 | ಒಮ್ಮೆ ಬಳಸಿದ ಮುಖಕವಚವನ್ನು ಮಗುಚಿ ಇನ್ನೊಮ್ಮೆ ಬಳಸಬಾರದು. |
05:24 | ಪ್ರತಿ ಬಾರಿ ಬಳಸಿದ ನಂತರ ಅದನ್ನು ಸರಿಯಾಗಿ ತೊಳೆಯಿರಿ. |
05:28 | ನಿಮ್ಮ ಮುಖ ಅಥವಾ ಕಣ್ಣುಗಳನ್ನು ಸ್ಪರ್ಶಿಸಬೇಡಿ. |
05:31 | ಮನೆಗೆ ತಲುಪಿದ ತಕ್ಷಣ ನಿಮ್ಮ ಕೈಗಳನ್ನು ಚೆನ್ನಾಗಿ ತೊಳೆದುಕೊಳ್ಳಿ. |
05:35 | ಈಗ ಹೊಲಿಗೆ ಯಂತ್ರವಿಲ್ಲದೆ ಮುಖಕವಚವನ್ನು ತಯಾರಿಸುವುದು ಹೇಗೆ ಎಂದು ನೋಡೋಣ. |
05:41 | ಬೇಕಾಗುವ ವಸ್ತುಗಳು:
100% ಹತ್ತಿಯ ಬಟ್ಟೆ ಅಥವ ಪುರುಷರ ಹತ್ತಿಯ ಕರವಸ್ತ್ರ, |
05:47 | ಮತ್ತು 2 ರಬ್ಬರ್ ಬ್ಯಾಂಡ್ ಗಳು. |
05:50 | ಈಗ ನಾನು ರಕ್ಷಣಾ ಮುಖಕವಚವನ್ನು ಮಾಡುವ ವಿಧಾನವನ್ನು ವಿವರಿಸುವೆನು. |
05:55 | ಮಧ್ಯಕ್ಕಿಂತ ಸ್ವಲ್ಪ ಮೇಲೆ ಬರುವಂತೆ ಕರವಸ್ತ್ರದ ಒಂದು ಬದಿಯನ್ನು ಮಡಚಿ. |
06:01 | ಈಗ ಮೊದಲ ಮಡಿಕೆಯ ಮೇಲೆ ಬರುವಂತೆ, ಎರಡನೆಯ ಬದಿಯನ್ನು ಮಡಚಿ. |
06:07 | ಇದನ್ನು ಮತ್ತೆ ಮಧ್ಯದಿಂದ ಸಮವಾಗಿ ಮಡಚಿ. |
06:11 | ಒಂದು ರಬ್ಬರ್ ಬ್ಯಾಂಡ್ ಅನ್ನು ತೆಗೆದುಕೊಂಡು, ಬಟ್ಟೆಯ ಎಡಭಾಗದಲ್ಲಿ ಕಟ್ಟಿಕೊಳ್ಳಿ. |
06:15 | ಈಗ ಇನ್ನೊಂದು ಬದಿಯನ್ನು, ಮತ್ತೊಂದು ರಬ್ಬರ್ ಬ್ಯಾಂಡ್ ನಿಂದ ಕಟ್ಟಿಕೊಳ್ಳಿ. |
06:20 | ಈಗ ಎರಡು ರಬ್ಬರ್ ಬ್ಯಾಂಡ್ ಗಳ ನಡುವೆ ಇರುವ ಪ್ರದೇಶವು ಸಾಕಷ್ಟು ದೊಡ್ಡದಾಗಿರುವುದನ್ನು ಖಚಿತಪಡಿಸಿಕೊಳ್ಳಿ. |
06:25 | ಇದು ನಿಮ್ಮ ಮೂಗು ಮತ್ತು ಬಾಯಿಯನ್ನು ಮುಚ್ಚಲು ಸಹಾಯ ಮಾಡುತ್ತದೆ. |
06:30 | ರಬ್ಬರ್ ಬ್ಯಾಂಡಿನ ಬಟ್ಟೆಯ ತುದಿಯ ಒಂದು ಅಂಚನ್ನು ತೆಗೆದುಕೊಂಡು ಅದರ ಮೇಲೆ ಮಡಚಿ. |
06:36 | ಎರಡೂ ಕಡೆ ಇದನ್ನು ಮಾಡಿ. |
06:38 | ಈಗ ಬಟ್ಟೆಯ ಒಂದು ಮಡಿಕೆಯನ್ನು ತೆಗೆದುಕೊಂಡು, ಇನ್ನೊಂದರೊಳಗೆ ಸೇರಿಸಿ. |
06:43 | ಈಗ ನಿಮ್ಮ ಮುಖಕವಚ ಬಳಕೆಗೆ ಸಿದ್ಧವಾಗಿದೆ. |
06:47 | ಈ ಮುಖಕವಚವನ್ನು ಧರಿಸಲು ಪ್ರತಿ ರಬ್ಬರ್ ಬ್ಯಾಂಡ್ ಅನ್ನು ನಿಮ್ಮ ಕಿವಿಗಳಿಗೆ ಸುತ್ತಿಕೊಳ್ಳಿ. |
06:53 | ಮೊದಲೇ ಹೇಳಿದಂತೆ, ನಿಮ್ಮ ಮುಖಕವಚ ನಿಮ್ಮ ಮೂಗು ಮತ್ತು ಬಾಯಿಯ ಸುತ್ತಲೂ ಹೊಂದಿಕೊಳ್ಳುತ್ತಿದೆಯೇ ಎಂದು ಖಚಿತಪಡಿಸಿಕೊಳ್ಳಿ. |
07:00 | ಮುಖ ಮತ್ತು ಮುಖಕವಚಗಳ ನಡುವೆ ಯಾವುದೇ ಅಂತರವಿರಬಾರದು. |
07:04 | ಮನೆಯಲ್ಲಿ ಮಾಡಿದ ರಕ್ಷಣಾ ಮುಖಕವಚಗಳನ್ನುಧರಿಸುವಾಗ ಮೇಲೆ ಸೂಚಿಸಿರುವ ಎಲ್ಲ ಸೂಚನೆಗಳನ್ನು ಮತ್ತು ಮುನ್ನೆಚ್ಚರಿಕೆಗಳನ್ನು ಪಾಲಿಸಿ. |
07:10 | ಮುಖಕವಚವನ್ನು ಧರಿಸುವ ಮೊದಲು ನಿಮ್ಮ ಕೈಗಳನ್ನು ಸರಿಯಾಗಿ ತೊಳೆದುಕೊಳ್ಳಿ. |
07:14 | ಮುಖಕವಚ ಆರ್ದ್ರ ಅಥವಾ ಒದ್ದೆಯಾದ ತಕ್ಷಣ ಮುಖಕವಚವನ್ನು ಬದಲಿಸಿ. |
07:21 | ಪ್ರತಿಸಲ ಬಳಸಿದ ನಂತರ, ಇನ್ನೊಮ್ಮೆ ಬಳಸುವ ಮೊದಲು ಅದನ್ನು ಚೆನ್ನಾಗಿ ತೊಳೆಯಿರಿ. |
07:27 | ಕುಟುಂಬದ ಪ್ರತಿ ಸದಸ್ಯರೂ ಪ್ರತ್ಯೇಕ ಮುಖಕವಚವನ್ನು ಹೊಂದಿರಬೇಕು. |
07:32 | ಮುಖಕವಚವನ್ನು ತೆಗೆಯುವಾಗ ಮುಂಭಾಗ ಅಥವಾ ಯಾವುದೇ ಮೇಲ್ಮೈಯನ್ನು ಸ್ಪರ್ಷಿಸಬೇಡಿ. |
07:38 | ಅವುಗಳನ್ನು ಹಿಂದನ ದಾರ ಅಥವಾ ರಬ್ಬರ್ ಬ್ಯಾಂಡ್ ಗಳನ್ನು ಬಿಚ್ಚಿ, ತೆಗೆಯಿರಿ. |
07:43 | ದಾರವಿರುವ ಮುಖಕವಚಗಳಲ್ಲಿ ಯಾವಾಗಲೂ ಕೆಳಗಿನ ದಾರವನ್ನು ಬಿಚ್ಚಿ, ನಂತರ ಮೇಲಿನ ದಾರವನ್ನು ಬಿಚ್ಚಿ. |
07:51 | ಮುಖಕವಚಗಳನ್ನು ತೆಗೆದ ನಂತರ, ತಕ್ಷಣ ನಿಮ್ಮ ಕೈಗಳನ್ನು 40 ಸೆಕೆಂಡುಗಳ ಕಾಲ ಸಾಬೂನು ಮತ್ತು ನೀರಿನಿಂದ ತೊಳೆದುಕೊಳ್ಳಿ. |
07:58 | 65% ಆಲ್ಕೋಹಾಲ್ ಆಧಾರಿತ ಹ್ಯಾಂಡ್ ಸ್ಯಾನಿಟೈಜರ್ ಅನ್ನು ಕೂಡ ಬಳಸಬಹುದು. |
08:04 | ಈಗ ನಾನು ಮುಖಕವಚವನ್ನು ಸರಿಯಾಗಿ ಸ್ವಚ್ಛ ಮಾಡುವುದು ಹೇಗೆ ಎಂದು ತೋರಿಸುವೆನು. |
08:09 | ದಯವಿಟ್ಟು ಈ ವಿಧಾನವನ್ನು ಕಡ್ಡಾಯವಾಗಿ ಪಾಲಿಸಿ. |
08:12 | ಮುಖಕವಚವನ್ನು ಸಾಬೂನು ಮತ್ತು ಬಿಸಿನೀರಿನಿಂದ ಚೆನ್ನಾಗಿ ತೊಳೆಯಿರಿ. |
08:17 | ಸೂರ್ಯನ ಬಿಸಿಲಿನಲ್ಲಿ ಕನಿಷ್ಟ 5 ಗಂಟೆಗಳ ಕಾಲ ಒಣಗಿಸಿ. |
08:21 | ಇಲ್ಲವಾದರೆ, ನೀವು ಇದನ್ನು ಸ್ವಚ್ಛಗೊಳಿಸಲು ಪ್ರೆಷರ್ ಕುಕ್ಕರ್ ಅನ್ನು ಬಳಸಬಹುದು. |
08:25 | ಪ್ರೆಷರ್ ಕುಕ್ಕರ್ ನಲ್ಲಿ ನೀರು ಹಾಕಿ, ನಿಮ್ಮ ಮುಖಕವಚವನ್ನು ಅದರಲ್ಲಿ ಹಾಕಿ. |
08:29 | ಸ್ವಲ್ಪ ಉಪ್ಪನ್ನು ಸೇರಿಸಿ ಮತ್ತು ಕನಿಷ್ಟ 10 ನಿಮಿಷ ಕುದಿಸಿ. |
08:33 | ಆನಂತರ ಅದನ್ನು ಹೊರತೆಗೆದು, ಸ್ವಚ್ಛವಾದ ಜಾಗದಲ್ಲಿ ಒಣಗಿಸಿ. |
08:38 | ಅಥವಾ ನೀವು ಮುಖಕವಚವನ್ನು 15 ನಿಮಿಷಗಳ ಕಾಲ ಬಿಸಿನೀರಿನಲ್ಲಿ ಕುದಿಸಬಹುದು. |
08:44 | ಪ್ರೆಷರ್ ಕುಕರ್ ಅಥವಾ ಕುದಿಯುವ ನೀರು ಇಲ್ಲವಾದಲ್ಲಿ, ಸಾಬೂನನ್ನು ಬಳಸಿ, |
08:51 | ತೊಳೆದು ಸ್ವಚ್ಛಗೊಳಿಸಿ. |
08:54 | ಅದರ ಮೇಲೆ 5 ನಿಮಿಷಗಳ ಕಾಲ ಶಾಖವನ್ನು ಕೊಡಿ. |
08:59 | ಶಾಖವನ್ನು ಕೊಡಲು ಇಸ್ತ್ರಿ ಪೆಟ್ಟಿಗೆಯನ್ನು ಬಳಸಬಹುದು. |
09:04 | ನೀವು ಕನಿಷ್ಟ ಎರಡು ಮಾಸ್ಕ್ ಗಳನ್ನು ತಯಾರಿಸಿಕೊಳ್ಳುವುದು ಸೂಕ್ತ. |
09:09 | ನೀವು ಒಂದನ್ನು ತೊಳೆದು ಒಣಗಿಸುವಾಗ, ಇನ್ನೊಂದನ್ನು ಧರಿಸಬಹುದು. |
09:13 | ಈಗ ಸ್ವಚ್ಛಗೊಳಿಸಿದ ಮುಖಕವಚವನ್ನು ಹೇಗೆ ಸಂಗ್ರಹಿಸಿಡುವುದು ಎಂದು ನೋಡೋಣ. |
09:18 | ಮನೆಯಲ್ಲಿರುವ ಯಾವುದೇ ಪ್ಲಾಸ್ಟಿಕ್ ಚೀಲವನ್ನು ತೆಗೆದುಕೊಳ್ಳಿ, ಅದನ್ನು ಸಾಬೂನು ಮತ್ತು ನೀರಿನಿಂದ ಚೆನ್ನಾಗಿ ಸ್ವಚ್ಛಗೊಳಿಸಿ. |
09:23 | ಇದು ಎರಡೂ ಕಡೆಗಳಲ್ಲಿ ಚೆನ್ನಾಗಿ ಒಣಗಲು ಬಿಡಿ. |
09:27 | ನಿಮ್ಮ ಸ್ವಚ್ಛವಾಗಿರುವ ಹೆಚ್ಚುವರಿ ಮುಖಕವಚವನ್ನು ಈ ಸ್ವಚ್ಛಗೊಳಿಸಿದ ಚೀಲದಲ್ಲಿಡಿ ಮತ್ತು ಗಾಳಿಯಾಡದಂತೆ ಬಿಗಿಮಾಡಿಡಿ. |
09:32 | ಈಗ ದಿನನಿತ್ಯದ ಬಳಕೆಗಾಗಿ ನಿಮ್ಮ ಮುಖಕವಚಗಳನ್ನು ಒಂದಾದ ಮೇಲೆ ಒಂದನ್ನು ಬಳಸಬಹುದು. |
09:38 | ಇಲ್ಲಿಗೆ ಟ್ಯುಟೋರಿಯಲ್ ನ ಕೊನೆಯನ್ನು ತಲುಪಿದ್ದೇವೆ. |
09:41 | ನಾವು ಈ ಟ್ಯುಟೋರಿಯಲ್ ನ ಸಾರಾಂಶವನ್ನು ನೋಡೋಣ. |
09:45 | ಕೊರೋನಾ ವೈರಾಣುವಿನಿಂದಾಗಿ ರಕ್ಷಣಾ ಮುಖಕವಚವನ್ನು ಧರಿಸುವ ಅಗತ್ಯವನ್ನು ಹಾಗೂ |
09:51 | ಮುಖ್ಯವಾದ ಮುನ್ನೆಚ್ಚರಿಕೆಗಳನ್ನು ಕಲಿತಿದ್ದೇವೆ. |
09:54 | ಆರೋಗ್ಯಕಾರ್ಯಕರ್ತರು ಮನೆಯಲ್ಲಿ ಮಾಡಿದ ಮುಖಕವಚಗಳನ್ನು ಬಳಸಬಾರದು. |
09:59 | ಕೋವಿಡ್-19 ರೋಗಿಗಳ ಸಂಪರ್ಕದಲ್ಲಿರುವವರು ಇದನ್ನು ಬಳಸಬಾರದು. |
10:05 | ಕೋವಿಡ್-19 ರೋಗಿಗಳೂ ಸಹ ಈ ಮುಖಕವಚಗಳನ್ನು ಬಳಸಬಾರದು. |
10:10 | ಅವರೆಲ್ಲರೂ ಕಡ್ಡಾಯವಾಗಿ ನಿರ್ದಿಷ್ಟವಾದ ರಕ್ಷಣಾ ವಸ್ತ್ರಗಳನ್ನು ಬಳಸಬೇಕು. |
10:15 | ನಾವು ರಕ್ಷಣೆಯ ಮುನ್ನೆಚ್ಚರಿಕೆಗಳನ್ನು ಕೂಡ ಕಲಿತಿದ್ದೇವೆ. |
10:19 | ಮನೆಯಲ್ಲಿ ತಯಾರಿಸಿದ ಮಾಸ್ಕ್ ಗಳು ಸಂಪೂರ್ಣ ರಕ್ಷಣೆಯನ್ನು ಕೊಡುವುದಿಲ್ಲ. |
10:23 | ಮಾಸ್ಕ್ ಅನ್ನು ತೊಳೆಯದೆ ಬಳಸಬಾರದು ಮತ್ತು ಇನ್ನೊಬ್ಬರೊಂದಿಗೆ ಹಂಚಿಕೊಳ್ಳಬಾರದು. |
10:29 | ಜನರಿಂದ ಕಡ್ಡಾಯವಾಗಿ ಕನಿಷ್ಟ 2 ಮೀಟರ್ ದೂರವನ್ನು ಕಾಪಾಡಿಕೊಳ್ಳಿ. |
10:34 | ಪದೆ ಪದೆ ಕೈಗಳನ್ನು ಸಾಬೂನಿನಿಂದ 40 ಸೆಕೆಂಡುಗಳ ಕಾಲ ತೊಳೆದುಕೊಳ್ಳಿ. |
10:39 | ಹೊಲಿಗೆ ಯಂತ್ರವನ್ನು ಬಳಸಿ ಮತ್ತು ಬಳಸದೆಯೆ ಮಾಸ್ಕ್ ಗಳನ್ನು ತಯಾರಿಸುವುದನ್ನು ನಾವು ಕಲಿತಿದ್ದೇವೆ. |
10:45 | ಮಾಸ್ಕ್ ಗಳನ್ನು ತೊಡುವ ಮೊದಲು ಮತ್ತು ತೆಗೆಯುವಾಗ ಪಾಲಿಸಬೇಕಾದ ಮುನ್ನೆಚ್ಚರಿಕೆಗಳು ಹಾಗೂ |
10:51 | ಅವುಗಳನ್ನು ಶುಚಿಗೊಳಿಸಿ ಇಟ್ಟುಕೊಳ್ಳುವ ಸರಿಯಾದ ಮಾರ್ಗವನ್ನು ಕಲಿತಿದ್ದೇವೆ.
ಅನುವಾದ ಮೈಸೂರಿನಿಂದ ಅಂಜನಾ ಅನಂತನಾಗ್ ಮತ್ತು ಧ್ವನಿ ಶ್ರೀ ನವೀನ ಭಟ್ಟ ಉಪ್ಪಿನಪಟ್ಟಣ. ಧನ್ಯವಾದಗಳು. |