PHP-and-MySQL/C4/Sending-Email-Part-2/Kannada
From Script | Spoken-Tutorial
Revision as of 10:59, 5 May 2020 by Sandhya.np14 (Talk | contribs)
Time | Narration |
00:00 | ನಾವು ಇಲ್ಲಿ ನಮ್ಮ HTML form ಅನ್ನು ರಚಿಸಿದ್ದೇವೆ. ನಮ್ಮ ಫಾರ್ಮ್ ಸಬ್ಮಿಟ್ ಆದಾಗ POST ವೇರಿಯೇಬಲ್ ನ ಮೂಲಕ ಡೇಟಾ ಪ್ರೊಸೆಸ್ ಆಗಿರುವುದನ್ನು ನೋಡಿದ್ದೇವೆ. |
00:12 | ಈಗ ಈ ಟ್ಯುಟೋರಿಯಲ್ ಗಾಗಿ, ನಾನು ಕೆಲವು ಕಂಡಿಷನ್ ಗಳನ್ನು ಪರೀಕ್ಷಿಸುವೆನು. |
00:22 | if string length .. |
00:25 | ಬೇಡ, ಮೊದಲಿಗೆ ನಾನು if $name and $message ಎಂದು ಟೈಪ್ ಮಾಡಿ ಇವುಗಳ ಇರುವಿಕೆಯನ್ನು ಪರೀಕ್ಷಿಸುವೆನು. |
00:30 | ಅಂದರೆ ಇದು ಮತ್ತು ಇದು ಅಸ್ತಿತ್ವದಲ್ಲಿ ಇವೆಯೇ ಎಂದು ನೋಡುವುದು. ಇವೆರಡೂ ಇದ್ದಾಗ ಮಾತ್ರ ಇದು True ಆಗಿರುತ್ತದೆ. |
00:38 | ಇಲ್ಲಿ ನಾವು "AND" (&&) ಆಪರೇಟರ್ ಅನ್ನು ಬಳಸಿದ್ದೇವೆ. ಇದು true ಆಗಿದೆಯೇ AND ಇದು true ಆಗಿದೆಯೇ ಎಂದು ನೋಡುತ್ತದೆ. |
00:45 | ಇದು TRUE ಆಗಿದ್ದರೆ, ನಾವು ಇಲ್ಲಿರುವ ಕೋಡ್ ಅನ್ನು ಎಕ್ಸಿಕ್ಯೂಟ್ ಮಾಡುವೆವು. |
00:49 | ಇಲ್ಲವಾದಲ್ಲಿ ಈ ಸ್ಕ್ರಿಪ್ಟ್ ಅನ್ನು ನಾನು kill ಮಾಡುವೆನು. ಮತ್ತು "You must enter a name and message" ಎಂದು ಹೇಳುತ್ತೇನೆ. |
01:04 | ಇಲ್ಲಿ underline ಕೊಡುತ್ತೇನೆ. |
01:07 | ಮತ್ತು ನಮ್ಮ ಕೋಡ್ ಬ್ಲಾಕ್ ನೊಳಗೆ, ಇದು TRUE ಆಗಿದ್ದರೆ ಇನ್ನೊಂದು ಪರೀಕ್ಷೆಯನ್ನು ಮಾಡುವೆವು. |
01:14 | ಇಲ್ಲಿ ಇವುಗಳ ಇರುವಿಕೆಯನ್ನು ನಾವು ಪರೀಕ್ಷೆ ಮಾಡಿದ್ದೇವೆ. |
01:20 | ಈಗ ಇಲ್ಲಿ ಇನ್ನೊಂದು ಪರೀಕ್ಷೆಯನ್ನು ರನ್ ಮಾಡಬೇಕು. |
01:25 | ಅದನ್ನು ಹೇಗೆ ಬರೆಯುವುದು? ನಾನು length ಅನ್ನು ಪರೀಕ್ಷೆ ಮಾಡುವೆನು. ಹಾಗಾಗಿ ಇದನ್ನು length check ಎಂದು ಕಾಮೆಂಟ್ ಮಾಡುವೆನು. |
01:32 | ಇಲ್ಲಿ ನಾನು string-length ಫಂಕ್ಷನ್ ಅನ್ನು ಬಳಸಿ, $name ಎನ್ನುತ್ತೇನೆ. |
01:40 | ಇಲ್ಲಿ ನಾವು string-length function of '$name' is lesser or equal to 'max length' 20, ಇಲ್ಲಿ 20 ರ ಬದಲಾಗಿ ಯಾವುದೇ ಸಂಖ್ಯೆ ಇರಬಹುದು, |
01:55 | AND (&&) string-length of '$message' is lesser or equal to 300 characters ಇದೆಯೇ ಎಂದು ಎರಡು ಕಂಡಿಷನ್ ಗಳನ್ನು ಚೆಕ್ ಮಾಡುತ್ತೇವೆ. ಇಲ್ಲಿ ಕೂಡ ಯಾವುದೇ ಸಂಖ್ಯೆ ಇರಬಹುದು. |
02:12 | ನಂತರ ನಾವು ಈ ಕೋಡ್ ಬ್ಲಾಕ್ ಅನ್ನು ಎಕ್ಸಿಕ್ಯೂಟ್ ಮಾಡುವೆವು. |
02:16 | ಇಲ್ಲವಾದಲ್ಲಿ, "Max length for name is 20 and max length for message is 300" ಎಂದು ಹೇಳುವೆನು. |
02:30 | 300 ಮತ್ತು 20, ಇವುಗಳನ್ನು ವೇರಿಯೇಬಲ್ ಗಳಲ್ಲಿ ಸ್ಟೋರ್ ಮಾಡುವುದು ಉತ್ತಮ. |
02:36 | ಅವುಗಳನ್ನು ಇಲ್ಲಿ ಸೆಟ್ ಮಾಡೋಣ. " "$namelen" equals 20" ಮತ್ತು " "$messagelen" equals to 300" ಎನ್ನೋಣ. |
02:47 | ಈಗ ಇವುಗಳನ್ನು ಇಲ್ಲಿ ಸೇರಿಸಿ. ಹಾಗಾಗಿ ಇಲ್ಲಿ $namelen ಎಂದು ಬದಲಿಸಿ. |
02:55 | ಮತ್ತು ಇಲ್ಲಿ ಕೂಡ $messagelen ಎಂದು ಬದಲಿಸಿ. |
03:04 | ಇಲ್ಲಿ ಕೆಳಗೆ ಕೂಡ ಇವೆರಡನ್ನು ಬದಲಾಯಿಸಿ. ನೀವು ಪರೀಕ್ಷೆಯನ್ನು ಮಾಡುತ್ತಿದ್ದರೆ, ಇದು ಕ್ರಿಯಾತ್ಮಕವಾಗಿ ಬದಲಾಗುತ್ತದೆ. |
03:12 | ಇಲ್ಲಿ "$messagelen" ಎಂದು ಬದಲಿಸಿ. |
03:15 | ಈಗ ಇದನ್ನು ಪರೀಕ್ಷಿಸೋಣ. "namelen" ಇದು ಗರಿಷ್ಠ 20 ಅಕ್ಷರಗಳನ್ನು ಹೊಂದಿದೆ. ಹಾಗಾಗಿ ನಾವು 20 ಅಕ್ಷರಗಳವರೆಗೆ ಮಾತ್ರ ನಮೂದಿಸಬಹುದು. ಇಲ್ಲಿ "Alex" ಎನ್ನೋಣ. |
03:26 | Message ನಲ್ಲಿ, ನಾನು 300 ಕ್ಕಿಂತ ಹೆಚ್ಚು ಅಕ್ಷರಗಳಿರುವ ಟೆಕ್ಸ್ಟ್ ಅನ್ನು ಕೊಡುವೆನು. ಇದನ್ನು ಕಾಪಿ ಮಾಡಿ, ಪೇಸ್ಟ್ ಮಾಡುವೆನು. |
03:33 | ಈಗ ಇದು 300 ಕ್ಕಿಂತ ಹೆಚ್ಚು ಅಕ್ಷರಗಳನ್ನು ಹೊಂದಿದೆ. |
03:38 | ನಾನು Send me this ಬಟನ್ ಅನ್ನು ಕ್ಲಿಕ್ ಮಾಡಿದರೆ, "The max length of the name is 20..." ಎಂಬ ಮೆಸೇಜ್ ಸಿಗುತ್ತದೆ. ಇದು ಇಲ್ಲಿ ಸೇರಿಸಿದ ವೇರಿಯೇಬಲ್ ಆಗಿದೆ. |
03:49 | ಇದರ ಗರಿಷ್ಟ ಉದ್ದ 300 ಅಕ್ಷರಗಳಾಗಿವೆ. ಇದು ಇಲ್ಲಿಂದ ಪಡೆದ ಇನ್ನೊಂದು ವೇರಿಯೇಬಲ್ ಆಗಿದೆ. |
03:56 | ನಾವು ಚೆಕ್ ಮಾಡಿ ಈ ವೇರಿಯೇಬಲ್ ಅನ್ನು ಎಕೋ ಮಾಡುತ್ತಿದ್ದೇವೆ. |
04:02 | ಈಗ ಎಲ್ಲವೂ ಸರಿಯಾಗಿದೆ ಎಂದು ಭಾವಿಸಿ ನಾವು ಬಳಕೆದಾರರಿಗೆ ಕಳುಹಿಸಿದ ಇ-ಮೇಲ್ ಅನ್ನು ಪಡೆಯುತ್ತೇವೆ. |
04:07 | ನಾನು ಮತ್ತೆ ಹೇಳುತ್ತಿದ್ದೇನೆ, ಇದು ಅಡ್ರೆಸ್ ಮತ್ತು ಈಗಾಗಲೇ ಇಲ್ಲಿ ಸಬ್ಜೆಕ್ಟ್ ಅನ್ನು ನಾವು ಪಡೆದಿದ್ದೇವೆ. |
04:13 | ಇವುಗಳನ್ನು ಕೆಳಗೆ ತರಬಹುದು; ಇ-ಮೇಲ್ ಕಳುಹಿಸಲು ಸಿದ್ಧವಾಗಿರದಿದ್ದಲ್ಲಿ ಈ ವೇರಿಯೇಬಲ್ ಗಳನ್ನು ಸೆಟ್ ಮಾಡುವ ಅವಶ್ಯಕತೆಯಿಲ್ಲ. |
04:20 | ಇದು ನಮ್ಮ 'setup variables' ಅಗಿದೆ. |
04:32 | ಇಲ್ಲಿ ನಾವು "from" ಅನ್ನು ಕೂಡ ಸೇರಿಸಬಹುದು. ಆದರೆ ಇದು ಇ-ಮೇಲ್ ಅಡ್ರೆಸ್ ಗೆ ಹಾಗೇ ಆಗುವುದು. |
04:38 | ನಮಗೆ ಈಗಾಗಲೇ "name" ಸಿಕ್ಕಿದೆ ಮತ್ತು ನಮಗೆ "message" ಮಾತ್ರ ಬೇಕಾಗಿದೆ. ಅದೂ ಕೂಡ ಇಲ್ಲಿದೆ. |
04:46 | ನಮಗೆ ಸ್ವಲ್ಪ header ಬಗ್ಗೆ ಸಹ ಮಾಹಿತಿ ಬೇಕಾಗಿದೆ. ನಾನು ಅದನ್ನು ಶೀಘ್ರದಲ್ಲಿಯೇ ತೋರಿಸುವೆನು. ಈಗ ನೇರವಾಗಿ "mail()" ಫಂಕ್ಷನ್ ಗೆ ಹೋಗೋಣ. |
04:58 | "mail()" ಫಂಕ್ಷನ್ ಹೀಗಿದೆ. mail, ನಂತರ ಮೊದಲ ವೇರಿಯೇಬಲ್, ನಾವು ಮೆಸೇಜ್ ಅನ್ನು ಕಳಿಸಬೇಕಾದ ವಿಳಾಸ. ಹಾಗಾಗಿ ನಾನು ಇಲ್ಲಿ $to ಎಂದು ಟೈಪ್ ಮಾಡುವೆನು. |
05:11 | ನಂತರ ಇ-ಮೇಲ್ ನ ವಿಷಯ. ಇಲ್ಲಿ ಅದು $subject ಆಗಿದೆ. |
05:15 | ಅದು ಇಲ್ಲಿದೆ. ನಂತರ ಇ-ಮೇಲ್ ನಲ್ಲಿರುವ ವಿಷಯ, ಇದು $body ಆಗಿದೆ. |
05:20 | ಇಲ್ಲಿ ನಾವು $body ಯನ್ನು ಹೀಗೆ ಬರೆಯೋಣ. "This is an email from $name". ನಾವು ಇ-ಮೇಲ್ ನ ಒಳಗೆ ಕೂಡ '$name' ಅನ್ನು ಸೇರಿಸುತ್ತಿದ್ದೇವೆ. |
05:36 | ನಂತರ backslash n (\n) ಎಂದರೆ new line ಅನ್ನು ಬಳಸಿ. ಇದು ಎರಡು ಹೊಸ ಸಾಲುಗಳಿಗಾಗಿ. |
05:42 | ನಂತರ ಇಲ್ಲಿ ಸೇರಿಸುವ '$message' ಅನ್ನು ನಾವು ಇಕೋ ಮಾಡಬೇಕು. |
05:49 | ನಮ್ಮ '$body' ಇಲ್ಲಿ ಸಾಮಾನ್ಯ ಮೆಸೇಜ್ ಅನ್ನು ಒಳಗೊಂಡಿದೆ. ಫಾರ್ಮ್ ನಲ್ಲಿ ನಮೂದಿಸಿದ ಬಳಕೆದಾರರ ಹೆಸರು, ನಂತರ ಎರಡು ಖಾಲಿ ಸಾಲುಗಳು. ಆನಂತರ, ಇಲ್ಲಿ ನಮ್ಮ ಫಾರ್ಮ್ ನಲ್ಲಿ ನಮೂದಿಸಿದ '$message' ಇದೆ. OK? |
06:03 | ಇವುಗಳನ್ನು ತೆಗೆದುಬಿಡೋಣ. |
06:06 | ಹೀಗೆ ಚೆನ್ನಾಗಿ ಕಾಣುತ್ತಿದೆ. |
06:09 | "mail()" ಫಂಕ್ಷನ್ ಹೇಗ ಕೆಲಸ ಮಾಡುತ್ತದೆ ಎಂದು ನೀವು ಯೋಚಿಸಬಹುದು. ಆದರೆ, ಪಿ.ಎಚ್.ಪಿ ಯಲ್ಲಿ ಇ-ಮೇಲ್ ಕಳುಹಿಸುವುದು ತುಂಬ ಸುಲಭ. |
06:21 | ಆದರೆ ನಾವು ಇ-ಮೇಲ್ ಅನ್ನು ಕಳುಹಿಸುವಾಗ, ಅಲ್ಲಿ ಕೆಲವು ಸಮಸ್ಯೆಗಳಿರುವುದನ್ನು ನೋಡಬಹುದು. |
06:27 | ನಮಗೆ ಇಲ್ಲಿ, "mail() function "send mail_from" not set in 'php dot ini' or custom "From:" header missing" ಎಂಬ ವಾರ್ನಿಂಗ್ ಸಿಕ್ಕಿದೆ. |
06:36 | "send mail from" ಅನ್ನು ನನ್ನ 'ini' ನಲ್ಲಿ ನಾನು ಸೆಟ್ ಮಾಡಿಲ್ಲ. ಅದನ್ನು ಬಿಟ್ಟುಬಿಟ್ಟಿದ್ದೇನೆ. ನಾನು ಸ್ವತಃ ಅದನ್ನು ಮಾಡುವೆನು. |
06:44 | ನಾವು ಅದನ್ನು ಮಾಡಿದ ನಂತರ, ಇನ್ನೊಂದು ಎರರ್ ಅನ್ನು ಪಡೆಯುವೆವು. |
06:48 | ಅದನ್ನು ಸರಿಪಡಿಸುವುದನ್ನು ವಿಡಿಯೋ ದ ಮುಂದಿನ ಭಾಗದಲ್ಲಿ ನಾನು ತೋರಿಸುವೆನು. |
06:52 | ನಂತರ ಸಿಗುವ ಉಳಿದ ಎರರ್ ಗಳ ಬಗ್ಗೆ ಮುಂದಿನ ಭಾಗದಲ್ಲಿ ನೋಡೋಣ. |
06:56 | ಈ ಸ್ಕ್ರಿಪ್ಟ್ ನ ಅನುವಾದಕಿ, ಅಂಜನಾ ಅನಂತ್ ನಾಗ್ ಮತ್ತು ಧ್ವನಿ ಡಾ. ನವೀನ್ ಭಟ್, ಉಪ್ಪಿನಪಟ್ಟಣ. ಧನ್ಯವಾದಗಳು. |