PHP-and-MySQL/C4/Cookies-Part-1/Kannada
From Script | Spoken-Tutorial
Revision as of 16:36, 27 April 2020 by Sandhya.np14 (Talk | contribs)
Time | Narration |
00:00 | php cookies ನ ಕುರಿತಾದ ಟ್ಯುಟೋರಿಯಲ್ ಗೆ ಸ್ವಾಗತ. |
00:04 | ನೀವು ಬಳಕೆದಾರರ ವಿವರಗಳನ್ನು ಸ್ಟೋರ್ ಮಾಡುವಂತಹ ವಿಶೇಷವಾದ ವೆಬ್ಸೈಟ್ ಗಳನ್ನು ಹೊಂದಿದ್ದರೆ, Cookies ತುಂಬ ಉಪಯುಕ್ತವಾಗಿದೆ. |
00:11 | cookie ಎಂದರೆ- ಇದು ವೆಬ್ ಸರ್ವರ್ ನಿಂದ ನಿಮ್ಮ ಕಂಪ್ಯೂಟರ್ ಅಥವಾ ಬಳಕೆದಾರರ ಕಂಪ್ಯೂಟರ್ ನಲ್ಲಿ ಸ್ಟೋರ್ ಮಾಡಿದಂತಹ ಡಾಟಾದ ಸಮೂಹವಾಗಿದೆ. |
00:18 | ಅಂದರೆ ನಾವು ವೆಬ್ ಸೈಟ್ ಗೆ ಹೋದಾಗ, ನಮ್ಮ ವಿವರಗಳು ಸ್ಟೋರ್ ಆಗುತ್ತವೆ, ಮತ್ತು 'Remember me' ಅಂತಹ ಆಯ್ಕೆಗಳನ್ನು ಆರಿಸಿಕೊಂಡಿದ್ದರೆ, ನಾವು ಇನ್ನೊಮ್ಮೆ ಅದನ್ನು ಭೇಟಿಯಾದಾಗ ಅದು ನಮ್ಮ ವಿವರಗಳನ್ನು ಕೊಡುತ್ತದೆ. |
00:30 | ಹಾಗಾಗಿ ನೀವು ಲಾಗಿನ್ ಆಗಿರಲೇ ಬೇಕಾಗಿಲ್ಲ. |
00:32 | ಆದರೆ ನಾವು 'remember me' ಅಂತಹ ಬಟನ್ ಅನ್ನು ಆಯ್ಕೆ ಮಾಡಿಕೊಳ್ಳದೇ ಇದ್ದರೆ, ನೀವು ಸೆಷನ್(ಅವಧಿ) ಗಳೊಂದಿಗೆ ವ್ಯವಹರಿಸುತ್ತೀರಿ ಅಂದರೆ ನೀವು ಬ್ರೌಸರ್ ಅನ್ನು ಮುಚ್ಚುತ್ತಿದ್ದಂತೆ ನಿಮ್ಮ ಸೆಷನ್ ಕೂಡ ಮುಗಿಯುತ್ತದೆ. |
00:42 | ಹಾಗಾಗಿ ಸೆಶನ್ ಗಳು ನೇರವಾಗಿ ಕೊಲ್ಲಲ್ಪಡುತ್ತವೆ ಆದರೆ cookies ಮುಂದಿನ ಬಳಕೆಗಾಗಿ ಸ್ಟೋರ್ ಆಗಿರುತ್ತವೆ. |
00:50 | ಹಾಗಾಗಿ ನಾವು ಇದನ್ನು ಆರಂಭಿಸೋಣ ಮತ್ತು cookie ಅನ್ನು ರಚಿಸುವುದು ಹೇಗೆ ಎಂದು ನೋಡೋಣ. |
00:53 | ನೀವು ಇದನ್ನು setcookie() ಫಂಕ್ಷನ್ ಅನ್ನು ಬಳಸಿ ಮಾಡಬಹುದು. |
00:55 | ಈ ಫಂಕ್ಷನ್ 5 ಪ್ಯಾರಾಮೀಟರ್ ಗಳನ್ನು ತೆಗೆದುಕೊಳ್ಳುತ್ತದೆ ಆದರೆ ನಾನು ಕೇವಲ 3 ಅನ್ನು ಬಳಸುವೆನು. |
01:00 | ಮೊದಲನೆಯದು ಬಹುಮುಖ್ಯವಾದದ್ದು, ಕುಕಿ ಯ ಹೆಸರು ಮತ್ತು ನಾನು ಅದನ್ನು 'name' ಎಂದು ಇಡುವೆನು. |
01:05 | ಎರಡನೆಯದು ನಾವು ಈ ಕುಕಿಯ ಒಳಗೆ ಸ್ಟೋರ್ ಮಾಡಬೇಕಾದ ಡಾಟಾ ಆಗಿರುತ್ತದೆ. ನಾನು ಇಲ್ಲಿ "Alex" ಎಂದು ಟೈಪ್ ಮಾಡುವೆನು. |
01:12 | ಮುಂದಿನದು ಸ್ವಲ್ಪ ಕೌಶಲ್ಯಯುಕ್ತವಾಗಿದೆ. |
01:15 | ಇದು ಇದರ ಮುಕ್ತಾಯದ ಸಮಯವಾಗಿದೆ. |
01:18 | ಈಗ ಇದನ್ನು ಸೆಕೆಂಡ್ ಗಳಲ್ಲಿ ಸೆಟ್ ಮಾಡಬೇಕು. |
01:21 | ಮತ್ತು ಇದನ್ನು ಪ್ರತಿನಿಧಿಸಲು ನಾನು '$exp' ಎಂಬ ಒಂದು ವೇರಿಯೇಬಲ್ ಅನ್ನು ರಚಿಸುವೆನು, ಇದು ಎಕ್ಸ್ಪೈರಿ ಎಂದು ಸೂಚಿಸುತ್ತದೆ. ಮತ್ತು ಇದು time() ಗೆ ಸಮವಾಗಿರುತ್ತದೆ. |
01:28 | ನಾನು ಇಲ್ಲಿ ಒಂದು ವ್ಯಾಲ್ಯುವನ್ನು ಸೇರಿಸುವೆನು. |
01:31 | ಈಗ ಸದ್ಯಕ್ಕೆ ನಾನು ಸೊನ್ನೆಯನ್ನು ಸೇರಿಸುವೆನು. |
01:33 | ಹಾಗಾಗಿ ನಾನು ಇದನ್ನು echo ಮಾಡುವೆನು ಮತ್ತು ಈಗ ಸದ್ಯಕ್ಕೆ ಈ cookie ಫಂಕ್ಷನ್ ಅನ್ನು ತೆಗೆದು ಬಿಡುವೆನು. |
01:39 | ನಾನು ಇಲ್ಲಿ ಕೇವಲ time (ಸಮಯವನ್ನು) ಅನ್ನು ಮಾತ್ರ ಎಕೋ ಮಾಡುವೆನು. |
01:43 | ಈಗ ರಿಫ್ರೆಶ್ ಮಾಡೋಣ. ಇಲ್ಲಿ ಸ್ವಲ್ಪ ಉದ್ದದ ಅಂಕಿಗಳನ್ನು ನೋಡುವೆವು. |
01:47 | ಇದು ಯುನಿಕ್ (ಅನನ್ಯವಾದ) time-stamp ಆಗಿದೆ. |
01:50 | ಮತ್ತು ಈ ಯುನಿಕ್ ಟೈಮ್ ಸ್ಟ್ಯಾಂಪ್ ಇದು 1ನೇ ಜನವರಿ 1970 ರ ಮೊದಲಿನ ಸೆಕಂಡ್ ಗಳ ಸಂಖ್ಯೆಯಾಗಿದೆ. |
01:56 | ಹಾಗಾಗಿ 1970 ನೆ ಇಸ್ವಿಯ ಜನವರಿ 1ನೇ ತಾರಿಕು 12 am ಆಗಿದೆ. |
02:02 | ಇಲ್ಲಿ ಸೆಕೆಂಡ್ ಗಳ ಸಂಖ್ಯೆಯು ಮುಂದಿನ ದಿನಾಂಕಕ್ಕೆ ಸಮವಾಗಿರುತ್ತದೆ ಎಂದು ಕೊಳ್ಳುವೆನು. |
02:10 | ಉದಾಹರಣೆಗೆ ಈಗ ಸದ್ಯಕ್ಕೆ ಇದು 88 ಇದೆ, ಈಗ 89 ಮತ್ತು ನಾನು ಪ್ರತಿ ಸೆಕೆಂಡ್ ಗೊಮ್ಮೆ ರಿಫ್ರೆಶ್ ಮಾಡಿದಾಗ, ಇದು ಹೆಚ್ಚಳವಾಗುತ್ತದೆ. |
02:20 | ಹಾಗಾಗಿ ಇಲ್ಲಿ ನಿರ್ದಿಷ್ಟವಾದ ವ್ಯಾಲ್ಯುವನ್ನು ಸೇರಿಸುವುದು ತುಂಬ ಉಪಯುಕ್ತವಾಗಿದೆ. |
02:28 | ಈಗ ನಾವು ಸಮಯವನ್ನು ಒಂದು ದಿನಕ್ಕೆ ಇರುವ ಸೆಕೆಂಡ್ ಗಳಲ್ಲಿ ಕಂಡುಹಿಡಿಯಬೇಕು ಏಕೆಂದರೆ, ನಾನು ಈ ಕುಕಿಯು ಒಂದು ದಿನದಲ್ಲಿ ಮುಕ್ತಾಯವಾಗಲು ಬಯಸುವೆನು. |
02:34 | ಹಾಗಾಗಿ ನಾನು 24 ಅನ್ನು 60 ರಿಂದ ಗುಣಿಸಿ, ಒಂದು ದಿನಕ್ಕೆ ಇರುವ ನಿಮಿಷಗಳನ್ನು ಲೆಕ್ಕ ಹಾಕುವೆನು. |
02:39 | ಬಂದ ಉತ್ತರವನ್ನು 60 ರಿಂದ ಗುಣಿಸಿ, ಒಂದು ದಿನಕ್ಕೆ ಇರುವ ಸೆಕೆಂಡ್ ಗಳನ್ನು ಪಡೆಯುವೆನು, ಅಂದರೆ ಅದು 86,400 ಆಗಿದೆ. |
02:47 | ಹಾಗಾಗಿ ನಾನು ಈ ಸೊನ್ನೆಯನ್ನು 86400 ಎಂದು ಬದಲಿಸಿದರೆ, ನಮ್ಮ ವೇರಿಯೇಬಲ್ "expire" ಈಗ ಮುಂದಿನ ಒಂದು ದಿನದ ಸಮಯವನ್ನು ಹಿಡಿದಿಡುತ್ತದೆ. |
02:56 | ಸಮಯವನ್ನು ಉಳಿಸಲು ನಾನು ಇದನ್ನು ಕಾಪಿ ಮಾಡಿ, ಇಲ್ಲಿ ನನ್ನ 'expire' ವೇರಿಯೇಬಲ್ ನಲ್ಲಿ ಇಡುವೆನು. |
03:02 | ಈಗ ಈ ಫಂಕ್ಷನ್ 'name' ಎಂಬ cookie ಯನ್ನು 'Alex' ಎಂಬ ವ್ಯಾಲ್ಯುವಿನೊಂದಿಗೆ ಸೆಟ್ ಮಾಡುತ್ತದೆ ಮತ್ತು ಇದು ಒಂದು ದಿನದಲ್ಲಿ ಮುಕ್ತಾಯ(ಎಕ್ಸ್ಪೈರಿ) ಆಗುತ್ತದೆ. ಇದು 'time' ಫಂಕ್ಷನ್ ಅನ್ನು ಬಳಸಿ ಸೆಕೆಂಡ್ ಗಳನ್ನು ತೆಗೆದುಕೊಳ್ಳುತ್ತದೆ. |
03:13 | ಈಗ ಈ ಪೇಜ್ ಅನ್ನು ರಿಫ್ರೆಶ್ ಮಾಡೋಣ. ನಾವು ಯಾವುದೇ ಎರರ್ ಇಲ್ಲದಿರುವುದನ್ನು ಇಲ್ಲಿ ನೋಡಬಹುದು, ಹಾಗಾದರೆ ಇದು ಕೆಲಸ ಮಾಡುತ್ತಿದೆ. |
03:19 | ಈಗ ನಾನು ಇದನ್ನು ಕಮೆಂಟ್ ಮಾಡಲು ಬ್ಲಾಕ್ ಕಮೆಂಟಿಂಗ್ ಅನ್ನು ಬಳಸುವೆನು. |
03:23 | ನಾನು ಇದರ ಕೆಳಗೆ ಈ cookie ಅನ್ನು echo ಮಾಡುವೆನು. |
03:26 | ನಾನು ಇದನ್ನು ಕಮೆಂಟ್ ಮಾಡಲು ಕಾರಣವೇನೆಂದರೆ, ಪ್ರತಿ ಬಾರಿ ಬಳಕೆದಾರ ಪೇಜ್ ಗೆ ಬಂದಾಗ ಕುಕಿಯನ್ನು ಸೆಟ್ ಮಾಡುವ ಅವಶ್ಯಕತೆಯಿಲ್ಲ. |
03:33 | ನೀವು ಲಾಗ್ – ಇನ್ ಸ್ಕ್ರಿಪ್ಟ್ ಅನ್ನು ಬಳಸುತ್ತಿದ್ದರೆ, ನಿಮ್ಮ ಬಳಕೆದಾರರಿಗೆ ವೆಬ್ಸೈಟ್ ಗೆ ಲಾಗಿನ್ ಆಗಲು ಬಿಟ್ಟು, ನಂತರ ಇದನ್ನು ಒಮ್ಮೆ ಕೊಟ್ಟರೆ ನಂತರ ಕುಕಿ ಯು ಸ್ಟೋರ್ ಆಗುವುದು. |
03:41 | ನಾವು ಇಲ್ಲಿ ಸೆಟ್ ಮಾಡಿದ ಸಮಯದೊಳಗೆ ಇದನ್ನು ಬಳಸಬಹುದು. |
03:46 | ನಾನು ಈಗ ಇಲ್ಲಿ echo ಡಾಲರ್ ಚಿಹ್ನೆ, ನಂತರ 'underscore cookie' ಎಂದು ಟೈಪ್ ಮಾಡುವೆನು. |
03:52 | ಇದರ ಒಳಗೆ ಕುಕಿ ಯ ಹೆಸರು ಅಂದರೆ ನಾನು 'name' ಎಂದು ಟೈಪ್ ಮಾಡುವೆನು. ರಿಫ್ರೆಶ್ ಮಾಡಿದರೆ ನೀವು 'Alex' ಎಂದು ನೋಡಬಹುದು. |
03:59 | ನೀವು ಇದನ್ನು ಪರೀಕ್ಷಿಸಬಹುದು. ನಾನು ನನ್ನ ಬ್ರೌಸರ್ ಅನ್ನು ಮುಚ್ಚಿದರೂ, ಕಂಪ್ಯೂಟರ್ ಅನ್ನು ರಿಸ್ಟಾರ್ಟ್ ಮಾಡಿದರೂ, ನಾನು ಈ ಪೇಜ್ ಗೆ ಹಿಂದುರಿಗಿದರೆ ನಾನು Alex ಎಂಬುದನ್ನು ನೋಡಬಹುದು ಏಕೆಂದರೆ ಇದು ನನ್ನ ಕಂಪ್ಯೂಟರ್ ನಲ್ಲಿ ಸ್ಟೋರ್ ಆಗಿದೆ. |
04:11 | ಈಗ ನಾನು ಇನ್ನೊಂದು cookie ಯನ್ನು ಸೆಟ್ ಮಾಡಿದರೆ, ಉದಾಹರಣೆಗೆ ನಾನು 'age' ಎಂಬ ಕುಕಿ ಯನ್ನು ಸೆಟ್ ಮಾಡುವೆನು, ಇದರ ವ್ಯಾಲ್ಯು 19 ಆಗಿರಲಿ. |
04:24 | ಮತ್ತು ಎಕ್ಸ್ಪೈರಿ ಟೈಮ್ ಅನ್ನು ಇದನ್ನೆ ಇಡುವೆನು. |
04:29 | ಇದನ್ನು ಮೇಲೆ ಇಡೋಣ. |
04:31 | ಇದು ಚೆನ್ನಾಗಿ ಕಾಣುವಂತೆ ಮಾಡಲು ನಾನು ಬ್ಲಾಕ್ ಕಮೆಂಟ್ ಅನ್ನು ಒಂದು ಸಾಲಿನ ಕಮೆಂಟ್ ಆಗಿ ಪರಿವರ್ತಿಸುವೆನು. |
04:36 | ನಮ್ಮ ಎಕ್ಸ್ಪೈರಿ ಟೈಮ್ ಗೆ ನಾನು ಇನ್ನೊಂದು ಕುಕಿ ಯನ್ನು ಸೆಟ್ ಮಾಡುತ್ತಿದ್ದೇನೆ. |
04:41 | ಅದು ಕೂಡ ಅದೇ ಮುಕ್ತಾಯದ ಸಮಯವನ್ನು (ಎಕ್ಸ್ಪೈರಿ ಟೈಮ್) ಹೊಂದಿರುತ್ತದೆ. ಈಗ ಇದು ಬಂದಿದೆಯೇ ಎಂದು ನೋಡೋಣ. |
04:46 | ಈಗ ಇದನ್ನು ತೆಗೆದು ಬಿಡೋಣ. |
04:48 | ನಾವು ಅದೇ ಮುಕ್ತಾಯದ ಸಮಯವನ್ನು ಹೊಂದಿರುವ ಇನ್ನೊಂದು ಕುಕಿ ಯನ್ನು ಸೆಟ್ ಮಾಡಿದ್ದೇವೆ. |
04:51 | ರಿಫ್ರೆಶ್ ಮಾಡೋಣ. ಸರಿ ಅದು ಸೆಟ್ ಆಗಿದೆ. |
04:55 | ಈಗ ನಾನು ಇದನ್ನು comment ಮಾಡುವೆನು ಮತ್ತು ಇದನ್ನು echo ಮಾಡುವೆನು. |
05:01 | ಹಾಗಾಗಿ ಒಂದೇ ಪೇಜ್ ನಲ್ಲಿ ಒಂದಕ್ಕಿಂತ ಹೆಚ್ಚು ಕುಕಿ ಗಳನ್ನು ಸೆಟ್ ಮಾಡಬಹುದೆಂದು ಇಲ್ಲಿ ನೋಡಬಹುದು. ಇದನ್ನು ರಿಫ್ರೆಶ್ ಮಾಡಿದರೆ ನಾವು 19 ಎಂದು ಪಡೆಯುತ್ತೇವೆ. |
05:07 | ನಾವು ಇವರಡೂ ಕುಕಿ ಗಳನ್ನು ಒಂದೇ ವಾಕ್ಯದಲ್ಲಿ ಕೂಡ ತೋರಿಸಬಹುದು. |
05:11 | ಅದಕ್ಕಾಗಿ ನಾನು : echo ಅಂಡರ್ಸ್ಕೋರ್ cookie, "name" ಮತ್ತು concatenate "is" ಮತ್ತು ನಂತರ ಮತ್ತೊಂದು concatenate ನಂತರ "age" ಎಂದು ಟೈಪ್ ಮಾಡುವೆನು. |
05:27 | ಹಾಗಾಗಿ ನಾವು "Alex is 19" ಎಂಬ ಫಲಿತಾಂಶವನ್ನು ಪಡೆಯುವೆವು. ಇದು ನಾವು ಸ್ಟೋರ್ ಮಾಡಿದ ಕುಕಿ ಗಳಿಂದ ಪಡೆದದ್ದಾಗಿದೆ. |
05:34 | ಈಗ ಮತ್ತೆ ನಾನು ನನ್ನ ಬ್ರೌಸರ್ ಅನ್ನು ಮುಚ್ಚಿದರೂ, ಕಂಪ್ಯೂಟರ್ ಅನ್ನು ರಿಸ್ಟಾರ್ಟ್ ಮಾಡಿದರೂ, ಅಥವ ಎರಡು ಗಂಟೆ ಬಿಟ್ಟು ಬಂದರೂ, ಈ ಮಾಹಿತಿಯು ಈ ಕಂಪ್ಯೂಟರ್ ನಲ್ಲಿ ಸ್ಟೋರ್ ಆಗಿರುತ್ತದೆ ಮತ್ತು ಈ ಪೇಜ್ ನಿಂದ ಬಳಸಲು ಸಿದ್ಧವಾಗಿರುತ್ತದೆ. |
05:44 | ಮತ್ತು ಇವುಗಳನ್ನು ಬಳಸಲು ತುಂಬ ಉಪಯುಕ್ತ ಎಂದು ನೋಡಬಹುದು, ರಚಿಸಲೂ ಸಹ ಸರಳವಾದದ್ದು, ಮತ್ತು ಬಳಕೆದಾರರಿಗೆ ಎಕೋ ಮಾಡಲು ಸಹ ಸುಲಭವಾಗಿದೆ. |
05:53 | ಈಗ ನಾವು ಬಳಸಬಹುದಾದ ಫಂಕ್ಷನ್ ಅಂದರೆ, print r() ಅಥವಾ 'print ಅಂಡರ್ಸ್ಕೋರ್ r' ಆಗಿದೆ. |
05:58 | ಮತ್ತು ನಾವು ಇಲ್ಲಿ 'dollar ಅಂಡರ್ಸ್ಕೋರ್ cookie' ಎಂದು ಎಕೋ ಮಾಡಬಹುದು. ಇದನ್ನು ನಾವು ಆಮೇಲೆ ಅಲೈನ್ ಮಾಡಬಹುದು. |
06:05 | ರಿಫ್ರೆಶ್ ಮಾಡಿ ಮತ್ತು ಇಲ್ಲಿ ನಾವು ಒಂದು ಅರೇ ಯನ್ನು ಪಡೆದಿದ್ದೇವೆ ಮತ್ತು ನಾವು ವಿಭಿನ್ನವಾದ ವ್ಯಾಲ್ಯುವನ್ನು ಪಡೆದಿದ್ದೇವೆ. |
06:12 | ಇಲ್ಲಿ ನಾವು 'name' ಅನ್ನು ಪಡೆದಿದ್ದೇವೆ ಮತ್ತು ಇದು "Alex" ಗೆ ಸಮವಾಗಿದೆ ಮತ್ತು ಇಲ್ಲಿ 'age' ಅನ್ನು ಪಡೆದಿದ್ದೇವೆ ಮತ್ತು ಅದು 19 ಕ್ಕೆ ಸಮವಾಗಿದೆ. |
06:22 | ಇವು cookie ಗಳು ಮತ್ತು ಅವು ಸೆಟ್ ಆಗಿವೆ ಮತ್ತು ಇವು cookies ನ ವ್ಯಾಲ್ಯುಗಳಾಗಿವೆ. |
06:27 | ನಿಮಗಾಗಿ ನೀವು ಎಕೋ ಮಾಡಿಕೊಳ್ಳುವಾಗ ಇವು ಉಪಯುಕ್ತವಾಗಿವೆ. |
06:31 | ಇದರ ಕುರಿತು ಇನ್ನೊಂದು ಫಂಕ್ಷನ್ ಇದೆ ಇದನ್ನು ಎರಡನೆಯ ಭಾಗದಲ್ಲಿ ತೋರಿಸುವೆನು ಮತ್ತು ನಾವು ಕುಕಿ ಸೆಟ್ ಆಗಿದೆಯೇ ಇಲ್ಲವೋ ಎಂದು ನೋಡಲು if ಸ್ಟೇಟ್ಮೆಂಟ್ ಅನ್ನು ಬಳಸುವೆನು. |
06:41 | ಮತ್ತು ಈ ಕುಕಿ ಯನ್ನು ಅನ್ಸೆಟ್ ಮಾಡುವುದು ಹೇಗೆ ಎಂದು ತೋರಿಸುವೆನು. |
06:45 | ಎರಡನೆಯ ಭಾಗದಲ್ಲಿ ಭೇಟಿಯಾಗೋಣ. ಈ ಸ್ಕ್ರಿಪ್ಟ್ ನ ಅನುವಾದಕಿ, ಮೈಸೂರಿನಿಂದ ಅಂಜನಾ ಅನಂತ್ ನಾಗ್ ಮತ್ತು ಧ್ವನಿ ಡಾ. ನವೀನ್ ಭಟ್, ಉಪ್ಪಿನಪಟ್ಟಣ. |