PHP-and-MySQL/C4/Cookies-Part-1/Kannada

From Script | Spoken-Tutorial
Jump to: navigation, search
Time Narration
00:00 php cookies ನ ಕುರಿತಾದ ಟ್ಯುಟೋರಿಯಲ್ ಗೆ ಸ್ವಾಗತ.
00:04 ನೀವು ಬಳಕೆದಾರರ ವಿವರಗಳನ್ನು ಸ್ಟೋರ್ ಮಾಡುವಂತಹ ವಿಶೇಷವಾದ ವೆಬ್ಸೈಟ್ ಗಳನ್ನು ಹೊಂದಿದ್ದರೆ, Cookies ತುಂಬ ಉಪಯುಕ್ತವಾಗಿದೆ.
00:11 cookie - ಇದು ವೆಬ್-ಸರ್ವರ್ ನಿಂದ ಬಳಕೆದಾರರ ಕಂಪ್ಯೂಟರ್ ನಲ್ಲಿ ಸ್ಟೋರ್ ಮಾಡಲಾದ ಡಾಟಾದ ಸಮೂಹವಾಗಿದೆ.
00:18 ಅಂದರೆ ನಾವು ವೆಬ್ಸೈಟ್ ಗೆ ಹೋದಾಗ, ನಮ್ಮ ವಿವರಗಳು ಸ್ಟೋರ್ ಆಗುತ್ತವೆ, ಮತ್ತು 'Remember me' ಅಂತಹ ಆಯ್ಕೆಗಳನ್ನು ಆರಿಸಿಕೊಂಡಿದ್ದರೆ, ನಾವು ಇನ್ನೊಮ್ಮೆ ಅದನ್ನು ಭೇಟಿಯಾದಾಗ ಅದು ನಮ್ಮ ವಿವರಗಳನ್ನು ಕೊಡುತ್ತದೆ.
00:30 ಹಾಗಾಗಿ ನೀವು ಲಾಗಿನ್ ಆಗಿರಲೇ ಬೇಕಾಗಿಲ್ಲ.
00:32 ಆದರೆ ನಾವು 'remember me' ಅಂತಹ ಬಟನ್ ಅನ್ನು ಆಯ್ಕೆ ಮಾಡಿಕೊಳ್ಳದಿದ್ದರೆ, ಆಗ ಸೆಷನ್ ಗಳೊಂದಿಗೆ ವ್ಯವಹರಿಸುತ್ತೇವೆ. ಬ್ರೌಸರ್ ಅನ್ನು ಮುಚ್ಚುತ್ತಿದ್ದಂತೆ ನಮ್ಮ ಸೆಷನ್ ಕೂಡ ಮುಗಿಯುತ್ತದೆ.
00:42 ಹಾಗಾಗಿ ಸೆಶನ್ ಗಳು ಮುಗಿದುಹೋಗುತ್ತವೆ ಆದರೆ cookies ಮುಂದಿನ ಬಳಕೆಗಾಗಿ ಸ್ಟೋರ್ ಆಗಿರುತ್ತವೆ.
00:50 ನಾವು ಇದನ್ನು ಆರಂಭಿಸೋಣ ಮತ್ತು cookie ಅನ್ನು ರಚಿಸುವುದು ಹೇಗೆ ಎಂದು ನೋಡೋಣ.
00:53 ನೀವು ಇದನ್ನು setcookie() ಫಂಕ್ಷನ್ ಅನ್ನು ಬಳಸಿ ಮಾಡಬಹುದು.
00:55 ಈ ಫಂಕ್ಷನ್ 5 ಪ್ಯಾರಾಮೀಟರ್ ಗಳನ್ನು ತೆಗೆದುಕೊಳ್ಳುತ್ತದೆ. ಆದರೆ ನಾನು ಕೇವಲ 3 ಅನ್ನು ಬಳಸುವೆನು.
01:00 ಮೊದಲನೆಯದು ಮುಖ್ಯವಾದದ್ದು, ಕುಕಿಯ ಹೆಸರು. ನಾನು ಅದನ್ನು 'name' ಎಂದು ಇಡುವೆನು.
01:05 ಎರಡನೆಯದು ಈ ಕುಕಿಯ ಒಳಗೆ ಸ್ಟೋರ್ ಮಾಡಬೇಕಾದ ಡಾಟಾ ಆಗಿದೆ. ಇಲ್ಲಿ "Alex" ಎಂದು ಟೈಪ್ ಮಾಡುವೆನು.
01:12 ಮುಂದಿನದು ಸ್ವಲ್ಪ ವಿಶೇಷವಾಗಿದೆ.
01:15 ಇದು ಇದರ ಮುಕ್ತಾಯದ ಸಮಯವಾಗಿದೆ.
01:18 ಈಗಇದನ್ನು ಸೆಕೆಂಡ್ ಗಳಲ್ಲಿ ಸೆಟ್ ಮಾಡಬೇಕು.
01:21 ಇದನ್ನು ಎಕ್ಸ್ಪೈರಿ ಎಂದು ಸೂಚಿಸಲು '$exp' ಎಂಬ ವೇರಿಯೇಬಲ್ ಅನ್ನು ರಚಿಸುವೆನು. ಇದು time() ಗೆ ಸಮವಾಗಿದೆ.
01:28 ನಾನು ಇಲ್ಲಿ ಒಂದು ವ್ಯಾಲ್ಯುವನ್ನು ಸೇರಿಸುವೆನು.
01:31 ಈಗ ಸದ್ಯಕ್ಕೆ ಸೊನ್ನೆಯನ್ನು ಸೇರಿಸುವೆನು.
01:33 ಸದ್ಯಕ್ಕೆ ಈ cookie ಫಂಕ್ಷನ್ ಅನ್ನು ತೆಗೆದು ಬಿಡುವೆನು. ಇದು ಏನು ಮಾಡುತ್ತದೆ ಎಂದು ನಿಮಗೆ ತೋರಿಸಲು,
01:39 ಇಲ್ಲಿ ಕೇವಲ time (ಸಮಯವನ್ನು) ಅನ್ನು ಮಾತ್ರ ಎಕೋ ಮಾಡುವೆನು.
01:43 ರಿಫ್ರೆಶ್ ಮಾಡೋಣ. ಇಲ್ಲಿ ಸಾಕಷ್ಟುಅಂಕಿಗಳನ್ನು ನೋಡುವೆವು.
01:47 ಇದು ಯುನಿಕ್ time-stamp ಆಗಿದೆ.
01:50 ಈ ಯುನಿಕ್ ಟೈಮ್ ಸ್ಟ್ಯಾಂಪ್, 1ನೇ ಜನವರಿ 1970 ರ ಮೊದಲಿನ ಸೆಕಂಡ್ ಗಳ ಸಂಖ್ಯೆಯಾಗಿದೆ.
01:56 1970 ನೆ ಇಸ್ವಿಯ ಜನವರಿ 1ನೇ ತಾರಿಕು 12 am ಆಗಿದೆ.
02:02 ಇಲ್ಲಿರುವ ಸೆಕೆಂಡ್ ಗಳ ಸಂಖ್ಯೆಯು ಮುಂದಿನ ದಿನಾಂಕಕ್ಕೆ ಸಮವಾಗಿದೆ ಎಂದುಕೊಳ್ಳುವೆನು.
02:10 ಉದಾಹರಣೆಗೆ, ಈಗ ಸದ್ಯಕ್ಕೆ ಇದು 88 ಇದೆ, ಈಗ 89. ನಾನುರಿಫ್ರೆಶ್ ಮಾಡಿದಾಗ, ಪ್ರತಿ ಸೆಕೆಂಡ್ ಗೊಮ್ಮೆ, ಇದು ಹೆಚ್ಚಾಗುತ್ತದೆ.
02:20 ಹಾಗಾಗಿ ಇಲ್ಲಿ ನಿರ್ದಿಷ್ಟವಾದ ವ್ಯಾಲ್ಯುವನ್ನು ಸೇರಿಸುವುದು ತುಂಬ ಉಪಯುಕ್ತವಾಗಿದೆ.
02:28 ಈಗ ಒಂದು ದಿನದಲ್ಲಿ ಎಷ್ಟು ಸೆಕೆಂಡ್ ಗಳೆಂದು ನೋಡಬೇಕು. ಏಕೆಂದರೆ, ಈ ಕುಕಿಗಾಗಿ ಸಮಯವನ್ನು ಒಂದು ದಿನ ಮಾತ್ರ ಕೊಡುವೆನು.
02:34 ನಾನು 24 ಅನ್ನು 60 ರಿಂದ ಗುಣಿಸಿ, ಒಂದು ದಿನದಲ್ಲಿರುವ ನಿಮಿಷಗಳನ್ನು ಲೆಕ್ಕ ಹಾಕುವೆನು.
02:39 ಇದಕ್ಕೆ 60 ರಿಂದ ಗುಣಿಸಿ, ಸೆಕೆಂಡ್ ಗಳನ್ನು ಪಡೆಯುವೆನು. ಅದು 86,400 ಆಗಿದೆ.
02:47 ನಾನು ಈ ಸೊನ್ನೆಯನ್ನು 86400 ಎಂದು ಬದಲಿಸಿದರೆ, ನಮ್ಮ ವೇರಿಯೇಬಲ್ "expire" ಈಗ ಮುಂದಿನ ಒಂದು ದಿನದ ಸಮಯವನ್ನು ಹಿಡಿದಿಡುತ್ತದೆ.
02:56 ಸಮಯವನ್ನು ಉಳಿಸಲು ನಾನು ಇದನ್ನು ಕಾಪಿ ಮಾಡಿ, ಇಲ್ಲಿ ನನ್ನ 'expire' ವೇರಿಯೇಬಲ್ ನಲ್ಲಿ ಇಡುವೆನು.
03:02 ಈ ಫಂಕ್ಷನ್ 'name' ಎಂಬ ಕುಕಿಯನ್ನು 'Alex' ವ್ಯಾಲ್ಯುವಿನೊಂದಿಗೆ ಸೆಟ್ ಮಾಡುತ್ತದೆ. ಇದು ಒಂದು ದಿನದಲ್ಲಿ ಮುಕ್ತಾಯ ಆಗುತ್ತದೆ. ಇದು 'time' ಫಂಕ್ಷನ್ ಅನ್ನು ಬಳಸಿ ಸೆಕೆಂಡ್ ಗಳನ್ನು ತೆಗೆದುಕೊಳ್ಳುತ್ತದೆ.
03:13 ಈಗ ಈ ಪೇಜ್ ಅನ್ನು ರಿಫ್ರೆಶ್ ಮಾಡೋಣ. ಇಲ್ಲಿ ಯಾವುದೇ ಎರರ್ ಇಲ್ಲ. ಹಾಗಾದರೆ ಇದು ಕೆಲಸ ಮಾಡುತ್ತಿದೆ.
03:19 ಈಗ ನಾನು ಇದನ್ನು ಕಾಮೆಂಟ್ ಮಾಡಲು ಬ್ಲಾಕ್-ಕಮೆಂಟಿಂಗ್ ಅನ್ನು ಬಳಸುವೆನು.
03:23 ನಾನು ಇದರ ಕೆಳಗೆ ಈ cookie ಅನ್ನು echo ಮಾಡುವೆನು.
03:26 ನಾನು ಇದನ್ನು ಕಮೆಂಟ್ ಮಾಡಲು ಕಾರಣವೇನೆಂದರೆ, ಪ್ರತಿ ಬಾರಿ ಬಳಕೆದಾರ ಪೇಜ್ ಗೆ ಬಂದಾಗ ಕುಕಿಯನ್ನು ಸೆಟ್ ಮಾಡುವ ಅವಶ್ಯಕತೆಯಿಲ್ಲ.
03:33 ನೀವು ಲಾಗ್ – ಇನ್ ಸ್ಕ್ರಿಪ್ಟ್ ಅನ್ನು ಬಳಸುತ್ತಿದ್ದರೆ, ನಿಮ್ಮ ಬಳಕೆದಾರರಿಗೆ ವೆಬ್ಸೈಟ್ ಗೆ ಲಾಗಿನ್ ಆಗಲು ಬಿಟ್ಟು, ನಂತರ ಇದನ್ನು ಒಮ್ಮೆ ಕೊಟ್ಟರೆ ನಂತರ ಕುಕಿ ಯು ಸ್ಟೋರ್ ಆಗುವುದು.
03:41 ನಾವು ಇಲ್ಲಿ ಸೆಟ್ ಮಾಡಿದ ಸಮಯದೊಳಗೆ ಇದನ್ನು ಬಳಸಬಹುದು.
03:46 ನಾನು ಈಗ ಇಲ್ಲಿ echo ಡಾಲರ್ ಚಿಹ್ನೆ, ನಂತರ 'underscore cookie' ಎಂದು ಟೈಪ್ ಮಾಡುವೆನು.
03:52 ಇದರ ಒಳಗೆ ಕುಕಿಯ ಹೆಸರು 'name' ಎಂದು ಟೈಪ್ ಮಾಡುವೆನು. ರಿಫ್ರೆಶ್ ಮಾಡಿದರೆ ನೀವು 'Alex' ಎಂದು ನೋಡಬಹುದು.
03:59 ನೀವು ಇದನ್ನು ಪರೀಕ್ಷಿಸಬಹುದು. ನಾನು ನನ್ನ ಬ್ರೌಸರ್ ಅನ್ನು ಮುಚ್ಚಿದರೂ, ಕಂಪ್ಯೂಟರ್ ಅನ್ನು ರಿಸ್ಟಾರ್ಟ್ ಮಾಡಿದರೂ, ಈ ಪೇಜ್ ಗೆ ಹಿಂದಿರುಗಿದರೆ ನಾನು Alex ಅನ್ನು ನೋಡಬಹುದು. ಏಕೆಂದರೆ ಇದು ನನ್ನ ಕಂಪ್ಯೂಟರ್ ನಲ್ಲಿ ಸ್ಟೋರ್ ಆಗಿದೆ.
04:11 ಈಗ ನಾನು ಇನ್ನೊಂದು cookie ಯನ್ನು ಸೆಟ್ ಮಾಡಿದರೆ, ಉದಾಹರಣೆಗೆ ನಾನು 'age' ಎಂಬ ಕುಕಿಯನ್ನು ಸೆಟ್ ಮಾಡುವೆನು. ಇದರ ವ್ಯಾಲ್ಯು 19 ಆಗಿರಲಿ.
04:24 ಎಕ್ಸ್ಪೈರಿ ಟೈಮ್ ಅನ್ನು ಇದನ್ನೆ ಇಡುವೆನು.
04:29 ಇದನ್ನು ಮೇಲೆ ಇಡೋಣ.
04:31 ಇದು ಚೆನ್ನಾಗಿ ಕಾಣುವಂತೆ ಮಾಡಲು ನಾನು ಬ್ಲಾಕ್-ಕಮೆಂಟ್ ಅನ್ನು ಒಂದು ಸಾಲಿನ ಕಮೆಂಟ್ ಆಗಿ ಪರಿವರ್ತಿಸುವೆನು.
04:36 ನಮ್ಮ ಎಕ್ಸ್ಪೈರಿ ಟೈಮ್ ಗೆ ನಾನು ಇನ್ನೊಂದು ಕುಕಿಯನ್ನು ಸೆಟ್ ಮಾಡುತ್ತಿದ್ದೇನೆ.
04:41 ಅದು ಕೂಡ ಅದೇ ಮುಕ್ತಾಯದ ಸಮಯವನ್ನು (ಎಕ್ಸ್ಪೈರಿ ಟೈಮ್) ಹೊಂದಿರುತ್ತದೆ. ಈಗ ಇದು ಬಂದಿದೆಯೇ ಎಂದು ನೋಡೋಣ.
04:46 ಈಗ ಇದನ್ನು ತೆಗೆದುಬಿಡೋಣ.
04:48 ನಾವು ಅದೇ ಮುಕ್ತಾಯದ ಸಮಯವನ್ನು ಹೊಂದಿರುವ ಇನ್ನೊಂದು ಕುಕಿಯನ್ನು ಸೆಟ್ ಮಾಡಿದ್ದೇವೆ.
04:51 ರಿಫ್ರೆಶ್ ಮಾಡೋಣ. ಸರಿ ಅದು ಸೆಟ್ ಆಗಿದೆ.
04:55 ಈಗ ನಾನು ಇದನ್ನು comment ಮಾಡುವೆನು ಮತ್ತು ಇದನ್ನು echo ಮಾಡುವೆನು.
05:01 ಒಂದೇ ಪೇಜ್ ನಲ್ಲಿ ಒಂದಕ್ಕಿಂತ ಹೆಚ್ಚು ಕುಕಿಗಳನ್ನು ಸೆಟ್ ಮಾಡಬಹುದೆಂದು ಇಲ್ಲಿ ನೋಡಬಹುದು. ಇದನ್ನು ರಿಫ್ರೆಶ್ ಮಾಡಿದರೆ ನಾವು 19 ಎಂದು ಪಡೆಯುತ್ತೇವೆ.
05:07 ನಾವು ಇವರಡೂ ಕುಕಿಗಳನ್ನು ಒಂದೇ ವಾಕ್ಯದಲ್ಲಿ ಕೂಡ ತೋರಿಸಬಹುದು.
05:11 ಅದಕ್ಕಾಗಿ ನಾನು : echo ಅಂಡರ್ಸ್ಕೋರ್ cookie, "name" ಮತ್ತು concatenate "is" ಮತ್ತು ನಂತರ ಮತ್ತೊಂದು concatenate ನಂತರ "age" ಎಂದು ಟೈಪ್ ಮಾಡುವೆನು.
05:27 ನಾವು "Alex is 19" ಎಂಬ ಫಲಿತಾಂಶವನ್ನು ಪಡೆಯುವೆವು. ಇದು ನಾವು ಸ್ಟೋರ್ ಮಾಡಿದ ಕುಕಿಗಳಿಂದ ಪಡೆದದ್ದಾಗಿದೆ.
05:34 ಈಗ ನನ್ನ ಬ್ರೌಸರ್ ಅನ್ನು ಮುಚ್ಚಿದರೂ, ಕಂಪ್ಯೂಟರ್ ಅನ್ನು ರಿಸ್ಟಾರ್ಟ್ ಮಾಡಿದರೂ, ಅಥವ ಎರಡು ಗಂಟೆ ಬಿಟ್ಟು ಬಂದರೂ, ಈ ಮಾಹಿತಿಯು ಈ ಕಂಪ್ಯೂಟರ್ ನಲ್ಲಿ ಸ್ಟೋರ್ ಆಗಿರುತ್ತದೆ ಮತ್ತು ಈ ಪೇಜ್ ನಿಂದ ಬಳಸಲು ಸಿದ್ಧವಾಗಿರುತ್ತದೆ.
05:44 ಇವುಗಳನ್ನು ಬಳಸಲು ತುಂಬ ಉಪಯುಕ್ತ ಎಂದು ನೋಡಬಹುದು. ರಚಿಸಲೂ ಸಹ ಸರಳವಾದದ್ದು, ಬಳಕೆದಾರರಿಗೆ ಎಕೋ ಮಾಡಲು ಸಹ ಸುಲಭವಾಗಿದೆ.
05:53 ಈಗ ನಾವು ಬಳಸಬಹುದಾದ ಫಂಕ್ಷನ್ ಅಂದರೆ, print r() ಅಥವಾ 'print ಅಂಡರ್ಸ್ಕೋರ್ r' ಆಗಿದೆ.
05:58 ಇಲ್ಲಿ 'dollar ಅಂಡರ್ಸ್ಕೋರ್ cookie' ಎಂದು ಎಕೋ ಮಾಡಬಹುದು. ಇದನ್ನು ನಾವು ಆಮೇಲೆ ಅಲೈನ್ ಮಾಡಬಹುದು.
06:05 ರಿಫ್ರೆಶ್ ಮಾಡಿ ಮತ್ತು ಇಲ್ಲಿ ನಾವು ಒಂದು ಅರೇಯನ್ನು ಪಡೆದಿದ್ದೇವೆ ಮತ್ತು ವಿಭಿನ್ನವಾದ ವ್ಯಾಲ್ಯುವನ್ನು ಪಡೆದಿದ್ದೇವೆ.
06:12 ಇಲ್ಲಿ ನಾವು 'name' ಅನ್ನು ಪಡೆದಿದ್ದೇವೆ. ಇದು "Alex" ಗೆ ಸಮವಾಗಿದೆ. ಇಲ್ಲಿ 'age' ಅನ್ನು ಪಡೆದಿದ್ದೇವೆ. ಅದು 19 ಕ್ಕೆ ಸಮವಾಗಿದೆ.
06:22 ಇವು cookie ಗಳು. ಅವು ಸೆಟ್ ಆಗಿವೆ. ಇವು cookies ನ ವ್ಯಾಲ್ಯುಗಳಾಗಿವೆ.
06:27 ನಿಮಗಾಗಿ ನೀವು ಎಕೋ ಮಾಡಿಕೊಳ್ಳುವಾಗ ಇವು ಉಪಯುಕ್ತವಾಗಿವೆ.
06:31 ಇದರ ಕುರಿತು ಇನ್ನೊಂದು ಫಂಕ್ಷನ್ ಇದೆ. ಇದನ್ನು ಎರಡನೆಯ ಭಾಗದಲ್ಲಿ ತೋರಿಸುವೆನು. ನಾವು ಕುಕಿ ಸೆಟ್ ಆಗಿದೆಯೇ ಇಲ್ಲವೋ ಎಂದು ನೋಡಲು if ಸ್ಟೇಟ್ಮೆಂಟ್ ಅನ್ನು ಬಳಸುವೆವು.
06:41 ಈ ಕುಕಿ ಯನ್ನು ಅನ್ಸೆಟ್ ಮಾಡುವುದು ಹೇಗೆ ಎಂದು ತೋರಿಸುವೆನು.
06:45 ಮುಂದಿನ ಭಾಗದಲ್ಲಿ ಭೇಟಿಯಾಗೋಣ. ಈ ಸ್ಕ್ರಿಪ್ಟ್ ನ ಅನುವಾದಕಿ, ಮೈಸೂರಿನಿಂದ ಅಂಜನಾ ಅನಂತ್ ನಾಗ್ ಮತ್ತು ಧ್ವನಿ ಡಾ. ನವೀನ್ ಭಟ್, ಉಪ್ಪಿನಪಟ್ಟಣ.

Contributors and Content Editors

Sandhya.np14