FrontAccounting-2.4.7/C2/Taxes-and-Bank-Account-in-FrontAccounting/Kannada

From Script | Spoken-Tutorial
Revision as of 13:13, 23 April 2020 by Melkamiyar (Talk | contribs)

Jump to: navigation, search
Time Narration


00:01 FrontAccounting ನಲ್ಲಿ ಟ್ಯಾಕ್ಸ್‌ ಗಳು ಮತ್ತು ಬ್ಯಾಂಕ್ ಅಕೌಂಟ್‌ ಗಳ ಕುರಿತ ಸ್ಪೋಕನ್ ಟ್ಯುಟೋರಿಯಲ್ ಗೆ ಸ್ವಾಗತ.
00:07 ಈ ಟ್ಯುಟೋರಿಯಲ್ ನಲ್ಲಿ ನಾವು

ಹೊಸ ಟ್ಯಾಕ್ಸ್ ಸೇರಿಸಲು,

00:12 ಬ್ಯಾಂಕ್ ಅಕೌಂಟ್ ಗಳನ್ನು ರೂಪಿಸಲು,

ಡೆಪೋಸಿಟ್ ಗಳನ್ನು ಸೇರಿಸಲು,

00:16 ಬ್ಯಾಂಕ್ ಅಕೌಂಟ್ ಗೆ ಹಣವನ್ನು ವರ್ಗಾಯಿಸಲು ಮತ್ತು

ಬ್ಯಾಂಕ್ ಅಕೌಂಟ್ ನ ರಿಕನ್ಸೈಲ್ ಕಲಿಯಲಿದ್ದೇವೆ.

00:22 ಈ ಟ್ಯುಟೋರಿಯಲ್ ರೆಕಾರ್ಡ್ ಮಾಡಲು ನಾನು

ಉಬಂಟು ಲೀನಕ್ಟ್ ಒ.ಎಸ್ ವರ್ಶನ್ 16.04 ಮತ್ತು

00:30 FrontAccounting ವರ್ಶನ್ 2.4.7 ಬಳಸುತ್ತಿದ್ದೇನೆ.
00:35 ಈ ಟ್ಯುಟೋರಿಯಲ್ ಅಭ್ಯಸಿಸಲು ನೀವು

ಹೈಯರ್ ಸೆಕೆಂಡರಿ ಕಾಮರ್ಸ್ ಮತ್ತು ಅಕೌಂಟಿಂಗ್ ಮತ್ತು

00:42 ಬುಕ್ ಕೀಪಿಂಗ್ ತತ್ವಗಳ ಜ್ಞಾನ ಹೊಂದಿರಬೇಕು.
00:45 ಮತ್ತು ನೀವು FrontAccounting ನಲ್ಲಿ ಈಗಾಗಲೇ ಆರ್ಗನೈಸೇಶನ್ ಅಥವಾ ಕಂಪನಿಯನ್ನು ರೂಪಿಸಿರಬೇಕು.
00:51 ಇಲ್ಲದಿದ್ದಲ್ಲಿ ಸಂಬಂಧಿತ FrontAccounting ಟ್ಯುಟೋರಿಯಲ್ ಗಳಿಗಾಗಿ ದಯವಿಟ್ಟು ಈ ವೆಬ್ಸೈಟ್ ಗೆ ಭೇಟಿ ನೀಡಿ.
00:57 ನೀವು FrontAccounting ಇಂಟರ್ ಫೇಸ್ ನಲ್ಲಿ ಕೆಲಸ ಮಾಡಲು ಪ್ರಾರಂಭಿಸುವ ಮೊದಲು XAMPP ಸರ್ವಿಸ್ ಗಳನ್ನು ಪ್ರಾರಂಭಿಸಿ.
01:03 ನಾವೀಗ FrontAccounting ಇಂಟರ್ ಫೇಸ್ ತೆರೆಯೋಣ.
01:07 ವೆಬ್ ಬ್ರೌಸರ್ ಒಂದನ್ನು ತೆರೆಯಿರಿ.

localhost/account ಎಂದು ಟೈಪ್ ಮಾಡಿ Enter ಒತ್ತಿರಿ.

01:16 ಲಾಗಿನ್ ಪುಟ ತೆರೆದುಕೊಳ್ಳುತ್ತದೆ.
01:19 ಅಡ್ಮಿನ್ ಅನ್ನು ಯೂಸರ್ ನೇಮ್ ಆಗಿ ಮತ್ತು ಇದರ ಪಾಸ್ ವರ್ಡ್ ಟೈಪ್ ಮಾಡಿ.

ನಂತರ Login ಬಟನ್ ಮೇಲೆ ಕ್ಲಿಕ್ ಮಾಡಿ.

01:26 FrontAccounting ಇಂಟರ್ ಫೇಸ್ ತೆರೆದುಕೊಳ್ಳುತ್ತದೆ.

Setup ಟ್ಯಾಬ್ ಮೇಲೆ ಕ್ಲಿಕ್ ಮಾಡಿ.

01:33 Company Setup ಪ್ಯಾನೆಲ್ ನಲ್ಲಿ Taxes ಲಿಂಕ್ ಮೇಲೆ ಕ್ಲಿಕ್ ಮಾಡಿ.

ನಾವು ಡಿಫಾಲ್ಟ್ ಎಂಟ್ರಿಯನ್ನು Tax ಆಗಿ ನೋಡಬಹುದು.

01:42 ಇಲ್ಲಿ ತೋರಿಸಿರುವಂತೆ ಪರ್ಸೆಂಟೇಜ್, ಸೇಲ್ಸ್ ಜಿ.ಎಲ್ ಅಕೌಂಟ್ ಮತ್ತು ಪರ್ಚೇಸಿಂಗ್ ಜಿ.ಎಲ್ ಅಕೌಂಟ್ ಅನ್ನು ನಿರ್ದಿಷ್ಟಪಡಿಸಲಾಗಿದೆ.
01:51 ನಮ್ಮ ವ್ಯವಹಾರವು ಬಳಸುವ ಪ್ರತಿ ಟ್ಯಾಕ್ಸ್ ಗೆ ಜಿ.ಎಲ್. ಅಕೌಂಟ್ ಗಳನ್ನು ಅಸೈನ್ ಮಾಡಬೇಕು.
01:57 ವಿಂಡೋವಿನ ತುದಿಯಲ್ಲಿ ನಾವು ಸಂದೇಶವೊಂದನ್ನು ನೋಡಬಹುದು.
02:00 ಪ್ರತಿ ಟ್ಯಾಕ್ಸ್ ಗೆ ಪ್ರತ್ಯೇಕ ಸೇಲ್ ಅಂಡ್ ಪರ್ಚೇಸ್ ಅಕೌಂಟ್ ಅನ್ನು ಅಸೈನ್ ಮಾಡಬೇಕು ಎಂದು ಶಿಫಾರಸು ಮಾಡಲಾಗಿದೆ.
02:09 ನಮ್ಮ ಕಂಪನಿಗೆ ಜಿ.ಎಸ್.ಟಿ ಮತ್ತು ಸರ್ವಿಸ್ ಟ್ಯಾಕ್ಸ್ ಅನ್ನು ಹೇಗೆ ಸೇರಿಸಬಹುದು ಎಂದು ನೋಡೋಣ.
02:15 ಡಿಫಾಲ್ಟ್ entry Tax ಸಾಲಿನಲ್ಲಿ Edit ಐಕಾನ್ ಮೇಲೆ ಕ್ಲಿಕ್ ಮಾಡಿ.
02:20 ನಾನು Tax ಅನ್ನು GST ಆಗಿ ಎಡಿಟ್ ಮಾಡುತ್ತೇನೆ, ಏಕೆಂದರೆ ನಮ್ಮ ಕಂಪನಿಯು ಡಿಫಾಲ್ಟ್ entry Tax ಅನ್ನು ಬಳಸುವುದಿಲ್ಲ.
02:28 ನಾನು ವಿವರಣೆಯನ್ನು GST ಗೆ ಮತ್ತು ಶೇಕಡಾವನ್ನು 12 ಕ್ಕೆ ಬದಲಾಯಿಸುತ್ತೇನೆ.
02:35 ನಾನು ಸೇಲ್ಸ್ ಜಿ.ಎಲ್ ಅಕೌಂಟ್ ಮತ್ತು ಪರ್ಚೇಸ್ ಜಿ.ಎಲ್ ಅಕೌಂಟ್ ಅನ್ನು ಸೇಲ್ಸ್ ಟ್ಯಾಕ್ಸ್ ಆಗಿ ಇಡುತ್ತೇನೆ.
02:42 ವಿಂಡೋವಿನ ಕೆಳಭಾಗದಲ್ಲಿ Update ಬಟನ್ ಮೇಲೆ ಕ್ಲಿಕ್ ಮಾಡಿ.
02:46 ನಾವು ಡಿಫಾಲ್ಟ್ ಎಂಟ್ರಿ Tax ಅನ್ನು GST ಗೆ ಯಶಸ್ವಿಯಾಗಿ ಬದಲಾಯಿಸಿದ್ದೇವೆ.
02:52 ನಾವೀಗ ಸರ್ವಿಸ್ ಟ್ಯಾಕ್ಸ್ ಸೇರಿಸೋಣ.

ಇದಕ್ಕೂ ಮೊದಲು ನಾವು ಸರ್ವಿಸ್ ಟ್ಯಾಕ್ಸ್ಗಾಗಿ ಜಿ.ಎಲ್ ಅಕೌಂಟ್ ತೆರೆಯಬೇಕು.

03:00 Banking and General Ledger ಟ್ಯಾಬ್ ಮೇಲೆ ಕ್ಲಿಕ್ ಮಾಡಿ.
03:04 Maintenance ಪ್ಯಾನೆಲ್ ನಲ್ಲಿ GL Accounts ಲಿಂಕ್ ಮೇಲೆ ಕ್ಲಿಕ್ ಮಾಡಿ.
03:09 ಇಲ್ಲಿ ತೋರಿಸಿರುವಂತೆ ಮೌಲ್ಯಗಳನ್ನು ಟೈಪ್ ಮಾಡಿ:

ನಂತರ ವಿಂಡೋವಿನ ಕೆಳಭಾಗದಲ್ಲಿ Add Account ಬಟನ್ ಮೇಲೆ ಕ್ಲಿಕ್ ಮಾಡಿ.

03:17 ಈಗ Setup ಟ್ಯಾಬ್ ಮೇಲೆ ನಂತರ Taxes ಲಿಂಕ್ ಮೇಲೆ ಕ್ಲಿಕ್ ಮಾಡಿ.
03:22 ನಾವೀಗ Tax Types ಅಡಿ Service tax ಸೇರಿಸೋಣ.
03:27 ಇಲ್ಲಿ ತೋರಿಸಿರುವಂತೆ ಮೌಲ್ಯಗಳನ್ನು ಟೈಪ್ ಮಾಡಿ.
03:30 Sales GL Account ಡ್ರಾಪ್ ಡೌನ್ ಬಾಕ್ಸ್ ಮೇಲೆ ಕ್ಲಿಕ್ ಮಾಡಿ.
03:35 Current Liabilities ಕೆಳಗೆ ಇರುವ Service Tax ಆರಿಸಿ.
03:39 ಇದೇ ರೀತಿ Purchase GL Account ಅಡಿ ಇರುವ Service Tax ಆರಿಸಿ.
03:46 ವಿಂಡೋವಿನ ಕೆಳಭಾಗದಲ್ಲಿ ಇರುವ Add new ಬಟನ್ ಮೇಲೆ ಕ್ಲಿಕ್ ಮಾಡಿ.
03:50 ಎರಡು ಟ್ಯಾಕ್ಸ್ ಗಳನ್ನು ಸೇರಿಸಿರುವುದನ್ನು ನಾವೀಗ ನೋಡಬಹುದು.
03:55 FrontAccounting ನ ಸೇಲ್ಸ್ ಮಾಡ್ಯುಲ್ ನಲ್ಲಿ ಈ ಟ್ಯಾಕ್ಸ್ ಗಳನ್ನು ಹೇಗೆ ಲೆಕ್ಕ ಹಾಕಲಾಗುತ್ತದೆ ಎಂದು ನೋಡೋಣ.
04:03 ನಾವು ಮೊದಲಿಗೆ ಕಂಪನಿಗೆ ಬ್ಯಾಂಕ್ ಅಕೌಂಟ್ ರೂಪಿಸೋಣ.
04:07 Banking and General ledger ಟ್ಯಾಬ್ ಮೇಲೆ ಕ್ಲಿಕ್ ಮಾಡಿ.
04:11 Maintenance ಪ್ಯಾನಲ್ ನಲ್ಲಿ Bank Accounts ಲಿಂಕ್ ಮೇಲೆ ಕ್ಲಿಕ್ ಮಾಡಿ.
04:16 ಬ್ಯಾಂಕ್ ಮತ್ತು ಕ್ಯಾಶ್ ಅಕೌಂಟ್ ಗಳನ್ನು ರೂಪಿಸಲು ಮತ್ತು ಕಾನ್ಫಿಗರ್ ಮಾಡಲು ಈ ಆಯ್ಕೆಯನ್ನು ಬಳಸಲಾಗುತ್ತದೆ.
04:22 ಡಿಫಾಲ್ಟ್ ಆಗಿ, ಕರಂಟ್ ಅಕೌಂಟ್ ಮತ್ತು ಪೆಟಿ ಕ್ಯಾಶ್ ಅಕೌಂಟ್ ವಿವರಗಳನ್ನು ನೀವು ನೋಡಬಹುದು.
04:29 ಡಿಫಾಲ್ಟ್ ಆಗಿ ಕರೆನ್ಸಿ ಕಾಲಂ ಯು.ಎಸ್ ಡಾಲರ್ನಲ್ಲಿದೆ.

ಇದನ್ನು ನಾವು ಇಂಡಿಯನ್ ಕರೆನ್ಸಿಗೆ ಬದಲಾಯಿಸೋಣ.

04:38 Current account ರೋ ನಲ್ಲಿ Edit ಐಕಾನ್ ಮೇಲೆ ಕ್ಲಿಕ್ ಮಾಡಿ.
04:43 Account type ಅನ್ನು Chequing Account ಗೆ ಬದಲಾಯಿಸಿ.
04:48 Bank account currency ಅನ್ನು Indian Rupees ಗೆ ಬದಲಾಯಿಸಿ.
04:53 ನಂತರ ಕೆಳಗಡೆ Update ಬಟನ್ ಮೇಲೆ ಕ್ಲಿಕ್ ಮಾಡಿ ಬದಲಾವಣೆಗಳನ್ನು ಪರಿಷ್ಕರಿಸಿ.
04:59 ಇದೇ ರೀತಿ Petty Cash account ಅನ್ನು ಸಹ Indian Rupees ಗೆ ಬದಲಾಯಿಸಿ.

ನಂತರ ಬದಲಾವಣೆಗಳನ್ನು ಪರಿಷ್ಕರಿಸಿ.

05:11 ನಂತರ ಒಂದಷ್ಟು ಮೊತ್ತವನ್ನು ST Company Pvt. Ltd. bank account ಗೆ ಸೇರಿಸೋಣ.
05:17 Banking and General ledger ಟ್ಯಾಬ್ಗೆ ಹೋಗಿ.

Transactions ಪ್ಯಾನೆಲ್ ನಲ್ಲಿ Deposits ಮೇಲೆ ಕ್ಲಿಕ್ ಮಾಡಿ.

05:25 ಗ್ರಾಹಕರ ಠೇವಣಿ, ವಿವಿಧ ಮಾರಾಟಗಳು ಮುಂತಾದುವುಗಳನ್ನು ಇಲ್ಲಿ ನಮೂದಿಸಬಹುದು.
05:31 From ಫೀಲ್ಡ್ ಅನ್ನು Miscellaneous ಆಗಿ ಇಡಿ.

ಹಣವನ್ನು ಠೇವಣಿ ಮಾಡಿರುವ ವ್ಯಕ್ತಿಯ ಹೆಸರನ್ನು ಇಲ್ಲಿ ತೋರಿಸಿರುವಂತೆ ನಾನು ನಮೂದಿಸುತ್ತೇನೆ.

05:41 Account description ಫೀಲ್ಡ್ ನಲ್ಲಿ Cash ಆರಿಸಿ.
05:45 Amount ಫೀಲ್ಡ್ ನಲ್ಲಿ 3 lakhs ಎಂದು ಟೈಪ್ ಮಾಡಿ.
05:49 Memo ಫೀಲ್ಡ್ ನಲ್ಲಿ ಠೇವಣಿಯ ಉದ್ದೇಶವನ್ನು ಟೈಪ್ ಮಾಡಿ.
05:54 ನಂತರ ಸಾಲಿನ ಬಲ ತುದಿಯಲ್ಲಿ Add item ಬಟನ್ ಮೇಲೆ ಕ್ಲಿಕ್ ಮಾಡಿ.
05:59 ವಿಂಡೋವಿನ ಕೆಳಗಭಾಗದಲ್ಲಿ Process Deposit ಬಟನ್ ಮೇಲೆ ಕ್ಲಿಕ್ ಮಾಡಿ.
06:04 ಹೊಸ ವಿಂಡೋದಲ್ಲಿ, ಡೆಪಾಸಿಟ್ ಅನ್ನು ನಮೂದಿಸಲಾಗಿದೆ ಎನ್ನುವ ಸಂದೇಶವನ್ನು ನಾವು ನೋಡಬಹುದು.
06:10 ಮುಂದಿನ ಲಿಂಕ್ View the GL postings for this Deposit. ಇದರ ಮೇಲೆ ಕ್ಲಿಕ್ ಮಾಡಿ.
06:17 ಡೆಪಾಸಿಟ್ ಮಾಡಿರುವ ಮೊತ್ತದ ವಹಿವಾಟು ವಿವರಗಳ ಪಾಪ್ ಅಪ್ ವಿಂಡೋ ಕಾಣಿಸಿಕೊಳ್ಳುತ್ತದೆ.
06:24 ವಿಂಡೋವಿನ ಕೆಳಭಾಗದಲ್ಲಿ Close ಲಿಂಕ್ ಮೇಲೆ ಕ್ಲಿಕ್ ಮಾಡಿ.
06:28 ನೀವು ಇನ್ನೊಂದು ಡೆಪಾಸಿಟ್ ಅನ್ನು ನಮೂದಿಸಲು ಇಚ್ಛಿಸಿದಲ್ಲಿ, “Enter Another Deposit” ಲಿಂಕ್ ಮೇಲೆ ಕ್ಲಿಕ್ ಮಾಡಿ.
06:34 FrontAccounting ಇಂಟರ್ ಫೇಸ್ ಗೆ ವಾಪಸ್ ಹೋಗಲು ವಿಂಡೋವಿನ ಕೆಳಗಡೆ Back ಲಿಂಕ್ ಮೇಲೆ ಕ್ಲಿಕ್ ಮಾಡಿ.
06:41 ನಂತರ ಬ್ಯಾಂಕ್ ಅಕೌಂಟ್ನಿಂದ ಕ್ಯಾಶ್ ಅಥವಾ ಇತರ ಅಕೌಂಟ್ ಗೆ ಹೇಗೆ ಹಣ ವರ್ಗಾವಣೆ ಮಾಡಬಹುದು ಎಂಬುದನ್ನು ನೋಡೋಣ.
06:49 Transactions ಪ್ಯಾನೆಲ್ ನಲ್ಲಿ Bank Account Transfers ಲಿಂಕ್ ಮೇಲೆ ಕ್ಲಿಕ್ ಮಾಡಿ.
06:55 ಇಲ್ಲಿ ಮೂರು ಲಕ್ಷ ರೂಪಾಯಿಗಳನ್ನು ಬ್ಯಾಂಕ್ ಬ್ಯಾಲನ್ಸ್ ಆಗಿ ತೋರಿಸಲಾಗುತ್ತಿದೆ.

ಈ ಮೊತ್ತವನ್ನು ಈ ಹಿಂದೆ ಡೆಪಾಸಿಟ್ ಮಾಡಿದ್ದನ್ನು ನೆನಪಿಸಿ.

07:05 To Account ಫೀಲ್ಡ್ನಲ್ಲಿ Petty Cash account ಆರಿಸಿ.
07:10 Amount ಫೀಲ್ಡ್ ನಲ್ಲಿ 20,000 ನಮೂದಿಸಿ.
07:14 Memo ಫೀಲ್ಡ್ ನಲ್ಲಿ ಇಲ್ಲಿ ತೋರಿಸಿರುವಂತೆ ಟೈಪ್ ಮಾಡಿ.
07:17 ವಿಂಡೋವಿನ ಕೆಳಭಾಗದಲ್ಲಿ Enter Transfer ಬಟನ್ ಮೇಲೆ ಕ್ಲಿಕ್ ಮಾಡಿ.
07:22 ಹೊಸ ವಿಂಡೋದಲ್ಲಿ ನಾವು “Transfer has been entered” ಎನ್ನುವ ಹೊಸ ಸಂದೇಶವನ್ನು ನೋಡಬಹುದು.
07:27 ಮುಂದಿನ ಲಿಂಕ್ View The GL Journal Entries for this Transfer

ಎಂಟ್ರಿಗಳನ್ನು ನೋಡಲು ಇದರ ಮೇಲೆ ಕ್ಲಿಕ್ ಮಾಡಿ.

07:35 ವರ್ಗಾವಣೆ ಮಾಡಿರುವ ಮೊತ್ತದ ಟ್ರಾನ್ಸಾಕ್ಷನ್ ವಿವರಗಳೊಂದಿಗೆ ಒಂದು ಪಾಪ್ ಅಪ್ ವಿಂಡೋ ಕಾಣಿಸಿಕೊಳ್ಳುತ್ತದೆ.
07:42 ವಿಂಡೋವಿನ ಕೆಳಭಾಗದಲ್ಲಿ Close ಲಿಂಕ್ ಮೇಲೆ ಕ್ಲಿಕ್ ಮಾಡಿ.
07:46 FrontAccounting ಇಂಟರ್ ಫೇಸ್ ಗೆ ವಾಪಸ್ ಹೋಗಲು ವಿಂಡೋವಿನ ಕೆಳಭಾಗದಲ್ಲಿ Back ಮೇಲೆ ಕ್ಲಿಕ್ ಮಾಡಿ.
07:53 ನಂತರ ನಾವು ಬ್ಯಾಂಕ್ ಸ್ಟೇಟ್ ಮೆಂಟ್ಗಳನ್ನು ಪರೀಕ್ಷಿಸಲಿದ್ದೇವೆ.
07:57 Transactions ಪ್ಯಾನೆಲ್ ನಲ್ಲಿ ಬಲಭಾಗದಲ್ಲಿ Reconcile Bank Account ಮೇಲೆ ಕ್ಲಿಕ್ ಮಾಡಿ.
08:04 ಇದು ಕಂಪನಿ ಅಕೌಂಟ್ ಗಳಲ್ಲಿನ ಡೆಪಾಸಿಟ್ ಗಳನ್ನು ಬ್ಯಾಂಕ್ ಸ್ಟೇಟ್ ಮೆಂಟ್ ನಲ್ಲಿನ ಡೆಪಾಸಿಟ್ ಜೊತೆ ತಾಳೆ ಮಾಡುತ್ತದೆ.
08:10 ಅಕೌಂಟ್ ಟೋಟಲ್, ಬ್ಯಾಂಕ್ ಡೆಪಾಸಿಟ್ ಗಳು ಮತ್ತು ಫಂಡ್ ಟ್ರಾನ್ಸ್ಫರ್ ವಿವರಗಳನ್ನು ನಾವು ನೋಡಬಹುದು.
08:17 ಇದರೊಂದಿಗೆ ನಾವು ಈ ಟ್ಯುಟೋರಿಯಲ್ನ ಕೊನೆಗೆ ತಲುಪಿದ್ದೇವೆ. ನಾವೀಗ ಸಂಕ್ಷೇಪಿಸೋಣ.
08:22 ಈ ಟ್ಯುಟೋರಿಯಲ್ ನಲ್ಲಿ ನಾವು

ಹೊಸ ಟ್ಯಾಕ್ಸ್ ಸೇರಿಸಲು,

08:27 ಬ್ಯಾಂಕ್ ಅಕೌಂಟ್ ಗಳನ್ನು ರೂಪಿಸಲು,
08:30 ಡೆಪಾಸಿಟ್ ಗಳನ್ನು ಸೇರಿಸಲು,
08:32 ಮೊತ್ತವನ್ನು ಬ್ಯಾಂಕ್ ಅಕೌಂಟ್ಗೆ ವರ್ಗಾಯಿಸಲು ಮತ್ತು
08:35 ಬ್ಯಾಂಕ್ ಅಕೌಂಟ್ ನ ರೀಕನ್ಸೈಲ್ ಕಲಿತೆವು.
08:39 ಅಸೈನ್ ಮೆಂಟ್ ಆಗಿ

Deposits ಆಯ್ಕೆಯನ್ನು ಬಳಸಿ ಮತ್ತು ರೂ. 10,000 ಅನ್ನು ಪೆಟಿ ಕ್ಯಾಶ್ ಅಕೌಂಟ್ ಗೆ ಡೆಪಾಸಿಟ್ ಮಾಡಿ.

08:48 From ಫೀಲ್ಡ್ ನಲ್ಲಿ Miscellaneous ಆರಿಸಿ.

Name ಅನ್ನು Mr. Rahul ಆಗಿ ನಮೂದಿಸಿ.

08:54 ಪೆಟಿ ಕ್ಯಾಶ್ ಅಕೌಂಟ್ ಗಾಗಿ ರೀಕನ್ಸೈಲ್ ಬ್ಯಾಂಕ್ ಅಕೌಂಟ್ ಪರೀಕ್ಷಿಸಿ.
08:59 ಈ ಕೆಳಗಿನ ಲಿಂಕ್ ನಲ್ಲಿ ಇರುವ ವೀಡಿಯೊ, ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ಅನ್ನು ಸಂಕ್ಷೇಪಿಸುತ್ತದೆ. ದಯವಿಟ್ಟು ಇದನ್ನು ಡೌನ್ ಲೋಡ್ ಮಾಡಿ ಮತ್ತು ವೀಕ್ಷಿಸಿ.
09:07 ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ತಂಡವು ಕಾರ್ಯಾಗಾರಗಳನ್ನು ನಡೆಸುತ್ತದೆ ಮತ್ತು ಪ್ರಮಾಣಪತ್ರಗಳನ್ನು ನೀಡುತ್ತದೆ. ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ನಮಗೆ ಪತ್ರ ಬರೆಯಿರಿ.
09:18 ಈ ಫಾರಂನಲ್ಲಿ ನಿಮ್ಮ ಟೈಮ್ಡ್ ಕ್ವೆರಿಗಳನ್ನು ಪೋಸ್ಟ್ ಮಾಡಿ.
09:22 ‘ಸ್ಪೋಕನ್ ಟ್ಯುಟೋರಿಯಲ್’ ಪ್ರೊಜೆಕ್ಟ್, MHRD, ಭಾರತ ಸರ್ಕಾರದ ನೆರವು ಪಡೆದಿದೆ.
09.28 ಈ ಸ್ಕ್ರಿಪ್ಟ್, ಸ್ಪೋಕನ್ ಟ್ಯುಟೋರಿಯಲ್ ತಂಡದ ಕೊಡುಗೆಯಾಗಿದೆ.

ಈ ಸ್ಕ್ರಿಪ್ಟ್ ನ ಅನುವಾದಕರು ಮಂಗಳೂರಿನಿಂದ ಮೆಲ್ವಿನ್, ಮತ್ತು ಧ್ವನಿ ---------- .

Contributors and Content Editors

Melkamiyar, Sandhya.np14