FrontAccounting-2.4.7/C2/Taxes-and-Bank-Account-in-FrontAccounting/Kannada

From Script | Spoken-Tutorial
Jump to: navigation, search
Time Narration
00:01 FrontAccounting ನಲ್ಲಿ ಟ್ಯಾಕ್ಸ್ಗಳು ಮತ್ತು ಬ್ಯಾಂಕ್ ಅಕೌಂಟ್ಗಳ ಕುರಿತ ಸ್ಪೋಕನ್ ಟ್ಯುಟೋರಿಯಲ್ ಗೆ ಸ್ವಾಗತ.
00:07 ಈ ಟ್ಯುಟೋರಿಯಲ್ ನಲ್ಲಿ ನಾವು

ಹೊಸ ಟ್ಯಾಕ್ಸ್ ಸೇರಿಸಲು,

00:12 ಬ್ಯಾಂಕ್ ಅಕೌಂಟ್ ಗಳನ್ನು ರೂಪಿಸಲು,

ಡೆಪೋಸಿಟ್ ಗಳನ್ನು ಸೇರಿಸಲು,

00:16 ಬ್ಯಾಂಕ್ ಅಕೌಂಟ್ ಗೆ ಹಣವನ್ನು ವರ್ಗಾಯಿಸಲು ಮತ್ತು

ಬ್ಯಾಂಕ್ ಅಕೌಂಟ್ ನ ರಿಕನ್ಸೈಲ್ ಕಲಿಯಲಿದ್ದೇವೆ.

00:22 ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು, ನಾನು:

ಉಬಂಟು ಲೀನಕ್ಸ್ ಒ.ಎಸ್ ವರ್ಶನ್ 16.04 ಮತ್ತು

00:30 FrontAccounting ವರ್ಶನ್ 2.4.7 ಬಳಸುತ್ತಿದ್ದೇನೆ.
00:35 ಈ ಟ್ಯುಟೋರಿಯಲ್ ಅನ್ನು ಅಭ್ಯಸಿಸಲು, ನೀವು ಹೈಯರ್ ಸೆಕೆಂಡರಿ ಕಾಮರ್ಸ್ ಮತ್ತು ಅಕೌಂಟಿಂಗ್ ಹಾಗೂ
00:42 ಬುಕ್ ಕೀಪಿಂಗ್ ಗಳ ಬಗ್ಗೆ ತಿಳಿದಿರಬೇಕು.
00:45 ಅಲ್ಲದೆ, ನೀವು FrontAccounting ನಲ್ಲಿ ಈಗಾಗಲೇ ಸಂಸ್ಥೆ ಅಥವಾ ಕಂಪನಿಯನ್ನು ರೂಪಿಸಿರಬೇಕು.
00:51 ಇಲ್ಲದಿದ್ದಲ್ಲಿ, ಸಂಬಂಧಿತ FrontAccounting ಟ್ಯುಟೋರಿಯಲ್ ಗಳಿಗಾಗಿ ದಯವಿಟ್ಟು ಈ ವೆಬ್ಸೈಟ್ ಗೆ ಭೇಟಿ ನೀಡಿ.
00:57 ನೀವು FrontAccounting ಇಂಟರ್ಫೇಸ್ ನಲ್ಲಿ ಕೆಲಸ ಮಾಡಲು ಪ್ರಾರಂಭಿಸುವ ಮೊದಲು, XAMPP ಸರ್ವಿಸ್ಗಳನ್ನು ಪ್ರಾರಂಭಿಸಿ.
01:03 ನಾವೀಗ FrontAccounting ಇಂಟರ್ಫೇಸ್ ತೆರೆಯೋಣ.
01:07 ವೆಬ್ ಬ್ರೌಸರ್ ಒಂದನ್ನು ತೆರೆಯಿರಿ.

localhost/account ಎಂದು ಟೈಪ್ ಮಾಡಿ Enter ಒತ್ತಿ.

01:16 ಲಾಗಿನ್ ಪೇಜ್ ತೆರೆದುಕೊಳ್ಳುತ್ತದೆ.
01:19 admin ಅನ್ನು ಯೂಸರ್ ನೇಮ್ ಎಂದು ಮತ್ತು ಇದರ ಪಾಸ್ವರ್ಡ್ ಅನ್ನು ಟೈಪ್ ಮಾಡಿ.

ನಂತರ Login ಬಟನ್ ಮೇಲೆ ಕ್ಲಿಕ್ ಮಾಡಿ.

01:26 FrontAccounting ಇಂಟರ್ಫೇಸ್ ತೆರೆದುಕೊಳ್ಳುತ್ತದೆ.

Setup ಟ್ಯಾಬ್ ಮೇಲೆ ಕ್ಲಿಕ್ ಮಾಡಿ.

01:33 Company Setup ಪ್ಯಾನೆಲ್ ನಲ್ಲಿ, Taxes ಲಿಂಕ್ ಮೇಲೆ ಕ್ಲಿಕ್ ಮಾಡಿ.

ನಮ್ಮ ಡಿಫಾಲ್ಟ್ ನಮೂದು Tax ಆಗಿದೆ.

01:42 ಇಲ್ಲಿ ತೋರಿಸಿರುವಂತೆ Percentage, Sales GL Account ಮತ್ತು Purchasing GL Account ಅನ್ನು ಸೂಚಿಸಲಾಗಿದೆ.
01:51 ನಮ್ಮ ವ್ಯವಹಾರವು ಬಳಸುವ ಪ್ರತಿಯೊಂದು ಟ್ಯಾಕ್ಸ್ ಗೆ GL Account ಗಳನ್ನು ಅಸೈನ್ ಮಾಡಬೇಕು.
01:57 ವಿಂಡೋದ ಮೇಲ್ತುದಿಯಲ್ಲಿ ನಾವು ಮೆಸೆಜ್ ಒಂದನ್ನು ನೋಡಬಹುದು.
02:00 ಪ್ರತಿಯೊಂದು ಟ್ಯಾಕ್ಸ್ ಗೆ, ಪ್ರತ್ಯೇಕ ‘ಸೇಲ್ಸ್ ಅಂಡ್ ಪರ್ಚೇಸ್ GL ಅಕೌಂಟ್’ ಅನ್ನು ಅಸೈನ್ ಮಾಡಬೇಕೆಂದು ಶಿಫಾರಸು ಮಾಡಲಾಗಿದೆ.
02:09 ನಮ್ಮ ಕಂಪನಿಗೆ ಜಿ.ಎಸ್.ಟಿ ಮತ್ತು ಸರ್ವಿಸ್ ಟ್ಯಾಕ್ಸ್ ಅನ್ನು ಹೇಗೆ ಸೇರಿಸಬಹುದೆಂದು ನೋಡೋಣ.
02:15 ಡಿಫಾಲ್ಟ್ ಎಂಟ್ರಿ Tax ಸಾಲಿನಲ್ಲಿ, Edit ಐಕಾನ್ ಮೇಲೆ ಕ್ಲಿಕ್ ಮಾಡಿ.
02:20 ನಾನು Tax ಅನ್ನು GST ಎಂದು ಎಡಿಟ್ ಮಾಡುತ್ತೇನೆ. ಏಕೆಂದರೆ, ನಮ್ಮ ಕಂಪನಿಯು ಡಿಫಾಲ್ಟ್ ಎಂಟ್ರಿಯಾದ Tax ಅನ್ನು ಬಳಸುವುದಿಲ್ಲ.
02:28 ನಾನು Description ಅನ್ನು GST ಎಂದು ಮತ್ತು ಶೇಕಡಾವನ್ನು 12 ಕ್ಕೆ ಬದಲಾಯಿಸುತ್ತೇನೆ.
02:35 Sales GL account ಮತ್ತು Purchase GL Account ಗಳನ್ನು Sales tax ಎನ್ನುತ್ತೇನೆ.
02:42 ವಿಂಡೋದ ಕೆಳಗಿರುವ Update ಬಟನ್ ಮೇಲೆ ಕ್ಲಿಕ್ ಮಾಡಿ.
02:46 ನಾವು ಡಿಫಾಲ್ಟ್ ಎಂಟ್ರಿ Tax ಅನ್ನು GST ಗೆ ಯಶಸ್ವಿಯಾಗಿ ಬದಲಾಯಿಸಿದ್ದೇವೆ.
02:52 ನಾವೀಗ ಸರ್ವಿಸ್ ಟ್ಯಾಕ್ಸ್ ಅನ್ನು ಸೇರಿಸೋಣ.

ಇದಕ್ಕೂ ಮೊದಲು, ಸರ್ವಿಸ್ ಟ್ಯಾಕ್ಸ್ಗಾಗಿ ನಾವು ಒಂದು GL Account ತೆರೆಯಬೇಕು.

03:00 Banking and General Ledger ಟ್ಯಾಬ್ ಮೇಲೆ ಕ್ಲಿಕ್ ಮಾಡಿ.
03:04 Maintenance ಪ್ಯಾನೆಲ್ ನಲ್ಲಿ, GL Accounts ಲಿಂಕ್ ಮೇಲೆ ಕ್ಲಿಕ್ ಮಾಡಿ.
03:09 ಇಲ್ಲಿ ತೋರಿಸಿರುವಂತೆ ವ್ಯಾಲ್ಯೂಗಳನ್ನು ಟೈಪ್ ಮಾಡಿ:

ನಂತರ ವಿಂಡೋದ ಕೆಳಗಿರುವ Add Account ಬಟನ್ ಮೇಲೆ ಕ್ಲಿಕ್ ಮಾಡಿ.

03:17 ಈಗ Setup ಟ್ಯಾಬ್ ಮೇಲೆ, ನಂತರ Taxes ಲಿಂಕ್ ಮೇಲೆ ಕ್ಲಿಕ್ ಮಾಡಿ.
03:22 Tax Types ಅಡಿಯಲ್ಲಿ, Service tax ಸೇರಿಸೋಣ.
03:27 ಇಲ್ಲಿ ತೋರಿಸಿರುವಂತೆ ವ್ಯಾಲ್ಯೂಗಳನ್ನು ಟೈಪ್ ಮಾಡಿ.
03:30 Sales GL Account ಡ್ರಾಪ್ ಡೌನ್ ಬಾಕ್ಸ್ ಮೇಲೆ ಕ್ಲಿಕ್ ಮಾಡಿ.
03:35 Current Liabilities ಕೆಳಗೆ ಇರುವ Service Tax ಆರಿಸಿಕೊಳ್ಳಿ.
03:39 ಇದೇ ರೀತಿ, Purchase GL Account ಗಾಗಿ, Service Tax ಆರಿಸಿಕೊಳ್ಳಿ.
03:46 ವಿಂಡೋದ ಕೆಳಗಿರುವ Add new ಬಟನ್ ಮೇಲೆ ಕ್ಲಿಕ್ ಮಾಡಿ.
03:50 ಎರಡು ಟ್ಯಾಕ್ಸ್ ಗಳನ್ನು ಸೇರಿಸಿರುವುದನ್ನು ನಾವೀಗ ನೋಡಬಹುದು.
03:55 FrontAccounting ನ ಸೇಲ್ಸ್ ಮಾಡ್ಯುಲ್ ನಲ್ಲಿ ಈ ಟ್ಯಾಕ್ಸ್ ಗಳನ್ನು ಹೇಗೆ ಲೆಕ್ಕ ಹಾಕಲಾಗುತ್ತದೆ ಎಂದು ನೋಡೋಣ.
04:03 ಮೊದಲು ಕಂಪನಿಗಾಗಿ ಒಂದು ಬ್ಯಾಂಕ್ ಅಕೌಂಟ್ ಅನ್ನು ನಾವು ತಯಾರಿಸೋಣ.
04:07 Banking and General ledger ಟ್ಯಾಬ್ ಮೇಲೆ ಕ್ಲಿಕ್ ಮಾಡಿ.
04:11 Maintenance ಪ್ಯಾನಲ್ ನಲ್ಲಿ, Bank Accounts ಲಿಂಕ್ ಮೇಲೆ ಕ್ಲಿಕ್ ಮಾಡಿ.
04:16 ಬ್ಯಾಂಕ್ ಮತ್ತು ಕ್ಯಾಶ್ ಅಕೌಂಟ್ ಗಳನ್ನು ರೂಪಿಸಲು (ಕಾನ್ಫಿಗರ್) ಈ ಆಯ್ಕೆಯನ್ನು ಬಳಸಲಾಗುತ್ತದೆ.
04:22 ಡಿಫಾಲ್ಟ್ ಆಗಿ, ‘ಕರಂಟ್ ಅಕೌಂಟ್’ ಮತ್ತು ‘ಪೆಟ್ಟಿ ಕ್ಯಾಶ್ ಅಕೌಂಟ್’ ವಿವರಗಳನ್ನು ನೀವು ನೋಡಬಹುದು.
04:29 ಡಿಫಾಲ್ಟ್ ಆಗಿ, Currency ಕಾಲಂ US Dollar ನಲ್ಲಿದೆ.

ಇದನ್ನು ನಾವು Indian currency ಗೆ ಬದಲಾಯಿಸೋಣ.

04:38 Current account ಸಾಲಿನಲ್ಲಿ, Edit ಐಕಾನ್ ಮೇಲೆ ಕ್ಲಿಕ್ ಮಾಡಿ.
04:43 Account type ಅನ್ನು Chequing Account ಗೆ ಬದಲಾಯಿಸಿ.
04:48 Bank account currency ಅನ್ನು Indian Rupees ಗೆ ಬದಲಾಯಿಸಿ.
04:53 ನಂತರ, ಕೆಳಗಡೆ Update ಬಟನ್ ಮೇಲೆ ಕ್ಲಿಕ್ ಮಾಡಿ, ಈ ಬದಲಾವಣೆಗಳನ್ನು ಅಪ್ಡೇಟ್ ಮಾಡಿ.
04:59 ಇದೇ ರೀತಿ, Petty Cash account ಅನ್ನು ಸಹ Indian Rupees ಗೆ ಬದಲಾಯಿಸಿ.

ನಂತರ ಬದಲಾವಣೆಗಳನ್ನು ಅಪ್ಡೇಟ್ ಮಾಡಿ.

05:11 ನಂತರ ಒಂದಷ್ಟು ಮೊತ್ತವನ್ನು ST Company Pvt. Ltd. bank account ಗೆ ಸೇರಿಸೋಣ.
05:17 Banking and General ledger ಟ್ಯಾಬ್ ಗೆ ಹೋಗಿ.

Transactions ಪ್ಯಾನೆಲ್ ನಲ್ಲಿ, Deposits ಲಿಂಕ್ ಮೇಲೆ ಕ್ಲಿಕ್ ಮಾಡಿ.

05:25 ಗ್ರಾಹಕರ ಠೇವಣಿ, ವಿವಿಧ ಮಾರಾಟಗಳು ಇತ್ಯಾದಿಗಳನ್ನು ಇಲ್ಲಿ ನಮೂದಿಸಬಹುದು.
05:31 From ಫೀಲ್ಡ್ ಅನ್ನು Miscellaneous ಎನ್ನಿ.

ಹಣವನ್ನು ಠೇವಣಿ ಮಾಡಿರುವ ವ್ಯಕ್ತಿಯ ಹೆಸರನ್ನು, ಇಲ್ಲಿ ತೋರಿಸಿರುವಂತೆ ನಾನು ನಮೂದಿಸುತ್ತೇನೆ.

05:41 Account description ಫೀಲ್ಡ್ ನಲ್ಲಿ, Cash ಅನ್ನು ಆಯ್ಕೆಮಾಡಿ.
05:45 Amount ಫೀಲ್ಡ್ ನಲ್ಲಿ, 3 lakhs ಎಂದು ಟೈಪ್ ಮಾಡಿ.
05:49 Memo ಫೀಲ್ಡ್ ನಲ್ಲಿ, ಠೇವಣಿಯ ಉದ್ದೇಶವನ್ನು ಟೈಪ್ ಮಾಡಿ.
05:54 ನಂತರ, ಈ ಸಾಲಿನ ಬಲ ತುದಿಯಲ್ಲಿ Add item ಬಟನ್ ಮೇಲೆ ಕ್ಲಿಕ್ ಮಾಡಿ.
05:59 ವಿಂಡೋದ ಕೆಳಗಿರುವ Process Deposit ಬಟನ್ ಮೇಲೆ ಕ್ಲಿಕ್ ಮಾಡಿ.
06:04 ಹೊಸ ವಿಂಡೋದಲ್ಲಿ, ಡೆಪಾಸಿಟ್ ಅನ್ನು ನಮೂದಿಸಲಾಗಿದೆ ಎನ್ನುವ ಮೆಸೆಜ್ ಅನ್ನು ನಾವು ನೋಡಬಹುದು.
06:10 ಮುಂದಿನ ಲಿಂಕ್ View the GL postings for this Deposit ಆಗಿದೆ. ಇದರ ಮೇಲೆ ಕ್ಲಿಕ್ ಮಾಡಿ.
06:17 ಡೆಪಾಸಿಟ್ ಮಾಡಿರುವ ಮೊತ್ತದ ವಹಿವಾಟು (transaction) ವಿವರಗಳೊಂದಿಗೆ, ಒಂದು ಪಾಪ್-ಅಪ್ ವಿಂಡೋ ಕಾಣಿಸಿಕೊಳ್ಳುತ್ತದೆ.
06:24 ವಿಂಡೋದ ಕೆಳಭಾಗದಲ್ಲಿ, Close ಲಿಂಕ್ ಮೇಲೆ ಕ್ಲಿಕ್ ಮಾಡಿ.
06:28 ನೀವು ಇನ್ನೊಂದು ಡೆಪಾಸಿಟ್ ಅನ್ನು ನಮೂದಿಸಲು ಇಚ್ಛಿಸಿದಲ್ಲಿ, “Enter Another Deposit” ಲಿಂಕ್ ಮೇಲೆ ಕ್ಲಿಕ್ ಮಾಡಿ.
06:34 FrontAccounting ಇಂಟರ್ಫೇಸ್ ಗೆ ಹಿಂದಿರುಗಲು, ವಿಂಡೋದ ಕೆಳಗಡೆ Back ಲಿಂಕ್ ಮೇಲೆ ಕ್ಲಿಕ್ ಮಾಡಿ.
06:41 ನಂತರ, ಬ್ಯಾಂಕ್ ಅಕೌಂಟ್ ನಿಂದ ಕ್ಯಾಶ್ ಗೆ ಅಥವಾ ಇನ್ನೊಂದು ಅಕೌಂಟ್ ಗೆ ಹಣವನ್ನು ಹೇಗೆ ವರ್ಗಾಯಿಸಬಹುದೆಂದು ನೋಡೋಣ.
06:49 Transactions ಪ್ಯಾನೆಲ್ ನಲ್ಲಿ, Bank Account Transfers ಲಿಂಕ್ ಮೇಲೆ ಕ್ಲಿಕ್ ಮಾಡಿ.
06:55 ಇಲ್ಲಿ, ಮೂರು ಲಕ್ಷ ರೂಪಾಯಿಗಳನ್ನು ಬ್ಯಾಂಕ್ ಬ್ಯಾಲನ್ಸ್ ಆಗಿ ತೋರಿಸಲಾಗಿದೆ ಎಂದು ಗಮನಿಸಿ.

ಈ ಮೊತ್ತವನ್ನು ಹಿಂದೆ ಡೆಪಾಸಿಟ್ ಮಾಡಿದ್ದನ್ನು ನೆನಪಿಸಿಕೊಳ್ಳಿ.

07:05 To Account ಫೀಲ್ಡ್ನಲ್ಲಿ, Petty Cash account ಅನ್ನು ಆಯ್ಕೆಮಾಡಿ.
07:10 Amount ಫೀಲ್ಡ್ ನಲ್ಲಿ, 20,000 ಎಂದು ನಮೂದಿಸಿ.
07:14 Memo ಫೀಲ್ಡ್ ನಲ್ಲಿ, ಇಲ್ಲಿ ತೋರಿಸಿರುವಂತೆ ಟೈಪ್ ಮಾಡಿ.
07:17 ವಿಂಡೋದ ಕೆಳಭಾಗದಲ್ಲಿ, Enter Transfer ಬಟನ್ ಮೇಲೆ ಕ್ಲಿಕ್ ಮಾಡಿ.
07:22 ಹೊಸ ವಿಂಡೋದಲ್ಲಿ, ನಾವು “Transfer has been entered” ಎನ್ನುವ ಹೊಸ ಮೆಸೆಜ್ ಅನ್ನು ನೋಡಬಹುದು.
07:27 ಮುಂದಿನ ಲಿಂಕ್ View The GL Journal Entries for this Transfer ಆಗಿದೆ.

ನಮೂದುಗಳನ್ನು ನೋಡಲು, ಇದರ ಮೇಲೆ ಕ್ಲಿಕ್ ಮಾಡಿ.

07:35 ವರ್ಗಾಯಿಸಿದ ಮೊತ್ತದ ಟ್ರಾನ್ಸಾಕ್ಷನ್ ವಿವರಗಳೊಂದಿಗೆ, ಒಂದು ಪಾಪ್-ಅಪ್ ವಿಂಡೋ ಕಾಣಿಸಿಕೊಳ್ಳುತ್ತದೆ.
07:42 ವಿಂಡೋದ ಕೆಳಭಾಗದಲ್ಲಿ, Close ಲಿಂಕ್ ಮೇಲೆ ಕ್ಲಿಕ್ ಮಾಡಿ.
07:46 FrontAccounting ಇಂಟರ್ಫೇಸ್ ಗೆ ಹಿಂದಿರುಗಲು, ವಿಂಡೋದ ಕೆಳಭಾಗದಲ್ಲಿ Back ಲಿಂಕ್ ಮೇಲೆ ಕ್ಲಿಕ್ ಮಾಡಿ.
07:53 ನಂತರ ನಾವು Bank Statements ಪರೀಕ್ಷಿಸುವೆವು.
07:57 Transactions ಪ್ಯಾನೆಲ್ ನಲ್ಲಿ, ಬಲಭಾಗದಲ್ಲಿ Reconcile Bank Account ಲಿಂಕ್ ಮೇಲೆ ಕ್ಲಿಕ್ ಮಾಡಿ.
08:04 ಇದು ಕಂಪನಿ ಅಕೌಂಟ್ ಗಳಲ್ಲಿನ ಮತ್ತು Bank Statement ನಲ್ಲಿನ ಡೆಪಾಸಿಟ್ ಗಳನ್ನು ಹೊಂದಿಸಿ ನೋಡುತ್ತದೆ.
08:10 ಅಕೌಂಟ್ ಟೋಟಲ್, ಬ್ಯಾಂಕ್ ಡೆಪಾಸಿಟ್ ಗಳು ಮತ್ತು ಫಂಡ್ ಟ್ರಾನ್ಸ್ಫರ್ ವಿವರಗಳನ್ನು ನಾವು ನೋಡಬಹುದು.
08:17 ಇದರೊಂದಿಗೆ ನಾವು ಈ ಟ್ಯುಟೋರಿಯಲ್ನ ಕೊನೆಗೆ ತಲುಪಿದ್ದೇವೆ. ಸಂಕ್ಷಿಪ್ತವಾಗಿ,
08:22 ಈ ಟ್ಯುಟೋರಿಯಲ್ ನಲ್ಲಿ, ನಾವು:

ಹೊಸ ಟ್ಯಾಕ್ಸ್ ಅನ್ನು ಸೇರಿಸಲು,

08:27 ಬ್ಯಾಂಕ್ ಅಕೌಂಟ್ ಗಳನ್ನು ತಯಾರಿಸಲು,
08:30 ಡೆಪಾಸಿಟ್ ಗಳನ್ನು ಸೇರಿಸಲು,
08:32 ಮೊತ್ತವನ್ನು ಬ್ಯಾಂಕ್ ಅಕೌಂಟ್ ಗೆ ವರ್ಗಾಯಿಸಲು ಮತ್ತು
08:35 ಬ್ಯಾಂಕ್ ಅಕೌಂಟ್ ಅನ್ನು ರೀಕನ್ಸೈಲ್ ಮಾಡಲು ಕಲಿತೆವು.
08:39 ಅಸೈನ್ ಮೆಂಟ್ ಗಾಗಿ:

Deposits ಆಯ್ಕೆಯನ್ನು ಬಳಸಿ ರೂ. 10,000 ಅನ್ನು ‘ಪೆಟ್ಟಿ ಕ್ಯಾಶ್ ಅಕೌಂಟ್’ ನಲ್ಲಿ ಜಮಾ ಮಾಡಿ.

08:48 From ಫೀಲ್ಡ್ ನಲ್ಲಿ, Miscellaneous ಅನ್ನು ಆಯ್ಕೆಮಾಡಿ.

Name ಅನ್ನು Mr. Rahul ಎಂದು ನಮೂದಿಸಿ.

08:54 ‘ಪೆಟ್ಟಿ ಕ್ಯಾಶ್ ಅಕೌಂಟ್’ ಗಾಗಿ ‘ರೀಕನ್ಸೈಲ್ ಬ್ಯಾಂಕ್ ಅಕೌಂಟ್’ ಅನ್ನು ಪರೀಕ್ಷಿಸಿ.
08:59 ಈ ಕೆಳಗಿನ ಲಿಂಕ್ ನಲ್ಲಿ ಇರುವ ವೀಡಿಯೊ, ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ನ ಸಾರಾಂಶವಾಗಿದೆ. ದಯವಿಟ್ಟು ಇದನ್ನು ಡೌನ್ಲೋಡ್ ಮಾಡಿ ವೀಕ್ಷಿಸಿ.
09:07 ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ತಂಡವು ಕಾರ್ಯಶಾಲೆಗಳನ್ನು ನಡೆಸುತ್ತದೆ ಮತ್ತು ಪ್ರಮಾಣಪತ್ರಗಳನ್ನು ಕೊಡುತ್ತದೆ. ಹೆಚ್ಚಿನ ಮಾಹಿತಿಗಾಗಿ ದಯವಿಟ್ಟು ನಮಗೆ ಬರೆಯಿರಿ.
09:18 ಈ ಫಾರಂನಲ್ಲಿ ನಿಮ್ಮ ಟೈಮ್ಡ್ ಕ್ವೆರಿಗಳನ್ನು ಪೋಸ್ಟ್ ಮಾಡಿ.
09:22 ‘ಸ್ಪೋಕನ್ ಟ್ಯುಟೋರಿಯಲ್’ ಪ್ರೊಜೆಕ್ಟ್, MHRD, ಭಾರತ ಸರ್ಕಾರದ ನೆರವು ಪಡೆದಿದೆ.
09.28 ಈ ಸ್ಕ್ರಿಪ್ಟ್, ಸ್ಪೋಕನ್ ಟ್ಯುಟೋರಿಯಲ್ ತಂಡದ ಕೊಡುಗೆಯಾಗಿದೆ.

ಸ್ಕ್ರಿಪ್ಟ್ ನ ಅನುವಾದಕರು ಮಂಗಳೂರಿನಿಂದ ಮೆಲ್ವಿನ್ ಮತ್ತು ಧ್ವನಿ ಶ್ರೀ ನವೀನ್ ಭಟ್, ಉಪ್ಪಿನಪಟ್ಟಣ. ಧನ್ಯವಾದಗಳು.

Contributors and Content Editors

Melkamiyar, Sandhya.np14