FrontAccounting-2.4.7/C2/Taxes-and-Bank-Account-in-FrontAccounting/Kannada
Time | Narration
|
00:01 | FrontAccounting ನಲ್ಲಿ ಟ್ಯಾಕ್ಸ್ ಗಳು ಮತ್ತು ಬ್ಯಾಂಕ್ ಅಕೌಂಟ್ ಗಳ ಕುರಿತ ಸ್ಪೋಕನ್ ಟ್ಯುಟೋರಿಯಲ್ ಗೆ ಸ್ವಾಗತ. |
00:07 | ಈ ಟ್ಯುಟೋರಿಯಲ್ ನಲ್ಲಿ ನಾವು
ಹೊಸ ಟ್ಯಾಕ್ಸ್ ಸೇರಿಸಲು, |
00:12 | ಬ್ಯಾಂಕ್ ಅಕೌಂಟ್ಗಳನ್ನು ರೂಪಿಸಲು,
ಡೆಪೋಸಿಟ್ ಗಳನ್ನು ಸೇರಿಸಲು, |
00:16 | ಬ್ಯಾಂಕ್ ಅಕೌಂಟ್ ಗೆ ಹಣವನ್ನು ವರ್ಗಾಯಿಸಲು ಮತ್ತು
ಬ್ಯಾಂಕ್ ಅಕೌಂಟ್ ನ ರಿಕನ್ಸೈಲ್ ಕಲಿಯಲಿದ್ದೇವೆ. |
00:22 | ಈ ಟ್ಯುಟೋರಿಯಲ್ ರೆಕಾರ್ಡ್ ಮಾಡಲು ನಾನು
ಉಬಂಟು ಲೀನಕ್ಟ್ ಒ.ಎಸ್ ವರ್ಶನ್ 16.04 ಮತ್ತು |
00:30 | FrontAccounting ವರ್ಶನ್ 2.4.7 ಬಳಸುತ್ತಿದ್ದೇನೆ. |
00:35 | ಈ ಟ್ಯುಟೋರಿಯಲ್ ಅಭ್ಯಸಿಸಲು ನೀವು
ಹೈಯರ್ ಸೆಕೆಂಡರಿ ಕಾಮರ್ಸ್ ಮತ್ತು ಅಕೌಂಟಿಂಗ್ ಮತ್ತು |
00:42 | ಬುಕ್ ಕೀಪಿಂಗ್ ತತ್ವಗಳ ಜ್ಞಾನ ಹೊಂದಿರಬೇಕು. |
00:45 | ಮತ್ತು ನೀವು FrontAccounting ನಲ್ಲಿ ಈಗಾಗಲೇ ಆರ್ಗನೈಸೇಶನ್ ಅಥವಾ ಕಂಪನಿಯನ್ನು ರೂಪಿಸಿರಬೇಕು. |
00:51 | ಇಲ್ಲದಿದ್ದಲ್ಲಿ ಸಂಬಂಧಿತ FrontAccounting ಟ್ಯುಟೋರಿಯಲ್ ಗಳಿಗಾಗಿ ದಯವಿಟ್ಟು ಈ ವೆಬ್ಸೈಟ್ ಗೆ ಭೇಟಿ ನೀಡಿ. |
00:57 | ನೀವು FrontAccounting ಇಂಟರ್ ಫೇಸ್ ನಲ್ಲಿ ಕೆಲಸ ಮಾಡಲು ಪ್ರಾರಂಭಿಸುವ ಮೊದಲು XAMPP ಸರ್ವಿಸ್ ಗಳನ್ನು ಪ್ರಾರಂಭಿಸಿ. |
01:03 | ನಾವೀಗ FrontAccounting ಇಂಟರ್ ಫೇಸ್ ತೆರೆಯೋಣ. |
01:07 | ವೆಬ್ ಬ್ರೌಸರ್ ಒಂದನ್ನು ತೆರೆಯಿರಿ.
localhost/account ಎಂದು ಟೈಪ್ ಮಾಡಿ Enter ಒತ್ತಿರಿ. |
01:16 | ಲಾಗಿನ್ ಪುಟ ತೆರೆದುಕೊಳ್ಳುತ್ತದೆ. |
01:19 | ಅಡ್ಮಿನ್ ಅನ್ನು ಯೂಸರ್ ನೇಮ್ ಆಗಿ ಮತ್ತು ಇದರ ಪಾಸ್ ವರ್ಡ್ ಟೈಪ್ ಮಾಡಿ.
ನಂತರ Login ಬಟನ್ ಮೇಲೆ ಕ್ಲಿಕ್ ಮಾಡಿ. |
01:26 | FrontAccounting ಇಂಟರ್ ಫೇಸ್ ತೆರೆದುಕೊಳ್ಳುತ್ತದೆ.
Setup ಟ್ಯಾಬ್ ಮೇಲೆ ಕ್ಲಿಕ್ ಮಾಡಿ. |
01:33 | Company Setup ಪ್ಯಾನೆಲ್ ನಲ್ಲಿ Taxes ಲಿಂಕ್ ಮೇಲೆ ಕ್ಲಿಕ್ ಮಾಡಿ.
ನಾವು ಡಿಫಾಲ್ಟ್ ಎಂಟ್ರಿಯನ್ನು Tax ಆಗಿ ನೋಡಬಹುದು. |
01:42 | ಇಲ್ಲಿ ತೋರಿಸಿರುವಂತೆ ಪರ್ಸೆಂಟೇಜ್, ಸೇಲ್ಸ್ ಜಿ.ಎಲ್ ಅಕೌಂಟ್ ಮತ್ತು ಪರ್ಚೇಸಿಂಗ್ ಜಿ.ಎಲ್ ಅಕೌಂಟ್ ಅನ್ನು ನಿರ್ದಿಷ್ಟಪಡಿಸಲಾಗಿದೆ. |
01:51 | ನಮ್ಮ ವ್ಯವಹಾರವು ಬಳಸುವ ಪ್ರತಿ ಟ್ಯಾಕ್ಸ್ ಗೆ ಜಿ.ಎಲ್. ಅಕೌಂಟ್ ಗಳನ್ನು ಅಸೈನ್ ಮಾಡಬೇಕು. |
01:57 | ವಿಂಡೋವಿನ ತುದಿಯಲ್ಲಿ ನಾವು ಸಂದೇಶವೊಂದನ್ನು ನೋಡಬಹುದು. |
02:00 | ಪ್ರತಿ ಟ್ಯಾಕ್ಸ್ ಗೆ ಪ್ರತ್ಯೇಕ ಸೇಲ್ ಅಂಡ್ ಪರ್ಚೇಸ್ ಅಕೌಂಟ್ ಅನ್ನು ಅಸೈನ್ ಮಾಡಬೇಕು ಎಂದು ಶಿಫಾರಸು ಮಾಡಲಾಗಿದೆ. |
02:09 | ನಮ್ಮ ಕಂಪನಿಗೆ ಜಿ.ಎಸ್.ಟಿ ಮತ್ತು ಸರ್ವಿಸ್ ಟ್ಯಾಕ್ಸ್ ಅನ್ನು ಹೇಗೆ ಸೇರಿಸಬಹುದು ಎಂದು ನೋಡೋಣ. |
02:15 | ಡಿಫಾಲ್ಟ್ entry Tax ಸಾಲಿನಲ್ಲಿ Edit ಐಕಾನ್ ಮೇಲೆ ಕ್ಲಿಕ್ ಮಾಡಿ. |
02:20 | ನಾನು Tax ಅನ್ನು GST ಆಗಿ ಎಡಿಟ್ ಮಾಡುತ್ತೇನೆ, ಏಕೆಂದರೆ ನಮ್ಮ ಕಂಪನಿಯು ಡಿಫಾಲ್ಟ್ entry Tax ಅನ್ನು ಬಳಸುವುದಿಲ್ಲ. |
02:28 | ನಾನು ವಿವರಣೆಯನ್ನು GST ಗೆ ಮತ್ತು ಶೇಕಡಾವನ್ನು 12 ಕ್ಕೆ ಬದಲಾಯಿಸುತ್ತೇನೆ. |
02:35 | ನಾನು ಸೇಲ್ಸ್ ಜಿ.ಎಲ್ ಅಕೌಂಟ್ ಮತ್ತು ಪರ್ಚೇಸ್ ಜಿ.ಎಲ್ ಅಕೌಂಟ್ ಅನ್ನು ಸೇಲ್ಸ್ ಟ್ಯಾಕ್ಸ್ ಆಗಿ ಇಡುತ್ತೇನೆ. |
02:42 | ವಿಂಡೋವಿನ ಕೆಳಭಾಗದಲ್ಲಿ Update ಬಟನ್ ಮೇಲೆ ಕ್ಲಿಕ್ ಮಾಡಿ. |
02:46 | ನಾವು ಡಿಫಾಲ್ಟ್ ಎಂಟ್ರಿ Tax ಅನ್ನು GST ಗೆ ಯಶಸ್ವಿಯಾಗಿ ಬದಲಾಯಿಸಿದ್ದೇವೆ. |
02:52 | ನಾವೀಗ ಸರ್ವಿಸ್ ಟ್ಯಾಕ್ಸ್ ಸೇರಿಸೋಣ.
ಇದಕ್ಕೂ ಮೊದಲು ನಾವು ಸರ್ವಿಸ್ ಟ್ಯಾಕ್ಸ್ಗಾಗಿ ಜಿ.ಎಲ್ ಅಕೌಂಟ್ ತೆರೆಯಬೇಕು. |
03:00 | Banking and General Ledger ಟ್ಯಾಬ್ ಮೇಲೆ ಕ್ಲಿಕ್ ಮಾಡಿ. |
03:04 | Maintenance ಪ್ಯಾನೆಲ್ ನಲ್ಲಿ GL Accounts ಲಿಂಕ್ ಮೇಲೆ ಕ್ಲಿಕ್ ಮಾಡಿ. |
03:09 | ಇಲ್ಲಿ ತೋರಿಸಿರುವಂತೆ ಮೌಲ್ಯಗಳನ್ನು ಟೈಪ್ ಮಾಡಿ:
ನಂತರ ವಿಂಡೋವಿನ ಕೆಳಭಾಗದಲ್ಲಿ Add Account ಬಟನ್ ಮೇಲೆ ಕ್ಲಿಕ್ ಮಾಡಿ. |
03:17 | ಈಗ Setup ಟ್ಯಾಬ್ ಮೇಲೆ ನಂತರ Taxes ಲಿಂಕ್ ಮೇಲೆ ಕ್ಲಿಕ್ ಮಾಡಿ. |
03:22 | ನಾವೀಗ Tax Types ಅಡಿ Service tax ಸೇರಿಸೋಣ. |
03:27 | ಇಲ್ಲಿ ತೋರಿಸಿರುವಂತೆ ಮೌಲ್ಯಗಳನ್ನು ಟೈಪ್ ಮಾಡಿ. |
03:30 | Sales GL Account ಡ್ರಾಪ್ ಡೌನ್ ಬಾಕ್ಸ್ ಮೇಲೆ ಕ್ಲಿಕ್ ಮಾಡಿ. |
03:35 | Current Liabilities ಕೆಳಗೆ ಇರುವ Service Tax ಆರಿಸಿ. |
03:39 | ಇದೇ ರೀತಿ Purchase GL Account ಅಡಿ ಇರುವ Service Tax ಆರಿಸಿ. |
03:46 | ವಿಂಡೋವಿನ ಕೆಳಭಾಗದಲ್ಲಿ ಇರುವ Add new ಬಟನ್ ಮೇಲೆ ಕ್ಲಿಕ್ ಮಾಡಿ. |
03:50 | ಎರಡು ಟ್ಯಾಕ್ಸ್ ಗಳನ್ನು ಸೇರಿಸಿರುವುದನ್ನು ನಾವೀಗ ನೋಡಬಹುದು. |
03:55 | FrontAccounting ನ ಸೇಲ್ಸ್ ಮಾಡ್ಯುಲ್ ನಲ್ಲಿ ಈ ಟ್ಯಾಕ್ಸ್ ಗಳನ್ನು ಹೇಗೆ ಲೆಕ್ಕ ಹಾಕಲಾಗುತ್ತದೆ ಎಂದು ನೋಡೋಣ. |
04:03 | ನಾವು ಮೊದಲಿಗೆ ಕಂಪನಿಗೆ ಬ್ಯಾಂಕ್ ಅಕೌಂಟ್ ರೂಪಿಸೋಣ. |
04:07 | Banking and General ledger ಟ್ಯಾಬ್ ಮೇಲೆ ಕ್ಲಿಕ್ ಮಾಡಿ. |
04:11 | Maintenance ಪ್ಯಾನಲ್ ನಲ್ಲಿ Bank Accounts ಲಿಂಕ್ ಮೇಲೆ ಕ್ಲಿಕ್ ಮಾಡಿ. |
04:16 | ಬ್ಯಾಂಕ್ ಮತ್ತು ಕ್ಯಾಶ್ ಅಕೌಂಟ್ ಗಳನ್ನು ರೂಪಿಸಲು ಮತ್ತು ಕಾನ್ಫಿಗರ್ ಮಾಡಲು ಈ ಆಯ್ಕೆಯನ್ನು ಬಳಸಲಾಗುತ್ತದೆ. |
04:22 | ಡಿಫಾಲ್ಟ್ ಆಗಿ, ಕರಂಟ್ ಅಕೌಂಟ್ ಮತ್ತು ಪೆಟಿ ಕ್ಯಾಶ್ ಅಕೌಂಟ್ ವಿವರಗಳನ್ನು ನೀವು ನೋಡಬಹುದು. |
04:29 | ಡಿಫಾಲ್ಟ್ ಆಗಿ ಕರೆನ್ಸಿ ಕಾಲಂ ಯು.ಎಸ್ ಡಾಲರ್ನಲ್ಲಿದೆ.
ಇದನ್ನು ನಾವು ಇಂಡಿಯನ್ ಕರೆನ್ಸಿಗೆ ಬದಲಾಯಿಸೋಣ. |
04:38 | Current account ರೋ ನಲ್ಲಿ Edit ಐಕಾನ್ ಮೇಲೆ ಕ್ಲಿಕ್ ಮಾಡಿ. |
04:43 | Account type ಅನ್ನು Chequing Account ಗೆ ಬದಲಾಯಿಸಿ. |
04:48 | Bank account currency ಅನ್ನು Indian Rupees ಗೆ ಬದಲಾಯಿಸಿ. |
04:53 | ನಂತರ ಕೆಳಗಡೆ Update ಬಟನ್ ಮೇಲೆ ಕ್ಲಿಕ್ ಮಾಡಿ ಬದಲಾವಣೆಗಳನ್ನು ಪರಿಷ್ಕರಿಸಿ. |
04:59 | ಇದೇ ರೀತಿ Petty Cash account ಅನ್ನು ಸಹ Indian Rupees ಗೆ ಬದಲಾಯಿಸಿ.
ನಂತರ ಬದಲಾವಣೆಗಳನ್ನು ಪರಿಷ್ಕರಿಸಿ. |
05:11 | ನಂತರ ಒಂದಷ್ಟು ಮೊತ್ತವನ್ನು ST Company Pvt. Ltd. bank account ಗೆ ಸೇರಿಸೋಣ. |
05:17 | Banking and General ledger ಟ್ಯಾಬ್ಗೆ ಹೋಗಿ.
Transactions ಪ್ಯಾನೆಲ್ ನಲ್ಲಿ Deposits ಮೇಲೆ ಕ್ಲಿಕ್ ಮಾಡಿ. |
05:25 | ಗ್ರಾಹಕರ ಠೇವಣಿ, ವಿವಿಧ ಮಾರಾಟಗಳು ಮುಂತಾದುವುಗಳನ್ನು ಇಲ್ಲಿ ನಮೂದಿಸಬಹುದು. |
05:31 | From ಫೀಲ್ಡ್ ಅನ್ನು Miscellaneous ಆಗಿ ಇಡಿ.
ಹಣವನ್ನು ಠೇವಣಿ ಮಾಡಿರುವ ವ್ಯಕ್ತಿಯ ಹೆಸರನ್ನು ಇಲ್ಲಿ ತೋರಿಸಿರುವಂತೆ ನಾನು ನಮೂದಿಸುತ್ತೇನೆ. |
05:41 | Account description ಫೀಲ್ಡ್ ನಲ್ಲಿ Cash ಆರಿಸಿ. |
05:45 | Amount ಫೀಲ್ಡ್ ನಲ್ಲಿ 3 lakhs ಎಂದು ಟೈಪ್ ಮಾಡಿ. |
05:49 | Memo ಫೀಲ್ಡ್ ನಲ್ಲಿ ಠೇವಣಿಯ ಉದ್ದೇಶವನ್ನು ಟೈಪ್ ಮಾಡಿ. |
05:54 | ನಂತರ ಸಾಲಿನ ಬಲ ತುದಿಯಲ್ಲಿ Add item ಬಟನ್ ಮೇಲೆ ಕ್ಲಿಕ್ ಮಾಡಿ. |
05:59 | ವಿಂಡೋವಿನ ಕೆಳಗಭಾಗದಲ್ಲಿ Process Deposit ಬಟನ್ ಮೇಲೆ ಕ್ಲಿಕ್ ಮಾಡಿ. |
06:04 | ಹೊಸ ವಿಂಡೋದಲ್ಲಿ, ಡೆಪಾಸಿಟ್ ಅನ್ನು ನಮೂದಿಸಲಾಗಿದೆ ಎನ್ನುವ ಸಂದೇಶವನ್ನು ನಾವು ನೋಡಬಹುದು. |
06:10 | ಮುಂದಿನ ಲಿಂಕ್ View the GL postings for this Deposit. ಇದರ ಮೇಲೆ ಕ್ಲಿಕ್ ಮಾಡಿ. |
06:17 | ಡೆಪಾಸಿಟ್ ಮಾಡಿರುವ ಮೊತ್ತದ ವಹಿವಾಟು ವಿವರಗಳ ಪಾಪ್ ಅಪ್ ವಿಂಡೋ ಕಾಣಿಸಿಕೊಳ್ಳುತ್ತದೆ. |
06:24 | ವಿಂಡೋವಿನ ಕೆಳಭಾಗದಲ್ಲಿ Close ಲಿಂಕ್ ಮೇಲೆ ಕ್ಲಿಕ್ ಮಾಡಿ. |
06:28 | ನೀವು ಇನ್ನೊಂದು ಡೆಪಾಸಿಟ್ ಅನ್ನು ನಮೂದಿಸಲು ಇಚ್ಛಿಸಿದಲ್ಲಿ, “Enter Another Deposit” ಲಿಂಕ್ ಮೇಲೆ ಕ್ಲಿಕ್ ಮಾಡಿ. |
06:34 | FrontAccounting ಇಂಟರ್ ಫೇಸ್ ಗೆ ವಾಪಸ್ ಹೋಗಲು ವಿಂಡೋವಿನ ಕೆಳಗಡೆ Back ಲಿಂಕ್ ಮೇಲೆ ಕ್ಲಿಕ್ ಮಾಡಿ. |
06:41 | ನಂತರ ಬ್ಯಾಂಕ್ ಅಕೌಂಟ್ನಿಂದ ಕ್ಯಾಶ್ ಅಥವಾ ಇತರ ಅಕೌಂಟ್ ಗೆ ಹೇಗೆ ಹಣ ವರ್ಗಾವಣೆ ಮಾಡಬಹುದು ಎಂಬುದನ್ನು ನೋಡೋಣ. |
06:49 | Transactions ಪ್ಯಾನೆಲ್ ನಲ್ಲಿ Bank Account Transfers ಲಿಂಕ್ ಮೇಲೆ ಕ್ಲಿಕ್ ಮಾಡಿ. |
06:55 | ಇಲ್ಲಿ ಮೂರು ಲಕ್ಷ ರೂಪಾಯಿಗಳನ್ನು ಬ್ಯಾಂಕ್ ಬ್ಯಾಲನ್ಸ್ ಆಗಿ ತೋರಿಸಲಾಗುತ್ತಿದೆ.
ಈ ಮೊತ್ತವನ್ನು ಈ ಹಿಂದೆ ಡೆಪಾಸಿಟ್ ಮಾಡಿದ್ದನ್ನು ನೆನಪಿಸಿ. |
07:05 | To Account ಫೀಲ್ಡ್ನಲ್ಲಿ Petty Cash account ಆರಿಸಿ. |
07:10 | Amount ಫೀಲ್ಡ್ ನಲ್ಲಿ 20,000 ನಮೂದಿಸಿ. |
07:14 | Memo ಫೀಲ್ಡ್ ನಲ್ಲಿ ಇಲ್ಲಿ ತೋರಿಸಿರುವಂತೆ ಟೈಪ್ ಮಾಡಿ. |
07:17 | ವಿಂಡೋವಿನ ಕೆಳಭಾಗದಲ್ಲಿ Enter Transfer ಬಟನ್ ಮೇಲೆ ಕ್ಲಿಕ್ ಮಾಡಿ. |
07:22 | ಹೊಸ ವಿಂಡೋದಲ್ಲಿ ನಾವು “Transfer has been entered” ಎನ್ನುವ ಹೊಸ ಸಂದೇಶವನ್ನು ನೋಡಬಹುದು. |
07:27 | ಮುಂದಿನ ಲಿಂಕ್ View The GL Journal Entries for this Transfer
ಎಂಟ್ರಿಗಳನ್ನು ನೋಡಲು ಇದರ ಮೇಲೆ ಕ್ಲಿಕ್ ಮಾಡಿ. |
07:35 | ವರ್ಗಾವಣೆ ಮಾಡಿರುವ ಮೊತ್ತದ ಟ್ರಾನ್ಸಾಕ್ಷನ್ ವಿವರಗಳೊಂದಿಗೆ ಒಂದು ಪಾಪ್ ಅಪ್ ವಿಂಡೋ ಕಾಣಿಸಿಕೊಳ್ಳುತ್ತದೆ. |
07:42 | ವಿಂಡೋವಿನ ಕೆಳಭಾಗದಲ್ಲಿ Close ಲಿಂಕ್ ಮೇಲೆ ಕ್ಲಿಕ್ ಮಾಡಿ. |
07:46 | FrontAccounting ಇಂಟರ್ ಫೇಸ್ ಗೆ ವಾಪಸ್ ಹೋಗಲು ವಿಂಡೋವಿನ ಕೆಳಭಾಗದಲ್ಲಿ Back ಮೇಲೆ ಕ್ಲಿಕ್ ಮಾಡಿ. |
07:53 | ನಂತರ ನಾವು ಬ್ಯಾಂಕ್ ಸ್ಟೇಟ್ ಮೆಂಟ್ಗಳನ್ನು ಪರೀಕ್ಷಿಸಲಿದ್ದೇವೆ. |
07:57 | Transactions ಪ್ಯಾನೆಲ್ ನಲ್ಲಿ ಬಲಭಾಗದಲ್ಲಿ Reconcile Bank Account ಮೇಲೆ ಕ್ಲಿಕ್ ಮಾಡಿ. |
08:04 | ಇದು ಕಂಪನಿ ಅಕೌಂಟ್ ಗಳಲ್ಲಿನ ಡೆಪಾಸಿಟ್ ಗಳನ್ನು ಬ್ಯಾಂಕ್ ಸ್ಟೇಟ್ ಮೆಂಟ್ ನಲ್ಲಿನ ಡೆಪಾಸಿಟ್ ಜೊತೆ ತಾಳೆ ಮಾಡುತ್ತದೆ. |
08:10 | ಅಕೌಂಟ್ ಟೋಟಲ್, ಬ್ಯಾಂಕ್ ಡೆಪಾಸಿಟ್ ಗಳು ಮತ್ತು ಫಂಡ್ ಟ್ರಾನ್ಸ್ಫರ್ ವಿವರಗಳನ್ನು ನಾವು ನೋಡಬಹುದು. |
08:17 | ಇದರೊಂದಿಗೆ ನಾವು ಈ ಟ್ಯುಟೋರಿಯಲ್ನ ಕೊನೆಗೆ ತಲುಪಿದ್ದೇವೆ. ನಾವೀಗ ಸಂಕ್ಷೇಪಿಸೋಣ. |
08:22 | ಈ ಟ್ಯುಟೋರಿಯಲ್ ನಲ್ಲಿ ನಾವು
ಹೊಸ ಟ್ಯಾಕ್ಸ್ ಸೇರಿಸಲು, |
08:27 | ಬ್ಯಾಂಕ್ ಅಕೌಂಟ್ ಗಳನ್ನು ರೂಪಿಸಲು, |
08:30 | ಡೆಪಾಸಿಟ್ ಗಳನ್ನು ಸೇರಿಸಲು, |
08:32 | ಮೊತ್ತವನ್ನು ಬ್ಯಾಂಕ್ ಅಕೌಂಟ್ಗೆ ವರ್ಗಾಯಿಸಲು ಮತ್ತು |
08:35 | ಬ್ಯಾಂಕ್ ಅಕೌಂಟ್ ನ ರೀಕನ್ಸೈಲ್ ಕಲಿತೆವು. |
08:39 | ಅಸೈನ್ ಮೆಂಟ್ ಆಗಿ
Deposits ಆಯ್ಕೆಯನ್ನು ಬಳಸಿ ಮತ್ತು ರೂ. 10,000 ಅನ್ನು ಪೆಟಿ ಕ್ಯಾಶ್ ಅಕೌಂಟ್ ಗೆ ಡೆಪಾಸಿಟ್ ಮಾಡಿ. |
08:48 | From ಫೀಲ್ಡ್ ನಲ್ಲಿ Miscellaneous ಆರಿಸಿ.
Name ಅನ್ನು Mr. Rahul ಆಗಿ ನಮೂದಿಸಿ. |
08:54 | ಪೆಟಿ ಕ್ಯಾಶ್ ಅಕೌಂಟ್ ಗಾಗಿ ರೀಕನ್ಸೈಲ್ ಬ್ಯಾಂಕ್ ಅಕೌಂಟ್ ಪರೀಕ್ಷಿಸಿ. |
08:59 | ಈ ಕೆಳಗಿನ ಲಿಂಕ್ ನಲ್ಲಿ ಇರುವ ವೀಡಿಯೊ, ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ಅನ್ನು ಸಂಕ್ಷೇಪಿಸುತ್ತದೆ. ದಯವಿಟ್ಟು ಇದನ್ನು ಡೌನ್ ಲೋಡ್ ಮಾಡಿ ಮತ್ತು ವೀಕ್ಷಿಸಿ. |
09:07 | ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ತಂಡವು ಕಾರ್ಯಾಗಾರಗಳನ್ನು ನಡೆಸುತ್ತದೆ ಮತ್ತು ಪ್ರಮಾಣಪತ್ರಗಳನ್ನು ನೀಡುತ್ತದೆ. ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ನಮಗೆ ಪತ್ರ ಬರೆಯಿರಿ. |
09:18 | ಈ ಫಾರಂನಲ್ಲಿ ನಿಮ್ಮ ಟೈಮ್ಡ್ ಕ್ವೆರಿಗಳನ್ನು ಪೋಸ್ಟ್ ಮಾಡಿ. |
09:22 | ‘ಸ್ಪೋಕನ್ ಟ್ಯುಟೋರಿಯಲ್’ ಪ್ರೊಜೆಕ್ಟ್, MHRD, ಭಾರತ ಸರ್ಕಾರದ ನೆರವು ಪಡೆದಿದೆ. |
09.28 | ಈ ಸ್ಕ್ರಿಪ್ಟ್, ಸ್ಪೋಕನ್ ಟ್ಯುಟೋರಿಯಲ್ ತಂಡದ ಕೊಡುಗೆಯಾಗಿದೆ.
ಈ ಸ್ಕ್ರಿಪ್ಟ್ ನ ಅನುವಾದಕರು ಮಂಗಳೂರಿನಿಂದ ಮೆಲ್ವಿನ್, ಮತ್ತು ಧ್ವನಿ ---------- . |