FrontAccounting-2.4.7/C2/Items-and-Inventory-in-FrontAccounting/Kannada

From Script | Spoken-Tutorial
Revision as of 13:05, 23 April 2020 by Melkamiyar (Talk | contribs)

(diff) ← Older revision | Latest revision (diff) | Newer revision → (diff)
Jump to: navigation, search
Time Narration


00:01 FrontAccounting ನಲ್ಲಿ ಐಟಂಗಳು ಮತ್ತು ಇನ್ವೆಂಟರಿ ಕುರಿತ ಸ್ಪೋಕನ್ ಟ್ಯುಟೋರಿಯಲ್ ಗೆ ಸ್ವಾಗತ.
00:07 ಈ ಟ್ಯುಟೋರಿಯಲ್ ನಲ್ಲಿ ನಾವು ಈ ಕೆಳಗಿನ ಅಂಶಗಳನ್ನು FrontAccounting ನಲ್ಲಿ ಸೇರಿಸಲು ಕಲಿಯಲಿದ್ದೇವೆ:

ಯೂನಿಟ್ಸ್ ಆಫ್ ಮೆಶರ್ (ಮಾಪನದ ಮಾನಗಳು),

00:14 ಐಟಂಗಳು,
00:16 ಐಟಂ ಕೆಟಗರಿ ಮತ್ತು ಸೇಲ್ಸ್ ಪ್ರೈಸಿಂಗ್.
00:20 ಈ ಟ್ಯುಟೋರಿಯಲ್ ರೆಕಾರ್ಡ್ ಮಾಡಲು ನಾನು

ಉಬಂಟು ಲೀನಕ್ಸ್ ಒ.ಎಸ್ ವರ್ಶನ್ 16.04 ಮತ್ತು

00:28 FrontAccounting ವರ್ಶನ್ 2.4.7 ಬಳಸುತ್ತಿದ್ದೇನೆ.
00:32 ಈ ಟ್ಯುಟೋರಿಯಲ್ ಅಭ್ಯಸಿಸಲು ನೀವು ಹೈಯರ್ ಸೆಕೆಂಡರಿ ಕಾಮರ್ಸ್ ಮತ್ತು ಅಕೌಂಟಿಂಗ್ ಮತ್ತು ಬುಕ್ ಕೀಪಿಂಗ್ನ ತತ್ವಗಳ ಜ್ಞಾನವನ್ನು ಹೊಂದಿರಬೇಕು.
00:42 ಮತ್ತು ನೀವು ಈಗಾಗಲೇ FrontAccounting ನಲ್ಲಿ ಆರ್ಗನೈಸೇಶನ್/ಕಂಪನಿಯನ್ನು ಸೆಟಪ್ ಮಾಡಿರಬೇಕು.
00:48 ಇಲ್ಲದಿದ್ದಲ್ಲಿ ಸಂಬಂಧಿತ FrontAccounting ಟ್ಯಟೋರಿಯಲ್ ಗಳಿಗಾಗಿ ದಯವಿಟ್ಟು ಈ ವೆಬ್ ಸೈಟ್ಗೆ ಭೇಟಿ ನೀಡಿ.
00:54 FrontAccounting ಇಂಟರ್ ಫೇಸ್ ನಲ್ಲಿ ನೀವು ಕೆಲಸ ಪ್ರಾರಂಭಿಸುವ ಮೊದಲು XAMPP ಸರ್ವಿಸ್ ಗಳನ್ನು ಪ್ರಾರಂಭಿಸಿ.
01:00 ಪ್ರಾರಂಭಿಸುವ ಮೊದಲು FrontAccounting ನಲ್ಲಿ ಐಟಂಗಳು ಅಂದರೆ ಏನು ಎಂಬುದನ್ನು ನಾವು ತಿಳಿದುಕೊಳ್ಳೋಣ.
01:06 ಐಟಂಗಳು ಎಂದರೆ ವ್ಯವಹಾರದಲ್ಲಿ ನಾವು ಖರೀದಿಸಬಹುದಾಗ ಮತ್ತು ಮಾರಬಲ್ಲ ವಸ್ತುಗಳಾಗಿವೆ.
01:11 ಒಂದು ಇನ್ವೆಂಟರಿ ಐಟಂ ಕುರಿತು ಅಗತ್ಯ ಮಾಹಿತಿಯನ್ನು ಪಟ್ಟಿ ಮಾಡುವ ದಾಖಲೆಯನ್ನು ನಾವು ಇಡಬೇಕು.
01:18 ಇನ್ವೆಂಟರಿ ಎಂದರೆ ಕೈಯಲ್ಲಿರುವ ಸರಕು,
01:23 ಪ್ರಗತಿಯಲ್ಲಿರುವ ಕಾರ್ಯ,

ಕೈಯಲ್ಲಿರುವ ಕಚ್ಚಾ ಸಾಮಗ್ರಿಗಳು ಮತ್ತು ಅಂತಿಮ ಸರಕುಗಳ ಸಂಪೂರ್ಣ ಪಟ್ಟಿಯಾಗಿದೆ.


01:30 ನಾವೀಗ Frontaccounting ಇಂಟರ್ ಫೇಸ್ ತೆರೆಯೋಣ.
01:34 ಬ್ರೌಸರ್ ತೆರೆಯಿರಿ ಮತ್ತು localhost slash account ಎಂದು ಟೈಪ್ ಮಾಡಿ ಮತ್ತು Enter ಒತ್ತಿ.
01:43 ಈಗ ಲಾಗಿನ್ ಪೇಜ್ ಕಾಣಿಸಿಕೊಳ್ಳುತ್ತದೆ.
01:46 admin ಅನ್ನು ಯೂಸರ್ ನೇಮ್ ಆಗಿ ಮತ್ತು ಪಾಸ್ವರ್ಡ್ ಟೈಪ್ ಮಾಡಿ.

Login ಬಟನ್ ಮೇಲೆ ಕ್ಲಿಕ್ ಮಾಡಿ.

01:54 Frontaccounting ಇಂಟರ್ಫೇಸ್ ತೆರೆದುಕೊಳ್ಳುತ್ತದೆ.
01:57 tems and Inventory ಟ್ಯಾಬ್ ಮೇಲೆ ಕ್ಲಿಕ್ ಮಾಡಿ.
02:01 ಐಟಂಗಳು ಮತ್ತು ಇನ್ವೆಂಟರಿ ವಿವರಗಳ ಸೆಟಪ್ ಮಾಡಲು Maintenance ಪ್ಯಾನೆಲ್ ಅನ್ನು ಬಳಸಲಾಗುತ್ತದೆ.
02:06 ಸೆಟಪ್ ಮಾಡಲು ನಾವು ಈ ಕೆಳಗಿನ ಆಯ್ಕೆಗಳನ್ನು ಬಳಸಬೇಕು:

ಯೂನಿಟ್ಸ್ ಆಫ್ ಮೆಶರ್,

02:13 ಐಟಂಗಳು ಮತ್ತು ಐಟಂ ಕೆಟಗರಿಗಳು.
02:18 ಯೂನಿಟ್ಸ್ ಆಫ್ ಮೆಶರ್ ಸೆಟ್ ಮಾಡುವುದು ಹೇಗೆ ಎಂದು ನೋಡೋಣ.
02:22 ಪ್ರತಿಯೊಂದು ಆಯ್ಕೆಗೆ ಯೂನಿಟ್ಸ್ ಆಫ್ ಮೆಶರ್ ಸೂಚಿಸಬೇಕು.
02:27 Maintenance ಪ್ಯಾನೆಲ್‌ನಲ್ಲಿ, Units of Measure ಲಿಂಕ್‌ ಮೇಲೆ ಕ್ಲಿಕ್‌ ಮಾಡಿ.


02:32 ಡಿಫಾಲ್ಟ್ ಆಗಿ ನೀವು each ಮತ್ತು hour ಅನ್ನು ಯೂನಿಟ್ಸ್ ಆಫ್ ಮೆಶರ್ ಆಗಿ ಕಾಣಲಿದ್ದೀರಿ.
02:38 ಕಿಲೋಗ್ರಾಂಗಳಿಗೆ ಹೊಸ ಯೂನಿಟ್ಸ್ ಆಫ್ ಮೆಶರ್ ಅನ್ನು ಸೇರಿಸುವುದು ಹೇಗೆ ಎಂದು ನಾವು ನೋಡೋಣ.
02:43 ಇಲ್ಲಿ ತೋರಿಸಿರುವಂತೆ kilograms ಯೂನಿಟ್ಗೆ ವಿವರಗಳನ್ನು ಟೈಪ್ ಮಾಡಿ.
02:48 Decimal places ಡ್ರಾಪ್ ಡೌನ್ ಬಾಕ್ಸ್ನಲ್ಲಿ zeroಆರಿಸಿ.
02:53 ಈ ಯೂನಿಟ್ ಸೇರಿಸಲು ವಿಂಡೋವಿನ ಕೆಳಗಿನ ಭಾಗದಲ್ಲಿರುವ Add new ಬಟನ್ ಮೇಲೆ ಕ್ಲಿಕ್ ಮಾಡಿ.
02:59 ನಾವು ಹೊಸ ಯೂನಿಟ್ ಅನ್ನು ಯಶಸ್ವಿಯಾಗಿ ಸೇರಿಸಿದ್ದೇವೆ ಎಂಬುದನ್ನು ಪಾಪ್-ಅಪ್ ಸಂದೇಶವು ತಿಳಿಸುತ್ತದೆ.
03:04 ನವೀಕರಿಸಿದ ಎಂಟ್ರಿಯನ್ನು ಹೊಂದಿರುವ ಟೇಬಲ್ ಅನ್ನು ಸಹ ನಾವು ನೋಡಬಹುದು.
03:08 ಇದೇ ರೀತಿ ನೀವು ನಿಮ್ಮ ಕಂಪನಿಯ ಐಟಂಗಳಿಗೆ ಅಗತ್ಯವಿರುವ ಯೂನಿಟ್ಸ್ ಆಫ್ ಮೆಶರ್ ಸೇರಿಸಬೇಕು.
03:15 ಇಂಟರ್ಫೇಸ್ಗೆ ವಾಪಸ್ ಹೋಗಲು ವಿಂಡೋವಿನ ಕೆಳಭಾಗದಲ್ಲಿರುವ Back ಲಿಂಕ್ ಮೇಲೆ ಕ್ಲಿಕ್ ಮಾಡಿ.
03:22 ಈಗ, ಸಂಬಂಧಪಟ್ಟ ಐಟಂಗಳ ಐಟಂ ಕೆಟಗರಿಗಳನ್ನು ನಾವು ಸೆಟ್ ಮಾಡಬೇಕು.
03:28 ಐಟಂ ಕೆಟಗರಿಗಳು, ನಾವು ಖರೀದಿಸುವ ಮತ್ತು ಮಾರುವ ಐಟಂಗಳನ್ನು ಗುಂಪುಗೂಡಿಸುತ್ತವೆ.
03:33 Item Categories ಲಿಂಕ್ ನ ಮೇಲೆ ಕ್ಲಿಕ್ ಮಾಡಿ.
03:35 ನಾವಿಲ್ಲಿ ಕೆಲವು ಡಿಫಾಲ್ಟ್ ಐಟಂ ಕೆಟಗರಿಗಳನ್ನು ನೋಡಬಹುದು - Charges, Components, Services ಮತ್ತು Systems.
03:48 ನಾವು ಈ ಕೆಳಗಿನವುಗಳನ್ನು ನಿರೂಪಿಸುವ ಐಟಂ ಕೆಟಗರಿಯನ್ನು ರಚಿಸಬೇಕು:

ಐಟಂ ಟ್ಯಾಕ್ಸ್ ಟೈಪ್,

03:54 ಐಟಂ ಟೈಪ್ ಮತ್ತು ಯೂನಿಟ್ಸ್ ಆಫ್ ಮೆಶರ್.
03:58 ಉದಾಹರಣೆಗೆ ನಮ್ಮ ಕಂಪನಿಯು ಅಂತಿಮ ಸರಕು, ಅಂದರೆ ಲ್ಯಾಪ್ ಟಾಪ್ ಗಳ ವ್ಯವಹಾರ ಮಾಡುತ್ತದೆ ಎಂದುಕೊಳ್ಳೋಣ.
04:04 ಇದಕ್ಕಾಗಿ ನಾವು ಫಿನಿಶ್ಡ್ ಗೂಡ್ಸ್ ಎನ್ನುವ ಹೊಸ ಐಟಂ ಕೆಟಗರಿಯನ್ನು ಸೇರಿಸಲಿದ್ದೇವೆ.
04:09 ಈ ಕೆಳಗೆ ತೋರಿಸಿರುವಂತೆ ವಿವರಗಳನ್ನು ತುಂಬಿರಿ.

Category Name – Finished Goods

04:15 Item Tax Type – Regular

Item Type - Purchased

04:21 Units of Measure - Each


04:24 ಉಳಿದ ಎಲ್ಲಾ ಫೀಲ್ಡ್ಗಳಲ್ಲಿ ಡಿಫಾಲ್ಟ್ ಮೌಲ್ಯಗಳನ್ನೇ ಉಳಿಸಿ.
04:28 ಎಂಟ್ರಿಯನ್ನು ಸೇವ್ ಮಾಡಲು ವಿಂಡೋವಿನ ಕೆಳಭಾಗದ Add New ಬಟನ್ ಮೇಲೆ ಕ್ಲಿಕ್ ಮಾಡಿ.
04:34 ಮೇಲಿನ ಟೇಬಲ್ನಲ್ಲಿ ಹೊಸದಾಗಿ ಸೇರಿಸಿದ ವಿವರಗಳು ಪರಿಷ್ಕರಣೆಯಾಗಿರುವುದನ್ನು ನಾವು ನೋಡಬಹುದು.
04:40 FrontAccounting ಇಂಟರ್ ಫೇಸ್ ಗೆ ವಾಪಸ್ ಹೋಗಲು ವಿಂಡೋವಿನ ಕೆಳಭಾಗದಲ್ಲಿರುವ Back ಲಿಂಕ್ ಮೇಲೆ ಕ್ಲಿಕ್ ಮಾಡಿ.
04:47 ನಂತರ ನಾವು ಈ ಐಟಂ ಕೆಟಗರಿಗೆ ಹೊಸ ಐಟಂ ಅನ್ನು ರಚಿಸೋಣ.
04:52 Maintenance ಪ್ಯಾನಲ್ ನಲ್ಲಿ Items ಲಿಂಕ್ ಮೇಲೆ ಕ್ಲಿಕ್ ಮಾಡಿ.
04:57 ಇಲ್ಲಿ ಐಟಂಗಾಗಿ ಎಲ್ಲಾ ಅಗತ್ಯ ಮಾಹಿತಿಯನ್ನು ಭರ್ತಿ ಮಾಡಲು ನಮ್ಮನ್ನು ಕೇಳಲಾಗುತ್ತದೆ.

ಇಲ್ಲಿ ತೋರಿಸಿರುವಂತೆ ವಿವರಗಳನ್ನು ಭರ್ತಿ ಮಾಡಿ.

05:06 ನೀವು ಭರ್ತಿ ಮಾಡುವ ಪ್ರತಿ ಐಟಂಗೆ ನೀವು ವಿಶಿಷ್ಟ ಕೋಡ್ ನೀಡಿದ್ದೀರಿ ಎಂಬುದನ್ನು ಖಚಿತಪಡಿಸಿ.

ಇದು ಕಡ್ಡಾಯ.

05:13 ಕೆಟಗರಿ ಎನ್ನುವುದು ಐಟಂ ಸೇರಿರುವ ಐಟಂ ಕೆಟಗರಿ ಆಗಿದೆ.

ನಾವು ಫಿನಿಶ್ಡ್ ಗೂಡ್ಸ್ ಆರಿಸಿದ್ದೇವೆ.

05:21 ಐಟಂ ಟೈಪ್ ಎನ್ನುವುದು ಐಟಂ ಅನ್ನು:

ಉತ್ಪಾದನಾ ಉದ್ದೇಶಕ್ಕೆ,

05:28 ಸಪ್ಲಾಯರ್ ನಿಂದ ಅಥವಾ ಸರ್ವಿಗ್ ಗಾಗಿ ಖರೀದಿಸಲಾಗಿದೆಯೇ ಎನ್ನುವುದಕ್ಕೆ ಬಳಸಲಾಗುತ್ತದೆ.
05:33 ಸ್ಕ್ರಾಲ್ ಡೌನ್ ಮಾಡಿ.

ಮತ್ತು ವಿಂಡೋವಿನ ಕೆಳಭಾಗದಲ್ಲಿ Insert New Item ಬಟನ್ ಮೇಲೆ ಕ್ಲಿಕ್ ಮಾಡಿ.

05:41 ನಾವು ಹೊಸ ಐಟಂ ಅನ್ನು ಯಶಸ್ವಿಯಾಗಿ ಸೇರಿಸಿದ್ದೇವೆ ಎನ್ನುವುದನ್ನು ಈ ಪಾಪ್-ಅಪ್ ಸಂದೇಶವು ತೋರಿಸುತ್ತದೆ.
05:47 ವಿಂಡೋವಿನ ಮೇಲ್ಭಾಗದಲ್ಲಿ ಡ್ರಾಪ್ ಡೌನ್ ಬಾಕ್ಸ್ ಮೇಲೆ ಕ್ಲಿಕ್ ಮಾಡಿ.
05:51 ಹೊಸ ಐಟಂ ಅನ್ನು ಸೇರಿಸಿರುವುದನ್ನು ನಾವು ನೋಡಬಹುದು.
05:56 ಅಸೈನ್ ಮೆಂಟ್ ಆಗಿ:

Finished goods ಐಟಂ ಕೆಟಗರಿಯ ಅಡಿ ಹೊಸ ಐಟಂಗಳನ್ನು ಸೇರಿಸಿ.

06:02 Components ಐಟಂ ಕೆಟಗರಿಯ ಅಡಿ ಎರಡು ಹೊಸ ಐಟಂಗಳನ್ನು ಸೇರಿಸಿ.
06:07 ವಿವರಗಳಿಗಾಗಿ ಈ ಟ್ಯುಟೋರಿಯಲ್ ನ Assignment ಲಿಂಕ್ ಉಲ್ಲೇಖಿಸಿ.
06:12 ಅಸೈನ್ ಮೆಂಟ್ ಪೂರ್ಣಗೊಳಿಸಿದ ನಂತರ ವಿಂಡೋವಿನ ಮೇಲ್ಭಾಗದಲ್ಲಿರುವ ಡ್ರಾಪ್ ಡೌನ್ ಬಾಕ್ಸ್ ಮೇಲೆ ಕ್ಲಿಕ್ ಮಾಡಿ.
06:18 ಈಗ ನೀವು Components ಅಡಿಯಲ್ಲಿ 2 ಐಟಂಗಳು ಮತ್ತು Finished goods ಅಡಿಯಲ್ಲಿ 3 ಐಟಂಗಳನ್ನು ನೋಡಬಹುದು.
06:26 Frontaccounting ಇಂಟರ್ ಫೇಸ್ ಗೆ ವಾಪಸ್ ಹೋಗಲು ವಿಂಡೋವಿನ ಕೆಳಭಾಗದಲ್ಲಿರುವ Back ಲಿಂಕ್ ಮೇಲೆ ಕ್ಲಿಕ್ ಮಾಡಿ.
06:33 ಐಟಂಗಳು ಅಥವಾ ಇನ್ವೆಂಟರಿಯ ಬೆಲೆಯ ಮಟ್ಟವನ್ನು ಆರಿಸಲು Pricing and Costs ಪ್ಯಾನೆಲ್ ಬಳಸಲಾಗುತ್ತದೆ.
06:40 ಪ್ರತ್ಯೇಕ ಸೇಲ್ಸ್ ಐಟಂಗಳಿಗೆ ಸೇಲ್ಸ್ ಪ್ರೈಸ್ ಗಳನ್ನು ನೀಡಲು ಈ ಆಯ್ಕೆಯನ್ನು ಬಳಸಲಾಗುತ್ತದೆ.

Sales Pricing ಲಿಂಕ್ನ ಮೇಲೆ ಕ್ಲಿಕ್ ಮಾಡಿ.

06:49 Item ಡ್ರಾಪ್ ಡೌನ್ ಬಾಕ್ಸ್ನ ಮೇಲೆ ಕ್ಲಿಕ್ ಮಾಡಿ.

ನಾವು ಸೇಲ್ಸ್ ಪ್ರೈಸ್ ನೀಡಬೇಕಾದ Dell Laptop ಐಟಂ ಅನ್ನು ಆರಿಸಿ.

06:58 ಈಗ Currency ಡ್ರಾಪ್ ಡೌನ್ ಬಾಕ್ಸ್ನ ಮೇಲೆ ಕ್ಲಿಕ್ ಮಾಡಿ.
07:02 ಕರೆನ್ಸಿಯನ್ನು Indian Rupees ಎಂದು ಆರಿಸಿ.
07:06 Sales Type ಡ್ರಾಪ್ ಡೌನ್ ಬಾಕ್ಸ್ ಮೇಲೆ ಕ್ಲಿಕ್ ಮಾಡಿ.
07:10 ಇಲ್ಲಿ ಎರಡು ಆಯ್ಕೆಗಳಿವೆ: Retail ಮತ್ತು Wholesale
07:15 ಇಲ್ಲಿ Retail ಆಯ್ಕೆಯನ್ನು ಆರಿಸಿ.
07:19 ನಂತರ Price ಫೀಲ್ಡ್ ಮೇಲೆ ಕ್ಲಿಕ್ ಮಾಡಿ.

ಐಟಂನಲ್ಲಿ ಪ್ರೈಸ್ ಅನ್ನು 53,000 per each ಎಂದು ಟೈಪ್ ಮಾಡಿ.

07:28 ನಂತರ ವಿಂಡೋವಿನ ಕೆಳಭಾಗದಲ್ಲಿ Add New ಬಟನ್ ಮೇಲೆ ಕ್ಲಿಕ್ ಮಾಡಿ.
07:33 ನಾವು ಡೆಲ್ ಲ್ಯಾಪ್ ಟಾಪ್ ಐಟಂಗೆ ಸೇಲ್ಸ್ ಪ್ರೈಸ್ ಅನ್ನು ಯಶಸ್ವಿಯಾಗಿ ಸೇರಿಸಿದ್ದೇವೆ ಎನ್ನುವುದನ್ನು ಪಾಪ್ ಅಪ್ ಸಂದೇಶವು ತೋರಿಸುತ್ತದೆ.
07:41 ನಾವು ಇಲ್ಲಿ ಟೇಬಲ್ನಲ್ಲಿ ಪರಿಷ್ಕೃತ ಮೌಲ್ಯಗಳನ್ನು ಸಹ ನೋಡಬಹುದು.
07:45 Frontaccounting ಇಂಟರ್ ಫೇಸ್ ಗೆ ಮರಳಲು ವಿಂಡೋವಿನ ಕೆಳಭಾಗದ Back ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
07:52 ಇದರೊಂದಿಗೆ ನಾವು ಈ ಟ್ಯುಟೋರಿಯಲ್ ನ ಕೊನೆಗೆ ತಲುಪಿದ್ದೇವೆ.
07:56 ನಾವೀಗ ಸಂಕ್ಷೇಪಿಸೋಣ.
07:58 ಈ ಟ್ಯುಟೋರಿಯಲ್ ನಲ್ಲಿ ನಾವು

ಯೂನಿಟ್ಸ್ ಆಫ್ ಮೆಶರ್, ಐಟಂಗಳು,

08:06 ಐಟಂ ಕೆಟಗರಿ ಮತ್ತು ಸೇಲ್ಸ್ ಪ್ರೈಸಿಂಗ್ ರಚಿಸಲು ಕಲಿತೆವು.
08:10 ಅಸೈನ್ಮೆಂಟ್ ಆಗಿ ಈ ಕೆಳಗೆ ತೋರಿಸಿರುವ ಐಟಂಗಳಿಗೆ ಸೇಲ್ಸ್ ಪ್ರೈಸ್ ಸೇರಿಸಿ:

ಸೇಲ್ಸ್ ಟೈಪ್ ಅನ್ನು Retail ಆಗಿ ಇಡಿ.

08:20 ಈ ಕೆಳಗಿನ ಲಿಂಕ್ ನಲ್ಲಿ ಇರುವ ವೀಡಿಯೊ, ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ಅನ್ನು ಸಂಕ್ಷೇಪಿಸುತ್ತದೆ. ದಯವಿಟ್ಟು ಇದನ್ನು ಡೌನ್ ಲೋಡ್ ಮಾಡಿ ಮತ್ತು ವೀಕ್ಷಿಸಿ.
08:27 ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ತಂಡವು ಕಾರ್ಯಾಗಾರಗಳನ್ನು ನಡೆಸುತ್ತದೆ ಮತ್ತು ಪ್ರಮಾಣಪತ್ರಗಳನ್ನು ನೀಡುತ್ತದೆ. ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ನಮಗೆ ಪತ್ರ ಬರೆಯಿರಿ.
08:35 ಈ ಫಾರಂನಲ್ಲಿ ನಿಮ್ಮ ಟೈಮ್ಡ್ ಕ್ವೆರಿಗಳನ್ನು ಪೋಸ್ಟ್ ಮಾಡಿ.
08:39 ‘ಸ್ಪೋಕನ್ ಟ್ಯುಟೋರಿಯಲ್’ ಪ್ರೊಜೆಕ್ಟ್, MHRD, ಭಾರತ ಸರ್ಕಾರದ ನೆರವು ಪಡೆದಿದೆ. ಈ ಸ್ಕ್ರಿಪ್ಟ್, ಸ್ಪೋಕನ್ ಟ್ಯುಟೋರಿಯಲ್ ತಂಡದ ಕೊಡುಗೆಯಾಗಿದೆ.

ಈ ಸ್ಕ್ರಿಪ್ಟ್ ನ ಅನುವಾದಕರು ಮಂಗಳೂರಿನಿಂದ ಮೆಲ್ವಿನ್, ಮತ್ತು ಧ್ವನಿ ---------- .

Contributors and Content Editors

Melkamiyar, Sandhya.np14