FrontAccounting-2.4.7/C2/Installation-of-FrontAccounting-on-Windows-OS/Kannada
Time | Narration
|
00:01 | ವಿಂಡೋಸ್ ಒ.ಎಸ್ ನಲ್ಲಿ FrontAccounting ಅಳವಡಿಕೆಯ ಕುರಿತ ಸ್ಪೋಕನ್ ಟ್ಯುಟೋರಿಯಲ್ಗೆ ಸ್ವಾಗತ |
00:07 | ಈ ಟ್ಯುಟೋರಿಯಲ್ನಲ್ಲಿ ನಾವು XAMPP ಅಳವಡಿಸಲು, |
00:12 | FrontAccounting ಸಾಫ್ಟ್ವೇರ್ ಡೌನ್ಲೋಡ್ ಮಾಡಲು, |
00:15 | ಡೇಟಾಬೇಸ್ ಸೆಟಪ್ ಮಾಡಲು ಮತ್ತು
ವಿಂಡೋಸ್ ಒ.ಎಸ್ ನಲ್ಲಿ FrontAccounting ಅಳವಡಿಸಲು ಕಲಿಯಲಿದ್ದೇವೆ. |
00:21 | ಈ ಟ್ಯುಟೋರಿಯಲ್ ರೆಕಾರ್ಡ್ ಮಾಡಲು ನಾನು ವಿಂಡೋಸ್ ಒ.ಎಸ್ ವರ್ಶನ್ 10, |
00:26 | ಅಪಾಚೆ, ಮೈ SQL ಮತ್ತು XAMPP 5.5.19 ಮೂಲಕ ಗಳಿಸಿದ PHP ಬಳಸುತ್ತಿದ್ದೇನೆ. |
00:32 | FrontAccounting ವರ್ಶನ್ 2.4.7, |
00:36 | ಫೈರ್ಫಾಕ್ಸ್ ವೆಬ್ ಬ್ರೌಸರ್ ಮತ್ತು ಕಾರ್ಯನಿರ್ವಹಿಸುವ ಇಂಟರ್ನೆಟ್ ಬಳಸುತ್ತಿದ್ದೇನೆ.
|
00:41 | ನೀವು ನಿಮ್ಮ ಆಯ್ಕೆಯ ಯಾವುದೇ ವೆಬ್ ಬ್ರೌಸರ್ ಬಳಸಬಹುದು. |
00:44 | FrontAccounting ಎನ್ನುವುದು ಸರ್ವರ್ ಆಧರಿತ ಅಕೌಂಟಿಂಗ್ ಸಿಸ್ಟಂ ಆಗಿದೆ.
ಹೀಗಾಗಿ ನಾವು ನಮ್ಮ ಮಶಿನ್ನಲ್ಲಿ ವೆಬ್ ಸರ್ವರ್ ಸ್ಥಾಪಿಸಲು XAMPP ಬಳಸಲಿದ್ದೇವೆ. |
00:52 | ವೆಬ್ ಬ್ರೌಸರ್ ಒಂದನ್ನು ತೆರೆಯಿರಿ.
ಅಡ್ರೆಸ್ ಬಾರ್ನಲ್ಲಿ ಈ URL ಟೈಪ್ ಮಾಡಿ ಮತ್ತು Enter ಒತ್ತಿ. |
00:59 | ಇದು ನಮ್ಮನ್ನು XAMPP ಡೌನ್ಲೋಡ್ ಪೇಜ್ಗೆ ಕೊಂಡೊಯ್ಯಲಿದೆ. |
01:03 | ಇಲ್ಲಿ ಎಲ್ಲಾ ಅಪರೇಟಿಂಗ್ ಸಿಸ್ಟಂಗಳಿಗೆ ಡೌನ್ಲೋಡ್ ಮಾಡಲು XAMPP ಲಭ್ಯ. |
01:08 | ಈ ಹಸಿರು ಬಟನ್ ಅನ್ನು ಕ್ಲಿಕ್ ಮಾಡಿ XAMPP ಯ ಇತ್ತೀಚಿನ ವರ್ಶನ್ ಅನ್ನು ಡೌನ್ಲೋಡ್ ಮಾಡಬಹುದು. |
01:13 | ಆದರೂ, ನಿಮ್ಮ ಸಾಫ್ಟ್ವೇರ್ ಅಗತ್ಯತೆಗೆ ಅನುಗುಣವಾಗಿ ನಿಮಗೆ XAMPP ಯ ಬೇರೆ ವರ್ಶನ್ ಬೇಕಾಗಬಹುದು. |
01:19 | ನನಗೆ ಮಾತ್ರ XAMPP ವರ್ಶನ್ 5.5.19 ಬೇಕು.
|
01:24 | XAMPP Windows ವಿಂಡೋಸ್ ಲಿಂಕ್ ಮೇಲೆ ಕ್ಲಿಕ್ ಮಾಡಿ. |
01:28 | ರಿಡೈರೆಕ್ಟ್ ಆದ ಪೇಜ್, ಇಲ್ಲಿಯವರೆಗಿನ ಎಲ್ಲಾ XAMPP ವರ್ಶನ್ಗಳನ್ನು ತೋರಿಸುತ್ತದೆ. |
01:32 | ಇದರ ಅಳವಡಿಕೆಗಾಗಿ ನಾನು XAMPP ವರ್ಶನ್ 5.5.19 ಆರಿಸುತ್ತೇನೆ. |
01:39 | ಡೌನ್ಲೋಡ್ ಮಾಡಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ. |
01:43 | ಈಗ Save file ಬಟನ್ ಮೇಲೆ ಕ್ಲಿಕ್ ಮಾಡಿ.
exe ಫೈಲ್ ನಮ್ಮ ಮಶಿನ್ನಲ್ಲಿ ಡೌನ್ಲೋಡ್ ಆಗುತ್ತದೆ. |
01:51 | ನೀವು ಎಲ್ಲಿ ಫೈಲ್ ಡೌನ್ಲೋಡ್ ಮಾಡಿದ್ದೀರೋ, ಆ ಫೋಲ್ಡರ್ ತೆರೆಯಿರಿ. |
01:55 | ಅಳವಡಿಕೆಯನ್ನು ಪ್ರಾರಂಭಿಸಲು ಫೈಲ್ನ ಮೇಲೆ ಡಬಲ್ ಕ್ಲಿಕ್ ಮಾಡಿ. |
01:59 | ಯೂಸರ್ ಅಕೌಂಟ್ ಕಂಟ್ರೋಲ್ ಡೈಲಾಗ್ ಬಾಕ್ಸ್ ತೆರೆಯಲ್ಪಡುತ್ತದೆ.
Yes ಬಟನ್ ಮೇಲೆ ಕ್ಲಿಕ್ ಮಾಡಿ.
|
02:06 | ನಿಮ್ಮ ಮಶಿನ್ನಲ್ಲಿ ನೀವು ಯಾವುದಾದರೂ ಅಂಟಿವೈರಸ್ ಸಾಫ್ಟ್ವೇರ್ ಅಳವಡಿಸಿದ್ದರೆ ನೀವು ಇನ್ನೊಂದು ಪಾಪ್ಅಪ್ ವಿಂಡೋ ಕಾಣುತ್ತೀರಿ.
Yes ಬಟನ್ ಮೇಲೆ ಕ್ಲಿಕ್ ಮಾಡಿ. |
02:15 | ಮುಂದಿನ ವಿಂಡೋದಲ್ಲಿ, ಎಚ್ಚರಿಕೆಯ ಸಂದೇಶವನ್ನು ನಿರ್ಲಕ್ಷಿಸಲು OK ಬಟನ್ ಮೇಲೆ ಕ್ಲಿಕ್ ಮಾಡಿ. |
02:21 | ಈಗ ಸೆಟಪ್ ವಿಜಾರ್ಡ್ ಡೈಲಾಗ್ ಬಾಕ್ಸ್ ತೆರೆಯಲ್ಪಡುತ್ತದೆ. |
02:25 | ಕೇಳಿದಾಗಲೆಲ್ಲ Next ಬಟನ್ ಮೇಲೆ ಕ್ಲಿಕ್ ಮಾಡಿ ಮತ್ತು ಇಲ್ಲಿ ತೋರಿಸಿದಂತೆ ಅಳವಡಿಕೆಯ ಹಂತಗಳನ್ನು ಅನುಸರಿಸಿ. |
02:31 | Learn more about Bitnami for XAMPP ಚೆಕ್ ಬಾಕ್ಸ್ ಅನ್ನು ಅನ್ಚೆಕ್ ಮಾಡಿ.
ನಂತರ Next ಬಟನ್ ಮೇಲೆ ಕ್ಲಿಕ್ ಮಾಡಿ ಮುಂದುವರಿಯಿರಿ. |
02:40 | ಅಳವಡಿಕೆಯನ್ನು ಪೂರ್ಣಗೊಳಿಸಿದ ನಂತರ, Do you want to start the Control Panel now? ಚೆಕ್ಬಾಕ್ಸ್ ಅನ್ನು ಅನ್ಚೆಕ್ ಮಾಡಿ. |
02:47 | ಅಂತಿಮವಾಗಿ, Finish ಬಟನ್ ಮೇಲೆ ಕ್ಲಿಕ್ ಮಾಡಿ. |
02:51 | ಈಗ ನಾವು XAMPP ಯು ನಮ್ಮ ಮಶಿನ್ನಲ್ಲಿ ಯಶಸ್ವಿಯಾಗಿ ಅಳವಡಿಕೆಯಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ಪರೀಕ್ಷಿಸಬೇಕು.
|
02:56 | ಸ್ಕ್ರೀನ್ನ ಬುಡದಲ್ಲಿ ಎಡಭಾಗದಲ್ಲಿರುವ Windows search bar ಮೇಲೆ ಕ್ಲಿಕ್ ಮಾಡಿ ಮತ್ತು xampp ಎಂದು ಟೈಪ್ ಮಾಡಿ. |
03:02 | ನಾವೀಗ ಸರ್ಚ್ ಲಿಸ್ಟ್ನಲ್ಲಿ XAMPP Control Panel ನೋಡಬಹುದು. |
03:06 | XAMPP Control Panel ಮೇಲೆ ರೈಟ್ ಕ್ಲಿಕ್ ಮಾಡಿ ಮತ್ತು Run as administrator ಆರಿಸಿ. |
03:12 | XAMPP ಕಂಟ್ರೋಲ್ ಪ್ಯಾನೆಲ್ನಲ್ಲಿ ಅಪಾಚೆ ಮತ್ತು ಮೈ SQL ಸರ್ವಿಸ್ಗಳು ಚಾಲನೆಯಲ್ಲಿವೆ ಎಂಬುದನ್ನು ಖಚಿತಪಡಿಸಿಕೊಳ್ಳಿ. |
03:18 | ಇಲ್ಲದಿದ್ದರೆ, ಸಂಬಂಧಪಟ್ಟ ಸರ್ವಿಸ್ಗಳಲ್ಲಿರುವ START ಬಟನ್ ಮೇಲೆ ಕ್ಲಿಕ್ ಮಾಡಿ ಈ ಸರ್ವಿಸ್ಗಳನ್ನು ಪ್ರಾರಂಭಿಸಿ. |
03:24 | ನೀವು ಈ ಕೆಳಗಿನ ಎರರ್ ಮೆಸೇಜ್ ಪಡೆಯಬಹುದು:
“Apache shutdown unexpectedly” |
03:30 | “Port 80 in use for Apache Server'” |
03:34 | “Unable to connect to any of the specified MySQL hosts for MySQL database.”
|
03:41 | ಇದು ಏಕೆಂದರೆ ಅಪಾಚೆ ಮತ್ತು ಮೈ SQL ಗೆ ಅಲಾಟ್ ಮಾಡಿರುವ ಡಿಫಾಲ್ಟ್ ಪೋರ್ಟ್ ಅನ್ನು ಇನ್ನೊಂದು ಸಾಫ್ಟ್ವೇರ್ ಪಡೆದುಕೊಂಡಿದೆ. |
03:47 | ಅಪಾಚೆಯ ಮತ್ತು ಮೈ SQL ನ ಡಿಫಾಲ್ಟ್ ಪೋರ್ಟ್ ಸಂಖ್ಯೆ ಕ್ರಮವಾಗಿ 80 ಮತ್ತು 3306. |
03:55 | ಈ ಪೋರ್ಟ್ಗಳನ್ನು ಬದಲಾಯಿಸಲು, ಈ ಟ್ಯುಟೋರಿಯಲ್ನ ಅಡಿಶನಲ್ ರೀಡಿಂಗ್ ಮಟೀರಿಯಲ್ ಅನ್ನು ಉಲ್ಲೇಖಿಸಿ. |
04:00 | ಮತ್ತೆ, ಮುಂದುವರಿಯುವ ಮೊದಲು ಸರಿಯಾದ ಪೋರ್ಟ್ ಸಂಖ್ಯೆಗಳನ್ನು ನೀಡಿ.
ಉದಾಹರಣೆಗೆ: 8080 |
04:07 | ಈಗ ಫೈರ್ಫಾಕ್ಸ್ ವೆಬ್ ಬ್ರೌಸರ್ ತೆರೆಯಿರಿ. |
04:11 | ಅಡ್ರೆಸ್ ಬಾರ್ನಲ್ಲಿ localhost ಎಂದು ಟೈಪ್ ಮಾಡಿ ಮತ್ತು Enter ಒತ್ತಿ.
ನಾವೀಗ XAMPP ಸ್ಕ್ರೀನ್ ನೋಡಲು ಸಾಧ್ಯವಾಗಬೇಕು. |
04:19 | ಭಾಷೆಯ ಆಯ್ಕೆಯನ್ನು ಕೇಳಿದರೆ, ಇಂಗ್ಲಿಷ್ ಆರಿಸಿ.
ನಾವೀಗ XAMPP ಹೋಂಪೇಜ್ನಲ್ಲಿದ್ದೇವೆ. |
04:27 | ಈಗ FrontAccounting ಡೌನ್ಲೋಡ್ ಪ್ರಾರಂಭಿಸೋಣ.
|
04:30 | ವೆಬ್ ಬ್ರೌಸರ್ನಲ್ಲಿ ಇನ್ನೊಂದು ಟ್ಯಾಬ್ ತೆರೆಯಿರಿ ಮತ್ತು ಈ URL ಗೆ ಹೋಗಿ. |
04:37 | frontaccounting-2.4.7.zip ಮೇಲೆ ಕ್ಲಿಕ್ ಮಾಡಿ. |
04:42 | ತಕ್ಷಣವೇ ಡೌನ್ಲೋಡ್ ಪ್ರಾರಂಭಗೊಳ್ಳುತ್ತದೆ.
Save File ಬಟನ್ ಮೇಲೆ ಕ್ಲಿಕ್ ಮಾಡಿ ಮತ್ತು OK ಬಟನ್ ಮೇಲೆ ಕ್ಲಿಕ್ ಮಾಡಿ. |
04:49 | ಡೌನ್ಲೋಡ್ ಪೂರ್ಣಗೊಂಡಾಗ, ನೀವೆಲ್ಲಿ ಫೈಲ್ ಅನ್ನು ಡೌನ್ಲೋಡ್ ಮಾಡಿದ್ದೀರೋ, ಆ ಫೋಲ್ಡರ್ ತೆರೆಯಿರಿ. |
04:54 | ನಾನು ಡೌನ್ಲೋಡ್ ಮಾಡಿದ ಫೈಲ್ ಇಲ್ಲಿದೆ. |
04:57 | ಫೈಲ್ ಮೇಲೆ ರೈಟ್ ಕ್ಲಿಕ್ ಮಾಡಿ ಮತ್ತು Extract Here ಆರಿಸಿ. |
05:01 | ಒಮ್ಮೆ ಎಕ್ಸ್ಟ್ರಾಕ್ಟ್ ಮಾಡಿದ ನಂತರ, ಎಕ್ಸ್ಟ್ರಾಕ್ಟ್ ಮಾಡಿದ FrontAccounting ಫೋಲ್ಡರ್ ಅನ್ನು ನಾನು ಮರುನಾಮಕರಣ ಮಾಡುತ್ತೇನೆ. |
05:07 | ಫೋಲ್ಡರ್ ಹೆಸರಿನ ಮರುನಾಮಕರಣವು ಐಚ್ಛಿಕವಷ್ಟೇ.
ಆದರೆ ಒಂದೇ ಮಶಿನ್ನಲ್ಲಿ ಅಳವಡಿಸಿದ FrontAccounting ನ ಅನೇಕ ಇನ್ಸ್ಟನ್ಸ್ಗಳನ್ನು ಗುರುತಿಸಲು ಇದು ಸಹಕರಿಸುತ್ತದೆ. |
05:17 | ನಾಗೀವ ಫೋಲ್ಡರ್ account ಅನ್ನು ವೆಬ್ ಸರ್ವರ್ನ ರೂಟ್ ಡೈರೆಕ್ಟರಿಗೆ ಸರಿಸಬೇಕು. |
05:22 | ರೂಟ್ ಡೈರೆಕ್ಟರಿಯ ಪಾತ್ “c:\xampp\htdocs” ಆಗಿದೆ. |
05:29 | ಫೋಲ್ಡರ್ account ಮೇಲೆ ರೈಟ್ ಕ್ಲಿಕ್ ಮಾಡಿ ಮತ್ತು Copy ಆರಿಸಿ. |
05:33 | ಎಡಗಡೆಗೆ “This PC” ಮೇಲೆ ಕ್ಲಿಕ್ ಮಾಡಿ. ಇದನ್ನು “My Computer” ಎಂದು ಸಹ ಕರೆಯಲಾಗುತ್ತದೆ. |
05:39 | ನಂತರ C ಡ್ರೈವ್ ಆಗಿರುವ “Local Disk (C:) ಮೇಲೆ ಡಬಲ್ ಕ್ಲಿಕ್ ಮಾಡಿ.
ಹಾಗೂ xampp ಮತ್ತು htdocs ಗೆ ಹೋಗಿ. |
05:47 | htdocs ಒಳಗಡೆ ಖಾಲಿ ಜಾಗದ ಮೇಲೆ ರೈಟ್ ಕ್ಲಿಕ್ ಮಾಡಿ ಮತ್ತು Paste ಆರಿಸಿ. |
05:53 | ನಾವೀಗ XAMPP ಸರ್ವರ್ ಅನ್ನು ಯಶಸ್ವಿಯಾಗಿ ಅಳವಡಿಸಿದ್ದೇವೆ. |
05:57 | FrontAccounting ಇನ್ಸ್ಟಾಲರ್, ವೆಬ್ ಸರ್ವರ್ನ ರೂಟ್ ಡೈರೆಕ್ಟರಿಯ ಒಳಗಿದೆ ಎಂಬುದನ್ನು ಖಚಿತಪಡಿಸಿಕೊಳ್ಳಿ. |
06:02 | ನಂತರ, ಮುಂದುವರಿಯಲು ನಾವು FrontAccounting ಗಾಗಿ ಡೇಟಾಬೇಸ್ ಒಂದನ್ನು ರಚಿಸಬೇಕು. |
06:07 | ಇದನ್ನು ನಾವು ಮೈ SQL ನ ಗ್ರಾಫಿಕಲ್ ಯೂಸರ್ ಇಂಟರ್ಫೇಸ್ ಆಗಿರುವ phpmyadmin ನಲ್ಲಿ ಮಾಡಲಿದ್ದೇವೆ.
ಇದು XAMPP ಅಳವಡಿಕೆಯ ಜೊತೆ ಬರುತ್ತದೆ. |
06:17 | ಈಗ ನಾವು ವೆಬ್ ಬ್ರೌಸರ್ನಲ್ಲಿ XAMPP ಪೇಜ್ಗೆ ಹೋಗೋಣ. |
06:21 | XAMPP ಪೇಜ್ನಲ್ಲಿ, ಎಡಗಡೆಗೆ ಇರುವ ಮೆನುವಿನಲ್ಲಿ phpMyadmin ಮೇಲೆ ಕ್ಲಿಕ್ ಮಾಡಿ.
|
06:27 | ಮೆನುವಿನ ಮೇಲ್ಗಡೆ Users ಮೇಲೆ ಕ್ಲಿಕ್ ಮಾಡಿ ಮತ್ತು Add User ಮೇಲೆ ಕ್ಲಿಕ್ ಮಾಡಿ. |
06:33 | ಈಗ ತೆರೆಯುವ ಹೊಸ ವಿಂಡೋದಲ್ಲಿ ನಿಮ್ಮ ಆಯ್ಕೆಯ ಯೂಸರ್ ನೇಮ್ ನಮೂದಿಸಿ.
ನಾನು ನನ್ನ ಯೂಸರ್ ನೇಮ್ ಆಗಿ frontacc ಅನ್ನು ಟೈಪ್ ಮಾಡುತ್ತೇನೆ. |
06:42 | Host ಡ್ರಾಪ್ ಡೌನ್ ಲಿಸ್ಟ್ನಿಂದ Local ಆರಿಸಿ. |
06:46 | Password ಟೆಕ್ಸ್ಟ್ ಬಾಕ್ಸ್ನಲ್ಲಿ ನಿಮ್ಮ ಆಯ್ಕೆಯ ಪಾಸ್ವರ್ಡ್ ನಮೂದಿಸಿ.
|
06:50 | ನಾನು admin123 ಅನ್ನು ನನ್ನ ಪಾಸ್ವರ್ಡ್ ಆಗಿ ಟೈಪ್ ಮಾಡುತ್ತೇನೆ. |
06:54 | Re-type ಟೆಕ್ಸ್ಟ್ ಬಾಕ್ಸ್ನಲ್ಲಿ ಅದೇ ಪಾಸ್ವರ್ಡ್ ಅನ್ನು ಟೈಪ್ ಮಾಡಿ. |
06:58 | ಸದ್ಯಕ್ಕೆ Generate Password prompt ಮೇಲೆ ಕ್ಲಿಕ್ ಮಾಡಬೇಡಿ. |
07:02 | Database for user account ಅಡಿಯಲ್ಲಿ ನಾವು ಈ ಆಯ್ಕೆಯನ್ನು ನೋಡಬಹುದು:
Create database with the same name and grant all privileges. |
07:10 | ನಾವು ಆ ಆಯ್ಕೆಯನ್ನು ಪರಿಶೀಲಿಸಿ ಕೆಳಕ್ಕೆ ಸ್ಕ್ರಾಲ್ ಮಾಡಲಿದ್ದೇವೆ. |
07:14 | ನಂತರ ಪೇಜ್ನ ಕೆಳಭಾಗದಲ್ಲಿ ಬಲಕ್ಕೆ ಇರುವ Go ಬಟನ್ ಮೇಲೆ ಕ್ಲಿಕ್ ಮಾಡಿ. |
07:18 | ನಾವು “You have added a new user” ಎನ್ನುವ ಸಂದೇಶವನ್ನು ನೋಡಬಹುದು. |
07:22 | ಅಂದರೆ, frontacc ಹೆಸರಿನ ಮತ್ತು frontacc ಯೂಸರ್ನೊಂದಿಗೆ ಹೊಸ ಡೇಟಾಬೇಸ್ ಒಂದನ್ನು ರಚಿಸಲಾಗಿದೆ.
|
07:29 | ಯೂಸರ್ ನೇಮ್ ಮತ್ತು ಪಾಸ್ವರ್ಡ್ ಎರಡೂ ಡೇಟಾಬೇಸ್ ಲಾಗಿನ್ ಉದ್ದೇಶಕ್ಕೆ ಮಾತ್ರ. |
07:34 | ಯೂಸರ್ ನೇಮ್, ಪಾಸ್ವರ್ಡ್ ಮತ್ತು ಡೇಟಾಬೇಸ್ ಹೆಸರುಗಳನ್ನು ನೆನಪಿಡಿ. |
07:38 | ಇವು ನಂತರ FrontAccounting ನ ಅಳವಡಿಕೆಯನ್ನು ಪೂರ್ಣಗೊಳಿಸಲು ಬೇಕಾಗುತ್ತವೆ. |
07:43 | ಡೇಟಾಬೇಸ್ ಹೆಸರು ಮತ್ತು ಯೂಸರ್ ನೇಮ್ ಒಂದೇ ಆಗಬೇಕಿಲ್ಲ.
ಬೇರೆ ಬೇರೆ ಹೆಸರುಗಳನ್ನು ಹೊಂದಲು, ಮೊದಲಿಗೆ ಡೇಟಾಬೇಸ್ ರಚಿಸಿ ಮತ್ತು ಆ ಡೇಟಾಬೇಸ್ಗೆ ಯೂಸರ್ ಒಂದನ್ನು ರಚಿಸಿ. |
07:53 | ಅಲ್ಲದೆ, ಹೆಸರಿಡುವ ವಾಡಿಕೆಯ ಪ್ರಕಾರ, ಯೂಸರ್ನೇಮ್ನ ನಡುವೆ ಯಾವುದೇ ಬಿಟ್ಟ ಸ್ಥಳ ಇರಬಾರದು. |
07:59 | ನಮ್ಮ XAMPP ಈಗ ಚಾಲನೆಯಲ್ಲಿದೆ ಮತ್ತು ನಮ್ಮ ಡೇಟಾಬೇಸ್ ತಯಾರಾಗಿದೆ. |
08:02 | ನಾವೀಗ Front Accounting ಅಳವಡಿಸುವುದನ್ನು ಮುಂದುವರಿಸಲು ತಯಾರಾಗಿದ್ದೇವೆ. |
08:07 | ವೆಬ್ ಬ್ರೌಸರ್ನಲ್ಲಿ ಹೊಸ ಟ್ಯಾಬ್ ತೆರೆಯಿರಿ.
ಅಡ್ರೆಸ್ ಬಾರ್ನಲ್ಲಿ localhost/account ಎಂದು ಟೈಪ್ ಮಾಡಿ ಮತ್ತು Enter ಒತ್ತಿ. |
08:17 | ನಾವೀಗ Step 1: System Diagnostics ಎಂದು ತೋರಿಸುವ FrontAccounting ವೆಬ್ ಪೇಜ್ ಹೊಂದಿದ್ದೇವೆ. |
08:22 | Select install wizard language ಇಂಗ್ಲಿಷ್ ಆಗಿದೆ ಎಂಬುದನ್ನು ಖಚಿತಪಡಿಸಿ. |
08:26 | ಸ್ಕ್ರಾಲ್ ಡೌನ್ ಮಾಡಿ ಮತ್ತು ಪೇಜ್ನ ಕೆಳಭಾಗದಲ್ಲಿ Continue ಬಟನ್ ಮೇಲೆ ಕ್ಲಿಕ್ ಮಾಡಿ. |
08:31 | ಮುಂದಿನ ವೆಬ್ ಪೇಜ್ನ ಶೀರ್ಷಿಕೆಯು: Step 2: Database Server Settings.
|
08:37 | ನಾನಿಲ್ಲಿ ಸರ್ವರ್ ಹೋಸ್ಟ್ ಅನ್ನು ಲೋಕಲ್ ಹೋಸ್ಟ್ ಆಗಿ ಇಡುತ್ತೇನೆ.
ಸರ್ವರ್ ಪೋರ್ಟ್ ಅನ್ನು ಖಾಲಿ ಇಡುತ್ತೇನೆ. |
08:44 | ನೀವು ಮೈ SQL ಡಿಫಾಲ್ಟ್ ಪೋರ್ಟ್ ನಂಬರ್ ಅನ್ನು 3306 ಹೊರತುಪಡಿಸಿ ಬೇರೆ ಯಾವುದೇ ಸಂಖ್ಯೆಗೆ ಬದಲಾಯಿಸಿದ್ದರೆ, ಆ ಪೋರ್ಟ್ ನಂಬರ್ ಅನ್ನು ಇಲ್ಲಿ ನಮೂದಿಸಿ. |
08:52 | ನಾವು ಈ ಹಿಂದೆ ರಚಿಸಿದ ಈ ಕೆಳಗಿನ ವಿವರಗಳನ್ನು ನಮೂದಿಸಿ -
frontacc ಅನ್ನು ಡೇಟಾಬೇಸ್ ನೇಮ್ ಆಗಿ, |
09:00 | frontacc ಅನ್ನು ಡೇಟಾಬೇಸ್ ಯೂಸರ್ ಆಗಿ,
|
09:03 | ಮತ್ತು admin123 ಅನ್ನು ಡೇಟಾಬೇಸ್ ಪಾಸ್ವರ್ಡ್ ಆಗಿ. |
09:07 | ಉಳಿದ ಆಯ್ಕೆಗಳನ್ನು ನಿರ್ಲಕ್ಷಿಸಿ ಮತ್ತು ಕೆಳಗೆ ಇರುವ Continue ಬಟನ್ ಮೇಲೆ ಕ್ಲಿಕ್ ಮಾಡಿ. |
09:12 | ನಂತರ, ನೀವು ನಿಮ್ಮದೇ ಕಂಪನಿಯ ವಿವರಗಳನ್ನು ಸೇರಿಸಬೇಕು.
ಇದು ಹೇಗೆ ಎಂಬುದನ್ನು ನಾನು ತೋರಿಸುತ್ತೇನೆ. |
09:19 | Company Name ಫೀಲ್ಡ್ನಲ್ಲಿ ನಾವು ST Company Pvt Ltd ಎಂದು ಟೈಪ್ ಮಾಡುತ್ತೇನೆ. |
09:24 | ನಾನು ಅಡ್ಮಿನ್ ಲಾಗಿನ್ ಅನ್ನು admin ಆಗಿ ಇಡುತ್ತೇನೆ.
ನಂತರ ಅಡ್ಮಿನ್ ಪಾಸ್ವರ್ಡ್ ಅನ್ನು spoken ಆಗಿ ಟೈಪ್ ಮಾಡುತ್ತೇನೆ. |
09:31 | ನೀವು ನಿಮ್ಮ ಆಯ್ಕೆಯ ಯಾವುದೇ ಪಾಸ್ವರ್ಡ್ ನೀಡಬಹುದು. |
09:34 | ಇದೇ ಪಾಸ್ವರ್ಡ್ ಅನ್ನು ಇನ್ನೊಮ್ಮೆ ನಮೂದಿಸಿ.
ಇದು ಲಾಗಿನ್ ಪಾಸ್ವರ್ಡ್ ಆಗಿದೆ ಎಂಬುದನ್ನು ನೆನಪಿಡಿ. |
09:40 | ನಂತರ ನಾವು Charts of Accounts ಗೆ ಎರಡು ಆಯ್ಕೆಗಳನ್ನು ನೋಡಬಹುದು. |
09:44 | ನಾನು Standard new company American COA ಆರಿಸುತ್ತೇನೆ. |
09:49 | ಡಿಫಾಲ್ಟ್ ಲ್ಯಾಂಗ್ವೇಜ್ ಅನ್ನು ಇಂಗ್ಲಿಷ್ ಆಗಿ ಆರಿಸಿ. |
09:52 | Install ಬಟನ್ ಮೇಲೆ ಕ್ಲಿಕ್ ಮಾಡಿ. |
09:55 | ನಮ್ಮ ಸ್ಕ್ರೀನ್ ಮೇಲೆ ನಾವು ಅಂತಿಮ ಸಂದೇಶವನ್ನು ಕಾಣಬಹುದು, FrontAccounting ERP has been installed successfully.
ನಮ್ಮ ಅಳವಡಿಕೆ ಯಶಸ್ವಿಯಾಗಿದೆ ಎಂಬುದನ್ನು ಇದು ದೃಢೀಕರಿಸುತ್ತದೆ. |
10:06 | FrontAccounting ಇಂಟರ್ಫೇಸ್ಗೆ ಲಾಗಿನ್ ಆಗಲು Click here to start ಲಿಂಕ್ ಮೇಲೆ ಕ್ಲಿಕ್ ಮಾಡಿ. |
10:12 | ಲಾಗಿನ್ ಸ್ಕ್ರೀನ್ನಲ್ಲಿ ಈ ಕೆಳಗಿನ ವಿವರಗಳನ್ನು ನಮೂದಿಸಿ:
admin ಅನ್ನು ಯೂಸರ್ ನೇಮ್ ಆಗಿ, spoken ಅನ್ನು ಪಾಸ್ವರ್ಡ್ ಆಗಿ, |
10:22 | ST Company Pvt. Ltd ಅನ್ನು ಕಂಪನಿ ಆಗಿ.
ನಂತರ Login ಬಟನ್ ಮೇಲೆ ಕ್ಲಿಕ್ ಮಾಡಿ. |
10:28 | ನಾವೀಗ Front Accounting Administration ಪೇಜ್ಗೆ ಬಂದಿದ್ದೇವೆ. |
10:32 | ಈ ಪೇಜ್ನಲ್ಲಿ ನಾವು ವಿವಿಧ ಟ್ಯಾಬ್ಗಳನ್ನು ನೋಡಬಹುದು.
ಇವುಗಳಲ್ಲಿ ಅನೇಕವುಗಳನ್ನು ಹೇಗೆ ಬಳಸಬಹುದು ಎಂಬುದನ್ನು ಈ ಸರಣಿಯ ಮುಂದಿನ ಭಾಗದಲ್ಲಿ ನೋಡೋಣ. |
10:39 | ಇದರೊಂದಿಗೆ ನಾವು ಈ ಟ್ಯುಟೋರಿಯಲ್ನ ಕೊನೆಗೆ ಬಂದಿದ್ದೇವೆ.
ಈಗ ಸಂಕ್ಷೇಪಿಸೋಣ. |
10:44 | ಈ ಟ್ಯುಟೋರಿಯಲ್ನಲ್ಲಿ ನಾವು
XAMPP ಡೌನ್ಲೋಡ್ ಮಾಡಲು ಮತ್ತು ಅಳವಡಿಸಲು, |
10:50 | FrontAccounting ಸಾಫ್ಟ್ವೇರ್ ಡೌನ್ಲೋಡ್ ಮಾಡಲು ಮತ್ತು ಅಳವಡಿಸಲು, |
10:53 | ವಿಂಡೋಸ್ 10 ಒ.ಎಸ್ ನಲ್ಲಿ ಡೇಟಾಬೇಸ್ ಸೆಟಪ್ ಮಾಡಲು ಕಲಿತೆವು. |
10:57 | ಈ ಕೆಳಗಿನ ಲಿಂಕ್ ನಲ್ಲಿ ಇರುವ ವೀಡಿಯೊ, ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ಅನ್ನು ಸಂಕ್ಷೇಪಿಸುತ್ತದೆ. ದಯವಿಟ್ಟು ಇದನ್ನು ಡೌನ್ ಲೋಡ್ ಮಾಡಿ ಮತ್ತು ವೀಕ್ಷಿಸಿ. |
11:05 | ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ತಂಡವು ಕಾರ್ಯಾಗಾರಗಳನ್ನು ನಡೆಸುತ್ತದೆ ಮತ್ತು ಪ್ರಮಾಣಪತ್ರಗಳನ್ನು ನೀಡುತ್ತದೆ. ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ನಮಗೆ ಪತ್ರ ಬರೆಯಿರಿ. |
11:13 | ಈ ಸ್ಪೋಕನ್ ಟ್ಯುಟೋರಿಯಲ್ ಕುರಿತು ನಿಮಗೆ ಏನಾದರೂ ಪ್ರಶ್ನೆಗಳಿವೆಯೇ?
ದಯವಿಟ್ಟು ಈ ಸೈಟ್ಗೆ ಭೇಟಿ ನೀಡಿ. |
11:18 | ನಿಮಗೆ ಪ್ರಶ್ನೆ ಇರುವಲ್ಲಿ ನಿಮಿಷ ಮತ್ತು ಸೆಕೆಂಡನ್ನು ಆರಿಸಿ. ನಿಮ್ಮ ಪ್ರಶ್ನೆಯನ್ನು ಸಂಕ್ಷಿಪ್ತವಾಗಿ ವಿವರಿಸಿ.
ನಮ್ಮ ತಂಡದಿಂದ ಯಾರಾದರೂ ಒಬ್ಬರು ಅದಕ್ಕೆ ಉತ್ತರ ನೀಡುತ್ತಾರೆ. |
11:27 | ಸ್ಪೋಕನ್ ಟ್ಯುಟೋರಿಯಲ್ ಫಾರಂ, ಈ ಟ್ಯುಟೋರಿಯಲ್ ಕುರಿತು ನಿರ್ದಿಷ್ಟ ಪ್ರಶ್ನೆಗಳಿಗೆ ಮೀಸಲಾಗಿದೆ. |
11:32 | ದಯವಿಟ್ಟು ಅವುಗಳಲ್ಲಿ ಸಂಬಂಧವಿಲ್ಲದ ಮತ್ತು ಸಾಮಾನ್ಯ ಪ್ರಶ್ನೆಗಳನ್ನು ಪೋಸ್ಟ್ ಮಾಡಬೇಡಿ.
ಇದು ಅಸ್ತವ್ಯಸ್ತತೆಯನ್ನು ಕಡಿಮೆ ಮಾಡಲು ಸಹಕರಿಸಲಿದೆ. |
11:39 | ಕಡಿಮೆ ಅಸ್ತವ್ಯಸ್ತತೆಯೊಂದಿಗೆ ನಾವು ಈ ಚರ್ಚೆಯನ್ನು ಕಲಿಕೆಯ ವಸ್ತುವಾಗಿ ಬಳಸಬಹುದು. |
11:44 | ‘ಸ್ಪೋಕನ್ ಟ್ಯುಟೋರಿಯಲ್’ ಪ್ರೊಜೆಕ್ಟ್, MHRD, ಭಾರತ ಸರ್ಕಾರದ ನೆರವು ಪಡೆದಿದೆ.
|
11:49 | ಈ ಸ್ಕ್ರಿಪ್ಟ್, ಸ್ಪೋಕನ್ ಟ್ಯುಟೋರಿಯಲ್ ತಂಡದ ಕೊಡುಗೆಯಾಗಿದೆ.
ಈ ಸ್ಕ್ರಿಪ್ಟ್ ನ ಅನುವಾದಕರು ಮಂಗಳೂರಿನಿಂದ ಮೆಲ್ವಿನ್, ಮತ್ತು ಧ್ವನಿ ---------- . |