FrontAccounting-2.4.7/C2/Installation-of-FrontAccounting-on-Windows-OS/Kannada

From Script | Spoken-Tutorial
Jump to: navigation, search
Time Narration
00:01 ವಿಂಡೋಸ್ ಒ.ಎಸ್ ನಲ್ಲಿ FrontAccounting ಅನ್ನು ಇನ್ಸ್ಟಾಲ್ ಮಾಡುವ ಕುರಿತ ಸ್ಪೋಕನ್ ಟ್ಯುಟೋರಿಯಲ್ಗೆ ಸ್ವಾಗತ
00:07 ಈ ಟ್ಯುಟೋರಿಯಲ್ನಲ್ಲಿ ನಾವು XAMPP ಅಳವಡಿಸಲು,
00:12 FrontAccounting ಸಾಫ್ಟ್ವೇರ್ ಡೌನ್ಲೋಡ್ ಮಾಡಲು,
00:15 ಡೇಟಾಬೇಸ್ ಸೆಟಪ್ ಮಾಡಲು ಮತ್ತು

ವಿಂಡೋಸ್ ಒ.ಎಸ್ ನಲ್ಲಿ FrontAccounting ಅಳವಡಿಸಲು ಕಲಿಯಲಿದ್ದೇವೆ.

00:21 ಈ ಟ್ಯುಟೋರಿಯಲ್ ರೆಕಾರ್ಡ್ ಮಾಡಲು ನಾನು:

ವಿಂಡೋಸ್ ಒ.ಎಸ್ ವರ್ಶನ್ 10,

00:26 XAMPP 5.5.19 ಮೂಲಕ ಪಡೆದ ಅಪಾಚೆ, MySQL ಮತ್ತು PHP,
00:32 FrontAccounting ವರ್ಶನ್ 2.4.7,
00:36 ಫೈರ್ಫಾಕ್ಸ್ ವೆಬ್ ಬ್ರೌಸರ್ ಮತ್ತು ಸಕ್ರಿಯವಾದ ಇಂಟರ್ನೆಟ್ ಸಂಪರ್ಕ ಇವುಗಳನ್ನು ಬಳಸುತ್ತಿದ್ದೇನೆ.
00:41 ನೀವು ನಿಮ್ಮ ಆಯ್ಕೆಯ ಯಾವುದೇ ವೆಬ್ ಬ್ರೌಸರ್ ಬಳಸಬಹುದು.
00:44 FrontAccounting, ಸರ್ವರ್ ಆಧರಿತ ಅಕೌಂಟಿಂಗ್ ಸಿಸ್ಟಂ ಆಗಿದೆ.

ಹೀಗಾಗಿ ನಮ್ಮ ಮಶಿನ್ನಲ್ಲಿ ವೆಬ್ ಸರ್ವರ್ ಸ್ಥಾಪಿಸಲು ನಾವು XAMPP ಬಳಸಲಿದ್ದೇವೆ.

00:52 ವೆಬ್ ಬ್ರೌಸರ್ ಒಂದನ್ನು ತೆರೆಯಿರಿ.

ಅಡ್ರೆಸ್ ಬಾರ್ನಲ್ಲಿ ಈ URL ಟೈಪ್ ಮಾಡಿ ಮತ್ತು Enter ಒತ್ತಿ.

00:59 ಇದು ನಮ್ಮನ್ನು XAMPP ಡೌನ್ಲೋಡ್ ಪೇಜ್ಗೆ ಕರೆದೊಯ್ಯುತ್ತದೆ.
01:03 ಇಲ್ಲಿ ಎಲ್ಲಾ ಅಪರೇಟಿಂಗ್ ಸಿಸ್ಟಂಗಳಿಗೆ ಡೌನ್ಲೋಡ್ ಮಾಡಲು XAMPP ಲಭ್ಯವಿದೆ.
01:08 ಈ ಹಸಿರು ಬಟನ್ ಅನ್ನು ಕ್ಲಿಕ್ ಮಾಡಿ XAMPP ಯ ಇತ್ತೀಚಿನ ವರ್ಶನ್ ಅನ್ನು ಡೌನ್ಲೋಡ್ ಮಾಡಬಹುದು.
01:13 ಆದರೂ, ನಿಮ್ಮ ಸಾಫ್ಟ್ವೇರ್ ಅಗತ್ಯತೆಗೆ ಅನುಗುಣವಾಗಿ ನಿಮಗೆ XAMPP ನ ಬೇರೆ ವರ್ಶನ್ ಬೇಕಾಗಬಹುದು.
01:19 ಇಲ್ಲಿ ನನಗೆ ಮಾತ್ರ XAMPP ವರ್ಶನ್ 5.5.19 ಬೇಕು.
01:24 XAMPP Windows ಲಿಂಕ್ ಮೇಲೆ ಕ್ಲಿಕ್ ಮಾಡಿ.
01:28 ರಿಡೈರೆಕ್ಟ್ ಆದ ಪೇಜ್, ಇಲ್ಲಿಯವರೆಗಿನ ಎಲ್ಲಾ XAMPP ವರ್ಶನ್ಗಳನ್ನು ತೋರಿಸುತ್ತದೆ.
01:32 ಇಲ್ಲಿ ಇನ್ಸ್ಟಾಲ್ ಮಾಡಲು ನಾನು XAMPP ವರ್ಶನ್ 5.5.19 ಆರಿಸುತ್ತೇನೆ.
01:39 ಡೌನ್ಲೋಡ್ ಮಾಡಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ.
01:43 ಈಗ Save file ಬಟನ್ ಮೇಲೆ ಕ್ಲಿಕ್ ಮಾಡಿ.

exe ಫೈಲ್ ನಮ್ಮ ಮಶಿನ್ನಲ್ಲಿ ಡೌನ್ಲೋಡ್ ಆಗುತ್ತದೆ.

01:51 ನೀವು ಈ ಫೈಲ್ ಡೌನ್ಲೋಡ್ ಮಾಡಿರುವ ಫೋಲ್ಡರ್ ಅನ್ನು ತೆರೆಯಿರಿ.
01:55 ಇನ್ಸ್ಟಾಲ್ಲೇಶನ್ ಪ್ರಾರಂಭಿಸಲು ಫೈಲ್ನ ಮೇಲೆ ಡಬಲ್ ಕ್ಲಿಕ್ ಮಾಡಿ.
01:59 User Account Control ಎಂಬ ಡೈಲಾಗ್ ಬಾಕ್ಸ್ ತೆರೆದುಕೊಳ್ಳುತ್ತದೆ.

ಈಗ Yes ಬಟನ್ ಮೇಲೆ ಕ್ಲಿಕ್ ಮಾಡಿ.

02:06 ನಿಮ್ಮ ಮಶಿನ್ನಲ್ಲಿ ನೀವು ಯಾವುದಾದರೂ ಅಂಟಿವೈರಸ್ ಸಾಫ್ಟ್ವೇರ್ ಅಳವಡಿಸಿದ್ದರೆ, ನೀವು ಇನ್ನೊಂದು ಪಾಪ್ಅಪ್ ವಿಂಡೋ ಕಾಣುತ್ತೀರಿ.

Yes ಬಟನ್ ಮೇಲೆ ಕ್ಲಿಕ್ ಮಾಡಿ.

02:15 ಮುಂದಿನ ವಿಂಡೋದಲ್ಲಿ, ಎಚ್ಚರಿಕೆಯ ಸಂದೇಶವನ್ನು ನಿರ್ಲಕ್ಷಿಸಲು OK ಬಟನ್ ಮೇಲೆ ಕ್ಲಿಕ್ ಮಾಡಿ.
02:21 ಈಗ Setup wizard ಡೈಲಾಗ್ ಬಾಕ್ಸ್ ತೆರೆದುಕೊಳ್ಳುತ್ತದೆ.
02:25 ಕೇಳಿದಾಗಲೆಲ್ಲ Next ಬಟನ್ ಮೇಲೆ ಕ್ಲಿಕ್ ಮಾಡಿ. ಇಲ್ಲಿ ತೋರಿಸಿದಂತೆ ಅಳವಡಿಕೆಯ ಹಂತಗಳನ್ನು ಅನುಸರಿಸಿ.
02:31 Learn more about Bitnami for XAMPP ಚೆಕ್ ಬಾಕ್ಸ್ ಅನ್ನು ಅನ್ಚೆಕ್ ಮಾಡಿ.

ನಂತರ Next ಬಟನ್ ಮೇಲೆ ಕ್ಲಿಕ್ ಮಾಡಿ ಮುಂದುವರಿಯಿರಿ.

02:40 ಇನ್ಸ್ಟಾಲ್ಲೇಶನ್ ಮುಗಿದ ನಂತರ, Do you want to start the Control Panel now? ಚೆಕ್ಬಾಕ್ಸ್ ಅನ್ನು ಅನ್ಚೆಕ್ ಮಾಡಿ.
02:47 ಕೊನೆಯದಾಗಿ, Finish ಬಟನ್ ಮೇಲೆ ಕ್ಲಿಕ್ ಮಾಡಿ.
02:51 ಈಗ XAMPP ನಮ್ಮ ಮಶಿನ್ನಲ್ಲಿ ಯಶಸ್ವಿಯಾಗಿ ಇನ್ಸ್ಟಾಲ್ ಆಗಿದೆಯೇ ಎಂದು ಪರೀಕ್ಷಿಸಬೇಕು.
02:56 ಸ್ಕ್ರೀನ್ನ ಕೆಳಗೆ ಎಡಭಾಗದಲ್ಲಿ Windows search bar ಮೇಲೆ ಕ್ಲಿಕ್ ಮಾಡಿ ಮತ್ತು xampp ಎಂದು ಟೈಪ್ ಮಾಡಿ.
03:02 ನಾವೀಗ ಸರ್ಚ್ ಲಿಸ್ಟ್ನಲ್ಲಿ XAMPP Control Panel ಅನ್ನು ನೋಡಬಹುದು.
03:06 XAMPP Control Panel ಮೇಲೆ ರೈಟ್ ಕ್ಲಿಕ್ ಮಾಡಿ ಮತ್ತು Run as administrator ಅನ್ನು ಆರಿಸಿಕೊಳ್ಳಿ.
03:12 XAMPP ಕಂಟ್ರೋಲ್ ಪ್ಯಾನೆಲ್ನಲ್ಲಿ, ಅಪಾಚೆ ಮತ್ತು MySQL ಸರ್ವಿಸ್ಗಳು ರನ್ ಆಗುತ್ತಿರುವುದನ್ನು ಖಚಿತಪಡಿಸಿಕೊಳ್ಳಿ.
03:18 ಇಲ್ಲದಿದ್ದರೆ, ಸಂಬಂಧಪಟ್ಟ ಸರ್ವಿಸ್ಗಳಲ್ಲಿರುವ START ಬಟನ್ ಮೇಲೆ ಕ್ಲಿಕ್ ಮಾಡಿ ಈ ಸರ್ವಿಸ್ಗಳನ್ನು ಪ್ರಾರಂಭಿಸಿ.
03:24 ನೀವು ಈ ಕೆಳಗಿನ ಎರರ್ ಮೆಸೇಜ್ ಪಡೆಯಬಹುದು:

“Apache shutdown unexpectedly”,

03:30 “Port 80 in use for Apache Server'”,
03:34 “Unable to connect to any of the specified MySQL hosts for MySQL database.”
03:41 ಇದು ಏಕೆಂದರೆ, Apache ಮತ್ತು MySQL ಗಾಗಿ ನಿಗದಿತ ಡಿಫಾಲ್ಟ್ ಪೋರ್ಟ್ಗಳನ್ನು ಇನ್ನೊಂದು ಸಾಫ್ಟ್ವೇರ್ ತೆಗೆದುಕೊಂಡಿದೆ.
03:47 ಡಿಫಾಲ್ಟ್ ಪೋರ್ಟ್ ಸಂಖ್ಯೆಯು Apache ಗಾಗಿ 80 ಮತ್ತು MySQL ಗಾಗಿ 3306 ಆಗಿವೆ.
03:55 ಈ ಪೋರ್ಟ್ಗಳನ್ನು ಬದಲಾಯಿಸಲು, ಈ ಟ್ಯುಟೋರಿಯಲ್ನ ಅಡಿಶನಲ್ ರೀಡಿಂಗ್ ಮಟೀರಿಯಲ್ ಅನ್ನು ನೋಡಿ.
04:00 ಮತ್ತೆ, ಮುಂದುವರಿಯುವ ಮೊದಲು ಸರಿಯಾದ ಪೋರ್ಟ್ ಸಂಖ್ಯೆಗಳನ್ನು ನೀಡಿ.

ಉದಾಹರಣೆಗೆ: 8080

04:07 ಈಗ ಫೈರ್ಫಾಕ್ಸ್ ವೆಬ್ ಬ್ರೌಸರ್ ತೆರೆಯಿರಿ.
04:11 ಅಡ್ರೆಸ್ ಬಾರ್ನಲ್ಲಿ localhost ಎಂದು ಟೈಪ್ ಮಾಡಿ ಮತ್ತು Enter ಒತ್ತಿ.

ನಾವೀಗ XAMPP ಸ್ಕ್ರೀನ್ ಅನ್ನು ನೋಡಲು ಸಾಧ್ಯವಾಗಬೇಕು.

04:19 ಭಾಷೆಯ ಆಯ್ಕೆಯನ್ನು ಕೇಳಿದರೆ, English ಅನ್ನು ಆರಿಸಿಕೊಳ್ಳಿ.

ನಾವೀಗ XAMPP ಹೋಂಪೇಜ್ನಲ್ಲಿದ್ದೇವೆ.

04:27 ಈಗ FrontAccounting ನ ಡೌನ್ಲೋಡ್ ಅನ್ನು ಪ್ರಾರಂಭಿಸೋಣ.
04:30 ವೆಬ್ ಬ್ರೌಸರ್ನಲ್ಲಿ ಇನ್ನೊಂದು ಟ್ಯಾಬ್ ತೆರೆಯಿರಿ ಮತ್ತು ಈ URL ಗೆ ಹೋಗಿ.
04:37 frontaccounting-2.4.7.zip ಮೇಲೆ ಕ್ಲಿಕ್ ಮಾಡಿ.
04:42 ತಕ್ಷಣವೇ ಡೌನ್ಲೋಡ್ ಆರಂಭವಾಗುತ್ತದೆ.

Save File ಬಟನ್ ಮೇಲೆ, ನಂತರ OK ಬಟನ್ ಮೇಲೆ ಕ್ಲಿಕ್ ಮಾಡಿ.

04:49 ಡೌನ್ಲೋಡ್ ಪೂರ್ಣಗೊಂಡಾಗ, ನೀವು ಫೈಲ್ ಅನ್ನು ಡೌನ್ಲೋಡ್ ಮಾಡಿರುವ ಫೋಲ್ಡರ್ ಅನ್ನು ತೆರೆಯಿರಿ.
04:54 ನಾನು ಡೌನ್ಲೋಡ್ ಮಾಡಿದ ಫೈಲ್ ಇಲ್ಲಿದೆ.
04:57 ಫೈಲ್ ಮೇಲೆ ರೈಟ್ ಕ್ಲಿಕ್ ಮಾಡಿ ಮತ್ತು Extract Here ಅನ್ನು ಆಯ್ಕೆಮಾಡಿ.
05:01 ಎಕ್ಸ್ಟ್ರಾಕ್ಟ್ ಮಾಡಿದ ನಂತರ, ಈ FrontAccounting ಫೋಲ್ಡರ್ ಅನ್ನು ನಾನು account ಎಂದು ರೀನೇಮ್ ಮಾಡುತ್ತೇನೆ.
05:07 ಫೋಲ್ಡರ್ ಅನ್ನು ರಿನೇಮ್ ಮಾಡುವುದು ನಿಮ್ಮಿಷ್ಟ.

ಆದರೆ, ಒಂದೇ ಮಶಿನ್ನಲ್ಲಿ ಅಳವಡಿಸಲಾದ FrontAccounting ನ ಅನೇಕ ಇನ್ಸ್ಟನ್ಸ್ಗಳನ್ನು ಗುರುತಿಸಲು ಇದು ಸಹಾಯ ಮಾಡುತ್ತದೆ.

05:17 ನಾವೀಗ ಈ ಫೋಲ್ಡರ್ account ಅನ್ನು, ವೆಬ್ ಸರ್ವರ್ನ ರೂಟ್ ಡೈರೆಕ್ಟರಿಗೆ ವರ್ಗಾಯಿಸಬೇಕು.
05:22 ರೂಟ್ ಡೈರೆಕ್ಟರಿಯ ಪಾಥ್ ಹೀಗಿದೆ: “c:\xampp\htdocs”
05:29 ಫೋಲ್ಡರ್ account ನ ಮೇಲೆ ರೈಟ್ ಕ್ಲಿಕ್ ಮಾಡಿ, Copy ಯನ್ನು ಆಯ್ಕೆಮಾಡಿ.
05:33 ಎಡಗಡೆಯ ಪೇನ್ ನಲ್ಲಿ, “This PC” ಮೇಲೆ ಕ್ಲಿಕ್ ಮಾಡಿ. ಇದನ್ನು “My Computer” ಎಂದು ಸಹ ಹೇಳುತ್ತೇವೆ.
05:39 ನಂತರ C ಡ್ರೈವ್ ಆಗಿರುವ “Local Disk (C:) ಮೇಲೆ ಡಬಲ್ ಕ್ಲಿಕ್ ಮಾಡಿ.

ಈಗ xampp ಮತ್ತು htdocs ಗೆ ಹೋಗಿ.

05:47 htdocs ಒಳಗಡೆ, ಖಾಲಿ ಜಾಗದ ಮೇಲೆ ರೈಟ್ ಕ್ಲಿಕ್ ಮಾಡಿ ಮತ್ತು Paste ಅನ್ನು ಆಯ್ಕೆಮಾಡಿ.
05:53 ನಾವೀಗ XAMPP ಸರ್ವರ್ ಅನ್ನು ಯಶಸ್ವಿಯಾಗಿ ಇನ್ಸ್ಟಾಲ್ ಮಾಡಿದ್ದೇವೆ.
05:57 FrontAccounting ಇನ್ಸ್ಟಾಲರ್, ವೆಬ್ ಸರ್ವರ್ನ ರೂಟ್ ಡೈರೆಕ್ಟರಿಯ ಒಳಗೆ ಇರುವುದನ್ನು ಖಚಿತಪಡಿಸಿಕೊಳ್ಳಿ.
06:02 ನಂತರ, ಮುಂದುವರಿಯಲು ನಾವು FrontAccounting ಗಾಗಿ ಡೇಟಾಬೇಸ್ ಒಂದನ್ನು ರಚಿಸಬೇಕು.
06:07 ಇದನ್ನು ನಾವು MySQL ನ ಗ್ರಾಫಿಕಲ್ ಯೂಸರ್ ಇಂಟರ್ಫೇಸ್ ಆಗಿರುವ phpmyadmin ನಲ್ಲಿ ಮಾಡಲಿದ್ದೇವೆ.

ಇದು XAMPP ಇನ್ಸ್ಟಾಲ್ಲೇಶನ್ ಜೊತೆ ಬರುತ್ತದೆ.

06:17 ಈಗ ನಾವು ವೆಬ್ ಬ್ರೌಸರ್ನಲ್ಲಿ, XAMPP ಪೇಜ್ಗೆ ಹಿಂದಿರುಗೋಣ.
06:21 XAMPP ಪೇಜ್ನಲ್ಲಿ, ಎಡಗಡೆಯ ಮೆನುವಿನಲ್ಲಿ phpMyadmin ಮೇಲೆ ಕ್ಲಿಕ್ ಮಾಡಿ.
06:27 ಮೇಲ್ಗಡೆಯ ಮೆನುವಿನಲ್ಲಿ, Users ಮೇಲೆ, ನಂತರ Add User ಮೇಲೆ ಕ್ಲಿಕ್ ಮಾಡಿ.
06:33 ಈಗ ತೆರೆಯುವ ಹೊಸ ವಿಂಡೋದಲ್ಲಿ, ನಿಮ್ಮ ಆಯ್ಕೆಯ ಯೂಸರ್ ನೇಮ್ ನಮೂದಿಸಿ.

ನಾನು ನನ್ನ ಯೂಸರ್ ನೇಮ್ ಗಾಗಿ, frontacc ಅನ್ನು ಟೈಪ್ ಮಾಡುತ್ತೇನೆ.

06:42 Host ಡ್ರಾಪ್ ಡೌನ್ ಲಿಸ್ಟ್ನಿಂದ Local ಅನ್ನು ಆರಿಸಿಕೊಳ್ಳಿ.
06:46 Password ಟೆಕ್ಸ್ಟ್ ಬಾಕ್ಸ್ನಲ್ಲಿ, ನಿಮ್ಮ ಆಯ್ಕೆಯ ಒಂದು ಪಾಸ್ವರ್ಡ್ ಅನ್ನು ನಮೂದಿಸಿ.
06:50 ನಾನು admin123 ಅನ್ನು ನನ್ನ ಪಾಸ್ವರ್ಡ್ ಎಂದು ಟೈಪ್ ಮಾಡುತ್ತೇನೆ.
06:54 Re-type ಟೆಕ್ಸ್ಟ್ ಬಾಕ್ಸ್ನಲ್ಲಿ ಅದೇ ಪಾಸ್ವರ್ಡ್ ಅನ್ನು ಮತ್ತೆ ಟೈಪ್ ಮಾಡಿ.
06:58 ಸದ್ಯಕ್ಕೆ Generate Password prompt ಮೇಲೆ ಕ್ಲಿಕ್ ಮಾಡಬೇಡಿ.
07:02 Database for user account ಅಡಿಯಲ್ಲಿ, ನಾವು ಈ ಆಯ್ಕೆಯನ್ನು ನೋಡಬಹುದು:

Create database with the same name and grant all privileges.

07:10 ನಾವು ಆ ಆಯ್ಕೆಯನ್ನು ಗುರುತು ಹಾಕಿ ಕೆಳಕ್ಕೆ ಸ್ಕ್ರೋಲ್ ಮಾಡುವೆವು.
07:14 ನಂತರ ಪೇಜ್ನ ಕೆಳಭಾಗದಲ್ಲಿ ಬಲಕ್ಕೆ ಇರುವ Go ಬಟನ್ ಮೇಲೆ ಕ್ಲಿಕ್ ಮಾಡಿ.
07:18 ನಾವು “You have added a new user” ಎನ್ನುವ ಸಂದೇಶವನ್ನು ನೋಡುತ್ತೇವೆ.
07:22 ಅಂದರೆ, frontacc ಹೆಸರಿನ ಹೊಸ ಡೇಟಾಬೇಸ್ ಅನ್ನು ಮತ್ತು frontacc ಯೂಸರ್ ಅನ್ನು ರಚಿಸಲಾಗಿದೆ.
07:29 ಈ ಯೂಸರ್ ನೇಮ್ ಮತ್ತು ಪಾಸ್ವರ್ಡ್ ಎರಡೂ ಡೇಟಾಬೇಸ್ ಲಾಗಿನ್ ಉದ್ದೇಶಕ್ಕೆ ಮಾತ್ರ.
07:34 ಯೂಸರ್ ನೇಮ್, ಪಾಸ್ವರ್ಡ್ ಮತ್ತು ಡೇಟಾಬೇಸ್ ಹೆಸರುಗಳನ್ನು ಗುರುತಿಸಿಕೊಳ್ಳಿ.
07:38 ಇವು ನಂತರ FrontAccounting ನ ಇನ್ಸ್ಟಾಲ್ಲೇಶನ್ ಅನ್ನು ಪೂರ್ಣಗೊಳಿಸಲು ಬೇಕಾಗುತ್ತವೆ.
07:43 ಡೇಟಾಬೇಸ್ ಹೆಸರು ಮತ್ತು ಯೂಸರ್ ನೇಮ್ ಒಂದೇ ಆಗಬೇಕಿಲ್ಲ.

ಹೆಸರುಗಳು ಬೇರೆ ಬೇರೆ ಆಗಿರಲು, ಮೊದಲಿಗೆ ಡೇಟಾಬೇಸ್ ರಚಿಸಿ. ನಂತರ ಆ ಡೇಟಾಬೇಸ್ಗೆ ಯೂಸರ್ ಅನ್ನು ರಚಿಸಿ.

07:53 ಅಲ್ಲದೆ, ವಾಡಿಕೆಯ ಪ್ರಕಾರ, ಯೂಸರ್ನೇಮ್ನ ನಡುವೆ ಸ್ಪೇಸ್ ಗಳು ಇರಬಾರದು.
07:59 ಈಗ ನಮ್ಮ XAMPP ರನ್ ಆಗುತ್ತಿದೆ ಮತ್ತು ನಮ್ಮ ಡೇಟಾಬೇಸ್ ತಯಾರಾಗಿದೆ.
08:02 ನಾವೀಗ Front Accounting ಇನ್ಸ್ಟಾಲ್ಲೇಶನ್ ಮುಂದುವರಿಸಲು ಸಿದ್ಧರಿದ್ದೇವೆ.
08:07 ವೆಬ್ ಬ್ರೌಸರ್ನಲ್ಲಿ ಹೊಸ ಟ್ಯಾಬ್ ತೆರೆಯಿರಿ.

ಅಡ್ರೆಸ್ ಬಾರ್ನಲ್ಲಿ localhost/account ಎಂದು ಟೈಪ್ ಮಾಡಿ ಮತ್ತು Enter ಒತ್ತಿ.

08:17 ನಾವೀಗ Step 1: System Diagnostics ಎಂದು ತೋರಿಸುವ FrontAccounting ವೆಬ್ ಪೇಜ್ ನೋಡುತ್ತೇವೆ.
08:22 Select install wizard language, ಇಂಗ್ಲಿಷ್ ಆಗಿದೆ ಎಂದು ಖಚಿತಪಡಿಸಿಕೊಳ್ಳಿ.
08:26 ಕೆಳಕ್ಕೆ ಸ್ಕ್ರೋಲ್ ಮಾಡಿ ಮತ್ತು ಪೇಜ್ನ ಕೆಳಭಾಗದಲ್ಲಿ Continue ಬಟನ್ ಮೇಲೆ ಕ್ಲಿಕ್ ಮಾಡಿ.
08:31 ಮುಂದಿನ ವೆಬ್ ಪೇಜ್ನ ಶೀರ್ಷಿಕೆಯು: Step 2: Database Server Settings.
08:37 ನಾನಿಲ್ಲಿ Server Host ಅನ್ನು localhost ಆಗಿ ಇಡುತ್ತೇನೆ.

ಸರ್ವರ್ ಪೋರ್ಟ್ ಅನ್ನು ಖಾಲಿ ಇಡುತ್ತೇನೆ.

08:44 ನೀವು MySQL ಡಿಫಾಲ್ಟ್ ಪೋರ್ಟ್ ಸಂಖ್ಯೆಯನ್ನು 3306 ಬಿಟ್ಟು, ಬೇರೆ ಸಂಖ್ಯೆಗೆ ಬದಲಾಯಿಸಿದ್ದರೆ, ಆ ಪೋರ್ಟ್ ಸಂಖ್ಯೆಯನ್ನು ಇಲ್ಲಿ ನಮೂದಿಸಿ.
08:52 ನಾವು ಈ ಹಿಂದೆ ರಚಿಸಿದ ಕೆಳಗಿನ ವಿವರಗಳನ್ನು -

frontacc ಅನ್ನು ಡೇಟಾಬೇಸ್ ನೇಮ್ ಆಗಿ,

09:00 frontacc ಅನ್ನು ಡೇಟಾಬೇಸ್ ಯೂಸರ್ ಆಗಿ,
09:03 ಮತ್ತು admin123 ಅನ್ನು ಡೇಟಾಬೇಸ್ ಪಾಸ್ವರ್ಡ್ ಆಗಿ ನಮೂದಿಸಿ.
09:07 ಉಳಿದ ಆಯ್ಕೆಗಳನ್ನು ನಿರ್ಲಕ್ಷಿಸಿ ಮತ್ತು ಕೆಳಗೆ ಇರುವ Continue ಬಟನ್ ಮೇಲೆ ಕ್ಲಿಕ್ ಮಾಡಿ.
09:12 ನಂತರ, ನೀವು ನಿಮ್ಮದೇ ಕಂಪನಿಯ ವಿವರಗಳನ್ನು ಸೇರಿಸಬೇಕು.

ಇದು ಹೇಗೆ ಎಂದು ನಾನು ತೋರಿಸುತ್ತೇನೆ.

09:19 Company Name ಫೀಲ್ಡ್ನಲ್ಲಿ, ನಾನು ST Company Pvt. Ltd. ಎಂದು ಟೈಪ್ ಮಾಡುತ್ತೇನೆ.
09:24 ನಾನು ಅಡ್ಮಿನ್ ಲಾಗಿನ್ ಅನ್ನು admin ಆಗಿ ಇಡುತ್ತೇನೆ.

ನಂತರ ಅಡ್ಮಿನ್ ಪಾಸ್ವರ್ಡ್ ಅನ್ನು spoken ಎಂದು ಟೈಪ್ ಮಾಡುತ್ತೇನೆ.

09:31 ನೀವು ನಿಮ್ಮ ಆಯ್ಕೆಯ ಯಾವುದೇ ಪಾಸ್ವರ್ಡ್ ಕೊಡಬಹುದು.
09:34 ಇದೇ ಪಾಸ್ವರ್ಡ್ ಅನ್ನು ಇನ್ನೊಮ್ಮೆ ನಮೂದಿಸಿ.

ಇದು ಲಾಗಿನ್ ಪಾಸ್ವರ್ಡ್ ಆಗಿದೆ ಎಂಬುದನ್ನು ನೆನಪಿಡಿ.

09:40 ನಂತರ ನಾವು Charts of Accounts ಗಾಗಿ ಎರಡು ಆಯ್ಕೆಗಳನ್ನು ನೋಡುತ್ತೇವೆ.
09:44 ನಾನು Standard new company American COA ಅನ್ನು ಆಯ್ಕೆಮಾಡುತ್ತೇನೆ.
09:49 Default Language ಅನ್ನು English ಎನ್ನಿ.
09:52 Install ಬಟನ್ ಮೇಲೆ ಕ್ಲಿಕ್ ಮಾಡಿ.
09:55 ಸ್ಕ್ರೀನ್ ಮೇಲೆ ನಾವು FrontAccounting ERP has been installed successfully ಎಂಬ ಕೊನೆಯ ಮೆಸೆಜ್ ಅನ್ನು ನೋಡಬಹುದು.

ನಮ್ಮ ಇನ್ಸ್ಟಾಲ್ಲೇಶನ್ ಯಶಸ್ವಿಯಾಗಿದೆ ಎಂದು ಇದು ದೃಢೀಕರಿಸುತ್ತದೆ.

10:06 FrontAccounting ಇಂಟರ್ಫೇಸ್ ನಲ್ಲಿ ಲಾಗಿನ್ ಮಾಡಲು, Click here to start ಲಿಂಕ್ ಮೇಲೆ ಕ್ಲಿಕ್ ಮಾಡಿ.
10:12 ಲಾಗಿನ್ ಸ್ಕ್ರೀನ್ನಲ್ಲಿ ಹೀಗೆ-

User name ಅನ್ನು admin ಎಂದು, Password ಅನ್ನು spoken ಮತ್ತು

10:22 Company ಯನ್ನು ST Company Pvt. Ltd. ಎಂದು ನಮೂದಿಸಿ.

ನಂತರ Login ಬಟನ್ ಮೇಲೆ ಕ್ಲಿಕ್ ಮಾಡಿ.

10:28 ನಾವೀಗ Front Accounting Administration ಪೇಜ್ಗೆ ಬಂದಿದ್ದೇವೆ.
10:32 ಈ ಪೇಜ್ನಲ್ಲಿ ನಾವು ವಿವಿಧ ಟ್ಯಾಬ್ಗಳನ್ನು ನೋಡಬಹುದು.

ಇವುಗಳನ್ನು ಹೇಗೆ ಬಳಸುವುದೆಂದು ಈ ಸರಣಿಯ ಮುಂದಿನ ಭಾಗದಲ್ಲಿ ನೋಡೋಣ.

10:39 ಇದರೊಂದಿಗೆ ನಾವು ಈ ಟ್ಯುಟೋರಿಯಲ್ನ ಕೊನೆಗೆ ಬಂದಿದ್ದೇವೆ.

ಸಂಕ್ಷಿಪ್ತವಾಗಿ,

10:44 ಈ ಟ್ಯುಟೋರಿಯಲ್ನಲ್ಲಿ ನಾವು:

XAMPP ಡೌನ್ಲೋಡ್ ಮಾಡಲು ಮತ್ತು ಅಳವಡಿಸಲು,

10:50 FrontAccounting ಸಾಫ್ಟ್ವೇರ್ ಅನ್ನು ಡೌನ್ಲೋಡ್ ಮಾಡಲು ಮತ್ತು ಅಳವಡಿಸಲು,
10:53 ವಿಂಡೋಸ್ 10 ಒ.ಎಸ್ ನಲ್ಲಿ ಡೇಟಾಬೇಸ್ ಸೆಟಪ್ ಮಾಡಲು ಕಲಿತೆವು.
10:57 ಈ ಕೆಳಗಿನ ಲಿಂಕ್ ನಲ್ಲಿ ಇರುವ ವೀಡಿಯೊ, ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ನ ಸಾರಂಶವಾಗಿದೆ. ದಯವಿಟ್ಟು ಇದನ್ನು ಡೌನ್ ಲೋಡ್ ಮಾಡಿ ವೀಕ್ಷಿಸಿ.
11:05 ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ತಂಡವು ಕಾರ್ಯಶಾಲೆಗಳನ್ನು ನಡೆಸುತ್ತದೆ ಮತ್ತು ಪ್ರಮಾಣಪತ್ರಗಳನ್ನು ಕೊಡುತ್ತದೆ. ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ನಮಗೆ ಬರೆಯಿರಿ.
11:13 ಈ ಸ್ಪೋಕನ್ ಟ್ಯುಟೋರಿಯಲ್ ಕುರಿತು ನಿಮಗೆ ಏನಾದರೂ ಪ್ರಶ್ನೆಗಳಿವೆಯೇ? ದಯವಿಟ್ಟು ಈ ಸೈಟ್ಗೆ ಭೇಟಿ ನೀಡಿ.
11:18 ನಿಮಗೆ ಪ್ರಶ್ನೆ ಇರುವಲ್ಲಿ ನಿಮಿಷ ಮತ್ತು ಸೆಕೆಂಡನ್ನು ಆರಿಸಿ. ನಿಮ್ಮ ಪ್ರಶ್ನೆಯನ್ನು ಸಂಕ್ಷಿಪ್ತವಾಗಿ ವಿವರಿಸಿ. ನಮ್ಮ ತಂಡದಿಂದ ಯಾರಾದರೂ ಒಬ್ಬರು ಅದಕ್ಕೆ ಉತ್ತರಿಸುತ್ತಾರೆ.
11:27 ಸ್ಪೋಕನ್ ಟ್ಯುಟೋರಿಯಲ್ ಫೋರಂ, ಈ ಟ್ಯುಟೋರಿಯಲ್ ಕುರಿತು ನಿರ್ದಿಷ್ಟ ಪ್ರಶ್ನೆಗಳಿಗೆ ಮೀಸಲಾಗಿದೆ.
11:32 ದಯವಿಟ್ಟು ಅವುಗಳಲ್ಲಿ ಸಂಬಂಧವಿಲ್ಲದ ಮತ್ತು ಸಾಮಾನ್ಯ ಪ್ರಶ್ನೆಗಳನ್ನು ಪೋಸ್ಟ್ ಮಾಡಬೇಡಿ. ಇದು ಗೊಂದಲವನ್ನು ಕಡಿಮೆ ಮಾಡಲು ಸಹಕರಿಸುತ್ತದೆ.
11:39 ಕಡಿಮೆ ಗೊಂದಲವಿದ್ದರೆ ನಾವು ಈ ಚರ್ಚೆಯನ್ನು ಕಲಿಕೆಯ ವಸ್ತುವಾಗಿ ಬಳಸಬಹುದು.
11:44 ‘ಸ್ಪೋಕನ್ ಟ್ಯುಟೋರಿಯಲ್’ ಪ್ರೊಜೆಕ್ಟ್, MHRD, ಭಾರತ ಸರ್ಕಾರದ ನೆರವು ಪಡೆದಿದೆ.
11:49 ಈ ಸ್ಕ್ರಿಪ್ಟ್, ಸ್ಪೋಕನ್ ಟ್ಯುಟೋರಿಯಲ್ ತಂಡದ ಕೊಡುಗೆಯಾಗಿದೆ.

ಈ ಸ್ಕ್ರಿಪ್ಟ್ ನ ಅನುವಾದಕರು ಮಂಗಳೂರಿನಿಂದ ಮೆಲ್ವಿನ್ ಮತ್ತು ಧ್ವನಿ ಶ್ರೀ ನವೀನ್ ಭಟ್, ಉಪ್ಪಿನಪಟ್ಟಣ. ಧನ್ಯವಾದಗಳು.

Contributors and Content Editors

Melkamiyar, Sandhya.np14