PHP-and-MySQL/C2/Loops-Foreach-Statement/Kannada
From Script | Spoken-Tutorial
Revision as of 12:25, 13 April 2020 by Sandhya.np14 (Talk | contribs)
Time | Narration | ||
00:00 | foreach ಲೂಪ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ. | ||
00:02 | ಇದು ನಾವು ಹೇಳಿಕೊಡುವ ಕೊನೆಯ loop ಆಗಿದೆ. | ||
00:05 | ಈ ಲೂಪ್ ನ ಪ್ರಾಥಮಿಕ ಅಂಶವೆಂದರೆ ಇದು ಅರೇ ಯ ವ್ಯಾಲ್ಯು | ||
00:10 | ಅಥವಾ ಅರೇ ಎಲಿಮೆಂಟ್ ಗಳ ಮೂಲಕ ಲೂಪ್ ಆಗುವುದು. | ||
00:13 | ನಾನು ನನ್ನ ಹಿಂದಿನ ಟ್ಯುಟೋರಿಯಲ್ ಗಳಲ್ಲಿ ಅರೇ ಯ ಎಲಿಮೆಂಟ್ ಗಳನ್ನು id tags ಎಂದು ಕರೆಯುತ್ತಾರೆ ಎಂದು ಹೇಳಿರುವುದು ನನಗೆ ನೆನಪಿದೆ. | ||
00:21 | ಅರೇ ಯ ಎಲಿಮೆಂಟ್ ಗಳನ್ನು id tags ಎಂದು ಕರೆಯಲಾಗುವುದಿಲ್ಲ. | ||
00:24 | ನೀವು ಅರೇ ವ್ಯಾಲ್ಯು ವನ್ನು ಇಕೋ ಮಾಡುವಾಗ, | ||
00:29 | ಇಲ್ಲಿ ಇವು ನ್ಯುಮರಿಕಲ್ ಐಡಿ, ಕೀ ಅಥವಾ ಟ್ಯಾಗ್ ಗಳಂತಹ ಐಡಿ ಗಳಾಗಿರುತ್ತವೆ. | ||
00:35 | ಕ್ಷಮಿಸಿ. | ||
00:37 | ಈಗ ನಮ್ಮ foreach ಲೂಪ್ ಗೆ ಹಿಂದಿರುಗೋಣ. ಆರಂಭಿಸಲು ಒಂದು ಅರೇ ಯನ್ನು ರಚಿಸುವೆನು. | ||
00:43 | ನಾನು ಇದನ್ನು numbers ಎಂದು ಕರೆಯುವೆನು ಮತ್ತು ಇದೊಂದು ಅರೇ ಆಗಿದೆ. ಈಗ ನಾವು ಇದನ್ನು ರಚಿಸಬೇಕು. | ||
00:49 | ನಾನು ಇದನ್ನು ನನ್ನ ಹಿಂದಿನ ಟ್ಯುಟೋರಿಯಲ್ ನಲ್ಲಿ ತೋರಿಸಿರುವೆನು. ಸಂಖ್ಯೆಗಳು 1, 2, 3, 4, 5, 6, 7, 8, 9, ಮತ್ತು 10 ಆಗಿರಲಿ. | ||
01:00 | ಸರಿ, foreach ಈ ರೀತಿಯಾಗಿರುತ್ತದೆ. | ||
01:03 | ಇಲ್ಲಿ ನಮ್ಮ foreach ಹೊಂದಿದ್ದೇವೆ ಮತ್ತು ಇಲ್ಲಿ ಕಂಡಿಷನ್ ಇರುತ್ತದೆ. ನನಗೆ ಇದನ್ನು ಏನೆಂದು ಕರೆಯಬೇಕೆಂದು ತಿಳಿದಿಲ್ಲ. | ||
01:13 | ಹಾಗಾಗಿ ಇಲ್ಲಿ ಅರೇ ಯ ಹೆಸರನ್ನು ಅಂದರೆ numbers ಎಂದು ಕೊಳ್ಳೋಣ. | ||
01:21 | ಮತ್ತು ನಂತರ as ಎಂದು, ಅದರ ನಂತರ $value ಎಂದು ಟೈಪ್ ಮಾಡೋಣ. ನಾವು ಇದಕ್ಕೆ ಯಾವ ಹೆಸರನ್ನಾದರೂ ಕೊಡಬಹುದು. | ||
01:27 | ನಾವು ಇದನ್ನು ಏನೆಂದು ಬೇಕಾದರೂ ಕರೆಯಬಹುದು ನಾನು ಇಲ್ಲಿ $value ಎಂದು ಟೈಪ್ ಮಾಡುವೆನು. | ||
01:32 | ಮತ್ತು ಕರ್ಲಿ ಬ್ರ್ಯಾಕೆಟ್ ನ ಒಳಗೆ ಪ್ರಾಥಮಿಕವಾದ ಕಮಾಂಡ್ $value ವನ್ನು echo ಮಾಡುವುದಾಗಿದೆ. | ||
01:40 | ಮತ್ತು ಇದರ ಕೊನೆಯಲ್ಲಿ ಒಂದು ಲೈನ್-ಬ್ರೇಕ್ ಅನ್ನು ಸೇರಿಸೋಣ ಮತ್ತು ಇದನ್ನು ಈಗ ಒಮ್ಮೆ ನೋಡೋಣ. | ||
01:46 | ನಾವು ಲೂಪ್ ನ ಮೂಲಕ ಇಕೋ ಮಾಡಿದ್ದೇವೆ. ಇದು ಲೂಪ್ ನ ಮೂಲಕ ಇಕೋ ಮಾಡಲು ಸುಲಭವಾದ ವಿಧಾನವಾಗಿದೆ. ನೀವು ಅರೇ ಯ ಮೂಲಕ ಇಕೋ ಮಾಡಲು ಬೇರೆ ಲೂಪ್ ಗಳನ್ನು ಬಳಸಬಹುದು. ಆದರೆ ನೀವು ಅದನ್ನು ನೀವೇ ಬರೆಯಬೇಕಾಗುವುದು. ಆದರೆ ಇದು ಬಹುಷಃ ಅತ್ಯಂತ ಸುಲಭವಾದ ವಿಧಾನವಾಗಿದೆ. | ||
02:00 | ಹಾಗಾಗಿ ನೀವು ಇದನ್ನು ನೆನಪಿನಲ್ಲಿಟ್ಟುಕೊಂಡಿರುವ ತನಕ, ನೀವು ನಿಮ್ಮ ಅರೇ ಯಲ್ಲಿ ಇಕೋ ಮಾಡಬಹುದು, ನಿಮ್ಮ ಅರೇಯ ಪ್ರತಿ ಎಲಿಮೆಂಟ್ ನ ಮೇಲೆ ಯಾವುದೇ ಕ್ರಿಯೆಗಳನ್ನು ಮಾಡಬಹುದು ಮತ್ತು ಅವುಗಳನ್ನು ಇನ್ನೊಂದು ಅರೇಯಲ್ಲಿ ಸಂಗ್ರಹಿಸಿಟ್ಟುಕೊಳ್ಳಬಹುದು. | ||
02:08 | ಈಗ ನಾನು ಇದನ್ನು ಸುಲಭವಾಗಿ ಬಳಸುವುದು ಹೇಗೆ ಎಂದು ತೋರಿಸುವೆನು. | ||
02:12 | ಈಗ ನಾನು '2 ' ರ ಮಗ್ಗಿಯನ್ನು ಮಾಡಿ ತೋರಿಸುವೆನು. | ||
02:19 | ಹಾಗಾಗಿ ನಾನು ಇದನ್ನು ಅಳಿಸುವೆನು. | ||
02:23 | ನನಗೆ ಇಲ್ಲಿ ಒಂದು ಸಂಖ್ಯೆ ಬೇಕು, ನಂತರ times 2 is ಅದಾದ ನಂತರ ಇದರ ಹೊರಗೆ ಒಂದು ಹೊಸ ವ್ಯಾಲ್ಯು ಬೇಕು. ನಾವು ಈಗ ಇಲ್ಲಿ ಅರೇಯ ಪ್ರತಿ ಎಲಿಮೆಂಟ್ ಅನ್ನು ಗುಣಿಸುವೆವು- ಅಂದರೆ ಅರೇಯ ಪ್ರತಿ ಎಲಿಮೆಂಟ್ ಅನ್ನು ಎರಡರಿಂದ ಗುಣಿಸಬೇಕು. | ||
02:41 | ಈಗ ಇಲ್ಲಿ numbers ಎನ್ನುವುದರೊಂದಿಗೆ ಪ್ರಾರಂಭಿಸೋಣ. | ||
02:46 | ಕ್ಷಮಿಸಿ, ಇದನ್ನು $value ಎಂದು ಕರೆಯುವೆವು ಏಕೆಂದರೆ ಪ್ರತಿ foreach ಎಲಿಮೆಂಟ್ ಅನ್ನು $value ಎಂಬ ವೇರಿಯೇಬಲ್ ನಲ್ಲಿ ಸ್ಟೋರ್ ಮಾಡಿರುವೆವು. | ||
02:56 | $value ವು ಪ್ರತಿ ಬಾರಿ ಇವುಗಳಲ್ಲಿ ಪ್ರತಿಯೊಂದರ ಮೂಲಕ ಲೂಪ್ ಆಗುವುದು. | ||
03:00 | ಹಾಗಾಗಿ ನಾವು, $value times 2 is ಎಂದು ಟೈಪ್ ಮಾಡಿ ನಂತರ, ಬ್ರ್ಯಾಕೆಟ್ ಅನ್ನು ಹಾಕಿ ಅದರೊಳಗೆ: $value * (times) 2 ಎಂದು ಟೈಪ್ ಮಾಡೋಣ. | ||
03:10 | - | 03:15 | ಅಂದರೆ ಇದೊಂದು ಮ್ಯಾಥೆಮ್ಯಾಟಿಕಲ್ ಆಪರೇಟರ್ ಅದರ ಸರಿಯಾದ ಹೆಸರು ಅರಿಥ್-ಮ್ಯಾಟಿಕ್ ಆಪರೇಟರ್ ಆಗಿದೆ. |
03:20 | ಸರಿ, ಇದು ಎರಡರಿಂದ ಗುಣಿಸುತ್ತದೆ. | ||
03:24 | ಇದನ್ನು ಇನ್ನೂಆಸಕ್ತಿಕರವಾಗಿಸಲು, ನಾನು ಇಲ್ಲಿ $multiple ಎಂಬ | ||
03:30 | ಹೊಸ ವೇರಿಯೇಬಲ್ ಅನ್ನು ಬಳಸುವೆನು. | ||
03:32 | ಮತ್ತು ಇಲ್ಲಿ ಮೇಲ್ಗಡೆ $multiple | ||
03:35 | ಇದು ಎರಡು ಎಂದಿರಲಿ.ಈಗ ನೀವು ನಾನು ಇದನ್ನು ಬದಲಿಸಲು ಕಾರಣವನ್ನು ಸುಲಭವಾಗಿ ಊಹಿಸಬಹುದು. | ||
03:41 | ನಾನು ಇದನ್ನು ನನ್ನ ಇಷ್ಟದಂತೆ ಬದಲಿಸಬಹುದು. | ||
03:43 | ಈಗ ಇದನ್ನು ಲೋಡ್ ಮಾಡಿ, refresh ಮಾಡೋಣ. | ||
03:46 | ಓಹ್ ! ನಾವು break ಅನ್ನು ಮರೆತಿದ್ದೇವೆ. | ||
03:48 | ಹಾಗಾಗಿ ಅದನ್ನು ಇಲ್ಲಿ ಕೊನೆಯಲ್ಲಿ ಸೇರಿಸೋಣ. | ||
03:51 | ಇಲ್ಲವಾದಲ್ಲಿ ನಾವು ಸರಿಯಾಗಿ ಓದಲು ಸಾಧ್ಯವಿಲ್ಲ. | ||
03:54 | ಕ್ಷಮಿಸಿ, 1 times 2 is 2. | ||
03:58 | 2 times 2 is 4, ಇದೇ ರೀತಿ 10 times 2 is 20 ರ ತನಕ ಮುಂದುವರಿಯುತ್ತದೆ. | ||
04:03 | ಇವು ಎಲ್ಲವೂ ಸರಿಯಾಗಿದೆ ಎಂದು ನಾವು ತಿಳಿದಿದ್ದೇವೆ. | ||
04:05 | ನಾವು ಇದನ್ನು ಬದಲಿಸಬಹುದು, ಈಗ ನಾವು '10 ' ರ ಮಗ್ಗಿಯನ್ನು ನೋಡೋಣ. | ||
04:10 | Refresh ಮಾಡಿ , 1 times 2 is... ಓಹ್! ನಾವು 2 ಅನ್ನು $multiple ಎಂದು ಬದಲಿಸಲು ಮರೆತಿದ್ದೇವೆ. | ||
04:20 | ಈಗ ಇದು ನಮ್ಮ ಸಂಖ್ಯೆಯನ್ನು echo ಮಾಡುವುದು. | ||
04:23 | Refresh ಮಾಡಿ. ಹಾಗಾಗಿ, 1 times 10 is 10, 2 times 10 is 20, 10 times 10 is 100 ಎಂದಾಗುವುದು. | ||
04:30 | ಹಾಗಾಗಿ ನಾವು $multiple ನ ವ್ಯಾಲ್ಯು ವನ್ನು ಬದಲಿಸಿದಾಗ – ಈಗ '12 ' ರ ಮಗ್ಗಿಯನ್ನು ತೆಗೆದುಕೊಳ್ಳೋಣ, | ||
04:36 | ನಮ್ಮ ಎರಡು ವ್ಯಾಲ್ಯುಗಳು ಬದಲಾಗುತ್ತವೆ. | ||
04:39 | ನಾವು ಅದನ್ನು ಪಡೆದಿದ್ದೇವೆ. | ||
04:41 | ಹಾಗಾಗಿ foreach ಲೂಪ್ ಮತ್ತು ಅರೇ ಯಿಂದ ನಾನು ಒಂದು ಸರಳ ಪ್ರೋಗ್ರಾಂ ಅನ್ನು ರಚಿಸಿದ್ದೇನೆ ಮತ್ತು ಇನ್ನೊಂದು ಪ್ರೋಗ್ರಾಮ್ ನ ಮೂಲಕ ನೀವು ಯಾವುದೇ ಸಂಖ್ಯೆಯ ಮಗ್ಗಿಯನ್ನು ಬೇಕಾದರೂ ನೋಡಬಹುದಾಗಿದೆ. | ||
04:51 | ಇದು foreach ಲೂಪ್ ಆಗಿದೆ. ಧನ್ಯವಾದಗಳು. | ||
04:54 | ಸ್ಕ್ರಿಪ್ಟ್ ನ ಅನುವಾದಕಿ, ಮೈಸೂರಿನಿಂದ ಅಂಜನಾ ಅನಂತ್ ನಾಗ್ ಮತ್ತು ಧ್ವನಿ ಶ್ರೀ ನವೀನ್ ಭಟ್, ಉಪ್ಪಿನಪಟ್ಟಣ. |