PHP-and-MySQL/C2/Loops-Foreach-Statement/Kannada

From Script | Spoken-Tutorial
Jump to: navigation, search
Time Narration
00:00 foreach ಲೂಪ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ.
00:02 ಇದು ನಾವು ಹೇಳಿಕೊಡುವ ಕೊನೆಯ loop ಆಗಿದೆ.
00:05 ಈ ಲೂಪ್ ನ ಪ್ರಾಥಮಿಕ ಅಂಶವೆಂದರೆ ಇದು ಅರೇ ಯ ವ್ಯಾಲ್ಯು
00:10 ಅಥವಾ ಅರೇ ಎಲಿಮೆಂಟ್ ಗಳ ಮೂಲಕ ಲೂಪ್ ಆಗುವುದು.
00:13 ನಾನು ನನ್ನ ಹಿಂದಿನ ಟ್ಯುಟೋರಿಯಲ್ ಗಳಲ್ಲಿ ಅರೇ ಯ ಎಲಿಮೆಂಟ್ ಗಳನ್ನು id tags ಎಂದು ಕರೆಯುತ್ತಾರೆ ಎಂದು ಹೇಳಿರುವುದು ನನಗೆ ನೆನಪಿದೆ.
00:21 ಅರೇ ಯ ಎಲಿಮೆಂಟ್ ಗಳನ್ನು id tags ಎಂದು ಕರೆಯಲಾಗುವುದಿಲ್ಲ.
00:24 ನೀವು ಅರೇ ವ್ಯಾಲ್ಯು ವನ್ನು ಇಕೋ ಮಾಡುವಾಗ,
00:29 ಇಲ್ಲಿ ಇವು ನ್ಯುಮರಿಕಲ್ ಐಡಿ, ಕೀ ಅಥವಾ ಟ್ಯಾಗ್ ಗಳಂತಹ ಐಡಿ ಗಳಾಗಿರುತ್ತವೆ.
00:35 ಕ್ಷಮಿಸಿ.
00:37 ಈಗ ನಮ್ಮ foreach ಲೂಪ್ ಗೆ ಹಿಂದಿರುಗೋಣ. ಆರಂಭಿಸಲು ಒಂದು ಅರೇ ಯನ್ನು ರಚಿಸುವೆನು.
00:43 ನಾನು ಇದನ್ನು numbers ಎಂದು ಕರೆಯುವೆನು ಮತ್ತು ಇದೊಂದು ಅರೇ ಆಗಿದೆ. ಈಗ ನಾವು ಇದನ್ನು ರಚಿಸಬೇಕು.
00:49 ನಾನು ಇದನ್ನು ನನ್ನ ಹಿಂದಿನ ಟ್ಯುಟೋರಿಯಲ್ ನಲ್ಲಿ ತೋರಿಸಿರುವೆನು. ಸಂಖ್ಯೆಗಳು 1, 2, 3, 4, 5, 6, 7, 8, 9, ಮತ್ತು 10 ಆಗಿರಲಿ.
01:00 ಸರಿ, foreach ಈ ರೀತಿಯಾಗಿರುತ್ತದೆ.
01:03 ಇಲ್ಲಿ ನಮ್ಮ foreach ಹೊಂದಿದ್ದೇವೆ ಮತ್ತು ಇಲ್ಲಿ ಕಂಡಿಷನ್ ಇರುತ್ತದೆ. ನನಗೆ ಇದನ್ನು ಏನೆಂದು ಕರೆಯಬೇಕೆಂದು ತಿಳಿದಿಲ್ಲ.
01:13 ಹಾಗಾಗಿ ಇಲ್ಲಿ ಅರೇ ಯ ಹೆಸರನ್ನು ಅಂದರೆ numbers ಎಂದು ಕೊಳ್ಳೋಣ.
01:21 ಮತ್ತು ನಂತರ as ಎಂದು, ಅದರ ನಂತರ $value ಎಂದು ಟೈಪ್ ಮಾಡೋಣ. ನಾವು ಇದಕ್ಕೆ ಯಾವ ಹೆಸರನ್ನಾದರೂ ಕೊಡಬಹುದು.
01:27 ನಾವು ಇದನ್ನು ಏನೆಂದು ಬೇಕಾದರೂ ಕರೆಯಬಹುದು ನಾನು ಇಲ್ಲಿ $value ಎಂದು ಟೈಪ್ ಮಾಡುವೆನು.
01:32 ಮತ್ತು ಕರ್ಲಿ ಬ್ರ್ಯಾಕೆಟ್ ನ ಒಳಗೆ ಪ್ರಾಥಮಿಕವಾದ ಕಮಾಂಡ್ $value ವನ್ನು echo ಮಾಡುವುದಾಗಿದೆ.
01:40 ಮತ್ತು ಇದರ ಕೊನೆಯಲ್ಲಿ ಒಂದು ಲೈನ್-ಬ್ರೇಕ್ ಅನ್ನು ಸೇರಿಸೋಣ ಮತ್ತು ಇದನ್ನು ಈಗ ಒಮ್ಮೆ ನೋಡೋಣ.
01:46 ನಾವು ಲೂಪ್ ನ ಮೂಲಕ ಇಕೋ ಮಾಡಿದ್ದೇವೆ. ಇದು ಲೂಪ್ ನ ಮೂಲಕ ಇಕೋ ಮಾಡಲು ಸುಲಭವಾದ ವಿಧಾನವಾಗಿದೆ. ನೀವು ಅರೇ ಯ ಮೂಲಕ ಇಕೋ ಮಾಡಲು ಬೇರೆ ಲೂಪ್ ಗಳನ್ನು ಬಳಸಬಹುದು. ಆದರೆ ನೀವು ಅದನ್ನು ನೀವೇ ಬರೆಯಬೇಕಾಗುವುದು. ಆದರೆ ಇದು ಬಹುಷಃ ಅತ್ಯಂತ ಸುಲಭವಾದ ವಿಧಾನವಾಗಿದೆ.
02:00 ಹಾಗಾಗಿ ನೀವು ಇದನ್ನು ನೆನಪಿನಲ್ಲಿಟ್ಟುಕೊಂಡಿರುವ ತನಕ, ನೀವು ನಿಮ್ಮ ಅರೇ ಯಲ್ಲಿ ಇಕೋ ಮಾಡಬಹುದು, ನಿಮ್ಮ ಅರೇಯ ಪ್ರತಿ ಎಲಿಮೆಂಟ್ ನ ಮೇಲೆ ಯಾವುದೇ ಕ್ರಿಯೆಗಳನ್ನು ಮಾಡಬಹುದು ಮತ್ತು ಅವುಗಳನ್ನು ಇನ್ನೊಂದು ಅರೇಯಲ್ಲಿ ಸಂಗ್ರಹಿಸಿಟ್ಟುಕೊಳ್ಳಬಹುದು.
02:08 ಈಗ ನಾನು ಇದನ್ನು ಸುಲಭವಾಗಿ ಬಳಸುವುದು ಹೇಗೆ ಎಂದು ತೋರಿಸುವೆನು.
02:12 ಈಗ ನಾನು '2 ' ರ ಮಗ್ಗಿಯನ್ನು ಮಾಡಿ ತೋರಿಸುವೆನು.
02:19 ಹಾಗಾಗಿ ನಾನು ಇದನ್ನು ಅಳಿಸುವೆನು.
02:23 ನನಗೆ ಇಲ್ಲಿ ಒಂದು ಸಂಖ್ಯೆ ಬೇಕು, ನಂತರ times 2 is ಅದಾದ ನಂತರ ಇದರ ಹೊರಗೆ ಒಂದು ಹೊಸ ವ್ಯಾಲ್ಯು ಬೇಕು. ನಾವು ಈಗ ಇಲ್ಲಿ ಅರೇಯ ಪ್ರತಿ ಎಲಿಮೆಂಟ್ ಅನ್ನು ಗುಣಿಸುವೆವು- ಅಂದರೆ ಅರೇಯ ಪ್ರತಿ ಎಲಿಮೆಂಟ್ ಅನ್ನು ಎರಡರಿಂದ ಗುಣಿಸಬೇಕು.
02:41 ಈಗ ಇಲ್ಲಿ numbers ಎನ್ನುವುದರೊಂದಿಗೆ ಪ್ರಾರಂಭಿಸೋಣ.
02:46 ಕ್ಷಮಿಸಿ, ಇದನ್ನು $value ಎಂದು ಕರೆಯುವೆವು ಏಕೆಂದರೆ ಪ್ರತಿ foreach ಎಲಿಮೆಂಟ್ ಅನ್ನು $value ಎಂಬ ವೇರಿಯೇಬಲ್ ನಲ್ಲಿ ಸ್ಟೋರ್ ಮಾಡಿರುವೆವು.
02:56 $value ವು ಪ್ರತಿ ಬಾರಿ ಇವುಗಳಲ್ಲಿ ಪ್ರತಿಯೊಂದರ ಮೂಲಕ ಲೂಪ್ ಆಗುವುದು.
03:00 ಹಾಗಾಗಿ ನಾವು, $value times 2 is ಎಂದು ಟೈಪ್ ಮಾಡಿ ನಂತರ, ಬ್ರ್ಯಾಕೆಟ್ ಅನ್ನು ಹಾಕಿ ಅದರೊಳಗೆ: $value * (times) 2 ಎಂದು ಟೈಪ್ ಮಾಡೋಣ.
03:10 ನೆನಪಿಡಿ ಇದೊಂದು ಮ್ಯಾಥೆಮ್ಯಾಟಿಕಲ್ ಆಪರೇಟರ್ – ನಾನು ಮೊದಲೇ ತೋರಿಸಿದಂತೆ ಅರಿಥ್-ಮ್ಯಾಟಿಕ್ ಆಪರೇಟರ್ ಆಗಿದೆ.
03:15 ಅಂದರೆ ಇದೊಂದು ಮ್ಯಾಥೆಮ್ಯಾಟಿಕಲ್ ಆಪರೇಟರ್ ಅದರ ಸರಿಯಾದ ಹೆಸರು ಅರಿಥ್-ಮ್ಯಾಟಿಕ್ ಆಪರೇಟರ್ ಆಗಿದೆ.
03:20 ಸರಿ, ಇದು ಎರಡರಿಂದ ಗುಣಿಸುತ್ತದೆ.
03:24 ಇದನ್ನು ಇನ್ನೂಆಸಕ್ತಿಕರವಾಗಿಸಲು, ನಾನು ಇಲ್ಲಿ $multiple ಎಂಬ
03:30 ಹೊಸ ವೇರಿಯೇಬಲ್ ಅನ್ನು ಬಳಸುವೆನು.
03:32 ಮತ್ತು ಇಲ್ಲಿ ಮೇಲ್ಗಡೆ $multiple
03:35 ಇದು ಎರಡು ಎಂದಿರಲಿ.ಈಗ ನೀವು ನಾನು ಇದನ್ನು ಬದಲಿಸಲು ಕಾರಣವನ್ನು ಸುಲಭವಾಗಿ ಊಹಿಸಬಹುದು.
03:41 ನಾನು ಇದನ್ನು ನನ್ನ ಇಷ್ಟದಂತೆ ಬದಲಿಸಬಹುದು.
03:43 ಈಗ ಇದನ್ನು ಲೋಡ್ ಮಾಡಿ, refresh ಮಾಡೋಣ.
03:46 ಓಹ್ ! ನಾವು break ಅನ್ನು ಮರೆತಿದ್ದೇವೆ.
03:48 ಹಾಗಾಗಿ ಅದನ್ನು ಇಲ್ಲಿ ಕೊನೆಯಲ್ಲಿ ಸೇರಿಸೋಣ.
03:51 ಇಲ್ಲವಾದಲ್ಲಿ ನಾವು ಸರಿಯಾಗಿ ಓದಲು ಸಾಧ್ಯವಿಲ್ಲ.
03:54 ಕ್ಷಮಿಸಿ, 1 times 2 is 2.
03:58 2 times 2 is 4, ಇದೇ ರೀತಿ 10 times 2 is 20 ರ ತನಕ ಮುಂದುವರಿಯುತ್ತದೆ.
04:03 ಇವು ಎಲ್ಲವೂ ಸರಿಯಾಗಿದೆ ಎಂದು ನಾವು ತಿಳಿದಿದ್ದೇವೆ.
04:05 ನಾವು ಇದನ್ನು ಬದಲಿಸಬಹುದು, ಈಗ ನಾವು '10 ' ರ ಮಗ್ಗಿಯನ್ನು ನೋಡೋಣ.
04:10 Refresh ಮಾಡಿ , 1 times 2 is... ಓಹ್! ನಾವು 2 ಅನ್ನು $multiple ಎಂದು ಬದಲಿಸಲು ಮರೆತಿದ್ದೇವೆ.
04:20 ಈಗ ಇದು ನಮ್ಮ ಸಂಖ್ಯೆಯನ್ನು echo ಮಾಡುವುದು.
04:23 Refresh ಮಾಡಿ. ಹಾಗಾಗಿ, 1 times 10 is 10, 2 times 10 is 20, 10 times 10 is 100 ಎಂದಾಗುವುದು.
04:30 ಹಾಗಾಗಿ ನಾವು $multiple ನ ವ್ಯಾಲ್ಯು ವನ್ನು ಬದಲಿಸಿದಾಗ – ಈಗ '12 ' ರ ಮಗ್ಗಿಯನ್ನು ತೆಗೆದುಕೊಳ್ಳೋಣ,
04:36 ನಮ್ಮ ಎರಡು ವ್ಯಾಲ್ಯುಗಳು ಬದಲಾಗುತ್ತವೆ.
04:39 ನಾವು ಅದನ್ನು ಪಡೆದಿದ್ದೇವೆ.
04:41 ಹಾಗಾಗಿ foreach ಲೂಪ್ ಮತ್ತು ಅರೇ ಯಿಂದ ನಾನು ಒಂದು ಸರಳ ಪ್ರೋಗ್ರಾಂ ಅನ್ನು ರಚಿಸಿದ್ದೇನೆ ಮತ್ತು ಇನ್ನೊಂದು ಪ್ರೋಗ್ರಾಮ್ ನ ಮೂಲಕ ನೀವು ಯಾವುದೇ ಸಂಖ್ಯೆಯ ಮಗ್ಗಿಯನ್ನು ಬೇಕಾದರೂ ನೋಡಬಹುದಾಗಿದೆ.
04:51 ಇದು foreach ಲೂಪ್ ಆಗಿದೆ. ಧನ್ಯವಾದಗಳು.
04:54 ಸ್ಕ್ರಿಪ್ಟ್ ನ ಅನುವಾದಕಿ, ಮೈಸೂರಿನಿಂದ ಅಂಜನಾ ಅನಂತ್ ನಾಗ್ ಮತ್ತು ಧ್ವನಿ ಶ್ರೀ ನವೀನ್ ಭಟ್, ಉಪ್ಪಿನಪಟ್ಟಣ.

Contributors and Content Editors

Sandhya.np14