LibreOffice-Suite-Base/C3/Create-simple-queries-in-SQL-View-II/Kannada
From Script | Spoken-Tutorial
Revision as of 17:20, 7 April 2020 by Sandhya.np14 (Talk | contribs)
Time | Narration
|
00:02 | ‘ಲಿಬರ್ ಆಫಿಸ್ ಬೇಸ್’ ನ ಸ್ಪೋಕನ್ ಟ್ಯುಟೋರಿಯಲ್ ಗೆ ಸ್ವಾಗತ. |
00:06 | ಈ ಟ್ಯುಟೋರಿಯಲ್ ನಲ್ಲಿ ನಾವು: |
00:10 | SQL View ನಲ್ಲಿ ಕ್ವೆರಿಗಳನ್ನು ಬರೆಯಲು, |
00:13 | ORDER BY ಕ್ಲಾಜ್ (clause), |
00:15 | JOINS, |
00:17 | ಅಗ್ರಿಗೇಟ್ ಫಂಕ್ಷನ್ ಗಳು, |
00:19 | GROUP BY ಕ್ಲಾಜ್, |
00:21 | ಮತ್ತು ಬಿಲ್ಟ್-ಇನ್ ಫಂಕ್ಷನ್ ಇವುಗಳನ್ನು ಬಳಸಲು ಕಲಿಯುವೆವು. |
00:26 | SQL ಕ್ವೆರಿಗಳನ್ನು ಬರೆಯುವ ಕುರಿತು ನಾವು ಇನ್ನಷ್ಟು ಕಲಿಯೋಣ. |
00:31 | ಇದಕ್ಕಾಗಿ, ನಮ್ಮ ಪರಿಚಿತ Library ಡೇಟಾಬೇಸ್ ಅನ್ನು ತೆರೆಯೋಣ. |
00:36 | ಈಗ, ಎಡ ಪ್ಯಾನಲ್ ನಲ್ಲಿರುವ Queries ಪಟ್ಟಿಯ ಮೇಲೆ, ನಂತರ |
00:42 | ‘Create Query in SQL View’ ಮೇಲೆ ಕ್ಲಿಕ್ ಮಾಡೋಣ. |
00:49 | ಮೊದಲಿಗೆ, ಕ್ವೆರಿಯಲ್ಲಿ ಫಲಿತಾಂಶಗಳನ್ನು ಹೇಗೆ ಸಾರ್ಟ್ (sort) ಮಾಡಬಹುದೆಂದು ನೋಡೋಣ. |
00:55 | ನಾವು ಈ ಕೆಳಗಿನ ಉದಾಹರಣೆಯನ್ನು ನೋಡೋಣ: |
00:59 | ಕ್ಯಾಂಬ್ರಿಜ್ ಅಥವಾ ಆಕ್ಸ್ಫರ್ಡ್ ನಿಂದ ಪ್ರಕಟಿಸಲಾದ ಎಲ್ಲಾ ಪುಸ್ತಕಗಳಿಗಾಗಿ, Book titles ಮತ್ತು ಲೇಖಕರ ಮಾಹಿತಿಯನ್ನು ಪಡೆಯುವೆವು. |
01:09 | ಅವುಗಳನ್ನು publisher ಮತ್ತು ಆನಂತರ Book titles ಪ್ರಕಾರ ಏರಿಕೆ ಕ್ರಮದಲ್ಲಿ ವರ್ಗೀಕರಿಸುವೆವು. |
01:19 | ಇದಕ್ಕಾಗಿ ಕ್ವೆರಿ ಇಲ್ಲಿದೆ ನೋಡಿ: |
01:22 | SELECT Publisher comma Title comma Author |
01:28 | FROM Books |
01:31 | WHERE Publisher IN open brackets in single quotes Cambridge comma in single quotes Oxford close brackets |
01:42 | ORDER BY Publisher ASC comma Title ASC |
01:50 | ಹೀಗೆ, ಕಾಲಂ ಹೆಸರುಗಳಿಂದ ಸಾರ್ಟ್ ಮಾಡುವುದನ್ನು ಸೂಚಿಸಲು, ORDER BY ಕ್ಲಾಜ್ ಅನ್ನು ಬಳಸಿದ್ದೇವೆ. |
01:58 | ಗಮನಿಸಿ, ವರ್ಗೀಕರಣಕ್ಕಾಗಿ ಹೆಚ್ಚು ಕಾಲಂಗಳನ್ನು ಸೇರಿಸಲು comma ಗಳು (ಅಲ್ಪವಿರಾಮ ಚಿಹ್ನೆ) ಸಹಾಯ ಮಾಡುತ್ತವೆ. |
02:05 | ಏರಿಕೆ ಮತ್ತು ಇಳಿಕೆ ಕ್ರಮವನ್ನು ಸೂಚಿಸಲು, ಪ್ರತಿಯೊಂದು ಕಾಲಂ ಹೆಸರಿನ ಪಕ್ಕದಲ್ಲಿ ನಾವು 'A S C' ಅಥವಾ 'D E S C' ಎಂದು ಟೈಪ್ ಮಾಡಿದರೆ ಆಯಿತು. |
02:19 | ಈಗ, ಫೈಲ್ ಮೆನು-ಬಾರ್ ಕೆಳಗೆ ಇರುವ Run Query ಐಕಾನ್ ಮೇಲೆ ನಾವು ಕ್ಲಿಕ್ ಮಾಡೋಣ. |
02:26 | Publisher ಮತ್ತು ನಂತರ Book title ಮೂಲಕ ವರ್ಗೀಕರಿಸಿದ ಪುಸ್ತಕಗಳು ಇಲ್ಲಿವೆ. |
02:34 | ನಾವೀಗ ಮುಂದಿನ ಕ್ವೆರಿಗೆ ಸಾಗೋಣ. |
02:38 | ಸದಸ್ಯರು ಇನ್ನೂ ಹಿಂದಿರುಗಿಸದ ಪುಸ್ತಕಗಳ ಶೀರ್ಷಿಕೆಗಳ ಪಟ್ಟಿಯನ್ನು, ಆ ಪುಸ್ತಕಗಳನ್ನು ಇಸ್ಯೂ ಮಾಡಿದ (ಕೊಟ್ಟ) ದಿನಾಂಕಗಳೊಂದಿಗೆ ಪಡೆಯೋಣ. |
02:48 | Title ಗಳು Books ಟೇಬಲ್ ನಲ್ಲಿ ಮತ್ತು Book Issue date, BooksIssued ಟೇಬಲ್ ನಲ್ಲಿ ಇರುವುದರಿಂದ, |
02:55 | ನಾವು ಇವೆರಡನ್ನು ಹೇಗಾದರೂ ಮಾಡಿ ಸೇರಿಸಬೇಕು. |
03:00 | ಹೀಗಾಗಿ, ಈ ಎರಡು ಟೇಬಲ್ ಗಳನ್ನು ಸೇರಿಸಲು JOIN ಕೀವರ್ಡ್ ಅನ್ನು ಬಳಸುವೆವು. |
03:07 | ಈ ಎರಡೂ ಟೇಬಲ್ ಗಳಲ್ಲಿ ಇರುವ BookId ಕಾಲಂ ಅನ್ನು, ಟೇಬಲ್ ಗಳನ್ನು ಲಿಂಕ್ ಮಾಡಲು ಬಳಸುವೆವು. |
03:14 | ನಮ್ಮ ಕ್ವೆರಿ ಇಲ್ಲಿದೆ: |
03:17 | SELECT B.title comma I.IssueDate comma I.Memberid FROM Books B JOIN BooksIssued I |
03:35 | ON B.bookid is equal to I.BookId WHERE CheckedIn is equal to FALSE |
03:48 | FROM ಕ್ಲಾಜ್ ನಲ್ಲಿರುವ 'B' ಮತ್ತು 'I' ಅಕ್ಷರಗಳನ್ನು ಗಮನಿಸಿ. |
03:55 | ಇವುಗಳನ್ನು ಏಲಿಯಸ್ ಗಳೆನ್ನುತ್ತಾರೆ. ಇವು ವಿವರಣಾತ್ಮಕ ಅಥವಾ ಸುಲಭವಾಗಿ ಓದುವುದಕ್ಕಾಗಿ ಕೇವಲ ಒಂದು ಅಕ್ಷರವಷ್ಟೇ ಆಗಿರಬಹುದು. |
04:06 | BookId ಕಾಲಂ ಎರಡೂ ಟೇಬಲ್ ಗಳಲ್ಲಿ ಇರುವುದನ್ನು ಗಮನಿಸಿ. |
04:11 | ಹೀಗೆ, ಗೊಂದಲವಾಗದಂತೆ ಕಾಲಂ ಹೆಸರುಗಳನ್ನು ಸೂಚಿಸಲು ನಾವು ಏಲಿಯಸ್ ಗಳನ್ನು ಬಳಸುತ್ತೇವೆ. |
04:21 | ಗಮನಿಸಿ, FROM ಕ್ಲಾಸ್ ನಲ್ಲಿ JOIN ಕೀವರ್ಡ್ ಬಳಸಿ, ಎರಡು ಟೇಬಲ್ ಗಳನ್ನು ಸೇರಿಸಿದ್ದೇವೆ. |
04:31 | ಮತ್ತು, ಹೀಗೆ ಸೇರಿಸಲು ON B.bookid is equal to I.BookId ಎಂದು ಬರೆದು, BookId ಕಾಲಂ ಅನ್ನು ನಾವು ಸೂಚಿಸಿದ್ದೇವೆ. |
04:46 | ಸರಿ, ಈಗ ನಮ್ಮ ಕ್ವೆರಿಯನ್ನು ರನ್ ಮಾಡೋಣ. |
04:49 | ನಾವು ಪುಸ್ತಕಗಳ ಒಂದು ಪಟ್ಟಿಯನ್ನು ಹಾಗೂ ಅವುಗಳನ್ನು ಕೊಟ್ಟಿರುವ ದಿನಾಂಕವನ್ನು ನೋಡುತ್ತೇವೆ. ಅಲ್ಲದೆ, CheckedIn ಸ್ಥಾನದಲ್ಲಿ ಚೆಕ್- ಇನ್ ಆಗಿಲ್ಲ ಎಂದು ಗಮನಿಸಿ. |
04:59 | ಫಲಿತಾಂಶದಲ್ಲಿ ನಮಗೆ MemberId ಮಾತ್ರ ಕಾಣುತ್ತಿದೆ. ಇದು ಅಷ್ಟೊಂದು ಉಪಯುಕ್ತವಲ್ಲ.. ಅಲ್ಲವೇ? |
05:08 | ಇಲ್ಲಿ ‘Members’ ಟೇಬಲ್ ನಲ್ಲಿರುವ ಸದಸ್ಯರ ಹೆಸರನ್ನು ನಾವು ಹೇಗೆ ತೋರಿಸಬಹುದು? |
05:15 | ಇದು ತುಂಬಾ ಸರಳ. ನಮ್ಮ ಕ್ವೆರಿಗೆ Members ಟೇಬಲ್ ಅನ್ನು ಹೀಗೆ JOIN ಮಾಡಬಹುದು: |
05:21 | SELECT B.Title comma I.IssueDate comma I.MemberId comma M.Name FROM Books B |
05:37 | JOIN BooksIssued I ON B.BookId is equal to I.BookId JOIN Members M ON I.MemberId is equal to M.MemberId |
05:58 | WHERE CheckedIn is equal to FALSE |
06:02 | ಇಲ್ಲಿ, Members ಟೇಬಲ್ ನ ಜೊತೆಗೆ ಎರಡನೇ ಸೇರ್ಪಡೆಯನ್ನು ಗಮನಿಸಿ. ಅವುಗಳನ್ನು ಸೇರಿಸಲು MemberId ಕಾಲಂ ಅನ್ನು ಬಳಸಲಾಗಿದೆ. |
06:12 | ನಾವೀಗ ಕ್ವೆರಿಯನ್ನು ರನ್ ಮಾಡೋಣ. |
06:14 | ಇಲ್ಲಿ, ಸದಸ್ಯರ ಹೆಸರು ಮತ್ತು ಅವರಿಗೆ ಕೊಡಲಾದ ಪುಸ್ತಕಗಳೊಂದಿಗೆ ಕಾಣಿಸಿಕೊಳ್ಳುತ್ತದೆ. |
06:20 | ನಂತರ ನಾವು ಅಗ್ರಿಗೇಟ್ ಗಳು ಮತ್ತು ಗ್ರೂಪಿಂಗ್ ಕುರಿತು ಕಲಿಯೋಣ. |
06:26 | ಲೈಬ್ರರಿಯ ಎಲ್ಲಾ ಸದಸ್ಯರ ಸಂಖ್ಯೆಯನ್ನು ನಾವು ಹೇಗೆ ಪಡೆಯಬಹುದು? |
06:31 | ಇದಕ್ಕಾಗಿ ಕ್ವೆರಿ ಇಲ್ಲಿದೆ: |
06:34 | SELECT COUNT in brackets asterisk AS in double quotes Total Members FROM Members |
06:47 | ಹೀಗೆ, ಇಲ್ಲಿ COUNT ಅನ್ನು ಗಮನಿಸಿ. |
06:51 | ಇದನ್ನು ಅಗ್ರಿಗೇಟ್ ಫಂಕ್ಷನ್ ಎನ್ನುತ್ತೇವೆ. ಏಕೆಂದರೆ, ಇದು ಹಲವು ರೆಕಾರ್ಡ್ ಗಳ ಮೌಲ್ಯಮಾಪನ ಮಾಡಿ ಒಂದು ವ್ಯಾಲ್ಯೂವನ್ನು ಮಾತ್ರ ಹಿಂದಿರುಗಿಸುತ್ತದೆ. |
07:02 | ನಾವು ‘Total Members’ ಎಂಬ ಒಂದು ಏಲಿಯಸ್ ಅನ್ನು ಸಹ ಸೇರಿಸಿದ್ದೇವೆ. |
07:07 | ಈ ಕ್ವೆರಿಯನ್ನು ರನ್ ಮಾಡೋಣ. |
07:10 | ಇಲ್ಲಿ ಬೇಸ್, 4 ಸದಸ್ಯರ ರೆಕಾರ್ಡ್ ಗಳ ಮೌಲ್ಯಮಾಪನ ಮಾಡಿದೆ ಮತ್ತು ಸದಸ್ಯರ ಒಟ್ಟು ಸಂಖ್ಯೆಯಾದ 4 ಅನ್ನು ತೋರಿಸಿದೆ. |
07:22 | SUM, MAX ಮತ್ತು MIN ,ಅಗ್ರಿಗೇಟ್ ಫಂಕ್ಷನ್ಗಳ ಇನ್ನೂ ಕೆಲವು ಉದಾಹರಣೆಗಳಾಗಿವೆ. |
07:30 | ಈಗ ಗ್ರೂಪಿಂಗ್ ಮಾಹಿತಿಯ ಕುರಿತು ತಿಳಿದುಕೊಳ್ಳೋಣ. |
07:36 | ಪ್ರತಿಯೊಬ್ಬ publisher ಗಾಗಿ (ಪ್ರಕಾಶಕ) ಪುಸ್ತಕಗಳ ಸಂಖ್ಯೆಯನ್ನು ನಾವು ಹೇಗೆ ಪಡೆಯಬಹುದು? |
07:40 | ಇದಕ್ಕಾಗಿ ಕ್ವೆರಿ ಇಲ್ಲಿದೆ: |
07:43 | SELECT Publisher comma COUNT in single brackets asterisk AS in double quotes Number of Books FROM Books
GROUP BY Publisher ORDER BY Publisher |
08:03 | ಇಲ್ಲಿ, ಹೊಸ GROUP BY ಕ್ಲಾಜ್ ಅನ್ನು ಗಮನಿಸಿ. |
08:06 | ಹೀಗೆ, ನಾವು Publisher ಮತ್ತು number of books ಅನ್ನು ಆಯ್ಕೆಮಾಡಿ, ಪ್ರತಿಯೊಬ್ಬ Publisher ನ ರೆಕಾರ್ಡ್ ಗಳನ್ನು ಒಗ್ಗೂಡಿಸಲು, GROUP BY ಕ್ಲಾಜ್ ಬಳಸುತ್ತೇವೆ. |
08:18 | ಈ ಕ್ವೆರಿಯನ್ನು ರನ್ ಮಾಡೋಣ. |
08:21 | ಪ್ರತಿಯೊಬ್ಬ ಪಬ್ಲಿಷರ್ ಹೆಸರು ಮತ್ತು ಅದರ ಪಕ್ಕದಲ್ಲಿ ಪುಸ್ತಕಗಳ ಸಂಖ್ಯೆ ಇರುವುದನ್ನು ಗಮನಿಸಿ. |
08:33 | ನಂತರ ನಾವು, SQL ನಲ್ಲಿ ಫಂಕ್ಷನ್ ಗಳನ್ನು ಬಳಸುವ ಕುರಿತು ಕಲಿಯೋಣ. |
08:38 | ಫಂಕ್ಷನ್ ಗಳು, ಒಂದೇ ವ್ಯಾಲ್ಯೂವನ್ನು ಹಿಂದಿರುಗಿಸುವ ಸ್ಟೇಟ್ಮೆಂಟ್ ಗಳಾಗಿವೆ. |
08:43 | ಉದಾಹರಣೆಗೆ, CURRENT_DATE ಇಂದಿನ ದಿನಾಂಕವನ್ನು ತೋರಿಸುತ್ತದೆ. |
08:49 | ಈಗ ನಾವು ಸದಸ್ಯರು ಹಿಂದಿರುಗಿಸಬೇಕಾದ ಪುಸ್ತಕಗಳ ಶೀರ್ಷಿಕೆಗಳನ್ನು ಪಟ್ಟಿ ಮಾಡೋಣ. |
08:56 | ಇದಕ್ಕಾಗಿ ನಮ್ಮ ಕ್ವೆರಿಯು ಹೀಗಿದೆ: |
08:58 | SELECT B.Title comma I.IssueDate comma I.ReturnDate |
09:08 | FROM Books B JOIN BooksIssued I ON B.bookid is equal to I.BookId |
09:21 | WHERE CheckedIn is equal to FALSE and ReturnDate less than CURRENT_DATE |
09:31 | ಇಲ್ಲಿ, CURRENT_DATE ಫಂಕ್ಷನ್ ನ ಬಳಕೆಯನ್ನು ಗಮನಿಸಿ. |
09:36 | ಇಂದಿನ ದಿನಾಂಕದ ಮೊದಲು ರಿಟರ್ನ್-ಡೇಟ್ ಇರುವ ಪುಸ್ತಕಗಳನ್ನು ನಾವು ಪಡೆದುಕೊಳ್ಳುತ್ತಿದ್ದೇವೆ. |
09:43 | ಈ ಕ್ವೆರಿಯನ್ನು ರನ್ ಮಾಡೋಣ. |
09:45 | ಹಾಗೂ, ಹಿಂದಿರುಗಿಸಬೇಕಾದ ಪುಸ್ತಕಗಳು ಇಲ್ಲಿವೆ. |
09:51 | HSQLdb ಕೊಡುವ ಫಂಕ್ಷನ್ ಗಳ ಪಟ್ಟಿಯನ್ನು ನೋಡಲು ಈ ಲಿಂಕ್ ಗೆ ಭೇಟಿ ನೀಡಿ: |
10:23 | ಈ ವೆಬ್ಸೈಟ್ ನಲ್ಲಿ ಇಡೀ ಯೂಸರ್-ಗೈಡ್ ಅನ್ನು ಪಡೆಯಬಹುದು: |
10:29 | http://www.hsqldb.org/doc/2.0/guide/ |
10:48 | ಇಲ್ಲೊಂದು ಅಸೈನ್ಮೆಂಟ್ ಇದೆ: |
10:50 | ಈ ಕೆಳಗಿನವುಗಳಿಗಾಗಿ, ನಿಮ್ಮ SQL ಕ್ವೆರಿಗಳನ್ನು ಬರೆದು ಪರೀಕ್ಷಿಸಿ: |
10:55 | 1. ಲೈಬ್ರರಿಯಲ್ಲಿರುವ ಎಲ್ಲಾ ಪುಸ್ತಕಗಳ ಒಟ್ಟು ಸಂಖ್ಯೆಯನ್ನು ಪಡೆಯಿರಿ. |
10:58 | 2. ಪ್ರತಿಯೊಬ್ಬ ಲೇಖಕನು ಬರೆದಿರುವ ಪುಸ್ತಕಗಳ ಒಟ್ಟು ಸಂಖ್ಯೆಯನ್ನು ಪಡೆಯಿರಿ. |
11:03 | 3. ಇಂದು ಪುಸ್ತಕವನ್ನು ಹಿಂದಿರುಗಿಸಬೇಕಾದ ಸದಸ್ಯರ ಹೆಸರುಗಳು ಮತ್ತು ಅವರ ಫೋನ್ ನಂಬರ್ ನ ಪಟ್ಟಿಯನ್ನು ಪಡೆಯಿರಿ. |
11:11 | 4. ಈ ಕ್ವೆರಿಯು ಏನು ಮಾಡುತ್ತದೆ ಎನ್ನುವುದನ್ನು ವಿವರಿಸಿ.
SELECT in brackets price AS in double quotes Total Cost of Cambridge Books |
11:24 | FROM Books WHERE publisher is equal to in single quotes Cambridge |
11:32 | ಇಲ್ಲಿಗೆ ನಾವು, ‘ಲಿಬರ್ ಆಫಿಸ್ ಬೇಸ್’ ನ ಈ ಟ್ಯುಟೋರಿಯಲ್ ನ ಕೊನೆಗೆ ಬಂದಿದ್ದೇವೆ. |
11:40 | ಸಂಕ್ಷಿಪ್ತವಾಗಿ ನಾವು: |
11:43 | SQL View ನಲ್ಲಿ ಕ್ವೆರಿಗಳನ್ನು ರಚಿಸಲು, |
11:47 | ORDER BY ಕ್ಲಾಸ್ ಬಳಸಲು, |
11:49 | JOINS, |
11:51 | ಅಗ್ರಿಗೇಟ್ ಫಂಕ್ಷನ್ ಗಳು, |
11:54 | GROUP BY ಕ್ಲಾಸ್, |
11:57 | ಮತ್ತು ಬಿಲ್ಟ್-ಇನ್ ಫಂಕ್ಷನ್ ಗಳನ್ನು ಬಳಸಲು ಕಲಿತೆವು. |
12:00 | ‘ಸ್ಪೋಕನ್ ಟ್ಯುಟೋರಿಯಲ್’ ಪ್ರೊಜೆಕ್ಟ್, ರಾಷ್ಟ್ರೀಯ ಸಾಕ್ಷರತಾ ಮಿಷನ್, ICT, MHRD ಮೂಲಕ, ಭಾರತ ಸರ್ಕಾರದ ನೆರವು ಪಡೆದಿದೆ. ಈ ಪ್ರೊಜೆಕ್ಟ್ ಅನ್ನು ಸಂಯೋಜಿಸಿದವರು:
http://spoken-tutorial.org. ಕೆಳಗಿನ ಲಿಂಕ್ ನಲ್ಲಿ ಈ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಿದೆ. |
12:21 | ಈ ಸ್ಕ್ರಿಪ್ಟ್ ನ ಅನುವಾದಕರು ಮಂಗಳೂರಿನಿಂದ ಮೆಲ್ವಿನ್, ಮತ್ತು ಧ್ವನಿ ಶ್ರೀ ನವೀನ್ ಭಟ್, ಉಪ್ಪಿನಪಟ್ಟಣ.
ಧನ್ಯವಾದಗಳು. |