LibreOffice-Suite-Base/C3/Create-simple-queries-in-SQL-View-II/Kannada

From Script | Spoken-Tutorial
Jump to: navigation, search
Time Narration


00:02 ‘ಲಿಬರ್ ಆಫಿಸ್ ಬೇಸ್’ ನ ಸ್ಪೋಕನ್ ಟ್ಯುಟೋರಿಯಲ್ ಗೆ ಸ್ವಾಗತ.
00:06 ಈ ಟ್ಯುಟೋರಿಯಲ್‌ ನಲ್ಲಿ ನಾವು:
00:10 SQL View ನಲ್ಲಿ ಕ್ವೆರಿಗಳನ್ನು ಬರೆಯಲು,
00:13 ORDER BY ಕ್ಲಾಜ್ (clause),
00:15 JOINS,
00:17 ಅಗ್ರಿಗೇಟ್‌ ಫಂಕ್ಷನ್‌ ಗಳು,
00:19 GROUP BY ಕ್ಲಾಜ್,
00:21 ಮತ್ತು ಬಿಲ್ಟ್‌-ಇನ್‌ ಫಂಕ್ಷನ್‌ ಇವುಗಳನ್ನು ಬಳಸಲು ಕಲಿಯುವೆವು.
00:26 SQL ಕ್ವೆರಿಗಳನ್ನು ಬರೆಯುವ ಕುರಿತು ನಾವು ಇನ್ನಷ್ಟು ಕಲಿಯೋಣ.
00:31 ಇದಕ್ಕಾಗಿ, ನಮ್ಮ ಪರಿಚಿತ Library ಡೇಟಾಬೇಸ್‌ ಅನ್ನು ತೆರೆಯೋಣ.
00:36 ಈಗ, ಎಡ ಪ್ಯಾನಲ್‌ ನಲ್ಲಿರುವ Queries ಪಟ್ಟಿಯ ಮೇಲೆ, ನಂತರ
00:42 ‘Create Query in SQL View’ ಮೇಲೆ ಕ್ಲಿಕ್‌ ಮಾಡೋಣ.
00:49 ಮೊದಲಿಗೆ, ಕ್ವೆರಿಯಲ್ಲಿ ಫಲಿತಾಂಶಗಳನ್ನು ಹೇಗೆ ಸಾರ್ಟ್ (sort) ಮಾಡಬಹುದೆಂದು ನೋಡೋಣ.
00:55 ನಾವು ಈ ಕೆಳಗಿನ ಉದಾಹರಣೆಯನ್ನು ನೋಡೋಣ:
00:59 ಕ್ಯಾಂಬ್ರಿಜ್‌ ಅಥವಾ ಆಕ್ಸ್‌ಫರ್ಡ್‌ ನಿಂದ ಪ್ರಕಟಿಸಲಾದ ಎಲ್ಲಾ ಪುಸ್ತಕಗಳಿಗಾಗಿ, Book titles ಮತ್ತು ಲೇಖಕರ ಮಾಹಿತಿಯನ್ನು ಪಡೆಯುವೆವು.
01:09 ಅವುಗಳನ್ನು publisher ಮತ್ತು ಆನಂತರ Book titles ಪ್ರಕಾರ ಏರಿಕೆ ಕ್ರಮದಲ್ಲಿ ವರ್ಗೀಕರಿಸುವೆವು.
01:19 ಇದಕ್ಕಾಗಿ ಕ್ವೆರಿ ಇಲ್ಲಿದೆ ನೋಡಿ:
01:22 SELECT Publisher comma Title comma Author
01:28 FROM Books
01:31 WHERE Publisher IN open brackets in single quotes Cambridge comma in single quotes Oxford close brackets
01:42 ORDER BY Publisher ASC comma Title ASC
01:50 ಹೀಗೆ, ಕಾಲಂ ಹೆಸರುಗಳಿಂದ ಸಾರ್ಟ್ ಮಾಡುವುದನ್ನು ಸೂಚಿಸಲು, ORDER BY ಕ್ಲಾಜ್ ಅನ್ನು ಬಳಸಿದ್ದೇವೆ.
01:58 ಗಮನಿಸಿ, ವರ್ಗೀಕರಣಕ್ಕಾಗಿ ಹೆಚ್ಚು ಕಾಲಂಗಳನ್ನು ಸೇರಿಸಲು comma ಗಳು (ಅಲ್ಪವಿರಾಮ ಚಿಹ್ನೆ) ಸಹಾಯ ಮಾಡುತ್ತವೆ.
02:05 ಏರಿಕೆ ಮತ್ತು ಇಳಿಕೆ ಕ್ರಮವನ್ನು ಸೂಚಿಸಲು, ಪ್ರತಿಯೊಂದು ಕಾಲಂ ಹೆಸರಿನ ಪಕ್ಕದಲ್ಲಿ ನಾವು 'A S C' ಅಥವಾ 'D E S C' ಎಂದು ಟೈಪ್‌ ಮಾಡಿದರೆ ಆಯಿತು.
02:19 ಈಗ, ಫೈಲ್‌ ಮೆನು-ಬಾರ್‌ ಕೆಳಗೆ ಇರುವ Run Query ಐಕಾನ್‌ ಮೇಲೆ ನಾವು ಕ್ಲಿಕ್‌ ಮಾಡೋಣ.
02:26 Publisher ಮತ್ತು ನಂತರ Book title ಮೂಲಕ ವರ್ಗೀಕರಿಸಿದ ಪುಸ್ತಕಗಳು ಇಲ್ಲಿವೆ.
02:34 ನಾವೀಗ ಮುಂದಿನ ಕ್ವೆರಿಗೆ ಸಾಗೋಣ.
02:38 ಸದಸ್ಯರು ಇನ್ನೂ ಹಿಂದಿರುಗಿಸದ ಪುಸ್ತಕಗಳ ಶೀರ್ಷಿಕೆಗಳ ಪಟ್ಟಿಯನ್ನು, ಆ ಪುಸ್ತಕಗಳನ್ನು ಇಸ್ಯೂ ಮಾಡಿದ (ಕೊಟ್ಟ) ದಿನಾಂಕಗಳೊಂದಿಗೆ ಪಡೆಯೋಣ.
02:48 Title ಗಳು Books ಟೇಬಲ್‌ ನಲ್ಲಿ ಮತ್ತು Book Issue date, BooksIssued ಟೇಬಲ್‌ ನಲ್ಲಿ ಇರುವುದರಿಂದ,
02:55 ನಾವು ಇವೆರಡನ್ನು ಹೇಗಾದರೂ ಮಾಡಿ ಸೇರಿಸಬೇಕು.
03:00 ಹೀಗಾಗಿ, ಈ ಎರಡು ಟೇಬಲ್‌ ಗಳನ್ನು ಸೇರಿಸಲು JOIN ಕೀವರ್ಡ್‌ ಅನ್ನು ಬಳಸುವೆವು.
03:07 ಈ ಎರಡೂ ಟೇಬಲ್‌ ಗಳಲ್ಲಿ ಇರುವ BookId ಕಾಲಂ ಅನ್ನು, ಟೇಬಲ್ ಗಳನ್ನು ಲಿಂಕ್ ಮಾಡಲು ಬಳಸುವೆವು.
03:14 ನಮ್ಮ ಕ್ವೆರಿ ಇಲ್ಲಿದೆ:
03:17 SELECT B.title comma I.IssueDate comma I.Memberid FROM Books B JOIN BooksIssued I
03:35 ON B.bookid is equal to I.BookId WHERE CheckedIn is equal to FALSE
03:48 FROM ಕ್ಲಾಜ್ ನಲ್ಲಿರುವ 'B' ಮತ್ತು 'I' ಅಕ್ಷರಗಳನ್ನು ಗಮನಿಸಿ.
03:55 ಇವುಗಳನ್ನು ಏಲಿಯಸ್ ಗಳೆನ್ನುತ್ತಾರೆ. ಇವು ವಿವರಣಾತ್ಮಕ ಅಥವಾ ಸುಲಭವಾಗಿ ಓದುವುದಕ್ಕಾಗಿ ಕೇವಲ ಒಂದು ಅಕ್ಷರವಷ್ಟೇ ಆಗಿರಬಹುದು.
04:06 BookId ಕಾಲಂ ಎರಡೂ ಟೇಬಲ್‌ ಗಳಲ್ಲಿ ಇರುವುದನ್ನು ಗಮನಿಸಿ.
04:11 ಹೀಗೆ, ಗೊಂದಲವಾಗದಂತೆ ಕಾಲಂ ಹೆಸರುಗಳನ್ನು ಸೂಚಿಸಲು ನಾವು ಏಲಿಯಸ್‌ ಗಳನ್ನು ಬಳಸುತ್ತೇವೆ.
04:21 ಗಮನಿಸಿ, FROM ಕ್ಲಾಸ್‌ ನಲ್ಲಿ JOIN ಕೀವರ್ಡ್‌ ಬಳಸಿ, ಎರಡು ಟೇಬಲ್‌ ಗಳನ್ನು ಸೇರಿಸಿದ್ದೇವೆ.
04:31 ಮತ್ತು, ಹೀಗೆ ಸೇರಿಸಲು ON B.bookid is equal to I.BookId ಎಂದು ಬರೆದು, BookId ಕಾಲಂ ಅನ್ನು ನಾವು ಸೂಚಿಸಿದ್ದೇವೆ.
04:46 ಸರಿ, ಈಗ ನಮ್ಮ ಕ್ವೆರಿಯನ್ನು ರನ್‌ ಮಾಡೋಣ.
04:49 ನಾವು ಪುಸ್ತಕಗಳ ಒಂದು ಪಟ್ಟಿಯನ್ನು ಹಾಗೂ ಅವುಗಳನ್ನು ಕೊಟ್ಟಿರುವ ದಿನಾಂಕವನ್ನು ನೋಡುತ್ತೇವೆ. ಅಲ್ಲದೆ, CheckedIn ಸ್ಥಾನದಲ್ಲಿ ಚೆಕ್- ಇನ್‌ ಆಗಿಲ್ಲ ಎಂದು ಗಮನಿಸಿ.
04:59 ಫಲಿತಾಂಶದಲ್ಲಿ ನಮಗೆ MemberId ಮಾತ್ರ ಕಾಣುತ್ತಿದೆ. ಇದು ಅಷ್ಟೊಂದು ಉಪಯುಕ್ತವಲ್ಲ.. ಅಲ್ಲವೇ?
05:08 ಇಲ್ಲಿ ‘Members’ ಟೇಬಲ್‌ ನಲ್ಲಿರುವ ಸದಸ್ಯರ ಹೆಸರನ್ನು ನಾವು ಹೇಗೆ ತೋರಿಸಬಹುದು?
05:15 ಇದು ತುಂಬಾ ಸರಳ. ನಮ್ಮ ಕ್ವೆರಿಗೆ Members ಟೇಬಲ್‌ ಅನ್ನು ಹೀಗೆ JOIN ಮಾಡಬಹುದು:
05:21 SELECT B.Title comma I.IssueDate comma I.MemberId comma M.Name FROM Books B
05:37 JOIN BooksIssued I ON B.BookId is equal to I.BookId JOIN Members M ON I.MemberId is equal to M.MemberId
05:58 WHERE CheckedIn is equal to FALSE
06:02 ಇಲ್ಲಿ, Members ಟೇಬಲ್‌ ನ ಜೊತೆಗೆ ಎರಡನೇ ಸೇರ್ಪಡೆಯನ್ನು ಗಮನಿಸಿ. ಅವುಗಳನ್ನು ಸೇರಿಸಲು MemberId ಕಾಲಂ ಅನ್ನು ಬಳಸಲಾಗಿದೆ.
06:12 ನಾವೀಗ ಕ್ವೆರಿಯನ್ನು ರನ್‌ ಮಾಡೋಣ.
06:14 ಇಲ್ಲಿ, ಸದಸ್ಯರ ಹೆಸರು ಮತ್ತು ಅವರಿಗೆ ಕೊಡಲಾದ ಪುಸ್ತಕಗಳೊಂದಿಗೆ ಕಾಣಿಸಿಕೊಳ್ಳುತ್ತದೆ.
06:20 ನಂತರ ನಾವು ಅಗ್ರಿಗೇಟ್‌ ಗಳು ಮತ್ತು ಗ್ರೂಪಿಂಗ್‌ ಕುರಿತು ಕಲಿಯೋಣ.
06:26 ಲೈಬ್ರರಿಯ ಎಲ್ಲಾ ಸದಸ್ಯರ ಸಂಖ್ಯೆಯನ್ನು ನಾವು ಹೇಗೆ ಪಡೆಯಬಹುದು?
06:31 ಇದಕ್ಕಾಗಿ ಕ್ವೆರಿ ಇಲ್ಲಿದೆ:
06:34 SELECT COUNT in brackets asterisk AS in double quotes Total Members FROM Members
06:47 ಹೀಗೆ, ಇಲ್ಲಿ COUNT ಅನ್ನು ಗಮನಿಸಿ.
06:51 ಇದನ್ನು ಅಗ್ರಿಗೇಟ್‌ ಫಂಕ್ಷನ್‌ ಎನ್ನುತ್ತೇವೆ. ಏಕೆಂದರೆ, ಇದು ಹಲವು ರೆಕಾರ್ಡ್‌ ಗಳ ಮೌಲ್ಯಮಾಪನ ಮಾಡಿ ಒಂದು ವ್ಯಾಲ್ಯೂವನ್ನು ಮಾತ್ರ ಹಿಂದಿರುಗಿಸುತ್ತದೆ.
07:02 ನಾವು ‘Total Members’ ಎಂಬ ಒಂದು ಏಲಿಯಸ್‌ ಅನ್ನು ಸಹ ಸೇರಿಸಿದ್ದೇವೆ.
07:07 ಈ ಕ್ವೆರಿಯನ್ನು ರನ್‌ ಮಾಡೋಣ.
07:10 ಇಲ್ಲಿ ಬೇಸ್‌, 4 ಸದಸ್ಯರ ರೆಕಾರ್ಡ್‌ ಗಳ ಮೌಲ್ಯಮಾಪನ ಮಾಡಿದೆ ಮತ್ತು ಸದಸ್ಯರ ಒಟ್ಟು ಸಂಖ್ಯೆಯಾದ 4 ಅನ್ನು ತೋರಿಸಿದೆ.
07:22 SUM, MAX ಮತ್ತು MIN ,ಅಗ್ರಿಗೇಟ್‌ ಫಂಕ್ಷನ್‌ಗಳ ಇನ್ನೂ ಕೆಲವು ಉದಾಹರಣೆಗಳಾಗಿವೆ.
07:30 ಈಗ ಗ್ರೂಪಿಂಗ್‌ ಮಾಹಿತಿಯ ಕುರಿತು ತಿಳಿದುಕೊಳ್ಳೋಣ.
07:36 ಪ್ರತಿಯೊಬ್ಬ publisher ಗಾಗಿ (ಪ್ರಕಾಶಕ) ಪುಸ್ತಕಗಳ ಸಂಖ್ಯೆಯನ್ನು ನಾವು ಹೇಗೆ ಪಡೆಯಬಹುದು?
07:40 ಇದಕ್ಕಾಗಿ ಕ್ವೆರಿ ಇಲ್ಲಿದೆ:
07:43 SELECT Publisher comma COUNT in single brackets asterisk AS in double quotes Number of Books FROM Books

GROUP BY Publisher ORDER BY Publisher

08:03 ಇಲ್ಲಿ, ಹೊಸ GROUP BY ಕ್ಲಾಜ್ ಅನ್ನು ಗಮನಿಸಿ.
08:06 ಹೀಗೆ, ನಾವು Publisher ಮತ್ತು number of books ಅನ್ನು ಆಯ್ಕೆಮಾಡಿ, ಪ್ರತಿಯೊಬ್ಬ Publisher ನ ರೆಕಾರ್ಡ್ ಗಳನ್ನು ಒಗ್ಗೂಡಿಸಲು, GROUP BY ಕ್ಲಾಜ್ ಬಳಸುತ್ತೇವೆ.
08:18 ಈ ಕ್ವೆರಿಯನ್ನು ರನ್‌ ಮಾಡೋಣ.
08:21 ಪ್ರತಿಯೊಬ್ಬ ಪಬ್ಲಿಷರ್ ಹೆಸರು ಮತ್ತು ಅದರ ಪಕ್ಕದಲ್ಲಿ ಪುಸ್ತಕಗಳ ಸಂಖ್ಯೆ ಇರುವುದನ್ನು ಗಮನಿಸಿ.
08:33 ನಂತರ ನಾವು, SQL ನಲ್ಲಿ ಫಂಕ್ಷನ್‌ ಗಳನ್ನು ಬಳಸುವ ಕುರಿತು ಕಲಿಯೋಣ.
08:38 ಫಂಕ್ಷನ್‌ ಗಳು, ಒಂದೇ ವ್ಯಾಲ್ಯೂವನ್ನು ಹಿಂದಿರುಗಿಸುವ ಸ್ಟೇಟ್ಮೆಂಟ್ ಗಳಾಗಿವೆ.
08:43 ಉದಾಹರಣೆಗೆ, CURRENT_DATE ಇಂದಿನ ದಿನಾಂಕವನ್ನು ತೋರಿಸುತ್ತದೆ.
08:49 ಈಗ ನಾವು ಸದಸ್ಯರು ಹಿಂದಿರುಗಿಸಬೇಕಾದ ಪುಸ್ತಕಗಳ ಶೀರ್ಷಿಕೆಗಳನ್ನು ಪಟ್ಟಿ ಮಾಡೋಣ.
08:56 ಇದಕ್ಕಾಗಿ ನಮ್ಮ ಕ್ವೆರಿಯು ಹೀಗಿದೆ:
08:58 SELECT B.Title comma I.IssueDate comma I.ReturnDate
09:08 FROM Books B JOIN BooksIssued I ON B.bookid is equal to I.BookId
09:21 WHERE CheckedIn is equal to FALSE and ReturnDate less than CURRENT_DATE
09:31 ಇಲ್ಲಿ, CURRENT_DATE ಫಂಕ್ಷನ್‌ ನ ಬಳಕೆಯನ್ನು ಗಮನಿಸಿ.
09:36 ಇಂದಿನ ದಿನಾಂಕದ ಮೊದಲು ರಿಟರ್ನ್‌-ಡೇಟ್‌ ಇರುವ ಪುಸ್ತಕಗಳನ್ನು ನಾವು ಪಡೆದುಕೊಳ್ಳುತ್ತಿದ್ದೇವೆ.
09:43 ಈ ಕ್ವೆರಿಯನ್ನು ರನ್‌ ಮಾಡೋಣ.
09:45 ಹಾಗೂ, ಹಿಂದಿರುಗಿಸಬೇಕಾದ ಪುಸ್ತಕಗಳು ಇಲ್ಲಿವೆ.
09:51 HSQLdb ಕೊಡುವ ಫಂಕ್ಷನ್‌ ಗಳ ಪಟ್ಟಿಯನ್ನು ನೋಡಲು ಈ ಲಿಂಕ್ ಗೆ ಭೇಟಿ ನೀಡಿ:

http://hsqldb.org/doc/2.0/guide/builtinfunctions-chapt.html

10:23 ಈ ವೆಬ್‌ಸೈಟ್‌ ನಲ್ಲಿ ಇಡೀ ಯೂಸರ್-ಗೈಡ್ ಅನ್ನು ಪಡೆಯಬಹುದು:
10:29 http://www.hsqldb.org/doc/2.0/guide/
10:48 ಇಲ್ಲೊಂದು ಅಸೈನ್‌ಮೆಂಟ್‌ ಇದೆ:
10:50 ಈ ಕೆಳಗಿನವುಗಳಿಗಾಗಿ, ನಿಮ್ಮ SQL ಕ್ವೆರಿಗಳನ್ನು ಬರೆದು ಪರೀಕ್ಷಿಸಿ:
10:55 1. ಲೈಬ್ರರಿಯಲ್ಲಿರುವ ಎಲ್ಲಾ ಪುಸ್ತಕಗಳ ಒಟ್ಟು ಸಂಖ್ಯೆಯನ್ನು ಪಡೆಯಿರಿ.
10:58 2. ಪ್ರತಿಯೊಬ್ಬ ಲೇಖಕನು ಬರೆದಿರುವ ಪುಸ್ತಕಗಳ ಒಟ್ಟು ಸಂಖ್ಯೆಯನ್ನು ಪಡೆಯಿರಿ.
11:03 3. ಇಂದು ಪುಸ್ತಕವನ್ನು ಹಿಂದಿರುಗಿಸಬೇಕಾದ ಸದಸ್ಯರ ಹೆಸರುಗಳು ಮತ್ತು ಅವರ ಫೋನ್‌ ನಂಬರ್ ನ ಪಟ್ಟಿಯನ್ನು ಪಡೆಯಿರಿ.
11:11 4. ಈ ಕ್ವೆರಿಯು ಏನು ಮಾಡುತ್ತದೆ ಎನ್ನುವುದನ್ನು ವಿವರಿಸಿ.

SELECT in brackets price AS in double quotes Total Cost of Cambridge Books

11:24 FROM Books WHERE publisher is equal to in single quotes Cambridge
11:32 ಇಲ್ಲಿಗೆ ನಾವು, ‘ಲಿಬರ್‌ ಆಫಿಸ್‌ ಬೇಸ್‌’ ನ ಈ ಟ್ಯುಟೋರಿಯಲ್‌ ನ ಕೊನೆಗೆ ಬಂದಿದ್ದೇವೆ.
11:40 ಸಂಕ್ಷಿಪ್ತವಾಗಿ ನಾವು:
11:43 SQL View ನಲ್ಲಿ ಕ್ವೆರಿಗಳನ್ನು ರಚಿಸಲು,
11:47 ORDER BY ಕ್ಲಾಸ್‌ ಬಳಸಲು,
11:49 JOINS,
11:51 ಅಗ್ರಿಗೇಟ್‌ ಫಂಕ್ಷನ್‌ ಗಳು,
11:54 GROUP BY ಕ್ಲಾಸ್‌,
11:57 ಮತ್ತು ಬಿಲ್ಟ್‌-ಇನ್‌ ಫಂಕ್ಷನ್‌ ಗಳನ್ನು ಬಳಸಲು ಕಲಿತೆವು.
12:00 ‘ಸ್ಪೋಕನ್ ಟ್ಯುಟೋರಿಯಲ್’ ಪ್ರೊಜೆಕ್ಟ್, ರಾಷ್ಟ್ರೀಯ ಸಾಕ್ಷರತಾ ಮಿಷನ್, ICT, MHRD ಮೂಲಕ, ಭಾರತ ಸರ್ಕಾರದ ನೆರವು ಪಡೆದಿದೆ. ಈ ಪ್ರೊಜೆಕ್ಟ್ ಅನ್ನು ಸಂಯೋಜಿಸಿದವರು:

http://spoken-tutorial.org. ಕೆಳಗಿನ ಲಿಂಕ್ ನಲ್ಲಿ ಈ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಿದೆ.

12:21 ಈ ಸ್ಕ್ರಿಪ್ಟ್ ನ ಅನುವಾದಕರು ಮಂಗಳೂರಿನಿಂದ ಮೆಲ್ವಿನ್, ಮತ್ತು ಧ್ವನಿ ಶ್ರೀ ನವೀನ್ ಭಟ್, ಉಪ್ಪಿನಪಟ್ಟಣ.

ಧನ್ಯವಾದಗಳು.

Contributors and Content Editors

Sandhya.np14