Java/C3/Static-Methods/Kannada

From Script | Spoken-Tutorial
Revision as of 17:10, 4 April 2020 by Sandhya.np14 (Talk | contribs)

Jump to: navigation, search
Time Narration
00:01 ಸ್ಟಾಟಿಕ್ ಮೆಥಡ್ ಗಳ ಕುರಿತ ಸ್ಪೋಕನ್ ಟ್ಯುಟೋರಿಯಲ್ ಗೆ ಸ್ವಾಗತ.
00:05 ಈ ಟ್ಯುಟೋರಿಯಲ್ ನಲ್ಲಿ ನಾವು, ಸ್ಟಾಟಿಕ್ ಮೆಥಡ್ ಗಳು ಎಂದರೇನು, ಸ್ಟಾಟಿಕ್ ಮೆಥಡ್ ಗಳನ್ನು ನಿರೂಪಿಸುವುದು,
00:12 ಇನ್ಸ್ಟೆನ್ಸ್ ಮೆಥಡ್ ಗಳು ಮತ್ತು ಸ್ಟಾಟಿಕ್ ಮೆಥಡ್ ಗಳ ನಡುವಿನ ವ್ಯತ್ಯಾಸ ಮತ್ತು ಸ್ಟಾಟಿಕ್ ಮೆಥಡ್ ಗಳನ್ನು ಹೇಗೆ ಬಳಸುವುದು ಎಂಬುದನ್ನು ಕಲಿಯಲಿದ್ದೇವೆ.
00:20 ಇಲ್ಲಿ ನಾವು ಉಬಂಟು 14.04, ಜೆ.ಡಿ.ಕೆ 1.7 ಮತ್ತು ಎಕ್ಲಿಪ್ಸ್ 4.3.1 ಬಳಸಲಿದ್ದೇವೆ.
00:31 ಈ ಟ್ಯುಟೋರಿಯಲ್ ಅನುಸರಿಸಲು ನೀವು ಜಾವಾ ಮತ್ತು ಎಕ್ಲಿಪ್ಸ್ ಐ.ಡಿ.ಇ ಯ ಮೂಲಭೂತ ಜ್ಞಾನವನ್ನು ಹೊಂದಿರಬೇಕು.
00:38 ನೀವು ಜಾವಾದಲ್ಲಿ ಇನ್ಸ್ಟೆನ್ಸ್ ವೇರಿಯೇಬಲ್ ಗಳು, ಮೆಥಡ್ ಗಳು ಮತ್ತು ಸ್ಟಾಟಿಕ್ ವೇರಿಯೇಬಲ್ ಗಳ ಜ್ಞಾನವನ್ನು ಹೊಂದಿರಬೇಕು.
00:45 ಇಲ್ಲದಿದ್ದಲ್ಲಿ, ಸಂಬಂಧಿತ ಜಾವಾ ಟ್ಯುಟೋರಿಯಲ್ ಗಳಿಗಾಗಿ ದಯವಿಟ್ಟು ಇಲ್ಲಿ ತೋರಿಸಿರುವ ಲಿಂಕ್ ಗೆ ಭೇಟಿ ನೀಡಿ.
00:50 ಸ್ಟಾಟಿಕ್ ಮೆಥಡ್ ಎನ್ನುವುದು ಇಡೀ ಕ್ಲಾಸ್ ಗೆ ಸಂಬಂಧಿಸಿದ ಮೆಥಡ್ ಆಗಿದೆ.
00:56 ಇದನ್ನು ಕ್ಲಾಸ್ ಮೆಥಡ್ ಎಂದು ಸಹ ಕರೆಯಲಾಗುತ್ತದೆ ಮತ್ತು ಸ್ಟಾಟಿಕ್ ಕೀವರ್ಡ್ ಬಳಸಿ ಘೋಷಿಸಲಾಗುತ್ತದೆ.
01:02 ಸ್ಟಾಟಿಕ್ ಮೆಥಡ್ ಗಳನ್ನು ಸಾಮಾನ್ಯವಾಗಿ ಸ್ಟಾಟಿಕ್ ವೇರಿಯೇಬಲ್ ಗಳನ್ನು ನಿರ್ವಹಿಸಲು ಬಳಸಲಾಗುತ್ತದೆ.
01:07 ನಾವೀಗ ಎಕ್ಲಿಪ್ಸ್ ನತ್ತ ಸಾಗೋಣ ಮತ್ತು StaticMethodDemo ಎನ್ನುವ ಹೊಸ ಪ್ರಾಜೆಕ್ಟ್ ರಚಿಸೋಣ.
01:14 ಈ ಪ್ರಾಜೆಕ್ಟ್ ಒಳಗೆ, ಸ್ಟಾಟಿಕ್ ಮೆಥಡ್ ಗಳ ಬಳಕೆಯನ್ನು ತೋರಿಸಲು ಅಗತ್ಯ ಕ್ಲಾಸುಗಳನ್ನು ರಚಿಸೋಣ.
01:21 ನಾವು StudentEnroll ಎನ್ನುವ ಹೊಸ ಕ್ಲಾಸನ್ನು ರಚಿಸಲಿದ್ದೇವೆ.
01:25 ಸ್ಟಾಟಿಕ್ ಮೆಥಡ್ ಗಳನ್ನು ಹೇಗೆ ಬಳಸಬಹುದು ಎಂಬುದನ್ನು ಉದಾಹರಣೆಯೊಂದಿಗೆ ನೋಡೋಣ.
01:30 ಈ ಉದಾಹರಣೆಯು, ಸ್ಟಾಟಿಕ್ ವೇರಿಯೇಬಲ್ ಟ್ಯುಟೋರಿಯಲ್ ನಲ್ಲಿ ಬಳಸಿದ ಉದಾಹರಣೆಯನ್ನು ಹೋಲುತ್ತದೆ.
01:37 ಇಲ್ಲಿ ಮತ್ತೊಮ್ಮೆ ನಾವು StudentEnroll ಕ್ಲಾಸನ್ನು ಪ್ರತಿನಿಧಿಸುತ್ತೇವೆ.
01:42 ನೇಮ್ ತ್ತು ಐ.ಡಿ ವೇರಿಯೇಬಲ್ ಗಳನ್ನು ಇನ್ಸ್ಟೆನ್ಸ್ ವೇರಿಯೇಬಲ್ ಗಳಾಗಿ ನಿರ್ವಹಿಸಲಾಗುತ್ತದೆ ಎಂಬುದನ್ನು ನೆನಪಿಸಿ.
01:48 ಇಲ್ಲಿ, ಆರ್ಗನೈಸೇಷನ್ ಮತ್ತು ಟೋಟಲ್ ಕೌಂಟ್ ವೇರಿಯೇಬಲ್ ಗಳು ಇಡೀ ಕ್ಲಾಸಿಗೆ ಸಾಮಾನ್ಯವೆನಿಸಿವೆ.
01:54 ಹೀಗಾಗಿ ಇವುಗಳನ್ನು ಸ್ಟಾಟಿಕ್ ವೇರಿಯೇಬಲ್ ಗಳಾಗಿ ನೋಡಿಕೊಳ್ಳಲಾಗುತ್ತದೆ.
01:58 ಈಗ StudentEnroll class ಅನ್ನು ಪ್ರತಿನಿಧಿಸಲು ಈ ಕೋಡ್ ಅನ್ನು ಟೈಪ್ ಮಾಡಿ.
02:03 count ಮತ್ತು orgname ಎಂಬ ಎರಡು ಸ್ಟಾಟಿಕ್ ವೇರಿಯೇಬಲ್ ಗಳಿವೆ ಎಂಬುದನ್ನು ಗಮನಿಸಿ.
02:08 orgname ಎನ್ನುವುದು ಸ್ಟಾಟಿಕ್ ಕಾನ್ಸ್ಟಂಟ್ ಅಲ್ಲ, ಬದಲಾಗಿ ಸಾಮಾನ್ಯ ಸ್ಟಾಟಿಕ್ ವೇರಿಯೇಬಲ್ ಆಗಿದೆ ಎಂಬುದನ್ನು ಗಮನಿಸಿ.
02:15 ಸ್ಟಾಟಿಕ್ ವೇರಿಯೇಬಲ್ orgname ಅನ್ನು “IIT Bombay” ಎಂದು ಇನಿಶಿಯಲೈಸ್ (ಅನುಸ್ಥಾಪನೆ) ಮಾಡಲಾಗುತ್ತದೆ.
02:21 ಈಗ Source -> ಮೇಲೆ ಕ್ಲಿಕ್ ಮಾಡಿ ಮತ್ತು Generate Constructor using Fields ಆರಿಸಿ.
02:27 ರಚಿಸಿದ ಕೋಡ್ ನಿಂದ super ಕೀವರ್ಡ್ ಅನ್ನು ಡಿಲೀಟ್ ಮಾಡಿ.
02:32 ಕನ್ಸ್ಟ್ರಕ್ಟರ್ ಒಳಗೆ, count ++ semicolon ಟೈಪ್ ಮಾಡಿ, ಹೀಗೆ ಅಬ್ಜೆಕ್ಟ್ ಒಂದನ್ನು ರಚಿಸಿದ ಪ್ರತಿ ಸಂದರ್ಭದಲ್ಲಿ ಕೌಂಟ್ ಮೌಲ್ಯವು ಹೆಚ್ಚುತ್ತದೆ.
02:42 ಈಗ ನಾವು ವೇರಿಯೇಬಲ್ ಗಳ ಮೌಲ್ಯಗಳನ್ನು ಪ್ರಿಂಟ್ (ಮುದ್ರಣ) ಮಾಡುವುದಕ್ಕಾಗಿ ಈ ಕ್ಲಾಸ್ ಗೆ showData( ) ವಿಧಾನವನ್ನು ಸೇರಿಸಲಿದ್ದೇವೆ.
02:48 ಇದಕ್ಕಾಗಿ public void showData( ) ಟೈಪ್ ಮಾಡಿ.
02:51 ಐ.ಡಿ, ನೇಮ್ ಮತ್ತು ಆರ್ಗನೈಸೇಶನ್ ನೇಮ್ ಗಳ ಮೌಲ್ಯಗಳನ್ನು ಪ್ರಿಂಟ್ ಮಾಡುವುದ್ಕಕಾಗಿ ಈ ಕೋಡ್ ಅನ್ನು ಆವರಣ ಚಿಹ್ನೆಗಳ ಒಳಗೆ ಟೈಪ್ ಮಾಡಿ.
02:58 ನಾವೀಗ ಸ್ಟಾಟಿಕ್ ಮೆಥಡ್ setOrgName ಅನ್ನು ಸೇರಿಸಲಿದ್ದೇವೆ.
03:03 ಈ ಕೋಡ್ ಅನ್ನು ಟೈಪ್ ಮಾಡಿ.
03:05 ಇಲ್ಲಿ ಪ್ರತಿನಿಧಿಸಿರುವ setOrgName ಮೆಥಡ್, ಸ್ಟಾಟಿಕ್ ವಿಧಾನವಾಗಿದ್ದು ಇದು orgnameನ ಮೌಲ್ಯವನ್ನು ಮಾರ್ಪಡಿಸಬಲ್ಲದು.
03:13 ಸ್ಟಾಟಿಕ್ ವೇರಿಯೇಬಲ್ ಗಳನ್ನು ನಿರ್ವಹಿಸಲು ಬಳಸುವ ಯಾವುದೇ ಮೆಥಡ್ ಅನ್ನು ಸ್ಟಾಟಿಕ್ ಮೆಥಡ್ ಆಗಿ ನಿರೂಪಿಸಬಹುದು.
03:19 ನಾವೀಗ ಇನ್ಸ್ಟೆನ್ಸ್ ಮೆಥಡ್ ಮತ್ತು ಸ್ಟಾಟಿಕ್ ಮೆಥಡ್ ನಡುವಿನ ವ್ಯತ್ಯಾಸಗಳನ್ನು ನೋಡೋಣ.
03:25 ಇನ್ಸ್ಟೆನ್ಸ್ ಮೆಥಡ್ ಗಳು ಸ್ಟಾಟಿಕ್ ವೇರಿಯೇಬಲ್ ಗಳನ್ನು ಆಕ್ಸೆಸ್ ಮಾಡಬಹುದು.
03:29 ಆದರೆ ಸ್ಟಾಟಿಕ್ ಮೆಥಡ್ ಗಳು ನೇರವಾಗಿ ಸ್ಟಾಟಿಕ್ ವೇರಿಯೇಬಲ್ ಗಳನ್ನು ಆಕ್ಸೆಸ್ ಮತ್ತು ಮಾರ್ಪಾಡು ಮಾಡಬಹುದು.
03:35 ಇನ್ಸ್ಟೆನ್ಸ್ ಮೆಥಡ್ ಗಳನ್ನು ಅಬ್ಜೆಕ್ಟ್ ಮೂಲಕ ಮಾತ್ರ ಇನ್ವೋಕ್ (ಜಾರಿ) ಮಾಡಬಹುದು.
03:39 ಆದರೆ ಸ್ಟಾಟಿಕ್ ಮೆಥಡ್ ಅನ್ನು ಅಬ್ಜೆಕ್ಟ್ ರಚಿಸದೆಯೇ ನೇರವಾಗಿ ಇನ್ವೋಕ್ ಮಾಡಬಹುದು.
03:45 ಸ್ಟಾಟಿಕ್ ಮೆಥಡ್ ಒಳಗೆ ನಾವು ‘this’ ಮತ್ತು ‘super’ ಕೀವರ್ಡ್ ಬಳಸಲು ಆಗುವುದಿಲ್ಲ.
03:50 ಏಕೆಂದರೆ ಈ ಕೀವರ್ಡ್ ಗಳು ನಿರ್ದಿಷ್ಟ ಕ್ಲಾಸ್ ನ ಉದಾಹರಣೆಯನ್ನು ಉಲ್ಲೇಖಿಸುತ್ತವೆ.
03:56 ಸ್ಟಾಟಿಕ್ ವಿಚಾರದಲ್ಲಿ ನಾವು ಒಂದು ಕ್ಲಾಸ್ ನ ಉದಾಹರಣೆಯನ್ನು ಉಲ್ಲೇಖಿಸಲಾಗದು.
04:01 ನೇರವಾಗಿ ಸ್ಟಾಟಿಕ್ ಮೆಥಡ್ ಒಳಗೆ ಇನ್ಸ್ಟೆನ್ಸ್ ವೇರಿಯೇಬಲ್ ಒಂದನ್ನು ಆಕ್ಸೆಸ್ ಮಾಡಲು ನಾವು ಪ್ರಯತ್ನಿಸಿದರೆ ಏನಾಗುತ್ತದೆ ಎಂಬುದನ್ನು ನಾವೀಗ ನೋಡೋಣ.
04:09 id= “newid” semicolon ಎಂದು ಟೈಪ್ ಮಾಡಿ.
04:13 ಈಗ ಎಕ್ಲಿಪ್ಸ್ ನಲ್ಲಿ ಎರರ್ (ದೋಷ) ಕಂಡುಬರುತ್ತದೆ.
04:17 ಇನ್ಸ್ಟೆನ್ಸ್ ವೇರಿಯೇಬಲ್ ಅನ್ನು ನೇರವಾಗಿ ಸ್ಟಾಟಿಕ್ ಮೆಥಡ್ ಒಳಗೆ ಆಕ್ಸೆಸ್ ಮಾಡಲಾಗದು ಎಂಬುದನ್ನು ಇದು ಸೂಚಿಸುತ್ತದೆ.
04:23 ಹೀಗಾಗಿ ಈ ಸಾಲಿನಲ್ಲಿ ಪ್ರತಿಕ್ರಿಯಿಸೋಣ ಮತ್ತು ಮುಂದುವರಿಯೋಣ.
04:27 ಈಗ ಇನ್ನೊಂದು ಸ್ಟಾಟಿಕ್ ಮೆಥಡ್ showOrgData ಅನ್ನು ಸೇರಿಸೋಣ.
04:31 ಈ ಹೇಳಿಕೆಗಳು orgname ಮತ್ತು count ನ ಮೌಲ್ಯಗಳನ್ನು ಪ್ರಿಂಟ್ ಮಾಡುತ್ತವೆ.
04:36 ಈಗ default package ಮೇಲೆ ರೈಟ್ ಕ್ಲಿಕ್ ಮಾಡಿ, New-> Class ಮೇಲೆ ಕ್ಲಿಕ್ ಮಾಡಿ ಮತ್ತು ಹೆಸರನ್ನು Demo ಎಂದು ಟೈಪ್ ಮಾಡಿ.
04:44 ಈ ಕ್ಲಾಸ್ ನ ಒಳಗೆ ನಾವು ಮೇನ್ ಮೆಥಡ್ ಹೊಂದಲಿದ್ದೇವೆ.
04:48 ಇದಕ್ಕಾಗಿ main ಎಂದು ಟೈಪ್ ಮಾಡಿ ಮತ್ತು ಮೇನ್ ಮೆಥಡ್ ರಚಿಸಲು Ctrl+space ಒತ್ತಿ.
04:54 ವಿದ್ಯಾರ್ಥಿಗಳ ದಾಖಲಾತಿಯನ್ನು ಪ್ರತಿನಿಧಿಸುವುದಕ್ಕಾಗಿ ನಾವು StudentEnroll ಕ್ಲಾಸ್ ನ ಕೆಲವು ಅಬ್ಜೆಕ್ಟ್ ಗಳನ್ನು ನಾವು ರಚಿಸಲಿದ್ದೇವೆ.
05:01 ಇದಕ್ಕಾಗಿ s1, s2 ಮತ್ತು s3 ಯ 3 ಅಬ್ಜೆಕ್ಟ್ ಗಳನ್ನು ರಚಿಸಲು ಈ ಕೋಡ್ ಅನ್ನು ಟೈಪ್ ಮಾಡಿ.
05:08 ಈಗ ದಾಖಲಾತಿ ವಿವರಗಳನ್ನು ಪ್ರಿಂಟ್ ಮಾಡುವುದಕ್ಕಾಗಿ showData ವಿಧಾನವನ್ನು ನಾವು ಇನ್ವೋಕ್ ಮಾಡೋಣ.
05:12 s1, s2 ಮತ್ತು s3 ಯಲ್ಲಿ showData ವಿಧಾನವನ್ನು ಇನ್ವೋಕ್ ಮಾಡಲು ಈ ಕೋಡ್ ಅನ್ನು ಟೈಪ್ ಮಾಡಿ.
05:19 orgname ಮತ್ತು count ನ ಮೌಲ್ಯಗಳನ್ನು ಪ್ರಿಂಟ್ ಮಾಡುವುದಕ್ಕಾಗಿ showOrgData ಮೆಥಡ್ ಅನ್ನು ನಾವು ಇನ್ವೋಕ್ ಮಾಡೋಣ.
05:27 ಇದು ಸ್ಟಾಟಿಕ್ ಮೆಥಡ್ ಆಗಿರುವುದರಿಂದ ಇದರ ಕ್ಲಾಸ್ ಹೆಸರು ಬಳಸಿ ನೇರವಾಗಿ ಇದನ್ನು ನಾವು ಇನ್ವೋಕ್ ಮಾಡಬಹುದು.
05:31 ಹೀಗೆ ಮಾಡಲು ಇಲ್ಲಿರುವ ಕೋಡ್ ಅನ್ನು ಟೈಪ್ ಮಾಡಿ.
05:34 ನಾವೀಗ Demo ಪ್ರೋಗ್ರಾಂ ಅನ್ನು ರನ್ ಮಾಡೋಣ.
05:37 s1 ಗೆ ಅನುರೂಪವಾದ, ಅಂದರೆ IT101, ADIL ಮತ್ತು IIT BOMBAY ಮುಂತಾದ ವೇರಿಯೇಬಲ್ ಗಳ ಮೌಲ್ಯಗಳನ್ನು ಪ್ರಿಂಟ್ ಆಗುತ್ತಿರುವುದನ್ನು ನಾವು ನೋಡಬಹುದು.
05:47 ಇದೇ ರೀತಿ s2 ಮತ್ತು s3 ಗೆ ಅನುರೂಪವಾದ ಮೌಲ್ಯಗಳು ಸಹ ಪ್ರಿಂಟ್ ಆಗುತ್ತಿವೆ.
05:53 orgname ಅಂದರೆ IIT BOMBAY ಯ ಮೌಲ್ಯಗಳು s1, s2 ಮತ್ತು s3 ಗೆ ಸಾಮಾನ್ಯವಾಗಿವೆ ಎಂಬುದನ್ನು ಗಮನಿಸಿ.
06:02 orgname ಮತ್ತು count ಗಳನ್ನು ಪ್ರತ್ಯೇಕವಾಗಿ ಸ್ಟಾಟಿಕ್ ಮೆಥಡ್ static method showOrgData ನಿಂದ ಪ್ರಿಂಟ್ ಮಾಡಲಾಗುತ್ತದೆ.
06:08 ಸಂಸ್ಥೆಯ ಹೆಸರನ್ನು IIT Bombay ಎಂದು ಪ್ರಿಂಟ್ ಮಾಡಲಾಗುತ್ತದೆ ಎಂಬುದನ್ನು ಗಮನಿಸಿ.
06:13 ನಾವು ಈಗಾಗಲೇ 3 ಅಬ್ಜೆಕ್ಟ್ ಗಳನ್ನು ರಚಿಸಿರುವುದರಿಂದ ವಿದ್ಯಾರ್ಥಿಗಳ ದಾಖಲಾತಿಯ ಸಂಖ್ಯೆಯ ಮೌಲ್ಯವನ್ನು 3 ಆಗಿ ಪ್ರಿಂಟ್ ಮಾಡಲಾಗುತ್ತದೆ.
06:21 ಸ್ಟಾಟಿಕ್ ಮೆಥಡ್ ಅನ್ನು ನೇರವಾಗಿ ಕ್ಲಾಸ್ ಹೆಸರಿನಿಂದಲೇ ಇನ್ವೋಕ್ ಮಾಡಬಹುದು.
06:26 ನಾವೀಗ ಸ್ಟಾಟಿಕ್ ಮೆಥಡ್ setOrgName ಅನ್ನು ಇನ್ವೋಕ್ ಮಾಡೋಣ.
06:30 ನಾವು ಸಂಸ್ಥೆಯ ಹೆಸರನ್ನು “IIT Bombay” ಯಿಂದ “IIT Mumbai” ಆಗಿ ಬದಲಾಯಿಸಲಿದ್ದೇವೆ.
06:36 ಇದಕ್ಕಾಗಿ ಈ ಕೋಡ್ ಅನ್ನು ಟೈಪ್ ಮಾಡಿ.
06:38 ನಾವೀಗ ದಾಖಲಾತಿ ವಿವರಗಳನ್ನು ಪ್ರಿಂಟ್ ಮಾಡುವುದಕ್ಕಾಗಿ s1, s2 ಮತ್ತು s3 ಮೇಲೆ showData ವಿಧಾನವನ್ನು ಇನ್ನೊಮ್ಮೆ ಇನ್ವೋಕ್ ಮಾಡೋಣ.
06:47 ಇದಕ್ಕಾಗಿ ಇಲ್ಲಿರುವ ಕೋಡ್ ಅನ್ನು ಇನ್ನೊಮ್ಮೆ ಟೈಪ್ ಮಾಡಿ.
06:50 ಮತ್ತೊಮ್ಮೆ, orgname ಮತ್ತು count ಮೌಲ್ಯಗಳನ್ನು ಪ್ರಿಂಟ್ ಮಾಡುವುದಕ್ಕಾಗಿ showOrgData ವಿಧಾನವನ್ನು ಇನ್ವೋಕ್ ಮಾಡಿ.
06:58 ಹೀಗೆ ಮಾಡಲು ಈ ಕೋಡ್ ಟೈಪ್ ಮಾಡಿ.
07:00 ಈಗ ಇನ್ನೊಮ್ಮೆ Demo ಪ್ರೋಗ್ರಾಂ ರನ್ ಮಾಡಿ.
07:03 ಸಂಸ್ಥೆಯ ಹೆಸರು “IIT Mumbai” ಗೆ ಬದಲಾಗಿರುವುದನ್ನು ನಾವು ನೋಡಬಹುದು.
07:08 ಈಗ ಸ್ಲೈಡ್ ಗಳತ್ತ ಸಾಗೋಣ.
07:11 ಅಬ್ಜೆಕ್ಟ್ ರೆಫೆರೆನ್ಸ್ ಗಳನ್ನು ಸ್ಟಾಟಿಕ್ ಮೆಥಡ್ ಗೆ ಪಾಸ್ ಮಾಡಬಹುದು.
07:15 ಈ ರೀತಿ ಸ್ಟಾಟಿಕ್ ಮೆಥಡ್ ಒಂದು ಆ ನಿರ್ದಿಷ್ಟ ಅಬ್ಜೆಕ್ಟ್ನ ಇನ್ಸ್ಟೆನ್ಸ್ ವೇರಿಯೇಬಲ್ಗಳನ್ನು ಆಕ್ಸೆಸ್ ಮಾಡಬಹುದು.
07:22 ನಾವಿದನ್ನು ನಮ್ಮ ಕೋಡ್ನಲ್ಲಿ ಪ್ರಯತ್ನಿಸೋಣ. ಎಕ್ಲಿಪ್ಸ್ಗೆ ಸ್ವಿಚ್ ಮಾಡಿ ಮತ್ತು StudentEnroll ಕ್ಲಾಸಿಗೆ ಹೋಗಿ.
07:30 ಈಗ setOrgName ಮೆಥಡ್ ನಲ್ಲಿ, ಇನ್ನೊಂದು ಆರ್ಗ್ಯುಮೆಂಟ್ ಅನ್ನು StudentEnroll ಕ್ಲಾಸಿನ ಅಬ್ಜೆಕ್ಟ್ ಆಗಿ ಪಾಸ್ ಮಾಡಿ.
07:38 ಹೀಗೆ, String org ನಂತರ ಕೊಮಾ StudentEnroll s ಎಂದು ಟೈಪ್ ಮಾಡಿ.
07:45 ಈಗ, ಈ ಮೆಥಡ್ ಒಳಗೆ, id = "newid" ಅನ್ಕಮೆಂಟ್ ಮಾಡಿ.
07:50 ಮತ್ತು, id ಬದಲಿಗೆ s.id ಎಂದು ಟೈಪ್ ಮಾಡಿ.
07:54 ಈಗ Demo ಕ್ಲಾಸಿಗೆ ಹೋಗಿ.
07:56 ಜೊತೆಗೆ ಅನ್ನು StudentEnroll object s1 ಪಾಸ್ ಮಾಡುವ ಮೂಲಕ setOrgName ಮೆಥಡ್ ಗೆ ಫಂಕ್ಷನ್ ಕಾಲ್ ಅನ್ನು ಮಾರ್ಪಾಡು ಮಾಡೋಣ.
08:05 ಇಲ್ಲಿ, “IIT Mumbai” ನಂತರ ಕೊಮಾ s1 ಎಂದು ಟೈಪ್ ಮಾಡಿ.
08:10 ಈಗ Demo ಪ್ರೋಗ್ರಾಂ ಅನ್ನು ಮತ್ತೊಮ್ಮೆ ರನ್ ಮಾಡಿ.
08:12 ಇಲ್ಲಿ s1ಗೆ idಯ ಮೌಲ್ಯ ಗೆ ಬದಲಾಗಿರುವುದನ್ನು ನಾವು ನೋಡಬಹುದು.
08:19 ಈಗ ಸಂಕ್ಷೇಪಿಸೋಣ. ಈ ಟ್ಯುಟೋರಿಯಲ್ನಲ್ಲಿ ನಾವು,
08:24 ಸ್ಟಾಟಿಕ್ ಮೆಥಡ್ ಅಂದರೇನು ಮತ್ತು ಯಾವಾಗ ಇದನ್ನು ಬಳಸಲಾಗುತ್ತದೆ,
08:28 ಇನ್ಸ್ಟೆನ್ಸ್ ಮೆಥಡ್ ಗಳು ಮತ್ತು ಸ್ಟಾಟಿಕ್ ಮೆಥಡ್ ಗಳ ನಡುವಿನ ವ್ಯತ್ಯಾಸ ಹೇಗೆ ಗುರುತಿಸುವುದು ಮತ್ತು,
08:33 ಸ್ಟಾಟಿಕ್ ಮೆಥಡ್ ಗಳನ್ನು ಹೇಗೆ ರಚಿಸುವುದು ಮತ್ತು ಇನ್ವೋಕ್ ಮಾಡುವುದು ಎಂಬುದನ್ನು ಕಲಿತೆವು.
08:37 ಈ ಅಸೈನ್ಮೆಂಟ್, ಸ್ಟಾಟಿಕ್ ವೇರಿಯೇಬಲ್ ಅಸೈನ್ಮೆಂಟ್ನ ಮುಂದುವರಿಕೆಯಾಗಿದೆ.
08:42 ನೀವು ಸ್ಟಾಟಿಕ್ ವೇರಿಯೇಬಲ್ ಅಸೈನ್ಮೆಂಟ್ ಅನ್ನು ಪೂರ್ಣಗೊಳಿಸಿರುವುದನ್ನು ಖಚಿತಪಡಿಸಿ.
08:47 ನಾವು ಮಾರ್ಪಾಡುಗಳನ್ನು ಮಾತ್ರ ಇಲ್ಲಿ ಎತ್ತಿ ತೋರಿಸಲಿದ್ದೇವೆ.
08:50 ಇಲ್ಲಿ ನಾವು “status” ಅನ್ನು ಪ್ರತಿನಿಧಿಸಲು ಮಾರ್ಪಾಡನ್ನು ಹೊಂದಿದ್ದೇವೆ.
08:55 ಕಾರು ಸರ್ವಿಸ್ಗಾಗಿ “in” ಆಗಿದೆಯೇ ಅಥವಾ ಸರ್ವಿಸ್ನ ನಂತರ “out” ಆಗಿದೆಯೇ ಎಂಬುದನ್ನು ಸೂಚಿಸಲು ಇದನ್ನು ಬಳಸಲಾಗುತ್ತದೆ.
09:01 ಅಲ್ಲದೆ No of cars out after Service ಪ್ರತಿನಿಧಿಸಲು ನಾವು ಇನ್ನೊಂದು ಮಾರ್ಪಾಡನ್ನು ಸಹ ಹೊಂದಿದ್ದೇವೆ.
09:08 ಸ್ಟೇಟಸ್ ಅನ್ನು ”out” ಗೆ ಪರಿಷ್ಕರಿಸುವ ಮೆಥಡ್ ಸರ್ವಿಸ್( Car c) ಅನ್ನು ನಿರೂಪಿಸಿ.
09:13 ಇದೇ ರೀತಿ ಇದು ಸರ್ವಿಸ್ಗಾಗಿ
09:17 No of Cars in ಮತ್ತು ಸರ್ವಿಸ್ನ ನಂತರ No of Cars out ನ ಮೌಲ್ಯಗಳನ್ನು ಮಾರ್ಪಾಡು ಮಾಡುತ್ತದೆ.
09:21 ಅಲ್ಲದೆ ಕಾರಿನ ಎಲ್ಲಾ ವಿವರಗಳನ್ನು ಪ್ರಿಂಟ್ ಮಾಡಲು show( ) ವಿಧಾನವನ್ನು ನಿರೂಪಿಸಿ.
09:26 ಮೊದಲಿನಂತೆಯೇ, ನಾವು ಇದನ್ನು ಪಟ್ಟಿ ಮಾಡಿರುವಂತೆಯೇ ನಿರ್ವಹಿಸಬೇಕು.
09:30 ಅಗತ್ಯ ಬಿದ್ದಂತೆ, ಸ್ಟಾಟಿಕ್ ಮೆಥಡ್ ಅನ್ನು ನಾವು ಗುರುತಿಸಬೇಕು ಮತ್ತು ನಿರೂಪಿಸಬೇಕು ಎಂಬುದನ್ನು ಗಮನಿಸಿ.
09:35 ಇದರೊಂದಿಗೆ ಡೆಮೋ ಕ್ಲಾಸ್ ಒಂದನ್ನು ರಚಿಸಿ.
09:38 ಮೇನ್ ಮೆಥಡ್ ಒಳಗೆ, CarService ನ ಕೆಲವು ಅಬ್ಜೆಕ್ಟ್ಗಳನ್ನು ರಚಿಸಿ.
09:43 ಇವುಗಳಲ್ಲಿ ಕೆಲವುಗಳ ಮೇಲೆ service( ) ಮೆಥಡ್ ಅನ್ನು ಇನ್ವೋಕ್ ಮಾಡಿ.
09:47 ಎಲ್ಲಾ ಅಬ್ಜೆಕ್ಟ್ಗಳನ್ನು ಬಳಸಿ show( ) ಮೆಥಡ್ಅನ್ನು ಇನ್ವೋಕ್ ಮಾಡಿ ಮತ್ತು ಫಲಿತಾಂಶವನ್ನು ದೃಢೀಕರಿಸಿ.
09:52 ಈ ಕೆಳಗಿನ ಲಿಂಕ್ ನಲ್ಲಿ ಇರುವ ವೀಡಿಯೊ, ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ಅನ್ನು ಸಂಕ್ಷೇಪಿಸುತ್ತದೆ.
09:57 ದಯವಿಟ್ಟು ಇದನ್ನು ಡೌನ್ ಲೋಡ್ ಮಾಡಿ ಮತ್ತು ವೀಕ್ಷಿಸಿ.
09:59 ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ತಂಡವು ಸ್ಪೋಕನ್ ಟ್ಯುಟೋರಿಯಲ್ ಗಳನ್ನು ಬಳಸಿ ಕಾರ್ಯಾಗಾರಗಳನ್ನು ನಡೆಸುತ್ತದೆ ಮತ್ತು ಆನ್ ಲೈನ್ ಪರೀಕ್ಷೆಗಳಲ್ಲಿ ತೇರ್ಗಡೆ ಹೊಂದಿದವರಿಗೆ ಪ್ರಮಾಣಪತ್ರಗಳನ್ನು ನೀಡುತ್ತದೆ.
10:08 ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ನಮಗೆ ಪತ್ರ ಬರೆಯಿರಿ.
10:11 ‘ಸ್ಪೋಕನ್ ಟ್ಯುಟೋರಿಯಲ್’ ಪ್ರೊಜೆಕ್ಟ್, NMEICT, MHRD, ಭಾರತ ಸರ್ಕಾರದ ನೆರವು ಪಡೆದಿದೆ.
10:18 ಕೆಳಗಿನ ಲಿಂಕ್ ನಲ್ಲಿ ಈ ಮಿಷನ್ ಕುರಿತು ಹೆಚ್ಚಿನ ಮಾಹಿತಿ ಲಭ್ಯವಿದೆ.
10:22 ಈ ಸ್ಕ್ರಿಪ್ಟ್, ಅಮಲ್ ಜ್ಯೋತಿ ಕಾಲೇಜ್ ಆಫ್ ಎಂಜಿನಿಯರಿಂಗ್ ನ ಮಾಹಿತಿ ತಂತ್ರಜ್ಞಾನ ವಿಭಾಗದ ಕೊಡುಗೆಯಾಗಿದೆ.
10:30 ಈ ಸ್ಕ್ರಿಪ್ಟ್ ನ ಅನುವಾದಕರು ಮಂಗಳೂರಿನಿಂದ ಮೆಲ್ವಿನ್ ಮತ್ತು ಧ್ವನಿ ಶ್ರೀ ನವೀನ್ ಭಟ್, ಉಪ್ಪಿನಪಟ್ಟಣ.

ಧನ್ಯವಾದಗಳು.

Contributors and Content Editors

Sandhya.np14