LibreOffice-Suite-Base/C4/Database-Maintenance/Kannada
From Script | Spoken-Tutorial
Revision as of 20:44, 19 March 2020 by Sandhya.np14 (Talk | contribs)
Time | Narration |
00:00 | ಲಿಬರ್ ಆಫಿಸ್ ಬೇಸ್ ನ ಸ್ಪೋಕನ್ ಟ್ಯುಟೋರಿಯಲ್ ಗೆ ಸ್ವಾಗತ. |
00:04 | ಈ ಟ್ಯುಟೋರಿಯಲ್ ನಲ್ಲಿ ನಾವು:
ಡೇಟಾಬೇಸ್ ನ ನಿರ್ವಹಣೆ, ಡೇಟಾಬೇಸ್ ನ ರಚನೆಯ ಮಾರ್ಪಾಡು, ಡೇಟಾಬೇಸ್ ಅನ್ನು ಡಿಫ್ರಾಗ್ಮೆಂಟ್ ಮಾಡುವುದು ಮತ್ತು ಬ್ಯಾಕಪ್ ಗಳನ್ನು ತೆಗೆದುಕೊಳ್ಳುವುದು ಇವುಗಳ ಬಗ್ಗೆ ಕಲಿಯಲಿದ್ದೇವೆ. |
00:19 | ಡೇಟಾಬೇಸ್ ನಿರ್ವಹಣೆ - |
00:21 | ಬೇಸ್ ಡೇಟಾಬೇಸ್ ನ ಪೂರ್ಣ ಅವಧಿಯಲ್ಲಿ, ಅದನ್ನು ಪರಿಷ್ಕೃತವಾಗಿ, ವಿಶ್ವಾಸಾರ್ಹ ಮತ್ತು ಸುರಕ್ಷಿತವಾಗಿ ಇಡಲು, ನಾವು ಕ್ರಮಗಳನ್ನು ಕೈಗೊಳ್ಳಬೇಕು. |
00:31 | ಇದು ಡೇಟಾ ಅನ್ನು ಇಡಲು ಅಗತ್ಯವಿರುವಂತೆ, ಡೇಟಾ ರಚನೆಯನ್ನು ಮಾರ್ಪಡಿಸುವುದು, ಮತ್ತು ಫಾರ್ಮ್ ಗಳನ್ನು ಅಪ್ಡೇಟ್ ಮಾಡುವುದನ್ನು ಒಳಗೊಂಡಿದೆ. |
00:41 | ನಾವೀಗ, ನಮ್ಮ ಹಿಂದಿನ ಟ್ಯುಟೋರಿಯಲ್ ನಲ್ಲಿ ರಚಿಸಿದ, Library ಉದಾಹರಣೆಯ ಡೇಟಾಬೇಸ್ ಅನ್ನು ಪರಿಗಣಿಸೋಣ. |
00:48 | ಈ ಡೇಟಾಬೇಸ್ ಆರಂಭದಲ್ಲಿ ಪುಸ್ತಕಗಳು, ಸದಸ್ಯರು ಮತ್ತು ನೀಡಿರುವ ಪುಸ್ತಕಗಳ ಕುರಿತು ಟೇಬಲ್ ಗಳನ್ನು ಹೊಂದಿದ್ದವು. |
00:55 | ಮತ್ತು, ಈ ಡೇಟಾಬೇಸ್ ರಚನೆಯನ್ನು ಆಧರಿಸಿ ನಾವು ನಮ್ಮ ಮಾದರಿ ಫಾರ್ಮ್ ಗಳು, ಕ್ವೆರಿಗಳು ಮತ್ತು ರಿಪೋರ್ಟ್ ಗಳನ್ನು ರಚಿಸಿದೆವು. |
01:03 | ನಂತರ, DVDಗಳು ಮತ್ತು CDಗಳು ಮುಂತಾದ ಮೀಡಿಯಾಗಳನ್ನು ಹೊಂದಲು ಲೈಬ್ರರಿಯನ್ನು ವಿಸ್ತರಿಸಲಾಯಿತು. |
01:11 | ಹೀಗೆ, ರಚನೆಯನ್ನು ಪರಿಷ್ಕರಿಸುವುದಕ್ಕಾಗಿ ನಾವು ಲೈಬ್ರರಿ ಡೇಟಾಬೇಸ್ ಅನ್ನು ಮಾರ್ಪಾಡಿಸಿದೆವು. |
01:16 | ಇದಕ್ಕಾಗಿ ನಾವು Media ಎಂಬ ಇನ್ನೊಂದು ಟೇಬಲ್ ಅನ್ನು ಸೇರಿಸಿದೆವು. |
01:21 | ಈ ಹೊಸ Media ಟೇಬಲ್ ನಲ್ಲಿ, DVD ಮತ್ತು CDಯ ಮಾಹಿತಿಯನ್ನು ಸಂಗ್ರಹಿಸಿದೆವು. |
01:28 | ಈ ರೀತಿ, ಅಗತ್ಯವಿದ್ದಾಗ ನಾವು ಬದಲಾವಣೆಗಳನ್ನು ಮಾಡಿದ ಕಾರಣ ನಮ್ಮ ಡೇಟಾಬೇಸ್ ಹೆಚ್ಚು ಬಳಕೆಯೋಗ್ಯ ಮತ್ತು ಪರಿಷ್ಕೃತವಾಯಿತು. |
01:39 | ಇವುಗಳನ್ನು ಸುಲಭವಾಗಿ ಬಳಸುವಂತಾಗಲು, ಟೇಬಲ್ ಗಳ ಬದಲಾವಣೆಗಳ ಜೊತೆಗೆ ನಾವು ಫಾರ್ಮ್ ಗಳನ್ನು ಸಹ ಮಾರ್ಪಾಡಿಸಬೇಕಾಗುತ್ತದೆ. |
01:47 | ಅಥವಾ ಹೊಸ ಟೇಬಲ್ ರಚನೆಗಳಿಗೆ ಅವಕಾಶ ಮಾಡಿ ಕೊಡಲು ನಾವು ಹೊಸ ಫಾರ್ಮ್ ಗಳನ್ನು ರಚಿಸಬಹುದು. |
01:54 | ಉದಾಹರಣೆಗೆ, ಪುಸ್ತಕಗಳ ಡೇಟಾವನ್ನು ನಮೂದಿಸಲು ನಾವು ಒಂದು ಫಾರ್ಮ್ ಹೊಂದಿದ್ದಲ್ಲಿ, DVD ಮತ್ತು CDಗಳ ಡೇಟಾ ನಮೂದಿಗೆ ಅವಕಾಶ ನೀಡುವುದಕ್ಕಾಗಿ ನಾವು ಇದನ್ನು ಮಾರ್ಪಾಡಿಸಬಹುದು. |
02:08 | ಪುಸ್ತಕಗಳು, DVDಗಳು ಅಥವಾ CDಗಳು ಮುಂತಾದ ಮೀಡಿಯಾದ ಪ್ರಕಾರ ಆರಿಸಲು ನಾವು ಆಯ್ಕೆಯ ಬಟನ್ ಗಳನ್ನು ಸೇರಿಸಬಹುದು. |
02:19 | ಅಥವಾ, ಕೇವಲ DVD ಮತ್ತು CD ಮೀಡಿಯಾಗಳಿಗಾಗಿ ಡೇಟಾ ನಮೂದಿಸಲು ನಾವು ಹೊಸ ಫಾರ್ಮ್ ಅನ್ನು ಸೇರಿಸಬಹುದು. |
02:28 | ಇದೇ ರೀತಿ, ಬದಲಾಯಿಸಿದ ಡೇಟಾ ರಚನೆಯನ್ನು ಆಧರಿಸಿ ನಾವು ಕ್ವೆರಿಗಳು ಮತ್ತು ರಿಪೋರ್ಟ್ ಗಳನ್ನು ಮಾರ್ಪಾಡಿಸಬೇಕು ಅಥವಾ ಅವುಗಳನ್ನು ಹೊಸತಾಗಿ ಸೇರಿಸಬೇಕು. |
02:39 | ಕೆಲವೊಮ್ಮೆ ನಾವು ಈಗ ಇರುವ ಟೇಬಲ್ ರಚನೆಗಳನ್ನು ಮಾರ್ಪಾಡಿಸಬೇಕಾಗುತ್ತದೆ. |
02:45 | ಉದಾಹರಣೆಗೆ, ಲೈಬ್ರರಿಯ ಎಲ್ಲಾ ಸದಸ್ಯರನ್ನು ಪಟ್ಟಿ ಮಾಡುವ Members ಟೇಬಲ್ ಅನ್ನು ನಾವು ಪರಿಗಣಿಸೋಣ. |
02:53 | ಇದು ಸದ್ಯಕ್ಕೆ ಅವರ ಹೆಸರು ಮತ್ತು ಫೋನ್ ಸಂಖ್ಯೆಗಳನ್ನು ಮಾತ್ರ ಶೇಖರಿಸುತ್ತದೆ. |
02:58 | ಈಗ, ನಾವು ಅವರ ವಿಳಾಸ ಮತ್ತು ನಗರದ ಮಾಹಿತಿಯನ್ನು ಶೇಖರಿಸಬೇಕಾದರೆ, ನಾವು Members ಟೇಬಲ್ ರಚನೆಯನ್ನು ಮಾರ್ಪಾಡಿಸಬೇಕು. |
03:09 | ಇದಕ್ಕಾಗಿ ನಾವು, ALTER TABLE Members ADD Address TEXT, ADD City TEXT ನಂತಹ |
03:15 | SQL ಸಿಂಟಾಕ್ಸ್ ಅನ್ನು ಬಳಸಬಹುದು. |
03:22 | ALTER TABLE ಸ್ಟೇಟ್ಮೆಂಟ್, ಟೇಬಲ್ ರಚನೆಯನ್ನು ಬದಲಾಯಿಸಿ, |
03:30 | ಟೆಕ್ಸ್ಟ್ ಡೇಟಾವನ್ನು ಹೊಂದಿರುವ Address ಮತ್ತು City ಎಂಬ ಎರಡು ಹೊಸ ಕಾಲಂಗಳನ್ನು ಸೇರಿಸುತ್ತದೆ. |
03:36 | ಟೇಬಲ್ ಸ್ಟ್ರಕ್ಚರ್ ಗಳ ರಚನೆ ಮತ್ತು ಮಾರ್ಪಡಿಸುವ ಕುರಿತು ಹೆಚ್ಚಿನ ಮಾಹಿತಿಗಾಗಿ 'hsqldb.org/' ವೆಬ್ ಸೈಟ್ ಗೆ ಭೇಟಿ ನೀಡಿ. |
03:47 | ಸ್ಕ್ರೀನ್ ನಲ್ಲಿ ತೋರಿಸಿರುವ 'url' ಅಡ್ರೆಸ್ ಬಳಸಿ. |
03:52 | ನಂತರ, ಬೇಸ್ ಡೇಟಾಬೇಸ್ ಅನ್ನು ಬಳಕೆಗಾಗಿ ನಾವು ಹೇಗೆ ವಿಶ್ವಾಸಾರ್ಹವಾಗಿ ಇಡಬಹುದು ಎಂಬುದನ್ನು ನೋಡೋಣ. |
03:59 | ಕೆಲವೊಮ್ಮೆ, ತುಲನಾತ್ಮಕವಾಗಿ ಸಣ್ಣ ಸಂಖ್ಯೆಯ ರೆಕಾರ್ಡ್ ಗಳನ್ನು ಶೇಖರಿಸಲು, ಬೇಸ್ ಗೆ ದೊಡ್ಡ ಪ್ರಮಾಣದ ಮೆಮರಿ ಬೇಕು. |
04:08 | ಏಕೆಂದರೆ, ಡೇಟಾಬೇಸ್ ಗೆ ಅಗತ್ಯವಿರುವ ನಿರ್ದಿಷ್ಟ ಪ್ರಮಾಣದ ಮೆಮರಿಯನ್ನು ಬೇಸ್ ನಿರೀಕ್ಷಿಸುತ್ತದೆ. |
04:17 | ನಾವು ಟೇಬಲ್ ಗಳಲ್ಲಿ ನೋಡುವ ಡೇಟಾ, ಅದೇ ರೀತಿಯ ವ್ಯವಸ್ಥಿತ ಪ್ರಕಾರದಲ್ಲಿ ಸ್ಟೋರ್ ಆಗಿರುವುದಿಲ್ಲ. |
04:26 | ಏಕೆಂದರೆ, ನಾವು ಟೇಬಲ್ ಗಳಿಗೆ ಡೇಟಾವನ್ನು ಬೇರೆ ಬೇರೆ ಸಮಯದಲ್ಲಿ ಸೇರಿಸುವುದರಿಂದ, ಅವುಗಳ ಶೇಖರಣೆಯು ಒಂದು ನಿರ್ದಿಷ್ಟ ಕ್ರಮದಲ್ಲಿ ಇರುವುದಿಲ್ಲ. |
04:36 | ಪುಸ್ತಕಗಳ ಲೈಬ್ರರಿಗೆ ನಾವು ಕ್ಯಾಟಲಾಗ್ ಬಳಸಿದಂತೆ, ನಾವು ಟೇಬಲ್ ಡೇಟಾಗಾಗಿ ಇಂಡೆಕ್ಸ್ ಗಳನ್ನು ಬಳಸಬಹುದು. |
04:45 | ಕ್ಯಾಟಲಾಗ್, ಪುಸ್ತಕಗಳನ್ನು ಪಟ್ಟಿ ಮಾಡುತ್ತದೆ. ಅಲ್ಲದೆ, ಅವುಗಳು ಎಲ್ಲಿವೆ ಎಂಬುದನ್ನು ಸಹ ಶೇಖರಿಸುತ್ತದೆ. |
04:53 | ಇದೇ ರೀತಿ, ಡೇಟಾವನ್ನು ಸರಿಯಾಗಿ ಗುರುತಿಸಲು, ನಾವು ಟೇಬಲ್ ಇಂಡೆಕ್ಸ್ ಗಳನ್ನು ರಚಿಸುತ್ತೇವೆ. |
05:00 | ಆದರೆ ಇಂಡೆಕ್ಸ್ ಗಳಿಗೆ ಸಹ ಸಾಕಷ್ಟು ಮೆಮರಿ ಬೇಕು. |
05:04 | ಕೆಲವೊಮ್ಮೆ, ಟೇಬಲ್ ಡೇಟಾ ಡಿಲೀಟ್ ಮಾಡಿದಾಗ, ಡೇಟಾ ಸಂಪೂರ್ಣವಾಗಿ ಅಳಿಸಿಹೋಗುವುದಿಲ್ಲ. |
05:11 | ಅವು ಕೇವಲ ಟೇಬಲ್ ಇಂಡೆಕ್ಸ್ ಗಳಿಂದ ಸಂಪರ್ಕ ಕಡಿದುಕೊಳ್ಳುತ್ತವೆ. ಆದರೆ ಹೊಸ ಡೇಟಾಅನ್ನು ಅಲ್ಲಿ ಸೇರಿಸುವ ತನಕ ಆ ಸ್ಥಳವನ್ನು ಆಕ್ರಮಿಸಿಕೊಂಡಿರುತ್ತವೆ. |
05:24 | ಹೀಗಾಗಿ, ಶೇಖರಿಸಿರುವ ನೈಜ ಡೇಟಾ ಅಷ್ಟೊಂದು ಜಾಸ್ತಿ ಇಲ್ಲದಿದ್ದರೂ ಡೇಟಾಬೇಸ್ ನ ಗಾತ್ರವು ಮಾತ್ರ ಬೆಳೆಯುತ್ತದೆ. |
05:35 | ಬೇಸ್, ಇದರ ಮರುವ್ಯವಸ್ಥೆಗೆ ಡಿಫ್ರಾಗ್ಮೆಂಟಿಂಗ್ ಎಂಬ ಒಂದು ಉತ್ತಮ ವಿಧಾನವನ್ನು ಒದಗಿಸುತ್ತದೆ. |
05:42 | ಇದಕ್ಕಾಗಿ, ನಾವು ಡಿಫ್ರಾಗ್ಮೆಂಟ್ ಮಾಡಬೇಕಾದ ಡೇಟಾಬೇಸ್ ಅನ್ನು ತೆರೆಯುವೆವು. |
05:49 | ಲಿಬರ್ ಆಫಿಸ್ ಬೇಸ್ ವಿಂಡೋ ಒಳಗೆ ಇದ್ದಾಗ, ನಾವು Tools ಮೆನು ಮೇಲೆ, ನಂತರ SQL ಸಬ್ ಮೆನು ಮೇಲೆ ಕ್ಲಿಕ್ ಮಾಡುವೆವು. |
06:01 | SQL ವಿಂಡೋದಲ್ಲಿ, ಈ ಕೆಳಗಿನ ಕಮಾಂಡ್ ಅನ್ನು ಟೈಪ್ ಮಾಡುವೆವು. |
06:07 | CHECKPOINT DEFRAG |
06:10 | ಈ SQL ಕಮಾಂಡ್, ಬೇಸ್ ಡೇಟಾಬೇಸ್ ಫೈಲ್ ನಲ್ಲಿ ಅಗತ್ಯವಿಲ್ಲದ ಮಾಹಿತಿಯನ್ನು ತೆಗೆದುಹಾಕುತ್ತದೆ. |
06:19 | ಇದು ಮೊದಲಿಗೆ ಡೇಟಾಬೇಸ್ ಅನ್ನು ಮುಚ್ಚುತ್ತದೆ, ಡೇಟಾವನ್ನು ಮರುವ್ಯವಸ್ಥೆ ಮಾಡುತ್ತದೆ. ನಂತರ ಡೇಟಾಬೇಸ್ ಅನ್ನು ಮತ್ತೆ ತೆರೆಯುತ್ತದೆ. |
06:27 | ಈಗ, SQL ವಿಂಡೋದಲ್ಲಿ ನಾವು ಇನ್ನೊಂದು ಕಮಾಂಡ್ ಸಹ ಬಳಸಬಹುದು - |
06:33 | SHUTDOWN COMPACT. |
06:36 | ಇಲ್ಲಿರುವ ಒಂದೇ ವ್ಯತ್ಯಾಸ ಎಂದರೆ, ಈ ಕಮಾಂಡ್, ಡೇಟಾಬೇಸ್ ಅನ್ನು ಮತ್ತೆ ತೆರೆಯುವುದಿಲ್ಲ. |
06:43 | ಡಿಫ್ರಾಗ್ಮೆಂಟಿಂಗ್ ಕುರಿತು ಹೆಚ್ಚಿನ ಮಾಹಿತಿಗಾಗಿ, 'hsqldb.org' ನಲ್ಲಿ ಅಧ್ಯಾಯ 11 ಅನ್ನು ನೋಡಿ. |
06:54 | ಕೊನೆಯದಾಗಿ, ಡೇಟಾಬೇಸ್ ಅನ್ನು ಭದ್ರವಾಗಿಡಲು ಸಹಾಯ ಮಾಡುವ ಬ್ಯಾಕಪ್ ಗಳ ಕುರಿತು ನೋಡೋಣ. |
07:02 | ಕಂಪ್ಯೂಟರ್ ಸ್ಥಗಿತಗೊಳ್ಳುವಿಕೆ (crash) , ಹಾರ್ಡ್ ಡಿಸ್ಕ್ ಡ್ರೈವ್ ಕೆಟ್ಟು ಹೋಗುವಿಕೆ |
07:06 | ಮತ್ತು ವೈರಸ್ ನ ದಾಳಿಯ ಕಾರಣ ನಾವು ಡೇಟಾಬೇಸ್ ಅನ್ನು ಕಳೆದುಕೊಳ್ಳಬಹುದು. |
07:14 | ಡೇಟಾದ ನಷ್ಟವನ್ನು ಕಡಿಮೆ ಮಾಡಲು, ಲಿಬರ್ ಆಫಿಸ್ ಅತ್ಯುತ್ತಮವಾದ ರಿಕವರಿ ವಿಜಾರ್ಡ್ ಅನ್ನು ಹೊಂದಿದೆ. |
07:20 | ಆದರೆ ಡೇಟಾಬೇಸ್ ನ ನಿಯತಕಾಲಿಕ ಬ್ಯಾಕ್-ಅಪ್ ಇಡುವುದು ಜಾಣತನವಾಗಿದೆ. |
07:26 | ಬ್ಯಾಕಪ್ ಮಾಡುವುದು ತುಂಬಾ ಸರಳವಾದ ಕೆಲಸ. |
07:30 | ನಾವು ಕೇವಲ ಡೇಟಾಬೇಸ್ ಫೈಲ್ ನ ಕಾಪಿಯನ್ನು ಮಾಡಬೇಕು. |
07:34 | ಇದನ್ನು ಬಾಹ್ಯ ಹಾರ್ಡ್- ಡಿಸ್ಕ್ ಗಳು, CD ಗಳು, DVD ಗಳು ಅಥವಾ ಫ್ಲಾಶ್-ಡ್ರೈವ್ ನಂತಹ ಸೆಕೆಂಡರಿ ಮೀಡಿಯಾ ಸಂಗ್ರಹಗಳಲ್ಲಿ ಶೇಖರಿಸಿ ಇಡಬೇಕು. |
07:47 | ಲೈಬ್ರರಿ ಡೇಟಾಬೇಸ್ ನ ಬ್ಯಾಕಪ್ ಪಡೆಯಲು, 'Library.odb' ಫೈಲ್ ಅನ್ನು ಎಲ್ಲಿ ಸೇವ್ ಮಾಡಲಾಗಿದೆ ಎಂಬುದನ್ನು ಪತ್ತೆ ಹಚ್ಚಿ. |
07:57 | ನಂತರ, ಫೈಲ್ ಅನ್ನು ಬೇರೆ ಹಾರ್ಡ್-ಡಿಸ್ಕ್ ಅಥವಾ ಫ್ಲಾಶ್-ಡ್ರೈವ್ ಗೆ ಕಾಪಿ ಮತ್ತು ಪೇಸ್ಟ್ ಮಾಡಿ. |
08:08 | ಇದೊಂದೇ ಕಾಪಿ -ಪೇಸ್ಟ್ ಕಾರ್ಯವು, ಇಡೀ ಡೇಟಾಬೇಸ್ ನಲ್ಲಿಯ ಎಲ್ಲಾ ಡೇಟಾ ರಚನೆಗಳು, ಡೇಟಾ, |
08:17 | ಫಾರ್ಮ್ ಗಳು, ಕ್ವೆರಿಗಳು ಮತ್ತು ರಿಪೋರ್ಟ್ ಗಳೊಂದಿಗೆ ಬ್ಯಾಕಪ್ ಅನ್ನು ಮಾಡುತ್ತದೆ. |
08:24 | ನಾವು ಎಷ್ಟು ಬಾರಿ ಬ್ಯಾಕಪ್ ತೆಗೆದುಕೊಳ್ಳಬೇಕು? |
08:28 | ಇದು, ಡೇಟಾಬೇಸ್, ತನ್ನ ಡೇಟಾ ಮತ್ತು ರಚನೆಯಲ್ಲಿ ಎಷ್ಟು ಬಾರಿ ಬದಲಾವಣೆ ಹೊಂದುತ್ತದೆ, |
08:37 | ಅಂದರೆ, ನಾವು ಎಷ್ಟು ಬಾರಿ ಡೇಟಾವನ್ನು ಸೇರಿಸುತ್ತೇವೆ, ಅಪ್ಡೇಟ್ ಮಾಡುತ್ತೇವೆ ಅಥವಾ ಅಳಿಸುತ್ತೇವೆ |
08:42 | ಮತ್ತು ಎಷ್ಟು ಬಾರಿ ಟೇಬಲ್ ರಚನೆಗಳು, ಫಾರ್ಮ್ ಗಳು, ಕ್ವೆರಿಗಳು ಅಥವಾ ರಿಪೋರ್ಟ್ ಗಳನ್ನು ಮಾರ್ಪಡಿಸುತ್ತೇವೆ ಎನ್ನುವುದನ್ನು ಅವಲಂಬಿಸಿದೆ. |
08:49 | ಹೀಗೆ ನಾವು, ಡೇಟಾಬೇಸ್ ಬಳಕೆಯ ಆವರ್ತನವನ್ನು ಆಧರಿಸಿ, ಪ್ರತಿ ದಿನ ಅಥವಾ ಸಾಪ್ತಾಹಿಕವಾಗಿ ಬ್ಯಾಕಪ್ ಮಾಡಬಹುದು. |
08:58 | ಇಲ್ಲೊಂದು ಅಸೈನ್ ಮೆಂಟ್ ಇದೆ - |
09:00 | Address ಮತ್ತು City ಈ ಎರಡು ಹೊಸ ಕಾಲಂಗಳನ್ನು ಸೇರಿಸಲು Members ಟೇಬಲ್ ಅನ್ನು ಮಾರ್ಪಡಿಸಿ. |
09:08 | ಎರಡೂ ಕಾಲಂಗಳು TEXT ಡೇಟಾ-ಟೈಪ್ ಅನ್ನು ಹೊಂದಿರಲಿ. |
09:13 | ಅಲ್ಲದೆ, Members ಟೇಬಲ್ ಅನ್ನು ಡೇಟಾ ಎಂಟ್ರಿ ಮೋಡ್ ನಲ್ಲಿ ತೆರೆಯಿರಿ ಮತ್ತು Address ಮತ್ತು City ಗಾಗಿ ಕೆಲವು ಡೇಟಾಅನ್ನು ಸೇರಿಸಿ. |
09:23 | ನಂತರ, ‘ಲೈಬ್ರರಿ ಡೇಟಾಬೇಸ್’ ಅನ್ನು ಡಿಫ್ರಾಗ್ಮೆಂಟ್ ಮಾಡಿ. |
09:27 | ಕೊನೆಯದಾಗಿ, ಲೈಬ್ರರಿ ಡೇಟಾಬೇಸ್ ನ ಬ್ಯಾಕಪ್ ಪಡೆಯಿರಿ. ಇದನ್ನು, ಫ್ಲಾಶ್-ಡ್ರೈವ್ ಅಥವಾ ಇನ್ನೊಂದು ಹಾರ್ಡ್-ಡಿಸ್ಕ್ ಲಭ್ಯವಿದ್ದರೆ ಅದರಲ್ಲಿ ಸೇವ್ ಮಾಡಿ. |
09:38 | ಇದರೊಂದಿಗೆ ನಾವು, Database Maintenance in LibreOffice Base ಎಂಬ ಟ್ಯುಟೋರಿಯಲ್ ನ ಕೊನೆಗೆ ಬಂದಿದ್ದೇವೆ. |
09:45 | ಸಂಕ್ಷಿಪ್ತವಾಗಿ ನಾವು: |
09:48 | ಡೇಟಾಬೇಸ್ ನಿರ್ವಹಣೆ, |
09:50 | ಡೇಟಾಬೇಸ್ ರಚನೆ ಮಾರ್ಪಡಿಸುವುದು, |
09:54 | ಡೇಟಾಬೇಸ್ ಡಿಫ್ರಾಗ್ಮೆಂಟ್ ಮಾಡುವುದು |
09:56 | ಮತ್ತು ಬ್ಯಾಕಪ್ ಪಡೆಯುವುದನ್ನು ಕಲಿತೆವು. |
09:58 | ‘ಸ್ಪೋಕನ್ ಟ್ಯುಟೋರಿಯಲ್’ ಪ್ರೊಜೆಕ್ಟ್, |
10:03 | ರಾಷ್ಟ್ರೀಯ ಸಾಕ್ಷರತಾ ಮಿಷನ್, ICT, MHRD ಮೂಲಕ ಭಾರತ ಸರ್ಕಾರದ ನೆರವು ಪಡೆದಿದೆ. |
10:10 | ಈ ಪ್ರೊಜೆಕ್ಟ್ ಅನ್ನು ಸಂಯೋಜಿಸಿದವರು: |
10:15 | ಕೆಳಗಿನ ಲಿಂಕ್ ನಲ್ಲಿ ಈ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಿದೆ. |
10:20 | ಈ ಸ್ಕ್ರಿಪ್ಟ್ ನ ಅನುವಾದಕರು ಮಂಗಳೂರಿನಿಂದ ಮೆಲ್ವಿನ್, ಮತ್ತು ಧ್ವನಿ ---------- .
ಧನ್ಯವಾದಗಳು. |