LibreOffice-Suite-Base/C4/Database-Maintenance/Kannada

From Script | Spoken-Tutorial
Jump to: navigation, search
Time Narration
00:00 ಲಿಬರ್ ಆಫಿಸ್ ಬೇಸ್ ನ ಸ್ಪೋಕನ್ ಟ್ಯುಟೋರಿಯಲ್ ಗೆ ಸ್ವಾಗತ.
00:04 ಈ ಟ್ಯುಟೋರಿಯಲ್ ನಲ್ಲಿ ನಾವು:

ಡೇಟಾಬೇಸ್ ನ ನಿರ್ವಹಣೆ, ಡೇಟಾಬೇಸ್ ನ ರಚನೆಯ ಮಾರ್ಪಾಡು, ಡೇಟಾಬೇಸ್ ಅನ್ನು ಡಿಫ್ರಾಗ್ಮೆಂಟ್ ಮಾಡುವುದು ಮತ್ತು ಬ್ಯಾಕಪ್ ಗಳನ್ನು ತೆಗೆದುಕೊಳ್ಳುವುದು ಇವುಗಳ ಬಗ್ಗೆ ಕಲಿಯಲಿದ್ದೇವೆ.

00:19 ಡೇಟಾಬೇಸ್ ನಿರ್ವಹಣೆ -
00:21 ಬೇಸ್ ಡೇಟಾಬೇಸ್ ನ ಪೂರ್ಣ ಅವಧಿಯಲ್ಲಿ, ಅದನ್ನು ಪರಿಷ್ಕೃತವಾಗಿ, ವಿಶ್ವಾಸಾರ್ಹ ಮತ್ತು ಸುರಕ್ಷಿತವಾಗಿ ಇಡಲು, ನಾವು ಕ್ರಮಗಳನ್ನು ಕೈಗೊಳ್ಳಬೇಕು.
00:31 ಇದು ಡೇಟಾ ಅನ್ನು ಇಡಲು ಅಗತ್ಯವಿರುವಂತೆ, ಡೇಟಾ ರಚನೆಯನ್ನು ಮಾರ್ಪಡಿಸುವುದು, ಮತ್ತು ಫಾರ್ಮ್ ಗಳನ್ನು ಅಪ್ಡೇಟ್ ಮಾಡುವುದನ್ನು ಒಳಗೊಂಡಿದೆ.
00:41 ನಾವೀಗ, ನಮ್ಮ ಹಿಂದಿನ ಟ್ಯುಟೋರಿಯಲ್ ನಲ್ಲಿ ರಚಿಸಿದ, Library ಉದಾಹರಣೆಯ ಡೇಟಾಬೇಸ್ ಅನ್ನು ಪರಿಗಣಿಸೋಣ.
00:48 ಈ ಡೇಟಾಬೇಸ್ ಆರಂಭದಲ್ಲಿ ಪುಸ್ತಕಗಳು, ಸದಸ್ಯರು ಮತ್ತು ನೀಡಿರುವ ಪುಸ್ತಕಗಳ ಕುರಿತು ಟೇಬಲ್ ಗಳನ್ನು ಹೊಂದಿದ್ದವು.
00:55 ಮತ್ತು, ಈ ಡೇಟಾಬೇಸ್ ರಚನೆಯನ್ನು ಆಧರಿಸಿ ನಾವು ನಮ್ಮ ಮಾದರಿ ಫಾರ್ಮ್ ಗಳು, ಕ್ವೆರಿಗಳು ಮತ್ತು ರಿಪೋರ್ಟ್ ಗಳನ್ನು ರಚಿಸಿದೆವು.
01:03 ನಂತರ, DVDಗಳು ಮತ್ತು CDಗಳು ಮುಂತಾದ ಮೀಡಿಯಾಗಳನ್ನು ಹೊಂದಲು ಲೈಬ್ರರಿಯನ್ನು ವಿಸ್ತರಿಸಲಾಯಿತು.
01:11 ಹೀಗೆ, ರಚನೆಯನ್ನು ಪರಿಷ್ಕರಿಸುವುದಕ್ಕಾಗಿ ನಾವು ಲೈಬ್ರರಿ ಡೇಟಾಬೇಸ್ ಅನ್ನು ಮಾರ್ಪಾಡಿಸಿದೆವು.
01:16 ಇದಕ್ಕಾಗಿ ನಾವು Media ಎಂಬ ಇನ್ನೊಂದು ಟೇಬಲ್ ಅನ್ನು ಸೇರಿಸಿದೆವು.
01:21 ಈ ಹೊಸ Media ಟೇಬಲ್ ನಲ್ಲಿ, DVD ಮತ್ತು CDಯ ಮಾಹಿತಿಯನ್ನು ಸಂಗ್ರಹಿಸಿದೆವು.
01:28 ಈ ರೀತಿ, ಅಗತ್ಯವಿದ್ದಾಗ ನಾವು ಬದಲಾವಣೆಗಳನ್ನು ಮಾಡಿದ ಕಾರಣ ನಮ್ಮ ಡೇಟಾಬೇಸ್ ಹೆಚ್ಚು ಬಳಕೆಯೋಗ್ಯ ಮತ್ತು ಪರಿಷ್ಕೃತವಾಯಿತು.
01:39 ಇವುಗಳನ್ನು ಸುಲಭವಾಗಿ ಬಳಸುವಂತಾಗಲು, ಟೇಬಲ್ ಗಳ ಬದಲಾವಣೆಗಳ ಜೊತೆಗೆ ನಾವು ಫಾರ್ಮ್ ಗಳನ್ನು ಸಹ ಮಾರ್ಪಾಡಿಸಬೇಕಾಗುತ್ತದೆ.
01:47 ಅಥವಾ ಹೊಸ ಟೇಬಲ್ ರಚನೆಗಳಿಗೆ ಅವಕಾಶ ಮಾಡಿ ಕೊಡಲು ನಾವು ಹೊಸ ಫಾರ್ಮ್ ಗಳನ್ನು ರಚಿಸಬಹುದು.
01:54 ಉದಾಹರಣೆಗೆ, ಪುಸ್ತಕಗಳ ಡೇಟಾವನ್ನು ನಮೂದಿಸಲು ನಾವು ಒಂದು ಫಾರ್ಮ್ ಹೊಂದಿದ್ದಲ್ಲಿ, DVD ಮತ್ತು CDಗಳ ಡೇಟಾ ನಮೂದಿಗೆ ಅವಕಾಶ ನೀಡುವುದಕ್ಕಾಗಿ ನಾವು ಇದನ್ನು ಮಾರ್ಪಾಡಿಸಬಹುದು.
02:08 ಪುಸ್ತಕಗಳು, DVDಗಳು ಅಥವಾ CDಗಳು ಮುಂತಾದ ಮೀಡಿಯಾದ ಪ್ರಕಾರ ಆರಿಸಲು ನಾವು ಆಯ್ಕೆಯ ಬಟನ್ ಗಳನ್ನು ಸೇರಿಸಬಹುದು.
02:19 ಅಥವಾ, ಕೇವಲ DVD ಮತ್ತು CD ಮೀಡಿಯಾಗಳಿಗಾಗಿ ಡೇಟಾ ನಮೂದಿಸಲು ನಾವು ಹೊಸ ಫಾರ್ಮ್ ಅನ್ನು ಸೇರಿಸಬಹುದು.
02:28 ಇದೇ ರೀತಿ, ಬದಲಾಯಿಸಿದ ಡೇಟಾ ರಚನೆಯನ್ನು ಆಧರಿಸಿ ನಾವು ಕ್ವೆರಿಗಳು ಮತ್ತು ರಿಪೋರ್ಟ್ ಗಳನ್ನು ಮಾರ್ಪಾಡಿಸಬೇಕು ಅಥವಾ ಅವುಗಳನ್ನು ಹೊಸತಾಗಿ ಸೇರಿಸಬೇಕು.
02:39 ಕೆಲವೊಮ್ಮೆ ನಾವು ಈಗ ಇರುವ ಟೇಬಲ್ ರಚನೆಗಳನ್ನು ಮಾರ್ಪಾಡಿಸಬೇಕಾಗುತ್ತದೆ.
02:45 ಉದಾಹರಣೆಗೆ, ಲೈಬ್ರರಿಯ ಎಲ್ಲಾ ಸದಸ್ಯರನ್ನು ಪಟ್ಟಿ ಮಾಡುವ Members ಟೇಬಲ್ ಅನ್ನು ನಾವು ಪರಿಗಣಿಸೋಣ.
02:53 ಇದು ಸದ್ಯಕ್ಕೆ ಅವರ ಹೆಸರು ಮತ್ತು ಫೋನ್ ಸಂಖ್ಯೆಗಳನ್ನು ಮಾತ್ರ ಶೇಖರಿಸುತ್ತದೆ.
02:58 ಈಗ, ನಾವು ಅವರ ವಿಳಾಸ ಮತ್ತು ನಗರದ ಮಾಹಿತಿಯನ್ನು ಶೇಖರಿಸಬೇಕಾದರೆ, ನಾವು Members ಟೇಬಲ್ ರಚನೆಯನ್ನು ಮಾರ್ಪಾಡಿಸಬೇಕು.
03:09 ಇದಕ್ಕಾಗಿ ನಾವು, ALTER TABLE Members ADD Address TEXT, ADD City TEXT ನಂತಹ
03:15 SQL ಸಿಂಟಾಕ್ಸ್ ಅನ್ನು ಬಳಸಬಹುದು.
03:22 ALTER TABLE ಸ್ಟೇಟ್ಮೆಂಟ್, ಟೇಬಲ್ ರಚನೆಯನ್ನು ಬದಲಾಯಿಸಿ,
03:30 ಟೆಕ್ಸ್ಟ್ ಡೇಟಾವನ್ನು ಹೊಂದಿರುವ Address ಮತ್ತು City ಎಂಬ ಎರಡು ಹೊಸ ಕಾಲಂಗಳನ್ನು ಸೇರಿಸುತ್ತದೆ.
03:36 ಟೇಬಲ್ ಸ್ಟ್ರಕ್ಚರ್ ಗಳ ರಚನೆ ಮತ್ತು ಮಾರ್ಪಡಿಸುವ ಕುರಿತು ಹೆಚ್ಚಿನ ಮಾಹಿತಿಗಾಗಿ 'hsqldb.org/' ವೆಬ್ ಸೈಟ್ ಗೆ ಭೇಟಿ ನೀಡಿ.
03:47 ಸ್ಕ್ರೀನ್ ನಲ್ಲಿ ತೋರಿಸಿರುವ 'url' ಅಡ್ರೆಸ್ ಬಳಸಿ.
03:52 ನಂತರ, ಬೇಸ್ ಡೇಟಾಬೇಸ್ ಅನ್ನು ಬಳಕೆಗಾಗಿ ನಾವು ಹೇಗೆ ವಿಶ್ವಾಸಾರ್ಹವಾಗಿ ಇಡಬಹುದು ಎಂಬುದನ್ನು ನೋಡೋಣ.
03:59 ಕೆಲವೊಮ್ಮೆ, ತುಲನಾತ್ಮಕವಾಗಿ ಸಣ್ಣ ಸಂಖ್ಯೆಯ ರೆಕಾರ್ಡ್ ಗಳನ್ನು ಶೇಖರಿಸಲು, ಬೇಸ್ ಗೆ ದೊಡ್ಡ ಪ್ರಮಾಣದ ಮೆಮರಿ ಬೇಕು.
04:08 ಏಕೆಂದರೆ, ಡೇಟಾಬೇಸ್ ಗೆ ಅಗತ್ಯವಿರುವ ನಿರ್ದಿಷ್ಟ ಪ್ರಮಾಣದ ಮೆಮರಿಯನ್ನು ಬೇಸ್ ನಿರೀಕ್ಷಿಸುತ್ತದೆ.
04:17 ನಾವು ಟೇಬಲ್ ಗಳಲ್ಲಿ ನೋಡುವ ಡೇಟಾ, ಅದೇ ರೀತಿಯ ವ್ಯವಸ್ಥಿತ ಪ್ರಕಾರದಲ್ಲಿ ಸ್ಟೋರ್ ಆಗಿರುವುದಿಲ್ಲ.
04:26 ಏಕೆಂದರೆ, ನಾವು ಟೇಬಲ್ ಗಳಿಗೆ ಡೇಟಾವನ್ನು ಬೇರೆ ಬೇರೆ ಸಮಯದಲ್ಲಿ ಸೇರಿಸುವುದರಿಂದ, ಅವುಗಳ ಶೇಖರಣೆಯು ಒಂದು ನಿರ್ದಿಷ್ಟ ಕ್ರಮದಲ್ಲಿ ಇರುವುದಿಲ್ಲ.
04:36 ಪುಸ್ತಕಗಳ ಲೈಬ್ರರಿಗೆ ನಾವು ಕ್ಯಾಟಲಾಗ್ ಬಳಸಿದಂತೆ, ನಾವು ಟೇಬಲ್ ಡೇಟಾಗಾಗಿ ಇಂಡೆಕ್ಸ್ ಗಳನ್ನು ಬಳಸಬಹುದು.
04:45 ಕ್ಯಾಟಲಾಗ್, ಪುಸ್ತಕಗಳನ್ನು ಪಟ್ಟಿ ಮಾಡುತ್ತದೆ. ಅಲ್ಲದೆ, ಅವುಗಳು ಎಲ್ಲಿವೆ ಎಂಬುದನ್ನು ಸಹ ಶೇಖರಿಸುತ್ತದೆ.
04:53 ಇದೇ ರೀತಿ, ಡೇಟಾವನ್ನು ಸರಿಯಾಗಿ ಗುರುತಿಸಲು, ನಾವು ಟೇಬಲ್ ಇಂಡೆಕ್ಸ್ ಗಳನ್ನು ರಚಿಸುತ್ತೇವೆ.
05:00 ಆದರೆ ಇಂಡೆಕ್ಸ್ ಗಳಿಗೆ ಸಹ ಸಾಕಷ್ಟು ಮೆಮರಿ ಬೇಕು.
05:04 ಕೆಲವೊಮ್ಮೆ, ಟೇಬಲ್ ಡೇಟಾ ಡಿಲೀಟ್ ಮಾಡಿದಾಗ, ಡೇಟಾ ಸಂಪೂರ್ಣವಾಗಿ ಅಳಿಸಿಹೋಗುವುದಿಲ್ಲ.
05:11 ಅವು ಕೇವಲ ಟೇಬಲ್ ಇಂಡೆಕ್ಸ್ ಗಳಿಂದ ಸಂಪರ್ಕ ಕಡಿದುಕೊಳ್ಳುತ್ತವೆ. ಆದರೆ ಹೊಸ ಡೇಟಾಅನ್ನು ಅಲ್ಲಿ ಸೇರಿಸುವ ತನಕ ಆ ಸ್ಥಳವನ್ನು ಆಕ್ರಮಿಸಿಕೊಂಡಿರುತ್ತವೆ.
05:24 ಹೀಗಾಗಿ, ಶೇಖರಿಸಿರುವ ನೈಜ ಡೇಟಾ ಅಷ್ಟೊಂದು ಜಾಸ್ತಿ ಇಲ್ಲದಿದ್ದರೂ ಡೇಟಾಬೇಸ್ ನ ಗಾತ್ರವು ಮಾತ್ರ ಬೆಳೆಯುತ್ತದೆ.
05:35 ಬೇಸ್, ಇದರ ಮರುವ್ಯವಸ್ಥೆಗೆ ಡಿಫ್ರಾಗ್ಮೆಂಟಿಂಗ್ ಎಂಬ ಒಂದು ಉತ್ತಮ ವಿಧಾನವನ್ನು ಒದಗಿಸುತ್ತದೆ.
05:42 ಇದಕ್ಕಾಗಿ, ನಾವು ಡಿಫ್ರಾಗ್ಮೆಂಟ್ ಮಾಡಬೇಕಾದ ಡೇಟಾಬೇಸ್ ಅನ್ನು ತೆರೆಯುವೆವು.
05:49 ಲಿಬರ್ ಆಫಿಸ್ ಬೇಸ್ ವಿಂಡೋ ಒಳಗೆ ಇದ್ದಾಗ, ನಾವು Tools ಮೆನು ಮೇಲೆ, ನಂತರ SQL ಸಬ್ ಮೆನು ಮೇಲೆ ಕ್ಲಿಕ್ ಮಾಡುವೆವು.
06:01 SQL ವಿಂಡೋದಲ್ಲಿ, ಈ ಕೆಳಗಿನ ಕಮಾಂಡ್ ಅನ್ನು ಟೈಪ್ ಮಾಡುವೆವು.
06:07 CHECKPOINT DEFRAG
06:10 ಈ SQL ಕಮಾಂಡ್, ಬೇಸ್ ಡೇಟಾಬೇಸ್ ಫೈಲ್ ನಲ್ಲಿ ಅಗತ್ಯವಿಲ್ಲದ ಮಾಹಿತಿಯನ್ನು ತೆಗೆದುಹಾಕುತ್ತದೆ.
06:19 ಇದು ಮೊದಲಿಗೆ ಡೇಟಾಬೇಸ್ ಅನ್ನು ಮುಚ್ಚುತ್ತದೆ, ಡೇಟಾವನ್ನು ಮರುವ್ಯವಸ್ಥೆ ಮಾಡುತ್ತದೆ. ನಂತರ ಡೇಟಾಬೇಸ್ ಅನ್ನು ಮತ್ತೆ ತೆರೆಯುತ್ತದೆ.
06:27 ಈಗ, SQL ವಿಂಡೋದಲ್ಲಿ ನಾವು ಇನ್ನೊಂದು ಕಮಾಂಡ್ ಸಹ ಬಳಸಬಹುದು -
06:33 SHUTDOWN COMPACT.
06:36 ಇಲ್ಲಿರುವ ಒಂದೇ ವ್ಯತ್ಯಾಸ ಎಂದರೆ, ಈ ಕಮಾಂಡ್, ಡೇಟಾಬೇಸ್ ಅನ್ನು ಮತ್ತೆ ತೆರೆಯುವುದಿಲ್ಲ.
06:43 ಡಿಫ್ರಾಗ್ಮೆಂಟಿಂಗ್ ಕುರಿತು ಹೆಚ್ಚಿನ ಮಾಹಿತಿಗಾಗಿ, 'hsqldb.org' ನಲ್ಲಿ ಅಧ್ಯಾಯ 11 ಅನ್ನು ನೋಡಿ.
06:54 ಕೊನೆಯದಾಗಿ, ಡೇಟಾಬೇಸ್ ಅನ್ನು ಭದ್ರವಾಗಿಡಲು ಸಹಾಯ ಮಾಡುವ ಬ್ಯಾಕಪ್ ಗಳ ಕುರಿತು ನೋಡೋಣ.
07:02 ಕಂಪ್ಯೂಟರ್ ಸ್ಥಗಿತಗೊಳ್ಳುವಿಕೆ (crash) , ಹಾರ್ಡ್ ಡಿಸ್ಕ್ ಡ್ರೈವ್ ಕೆಟ್ಟು ಹೋಗುವಿಕೆ
07:06 ಮತ್ತು ವೈರಸ್ ನ ದಾಳಿಯ ಕಾರಣ ನಾವು ಡೇಟಾಬೇಸ್ ಅನ್ನು ಕಳೆದುಕೊಳ್ಳಬಹುದು.
07:14 ಡೇಟಾದ ನಷ್ಟವನ್ನು ಕಡಿಮೆ ಮಾಡಲು, ಲಿಬರ್ ಆಫಿಸ್ ಅತ್ಯುತ್ತಮವಾದ ರಿಕವರಿ ವಿಜಾರ್ಡ್ ಅನ್ನು ಹೊಂದಿದೆ.
07:20 ಆದರೆ ಡೇಟಾಬೇಸ್ ನ ನಿಯತಕಾಲಿಕ ಬ್ಯಾಕ್-ಅಪ್ ಇಡುವುದು ಜಾಣತನವಾಗಿದೆ.
07:26 ಬ್ಯಾಕಪ್ ಮಾಡುವುದು ತುಂಬಾ ಸರಳವಾದ ಕೆಲಸ.
07:30 ನಾವು ಕೇವಲ ಡೇಟಾಬೇಸ್ ಫೈಲ್ ನ ಕಾಪಿಯನ್ನು ಮಾಡಬೇಕು.
07:34 ಇದನ್ನು ಬಾಹ್ಯ ಹಾರ್ಡ್- ಡಿಸ್ಕ್ ಗಳು, CD ಗಳು, DVD ಗಳು ಅಥವಾ ಫ್ಲಾಶ್-ಡ್ರೈವ್ ನಂತಹ ಸೆಕೆಂಡರಿ ಮೀಡಿಯಾ ಸಂಗ್ರಹಗಳಲ್ಲಿ ಶೇಖರಿಸಿ ಇಡಬೇಕು.
07:47 ಲೈಬ್ರರಿ ಡೇಟಾಬೇಸ್ ನ ಬ್ಯಾಕಪ್ ಪಡೆಯಲು, 'Library.odb' ಫೈಲ್ ಅನ್ನು ಎಲ್ಲಿ ಸೇವ್ ಮಾಡಲಾಗಿದೆ ಎಂಬುದನ್ನು ಪತ್ತೆ ಹಚ್ಚಿ.
07:57 ನಂತರ, ಫೈಲ್ ಅನ್ನು ಬೇರೆ ಹಾರ್ಡ್-ಡಿಸ್ಕ್ ಅಥವಾ ಫ್ಲಾಶ್-ಡ್ರೈವ್ ಗೆ ಕಾಪಿ ಮತ್ತು ಪೇಸ್ಟ್ ಮಾಡಿ.
08:08 ಇದೊಂದೇ ಕಾಪಿ -ಪೇಸ್ಟ್ ಕಾರ್ಯವು, ಇಡೀ ಡೇಟಾಬೇಸ್ ನಲ್ಲಿಯ ಎಲ್ಲಾ ಡೇಟಾ ರಚನೆಗಳು, ಡೇಟಾ,
08:17 ಫಾರ್ಮ್ ಗಳು, ಕ್ವೆರಿಗಳು ಮತ್ತು ರಿಪೋರ್ಟ್ ಗಳೊಂದಿಗೆ ಬ್ಯಾಕಪ್ ಅನ್ನು ಮಾಡುತ್ತದೆ.
08:24 ನಾವು ಎಷ್ಟು ಬಾರಿ ಬ್ಯಾಕಪ್ ತೆಗೆದುಕೊಳ್ಳಬೇಕು?
08:28 ಇದು, ಡೇಟಾಬೇಸ್, ತನ್ನ ಡೇಟಾ ಮತ್ತು ರಚನೆಯಲ್ಲಿ ಎಷ್ಟು ಬಾರಿ ಬದಲಾವಣೆ ಹೊಂದುತ್ತದೆ,
08:37 ಅಂದರೆ, ನಾವು ಎಷ್ಟು ಬಾರಿ ಡೇಟಾವನ್ನು ಸೇರಿಸುತ್ತೇವೆ, ಅಪ್ಡೇಟ್ ಮಾಡುತ್ತೇವೆ ಅಥವಾ ಅಳಿಸುತ್ತೇವೆ
08:42 ಮತ್ತು ಎಷ್ಟು ಬಾರಿ ಟೇಬಲ್ ರಚನೆಗಳು, ಫಾರ್ಮ್ ಗಳು, ಕ್ವೆರಿಗಳು ಅಥವಾ ರಿಪೋರ್ಟ್ ಗಳನ್ನು ಮಾರ್ಪಡಿಸುತ್ತೇವೆ ಎನ್ನುವುದನ್ನು ಅವಲಂಬಿಸಿದೆ.
08:49 ಹೀಗೆ ನಾವು, ಡೇಟಾಬೇಸ್ ಬಳಕೆಯ ಆವರ್ತನವನ್ನು ಆಧರಿಸಿ, ಪ್ರತಿ ದಿನ ಅಥವಾ ಸಾಪ್ತಾಹಿಕವಾಗಿ ಬ್ಯಾಕಪ್ ಮಾಡಬಹುದು.
08:58 ಇಲ್ಲೊಂದು ಅಸೈನ್ ಮೆಂಟ್ ಇದೆ -
09:00 Address ಮತ್ತು City ಈ ಎರಡು ಹೊಸ ಕಾಲಂಗಳನ್ನು ಸೇರಿಸಲು Members ಟೇಬಲ್ ಅನ್ನು ಮಾರ್ಪಡಿಸಿ.
09:08 ಎರಡೂ ಕಾಲಂಗಳು TEXT ಡೇಟಾ-ಟೈಪ್ ಅನ್ನು ಹೊಂದಿರಲಿ.
09:13 ಅಲ್ಲದೆ, Members ಟೇಬಲ್ ಅನ್ನು ಡೇಟಾ ಎಂಟ್ರಿ ಮೋಡ್ ನಲ್ಲಿ ತೆರೆಯಿರಿ ಮತ್ತು Address ಮತ್ತು City ಗಾಗಿ ಕೆಲವು ಡೇಟಾಅನ್ನು ಸೇರಿಸಿ.
09:23 ನಂತರ, ‘ಲೈಬ್ರರಿ ಡೇಟಾಬೇಸ್’ ಅನ್ನು ಡಿಫ್ರಾಗ್ಮೆಂಟ್ ಮಾಡಿ.
09:27 ಕೊನೆಯದಾಗಿ, ಲೈಬ್ರರಿ ಡೇಟಾಬೇಸ್ ನ ಬ್ಯಾಕಪ್ ಪಡೆಯಿರಿ. ಇದನ್ನು, ಫ್ಲಾಶ್-ಡ್ರೈವ್ ಅಥವಾ ಇನ್ನೊಂದು ಹಾರ್ಡ್-ಡಿಸ್ಕ್ ಲಭ್ಯವಿದ್ದರೆ ಅದರಲ್ಲಿ ಸೇವ್ ಮಾಡಿ.
09:38 ಇದರೊಂದಿಗೆ ನಾವು, Database Maintenance in LibreOffice Base ಎಂಬ ಟ್ಯುಟೋರಿಯಲ್ ನ ಕೊನೆಗೆ ಬಂದಿದ್ದೇವೆ.
09:45 ಸಂಕ್ಷಿಪ್ತವಾಗಿ ನಾವು:
09:48 ಡೇಟಾಬೇಸ್ ನಿರ್ವಹಣೆ,
09:50 ಡೇಟಾಬೇಸ್ ರಚನೆ ಮಾರ್ಪಡಿಸುವುದು,
09:54 ಡೇಟಾಬೇಸ್ ಡಿಫ್ರಾಗ್ಮೆಂಟ್ ಮಾಡುವುದು
09:56 ಮತ್ತು ಬ್ಯಾಕಪ್ ಪಡೆಯುವುದನ್ನು ಕಲಿತೆವು.
09:58 ‘ಸ್ಪೋಕನ್ ಟ್ಯುಟೋರಿಯಲ್’ ಪ್ರೊಜೆಕ್ಟ್,
10:03 ರಾಷ್ಟ್ರೀಯ ಸಾಕ್ಷರತಾ ಮಿಷನ್, ICT, MHRD ಮೂಲಕ ಭಾರತ ಸರ್ಕಾರದ ನೆರವು ಪಡೆದಿದೆ.
10:10 ಈ ಪ್ರೊಜೆಕ್ಟ್ ಅನ್ನು ಸಂಯೋಜಿಸಿದವರು:

http://spoken-tutorial.org.

10:15 ಕೆಳಗಿನ ಲಿಂಕ್ ನಲ್ಲಿ ಈ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಿದೆ.
10:20 ಈ ಸ್ಕ್ರಿಪ್ಟ್ ನ ಅನುವಾದಕರು ಮಂಗಳೂರಿನಿಂದ ಮೆಲ್ವಿನ್, ಮತ್ತು ಧ್ವನಿ ಶ್ರೀ ನವೀನ್ ಭಟ್, ಉಪ್ಪಿನಪಟ್ಟಣ.

ಧನ್ಯವಾದಗಳು.

Contributors and Content Editors

Sandhya.np14