Moodle-Learning-Management-System/C2/Teachers-Dashboard-in-Moodle/Kannada
Time | Narration |
00:01 | Teacher’s dashboard in Moodle ಎಂಬ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ. |
00:07 | ಈ ಟ್ಯುಟೋರಿಯಲ್ ನಲ್ಲಿ ನಾವು, Moodle ಕೋರ್ಸ್ ನ ಓವರ್ ವ್ಯೂ ದ ಒಂದು ಮಾದರಿ, |
00:14 | teachers’ dashboard ,
ಪ್ರೊಫೈಲ್ ಅನ್ನು ಎಡಿಟ್ ಮಾಡುವುದು ಮತ್ತು preferences ಅನ್ನು ಎಡಿಟ್ ಮಾಡುವುದು ಇವುಗಳ ಬಗ್ಗೆ ಕಲಿಯುವೆವು. |
00:25 | ಕೊನೆಗೆ, ಮೂಡಲ್ ನಲ್ಲಿ ನಮ್ಮ ಕೋರ್ಸ್ ಗೆ ಸಂಬಂಧಿಸಿದ ಕೆಲವು ವಿವರಗಳನ್ನು ಸೇರಿಸಲು ಕಲಿಯುವೆವು. |
00:33 | ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು, ನಾನು:
Ubuntu Linux OS 16.04, XAMPP 5.6.30 ಮೂಲಕ ಪಡೆದ Apache, MariaDB ಮತ್ತು PHP, Moodle 3.3 ಮತ್ತು Firefox ವೆಬ್-ಬ್ರೌಸರ್ ಇವುಗಳ ನ್ನು ಬಳಸಿದ್ದೇನೆ. ನಿಮ್ಮ ಆಯ್ಕೆಯ ಯಾವುದೇ ವೆಬ್ ಬ್ರೌಸರ್ ಅನ್ನು ನೀವು ಬಳಸಬಹುದು. |
00:59 | Internet Explorer ಅನ್ನು ಮಾತ್ರ ಬಳಸಬೇಡಿ, ಅದು ಅಷ್ಟು ಸರಿಯಾಗಿ ಡಿಸ್ಪ್ಲೇ ಮಾಡುವುದಿಲ್ಲ. |
01:07 | ನಿಮ್ಮ ‘ಸೈಟ್ ಅಡ್ಮಿನಿಸ್ಟ್ರೇಟರ್’ ಒಂದು ಮೂಡಲ್ ವೆಬ್ಸೈಟ್ ಅನ್ನು ಸೆಟ್ ಮಾಡಿ, ನಿಮಗೆ ಒಂದು ಹೊಸ, ಖಾಲಿ ಕೋರ್ಸ್ ಅನ್ನು ಅಸೈನ್ ಮಾಡಿದ್ದಾರೆ. ಇದರಲ್ಲಿ ನಿಮಗೆ teacher ಪ್ರಿವಿಲೆಜ್ ಅನ್ನು ಕೊಟ್ಟಿದ್ದಾರೆ ಎಂದು ಈ ಟ್ಯುಟೋರಿಯಲ್ ಭಾವಿಸುತ್ತದೆ.
ನನ್ನ ಸಿಸ್ಟಮ್ ಅಡಿಮಿನಿಸ್ಟ್ರೇಟರ್ ಇದನ್ನು ಈಗಾಗಲೇ ಮಾಡಿದ್ದಾರೆ. |
01:26 | ಗಮನಿಸಿ: “Calculus” ಕೋರ್ಸ್ ಗಾಗಿ ಯೂಸರ್ ರೆಬೆಕಾ ರೇಮೆಂಡ್ ಅವರನ್ನು Teacher ಎಂದು ಅಸೈನ್ ಮಾಡಲಾಗಿದೆ. |
01:34 | ಈ ವೈಬ್ಸೈಟ್ ನಲ್ಲಿ ಮೂಡಲ್ ಟ್ಯುಟೋರಿಯಲ್ ಗಳನ್ನು ರೆಫರ್ ಮಾಡಲು ನಿಮ್ಮ ಸೈಟ್ ಅಡ್ಮಿನಿಸ್ಟ್ರೇಟರ್ ಗೆ ಕೇಳಿ. |
01:41 | ಕನಿಷ್ಠ ಒಂದು ಕೋರ್ಸ್ ಗಾಗಿ Teacher ಪ್ರಿವಿಲೆಜ್ ಅನ್ನು ಹೊಂದಿರುವ ಒಂದು ಯೂಸರ್ ಅನ್ನು ನಿಮಗಾಗಿ ಕ್ರಿಯೇಟ್ ಮಾಡಿ. |
01:48 | ಮೂಡಲ್ ಒಂದು ಹೊಂದಿಕೊಳ್ಳುವ, ರಚನಾತ್ಮಕ ಮತ್ತು ಬಳಸಲು ಸುಲಭವಾದ ಕಲಿಸುವ ಮತ್ತು ಕಲಿಯುವ ವ್ಯವಸ್ಥೆಯಾಗಿದೆ. |
01:56 | ಸಾಮಾನ್ಯವಾಗಿ ಮೂಡಲ್ ಅನ್ನು:
ತಮ್ಮ ಕಲಿಕೆಯ ವಿಷಯಗಳನ್ನು ಅಪ್ಲೋಡ್ ಮಾಡಲು, ಫೈಲ್ ಗಳು, ವಿಡೀಯೋಗಳಂತಹ ಮಲ್ಟಿಮೀಡಿಯಾ ಇ-ರಿಸೋರ್ಸ್ ಸಂಗ್ರಹಗಳನ್ನು ನಿರ್ವಹಿಸಲು, |
02:12 | ವೆಬ್ ರಿಸೋರ್ಸ್ ಮತ್ತು ಓಪನ್ ಎಜುಕೇಷನಲ್ ರಿಸೋರ್ಸ್ ಗಳನ್ನು ಹಂಚಿಕೊಳ್ಳಲು,
YouTube / Vimeo ವಿಡಿಯೋಗಳನ್ನು ಸೇರಿಸಲು, |
02:22 | ಕ್ವಿಝ್ ಮತ್ತು ಅಸೈನ್ಮೆಂಟ್ ಗಳನ್ನು ನಿರ್ವಹಿಸಲು,
Wiki, Glossary ಮುಂತಾದ ಸಹಕಾರಿ ವಿಷಯಗಳ ಬಳಕೆಯನ್ನು ಪ್ರೋತ್ಸಾಹಿಸಲು, |
02:34 | ವಿದ್ಯಾರ್ಥಿಗಳೊಂದಿಗೆ ಏಕಕಾಲದಲ್ಲಿ ಅಥವಾ ಬೇರೆ ಬೇರೆ ಸಮಯದಲ್ಲಿ ಸಂಪರ್ಕಿಸಲು ಮತ್ತು ವಿದ್ಯಾರ್ಥಿಗಳ ಕಲಿಕೆಯ ಪ್ರಗತಿಯನ್ನು ತಿಳಿಯಲು ಬಳಸಬಹುದು. |
02:44 | ಇಲ್ಲಿ ನನ್ನ ಹತ್ತಿರ ನನ್ನದೇ ಕ್ಯಾಲ್ಕ್ಯುಲಸ್ ಕೋರ್ಸ್ ನ ಓವರ್-ವ್ಯೂ (ಅವಲೋಕನ) ಇದೆ. |
02:50 | ಇಲ್ಲಿ ನಾನು -
ಕಲಿಸಬೇಕಾದ ವಿಷಯಗಳು, ಪ್ರತಿ ವಾರದಲ್ಲಿ ಆಗುವ ತರಗತಿಗಳ ಸಂಖ್ಯೆ, ಕೋರ್ಸ್ ನಲ್ಲಿಯ ಒಟ್ಟು ಅಸೈನ್ಮೆಂಟ್ ಗಳ ಸಂಖ್ಯೆ, |
03:01 | ಒಟ್ಟು ಕ್ವಿಝ್ ಗಳ ಸಂಖ್ಯೆ (ಸಾಪ್ತಾಹಿಕ ಅಥವಾ ಎರಡು ವಾರಕ್ಕೊಮ್ಮೆ),
end of course exam(ಕೋರ್ಸ್ ನ ಕೊನೆಯಲ್ಲಿರುವ ಪರೀಕ್ಷೆ) ಗಳ ಒಟ್ಟು ಸಂಖ್ಯೆ, ಅಂಕಗಳ ವಿತರಣೆ, ಕೋರ್ಸ್ ಮಟೇರಿಯಲ್ ಗಳು, ಪುಸ್ತಕಗಳ ರೆಫರೆನ್ಸ್ ಗಳು (ಉಲ್ಲೇಖಗಳು) ಇತ್ಯಾದಿಗಳನ್ನು ಹೊಂದಿದ್ದೇನೆ. |
03:18 | ನಾನು ನನ್ನ ಕೋರ್ಸ್ ಅನ್ನು ರಚಿಸಬೇಕು ಮತ್ತು ಮೂಡಲ್ ನಲ್ಲಿ ಎಲ್ಲ ಮಟೀರಿಯಲ್ ಗಳನ್ನು ಅಪ್ಲೋಡ್ ಮಾಡಬೇಕು. |
03:25 | ಬ್ರೌಸರ್ ಗೆ ಹೋಗಿ ಮತ್ತು ಮೂಡಲ್ ಸೈಟ್ ಅನ್ನು ತೆರೆಯಿರಿ. |
03:30 | ಹೆಡರ್ ಮತ್ತು Available courses ಗಳೊಂದಿಗೆ ಒಂದು ಪೇಜ್ ಅನ್ನು ತೋರಿಸಲಾಗುತ್ತದೆ. |
03:35 | ವಿಂಡೋದ ಮೇಲ್ಗಡೆ ಬಲಮೂಲೆಯಲ್ಲಿರುವ Login ಲಿಂಕ್ ನ ಮೇಲೆ ಕ್ಲಿಕ್ ಮಾಡಿ. |
03:40 | ನಾನು teacher ರೆಬೆಕಾ ರೇಮೆಂಡ್ ಎಂದು ಲಾಗಿನ್ ಆಗುವೆನು. |
03:44 | ಈ ಪೇಜ್ ನಮಗೆ ಪಾಸ್ವರ್ಡ್ ಅನ್ನು ಬದಲಾಯಿಸಲು ಸೂಚಿಸುತ್ತದೆ. ಏಕೆಂದರೆ, ಅಡ್ಮಿನ್ ನಿಂದ ಮೊದಲೇ Force password change ಆಯ್ಕೆಯು ಸಕ್ರಿಯಗೊಂಡಿದೆ. |
03:57 | current password ಅನ್ನು ಟೈಪ್ ಮಾಡಿ. ನಂತರ new password ಅನ್ನು ಟೈಪ್ ಮಾಡಿ. ನಾನು Spokentutorial12 # ಎಂದು ಟೈಪ್ ಮಾಡುವೆನು. |
04:07 | new password ಅನ್ನು ಇನ್ನೊಮ್ಮೆ ಟೈಪ್ ಮಾಡಿ. ಕೆಳಗಿರುವ Save changes ಬಟನ್ ಅನ್ನು ಕ್ಲಿಕ್ ಮಾಡಿ. |
04:15 | ಪಾಸ್ವರ್ಡ್ ಅನ್ನು ಬದಲಾಯಿಸಲಾಗಿದೆ ಎಂದು ದೃಢೀಕರಿಸುವ ಸಂದೇಶವು ಕಾಣಿಸುವುದು. Continue ಬಟನ್ ಅನ್ನು ಕ್ಲಿಕ್ ಮಾಡಿ. |
04:24 | ಈಗ ನಾವಿರುವ ಪೇಜ್ ಅನ್ನು dashboard ಎನ್ನುತ್ತಾರೆ. |
04:29 | ನಮ್ಮ ಡ್ಯಾಶ್-ಬೋರ್ಡ್ ಅನ್ನು ಮೂರು ಕಾಲಮ್ ಗಳಾಗಿ ವಿಂಗಡಿಸಲಾಗಿದೆ. |
04:34 | ಎಡಭಾಗದಲ್ಲಿರುವುದು Navigation ಮೆನ್ಯು ಆಗಿದೆ. ಮಧ್ಯದಲ್ಲಿರುವ ಅಗಲವಾದ ಭಾಗವು Course overview ಆಗಿದೆ. ಇದು 'Timeline' ಮತ್ತು 'Courses' ಟ್ಯಾಬ್ ಗಳನ್ನು ಹೊಂದಿದೆ. |
04:47 | ಬಲಭಾಗದಲ್ಲಿರುವುದು Blocks ಕಾಲಮ್ ಆಗಿದೆ. |
04:51 | Courses ಟ್ಯಾಬ್, ನೀವು ದಾಖಲಾಗಿರುವ ಕೋರ್ಸ್ ಗಳನ್ನು ಪಟ್ಟಿ ಮಾಡುವುದು.
Course overview ಜಾಗದಲ್ಲಿರುವ Courses ಟ್ಯಾಬ್ ಅನ್ನು ಕ್ಲಿಕ್ ಮಾಡಿ. |
05:02 | In Progress ಟ್ಯಾಬ್ ನಲ್ಲಿ Calculus ಮತ್ತು Linear Algebra ಈ ಎರಡು ಕೋರ್ಸ್ ಗಳನ್ನು ನೋಡುತ್ತೇವೆ. ಅಡ್ಮಿನ್, ಇವುಗಳನ್ನು ಟೀಚರ್ ರೆಬೆಕಾ ರೇಮೆಂಡ್ ಅವರಿಗೆ ಅಸೈನ್ ಮಾಡಿದ್ದಾರೆ. |
05:17 | ಅವರಿಗೆ ಮುಂಗಡವಾಗಿ ಅಸೈನ್ ಮಾಡಿದ ಕೋರ್ಸ್ ಗಳನ್ನು Future ಟ್ಯಾಬ್ ನಲ್ಲಿ ಮತ್ತು ಅವರು ಮುಗಿಸಿದ ಕೋರ್ಸ್ ಗಳನ್ನು Past ಟ್ಯಾಬ್ ನಲ್ಲಿ ನೋಡುವೆವು. |
05:30 | ಈಗ ಪೇಜ್ ನ ಹೆಡರ್ ಅನ್ನು ನೋಡೋಣ. ಮೇಲಿನ ಎಡಮೂಲೆಯಲ್ಲಿ, ನಾವು ನ್ಯಾವಿಗೇಷನ್ ಡ್ರಾವರ್ ಅಥವಾ ನ್ಯಾವಿಗೇಷನ್ ಮೆನ್ಯುವನ್ನು ನೋಡಬಹುದು. |
05:41 | ಇಲ್ಲಿ Calendar, Private Files ಮತ್ತು My courses ಲಿಂಕ್ ಗಳಿಗೆ ಆಕ್ಸೆಸ್ ಸಿಗುತ್ತದೆ. |
05:48 | ಇದೊಂದು ಟಾಗಲ್ ಮೆನ್ಯುವಾಗಿದ್ದು, ಕ್ಲಿಕ್ ಮಾಡಿದಾಗ ಇದರ ಸ್ಟ್ಯಾಟಸ್ ಓಪನ್ ನಿಂದ ಕ್ಲೋಸ್ ಮತ್ತು ಕ್ಲೋಸ್ ನಿಂದ ಓಪನ್ ಗೆ ಬದಲಾಗುತ್ತದೆ. |
05:58 | ಮೇಲೆ ಬಲಭಾಗದಲ್ಲಿ, notifications ಮತ್ತು messages ಗಳಿಗಾಗಿ ‘ಕ್ವಿಕ್ ಆಕ್ಸೆಸ್’ ಐಕಾನ್ ಗಳಿವೆ. |
06:06 | ಮೇಲೆ ಬಲಭಾಗದಲ್ಲಿರುವ profile picture ನ ಮೇಲೆ ಕ್ಲಿಕ್ ಮಾಡಿದರೆ, ಯೂಸರ್ ಮೆನ್ಯುವನ್ನು ಆಕ್ಸೆಸ್ ಮಾಡಲು ಸಾಧ್ಯವಾಗುತ್ತದೆ. ಇದನ್ನು quick access user menu ಎಂದು ಸಹ ಹೇಳಲಾಗುತ್ತದೆ. |
06:18 | ಇದರ ಮೇಲೆ ಕ್ಲಿಕ್ ಮಾಡಿ. ಈ ಎಲ್ಲಾ ಐಟಂಗಳೂ ಕೂಡ ಎಡಭಾಗದಲ್ಲಿರುವ ಮೆನ್ಯುವಿನಂತೆ ಟಾಗಲ್ ಮೆನ್ಯುಗಳಾಗಿವೆ. |
06:28 | Profile ಆಯ್ಕೆಯ ಮೇಲೆ ಕ್ಲಿಕ್ ಮಾಡಿ. ಮೂಡಲ್ ನಲ್ಲಿ ಪ್ರತಿಯೊಬ್ಬ ಯೂಸರ್ ಒಂದು ‘ಪ್ರೊಫೈಲ್ ಪೇಜ್’ ಅನ್ನು ಹೊಂದಿರುತ್ತಾನೆ. |
06:36 | ಯೂಸರ್ ಗಳು ತಮ್ಮ ಪ್ರೊಫೈಲ್ ಮಾಹಿತಿಯನ್ನು ಎಡಿಟ್ ಮಾಡಲು, ದಾಖಲಾಗಿರುವ ಕೋರ್ಸ್ ಗಳನ್ನು ನೋಡಲು, |
06:46 | blog ಅಥವಾ forum ಪೋಸ್ಟ್ ಗಳನ್ನು ನೋಡಲು, ಆಕ್ಸೆಸ್ ಮಾಡಲು ಸಾಧ್ಯವಿರುವ ರಿಪೋರ್ಟ್ ಗಳನ್ನು ಪರೀಕ್ಷಿಸಲು ಮತ್ತು ಹಿಂದಿನ ಬಾರಿ ಲಾಗಿನ್ ಆಗಲು ಬಳಸಿದ ಆಕ್ಸೆಸ್-ಲಾಗ್ ಗಳನ್ನು ನೋಡಲು ಈ ಲಿಂಕ್ ಅನ್ನು ಬಳಸಬಹುದು. |
07:01 | ಈಗ ನಾವು Edit Profile ಲಿಂಕ್ ಅನ್ನು ಕ್ಲಿಕ್ ಮಾಡೋಣ. |
07:06 | Edit Profile ಪೇಜ್ ತೆರೆದುಕೊಳ್ಳುತ್ತದೆ.
ಈ ಪೇಜ್ ನಲ್ಲಿ: General, User Picture, Additional Names, Interests, Optional ಎಂಬ ಐದು ವಿಭಾಗಗಳಿವೆ. |
07:24 | ಡಿಫಾಲ್ಟ್ ಆಗಿ, General ಮತ್ತು User picture ವಿಭಾಗಗಳನ್ನು ವಿಸ್ತರಿಸಲಾಗಿದೆ. |
07:30 | ಬಲಗಡೆಯಿರುವ ‘Expand all’ ಲಿಂಕ್, ಎಲ್ಲ ವಿಭಾಗಗಳನ್ನು ವಿಸ್ತರಿಸುತ್ತದೆ. |
07:36 | ಯಾವುದೇ ವಿಭಾಗದ ಹೆಸರಿನ ಮೇಲೆ ಕ್ಲಿಕ್ ಮಾಡಿದಾಗ, ಅದು ವಿಸ್ತಾರವಾಗುತ್ತದೆ ಅಥವಾ ಚಿಕ್ಕದಾಗುತ್ತದೆ. |
07:42 | ಇಲ್ಲಿರುವ ಎಲ್ಲ ಫೀಲ್ಡ್ ಗಳನ್ನು ಎಡಿಟ್ ಮಾಡಬಹುದು. |
07:45 | ನಾನು ಇಲ್ಲಿ ಮಾಡಿರುವಂತೆ General ವಿಭಾಗದಲ್ಲಿ ನಿಮ್ಮ ವೈಯಕ್ತಿಕ ಮಾಹಿತಿಯನ್ನು ಕೊಡಬಹುದು. |
07:52 | ನನ್ನ ವಿದ್ಯಾರ್ಥಿಗಳು ನನ್ನ ಬಗ್ಗೆ ಸ್ವಲ್ಪ ತಿಳಿದಿರಲಿ ಎಂದು ನಾನು ಬಯಸುತ್ತೇನೆ. |
07:58 | ಹೀಗಾಗಿ, ಇಲ್ಲಿ Description ಫೀಲ್ಡ್ ನಲ್ಲಿ, ನಾನು ಕೆಲವು ವಿವರಗಳನ್ನು ಕೊಡುತ್ತೇನೆ. |
08:04 | ಟ್ಯುಟೋರಿಯಲ್ ಅನ್ನು ನಿಲ್ಲಿಸಿ. ಇಲ್ಲಿ ನಾನು ಮಾಡಿದ ಹಾಗೆ ನಿಮ್ಮ ವಿವರಗಳನ್ನು ತುಂಬಿ. |
08:10 | ಉಳಿದ ಫೀಲ್ಡ್ ಮತ್ತು ವಿಭಾಗಗಳಲ್ಲಿ ನೀವು ಸ್ವಲ್ಪ ಹೆಚ್ಚಿನ ಮಾಹಿತಿಗಳನ್ನು ಸೇರಿಸಬಹುದು. ನಿಮ್ಮ ಛಾಯಾಚಿತ್ರವನ್ನು ಸಹ ನೀವು ಅಪ್ಲೋಡ್ ಮಾಡಬಹುದು. |
08:19 | General ಮತ್ತು Optional ವಿಭಾಗಗಳಲ್ಲಿ ನಾನು ಇನ್ನೂ ಕೆಲವು ಮಾಹಿತಿಗಳನ್ನು ಸೇರಿಸಿದ್ದೇನೆ. |
08:25 | ಈಗ Update Profile ಬಟನ್ ಅನ್ನು ಕ್ಲಿಕ್ ಮಾಡಿ, ಪೇಜ್ ಅನ್ನು ಸೇವ್ ಮಾಡಿ. |
08:30 | ಇನ್ನೊಮ್ಮೆ ಮೇಲೆ ಬಲಗಡೆಯಿರುವ quick access user menu ಮೇಲೆ, ನಂತರ Preferences ಲಿಂಕ್ ಮೇಲೆ ಕ್ಲಿಕ್ ಮಾಡಿ. |
08:40 | ಯೂಸರ್ ಗಳು ಎಡಿಟ್ ಮಾಡಲು ಬಯಸುವ ವಿವಿಧ ಸೆಟ್ಟಿಂಗ್ ಗಳಿಗೆ Preferences ಪೇಜ್, ತಕ್ಷಣ ಆಕ್ಸೆಸ್ ಅನ್ನು ಕೊಡುತ್ತದೆ. |
08:48 | ಟೀಚರ್ ಅಕೌಂಟ್ ಗಾಗಿ, Preferences ಪೇಜ್ ಅನ್ನು User account, Blogs ಮತ್ತು Badges ಎಂದು ವಿಂಗಡಿಸಲಾಗಿದೆ. |
09:00 | ನಾವು ಈಗಾಗಲೇ Edit Profile ಮತ್ತು Change Password ಗಳನ್ನು ನೋಡಿದ್ದೇವೆ. |
09:06 | ಇಲ್ಲಿ:
Language, Forum, Editor, Course, Calendar, Message, Notification ಇವುಗಳಿಗಾಗಿ ಇನ್ನೂ ಕೆಲವು ಪ್ರಿಫರೆನ್ಸ್ ಗಳಿವೆ. |
09:19 | ನಾವು Calendar preferences ಅನ್ನು ಕ್ಲಿಕ್ ಮಾಡೋಣ. |
09:23 | ಕ್ಯಾಲೆಂಡರ್ ಅನ್ನು 24-hour ಫಾರ್ಮ್ಯಾಟ್ ನಲ್ಲಿ ತೋರಿಸಲು ನಾವು ಸೆಟ್ ಮಾಡೋಣ. |
09:29 | ಅಲ್ಲದೆ Upcoming events look-ahead ಅನ್ನು 2 weeks ಗೆ ಸೆಟ್ ಮಾಡೋಣ. |
09:35 | ಎಂದರೆ, ಮುಂದಿನ ಎರಡು ವಾರಗಳಲ್ಲಿ ನಡೆಯುವ ಎಲ್ಲ ಘಟನೆಗಳಿಗಾಗಿ ಕ್ಯಾಲೆಂಡರ್ ನಲ್ಲಿ ನಾವು ನೋಟಿಫಿಕೇಷನ್ ಗಳನ್ನು ನೋಡಬಹುದು. |
09:43 | Save Changes ಬಟನ್ ಅನ್ನು ಕ್ಲಿಕ್ ಮಾಡಿ. |
09:46 | ನಂತರ ಈ ಸರಣಿಯಲ್ಲಿ ಉಳಿದ ಪ್ರಿಫರೆನ್ಸ್ ಗಳನ್ನು ನಾವು ಚರ್ಚಿಸುವಾಗ ಅವುಗಳ ಬಗ್ಗೆ ನೋಡೋಣ. |
09:54 | ಇಲ್ಲಿರುವ ಮಾಹಿತಿಯನ್ನು ಗಮನಿಸಿ. |
09:57 | ಇದು ಬ್ರೆಡ್ ಕ್ರಂಬ್ ನ್ಯಾವಿಗೇಷನ್ ಆಗಿದೆ. ಇದು, ಮೂಡಲ್ ಸೈಟ್ ಗಳ ಕ್ರಮಾನುಗತದಲ್ಲಿ (ಹೈರಾರ್ಕಿ) ನಾವು ಯಾವ ಪೇಜ್ ನಲ್ಲಿದ್ದೇವೆ ಎಂದು ತೋರಿಸುವ ವೀಕ್ಷಣೆಯ ಒಂದು ಸಾಧನ (ವಿಷ್ಯುಅಲ್ ಏಯ್ಡ್) ಆಗಿದೆ. |
10:09 | ಒಂದೇ ಕ್ಲಿಕ್ ಮೂಲಕ ಹೆಚ್ಚಿನ ಶ್ರೇಣಿಯ ಪೇಜ್ ಗೆ ಹಿಂದಿರುಗಲು ಇದು ನಮಗೆ ಸಹಾಯ ಮಾಡುತ್ತದೆ. |
10:15 | ಡ್ಯಾಶ್ ಬೋರ್ಡ್ ಗೆ ಹೋಗಲು, ಬ್ರೆಡ್-ಕ್ರಂಬ್ಸ್ ನಲ್ಲಿರುವ Dashboard ಲಿಂಕ್ ಅನ್ನು ಕ್ಲಿಕ್ ಮಾಡಿ. |
10:21 | ಈಗ ನಾವು Calculus ಕೋರ್ಸ್ ಗಾಗಿ ಒಂದು ಟಾಪಿಕ್ ಮತ್ತು ಸಾರಾಂಶವನ್ನು ಸೇರಿಸುವುದು ಹೇಗೆ ಎಂದು ನೋಡೋಣ. |
10:28 | ಎಡಭಾಗದ ನ್ಯಾವಿಗೇಷನ್ ಮೆನ್ಯುವಿನಲ್ಲಿ, Calculus ಕೋರ್ಸ್ ಮೇಲೆ ನಾವು ಕ್ಲಿಕ್ ಮಾಡೋಣ. |
10:34 | ಹೊಸ ಪೇಜ್ ನಲ್ಲಿ, ಮೇಲೆ ಬಲಭಾಗದಲ್ಲಿರುವ gear ಐಕಾನ್ ಅನ್ನು ಕ್ಲಿಕ್ ಮಾಡಿ. |
10:40 | ನಂತರ Turn editing on ಆಯ್ಕೆಯ ಮೇಲೆ ಕ್ಲಿಕ್ ಮಾಡಿ. |
10:45 | ಈಗ ಪೇಜ್ ನಲ್ಲಿ ಹೆಚ್ಚಿನ ಎಡಿಟ್ ಆಯ್ಕೆಗಳು ಕಾಣಿಸುತ್ತವೆ. |
10:50 | Topic 1 ದ ಬದಿಯಲ್ಲಿರುವ pencil ಐಕಾನ್ ನ ಮೇಲೆ ಕ್ಲಿಕ್ ಮಾಡಿ. |
10:55 | ಈಗ ಕಾಣಿಸಿಕೊಳ್ಳುವ ಟೆಕ್ಸ್ಟ್-ಬಾಕ್ಸ್ ನಲ್ಲಿ Basic Calculus ಎಂದು ಟೈಪ್ ಮಾಡಿ, Enter ಅನ್ನು ಒತ್ತಿ. |
11:03 | ಈಗ ಟಾಪಿಕ್ ನ ಹೆಸರು ಬದಲಾಗುವುದನ್ನು ಗಮನಿಸಿ. |
11:06 | ಈಗ ಆ ಟಾಪಿಕ್ ನ ಬಲತುದಿಯಲ್ಲಿರುವ Edit ಲಿಂಕ್ ನ ಮೇಲೆ ಕ್ಲಿಕ್ ಮಾಡಿ. |
11:11 | ನಂತರ Edit topic ಆಯ್ಕೆಯನ್ನು ಕ್ಲಿಕ್ ಮಾಡಿ. |
11:15 | ಇದು ನಮ್ಮನ್ನು Summary ಪೇಜ್ ಗೆ ಕರೆದೊಯ್ಯುತ್ತದೆ. |
11:18 | ಇಲ್ಲಿ, Summary ಫೀಲ್ಡ್ ನಲ್ಲಿ, ನಾವು ಟಾಪಿಕ್ ನ ಸಂಕ್ಷಿಪ್ತ ವಿವರಣೆಯನ್ನು ಕೊಡಬಹುದು. ನಾನು ಹೀಗೆ ಟೈಪ್ ಮಾಡುವೆನು. |
11:27 | ಕೆಳಕ್ಕೆ ಸ್ಕ್ರೋಲ್ ಮಾಡಿ, Save Changes ಬಟನ್ ಅನ್ನು ಕ್ಲಿಕ್ ಮಾಡಿ. |
11:32 | ಬದಲಾವಣೆಯನ್ನು ಗಮನಿಸಿ. |
11:34 | ಹೀಗೆ ನಾವು ಮೂಡಲ್ ನಲ್ಲಿ ನಮ್ಮ ಕೋರ್ಸ್ ನ ವಿವರಗಳನ್ನು ಸೇರಿಸಲು ಪ್ರಾರಂಭಿಸುತ್ತೇವೆ. |
11:40 | ಈಗ ನಾವು Moodle ನಿಂದ ಲಾಗೌಟ್ ಆಗುವೆವು. ಇದಕ್ಕಾಗಿ, ಮೇಲೆ ಬಲಗಡೆಯಲ್ಲಿರುವ user ಐಕಾನ್ ಅನ್ನು ಕ್ಲಿಕ್ ಮಾಡಿ. ಈಗ Log out ಅನ್ನು ಕ್ಲಿಕ್ ಮಾಡಿ. |
11:50 | ಇದರೊಂದಿಗೆ ನಾವು ಈ ಟ್ಯುಟೋರಿಯಲ್ ನ ಕೊನೆಯನ್ನು ತಲುಪಿದ್ದೇವೆ.
ಸಂಕ್ಷಿಪ್ತವಾಗಿ, |
11:56 | ಈ ಟ್ಯುಟೋರಿಯಲ್ ನಲ್ಲಿ ನಾವು,
Course overview ವಿವರಗಳು, teachers’ dashboard , |
12:05 | Edit profile ಸೆಟ್ಟಿಂಗ್ ಗಳು,
Preferences ಸೆಟ್ಟಿಂಗ್ ಗಳು ಮತ್ತು ಮೂಡಲ್ ನಲ್ಲಿ ನಮ್ಮ ಕೋರ್ಸ್ ನ ಕೆಲವು ವಿವರಗಳನ್ನು ಸೇರಿಸಲು ಕಲಿತಿದ್ದೇವೆ. |
12:16 | ಇಲ್ಲಿ ಒಂದು ಅಸೈನ್ಮೆಂಟ್ ಇದೆ:
Calculus ಕೋರ್ಸ್ ನಲ್ಲಿ ಎಲ್ಲ ಟಾಪಿಕ್ ಗಳ ಹೆಸರನ್ನು ಬದಲಿಸಿ. ಎಲ್ಲ ಟಾಪಿಕ್ ಗಳಿಗೂ ಅದರ ಸಾರಾಂಶವನ್ನು ಸೇರಿಸಿ. ಹೆಚ್ಚಿನ ವಿವರಗಳಿಗಾಗಿ, ಈ ಟ್ಯುಟೋರಿಯಲ್ ನ Assignment ಲಿಂಕ್ ಅನ್ನು ನೋಡಿ. |
12:31 | ಈ ಲಿಂಕ್ ನಲ್ಲಿರುವ ವೀಡಿಯೊ, 'ಸ್ಪೋಕನ್ ಟ್ಯುಟೋರಿಯಲ್' ಪ್ರೊಜೆಕ್ಟ್ ನ ಸಾರಾಂಶವಾಗಿದೆ. ದಯವಿಟ್ಟು ಇದನ್ನು ಡೌನ್ಲೋಡ್ ಮಾಡಿ ವೀಕ್ಷಿಸಿ. |
12:39 | 'ಸ್ಪೋಕನ್ ಟ್ಯುಟೋರಿಯಲ್' ಪ್ರೊಜೆಕ್ಟ್ ತಂಡವು ಕಾರ್ಯಶಾಲೆಗಳನ್ನು ನಡೆಸುತ್ತದೆ ಮತ್ತು ಪ್ರಮಾಣಪತ್ರಗಳನ್ನು ಕೊಡುತ್ತದೆ. ಹೆಚ್ಚಿನ ವಿವರಗಳಿಗಾಗಿ ದಯವಿಟ್ಟು ನಮಗೆ ಬರೆಯಿರಿ. |
12:49 | ಈ ಫೋರಂ ನಲ್ಲಿ, ನಿಮ್ಮ ಪ್ರಶ್ನೆಯನ್ನು ಸಮಯದೊಂದಿಗೆ ಪೋಸ್ಟ್ ಮಾಡಿ. |
12:53 | 'ಸ್ಪೋಕನ್ ಟ್ಯುಟೋರಿಯಲ್' ಪ್ರೊಜೆಕ್ಟ್, NMEICT, MHRD, ಭಾರತ ಸರ್ಕಾರದಿಂದ ಅನುದಾನವನ್ನು ಪಡೆದಿದೆ. ಈ ಮಿಷನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಕೆಳಗೆ ತೋರಿಸಿರುವ ಲಿಂಕ್ ನಲ್ಲಿ ಲಭ್ಯವಿದೆ. |
13:06 | ಸ್ಕ್ರಿಪ್ಟ್ ನ ಅನುವಾದಕಿ, ಮೈಸೂರಿನಿಂದ ಅಂಜನಾ ಅನಂತ್ ನಾಗ್ ಮತ್ತು ಧ್ವನಿ ಶ್ರೀ ನವೀನ್ ಭಟ್, ಉಪ್ಪಿನಪಟ್ಟಣ. |
13:17 | ಧನ್ಯವಾದಗಳು. |