Moodle-Learning-Management-System/C2/Teachers-Dashboard-in-Moodle/Kannada

From Script | Spoken-Tutorial
Jump to: navigation, search
Time Narration
00:01 Teacher’s dashboard in Moodle ಎಂಬ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ.
00:07 ಈ ಟ್ಯುಟೋರಿಯಲ್ ನಲ್ಲಿ ನಾವು, Moodle ಕೋರ್ಸ್ ನ ಓವರ್ ವ್ಯೂ ದ ಒಂದು ಮಾದರಿ,
00:14 teachers’ dashboard ,

ಪ್ರೊಫೈಲ್ ಅನ್ನು ಎಡಿಟ್ ಮಾಡುವುದು ಮತ್ತು preferences ಅನ್ನು ಎಡಿಟ್ ಮಾಡುವುದು ಇವುಗಳ ಬಗ್ಗೆ ಕಲಿಯುವೆವು.

00:25 ಕೊನೆಗೆ, ಮೂಡಲ್ ನಲ್ಲಿ ನಮ್ಮ ಕೋರ್ಸ್ ಗೆ ಸಂಬಂಧಿಸಿದ ಕೆಲವು ವಿವರಗಳನ್ನು ಸೇರಿಸಲು ಕಲಿಯುವೆವು.
00:33 ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು, ನಾನು:

Ubuntu Linux OS 16.04, XAMPP 5.6.30 ಮೂಲಕ ಪಡೆದ Apache, MariaDB ಮತ್ತು PHP, Moodle 3.3 ಮತ್ತು Firefox ವೆಬ್-ಬ್ರೌಸರ್ ಇವುಗಳ ನ್ನು ಬಳಸಿದ್ದೇನೆ. ನಿಮ್ಮ ಆಯ್ಕೆಯ ಯಾವುದೇ ವೆಬ್ ಬ್ರೌಸರ್ ಅನ್ನು ನೀವು ಬಳಸಬಹುದು.

00:59 Internet Explorer ಅನ್ನು ಮಾತ್ರ ಬಳಸಬೇಡಿ, ಅದು ಅಷ್ಟು ಸರಿಯಾಗಿ ಡಿಸ್ಪ್ಲೇ ಮಾಡುವುದಿಲ್ಲ.
01:07 ನಿಮ್ಮ ‘ಸೈಟ್ ಅಡ್ಮಿನಿಸ್ಟ್ರೇಟರ್’ ಒಂದು ಮೂಡಲ್ ವೆಬ್ಸೈಟ್ ಅನ್ನು ಸೆಟ್ ಮಾಡಿ, ನಿಮಗೆ ಒಂದು ಹೊಸ, ಖಾಲಿ ಕೋರ್ಸ್ ಅನ್ನು ಅಸೈನ್ ಮಾಡಿದ್ದಾರೆ. ಇದರಲ್ಲಿ ನಿಮಗೆ teacher ಪ್ರಿವಿಲೆಜ್ ಅನ್ನು ಕೊಟ್ಟಿದ್ದಾರೆ ಎಂದು ಈ ಟ್ಯುಟೋರಿಯಲ್ ಭಾವಿಸುತ್ತದೆ.

ನನ್ನ ಸಿಸ್ಟಮ್ ಅಡಿಮಿನಿಸ್ಟ್ರೇಟರ್ ಇದನ್ನು ಈಗಾಗಲೇ ಮಾಡಿದ್ದಾರೆ.

01:26 ಗಮನಿಸಿ: “Calculus” ಕೋರ್ಸ್ ಗಾಗಿ ಯೂಸರ್ ರೆಬೆಕಾ ರೇಮೆಂಡ್ ಅವರನ್ನು Teacher ಎಂದು ಅಸೈನ್ ಮಾಡಲಾಗಿದೆ.
01:34 ಈ ವೈಬ್ಸೈಟ್ ನಲ್ಲಿ ಮೂಡಲ್ ಟ್ಯುಟೋರಿಯಲ್ ಗಳನ್ನು ರೆಫರ್ ಮಾಡಲು ನಿಮ್ಮ ಸೈಟ್ ಅಡ್ಮಿನಿಸ್ಟ್ರೇಟರ್ ಗೆ ಕೇಳಿ.
01:41 ಕನಿಷ್ಠ ಒಂದು ಕೋರ್ಸ್ ಗಾಗಿ Teacher ಪ್ರಿವಿಲೆಜ್ ಅನ್ನು ಹೊಂದಿರುವ ಒಂದು ಯೂಸರ್ ಅನ್ನು ನಿಮಗಾಗಿ ಕ್ರಿಯೇಟ್ ಮಾಡಿ.
01:48 ಮೂಡಲ್ ಒಂದು ಹೊಂದಿಕೊಳ್ಳುವ, ರಚನಾತ್ಮಕ ಮತ್ತು ಬಳಸಲು ಸುಲಭವಾದ ಕಲಿಸುವ ಮತ್ತು ಕಲಿಯುವ ವ್ಯವಸ್ಥೆಯಾಗಿದೆ.
01:56 ಸಾಮಾನ್ಯವಾಗಿ ಮೂಡಲ್ ಅನ್ನು:

ತಮ್ಮ ಕಲಿಕೆಯ ವಿಷಯಗಳನ್ನು ಅಪ್ಲೋಡ್ ಮಾಡಲು, ಫೈಲ್ ಗಳು, ವಿಡೀಯೋಗಳಂತಹ ಮಲ್ಟಿಮೀಡಿಯಾ ಇ-ರಿಸೋರ್ಸ್ ಸಂಗ್ರಹಗಳನ್ನು ನಿರ್ವಹಿಸಲು,

02:12 ವೆಬ್ ರಿಸೋರ್ಸ್ ಮತ್ತು ಓಪನ್ ಎಜುಕೇಷನಲ್ ರಿಸೋರ್ಸ್ ಗಳನ್ನು ಹಂಚಿಕೊಳ್ಳಲು,

YouTube / Vimeo ವಿಡಿಯೋಗಳನ್ನು ಸೇರಿಸಲು,

02:22 ಕ್ವಿಝ್ ಮತ್ತು ಅಸೈನ್ಮೆಂಟ್ ಗಳನ್ನು ನಿರ್ವಹಿಸಲು,

Wiki, Glossary ಮುಂತಾದ ಸಹಕಾರಿ ವಿಷಯಗಳ ಬಳಕೆಯನ್ನು ಪ್ರೋತ್ಸಾಹಿಸಲು,

02:34 ವಿದ್ಯಾರ್ಥಿಗಳೊಂದಿಗೆ ಏಕಕಾಲದಲ್ಲಿ ಅಥವಾ ಬೇರೆ ಬೇರೆ ಸಮಯದಲ್ಲಿ ಸಂಪರ್ಕಿಸಲು ಮತ್ತು ವಿದ್ಯಾರ್ಥಿಗಳ ಕಲಿಕೆಯ ಪ್ರಗತಿಯನ್ನು ತಿಳಿಯಲು ಬಳಸಬಹುದು.
02:44 ಇಲ್ಲಿ ನನ್ನ ಹತ್ತಿರ ನನ್ನದೇ ಕ್ಯಾಲ್ಕ್ಯುಲಸ್ ಕೋರ್ಸ್ ನ ಓವರ್-ವ್ಯೂ (ಅವಲೋಕನ) ಇದೆ.
02:50 ಇಲ್ಲಿ ನಾನು -

ಕಲಿಸಬೇಕಾದ ವಿಷಯಗಳು, ಪ್ರತಿ ವಾರದಲ್ಲಿ ಆಗುವ ತರಗತಿಗಳ ಸಂಖ್ಯೆ, ಕೋರ್ಸ್ ನಲ್ಲಿಯ ಒಟ್ಟು ಅಸೈನ್ಮೆಂಟ್ ಗಳ ಸಂಖ್ಯೆ,

03:01 ಒಟ್ಟು ಕ್ವಿಝ್ ಗಳ ಸಂಖ್ಯೆ (ಸಾಪ್ತಾಹಿಕ ಅಥವಾ ಎರಡು ವಾರಕ್ಕೊಮ್ಮೆ),

end of course exam(ಕೋರ್ಸ್ ನ ಕೊನೆಯಲ್ಲಿರುವ ಪರೀಕ್ಷೆ) ಗಳ ಒಟ್ಟು ಸಂಖ್ಯೆ, ಅಂಕಗಳ ವಿತರಣೆ, ಕೋರ್ಸ್ ಮಟೇರಿಯಲ್ ಗಳು, ಪುಸ್ತಕಗಳ ರೆಫರೆನ್ಸ್ ಗಳು (ಉಲ್ಲೇಖಗಳು) ಇತ್ಯಾದಿಗಳನ್ನು ಹೊಂದಿದ್ದೇನೆ.

03:18 ನಾನು ನನ್ನ ಕೋರ್ಸ್ ಅನ್ನು ರಚಿಸಬೇಕು ಮತ್ತು ಮೂಡಲ್ ನಲ್ಲಿ ಎಲ್ಲ ಮಟೀರಿಯಲ್ ಗಳನ್ನು ಅಪ್ಲೋಡ್ ಮಾಡಬೇಕು.
03:25 ಬ್ರೌಸರ್ ಗೆ ಹೋಗಿ ಮತ್ತು ಮೂಡಲ್ ಸೈಟ್ ಅನ್ನು ತೆರೆಯಿರಿ.
03:30 ಹೆಡರ್ ಮತ್ತು Available courses ಗಳೊಂದಿಗೆ ಒಂದು ಪೇಜ್ ಅನ್ನು ತೋರಿಸಲಾಗುತ್ತದೆ.
03:35 ವಿಂಡೋದ ಮೇಲ್ಗಡೆ ಬಲಮೂಲೆಯಲ್ಲಿರುವ Login ಲಿಂಕ್ ನ ಮೇಲೆ ಕ್ಲಿಕ್ ಮಾಡಿ.
03:40 ನಾನು teacher ರೆಬೆಕಾ ರೇಮೆಂಡ್ ಎಂದು ಲಾಗಿನ್ ಆಗುವೆನು.
03:44 ಈ ಪೇಜ್ ನಮಗೆ ಪಾಸ್ವರ್ಡ್ ಅನ್ನು ಬದಲಾಯಿಸಲು ಸೂಚಿಸುತ್ತದೆ. ಏಕೆಂದರೆ, ಅಡ್ಮಿನ್ ನಿಂದ ಮೊದಲೇ Force password change ಆಯ್ಕೆಯು ಸಕ್ರಿಯಗೊಂಡಿದೆ.
03:57 current password ಅನ್ನು ಟೈಪ್ ಮಾಡಿ. ನಂತರ new password ಅನ್ನು ಟೈಪ್ ಮಾಡಿ. ನಾನು Spokentutorial12 # ಎಂದು ಟೈಪ್ ಮಾಡುವೆನು.
04:07 new password ಅನ್ನು ಇನ್ನೊಮ್ಮೆ ಟೈಪ್ ಮಾಡಿ. ಕೆಳಗಿರುವ Save changes ಬಟನ್ ಅನ್ನು ಕ್ಲಿಕ್ ಮಾಡಿ.
04:15 ಪಾಸ್ವರ್ಡ್ ಅನ್ನು ಬದಲಾಯಿಸಲಾಗಿದೆ ಎಂದು ದೃಢೀಕರಿಸುವ ಸಂದೇಶವು ಕಾಣಿಸುವುದು. Continue ಬಟನ್ ಅನ್ನು ಕ್ಲಿಕ್ ಮಾಡಿ.
04:24 ಈಗ ನಾವಿರುವ ಪೇಜ್ ಅನ್ನು dashboard ಎನ್ನುತ್ತಾರೆ.
04:29 ನಮ್ಮ ಡ್ಯಾಶ್-ಬೋರ್ಡ್ ಅನ್ನು ಮೂರು ಕಾಲಮ್ ಗಳಾಗಿ ವಿಂಗಡಿಸಲಾಗಿದೆ.
04:34 ಎಡಭಾಗದಲ್ಲಿರುವುದು Navigation ಮೆನ್ಯು ಆಗಿದೆ. ಮಧ್ಯದಲ್ಲಿರುವ ಅಗಲವಾದ ಭಾಗವು Course overview ಆಗಿದೆ. ಇದು 'Timeline' ಮತ್ತು 'Courses' ಟ್ಯಾಬ್ ಗಳನ್ನು ಹೊಂದಿದೆ.
04:47 ಬಲಭಾಗದಲ್ಲಿರುವುದು Blocks ಕಾಲಮ್ ಆಗಿದೆ.
04:51 Courses ಟ್ಯಾಬ್, ನೀವು ದಾಖಲಾಗಿರುವ ಕೋರ್ಸ್ ಗಳನ್ನು ಪಟ್ಟಿ ಮಾಡುವುದು.

Course overview ಜಾಗದಲ್ಲಿರುವ Courses ಟ್ಯಾಬ್ ಅನ್ನು ಕ್ಲಿಕ್ ಮಾಡಿ.

05:02 In Progress ಟ್ಯಾಬ್ ನಲ್ಲಿ Calculus ಮತ್ತು Linear Algebra ಈ ಎರಡು ಕೋರ್ಸ್ ಗಳನ್ನು ನೋಡುತ್ತೇವೆ. ಅಡ್ಮಿನ್, ಇವುಗಳನ್ನು ಟೀಚರ್ ರೆಬೆಕಾ ರೇಮೆಂಡ್ ಅವರಿಗೆ ಅಸೈನ್ ಮಾಡಿದ್ದಾರೆ.
05:17 ಅವರಿಗೆ ಮುಂಗಡವಾಗಿ ಅಸೈನ್ ಮಾಡಿದ ಕೋರ್ಸ್ ಗಳನ್ನು Future ಟ್ಯಾಬ್ ನಲ್ಲಿ ಮತ್ತು ಅವರು ಮುಗಿಸಿದ ಕೋರ್ಸ್ ಗಳನ್ನು Past ಟ್ಯಾಬ್ ನಲ್ಲಿ ನೋಡುವೆವು.
05:30 ಈಗ ಪೇಜ್ ನ ಹೆಡರ್ ಅನ್ನು ನೋಡೋಣ. ಮೇಲಿನ ಎಡಮೂಲೆಯಲ್ಲಿ, ನಾವು ನ್ಯಾವಿಗೇಷನ್ ಡ್ರಾವರ್ ಅಥವಾ ನ್ಯಾವಿಗೇಷನ್ ಮೆನ್ಯುವನ್ನು ನೋಡಬಹುದು.
05:41 ಇಲ್ಲಿ Calendar, Private Files ಮತ್ತು My courses ಲಿಂಕ್ ಗಳಿಗೆ ಆಕ್ಸೆಸ್ ಸಿಗುತ್ತದೆ.
05:48 ಇದೊಂದು ಟಾಗಲ್ ಮೆನ್ಯುವಾಗಿದ್ದು, ಕ್ಲಿಕ್ ಮಾಡಿದಾಗ ಇದರ ಸ್ಟ್ಯಾಟಸ್ ಓಪನ್ ನಿಂದ ಕ್ಲೋಸ್ ಮತ್ತು ಕ್ಲೋಸ್ ನಿಂದ ಓಪನ್ ಗೆ ಬದಲಾಗುತ್ತದೆ.
05:58 ಮೇಲೆ ಬಲಭಾಗದಲ್ಲಿ, notifications ಮತ್ತು messages ಗಳಿಗಾಗಿ ‘ಕ್ವಿಕ್ ಆಕ್ಸೆಸ್’ ಐಕಾನ್ ಗಳಿವೆ.
06:06 ಮೇಲೆ ಬಲಭಾಗದಲ್ಲಿರುವ profile picture ನ ಮೇಲೆ ಕ್ಲಿಕ್ ಮಾಡಿದರೆ, ಯೂಸರ್ ಮೆನ್ಯುವನ್ನು ಆಕ್ಸೆಸ್ ಮಾಡಲು ಸಾಧ್ಯವಾಗುತ್ತದೆ. ಇದನ್ನು quick access user menu ಎಂದು ಸಹ ಹೇಳಲಾಗುತ್ತದೆ.
06:18 ಇದರ ಮೇಲೆ ಕ್ಲಿಕ್ ಮಾಡಿ. ಈ ಎಲ್ಲಾ ಐಟಂಗಳೂ ಕೂಡ ಎಡಭಾಗದಲ್ಲಿರುವ ಮೆನ್ಯುವಿನಂತೆ ಟಾಗಲ್ ಮೆನ್ಯುಗಳಾಗಿವೆ.
06:28 Profile ಆಯ್ಕೆಯ ಮೇಲೆ ಕ್ಲಿಕ್ ಮಾಡಿ. ಮೂಡಲ್ ನಲ್ಲಿ ಪ್ರತಿಯೊಬ್ಬ ಯೂಸರ್ ಒಂದು ‘ಪ್ರೊಫೈಲ್ ಪೇಜ್’ ಅನ್ನು ಹೊಂದಿರುತ್ತಾನೆ.
06:36 ಯೂಸರ್ ಗಳು ತಮ್ಮ ಪ್ರೊಫೈಲ್ ಮಾಹಿತಿಯನ್ನು ಎಡಿಟ್ ಮಾಡಲು, ದಾಖಲಾಗಿರುವ ಕೋರ್ಸ್ ಗಳನ್ನು ನೋಡಲು,
06:46 blog ಅಥವಾ forum ಪೋಸ್ಟ್ ಗಳನ್ನು ನೋಡಲು, ಆಕ್ಸೆಸ್ ಮಾಡಲು ಸಾಧ್ಯವಿರುವ ರಿಪೋರ್ಟ್ ಗಳನ್ನು ಪರೀಕ್ಷಿಸಲು ಮತ್ತು ಹಿಂದಿನ ಬಾರಿ ಲಾಗಿನ್ ಆಗಲು ಬಳಸಿದ ಆಕ್ಸೆಸ್-ಲಾಗ್ ಗಳನ್ನು ನೋಡಲು ಈ ಲಿಂಕ್ ಅನ್ನು ಬಳಸಬಹುದು.
07:01 ಈಗ ನಾವು Edit Profile ಲಿಂಕ್ ಅನ್ನು ಕ್ಲಿಕ್ ಮಾಡೋಣ.
07:06 Edit Profile ಪೇಜ್ ತೆರೆದುಕೊಳ್ಳುತ್ತದೆ.

ಈ ಪೇಜ್ ನಲ್ಲಿ:

General,

User Picture,

Additional Names,

Interests,

Optional ಎಂಬ ಐದು ವಿಭಾಗಗಳಿವೆ.

07:24 ಡಿಫಾಲ್ಟ್ ಆಗಿ, General ಮತ್ತು User picture ವಿಭಾಗಗಳನ್ನು ವಿಸ್ತರಿಸಲಾಗಿದೆ.
07:30 ಬಲಗಡೆಯಿರುವ ‘Expand all’ ಲಿಂಕ್, ಎಲ್ಲ ವಿಭಾಗಗಳನ್ನು ವಿಸ್ತರಿಸುತ್ತದೆ.
07:36 ಯಾವುದೇ ವಿಭಾಗದ ಹೆಸರಿನ ಮೇಲೆ ಕ್ಲಿಕ್ ಮಾಡಿದಾಗ, ಅದು ವಿಸ್ತಾರವಾಗುತ್ತದೆ ಅಥವಾ ಚಿಕ್ಕದಾಗುತ್ತದೆ.
07:42 ಇಲ್ಲಿರುವ ಎಲ್ಲ ಫೀಲ್ಡ್ ಗಳನ್ನು ಎಡಿಟ್ ಮಾಡಬಹುದು.
07:45 ನಾನು ಇಲ್ಲಿ ಮಾಡಿರುವಂತೆ General ವಿಭಾಗದಲ್ಲಿ ನಿಮ್ಮ ವೈಯಕ್ತಿಕ ಮಾಹಿತಿಯನ್ನು ಕೊಡಬಹುದು.
07:52 ನನ್ನ ವಿದ್ಯಾರ್ಥಿಗಳು ನನ್ನ ಬಗ್ಗೆ ಸ್ವಲ್ಪ ತಿಳಿದಿರಲಿ ಎಂದು ನಾನು ಬಯಸುತ್ತೇನೆ.
07:58 ಹೀಗಾಗಿ, ಇಲ್ಲಿ Description ಫೀಲ್ಡ್ ನಲ್ಲಿ, ನಾನು ಕೆಲವು ವಿವರಗಳನ್ನು ಕೊಡುತ್ತೇನೆ.
08:04 ಟ್ಯುಟೋರಿಯಲ್ ಅನ್ನು ನಿಲ್ಲಿಸಿ. ಇಲ್ಲಿ ನಾನು ಮಾಡಿದ ಹಾಗೆ ನಿಮ್ಮ ವಿವರಗಳನ್ನು ತುಂಬಿ.
08:10 ಉಳಿದ ಫೀಲ್ಡ್ ಮತ್ತು ವಿಭಾಗಗಳಲ್ಲಿ ನೀವು ಸ್ವಲ್ಪ ಹೆಚ್ಚಿನ ಮಾಹಿತಿಗಳನ್ನು ಸೇರಿಸಬಹುದು. ನಿಮ್ಮ ಛಾಯಾಚಿತ್ರವನ್ನು ಸಹ ನೀವು ಅಪ್ಲೋಡ್ ಮಾಡಬಹುದು.
08:19 General ಮತ್ತು Optional ವಿಭಾಗಗಳಲ್ಲಿ ನಾನು ಇನ್ನೂ ಕೆಲವು ಮಾಹಿತಿಗಳನ್ನು ಸೇರಿಸಿದ್ದೇನೆ.
08:25 ಈಗ Update Profile ಬಟನ್ ಅನ್ನು ಕ್ಲಿಕ್ ಮಾಡಿ, ಪೇಜ್ ಅನ್ನು ಸೇವ್ ಮಾಡಿ.
08:30 ಇನ್ನೊಮ್ಮೆ ಮೇಲೆ ಬಲಗಡೆಯಿರುವ quick access user menu ಮೇಲೆ, ನಂತರ Preferences ಲಿಂಕ್ ಮೇಲೆ ಕ್ಲಿಕ್ ಮಾಡಿ.
08:40 ಯೂಸರ್ ಗಳು ಎಡಿಟ್ ಮಾಡಲು ಬಯಸುವ ವಿವಿಧ ಸೆಟ್ಟಿಂಗ್ ಗಳಿಗೆ Preferences ಪೇಜ್, ತಕ್ಷಣ ಆಕ್ಸೆಸ್ ಅನ್ನು ಕೊಡುತ್ತದೆ.
08:48 ಟೀಚರ್ ಅಕೌಂಟ್ ಗಾಗಿ, Preferences ಪೇಜ್ ಅನ್ನು User account, Blogs ಮತ್ತು Badges ಎಂದು ವಿಂಗಡಿಸಲಾಗಿದೆ.
09:00 ನಾವು ಈಗಾಗಲೇ Edit Profile ಮತ್ತು Change Password ಗಳನ್ನು ನೋಡಿದ್ದೇವೆ.
09:06 ಇಲ್ಲಿ:

Language,

Forum,

Editor,

Course,

Calendar,

Message,

Notification ಇವುಗಳಿಗಾಗಿ ಇನ್ನೂ ಕೆಲವು ಪ್ರಿಫರೆನ್ಸ್ ಗಳಿವೆ.

09:19 ನಾವು Calendar preferences ಅನ್ನು ಕ್ಲಿಕ್ ಮಾಡೋಣ.
09:23 ಕ್ಯಾಲೆಂಡರ್ ಅನ್ನು 24-hour ಫಾರ್ಮ್ಯಾಟ್ ನಲ್ಲಿ ತೋರಿಸಲು ನಾವು ಸೆಟ್ ಮಾಡೋಣ.
09:29 ಅಲ್ಲದೆ Upcoming events look-ahead ಅನ್ನು 2 weeks ಗೆ ಸೆಟ್ ಮಾಡೋಣ.
09:35 ಎಂದರೆ, ಮುಂದಿನ ಎರಡು ವಾರಗಳಲ್ಲಿ ನಡೆಯುವ ಎಲ್ಲ ಘಟನೆಗಳಿಗಾಗಿ ಕ್ಯಾಲೆಂಡರ್ ನಲ್ಲಿ ನಾವು ನೋಟಿಫಿಕೇಷನ್ ಗಳನ್ನು ನೋಡಬಹುದು.
09:43 Save Changes ಬಟನ್ ಅನ್ನು ಕ್ಲಿಕ್ ಮಾಡಿ.
09:46 ನಂತರ ಈ ಸರಣಿಯಲ್ಲಿ ಉಳಿದ ಪ್ರಿಫರೆನ್ಸ್ ಗಳನ್ನು ನಾವು ಚರ್ಚಿಸುವಾಗ ಅವುಗಳ ಬಗ್ಗೆ ನೋಡೋಣ.
09:54 ಇಲ್ಲಿರುವ ಮಾಹಿತಿಯನ್ನು ಗಮನಿಸಿ.
09:57 ಇದು ಬ್ರೆಡ್ ಕ್ರಂಬ್ ನ್ಯಾವಿಗೇಷನ್ ಆಗಿದೆ. ಇದು, ಮೂಡಲ್ ಸೈಟ್ ಗಳ ಕ್ರಮಾನುಗತದಲ್ಲಿ (ಹೈರಾರ್ಕಿ) ನಾವು ಯಾವ ಪೇಜ್ ನಲ್ಲಿದ್ದೇವೆ ಎಂದು ತೋರಿಸುವ ವೀಕ್ಷಣೆಯ ಒಂದು ಸಾಧನ (ವಿಷ್ಯುಅಲ್ ಏಯ್ಡ್) ಆಗಿದೆ.
10:09 ಒಂದೇ ಕ್ಲಿಕ್ ಮೂಲಕ ಹೆಚ್ಚಿನ ಶ್ರೇಣಿಯ ಪೇಜ್ ಗೆ ಹಿಂದಿರುಗಲು ಇದು ನಮಗೆ ಸಹಾಯ ಮಾಡುತ್ತದೆ.
10:15 ಡ್ಯಾಶ್ ಬೋರ್ಡ್ ಗೆ ಹೋಗಲು, ಬ್ರೆಡ್-ಕ್ರಂಬ್ಸ್ ನಲ್ಲಿರುವ Dashboard ಲಿಂಕ್ ಅನ್ನು ಕ್ಲಿಕ್ ಮಾಡಿ.
10:21 ಈಗ ನಾವು Calculus ಕೋರ್ಸ್ ಗಾಗಿ ಒಂದು ಟಾಪಿಕ್ ಮತ್ತು ಸಾರಾಂಶವನ್ನು ಸೇರಿಸುವುದು ಹೇಗೆ ಎಂದು ನೋಡೋಣ.
10:28 ಎಡಭಾಗದ ನ್ಯಾವಿಗೇಷನ್ ಮೆನ್ಯುವಿನಲ್ಲಿ, Calculus ಕೋರ್ಸ್ ಮೇಲೆ ನಾವು ಕ್ಲಿಕ್ ಮಾಡೋಣ.
10:34 ಹೊಸ ಪೇಜ್ ನಲ್ಲಿ, ಮೇಲೆ ಬಲಭಾಗದಲ್ಲಿರುವ gear ಐಕಾನ್ ಅನ್ನು ಕ್ಲಿಕ್ ಮಾಡಿ.
10:40 ನಂತರ Turn editing on ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
10:45 ಈಗ ಪೇಜ್ ನಲ್ಲಿ ಹೆಚ್ಚಿನ ಎಡಿಟ್ ಆಯ್ಕೆಗಳು ಕಾಣಿಸುತ್ತವೆ.
10:50 Topic 1 ದ ಬದಿಯಲ್ಲಿರುವ pencil ಐಕಾನ್ ನ ಮೇಲೆ ಕ್ಲಿಕ್ ಮಾಡಿ.
10:55 ಈಗ ಕಾಣಿಸಿಕೊಳ್ಳುವ ಟೆಕ್ಸ್ಟ್-ಬಾಕ್ಸ್ ನಲ್ಲಿ Basic Calculus ಎಂದು ಟೈಪ್ ಮಾಡಿ, Enter ಅನ್ನು ಒತ್ತಿ.
11:03 ಈಗ ಟಾಪಿಕ್ ನ ಹೆಸರು ಬದಲಾಗುವುದನ್ನು ಗಮನಿಸಿ.
11:06 ಈಗ ಆ ಟಾಪಿಕ್ ನ ಬಲತುದಿಯಲ್ಲಿರುವ Edit ಲಿಂಕ್ ನ ಮೇಲೆ ಕ್ಲಿಕ್ ಮಾಡಿ.
11:11 ನಂತರ Edit topic ಆಯ್ಕೆಯನ್ನು ಕ್ಲಿಕ್ ಮಾಡಿ.
11:15 ಇದು ನಮ್ಮನ್ನು Summary ಪೇಜ್ ಗೆ ಕರೆದೊಯ್ಯುತ್ತದೆ.
11:18 ಇಲ್ಲಿ, Summary ಫೀಲ್ಡ್ ನಲ್ಲಿ, ನಾವು ಟಾಪಿಕ್ ನ ಸಂಕ್ಷಿಪ್ತ ವಿವರಣೆಯನ್ನು ಕೊಡಬಹುದು. ನಾನು ಹೀಗೆ ಟೈಪ್ ಮಾಡುವೆನು.
11:27 ಕೆಳಕ್ಕೆ ಸ್ಕ್ರೋಲ್ ಮಾಡಿ, Save Changes ಬಟನ್ ಅನ್ನು ಕ್ಲಿಕ್ ಮಾಡಿ.
11:32 ಬದಲಾವಣೆಯನ್ನು ಗಮನಿಸಿ.
11:34 ಹೀಗೆ ನಾವು ಮೂಡಲ್ ನಲ್ಲಿ ನಮ್ಮ ಕೋರ್ಸ್ ನ ವಿವರಗಳನ್ನು ಸೇರಿಸಲು ಪ್ರಾರಂಭಿಸುತ್ತೇವೆ.
11:40 ಈಗ ನಾವು Moodle ನಿಂದ ಲಾಗೌಟ್ ಆಗುವೆವು. ಇದಕ್ಕಾಗಿ, ಮೇಲೆ ಬಲಗಡೆಯಲ್ಲಿರುವ user ಐಕಾನ್ ಅನ್ನು ಕ್ಲಿಕ್ ಮಾಡಿ. ಈಗ Log out ಅನ್ನು ಕ್ಲಿಕ್ ಮಾಡಿ.
11:50 ಇದರೊಂದಿಗೆ ನಾವು ಈ ಟ್ಯುಟೋರಿಯಲ್ ನ ಕೊನೆಯನ್ನು ತಲುಪಿದ್ದೇವೆ.

ಸಂಕ್ಷಿಪ್ತವಾಗಿ,

11:56 ಈ ಟ್ಯುಟೋರಿಯಲ್ ನಲ್ಲಿ ನಾವು,

Course overview ವಿವರಗಳು,

teachers’ dashboard ,

12:05 Edit profile ಸೆಟ್ಟಿಂಗ್ ಗಳು,

Preferences ಸೆಟ್ಟಿಂಗ್ ಗಳು ಮತ್ತು ಮೂಡಲ್ ನಲ್ಲಿ ನಮ್ಮ ಕೋರ್ಸ್ ನ ಕೆಲವು ವಿವರಗಳನ್ನು ಸೇರಿಸಲು ಕಲಿತಿದ್ದೇವೆ.

12:16 ಇಲ್ಲಿ ಒಂದು ಅಸೈನ್ಮೆಂಟ್ ಇದೆ:

Calculus ಕೋರ್ಸ್ ನಲ್ಲಿ ಎಲ್ಲ ಟಾಪಿಕ್ ಗಳ ಹೆಸರನ್ನು ಬದಲಿಸಿ. ಎಲ್ಲ ಟಾಪಿಕ್ ಗಳಿಗೂ ಅದರ ಸಾರಾಂಶವನ್ನು ಸೇರಿಸಿ. ಹೆಚ್ಚಿನ ವಿವರಗಳಿಗಾಗಿ, ಈ ಟ್ಯುಟೋರಿಯಲ್ ನ Assignment ಲಿಂಕ್ ಅನ್ನು ನೋಡಿ.

12:31 ಈ ಲಿಂಕ್ ನಲ್ಲಿರುವ ವೀಡಿಯೊ, 'ಸ್ಪೋಕನ್ ಟ್ಯುಟೋರಿಯಲ್' ಪ್ರೊಜೆಕ್ಟ್ ನ ಸಾರಾಂಶವಾಗಿದೆ. ದಯವಿಟ್ಟು ಇದನ್ನು ಡೌನ್ಲೋಡ್ ಮಾಡಿ ವೀಕ್ಷಿಸಿ.
12:39 'ಸ್ಪೋಕನ್ ಟ್ಯುಟೋರಿಯಲ್' ಪ್ರೊಜೆಕ್ಟ್ ತಂಡವು ಕಾರ್ಯಶಾಲೆಗಳನ್ನು ನಡೆಸುತ್ತದೆ ಮತ್ತು ಪ್ರಮಾಣಪತ್ರಗಳನ್ನು ಕೊಡುತ್ತದೆ. ಹೆಚ್ಚಿನ ವಿವರಗಳಿಗಾಗಿ ದಯವಿಟ್ಟು ನಮಗೆ ಬರೆಯಿರಿ.
12:49 ಈ ಫೋರಂ ನಲ್ಲಿ, ನಿಮ್ಮ ಪ್ರಶ್ನೆಯನ್ನು ಸಮಯದೊಂದಿಗೆ ಪೋಸ್ಟ್ ಮಾಡಿ.
12:53 'ಸ್ಪೋಕನ್ ಟ್ಯುಟೋರಿಯಲ್' ಪ್ರೊಜೆಕ್ಟ್, NMEICT, MHRD, ಭಾರತ ಸರ್ಕಾರದಿಂದ ಅನುದಾನವನ್ನು ಪಡೆದಿದೆ. ಈ ಮಿಷನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಕೆಳಗೆ ತೋರಿಸಿರುವ ಲಿಂಕ್ ನಲ್ಲಿ ಲಭ್ಯವಿದೆ.
13:06 ಸ್ಕ್ರಿಪ್ಟ್ ನ ಅನುವಾದಕಿ, ಮೈಸೂರಿನಿಂದ ಅಂಜನಾ ಅನಂತ್ ನಾಗ್ ಮತ್ತು ಧ್ವನಿ ಶ್ರೀ ನವೀನ್ ಭಟ್, ಉಪ್ಪಿನಪಟ್ಟಣ.
13:17 ಧನ್ಯವಾದಗಳು.

Contributors and Content Editors

Anjana310312, Sandhya.np14