Moodle-Learning-Management-System/C2/Enroll-Students-and-Communicate-in-Moodle/Kannada

From Script | Spoken-Tutorial
Revision as of 22:31, 14 December 2019 by Sandhya.np14 (Talk | contribs)

(diff) ← Older revision | Latest revision (diff) | Newer revision → (diff)
Jump to: navigation, search
Time Narration
00:01 Enroll students and communicate in Moodle ಎಂಬ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ.
00:08 ಈ ಟ್ಯುಟೋರಿಯಲ್ ನಲ್ಲಿ ನಾವು:
csv file  ಮೂಲಕ ಕೋರ್ಸ್ ಗೆ ಅಪ್ಲೋಡ್ ಆದ ವಿದ್ಯಾರ್ಥಿಗಳನ್ನು ದಾಖಲು ಮಾಡುವುದು, 
00:18 ಕೋರ್ಸ್ ಗಳಲ್ಲಿ group ಗಳನ್ನು ಮಾಡುವುದು,

ವಿದ್ಯಾರ್ಥಿಗಳಿಗೆ message ಮತ್ತು notes ಗಳನ್ನು ಕಳುಹಿಸುವುದು ಇವುಗಳ ಬಗ್ಗೆ ಕಲಿಯುವೆವು.

00:26 ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು, ನಾನು:

Ubuntu Linux OS 16.04,

00:33 XAMPP 5.6.30 ಮೂಲಕ ಪಡೆದ Apache, MariaDB ಮತ್ತು PHP,
00:41 Moodle 3.3 ಮತ್ತು Firefox ವೆಬ್-ಬ್ರೌಸರ್ ಅನ್ನು ಬಳಸಿದ್ದೇನೆ.

ನಿಮ್ಮ ಆಯ್ಕೆಯ ಯಾವುದೇ ವೆಬ್-ಬ್ರೌಸರ್ ಅನ್ನು ನೀವು ಬಳಸಬಹುದು.

00:51 ಆದಾಗ್ಯೂ, Internet Explorer ಅನ್ನು ಮಾತ್ರ ಬಳಸಬಾರದು, ಅದು ಅಷ್ಟು ಸರಿಯಾಗಿ ಡಿಸ್ಪ್ಲೇ ಮಾಡುವುದಿಲ್ಲ.
01:00 ಇಲ್ಲಿ ನಿಮ್ಮ 'ಸೈಟ್ ಅಡ್ಮಿನಿಸ್ಟ್ರೇಟರ್', ನಿಮ್ಮನ್ನು teacher ಆಗಿ ನೋಂದಾಯಿಸಿ, ಒಂದಾದರೂ ಕೋರ್ಸ್ ಅನ್ನು ನಿಮಗೆ ಅಸೈನ್ ಮಾಡಿದ್ದಾರೆ ಎಂದು ಭಾವಿಸುತ್ತೇವೆ.
01:11 ನೀವು ಸ್ವಲ್ಪ ಕೋರ್ಸ್ ಮಟೀರಿಯಲ್, ಅಸೈನ್ಮೆಂಟ್ ಮತ್ತು ಕ್ವಿಜ್ ಗಳನ್ನು ನಿಮ್ಮ ಕೋರ್ಸ್ ಗೆ ಸೇರಿಸಿದ್ದೀರಿ ಎಂದು ಸಹ ಭಾವಿಸುತ್ತೇವೆ.
01:19 ಇಲ್ಲದಿದ್ದರೆ, ಸಂಬಂಧಿತ Moodle ಟ್ಯುಟೋರಿಯಲ್ ಗಳನ್ನು ಈ ವೆಬ್ಸೈಟ್ ನಲ್ಲಿ ನೋಡಿ.
01:26 ಪ್ರಾರಂಭಿಸುವ ಮೊದಲು, ನಿಮ್ಮ ಮೂಡಲ್ ಸೈಟ್ ಗೆ ಐದು ಅಥವಾ ಆರು ಯೂಸರ್ ಗಳನ್ನು ಸೇರಿಸುವಂತೆ ನಿಮ್ಮ 'ಮೂಡಲ್ ಸೈಟ್ ಅಡ್ಮಿನಿಸ್ಟ್ರೇಟರ್' ಅನ್ನು ಕೇಳಿಕೊಳ್ಳಿ.
01:36 ಈ ಹೊಸ ಯೂಸರ್ ಗಳನ್ನು ನೀವು ಆಮೇಲೆ ನಿಮ್ಮ ಕೋರ್ಸ್ ಗೆ ಸೇರಿಸಲಿದ್ದೀರಿ. ಹಾಗಾಗಿ ನಿಮ್ಮ Moodle ಸೈಟ್ ಗೆ ಹೊಸ ಯೂಸರ್ ಗಳನ್ನು ಸೇರಿಸಿರುವುದನ್ನು ಖಚಿತಪಡಿಸಿಕೊಳ್ಳಿ.
01:47 ಮೂಡಲ್ ನಲ್ಲಿ ಟೀಚರ್ ಗಳು ಹೊಸ ಯೂಸರ್ ಗಳನ್ನು ಸಿಸ್ಟಂನಲ್ಲಿ ಸೇರಿಸಲು ಸಾಧ್ಯವಿಲ್ಲ. ಅವರು ಸೈಟ್-ಅಡ್ಮಿನಿಸ್ಟ್ರೇಟರ್ ನಿಂದ ಈಗಾಗಲೇ ಸೇರಿಸಲ್ಪಟ್ಟ ಯೂಸರ್ ಅನ್ನು ದಾಖಲು ಮಾತ್ರ ಮಾಡಬಹುದು.
01:59 ಬ್ರೌಸರ್ ಗೆ ಹಿಂದಿರುಗಿ. ನಿಮ್ಮ ಮೂಡಲ್ ಸೈಟ್ ನಲ್ಲಿ teacher ಎಂದು ಲಾಗಿನ್ ಮಾಡಿ.
02:06 ಎಡಗಡೆಯ ನ್ಯಾವಿಗೇಷನ್ ಮೆನ್ಯುವಿನಲ್ಲಿ Calculus ಕೋರ್ಸ್ ಅನ್ನು ಕ್ಲಿಕ್ ಮಾಡಿ.
02:11 ಮೇಲ್ಗಡೆ ಬಲಭಾಗದಲ್ಲಿರುವ ಗೇರ್-ಐಕಾನ್ ಮೇಲೆ, ನಂತರ More... ಮೇಲೆ ಕ್ಲಿಕ್ ಮಾಡಿ.
02:18 ನಾವು ಈಗ Course Administration ಪೇಜ್ ನಲ್ಲಿದ್ದೇವೆ.
02:22 Users ಟ್ಯಾಬ್ ಅನ್ನು ಕ್ಲಿಕ್ ಮಾಡಿ.
02:25 Users ವಿಭಾಗದಲ್ಲಿ Enrolled users ಲಿಂಕ್ ಅನ್ನು ಕ್ಲಿಕ್ ಮಾಡಿ.
02:30 ಈ ಕೋರ್ಸ್ ನಲ್ಲಿ, ರೆಬೆಕಾ ರೇಮಂಡ್ ಮತ್ತು ಪ್ರಿಯಾ ಸಿನ್ಹಾ ಎಂಬ ಇಬ್ಬರು ಯೂಸರ್ ಗಳು ದಾಖಲಾಗಿದ್ದಾರೆ.
02:38 ರೆಬೆಕಾ ರೇಮಂಡ್ ಟೀಚರ್ ರೋಲ್ ಅನ್ನು ಮತ್ತು ಪ್ರಿಯಾ ಸಿನ್ಹಾ ಸ್ಟುಡೆಂಟ್ ರೋಲ್ ಅನ್ನು ಹೊಂದಿದ್ದಾರೆ.
02:44 ಈಗ, ಕೆಳಗೆ ಬಲಗಡೆಯಿರುವ Enrol users ಬಟನ್ ಅನ್ನು ಕ್ಲಿಕ್ ಮಾಡಿ.
02:49 ನನ್ನ ಕ್ಯಾಲ್ಕ್ಯುಲಸ್ ಕೋರ್ಸ್ ಗೆ ದಾಖಲು ಮಾಡಬಯಸುವ ವಿದ್ಯಾರ್ಥಿಗಳ ಹೆಸರುಗಳು ಈ ಪಟ್ಟಿಯಲ್ಲಿವೆ.
02:55 Assign Roles ಡ್ರಾಪ್-ಡೌನ್ ನಲ್ಲಿ, Student ಅನ್ನು ಆಯ್ಕೆಮಾಡಿ.
03:00 ನೀವು ದಾಖಲು ಮಾಡಬಯಸುವ ಯೂಸರ್ ನ ಬದಿಯಲ್ಲಿರುವ Enrol ಬಟನ್ ಅನ್ನು ಕ್ಲಿಕ್ ಮಾಡಿ.
03:06 ನನ್ನ ಕೋರ್ಸ್ ಗೆ ಕೆಲವು ವಿದ್ಯಾರ್ಥಿಗಳನ್ನು ನಾನು ಈಗಲೇ ದಾಖಲು ಮಾಡುವೆನು.
03:11 ಇದಾದ ನಂತರ, ಕೆಳಗೆ ಬಲಗಡೆಯಿರುವ Finish enrolling users ಬಟನ್ ಅನ್ನು ಕ್ಲಿಕ್ ಮಾಡಿ.
03:18 ಈ ಪೇಜ್ ನ ಮೇಲ್ಭಾಗದಲ್ಲಿ, ಕ್ಯಾಲ್ಕ್ಯುಲಸ್ ಕೋರ್ಸ್ ಗೆ ದಾಖಲಾಗಿರುವ ಯೂಸರ್ ಗಳ ಸಂಖ್ಯೆಯನ್ನು ನಾವು ನೋಡಬಹುದು.
03:25 ಈಗ ಕೋರ್ಸ್ ನಲ್ಲಿ group ಗಳನ್ನು ಹೇಗೆ ರಚಿಸುವುದೆಂದು ನೋಡೋಣ.
03:30 group activitiy ಗಳಿಗಾಗಿ ವಿದ್ಯಾರ್ಥಿಗಳನ್ನು ಅಸೈನ್ ಮಾಡಲು, ಈ ಗ್ರುಪ್ ಗಳು ನಮಗೆ ಸಹಾಯ ಮಾಡುತ್ತವೆ.
03:36 ನಾನು Explorers ಮತ್ತು Creators ಎಂಬ ಎರಡು ಗ್ರುಪ್ ಗಳನ್ನು ಮಾಡುವೆನು.
03:42 course ಪೇಜ್ ಗೆ ಹಿಂದಿರುಗಲು, ಬ್ರೆಡ್-ಕ್ರಂಬ್ ನಲ್ಲಿ Calculus ಅನ್ನು ಕ್ಲಿಕ್ ಮಾಡಿ.
03:48 ಮತ್ತೊಮ್ಮೆ Course Administrator ಪೇಜ್ ಗೆ ಹೋಗಿ.
03:52 Users ಟ್ಯಾಬ್ ನಲ್ಲಿ Groups ಲಿಂಕ್ ಅನ್ನು ಕ್ಲಿಕ್ ಮಾಡಿ.
03:56 ಕೆಳಗೆ ಸ್ಕ್ರೋಲ್ ಮಾಡಿ Create group ಬಟನ್ ಅನ್ನು ಕ್ಲಿಕ್ ಮಾಡಿ.
04:01 Group name ಅನ್ನು Explorers ಎಂದು ಟೈಪ್ ಮಾಡಿ.
04:05 ಇಲ್ಲಿ ಬೇರೆ ಯಾವುದೇ ಕಡ್ಡಾಯವಾದ ಫೀಲ್ಡ್ ಗಳಿಲ್ಲ.
04:08 ಕೆಳಗೆ ಸ್ಕ್ರೋಲ್ ಮಾಡಿ Save changes ಬಟನ್ ಅನ್ನು ಕ್ಲಿಕ್ ಮಾಡಿ.
04:12 ಗಮನಿಸಿ: ಈಗ ಎಡಗಡೆಯಲ್ಲಿ, ಗ್ರುಪ್ ಗಳ ಪಟ್ಟಿಯಲ್ಲಿ Explorers ಅನ್ನು ಕಾಣಬಹುದು.
04:19 ಇದರ ಮುಂದೆ ಇರುವ ಸೊನ್ನೆಯು ಈ ಗ್ರುಪ್ ನಲ್ಲಿ ಸಧ್ಯಕ್ಕೆ ಯಾವ ಯೂಸರ್ ಇಲ್ಲ ಎಂದು ಸೂಚಿಸುತ್ತದೆ.

ಈಗಾಗಲೇ ಆಯ್ಕೆಮಾಡಿರದಿದ್ದರೆ, Explorers ಅನ್ನು ಆಯ್ಕೆಮಾಡಿ.

04:30 ಕೆಳಗೆ ಬಲಗಡೆಯಿರುವ Add/remove users ಬಟನ್ ಅನ್ನು ಕ್ಲಿಕ್ ಮಾಡಿ.
04:36 ವಿದ್ಯಾರ್ಥಿಗಳ ಪಟ್ಟಿಯಿಂದ ನಾನು Susmitha ಮತ್ತು Sai ಯನ್ನು ಆಯ್ಕೆ ಮಾಡುವೆನು.
04:42 ನಂತರ, ಎರಡು ಕಾಲಮ್ ಗಳ ಮಧ್ಯದಲ್ಲಿರುವ Add ಬಟನ್ ಅನ್ನು ಕ್ಲಿಕ್ ಮಾಡಿ.
04:48 ಎಡಗಡೆ, Explorers' ಗ್ರುಪ್ ನಲ್ಲಿರುವ ಯೂಸರ್ ಗಳ ಪಟ್ಟಿಯನ್ನು ಗಮನಿಸಿ.
04:54 ಬಲಗಡೆ, ಈ ಕೋರ್ಸ್ ಗೆ ದಾಖಲಾಗಿರುವ ಉಳಿದ ಎಲ್ಲಾ ವಿದ್ಯಾರ್ಥಿಗಳ ಪಟ್ಟಿಯನ್ನು ಗಮನಿಸಿ.
05:00 ಟೀಚರ್ ತಮಗೆ ಬೇಕಾದಾಗ ಅವರನ್ನು ಈ ಗ್ರುಪ್ ಗೆ ಸೇರಿಸಿಕೊಳ್ಳಬಹುದು.
05:06 ನಾವು ಲಿಸ್ಟ್ ನಿಂದ ಯೂಸರ್ ಗಳನ್ನು ಆಯ್ಕೆಮಾಡಿದಾಗ, ಎರಡು ಲಿಸ್ಟ್ ಗಳ ನಡುವೆ ಇರುವ Add ಮತ್ತು Remove ಬಟನ್ ಗಳು ಸಕ್ರಿಯವಾಗುತ್ತವೆ.
05:15 ಪೇಜ್ ನ ಕೆಳಗಿರುವ Back to groups ಬಟನ್ ಅನ್ನು ಕ್ಲಿಕ್ ಮಾಡಿ.
05:21 ಟ್ಯುಟೋರಿಯಲ್ ಅನ್ನು ಇಲ್ಲಿ ನಿಲ್ಲಿಸಿ, ಈ ಸಣ್ಣ ಅಸೈನ್ಮೆಂಟ್ ಅನ್ನು ಮಾಡಿ. Creators ಎಂಬ ಒಂದು ಹೊಸ ಗ್ರುಪ್ ಅನ್ನು ಸೇರಿಸಿ.
05:28 ಆ ಗ್ರುಪ್ ಗೆ ಎರಡು ಹೊಸ ಯೂಸರ್ ಗಳನ್ನು ಅಸೈನ್ ಮಾಡಿ. ನಂತರ ಟ್ಯುಟೋರಿಯಲ್ ಅನ್ನು ಪುನರಾರಂಭಿಸಿ.
05:35 ಈಗ ನಿಮಗೆ ಸ್ಕ್ರೀನ್ ಹೀಗೆ ಕಾಣಿಸಬೇಕು.
05:40 ಗಮನಿಸಿ: Roles, Groups ಮತ್ತು Enrolment Methods ಈ ಕಾಲಮ್ ಗಳು, ಐಕಾನ್ ಗಳನ್ನು ಹೊಂದಿವೆ.
05:48 ಅವುಗಳ ಕಾರ್ಯವನ್ನು ತಿಳಿಯಲು, ಪ್ರತಿಯೊಂದು ಐಕಾನ್ ನ ಮೇಲೂ ಮೌಸ್ ಅನ್ನು ನಡೆದಾಡಿಸಿ.
05:55 ಗಮನಿಸಿ: ದಾಖಲಾದ ವಿದ್ಯಾರ್ಥಿಯು ಒಂದಕ್ಕಿಂತ ಹೆಚ್ಚು ಗ್ರುಪ್ ಗೆ ಸೇರಿರಬಹುದು.
06:02 ಈಗ ಸ್ಟುಡೆಂಟ್ ಗಳಿಗೆ (ವಿದ್ಯಾರ್ಥಿ) message ಕಳುಹಿಸುವುದು ಹೇಗೆ ಎಂದು ನೋಡೋಣ.
06:07 ಎಡಗಡೆಯ ನ್ಯಾವಿಗೇಷನ್ ಬಾರ್ ನಲ್ಲಿರುವ Participants ಲಿಂಕ್ ಅನ್ನು ಕ್ಲಿಕ್ ಮಾಡಿ.
06:12 ಕೋರ್ಸ್ ಗೆ ದಾಖಲಾದ ಯೂಸರ್ ಗಳು ಮತ್ತು ಅವರಿಗೆ ಅಸೈನ್ ಮಾಡಲಾದ ರೋಲ್ ಗಳ ಪಟ್ಟಿಯನ್ನು ಇದು ತೋರಿಸುತ್ತದೆ.
06:19 ಡಿಫಾಲ್ಟ್ ಆಗಿ, Moodle Participants ಪೇಜ್, ಇಪ್ಪತ್ತು ವಿದ್ಯಾರ್ಥಿಗಳನ್ನು ಮಾತ್ರ ತೋರಿಸುತ್ತದೆ.
06:25 ಇಪ್ಪತ್ತಕ್ಕಿಂತ ಹೆಚ್ಚು ವಿದ್ಯಾರ್ಥಿಗಳಿದ್ದಲ್ಲಿ, ಎಲ್ಲಾ ವಿದ್ಯಾರ್ಥಿಗಳನ್ನು ನೋಡಲು, Show all ಬಟನ್ ಅನ್ನು ನೀವು ಕ್ಲಿಕ್ ಮಾಡಬೇಕು.

ಈಗ ಆ ಲಿಂಕ್ ಕಾಣಿಸುತ್ತಿಲ್ಲ. ಏಕೆಂದರೆ ನಾನು ಇಪ್ಪತ್ತಕ್ಕಿಂತ ಹೆಚ್ಚು ವಿದ್ಯಾರ್ಥಿಗಳನ್ನು ಹೊಂದಿಲ್ಲ.

06:38 ಇಲ್ಲಿ ಯೂಸರ್ ಗಳ ಪಟ್ಟಿಯ ಮೇಲ್ಗಡೆ ಕೆಲವು ಫಿಲ್ಟರ್ ಗಳಿವೆ. ಸರಿಯಾದ ಯೂಸರ್ ಗಳ ಸಮೂಹವನ್ನು ಆರಿಸಿಕೊಳ್ಳಲು ಅವುಗಳನ್ನು ಬಳಸಿ.
06:46 Current role ಡ್ರಾಪ್ ಡೌನ್ ನಲ್ಲಿ ನಾನು Student ಅನ್ನು ಆರಿಸಿಕೊಳ್ಳುವೆನು.
06:51 student role ಅನ್ನು ಅಸೈನ್ ಮಾಡಿದ ಯೂಸರ್ ಗಳನ್ನು ಮಾತ್ರ ತೋರಿಸಲು ಇದು ಲಿಸ್ಟ್ ಅನ್ನು ಫಿಲ್ಟರ್ ಮಾಡುತ್ತದೆ.
06:58 ಎಲ್ಲಾ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲು, ಪೇಜ್ ನ ಕೆಳಗಡೆಯಿರುವ Select all ಬಟನ್ ಅನ್ನು ಕ್ಲಿಕ್ ಮಾಡಿ.
07:04 ನಂತರ With selected users ಡ್ರಾಪ್-ಡೌನ್ ನಲ್ಲಿ, Send a message ಅನ್ನು ಆಯ್ಕೆಮಾಡಿ.
07:11 ಇದು ಆಯ್ಕೆಮಾಡಲಾದ ಎಲ್ಲ ವಿದ್ಯಾರ್ಥಿಗಳಿಗೆ ಒಂದೇ ಮೆಸೇಜ್ ಅನ್ನು ಕಳುಹಿಸುತ್ತದೆ.
07:16 ಟ್ಯುಟೋರಿಯಲ್ ಅನ್ನು ನಿಲ್ಲಿಸಿ. Message body ಯಲ್ಲಿ, ಇಲ್ಲಿ ತೋರಿಸಿರುವಂತೆ ಮೆಸೇಜ್ ಅನ್ನು ಟೈಪ್ ಮಾಡಿ.
07:22 ನಂತರ, ಕಳುಹಿಸುವ ಮೊದಲು ಮೆಸೇಜ್ ಅನ್ನು ನೋಡಲು, ಕೆಳಗಿನ Preview ಬಟನ್ ಅನ್ನು ಕ್ಲಿಕ್ ಮಾಡಿ.
07:29 ಅಗತ್ಯವಿದ್ದರೆ Update ಬಟನ್ ಅನ್ನು ಕ್ಲಿಕ್ ಮಾಡಿ, ನೀವು ಮೆಸೇಜ್ ಅನ್ನು ಅಪ್ಡೇಟ್ ಸಹ ಮಾಡಬಹುದು.
07:35 ಮೆಸೇಜ್ ಅನ್ನು ಕಳಿಸಲು, Send message ಬಟನ್ ಅನ್ನು ಕ್ಲಿಕ್ ಮಾಡಿ.
07:40 ದೃಢೀಕರಣ ಸಂದೇಶ ಮತ್ತು participants lists ಗೆ ಹಿಂದಿರುಗಲು ಒಂದು ಲಿಂಕ್ ಅನ್ನು ನೀವು ನೋಡುವಿರಿ.
07:46 Back to participants list ಮೇಲೆ ಕ್ಲಿಕ್ ಮಾಡಿ.
07:50 With selected users ಡ್ರಾಪ್-ಡೌನ್ ಅನ್ನು ಕ್ಲಿಕ್ ಮಾಡಿ. ಇಲ್ಲಿ ವೈಯಕ್ತಿಕ ಅಥವಾ ಸಾಮೂಹಿಕವಾಗಿ notes ಅನ್ನು ಕಳುಹಿಸಲು ಇರುವ ಆಯ್ಕೆಗಳನ್ನು ಗಮನಿಸಿ.
08:00 ಈಗ ಯಾವುದೇ ಎರಡು ಯೂಸರ್ ಗಳನ್ನು ಆಯ್ಕೆ ಮಾಡೋಣ.
08:03 With selected users ಡ್ರಾಪ್-ಡೌನ್ ನಿಂದ, Add a new note ಅನ್ನು ಆಯ್ಕೆಮಾಡಿ.
08:09 ಒಂದು ಯೂಸರ್ ನ Content ಟೆಕ್ಸ್ಟ್ ಏರಿಯಾದಲ್ಲಿ, ನಾನು ನೋಟ್ ಅನ್ನು (ಟಿಪ್ಪಣಿ) ಹೀಗೆ ಟೈಪ್ ಮಾಡುವೆನು.
08:15 ಇನ್ನೊಂದು ಯೂಸರ್ ನ Content ಟೆಕ್ಸ್ಟ್ ಏರಿಯಾದಲ್ಲಿ, ನಾನು ನೋಟ್ ಅನ್ನು ಹೀಗೆ ಟೈಪ್ ಮಾಡುವೆನು.
08:22 ಬಲಗಡೆಯಿರುವ Context ಡ್ರಾಪ್ ಡೌನ್ ಅನ್ನು ನೋಡಿ.
08:26 ನೋಟ್ ನ Context , ಅದನ್ನು ಯಾವ ಯೂಸರ್ ನೋಡಬಹುದು ಎಂದು ನಿರ್ಧರಿಸುತ್ತದೆ.
08:31 personal note ಅನ್ನು ಟೀಚರ್ ಮತ್ತು ಅದನ್ನು ಪಡೆಯುವ ವಿದ್ಯಾರ್ಥಿ ಇವರು ಮಾತ್ರ ನೋಡಬಹುದು.
08:38 course note ಅನ್ನು ಇದೇ ಕೋರ್ಸ್ ನ ಉಳಿದ ಟೀಚರ್ ಗಳೂ ನೋಡಬಹುದು.
08:44 site note ಅನ್ನು ಎಲ್ಲ ಕೋರ್ಸ್ ಗಳ ಎಲ್ಲ ಟೀಚರ್ ಗಳೂ ನೋಡಬಹುದು.
08:50 ಹೆಚ್ಚಿನ ಸಂಸ್ಥೆಗಳು, ಟೀಚರ್ ಮತ್ತು ವಿದ್ಯಾರ್ಥಿಗಳ ನಡುವಿನ ಸಂಪರ್ಕದ ಬಗ್ಗೆ ತಮ್ಮದೇ ಆದ ನಿಯಮಗಳನ್ನು ಹೊಂದಿರುತ್ತವೆ.
08:57 ಈ ಮಾರ್ಗಸೂಚಿಗಳನ್ನು ಆಧರಿಸಿ, ನೀವು Context ಅನ್ನು ನಿರ್ಧರಿಸಬಹುದು.
09:02 ನಾನು Context ಅನ್ನು course ಎಂದು ಇಡುವೆನು.
09:06 ಎಲ್ಲವೂ ಆದ ಮೇಲೆ, Save changes ಬಟನ್ ಅನ್ನು ಕ್ಲಿಕ್ ಮಾಡಿ.
09:10 ಇದರೊಂದಿಗೆ ನಾವು ಟ್ಯುಟೋರಿಯಲ್ ನ ಕೊನೆಗೆ ಬಂದಿದ್ದೇವೆ. ಸಂಕ್ಷಿಪ್ತವಾಗಿ,
09:16 ಈ ಟ್ಯುಟೋರಿಯಲ್ ನಲ್ಲಿ ನಾವು:

ಕೋರ್ಸ್ ನಲ್ಲಿ ಯೂಸರ್ ಗಳನ್ನು ದಾಖಲು ಮಾಡುವುದು,

09:22 ಕೋರ್ಸ್ ನಲ್ಲಿ ಗ್ರುಪ್ ಗಳನ್ನು ಮಾಡುವುದು ಮತ್ತು ವಿದ್ಯಾರ್ಥಿಗಳಿಗೆ ಮೆಸೇಜ್ ಮತ್ತು ನೋಟ್ಸ್ ಗಳನ್ನು ಕಳುಹಿಸುವುದರ ಬಗ್ಗೆ ಕಲಿತಿದ್ದೇವೆ.
09:29 ಇಲ್ಲಿ ನಿಮಗಾಗಿ ಒಂದು ಚಿಕ್ಕ ಅಸೈನ್ಮೆಂಟ್ ಇದೆ.

ಹಿಂದೆ ಮೂಡಲ್ ಸೈಟ್ ಅಡ್ಮಿನ್ ನಿಂದ ರಚಿಸಲಾದ ಎಲ್ಲಾ ಯೂಸರ್ ಗಳನ್ನು Calculus ಕೋರ್ಸ್ ಗೆ ದಾಖಲು ಮಾಡಿ.

09:40 ಈಗಾಗಲೇ ಇರುವ ಗ್ರುಪ್ ಗಳಿಗೆ ಹೊಸ ವಿದ್ಯಾರ್ಥಿಗಳನ್ನು ಸೇರಿಸಿ. ಅವರಿಗೆ ಸ್ವಾಗತ ಸಂದೇಶವನ್ನು ಕಳುಹಿಸಿ. ನಂತರ ವಿದ್ಯಾರ್ಥಿಗಳಿಗೆ ನೋಟ್ಸ್ ಅನ್ನು ಕಳುಹಿಸಿ.
09:50 ವಿವರಗಳಿಗಾಗಿ, ಈ ಟ್ಯುಟೋರಿಯಲ್ ನ Assignment ಲಿಂಕ್ ಅನ್ನು ನೋಡಿ.
09:55 ಈ ಲಿಂಕ್ ನಲ್ಲಿರುವ ವೀಡಿಯೊ, 'ಸ್ಪೋಕನ್ ಟ್ಯುಟೋರಿಯಲ್' ಪ್ರೊಜೆಕ್ಟ್ ನ ಸಾರಾಂಶವಾಗಿದೆ. ದಯವಿಟ್ಟು ಇದನ್ನು ಡೌನ್ಲೋಡ್ ಮಾಡಿ ವೀಕ್ಷಿಸಿ.
10:04 'ಸ್ಪೋಕನ್ ಟ್ಯುಟೋರಿಯಲ್' ಪ್ರೊಜೆಕ್ಟ್ ತಂಡವು, ಕಾರ್ಯಶಾಲೆಗಳನ್ನು ನಡೆಸುತ್ತದೆ ಮತ್ತು ಪ್ರಮಾಣಪತ್ರಗಳನ್ನು ಕೊಡುತ್ತದೆ. ಹೆಚ್ಚಿನ ವಿವರಗಳಿಗಾಗಿ ದಯವಿಟ್ಟು ನಮಗೆ ಬರೆಯಿರಿ.
10:14 ಈ ಫೋರಂ ನಲ್ಲಿ, ನಿಮ್ಮ ಪ್ರಶ್ನೆಯನ್ನು ಸಮಯದೊಂದಿಗೆ ಪೋಸ್ಟ್ ಮಾಡಿ.
10:19 'ಸ್ಪೋಕನ್ ಟ್ಯುಟೋರಿಯಲ್' ಪ್ರೊಜೆಕ್ಟ್, NMEICT, MHRD, ಭಾರತ ಸರ್ಕಾರದಿಂದ ಅನುದಾನವನ್ನು ಪಡೆದಿದೆ. ಈ ಮಿಷನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಕೆಳಗೆ ತೋರಿಸಿರುವ ಲಿಂಕ್ ನಲ್ಲಿ ಲಭ್ಯವಿದೆ.
10:31 ಸ್ಕ್ರಿಪ್ಟ್ ನ ಅನುವಾದಕಿ, ಮೈಸೂರಿನಿಂದ ಅಂಜನಾ ಅನಂತ್ ನಾಗ್ ಮತ್ತು ಧ್ವನಿ ಶ್ರೀ ನವೀನ್ ಭಟ್, ಉಪ್ಪಿನಪಟ್ಟಣ.

ಧನ್ಯವಾದಗಳು.

Contributors and Content Editors

Sandhya.np14