Moodle-Learning-Management-System/C2/Enroll-Students-and-Communicate-in-Moodle/Kannada
From Script | Spoken-Tutorial
Time | Narration |
00:01 | Enroll students and communicate in Moodle ಎಂಬ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ. |
00:08 | ಈ ಟ್ಯುಟೋರಿಯಲ್ ನಲ್ಲಿ ನಾವು:
csv file ಮೂಲಕ ಕೋರ್ಸ್ ಗೆ ಅಪ್ಲೋಡ್ ಆದ ವಿದ್ಯಾರ್ಥಿಗಳನ್ನು ದಾಖಲು ಮಾಡುವುದು, |
00:18 | ಕೋರ್ಸ್ ಗಳಲ್ಲಿ group ಗಳನ್ನು ಮಾಡುವುದು,
ವಿದ್ಯಾರ್ಥಿಗಳಿಗೆ message ಮತ್ತು notes ಗಳನ್ನು ಕಳುಹಿಸುವುದು ಇವುಗಳ ಬಗ್ಗೆ ಕಲಿಯುವೆವು. |
00:26 | ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು, ನಾನು:
Ubuntu Linux OS 16.04, |
00:33 | XAMPP 5.6.30 ಮೂಲಕ ಪಡೆದ Apache, MariaDB ಮತ್ತು PHP, |
00:41 | Moodle 3.3 ಮತ್ತು Firefox ವೆಬ್-ಬ್ರೌಸರ್ ಅನ್ನು ಬಳಸಿದ್ದೇನೆ.
ನಿಮ್ಮ ಆಯ್ಕೆಯ ಯಾವುದೇ ವೆಬ್-ಬ್ರೌಸರ್ ಅನ್ನು ನೀವು ಬಳಸಬಹುದು. |
00:51 | ಆದಾಗ್ಯೂ, Internet Explorer ಅನ್ನು ಮಾತ್ರ ಬಳಸಬಾರದು, ಅದು ಅಷ್ಟು ಸರಿಯಾಗಿ ಡಿಸ್ಪ್ಲೇ ಮಾಡುವುದಿಲ್ಲ. |
01:00 | ಇಲ್ಲಿ ನಿಮ್ಮ 'ಸೈಟ್ ಅಡ್ಮಿನಿಸ್ಟ್ರೇಟರ್', ನಿಮ್ಮನ್ನು teacher ಆಗಿ ನೋಂದಾಯಿಸಿ, ಒಂದಾದರೂ ಕೋರ್ಸ್ ಅನ್ನು ನಿಮಗೆ ಅಸೈನ್ ಮಾಡಿದ್ದಾರೆ ಎಂದು ಭಾವಿಸುತ್ತೇವೆ. |
01:11 | ನೀವು ಸ್ವಲ್ಪ ಕೋರ್ಸ್ ಮಟೀರಿಯಲ್, ಅಸೈನ್ಮೆಂಟ್ ಮತ್ತು ಕ್ವಿಜ್ ಗಳನ್ನು ನಿಮ್ಮ ಕೋರ್ಸ್ ಗೆ ಸೇರಿಸಿದ್ದೀರಿ ಎಂದು ಸಹ ಭಾವಿಸುತ್ತೇವೆ. |
01:19 | ಇಲ್ಲದಿದ್ದರೆ, ಸಂಬಂಧಿತ Moodle ಟ್ಯುಟೋರಿಯಲ್ ಗಳನ್ನು ಈ ವೆಬ್ಸೈಟ್ ನಲ್ಲಿ ನೋಡಿ. |
01:26 | ಪ್ರಾರಂಭಿಸುವ ಮೊದಲು, ನಿಮ್ಮ ಮೂಡಲ್ ಸೈಟ್ ಗೆ ಐದು ಅಥವಾ ಆರು ಯೂಸರ್ ಗಳನ್ನು ಸೇರಿಸುವಂತೆ ನಿಮ್ಮ 'ಮೂಡಲ್ ಸೈಟ್ ಅಡ್ಮಿನಿಸ್ಟ್ರೇಟರ್' ಅನ್ನು ಕೇಳಿಕೊಳ್ಳಿ. |
01:36 | ಈ ಹೊಸ ಯೂಸರ್ ಗಳನ್ನು ನೀವು ಆಮೇಲೆ ನಿಮ್ಮ ಕೋರ್ಸ್ ಗೆ ಸೇರಿಸಲಿದ್ದೀರಿ. ಹಾಗಾಗಿ ನಿಮ್ಮ Moodle ಸೈಟ್ ಗೆ ಹೊಸ ಯೂಸರ್ ಗಳನ್ನು ಸೇರಿಸಿರುವುದನ್ನು ಖಚಿತಪಡಿಸಿಕೊಳ್ಳಿ. |
01:47 | ಮೂಡಲ್ ನಲ್ಲಿ ಟೀಚರ್ ಗಳು ಹೊಸ ಯೂಸರ್ ಗಳನ್ನು ಸಿಸ್ಟಂನಲ್ಲಿ ಸೇರಿಸಲು ಸಾಧ್ಯವಿಲ್ಲ. ಅವರು ಸೈಟ್-ಅಡ್ಮಿನಿಸ್ಟ್ರೇಟರ್ ನಿಂದ ಈಗಾಗಲೇ ಸೇರಿಸಲ್ಪಟ್ಟ ಯೂಸರ್ ಅನ್ನು ದಾಖಲು ಮಾತ್ರ ಮಾಡಬಹುದು. |
01:59 | ಬ್ರೌಸರ್ ಗೆ ಹಿಂದಿರುಗಿ. ನಿಮ್ಮ ಮೂಡಲ್ ಸೈಟ್ ನಲ್ಲಿ teacher ಎಂದು ಲಾಗಿನ್ ಮಾಡಿ. |
02:06 | ಎಡಗಡೆಯ ನ್ಯಾವಿಗೇಷನ್ ಮೆನ್ಯುವಿನಲ್ಲಿ Calculus ಕೋರ್ಸ್ ಅನ್ನು ಕ್ಲಿಕ್ ಮಾಡಿ. |
02:11 | ಮೇಲ್ಗಡೆ ಬಲಭಾಗದಲ್ಲಿರುವ ಗೇರ್-ಐಕಾನ್ ಮೇಲೆ, ನಂತರ More... ಮೇಲೆ ಕ್ಲಿಕ್ ಮಾಡಿ. |
02:18 | ನಾವು ಈಗ Course Administration ಪೇಜ್ ನಲ್ಲಿದ್ದೇವೆ. |
02:22 | Users ಟ್ಯಾಬ್ ಅನ್ನು ಕ್ಲಿಕ್ ಮಾಡಿ. |
02:25 | Users ವಿಭಾಗದಲ್ಲಿ Enrolled users ಲಿಂಕ್ ಅನ್ನು ಕ್ಲಿಕ್ ಮಾಡಿ. |
02:30 | ಈ ಕೋರ್ಸ್ ನಲ್ಲಿ, ರೆಬೆಕಾ ರೇಮಂಡ್ ಮತ್ತು ಪ್ರಿಯಾ ಸಿನ್ಹಾ ಎಂಬ ಇಬ್ಬರು ಯೂಸರ್ ಗಳು ದಾಖಲಾಗಿದ್ದಾರೆ. |
02:38 | ರೆಬೆಕಾ ರೇಮಂಡ್ ಟೀಚರ್ ರೋಲ್ ಅನ್ನು ಮತ್ತು ಪ್ರಿಯಾ ಸಿನ್ಹಾ ಸ್ಟುಡೆಂಟ್ ರೋಲ್ ಅನ್ನು ಹೊಂದಿದ್ದಾರೆ. |
02:44 | ಈಗ, ಕೆಳಗೆ ಬಲಗಡೆಯಿರುವ Enrol users ಬಟನ್ ಅನ್ನು ಕ್ಲಿಕ್ ಮಾಡಿ. |
02:49 | ನನ್ನ ಕ್ಯಾಲ್ಕ್ಯುಲಸ್ ಕೋರ್ಸ್ ಗೆ ದಾಖಲು ಮಾಡಬಯಸುವ ವಿದ್ಯಾರ್ಥಿಗಳ ಹೆಸರುಗಳು ಈ ಪಟ್ಟಿಯಲ್ಲಿವೆ. |
02:55 | Assign Roles ಡ್ರಾಪ್-ಡೌನ್ ನಲ್ಲಿ, Student ಅನ್ನು ಆಯ್ಕೆಮಾಡಿ. |
03:00 | ನೀವು ದಾಖಲು ಮಾಡಬಯಸುವ ಯೂಸರ್ ನ ಬದಿಯಲ್ಲಿರುವ Enrol ಬಟನ್ ಅನ್ನು ಕ್ಲಿಕ್ ಮಾಡಿ. |
03:06 | ನನ್ನ ಕೋರ್ಸ್ ಗೆ ಕೆಲವು ವಿದ್ಯಾರ್ಥಿಗಳನ್ನು ನಾನು ಈಗಲೇ ದಾಖಲು ಮಾಡುವೆನು. |
03:11 | ಇದಾದ ನಂತರ, ಕೆಳಗೆ ಬಲಗಡೆಯಿರುವ Finish enrolling users ಬಟನ್ ಅನ್ನು ಕ್ಲಿಕ್ ಮಾಡಿ. |
03:18 | ಈ ಪೇಜ್ ನ ಮೇಲ್ಭಾಗದಲ್ಲಿ, ಕ್ಯಾಲ್ಕ್ಯುಲಸ್ ಕೋರ್ಸ್ ಗೆ ದಾಖಲಾಗಿರುವ ಯೂಸರ್ ಗಳ ಸಂಖ್ಯೆಯನ್ನು ನಾವು ನೋಡಬಹುದು. |
03:25 | ಈಗ ಕೋರ್ಸ್ ನಲ್ಲಿ group ಗಳನ್ನು ಹೇಗೆ ರಚಿಸುವುದೆಂದು ನೋಡೋಣ. |
03:30 | group activitiy ಗಳಿಗಾಗಿ ವಿದ್ಯಾರ್ಥಿಗಳನ್ನು ಅಸೈನ್ ಮಾಡಲು, ಈ ಗ್ರುಪ್ ಗಳು ನಮಗೆ ಸಹಾಯ ಮಾಡುತ್ತವೆ. |
03:36 | ನಾನು Explorers ಮತ್ತು Creators ಎಂಬ ಎರಡು ಗ್ರುಪ್ ಗಳನ್ನು ಮಾಡುವೆನು. |
03:42 | course ಪೇಜ್ ಗೆ ಹಿಂದಿರುಗಲು, ಬ್ರೆಡ್-ಕ್ರಂಬ್ ನಲ್ಲಿ Calculus ಅನ್ನು ಕ್ಲಿಕ್ ಮಾಡಿ. |
03:48 | ಮತ್ತೊಮ್ಮೆ Course Administrator ಪೇಜ್ ಗೆ ಹೋಗಿ. |
03:52 | Users ಟ್ಯಾಬ್ ನಲ್ಲಿ Groups ಲಿಂಕ್ ಅನ್ನು ಕ್ಲಿಕ್ ಮಾಡಿ. |
03:56 | ಕೆಳಗೆ ಸ್ಕ್ರೋಲ್ ಮಾಡಿ Create group ಬಟನ್ ಅನ್ನು ಕ್ಲಿಕ್ ಮಾಡಿ. |
04:01 | Group name ಅನ್ನು Explorers ಎಂದು ಟೈಪ್ ಮಾಡಿ. |
04:05 | ಇಲ್ಲಿ ಬೇರೆ ಯಾವುದೇ ಕಡ್ಡಾಯವಾದ ಫೀಲ್ಡ್ ಗಳಿಲ್ಲ. |
04:08 | ಕೆಳಗೆ ಸ್ಕ್ರೋಲ್ ಮಾಡಿ Save changes ಬಟನ್ ಅನ್ನು ಕ್ಲಿಕ್ ಮಾಡಿ. |
04:12 | ಗಮನಿಸಿ: ಈಗ ಎಡಗಡೆಯಲ್ಲಿ, ಗ್ರುಪ್ ಗಳ ಪಟ್ಟಿಯಲ್ಲಿ Explorers ಅನ್ನು ಕಾಣಬಹುದು. |
04:19 | ಇದರ ಮುಂದೆ ಇರುವ ಸೊನ್ನೆಯು ಈ ಗ್ರುಪ್ ನಲ್ಲಿ ಸಧ್ಯಕ್ಕೆ ಯಾವ ಯೂಸರ್ ಇಲ್ಲ ಎಂದು ಸೂಚಿಸುತ್ತದೆ.
ಈಗಾಗಲೇ ಆಯ್ಕೆಮಾಡಿರದಿದ್ದರೆ, Explorers ಅನ್ನು ಆಯ್ಕೆಮಾಡಿ. |
04:30 | ಕೆಳಗೆ ಬಲಗಡೆಯಿರುವ Add/remove users ಬಟನ್ ಅನ್ನು ಕ್ಲಿಕ್ ಮಾಡಿ. |
04:36 | ವಿದ್ಯಾರ್ಥಿಗಳ ಪಟ್ಟಿಯಿಂದ ನಾನು Susmitha ಮತ್ತು Sai ಯನ್ನು ಆಯ್ಕೆ ಮಾಡುವೆನು. |
04:42 | ನಂತರ, ಎರಡು ಕಾಲಮ್ ಗಳ ಮಧ್ಯದಲ್ಲಿರುವ Add ಬಟನ್ ಅನ್ನು ಕ್ಲಿಕ್ ಮಾಡಿ. |
04:48 | ಎಡಗಡೆ, Explorers ಗ್ರುಪ್ ನಲ್ಲಿರುವ ಯೂಸರ್ ಗಳ ಪಟ್ಟಿಯನ್ನು ಗಮನಿಸಿ. |
04:54 | ಬಲಗಡೆ, ಈ ಕೋರ್ಸ್ ಗೆ ದಾಖಲಾಗಿರುವ ಉಳಿದ ಎಲ್ಲಾ ವಿದ್ಯಾರ್ಥಿಗಳ ಪಟ್ಟಿಯನ್ನು ಗಮನಿಸಿ. |
05:00 | ಟೀಚರ್ ತಮಗೆ ಬೇಕಾದಾಗ ಅವರನ್ನು ಈ ಗ್ರುಪ್ ಗೆ ಸೇರಿಸಿಕೊಳ್ಳಬಹುದು. |
05:06 | ನಾವು ಲಿಸ್ಟ್ ನಿಂದ ಯೂಸರ್ ಗಳನ್ನು ಆಯ್ಕೆಮಾಡಿದಾಗ, ಎರಡು ಲಿಸ್ಟ್ ಗಳ ನಡುವೆ ಇರುವ Add ಮತ್ತು Remove ಬಟನ್ ಗಳು ಸಕ್ರಿಯವಾಗುತ್ತವೆ. |
05:15 | ಪೇಜ್ ನ ಕೆಳಗಿರುವ Back to groups ಬಟನ್ ಅನ್ನು ಕ್ಲಿಕ್ ಮಾಡಿ. |
05:21 | ಟ್ಯುಟೋರಿಯಲ್ ಅನ್ನು ಇಲ್ಲಿ ನಿಲ್ಲಿಸಿ, ಈ ಸಣ್ಣ ಅಸೈನ್ಮೆಂಟ್ ಅನ್ನು ಮಾಡಿ. Creators ಎಂಬ ಒಂದು ಹೊಸ ಗ್ರುಪ್ ಅನ್ನು ಸೇರಿಸಿ. |
05:28 | ಆ ಗ್ರುಪ್ ಗೆ ಎರಡು ಹೊಸ ಯೂಸರ್ ಗಳನ್ನು ಅಸೈನ್ ಮಾಡಿ. ನಂತರ ಟ್ಯುಟೋರಿಯಲ್ ಅನ್ನು ಪುನರಾರಂಭಿಸಿ. |
05:35 | ಈಗ ನಿಮಗೆ ಸ್ಕ್ರೀನ್ ಹೀಗೆ ಕಾಣಿಸಬೇಕು. |
05:40 | ಗಮನಿಸಿ: Roles, Groups ಮತ್ತು Enrolment Methods ಈ ಕಾಲಮ್ ಗಳು, ಐಕಾನ್ ಗಳನ್ನು ಹೊಂದಿವೆ. |
05:48 | ಅವುಗಳ ಕಾರ್ಯವನ್ನು ತಿಳಿಯಲು, ಪ್ರತಿಯೊಂದು ಐಕಾನ್ ನ ಮೇಲೂ ಮೌಸ್ ಅನ್ನು ನಡೆದಾಡಿಸಿ. |
05:55 | ಗಮನಿಸಿ: ದಾಖಲಾದ ವಿದ್ಯಾರ್ಥಿಯು ಒಂದಕ್ಕಿಂತ ಹೆಚ್ಚು ಗ್ರುಪ್ ಗೆ ಸೇರಿರಬಹುದು. |
06:02 | ಈಗ ಸ್ಟುಡೆಂಟ್ ಗಳಿಗೆ (ವಿದ್ಯಾರ್ಥಿ) message ಕಳುಹಿಸುವುದು ಹೇಗೆ ಎಂದು ನೋಡೋಣ. |
06:07 | ಎಡಗಡೆಯ ನ್ಯಾವಿಗೇಷನ್ ಬಾರ್ ನಲ್ಲಿರುವ Participants ಲಿಂಕ್ ಅನ್ನು ಕ್ಲಿಕ್ ಮಾಡಿ. |
06:12 | ಕೋರ್ಸ್ ಗೆ ದಾಖಲಾದ ಯೂಸರ್ ಗಳು ಮತ್ತು ಅವರಿಗೆ ಅಸೈನ್ ಮಾಡಲಾದ ರೋಲ್ ಗಳ ಪಟ್ಟಿಯನ್ನು ಇದು ತೋರಿಸುತ್ತದೆ. |
06:19 | ಡಿಫಾಲ್ಟ್ ಆಗಿ, Moodle Participants ಪೇಜ್, ಇಪ್ಪತ್ತು ವಿದ್ಯಾರ್ಥಿಗಳನ್ನು ಮಾತ್ರ ತೋರಿಸುತ್ತದೆ. |
06:25 | ಇಪ್ಪತ್ತಕ್ಕಿಂತ ಹೆಚ್ಚು ವಿದ್ಯಾರ್ಥಿಗಳಿದ್ದಲ್ಲಿ, ಎಲ್ಲಾ ವಿದ್ಯಾರ್ಥಿಗಳನ್ನು ನೋಡಲು, Show all ಬಟನ್ ಅನ್ನು ನೀವು ಕ್ಲಿಕ್ ಮಾಡಬೇಕು.
ಈಗ ಆ ಲಿಂಕ್ ಕಾಣಿಸುತ್ತಿಲ್ಲ. ಏಕೆಂದರೆ ನಾನು ಇಪ್ಪತ್ತಕ್ಕಿಂತ ಹೆಚ್ಚು ವಿದ್ಯಾರ್ಥಿಗಳನ್ನು ಹೊಂದಿಲ್ಲ. |
06:38 | ಇಲ್ಲಿ ಯೂಸರ್ ಗಳ ಪಟ್ಟಿಯ ಮೇಲ್ಗಡೆ ಕೆಲವು ಫಿಲ್ಟರ್ ಗಳಿವೆ. ಸರಿಯಾದ ಯೂಸರ್ ಗಳ ಸಮೂಹವನ್ನು ಆರಿಸಿಕೊಳ್ಳಲು ಅವುಗಳನ್ನು ಬಳಸಿ. |
06:46 | Current role ಡ್ರಾಪ್ ಡೌನ್ ನಲ್ಲಿ ನಾನು Student ಅನ್ನು ಆರಿಸಿಕೊಳ್ಳುವೆನು. |
06:51 | student role ಅನ್ನು ಅಸೈನ್ ಮಾಡಿದ ಯೂಸರ್ ಗಳನ್ನು ಮಾತ್ರ ತೋರಿಸಲು ಇದು ಲಿಸ್ಟ್ ಅನ್ನು ಫಿಲ್ಟರ್ ಮಾಡುತ್ತದೆ. |
06:58 | ಎಲ್ಲಾ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲು, ಪೇಜ್ ನ ಕೆಳಗಡೆಯಿರುವ Select all ಬಟನ್ ಅನ್ನು ಕ್ಲಿಕ್ ಮಾಡಿ. |
07:04 | ನಂತರ With selected users ಡ್ರಾಪ್-ಡೌನ್ ನಲ್ಲಿ, Send a message ಅನ್ನು ಆಯ್ಕೆಮಾಡಿ. |
07:11 | ಇದು ಆಯ್ಕೆಮಾಡಲಾದ ಎಲ್ಲ ವಿದ್ಯಾರ್ಥಿಗಳಿಗೆ ಒಂದೇ ಮೆಸೇಜ್ ಅನ್ನು ಕಳುಹಿಸುತ್ತದೆ. |
07:16 | ಟ್ಯುಟೋರಿಯಲ್ ಅನ್ನು ನಿಲ್ಲಿಸಿ. Message body ಯಲ್ಲಿ, ಇಲ್ಲಿ ತೋರಿಸಿರುವಂತೆ ಮೆಸೇಜ್ ಅನ್ನು ಟೈಪ್ ಮಾಡಿ. |
07:22 | ನಂತರ, ಕಳುಹಿಸುವ ಮೊದಲು ಮೆಸೇಜ್ ಅನ್ನು ನೋಡಲು, ಕೆಳಗಿನ Preview ಬಟನ್ ಅನ್ನು ಕ್ಲಿಕ್ ಮಾಡಿ. |
07:29 | ಅಗತ್ಯವಿದ್ದರೆ Update ಬಟನ್ ಅನ್ನು ಕ್ಲಿಕ್ ಮಾಡಿ, ನೀವು ಮೆಸೇಜ್ ಅನ್ನು ಅಪ್ಡೇಟ್ ಸಹ ಮಾಡಬಹುದು. |
07:35 | ಮೆಸೇಜ್ ಅನ್ನು ಕಳಿಸಲು, Send message ಬಟನ್ ಅನ್ನು ಕ್ಲಿಕ್ ಮಾಡಿ. |
07:40 | ದೃಢೀಕರಣ ಸಂದೇಶ ಮತ್ತು participants lists ಗೆ ಹಿಂದಿರುಗಲು ಒಂದು ಲಿಂಕ್ ಅನ್ನು ನೀವು ನೋಡುವಿರಿ. |
07:46 | Back to participants list ಮೇಲೆ ಕ್ಲಿಕ್ ಮಾಡಿ. |
07:50 | With selected users ಡ್ರಾಪ್-ಡೌನ್ ಅನ್ನು ಕ್ಲಿಕ್ ಮಾಡಿ. ಇಲ್ಲಿ ವೈಯಕ್ತಿಕ ಅಥವಾ ಸಾಮೂಹಿಕವಾಗಿ notes ಅನ್ನು ಕಳುಹಿಸಲು ಇರುವ ಆಯ್ಕೆಗಳನ್ನು ಗಮನಿಸಿ. |
08:00 | ಈಗ ಯಾವುದೇ ಎರಡು ಯೂಸರ್ ಗಳನ್ನು ಆಯ್ಕೆ ಮಾಡೋಣ. |
08:03 | With selected users ಡ್ರಾಪ್-ಡೌನ್ ನಿಂದ, Add a new note ಅನ್ನು ಆಯ್ಕೆಮಾಡಿ. |
08:09 | ಒಂದು ಯೂಸರ್ ನ Content ಟೆಕ್ಸ್ಟ್ ಏರಿಯಾದಲ್ಲಿ, ನಾನು ನೋಟ್ ಅನ್ನು (ಟಿಪ್ಪಣಿ) ಹೀಗೆ ಟೈಪ್ ಮಾಡುವೆನು. |
08:15 | ಇನ್ನೊಂದು ಯೂಸರ್ ನ Content ಟೆಕ್ಸ್ಟ್ ಏರಿಯಾದಲ್ಲಿ, ನಾನು ನೋಟ್ ಅನ್ನು ಹೀಗೆ ಟೈಪ್ ಮಾಡುವೆನು. |
08:22 | ಬಲಗಡೆಯಿರುವ Context ಡ್ರಾಪ್ ಡೌನ್ ಅನ್ನು ನೋಡಿ. |
08:26 | ನೋಟ್ ನ Context , ಅದನ್ನು ಯಾವ ಯೂಸರ್ ನೋಡಬಹುದು ಎಂದು ನಿರ್ಧರಿಸುತ್ತದೆ. |
08:31 | personal note ಅನ್ನು ಟೀಚರ್ ಮತ್ತು ಅದನ್ನು ಪಡೆಯುವ ವಿದ್ಯಾರ್ಥಿ ಇವರು ಮಾತ್ರ ನೋಡಬಹುದು. |
08:38 | course note ಅನ್ನು ಇದೇ ಕೋರ್ಸ್ ನ ಉಳಿದ ಟೀಚರ್ ಗಳೂ ನೋಡಬಹುದು. |
08:44 | site note ಅನ್ನು ಎಲ್ಲ ಕೋರ್ಸ್ ಗಳ ಎಲ್ಲ ಟೀಚರ್ ಗಳೂ ನೋಡಬಹುದು. |
08:50 | ಹೆಚ್ಚಿನ ಸಂಸ್ಥೆಗಳು, ಟೀಚರ್ ಮತ್ತು ವಿದ್ಯಾರ್ಥಿಗಳ ನಡುವಿನ ಸಂಪರ್ಕದ ಬಗ್ಗೆ ತಮ್ಮದೇ ಆದ ನಿಯಮಗಳನ್ನು ಹೊಂದಿರುತ್ತವೆ. |
08:57 | ಈ ಮಾರ್ಗಸೂಚಿಗಳನ್ನು ಆಧರಿಸಿ, ನೀವು Context ಅನ್ನು ನಿರ್ಧರಿಸಬಹುದು. |
09:02 | ನಾನು Context ಅನ್ನು course ಎಂದು ಇಡುವೆನು. |
09:06 | ಎಲ್ಲವೂ ಆದ ಮೇಲೆ, Save changes ಬಟನ್ ಅನ್ನು ಕ್ಲಿಕ್ ಮಾಡಿ. |
09:10 | ಇದರೊಂದಿಗೆ ನಾವು ಟ್ಯುಟೋರಿಯಲ್ ನ ಕೊನೆಗೆ ಬಂದಿದ್ದೇವೆ. ಸಂಕ್ಷಿಪ್ತವಾಗಿ, |
09:16 | ಈ ಟ್ಯುಟೋರಿಯಲ್ ನಲ್ಲಿ ನಾವು:
ಕೋರ್ಸ್ ನಲ್ಲಿ ಯೂಸರ್ ಗಳನ್ನು ದಾಖಲು ಮಾಡುವುದು, |
09:22 | ಕೋರ್ಸ್ ನಲ್ಲಿ ಗ್ರುಪ್ ಗಳನ್ನು ಮಾಡುವುದು ಮತ್ತು ವಿದ್ಯಾರ್ಥಿಗಳಿಗೆ ಮೆಸೇಜ್ ಮತ್ತು ನೋಟ್ಸ್ ಗಳನ್ನು ಕಳುಹಿಸುವುದರ ಬಗ್ಗೆ ಕಲಿತಿದ್ದೇವೆ. |
09:29 | ಇಲ್ಲಿ ನಿಮಗಾಗಿ ಒಂದು ಚಿಕ್ಕ ಅಸೈನ್ಮೆಂಟ್ ಇದೆ.
ಹಿಂದೆ ಮೂಡಲ್ ಸೈಟ್ ಅಡ್ಮಿನ್ ನಿಂದ ರಚಿಸಲಾದ ಎಲ್ಲಾ ಯೂಸರ್ ಗಳನ್ನು Calculus ಕೋರ್ಸ್ ಗೆ ದಾಖಲು ಮಾಡಿ. |
09:40 | ಈಗಾಗಲೇ ಇರುವ ಗ್ರುಪ್ ಗಳಿಗೆ ಹೊಸ ವಿದ್ಯಾರ್ಥಿಗಳನ್ನು ಸೇರಿಸಿ. ಅವರಿಗೆ ಸ್ವಾಗತ ಸಂದೇಶವನ್ನು ಕಳುಹಿಸಿ. ನಂತರ ವಿದ್ಯಾರ್ಥಿಗಳಿಗೆ ನೋಟ್ಸ್ ಅನ್ನು ಕಳುಹಿಸಿ. |
09:50 | ವಿವರಗಳಿಗಾಗಿ, ಈ ಟ್ಯುಟೋರಿಯಲ್ ನ Assignment ಲಿಂಕ್ ಅನ್ನು ನೋಡಿ. |
09:55 | ಈ ಲಿಂಕ್ ನಲ್ಲಿರುವ ವೀಡಿಯೊ, 'ಸ್ಪೋಕನ್ ಟ್ಯುಟೋರಿಯಲ್' ಪ್ರೊಜೆಕ್ಟ್ ನ ಸಾರಾಂಶವಾಗಿದೆ. ದಯವಿಟ್ಟು ಇದನ್ನು ಡೌನ್ಲೋಡ್ ಮಾಡಿ ವೀಕ್ಷಿಸಿ. |
10:04 | 'ಸ್ಪೋಕನ್ ಟ್ಯುಟೋರಿಯಲ್' ಪ್ರೊಜೆಕ್ಟ್ ತಂಡವು, ಕಾರ್ಯಶಾಲೆಗಳನ್ನು ನಡೆಸುತ್ತದೆ ಮತ್ತು ಪ್ರಮಾಣಪತ್ರಗಳನ್ನು ಕೊಡುತ್ತದೆ. ಹೆಚ್ಚಿನ ವಿವರಗಳಿಗಾಗಿ ದಯವಿಟ್ಟು ನಮಗೆ ಬರೆಯಿರಿ. |
10:14 | ಈ ಫೋರಂ ನಲ್ಲಿ, ನಿಮ್ಮ ಪ್ರಶ್ನೆಯನ್ನು ಸಮಯದೊಂದಿಗೆ ಪೋಸ್ಟ್ ಮಾಡಿ. |
10:19 | 'ಸ್ಪೋಕನ್ ಟ್ಯುಟೋರಿಯಲ್' ಪ್ರೊಜೆಕ್ಟ್, NMEICT, MHRD, ಭಾರತ ಸರ್ಕಾರದಿಂದ ಅನುದಾನವನ್ನು ಪಡೆದಿದೆ. ಈ ಮಿಷನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಕೆಳಗೆ ತೋರಿಸಿರುವ ಲಿಂಕ್ ನಲ್ಲಿ ಲಭ್ಯವಿದೆ. |
10:31 | ಸ್ಕ್ರಿಪ್ಟ್ ನ ಅನುವಾದಕಿ, ಮೈಸೂರಿನಿಂದ ಅಂಜನಾ ಅನಂತ್ ನಾಗ್ ಮತ್ತು ಧ್ವನಿ ಶ್ರೀ ನವೀನ್ ಭಟ್, ಉಪ್ಪಿನಪಟ್ಟಣ.
ಧನ್ಯವಾದಗಳು. |