Moodle-Learning-Management-System/C2/Teachers-Dashboard-in-Moodle/Kannada
Time | Narration |
00:01 | Teacher’s dashboard in Moodle ಎಂಬ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ. |
00:07 | ಈ ಟ್ಯುಟೋರಿಯಲ್ ನಲ್ಲಿ ನಾವು, Moodle ಕೋರ್ಸ್ ನ ವೈಶಿಷ್ಟ್ಯಗಳ ಅವಲೋಕನ ದ ಕುರಿತು ಮತ್ತು |
00:14 |
teachers’ dashboard ನ ಬಗ್ಗೆ, ಪ್ರೊಫೈಲ್ ಅನ್ನು ಎಡಿಟ್ ಮಾಡುವುದು ಹೇಗೆ ಮತ್ತು preferences ಅನ್ನು ಎಡಿಟ್ ಮಾಡುವುದು ಹೇಗೆ ಎನ್ನುವುದರ ಬಗ್ಗೆ ಕಲಿಯುವೆವು. |
00:25 | ಕೊನೆಯಲ್ಲಿ, ಮೂಡಲ್ ನಲ್ಲಿ ನಮ್ಮ ಕೋರ್ಸ್ ಗೆ ಸಂಬಂಧಿಸಿದ ಕೆಲವು ಪ್ರಾಥಮಿಕ ವಿವರಗಳನ್ನು ಸೇರಿಸಲು ಕಲಿಯುವೆವು. |
00:33 | ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು, ನಾನು:
Ubuntu Linux OS 16.04, XAMPP 5.6.30 ಮೂಲಕ ಪಡೆದ Apache, MariaDB ಮತ್ತು PHP, Moodle 3.3 ಮತ್ತು Firefox ವೆಬ್-ಬ್ರೌಸರ್ ಅನ್ನು ಬಳಸಿದ್ದೇನೆ. ನಿಮ್ಮ ಆಯ್ಕೆಯ ಯಾವುದೇ ವೆಬ್ ಬ್ರೌಸರ್ ಅನ್ನು ನೀವು ಬಳಸಬಹುದು. |
00:59 | ಆದಾಗ್ಯೂ, Internet Explorer ಅನ್ನು ಮಾತ್ರ ಬಳಸಬಾರದು, ಅದು ಅಷ್ಟು ಸರಿಯಾಗಿ ಡಿಸ್ಪ್ಲೇ ಮಾಡುವುದಿಲ್ಲ. |
01:07 | ಈ ಟ್ಯುಟೋರಿಯಲ್, ನಿಮ್ಮ ಸೈಟ್ ಅಡ್ಮಿನಿಸ್ಟ್ರೇಟರ್ ಮೂಡಲ್ ವೆಬ್ ಸೈಟ್ ಅನ್ನು ಸೆಟ್ ಮಾಡಿ, ನಿಮಗೆ ಒಂದು ಹೊಸ, ಖಾಲಿ, teacher ಪ್ರಿವಿಲೆಜ್ ಅನ್ನು ಹೊಂದಿರುವ ಕೋರ್ಸ್ ಅನ್ನು ಅಸೈನ್ ಮಾಡಿದ್ದಾರೆ ಎಂದು ಭಾವಿಸುತ್ತದೆ.
ನನ್ನ ಸಿಸ್ಟಮ್ ಅಡಿಮಿನಿಸ್ಟ್ರೇಟರ್ ಇದನ್ನು ಮೊದಲೇ ಮಾಡಿರುತ್ತಾರೆ. |
01:26 | ದಯವಿಟ್ಟು ಗಮನಿಸಿ : ಯೂಸರ್ ರೆಬೆಕಾ ರೇಮೆಂಡ್ ಅವರನ್ನು “Calculus” ಕೋರ್ಸ್ ಗೆ, Teacher ಆಗಿ ಅಸೈನ್ ಮಾಡಲಾಗಿದೆ. |
01:34 | ನಿಮ್ಮ ಸೈಟ್ ಅಡ್ಮಿನಿಸ್ಟ್ರೇಟರ್ ಗೆ ಈ ವೈಬ್ಸೈಟ್ ನಲ್ಲಿ ಮೂಡಲ್ ಟ್ಯುಟೋರಿಯಲ್ ಗಳನ್ನು ಸೂಚಿಸಲು ಕೇಳಿಕೊಳ್ಳಿ. |
01:41 | ಕನಿಷ್ಟ ಒಂದು ಕೋರ್ಸ್ ಗೆ ಟೀಚರ್ ಪ್ರಿವಿಲೆಜ್ ಅನ್ನು ಹೊಂದಿರುವ ಒಂದು ಯೂಸರ್ ಅನ್ನು ನಿಮಗಾಗಿ ಕ್ರಿಯೇಟ್ ಮಾಡಿ. |
01:48 | ಮೂಡಲ್ ಒಂದು ಹೊಂದಿಕೊಳ್ಳುವ, ರಚನಾತ್ಮಕ ಮತ್ತು ಬಳಸಲು ಸುಲಭವಾದ ಕಲಿಸುವ ಮತ್ತು ಕಲಿಯುವ ವ್ಯವಸ್ಥೆಯಾಗಿದೆ. |
01:56 | ಸಾಮಾನ್ಯವಾಗಿ ಮೂಡಲ್ ಅನ್ನು ಕಲಿಕೆಯ ಸಂಪನ್ಮೂಲಗಳನ್ನು ಅಪ್ಲೋಡ್ ಮಾಡಲು,
ಅವರ ಮಲ್ಟಿಮೀಡಿಯಾ ಇ-ರಿಸೋರ್ಸ್ ಗಳಾದ ಫೈಲ್ ಗಳು, ವಿಡೀಯೋಗಳು ಮುಂತಾದ ಸಂಗ್ರಹಗಳನ್ನು ನಿರ್ವಹಿಸಲು ಟೀಚರ್ ಗಳು ಬಳಸಬಹುದು. |
02:12 | ವೆಬ್ ರಿಸೋರ್ಸ್ ಮತ್ತು ಓಪನ್ ಎಜುಕೇಷನಲ್ ರಿಸೋರ್ಸ್ ಗಳನ್ನು ಹಂಚಿಕೊಳ್ಳಲು ,
YouTube / Vimeo ವಿಡಿಯೋಗಳನ್ನು ಸೇರಿಸಲು, |
02:22 | ರಸಪ್ರಶ್ನೆ(ಕ್ವಿಝ್) ಮತ್ತು ಅಸೈನ್ ಮೆಂಟ್ ಗಳನ್ನು ನಿರ್ವಹಿಸಲು,
Wiki, Glossary ಮುಂತಾದ ಸಹಕಾರಿ ವಿಷಯಗಳ ಬಳಕೆಯನ್ನು ಉತ್ತೇಜಿಸಲು , |
02:34 | ವಿದ್ಯಾರ್ಥಿಗಳೊಂದಿಗೆ ಸಮಕಾಲಿಕವಾಗಿ(ಸಿಂಕ್ರನಸ್ಲಿ) ಅಥವಾ ಅಸಮಕಾಲಿಕವಾಗಿ(ಅಸಿಂಕ್ರನಸ್ಲಿ) ಸಂಹವನ ಮತ್ತು ಸಂಪರ್ಕವನ್ನು ಹೊಂದಲು, ವಿದ್ಯಾರ್ಥಿಗಳ ಕಲಿಕೆಯ ಪ್ರಗತಿಯನ್ನು ತಿಳಿಯಲು ಬಳಸಬಹುದು. |
02:44 | ಇಲ್ಲಿ ನಾನು ಕ್ಯಾಲ್ಕ್ಯುಲಸ್ ಕೋರ್ಸ್ ನ ಅವಲೋಕನವನ್ನು ಹೊಂದಿದ್ದೇನೆ. |
02:50 | ಇಲ್ಲಿ ನಾನು -
ಮುಗಿಸಬಹುದಾದ ಟಾಪಿಕ್ ಗಳು, ಪ್ರತಿವಾರಕ್ಕೆ ತೆಗೆದುಕೊಳ್ಳಬಹುದಾದ ತರಗತಿಗಳ ಸಂಖ್ಯೆ, ಕೋರ್ಸ್ ನ ಅಸೈನ್ಮೆಂಟ್ ಗಳ ಸಂಖ್ಯೆ, |
03:01 | ಕ್ವಿಝ್ ಗಳ ಸಂಖ್ಯೆ (ಸಾಪ್ತಾಹಿಕ ಅಥವಾ ಪಾಕ್ಷಿಕ )
end of course exam(ಕೋರ್ಸ್ ನ ಕೊನೆಯಲ್ಲಿರುವ ಪರೀಕ್ಷೆ) ಗಳ ಸಂಖ್ಯೆ, ಅಂಕಗಳ ವಿಭಜನೆ, ಕೋರ್ಸ್ ಮಟೇರಿಯಲ್ ಗಳು, ಪುಸ್ತಕಗಳ ರೆಫರೆನ್ಸ್ ಗಳು(ಉಲ್ಲೇಖಗಳು) – ಇವುಗಳನ್ನು ಹೊಂದಿದ್ದೇನೆ. |
03:18 | ನಾನು ನನ್ನ ಕೋರ್ಸ್ ಅನ್ನು ರಚನೆ ಮಾಡಬೇಕು ಮತ್ತು ಮೂಡಲ್ ನಲ್ಲಿ ಅದಕ್ಕನುಗುಣವಾಗಿ ಎಲ್ಲ ಮಟೀರಿಯಲ್ ಗಳನ್ನು ಅಪ್ಲೋಡ್ ಮಾಡಬೇಕು. |
03:25 | ಬ್ರೌಸರ್ ಗೆ ಹೋಗಿ ಮತ್ತು ಮೂಡಲ್ ಸೈಟ್ ಅನ್ನು ತೆರೆಯಿರಿ. |
03:30 | ಹೆಡರ್ ಮತ್ತು Available courses ಗಳನ್ನು ಒಳಗೊಂಡ ಪೇಜ್ ಡಿಸ್ಪ್ಲೇ ಆಗುವುದು. |
03:35 | ವಿಂಡೋದ ಮೇಲ್ಭಾಗದಲ್ಲಿರುವ ಬಲ ಮೂಲೆಯಲ್ಲಿರುವ Login ಲಿಂಕ್ ನ ಮೇಲೆ ಕ್ಲಿಕ್ ಮಾಡಿ. |
03:40 | ನಾನು teacher ರೆಬೆಕಾ ರೇಮೆಂಡ್ ಎಂದು ಲಾಗಿನ್ ಆಗುವೆನು. |
03:44 | ನಾವು ಈಗ ಪಾಸ್ವರ್ಡ್ ಅನ್ನು ಬದಲಿಸಲು ಕೇಳುವ ಪೇಜ್ ನಲ್ಲಿರುವೆವು. ಏಕೆಂದರೆ ಅಡ್ಮಿನ್ ನಿಂದ ಮೊದಲೇ Force password change ಆಯ್ಕೆಯು ಸಕ್ರಿಯಗೊಂಡಿದೆ. |
03:57 | current password ಅನ್ನು ಟೈಪ್ ಮಾಡಿ, ನಂತರ new password ಅನ್ನು ಟೈಪ್ ಮಾಡಿ. Spokentutorial12 # ಎಂದು ಟೈಪ್ ಮಾಡುವೆನು. |
04:07 | ಹೊಸ ಪಾಸ್ವರ್ಡ್ ಅನ್ನು ಇನ್ನೊಮ್ಮೆ ಟೈಪ್ ಮಾಡಿ. ಮತ್ತು ಕೆಳಗಿರುವ Save changes ಬಟನ್ ಅನ್ನು ಕ್ಲಿಕ್ ಮಾಡಿ. |
04:15 | ನಿಮ್ಮ ಪಾಸ್ವರ್ಡ್ ಬದಲಾಗಿದೆ ಎಂದು ದೃಢೀಕರಿಸುವ ಯಶಸ್ವಿ ಸಂದೇಶ ಕಾಣಿಸುವುದು. Continue ಬಟನ್ ಅನ್ನು ಕ್ಲಿಕ್ ಮಾಡಿ. |
04:24 | ಈಗ ನಾವಿರುವ ಪೇಜ್ ಅನ್ನು dashboard ಎಂದು ಕರೆಯುವರು. |
04:29 | ನಮ್ಮ ಡ್ಯಾಶ್ ಬೋರ್ಡ್ ಅನ್ನು ಮೂರು ಕಾಲಮ್ ಗಳಾಗಿ ವಿಂಗಡಿಸಲಾಗಿದೆ. |
04:34 | ಎಡ ಭಾಗದಲ್ಲಿರುವುದು Navigation ಮೆನ್ಯು ಆಗಿದೆ. ಮಧ್ಯದಲ್ಲಿ ಅಗಲವಾಗಿರುವುದು, 'Timeline' ಮತ್ತು 'Courses' ಟ್ಯಾಬ್ ಗಳನ್ನು ಹೊಂದಿರುವ Course overview ಕ್ಷೇತ್ರವಾಗಿದೆ. |
04:47 | ಬಲಭಾಗದಲ್ಲಿರುವುದು Blocks column ಆಗಿದೆ. |
04:51 | Courses ಟ್ಯಾಬ್ ನೀವು ದಾಖಲಾಗಿರುವ ಕೋರ್ಸ್ ಗಳನ್ನು ಪಟ್ಟಿ ಮಾಡುವುದು. Course overview ಜಾಗದಲ್ಲಿರುವ Courses ಟ್ಯಾಬ್ ಅನ್ನು ಕ್ಲಿಕ್ ಮಾಡಿ. |
05:02 | In Progress ಟ್ಯಾಬ್ ನಲ್ಲಿ ನಾವು ಎರಡು ಕೋರ್ಸ್ ಗಳನ್ನು ಕಾಣಬಹುದು : Calculus ಮತ್ತು Linear Algebra. ಇವು ಟೀಚರ್ ರೆಬೆಕಾ ರೇಮೆಂಡ್ ಅವರಿಗೆ ಅಡ್ಮಿನ್ ಅಸೈನ್ ಮಾಡಿದ ಕೋರ್ಸ್ ಗಳಾಗಿವೆ. |
05:17 | ಅವರಿಗೆ ಮುಂಗಡವಾಗಿ ಅಸೈನ್ ಮಾಡಿದ ಕೋರ್ಸ್ ಗಳನ್ನು Future ಟ್ಯಾಬ್ ನಲ್ಲಿ ನೋಡಬಹುದು. ಇದೇ ರೀತಿ ಅವರು ಮುಗಿಸಿದ ಕೋರ್ಸ್ ಗಳನ್ನು Past ಟ್ಯಾಬ್ ನಲ್ಲಿ ನೋಡುವೆವು. |
05:30 | ಈಗ ಪೇಜ್ ನ ಹೆಡರ್ ಅನ್ನು ನೋಡೋಣ. ಮೇಲಿನ ಎಡ ಮೂಲೆಯಲ್ಲಿ, ನಾವು ನ್ಯಾವಿಗೇಷನ್ ಡ್ರಾವರ್ ಅಥವಾ ನ್ಯಾವಿಗೇಷನ್ ಮೆನ್ಯುವನ್ನು ನೋಡಬಹುದು. |
05:41 | ಇದು Calendar, Private Files ಮತ್ತು My courses ಲಿಂಕ್ ಗಳಿಗೆ ಆಕ್ಸೆಸ್ ಅನ್ನು ಕೊಡುವುದು. |
05:48 | ಇದೊಂದು ಟೊಗಲ್ ಮೆನ್ಯುವಾಗಿದೆ. ಅಂದರೆ ಇದು ಕ್ಲಿಕ್ ಮಾಡಿದಾಗ , ಇದರ ಸ್ಟ್ಯಾಟಸ್ ಅನ್ನು ಓಪನ್ ನಿಂದ್ ಕ್ಲೋಸ್ ಗೆ ಮತ್ತು ಕ್ಲೋಸ್ ನಿಂದ ಓಪನ್ ಗೆ ಬದಲಿಸುತ್ತದೆ. |
05:58 | ಮೇಲ್ಗಡೆ ಬಲದಲ್ಲಿ, notifications ಮತ್ತು messages ಗಾಗಿ ಕ್ವಿಕ್ ಆಕ್ಸೆಸ್ ಐಕಾನ್ ಗಳನ್ನು ಹೊಂದಿದೆ. |
06:06 | ಮೇಲ್ಗಡೆ ಬಲದಲ್ಲಿರುವ profile picture ನ ಮೇಲೆ ಕ್ಲಿಕ್ ಮಾಡಿ, ಇದು ಯೂಸರ್ ಮೆನ್ಯುವನ್ನು ಆಕ್ಸೆಸ್ ಮಾಡಲು ಸಾಧ್ಯವಾಗಿಸುವುದು ಮತ್ತು ಇದನ್ನು quick access user menu ಎಂದು ಕರೆಯುವರು. |
06:18 | ಅದರ ಮೇಲೆ ಕ್ಲಿಕ್ ಮಾಡಿ. ಈ ಎಲ್ಲಾ ಮೆನ್ಯುಗಳೂ ಕೂಡ ಎಡದಲ್ಲಿರುವ ಮೆನ್ಯುವಿನಂತೆ ಟಾಗಲ್ ಮೆನ್ಯುಗಳಾಗಿವೆ. |
06:28 | Profile ಆಯ್ಕೆಯ ಮೇಲೆ ಕ್ಲಿಕ್ ಮಾಡಿ. ಮೂಡಲ್ ನಲ್ಲಿ ಪ್ರತಿ ಯೂಸರ್ ಪ್ರೊಫೈಲ್ ಪೇಜ್ ಹೊಂದಿರುತ್ತಾನೆ. |
06:36 | ಈ ಲಿಂಕ್ ಯೂಸರ್ ಅನ್ನು – ಅವರ ಪ್ರೊಫೈಲ್ ಮಾಹಿತಿಯನ್ನು ಎಡಿಟ್ ಮಾಡಲು, ಅವರು ದಾಖಲಾಗಿರುವ ಕೋರ್ಸ್ ಗಳನ್ನು ನೋಡಲು, |
06:46 | ಅವರ blog ಅಥವಾ forum ಪೋಸ್ಟ್ ಗಳನ್ನು ನೋಡಲು, ಅವರು ಆಕ್ಸೆಸ್ ಹೊಂದಿರುವ ರಿಪೋರ್ಟ್ ಗಳನ್ನು ಪರೀಕ್ಷಿಸಲು ಮತ್ತು ಹಿಂದಿನ ಬಾರಿ ಅವರು ಲಾಗಿನ್ ಆಗಲು ಬಳಸಿದ ಆಕ್ಸೆಸ್ ಲಾಗ್ ಗಳನ್ನು ನೋಡಲು ಬಳಸಬಹುದು. |
07:01 | ಈಗ ನಾವು Edit Profile ಲಿಂಕ್ ಅನ್ನು ಕ್ಲಿಕ್ ಮಾಡೋಣ. |
07:06 | Edit Profile ಪೇಜ್ ತೆರೆದುಕೊಳ್ಳುತ್ತದೆ.
ಈ ಪೇಜ್ ಐದು ವಿಭಾಗಗಳಾಗಿ ವಿಂಗಡಿಸಲ್ಪಟ್ಟಿದೆ: ಅವು General, User Picture, Additional Names, Interests, Optional ಎಂದಾಗಿವೆ. |
07:24 | General ಮತ್ತು User picture ವಿಭಾಗಗಳು ಡಿಫಾಲ್ಟ್ ಆಗಿಯೆ ವಿಸ್ತರಿಸಲ್ಪಟ್ಟಿವೆ. |
07:30 | ಬಲದಲ್ಲಿರುವ ‘Expand all’ ಲಿಂಕ್ ಎಲ್ಲ ವಿಭಾಗಗಳನ್ನು ವಿಸ್ತರಿಸುತ್ತದೆ. |
07:36 | ಮತ್ತು ಯಾವುದೇ ವಿಭಾಗದ ಹೆಸರಿನ ಮೇಲೆ ಕ್ಲಿಕ್ ಮಾಡಿದರೆ ವಿಸ್ತರಿಸಲ್ಪಡುತ್ತದೆ ಅಥವಾ ಕಡಿಮೆಯಾಗಲ್ಪಡುತ್ತದೆ. |
07:42 | ಇಲ್ಲಿರುವ ಎಲ್ಲ ಫೀಲ್ಡ್ ಗಳನ್ನು ಎಡಿಟ್ ಮಾಡಬಹುದು. |
07:45 | ನಾನು ಇಲ್ಲಿ ಮಾಡಿರುವಂತೆ, General ವಿಭಾಗದಲ್ಲಿ ನಿಮ್ಮ ವೈಯಕ್ತಿಕ ವಿವವರವನ್ನು ನಮೂದಿಸಬಹುದು. |
07:52 | ನಾನು ಟೀಚರ್ ಆಗಿ, ವಿದ್ಯಾರ್ಥಿಗಳು ನನ್ನ ಕುರಿತು ತಿಳಿದಿರಲು ಬಯಸುವೆನು. |
07:58 | ಹಾಗಾಗಿ, ಇಲ್ಲಿ Description ಫೀಲ್ಡ್ ನಲ್ಲಿ, ನಾನು ಕೆಲವು ವಿವರಗಳನ್ನು ತುಂಬಿಸುವೆನು. |
08:04 | ಟ್ಯುಟೋರಿಯಲ್ ಅನ್ನು ನಿಲ್ಲಿಸಿ, ನಿಮ್ಮ ವಿವರಗಳನ್ನು ನಾನು ಮಾಡಿದ ಹಾಗೆ ತುಂಬಿಸಿ. |
08:10 | ನೀವು ಇನ್ನು ಹೆಚ್ಚಿನ ಮಾಹಿತಿಗಳನ್ನು ಉಳಿದ ಫೀಲ್ಡ್ ಮತ್ತು ವಿಭಾಗಗಳಲ್ಲಿ ತುಂಬಿಸಬಹುದು. ನೀವು ನಿಮ್ಮ ಛಾಯಾ ಚಿತ್ರವನ್ನು ಬೇಕಾದರೂ ಅಪ್ಲೋಡ್ ಮಾಡಬಹುದು. |
08:19 | General ಮತ್ತು Optional ವಿಭಾಗಗಳಲ್ಲಿ ಇನ್ನು ಕೆಲವು ಮಾಹಿತಿಗಳನ್ನು ಸೇರಿಸಿದ್ದೇನೆ. |
08:25 | ನಂತರ Update Profile ಬಟನ್ ಅನ್ನು ಕ್ಲಿಕ್ ಮಾಡಿ ಪೇಜ್ ಅನ್ನು ಸೇವ್ ಮಾಡಿ. |
08:30 | ಈಗ ಮೇಲೆ ಬಲದಲ್ಲಿರುವ quick access user menu ವನ್ನು ಕ್ಲಿಕ್ ಮಾಡಿ , ನಂತರ Preferences ಲಿಂಕ್ ಅನ್ನು ಕ್ಲಿಕ್ ಮಾಡಿ. |
08:40 | Preferences ಪೇಜ್ ಯೂಸರ್ ಗಳಿಗೆ, ಎಡಿಟ್ ಮಾಡಲು ಅನೇಕ ಸೆಟ್ಟಿಂಗ್ ಗಳಿಗೆ ಶೀಘ್ರ ಪ್ರವೇಶ (ಆಕ್ಸೆಸ್) ಅನ್ನು ಕೊಡುವುದು. |
08:48 | ಟೀಚರ್ ಅಕೌಂಟ್ ಗಾಗಿ ಇರುವ Preferences ಪೇಜ್ ಅನ್ನು :
User account, Blogs ಮತ್ತು Badges ಎಂದು ವಿಂಗಡಿಸಲಾಗಿದೆ. |
09:00 | ನಾವು ಈಗಾಗಲೇ Edit Profile ಮತ್ತು Change Password ಆಯ್ಕೆಗಳನ್ನು ನೋಡಿದ್ದೇವೆ. |
09:06 | ಇಲ್ಲಿ ಇನ್ನೂ
Language, Forum, Editor, Course, Calendar, Message, Notification ಎನ್ನುವ ಪ್ರಿಫರೆನ್ಸ್ ಗಳನ್ನು ಹೊಂದಿದೆ. |
09:19 | ಈಗ Calendar preferences ಅನ್ನು ಕ್ಲಿಕ್ ಮಾಡೋಣ. |
09:23 | ನಾವು ಕ್ಯಾಲೆಂಡರ್ ಅನ್ನು 24- ಘಂಟೆ ಫಾರ್ಮ್ಯಾಟ್ ನಲ್ಲಿ ಸೆಟ್ ಮಾಡೋಣ. |
09:29 | Upcoming events look-ahead ಅನ್ನು 2 weeks ಗೆ ಸೆಟ್ ಮಾಡೋಣ. |
09:35 | ಅಂದರೆ ನಾವು ಕ್ಯಾಲೆಂಡರ್ ನಲ್ಲಿ ಎರಡು ವಾರಗಳಲ್ಲಿ ನಡೆಯುವ ಎಲ್ಲ ಘಟನೆಗಳಿಗೆ ನೋಟಿಫಿಕೇಷನ್ ಅನ್ನು ನೋಡಬಹುದು. |
09:43 | Save Changes ಬಟನ್ ಅನ್ನು ಕ್ಲಿಕ್ ಮಾಡಿ. |
09:46 | ನಾವು ಉಳಿದ ಪ್ರಿಫರೆನ್ಸ್ ಗಳ ಕುರಿತು ಈ ಸರಣಿಯಲ್ಲಿ ಉಳಿದ ವೈಶಿಷ್ಟ್ಯಗಳನ್ನು ಚರ್ಚಿಸುವಾಗ ನೋಡೋಣ. |
09:54 | ಇಲ್ಲಿರುವ ಮಾಹಿತಿಯನ್ನು ಗಮನಿಸಿ. |
09:57 | ಇದು ಬ್ರೆಡ್ ಕ್ರಂಬ್ ನ್ಯಾವಿಗೇಷನ್ ಆಗಿದೆ. ಇದೊಂದು ಮೂಡಲ್ ಸೈಟ್ ಗಳ ಹೈರಾರ್ಕಿ ಯಲ್ಲಿ ನಾವು ಯಾವ ಪೇಜ್ ನಲ್ಲಿದ್ದೇವೆ ಎಂದು ತೋರಿಸುವ ವಿಷ್ಯುಅಲ್ ಏಯ್ಡ್ ಆಗಿದೆ. |
10:09 | ಇದು ಒಂದೇ ಕ್ಲಿಕ್ ನಿಂದ ಹೆಚ್ಚಿನ ಹಂತದ ಪೇಜ್ ಗೆ ಹಿಂದಿರುಗಲು ಸಹಾಯ ಮಾಡುತ್ತದೆ. |
10:15 | ಡ್ಯಾಶ್ ಬೋರ್ಡ್ ಗೆ ಹಿಂದಿರುಗಲು, ಬ್ರೆಡ್-ಕ್ರಂಬ್ಸ್ ನಲ್ಲಿರುವ Dashboard ಲಿಂಕ್ ಅನ್ನು ಕ್ಲಿಕ್ ಮಾಡಿ. |
10:21 | ಈಗ ನಾವು Calculus ಕೋರ್ಸ್ ಗೆ ಟಾಪಿಕ್ ಮತ್ತು ಸಾರಾಂಶವನ್ನು ಸೇರಿಸುವುದು ಹೇಗೆ ಎಂದು ನೋಡೋಣ. |
10:28 | ಎಡದಲ್ಲಿರುವ ನ್ಯಾವಿಗೇಷನ್ ಮೆನ್ಯುವಿನಲ್ಲಿ Calculus ಕೋರ್ಸ್ ಅನ್ನು ಕ್ಲಿಕ್ ಮಾಡೋಣ. |
10:34 | ಹೊಸ ಪೇಜ್ ನಲ್ಲಿ ಮೇಲೆ ಬಲದಲ್ಲಿರುವ gear ಐಕಾನ್ ಅನ್ನು ಕ್ಲಿಕ್ ಮಾಡಿ. |
10:40 | ನಂತರ Turn editing on ಆಯ್ಕೆಯ ಮೇಲೆ ಕ್ಲಿಕ್ ಮಾಡಿ. |
10:45 | ಈಗ ಪೇಜ್ ನಲ್ಲಿ ಹೆಚ್ಚಿನ ಎಡಿಟ್ ಆಯ್ಕೆಗಳು ಕಾಣಿಸುತ್ತವೆ. |
10:50 | Topic 1 ದ ಮುಂದೆ ಇರುವ pencil ಐಕಾನ್ ನ ಮೇಲೆ ಕ್ಲಿಕ್ ಮಾಡಿ. |
10:55 | ಈಗ ಬರುವ ಟೆಕ್ಸ್ಟ್ ಬಾಕ್ಸ್ ನಲ್ಲಿ : Basic Calculus ಎಂದು ಟೈಪ್ ಮಾಡಿ, Enter ಅನ್ನು ಒತ್ತಿ. |
11:03 | ಈಗ ಟಾಪಿಕ್ ನ ಹೆಸರಲ್ಲಾಗುವ ಬದಲಾವಣೆಯನ್ನು ಗಮನಿಸಿ. |
11:06 | ಈಗ ಆ ಟಾಪಿಕ್ ನ ಬಲಭಾಗದಲ್ಲಿರುವ Edit ಲಿಂಕ್ ನ ಮೇಲೆ ಕ್ಲಿಕ್ ಮಾಡಿ. |
11:11 | ನಂತರ Edit topic ಆಯ್ಕೆಯನ್ನು ಕ್ಲಿಕ್ ಮಾಡಿ. |
11:15 | ಇದು ನಮ್ಮನ್ನು Summary ಪೇಜ್ ಗೆ ಕರೆದೊಯ್ಯುತ್ತದೆ. |
11:18 | ಇಲ್ಲಿ, Summary ಫೀಲ್ಡ್ ನಲ್ಲಿ, ನಾವು ಟಾಪಿಕ್ ನ ಸಂಕ್ಷಿಪ್ತ ವಿವರಣೆಯನ್ನು ಕೊಡಬಹುದು. ನಾನು ಇಲ್ಲಿ ತೋರಿಸಿರುವಂತೆ ಟೈಪ್ ಮಾಡುವೆನು. |
11:27 | ಕೆಳಕ್ಕೆ ಸ್ಕ್ರೋಲ್ ಮಾಡಿ, Save Changes ಬಟನ್ ಅನ್ನು ಕ್ಲಿಕ್ ಮಾಡಿ. |
11:32 | ಬದಲಾವಣೆಯನ್ನು ಗಮನಿಸಿ. |
11:34 | ಹೀಗೆ ನಾವು ಮೂಡಲ್ ನಲ್ಲಿ ನಮ್ಮ ಕೋರ್ಸ್ ನ ವಿವರಗಳನ್ನು ಸೇರಿಸಲು ಪ್ರಾರಂಭಿಸುವೆವು. |
11:40 | ಈಗ ನಾವು Moodle ನಿಂದ ಲಾಗೌಟ್ ಆಗುವೆವು. ಹಾಗೆ ಮಾಡಲು , ಮೇಲೆ ಬಲದಲ್ಲಿರುವ user ಐಕಾನ್ ಅನ್ನು ಕ್ಲಿಕ್ ಮಾಡಿ, ಈಗ Log out ಆಯ್ಕೆಯನ್ನು ಕ್ಲಿಕ್ ಮಾಡಿ. |
11:50 | ಇದರೊಂದಿಗೆ ನಾವು ಈ ಟ್ಯುಟೋರಿಯಲ್ ನ ಕೊನೆಯನ್ನು ತಲುಪಿದ್ದೇವೆ. ಸಂಕ್ಷಿಪ್ತವಾಗಿ, |
11:56 | ಈ ಟ್ಯುಟೋರಿಯಲ್ ನಲ್ಲಿ ನಾವು,
Course overview ವಿವರಗಳು, teachers’ dashboard ನ ಕುರಿತು, |
12:05 | Edit profile ಸೆಟ್ಟಿಂಗ್ ಗಳು,
Preferences ಸೆಟ್ಟಿಂಗ್ ಗಳು ಮತ್ತು ಮೂಡಲ್ ನಲ್ಲಿ ನಮ್ಮ ಕೋರ್ಸ್ ಗೆ ಸಂಬಂಧಿಸಿದ ಕೆಲವು ಪ್ರಾಥಮಿಕ ವಿವರಗಳನ್ನು ಸೇರಿಸಲು ಕಲಿತಿದ್ದೇವೆ. |
12:16 | ಇಲ್ಲಿ ನಿಮಗಾಗಿ ಒಂದು ಅಸೈನ್ಮೆಂಟ್ ಇದೆ:
Calculus ಕೋರ್ಸ್ ನಲ್ಲಿ ಎಲ್ಲ ಟಾಪಿಕ್ ಗಳ ಹೆಸರನ್ನು ಬದಲಿಸಿ, ಎಲ್ಲ ಟಾಪಿಕ್ ಗಳಿಗೂ ಅದರ ಸಾರಾಂಶವನ್ನು ಸೇರಿಸಿ, ಹೆಚ್ಚಿನ ವಿವರಗಳಿಗೆ ಈ ಟ್ಯುಟೋರಿಯಲ್ ನ Assignment ಲಿಂಕ್ ಅನ್ನು ನೋಡಿ. |
12:31 | ಈ ಲಿಂಕ್ ನಲ್ಲಿರುವ ವೀಡಿಯೊ, 'ಸ್ಪೋಕನ್ ಟ್ಯುಟೋರಿಯಲ್' ಪ್ರೊಜೆಕ್ಟ್ ನ ಸಾರಾಂಶವಾಗಿದೆ. ದಯವಿಟ್ಟು ಇದನ್ನು ಡೌನ್ಲೋಡ್ ಮಾಡಿ ವೀಕ್ಷಿಸಿ. |
12:39 | 'ಸ್ಪೋಕನ್ ಟ್ಯುಟೋರಿಯಲ್' ಪ್ರೊಜೆಕ್ಟ್ ತಂಡವು, ಕಾರ್ಯಶಾಲೆಗಳನ್ನು ನಡೆಸುತ್ತದೆ ಮತ್ತು ಪ್ರಮಾಣಪತ್ರಗಳನ್ನು ಕೊಡುತ್ತದೆ. ಹೆಚ್ಚಿನ ವಿವರಗಳಿಗಾಗಿ ದಯವಿಟ್ಟು ನಮಗೆ ಬರೆಯಿರಿ. |
12:49 | ಈ ಫೋರಂ ನಲ್ಲಿ, ನಿಮ್ಮ ಪ್ರಶ್ನೆಯನ್ನು ಸಮಯದೊಂದಿಗೆ ಪೋಸ್ಟ್ ಮಾಡಿ. |
12:53 | 'ಸ್ಪೋಕನ್ ಟ್ಯುಟೋರಿಯಲ್' ಪ್ರೊಜೆಕ್ಟ್, NMEICT, MHRD, ಭಾರತ ಸರ್ಕಾರದಿಂದ ಅನುದಾನವನ್ನು ಪಡೆದಿದೆ. ಈ ಮಿಷನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಕೆಳಗೆ ತೋರಿಸಿರುವ ಲಿಂಕ್ ನಲ್ಲಿ ಲಭ್ಯವಿದೆ. |
13:06 | ಸ್ಕ್ರಿಪ್ಟ್ ನ ಅನುವಾದಕಿ, ಮೈಸೂರಿನಿಂದ ಅಂಜನಾ ಅನಂತ್ ನಾಗ್ ಮತ್ತು ಧ್ವನಿ ಶ್ರೀ ನವೀನ್ ಭಟ್, ಉಪ್ಪಿನಪಟ್ಟಣ. |
13:17 | ಧನ್ಯವಾದಗಳು. |