Moodle-Learning-Management-System/C2/Teachers-Dashboard-in-Moodle/Kannada

From Script | Spoken-Tutorial
Revision as of 17:17, 15 November 2019 by Anjana310312 (Talk | contribs)

(diff) ← Older revision | Latest revision (diff) | Newer revision → (diff)
Jump to: navigation, search
Time Narration
00:01 Teacher’s dashboard in Moodle ಎಂಬ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ.
00:07 ಈ ಟ್ಯುಟೋರಿಯಲ್ ನಲ್ಲಿ ನಾವು, Moodle ಕೋರ್ಸ್ ನ ವೈಶಿಷ್ಟ್ಯಗಳ ಅವಲೋಕನ ದ ಕುರಿತು ಮತ್ತು
00:14
teachers’ dashboard   ನ ಬಗ್ಗೆ,

ಪ್ರೊಫೈಲ್ ಅನ್ನು ಎಡಿಟ್ ಮಾಡುವುದು ಹೇಗೆ ಮತ್ತು preferences ಅನ್ನು ಎಡಿಟ್ ಮಾಡುವುದು ಹೇಗೆ ಎನ್ನುವುದರ ಬಗ್ಗೆ ಕಲಿಯುವೆವು.

00:25 ಕೊನೆಯಲ್ಲಿ, ಮೂಡಲ್ ನಲ್ಲಿ ನಮ್ಮ ಕೋರ್ಸ್ ಗೆ ಸಂಬಂಧಿಸಿದ ಕೆಲವು ಪ್ರಾಥಮಿಕ ವಿವರಗಳನ್ನು ಸೇರಿಸಲು ಕಲಿಯುವೆವು.
00:33 ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು, ನಾನು:

Ubuntu Linux OS 16.04, XAMPP 5.6.30 ಮೂಲಕ ಪಡೆದ Apache, MariaDB ಮತ್ತು PHP, Moodle 3.3 ಮತ್ತು Firefox ವೆಬ್-ಬ್ರೌಸರ್ ಅನ್ನು ಬಳಸಿದ್ದೇನೆ. ನಿಮ್ಮ ಆಯ್ಕೆಯ ಯಾವುದೇ ವೆಬ್ ಬ್ರೌಸರ್ ಅನ್ನು ನೀವು ಬಳಸಬಹುದು.

00:59 ಆದಾಗ್ಯೂ, Internet Explorer ಅನ್ನು ಮಾತ್ರ ಬಳಸಬಾರದು, ಅದು ಅಷ್ಟು ಸರಿಯಾಗಿ ಡಿಸ್ಪ್ಲೇ ಮಾಡುವುದಿಲ್ಲ.
01:07 ಈ ಟ್ಯುಟೋರಿಯಲ್, ನಿಮ್ಮ ಸೈಟ್ ಅಡ್ಮಿನಿಸ್ಟ್ರೇಟರ್ ಮೂಡಲ್ ವೆಬ್ ಸೈಟ್ ಅನ್ನು ಸೆಟ್ ಮಾಡಿ, ನಿಮಗೆ ಒಂದು ಹೊಸ, ಖಾಲಿ, teacher ಪ್ರಿವಿಲೆಜ್ ಅನ್ನು ಹೊಂದಿರುವ ಕೋರ್ಸ್ ಅನ್ನು ಅಸೈನ್ ಮಾಡಿದ್ದಾರೆ ಎಂದು ಭಾವಿಸುತ್ತದೆ.

ನನ್ನ ಸಿಸ್ಟಮ್ ಅಡಿಮಿನಿಸ್ಟ್ರೇಟರ್ ಇದನ್ನು ಮೊದಲೇ ಮಾಡಿರುತ್ತಾರೆ.

01:26 ದಯವಿಟ್ಟು ಗಮನಿಸಿ : ಯೂಸರ್ ರೆಬೆಕಾ ರೇಮೆಂಡ್ ಅವರನ್ನು “Calculus” ಕೋರ್ಸ್ ಗೆ, Teacher ಆಗಿ ಅಸೈನ್ ಮಾಡಲಾಗಿದೆ.
01:34 ನಿಮ್ಮ ಸೈಟ್ ಅಡ್ಮಿನಿಸ್ಟ್ರೇಟರ್ ಗೆ ಈ ವೈಬ್ಸೈಟ್ ನಲ್ಲಿ ಮೂಡಲ್ ಟ್ಯುಟೋರಿಯಲ್ ಗಳನ್ನು ಸೂಚಿಸಲು ಕೇಳಿಕೊಳ್ಳಿ.
01:41 ಕನಿಷ್ಟ ಒಂದು ಕೋರ್ಸ್ ಗೆ ಟೀಚರ್ ಪ್ರಿವಿಲೆಜ್ ಅನ್ನು ಹೊಂದಿರುವ ಒಂದು ಯೂಸರ್ ಅನ್ನು ನಿಮಗಾಗಿ ಕ್ರಿಯೇಟ್ ಮಾಡಿ.
01:48 ಮೂಡಲ್ ಒಂದು ಹೊಂದಿಕೊಳ್ಳುವ, ರಚನಾತ್ಮಕ ಮತ್ತು ಬಳಸಲು ಸುಲಭವಾದ ಕಲಿಸುವ ಮತ್ತು ಕಲಿಯುವ ವ್ಯವಸ್ಥೆಯಾಗಿದೆ.
01:56 ಸಾಮಾನ್ಯವಾಗಿ ಮೂಡಲ್ ಅನ್ನು ಕಲಿಕೆಯ ಸಂಪನ್ಮೂಲಗಳನ್ನು ಅಪ್ಲೋಡ್ ಮಾಡಲು,

ಅವರ ಮಲ್ಟಿಮೀಡಿಯಾ ಇ-ರಿಸೋರ್ಸ್ ಗಳಾದ ಫೈಲ್ ಗಳು, ವಿಡೀಯೋಗಳು ಮುಂತಾದ ಸಂಗ್ರಹಗಳನ್ನು ನಿರ್ವಹಿಸಲು ಟೀಚರ್ ಗಳು ಬಳಸಬಹುದು.

02:12 ವೆಬ್ ರಿಸೋರ್ಸ್ ಮತ್ತು ಓಪನ್ ಎಜುಕೇಷನಲ್ ರಿಸೋರ್ಸ್ ಗಳನ್ನು ಹಂಚಿಕೊಳ್ಳಲು ,

YouTube / Vimeo ವಿಡಿಯೋಗಳನ್ನು ಸೇರಿಸಲು,

02:22 ರಸಪ್ರಶ್ನೆ(ಕ್ವಿಝ್) ಮತ್ತು ಅಸೈನ್ ಮೆಂಟ್ ಗಳನ್ನು ನಿರ್ವಹಿಸಲು,

Wiki, Glossary ಮುಂತಾದ ಸಹಕಾರಿ ವಿಷಯಗಳ ಬಳಕೆಯನ್ನು ಉತ್ತೇಜಿಸಲು ,

02:34 ವಿದ್ಯಾರ್ಥಿಗಳೊಂದಿಗೆ ಸಮಕಾಲಿಕವಾಗಿ(ಸಿಂಕ್ರನಸ್ಲಿ) ಅಥವಾ ಅಸಮಕಾಲಿಕವಾಗಿ(ಅಸಿಂಕ್ರನಸ್ಲಿ) ಸಂಹವನ ಮತ್ತು ಸಂಪರ್ಕವನ್ನು ಹೊಂದಲು, ವಿದ್ಯಾರ್ಥಿಗಳ ಕಲಿಕೆಯ ಪ್ರಗತಿಯನ್ನು ತಿಳಿಯಲು ಬಳಸಬಹುದು.
02:44 ಇಲ್ಲಿ ನಾನು ಕ್ಯಾಲ್ಕ್ಯುಲಸ್ ಕೋರ್ಸ್ ನ ಅವಲೋಕನವನ್ನು ಹೊಂದಿದ್ದೇನೆ.
02:50 ಇಲ್ಲಿ ನಾನು -

ಮುಗಿಸಬಹುದಾದ ಟಾಪಿಕ್ ಗಳು, ಪ್ರತಿವಾರಕ್ಕೆ ತೆಗೆದುಕೊಳ್ಳಬಹುದಾದ ತರಗತಿಗಳ ಸಂಖ್ಯೆ, ಕೋರ್ಸ್ ನ ಅಸೈನ್ಮೆಂಟ್ ಗಳ ಸಂಖ್ಯೆ,

03:01 ಕ್ವಿಝ್ ಗಳ ಸಂಖ್ಯೆ (ಸಾಪ್ತಾಹಿಕ ಅಥವಾ ಪಾಕ್ಷಿಕ )

end of course exam(ಕೋರ್ಸ್ ನ ಕೊನೆಯಲ್ಲಿರುವ ಪರೀಕ್ಷೆ) ಗಳ ಸಂಖ್ಯೆ, ಅಂಕಗಳ ವಿಭಜನೆ, ಕೋರ್ಸ್ ಮಟೇರಿಯಲ್ ಗಳು, ಪುಸ್ತಕಗಳ ರೆಫರೆನ್ಸ್ ಗಳು(ಉಲ್ಲೇಖಗಳು) – ಇವುಗಳನ್ನು ಹೊಂದಿದ್ದೇನೆ.

03:18 ನಾನು ನನ್ನ ಕೋರ್ಸ್ ಅನ್ನು ರಚನೆ ಮಾಡಬೇಕು ಮತ್ತು ಮೂಡಲ್ ನಲ್ಲಿ ಅದಕ್ಕನುಗುಣವಾಗಿ ಎಲ್ಲ ಮಟೀರಿಯಲ್ ಗಳನ್ನು ಅಪ್ಲೋಡ್ ಮಾಡಬೇಕು.
03:25 ಬ್ರೌಸರ್ ಗೆ ಹೋಗಿ ಮತ್ತು ಮೂಡಲ್ ಸೈಟ್ ಅನ್ನು ತೆರೆಯಿರಿ.
03:30 ಹೆಡರ್ ಮತ್ತು Available courses ಗಳನ್ನು ಒಳಗೊಂಡ ಪೇಜ್ ಡಿಸ್ಪ್ಲೇ ಆಗುವುದು.
03:35 ವಿಂಡೋದ ಮೇಲ್ಭಾಗದಲ್ಲಿರುವ ಬಲ ಮೂಲೆಯಲ್ಲಿರುವ Login ಲಿಂಕ್ ನ ಮೇಲೆ ಕ್ಲಿಕ್ ಮಾಡಿ.
03:40 ನಾನು teacher ರೆಬೆಕಾ ರೇಮೆಂಡ್ ಎಂದು ಲಾಗಿನ್ ಆಗುವೆನು.
03:44 ನಾವು ಈಗ ಪಾಸ್ವರ್ಡ್ ಅನ್ನು ಬದಲಿಸಲು ಕೇಳುವ ಪೇಜ್ ನಲ್ಲಿರುವೆವು. ಏಕೆಂದರೆ ಅಡ್ಮಿನ್ ನಿಂದ ಮೊದಲೇ Force password change ಆಯ್ಕೆಯು ಸಕ್ರಿಯಗೊಂಡಿದೆ.
03:57 current password ಅನ್ನು ಟೈಪ್ ಮಾಡಿ, ನಂತರ new password ಅನ್ನು ಟೈಪ್ ಮಾಡಿ. Spokentutorial12 # ಎಂದು ಟೈಪ್ ಮಾಡುವೆನು.
04:07 ಹೊಸ ಪಾಸ್ವರ್ಡ್ ಅನ್ನು ಇನ್ನೊಮ್ಮೆ ಟೈಪ್ ಮಾಡಿ. ಮತ್ತು ಕೆಳಗಿರುವ Save changes ಬಟನ್ ಅನ್ನು ಕ್ಲಿಕ್ ಮಾಡಿ.
04:15 ನಿಮ್ಮ ಪಾಸ್ವರ್ಡ್ ಬದಲಾಗಿದೆ ಎಂದು ದೃಢೀಕರಿಸುವ ಯಶಸ್ವಿ ಸಂದೇಶ ಕಾಣಿಸುವುದು. Continue ಬಟನ್ ಅನ್ನು ಕ್ಲಿಕ್ ಮಾಡಿ.
04:24 ಈಗ ನಾವಿರುವ ಪೇಜ್ ಅನ್ನು dashboard ಎಂದು ಕರೆಯುವರು.
04:29 ನಮ್ಮ ಡ್ಯಾಶ್ ಬೋರ್ಡ್ ಅನ್ನು ಮೂರು ಕಾಲಮ್ ಗಳಾಗಿ ವಿಂಗಡಿಸಲಾಗಿದೆ.
04:34 ಎಡ ಭಾಗದಲ್ಲಿರುವುದು Navigation ಮೆನ್ಯು ಆಗಿದೆ. ಮಧ್ಯದಲ್ಲಿ ಅಗಲವಾಗಿರುವುದು, 'Timeline' ಮತ್ತು 'Courses' ಟ್ಯಾಬ್ ಗಳನ್ನು ಹೊಂದಿರುವ Course overview ಕ್ಷೇತ್ರವಾಗಿದೆ.
04:47 ಬಲಭಾಗದಲ್ಲಿರುವುದು Blocks column ಆಗಿದೆ.
04:51 Courses ಟ್ಯಾಬ್ ನೀವು ದಾಖಲಾಗಿರುವ ಕೋರ್ಸ್ ಗಳನ್ನು ಪಟ್ಟಿ ಮಾಡುವುದು. Course overview ಜಾಗದಲ್ಲಿರುವ Courses ಟ್ಯಾಬ್ ಅನ್ನು ಕ್ಲಿಕ್ ಮಾಡಿ.
05:02 In Progress ಟ್ಯಾಬ್ ನಲ್ಲಿ ನಾವು ಎರಡು ಕೋರ್ಸ್ ಗಳನ್ನು ಕಾಣಬಹುದು : Calculus ಮತ್ತು Linear Algebra. ಇವು ಟೀಚರ್ ರೆಬೆಕಾ ರೇಮೆಂಡ್ ಅವರಿಗೆ ಅಡ್ಮಿನ್ ಅಸೈನ್ ಮಾಡಿದ ಕೋರ್ಸ್ ಗಳಾಗಿವೆ.
05:17 ಅವರಿಗೆ ಮುಂಗಡವಾಗಿ ಅಸೈನ್ ಮಾಡಿದ ಕೋರ್ಸ್ ಗಳನ್ನು Future ಟ್ಯಾಬ್ ನಲ್ಲಿ ನೋಡಬಹುದು. ಇದೇ ರೀತಿ ಅವರು ಮುಗಿಸಿದ ಕೋರ್ಸ್ ಗಳನ್ನು Past ಟ್ಯಾಬ್ ನಲ್ಲಿ ನೋಡುವೆವು.
05:30 ಈಗ ಪೇಜ್ ನ ಹೆಡರ್ ಅನ್ನು ನೋಡೋಣ. ಮೇಲಿನ ಎಡ ಮೂಲೆಯಲ್ಲಿ, ನಾವು ನ್ಯಾವಿಗೇಷನ್ ಡ್ರಾವರ್ ಅಥವಾ ನ್ಯಾವಿಗೇಷನ್ ಮೆನ್ಯುವನ್ನು ನೋಡಬಹುದು.
05:41 ಇದು Calendar, Private Files ಮತ್ತು My courses ಲಿಂಕ್ ಗಳಿಗೆ ಆಕ್ಸೆಸ್ ಅನ್ನು ಕೊಡುವುದು.
05:48 ಇದೊಂದು ಟೊಗಲ್ ಮೆನ್ಯುವಾಗಿದೆ. ಅಂದರೆ ಇದು ಕ್ಲಿಕ್ ಮಾಡಿದಾಗ , ಇದರ ಸ್ಟ್ಯಾಟಸ್ ಅನ್ನು ಓಪನ್ ನಿಂದ್ ಕ್ಲೋಸ್ ಗೆ ಮತ್ತು ಕ್ಲೋಸ್ ನಿಂದ ಓಪನ್ ಗೆ ಬದಲಿಸುತ್ತದೆ.
05:58 ಮೇಲ್ಗಡೆ ಬಲದಲ್ಲಿ, notifications ಮತ್ತು messages ಗಾಗಿ ಕ್ವಿಕ್ ಆಕ್ಸೆಸ್ ಐಕಾನ್ ಗಳನ್ನು ಹೊಂದಿದೆ.
06:06 ಮೇಲ್ಗಡೆ ಬಲದಲ್ಲಿರುವ profile picture ನ ಮೇಲೆ ಕ್ಲಿಕ್ ಮಾಡಿ, ಇದು ಯೂಸರ್ ಮೆನ್ಯುವನ್ನು ಆಕ್ಸೆಸ್ ಮಾಡಲು ಸಾಧ್ಯವಾಗಿಸುವುದು ಮತ್ತು ಇದನ್ನು quick access user menu ಎಂದು ಕರೆಯುವರು.
06:18 ಅದರ ಮೇಲೆ ಕ್ಲಿಕ್ ಮಾಡಿ. ಈ ಎಲ್ಲಾ ಮೆನ್ಯುಗಳೂ ಕೂಡ ಎಡದಲ್ಲಿರುವ ಮೆನ್ಯುವಿನಂತೆ ಟಾಗಲ್ ಮೆನ್ಯುಗಳಾಗಿವೆ.
06:28 Profile ಆಯ್ಕೆಯ ಮೇಲೆ ಕ್ಲಿಕ್ ಮಾಡಿ. ಮೂಡಲ್ ನಲ್ಲಿ ಪ್ರತಿ ಯೂಸರ್ ಪ್ರೊಫೈಲ್ ಪೇಜ್ ಹೊಂದಿರುತ್ತಾನೆ.
06:36 ಈ ಲಿಂಕ್ ಯೂಸರ್ ಅನ್ನು – ಅವರ ಪ್ರೊಫೈಲ್ ಮಾಹಿತಿಯನ್ನು ಎಡಿಟ್ ಮಾಡಲು, ಅವರು ದಾಖಲಾಗಿರುವ ಕೋರ್ಸ್ ಗಳನ್ನು ನೋಡಲು,
06:46 ಅವರ blog ಅಥವಾ forum ಪೋಸ್ಟ್ ಗಳನ್ನು ನೋಡಲು, ಅವರು ಆಕ್ಸೆಸ್ ಹೊಂದಿರುವ ರಿಪೋರ್ಟ್ ಗಳನ್ನು ಪರೀಕ್ಷಿಸಲು ಮತ್ತು ಹಿಂದಿನ ಬಾರಿ ಅವರು ಲಾಗಿನ್ ಆಗಲು ಬಳಸಿದ ಆಕ್ಸೆಸ್ ಲಾಗ್ ಗಳನ್ನು ನೋಡಲು ಬಳಸಬಹುದು.
07:01 ಈಗ ನಾವು Edit Profile ಲಿಂಕ್ ಅನ್ನು ಕ್ಲಿಕ್ ಮಾಡೋಣ.
07:06 Edit Profile ಪೇಜ್ ತೆರೆದುಕೊಳ್ಳುತ್ತದೆ.

ಈ ಪೇಜ್ ಐದು ವಿಭಾಗಗಳಾಗಿ ವಿಂಗಡಿಸಲ್ಪಟ್ಟಿದೆ: ಅವು

General,

User Picture,

Additional Names,

Interests,

Optional ಎಂದಾಗಿವೆ.

07:24 General ಮತ್ತು User picture ವಿಭಾಗಗಳು ಡಿಫಾಲ್ಟ್ ಆಗಿಯೆ ವಿಸ್ತರಿಸಲ್ಪಟ್ಟಿವೆ.
07:30 ಬಲದಲ್ಲಿರುವ ‘Expand all’ ಲಿಂಕ್ ಎಲ್ಲ ವಿಭಾಗಗಳನ್ನು ವಿಸ್ತರಿಸುತ್ತದೆ.
07:36 ಮತ್ತು ಯಾವುದೇ ವಿಭಾಗದ ಹೆಸರಿನ ಮೇಲೆ ಕ್ಲಿಕ್ ಮಾಡಿದರೆ ವಿಸ್ತರಿಸಲ್ಪಡುತ್ತದೆ ಅಥವಾ ಕಡಿಮೆಯಾಗಲ್ಪಡುತ್ತದೆ.
07:42 ಇಲ್ಲಿರುವ ಎಲ್ಲ ಫೀಲ್ಡ್ ಗಳನ್ನು ಎಡಿಟ್ ಮಾಡಬಹುದು.
07:45 ನಾನು ಇಲ್ಲಿ ಮಾಡಿರುವಂತೆ, General ವಿಭಾಗದಲ್ಲಿ ನಿಮ್ಮ ವೈಯಕ್ತಿಕ ವಿವವರವನ್ನು ನಮೂದಿಸಬಹುದು.
07:52 ನಾನು ಟೀಚರ್ ಆಗಿ, ವಿದ್ಯಾರ್ಥಿಗಳು ನನ್ನ ಕುರಿತು ತಿಳಿದಿರಲು ಬಯಸುವೆನು.
07:58 ಹಾಗಾಗಿ, ಇಲ್ಲಿ Description ಫೀಲ್ಡ್ ನಲ್ಲಿ, ನಾನು ಕೆಲವು ವಿವರಗಳನ್ನು ತುಂಬಿಸುವೆನು.
08:04 ಟ್ಯುಟೋರಿಯಲ್ ಅನ್ನು ನಿಲ್ಲಿಸಿ, ನಿಮ್ಮ ವಿವರಗಳನ್ನು ನಾನು ಮಾಡಿದ ಹಾಗೆ ತುಂಬಿಸಿ.
08:10 ನೀವು ಇನ್ನು ಹೆಚ್ಚಿನ ಮಾಹಿತಿಗಳನ್ನು ಉಳಿದ ಫೀಲ್ಡ್ ಮತ್ತು ವಿಭಾಗಗಳಲ್ಲಿ ತುಂಬಿಸಬಹುದು. ನೀವು ನಿಮ್ಮ ಛಾಯಾ ಚಿತ್ರವನ್ನು ಬೇಕಾದರೂ ಅಪ್ಲೋಡ್ ಮಾಡಬಹುದು.
08:19 General ಮತ್ತು Optional ವಿಭಾಗಗಳಲ್ಲಿ ಇನ್ನು ಕೆಲವು ಮಾಹಿತಿಗಳನ್ನು ಸೇರಿಸಿದ್ದೇನೆ.
08:25 ನಂತರ Update Profile ಬಟನ್ ಅನ್ನು ಕ್ಲಿಕ್ ಮಾಡಿ ಪೇಜ್ ಅನ್ನು ಸೇವ್ ಮಾಡಿ.
08:30 ಈಗ ಮೇಲೆ ಬಲದಲ್ಲಿರುವ quick access user menu ವನ್ನು ಕ್ಲಿಕ್ ಮಾಡಿ , ನಂತರ Preferences ಲಿಂಕ್ ಅನ್ನು ಕ್ಲಿಕ್ ಮಾಡಿ.
08:40 Preferences ಪೇಜ್ ಯೂಸರ್ ಗಳಿಗೆ, ಎಡಿಟ್ ಮಾಡಲು ಅನೇಕ ಸೆಟ್ಟಿಂಗ್ ಗಳಿಗೆ ಶೀಘ್ರ ಪ್ರವೇಶ (ಆಕ್ಸೆಸ್) ಅನ್ನು ಕೊಡುವುದು.
08:48 ಟೀಚರ್ ಅಕೌಂಟ್ ಗಾಗಿ ಇರುವ Preferences ಪೇಜ್ ಅನ್ನು  :

User account, Blogs ಮತ್ತು Badges ಎಂದು ವಿಂಗಡಿಸಲಾಗಿದೆ.

09:00 ನಾವು ಈಗಾಗಲೇ Edit Profile ಮತ್ತು Change Password ಆಯ್ಕೆಗಳನ್ನು ನೋಡಿದ್ದೇವೆ.
09:06 ಇಲ್ಲಿ ಇನ್ನೂ

Language,

Forum,

Editor,

Course,

Calendar,

Message,

Notification ಎನ್ನುವ ಪ್ರಿಫರೆನ್ಸ್ ಗಳನ್ನು ಹೊಂದಿದೆ.

09:19 ಈಗ Calendar preferences ಅನ್ನು ಕ್ಲಿಕ್ ಮಾಡೋಣ.
09:23 ನಾವು ಕ್ಯಾಲೆಂಡರ್ ಅನ್ನು 24- ಘಂಟೆ ಫಾರ್ಮ್ಯಾಟ್ ನಲ್ಲಿ ಸೆಟ್ ಮಾಡೋಣ.
09:29 Upcoming events look-ahead ಅನ್ನು 2 weeks ಗೆ ಸೆಟ್ ಮಾಡೋಣ.
09:35 ಅಂದರೆ ನಾವು ಕ್ಯಾಲೆಂಡರ್ ನಲ್ಲಿ ಎರಡು ವಾರಗಳಲ್ಲಿ ನಡೆಯುವ ಎಲ್ಲ ಘಟನೆಗಳಿಗೆ ನೋಟಿಫಿಕೇಷನ್ ಅನ್ನು ನೋಡಬಹುದು.
09:43 Save Changes ಬಟನ್ ಅನ್ನು ಕ್ಲಿಕ್ ಮಾಡಿ.
09:46 ನಾವು ಉಳಿದ ಪ್ರಿಫರೆನ್ಸ್ ಗಳ ಕುರಿತು ಈ ಸರಣಿಯಲ್ಲಿ ಉಳಿದ ವೈಶಿಷ್ಟ್ಯಗಳನ್ನು ಚರ್ಚಿಸುವಾಗ ನೋಡೋಣ.
09:54 ಇಲ್ಲಿರುವ ಮಾಹಿತಿಯನ್ನು ಗಮನಿಸಿ.
09:57 ಇದು ಬ್ರೆಡ್ ಕ್ರಂಬ್ ನ್ಯಾವಿಗೇಷನ್ ಆಗಿದೆ. ಇದೊಂದು ಮೂಡಲ್ ಸೈಟ್ ಗಳ ಹೈರಾರ್ಕಿ ಯಲ್ಲಿ ನಾವು ಯಾವ ಪೇಜ್ ನಲ್ಲಿದ್ದೇವೆ ಎಂದು ತೋರಿಸುವ ವಿಷ್ಯುಅಲ್ ಏಯ್ಡ್ ಆಗಿದೆ.
10:09 ಇದು ಒಂದೇ ಕ್ಲಿಕ್ ನಿಂದ ಹೆಚ್ಚಿನ ಹಂತದ ಪೇಜ್ ಗೆ ಹಿಂದಿರುಗಲು ಸಹಾಯ ಮಾಡುತ್ತದೆ.
10:15 ಡ್ಯಾಶ್ ಬೋರ್ಡ್ ಗೆ ಹಿಂದಿರುಗಲು, ಬ್ರೆಡ್-ಕ್ರಂಬ್ಸ್ ನಲ್ಲಿರುವ Dashboard ಲಿಂಕ್ ಅನ್ನು ಕ್ಲಿಕ್ ಮಾಡಿ.
10:21 ಈಗ ನಾವು Calculus ಕೋರ್ಸ್ ಗೆ ಟಾಪಿಕ್ ಮತ್ತು ಸಾರಾಂಶವನ್ನು ಸೇರಿಸುವುದು ಹೇಗೆ ಎಂದು ನೋಡೋಣ.
10:28 ಎಡದಲ್ಲಿರುವ ನ್ಯಾವಿಗೇಷನ್ ಮೆನ್ಯುವಿನಲ್ಲಿ Calculus ಕೋರ್ಸ್ ಅನ್ನು ಕ್ಲಿಕ್ ಮಾಡೋಣ.
10:34 ಹೊಸ ಪೇಜ್ ನಲ್ಲಿ ಮೇಲೆ ಬಲದಲ್ಲಿರುವ gear ಐಕಾನ್ ಅನ್ನು ಕ್ಲಿಕ್ ಮಾಡಿ.
10:40 ನಂತರ Turn editing on ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
10:45 ಈಗ ಪೇಜ್ ನಲ್ಲಿ ಹೆಚ್ಚಿನ ಎಡಿಟ್ ಆಯ್ಕೆಗಳು ಕಾಣಿಸುತ್ತವೆ.
10:50 Topic 1 ದ ಮುಂದೆ ಇರುವ pencil ಐಕಾನ್ ನ ಮೇಲೆ ಕ್ಲಿಕ್ ಮಾಡಿ.
10:55 ಈಗ ಬರುವ ಟೆಕ್ಸ್ಟ್ ಬಾಕ್ಸ್ ನಲ್ಲಿ : Basic Calculus ಎಂದು ಟೈಪ್ ಮಾಡಿ, Enter ಅನ್ನು ಒತ್ತಿ.
11:03 ಈಗ ಟಾಪಿಕ್ ನ ಹೆಸರಲ್ಲಾಗುವ ಬದಲಾವಣೆಯನ್ನು ಗಮನಿಸಿ.
11:06 ಈಗ ಆ ಟಾಪಿಕ್ ನ ಬಲಭಾಗದಲ್ಲಿರುವ Edit ಲಿಂಕ್ ನ ಮೇಲೆ ಕ್ಲಿಕ್ ಮಾಡಿ.
11:11 ನಂತರ Edit topic ಆಯ್ಕೆಯನ್ನು ಕ್ಲಿಕ್ ಮಾಡಿ.
11:15 ಇದು ನಮ್ಮನ್ನು Summary ಪೇಜ್ ಗೆ ಕರೆದೊಯ್ಯುತ್ತದೆ.
11:18 ಇಲ್ಲಿ, Summary ಫೀಲ್ಡ್ ನಲ್ಲಿ, ನಾವು ಟಾಪಿಕ್ ನ ಸಂಕ್ಷಿಪ್ತ ವಿವರಣೆಯನ್ನು ಕೊಡಬಹುದು. ನಾನು ಇಲ್ಲಿ ತೋರಿಸಿರುವಂತೆ ಟೈಪ್ ಮಾಡುವೆನು.
11:27 ಕೆಳಕ್ಕೆ ಸ್ಕ್ರೋಲ್ ಮಾಡಿ, Save Changes ಬಟನ್ ಅನ್ನು ಕ್ಲಿಕ್ ಮಾಡಿ.
11:32 ಬದಲಾವಣೆಯನ್ನು ಗಮನಿಸಿ.
11:34 ಹೀಗೆ ನಾವು ಮೂಡಲ್ ನಲ್ಲಿ ನಮ್ಮ ಕೋರ್ಸ್ ನ ವಿವರಗಳನ್ನು ಸೇರಿಸಲು ಪ್ರಾರಂಭಿಸುವೆವು.
11:40 ಈಗ ನಾವು Moodle ನಿಂದ ಲಾಗೌಟ್ ಆಗುವೆವು. ಹಾಗೆ ಮಾಡಲು , ಮೇಲೆ ಬಲದಲ್ಲಿರುವ user ಐಕಾನ್ ಅನ್ನು ಕ್ಲಿಕ್ ಮಾಡಿ, ಈಗ Log out ಆಯ್ಕೆಯನ್ನು ಕ್ಲಿಕ್ ಮಾಡಿ.
11:50 ಇದರೊಂದಿಗೆ ನಾವು ಈ ಟ್ಯುಟೋರಿಯಲ್ ನ ಕೊನೆಯನ್ನು ತಲುಪಿದ್ದೇವೆ. ಸಂಕ್ಷಿಪ್ತವಾಗಿ,
11:56 ಈ ಟ್ಯುಟೋರಿಯಲ್ ನಲ್ಲಿ ನಾವು,

Course overview ವಿವರಗಳು,

teachers’ dashboard ನ ಕುರಿತು,

12:05 Edit profile ಸೆಟ್ಟಿಂಗ್ ಗಳು,

Preferences ಸೆಟ್ಟಿಂಗ್ ಗಳು ಮತ್ತು

ಮೂಡಲ್ ನಲ್ಲಿ ನಮ್ಮ ಕೋರ್ಸ್ ಗೆ ಸಂಬಂಧಿಸಿದ ಕೆಲವು ಪ್ರಾಥಮಿಕ ವಿವರಗಳನ್ನು ಸೇರಿಸಲು ಕಲಿತಿದ್ದೇವೆ.

12:16 ಇಲ್ಲಿ ನಿಮಗಾಗಿ ಒಂದು ಅಸೈನ್ಮೆಂಟ್ ಇದೆ:

Calculus ಕೋರ್ಸ್ ನಲ್ಲಿ ಎಲ್ಲ ಟಾಪಿಕ್ ಗಳ ಹೆಸರನ್ನು ಬದಲಿಸಿ,

ಎಲ್ಲ ಟಾಪಿಕ್ ಗಳಿಗೂ ಅದರ ಸಾರಾಂಶವನ್ನು ಸೇರಿಸಿ,

ಹೆಚ್ಚಿನ ವಿವರಗಳಿಗೆ ಈ ಟ್ಯುಟೋರಿಯಲ್ ನ Assignment ಲಿಂಕ್ ಅನ್ನು ನೋಡಿ.

12:31 ಈ ಲಿಂಕ್ ನಲ್ಲಿರುವ ವೀಡಿಯೊ, 'ಸ್ಪೋಕನ್ ಟ್ಯುಟೋರಿಯಲ್' ಪ್ರೊಜೆಕ್ಟ್ ನ ಸಾರಾಂಶವಾಗಿದೆ. ದಯವಿಟ್ಟು ಇದನ್ನು ಡೌನ್ಲೋಡ್ ಮಾಡಿ ವೀಕ್ಷಿಸಿ.
12:39 'ಸ್ಪೋಕನ್ ಟ್ಯುಟೋರಿಯಲ್' ಪ್ರೊಜೆಕ್ಟ್ ತಂಡವು, ಕಾರ್ಯಶಾಲೆಗಳನ್ನು ನಡೆಸುತ್ತದೆ ಮತ್ತು ಪ್ರಮಾಣಪತ್ರಗಳನ್ನು ಕೊಡುತ್ತದೆ. ಹೆಚ್ಚಿನ ವಿವರಗಳಿಗಾಗಿ ದಯವಿಟ್ಟು ನಮಗೆ ಬರೆಯಿರಿ.
12:49 ಈ ಫೋರಂ ನಲ್ಲಿ, ನಿಮ್ಮ ಪ್ರಶ್ನೆಯನ್ನು ಸಮಯದೊಂದಿಗೆ ಪೋಸ್ಟ್ ಮಾಡಿ.
12:53 'ಸ್ಪೋಕನ್ ಟ್ಯುಟೋರಿಯಲ್' ಪ್ರೊಜೆಕ್ಟ್, NMEICT, MHRD, ಭಾರತ ಸರ್ಕಾರದಿಂದ ಅನುದಾನವನ್ನು ಪಡೆದಿದೆ. ಈ ಮಿಷನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಕೆಳಗೆ ತೋರಿಸಿರುವ ಲಿಂಕ್ ನಲ್ಲಿ ಲಭ್ಯವಿದೆ.
13:06 ಸ್ಕ್ರಿಪ್ಟ್ ನ ಅನುವಾದಕಿ, ಮೈಸೂರಿನಿಂದ ಅಂಜನಾ ಅನಂತ್ ನಾಗ್ ಮತ್ತು ಧ್ವನಿ ಶ್ರೀ ನವೀನ್ ಭಟ್, ಉಪ್ಪಿನಪಟ್ಟಣ.
13:17 ಧನ್ಯವಾದಗಳು.

Contributors and Content Editors

Anjana310312, Sandhya.np14