LaTeX-Old-Version/C2/LaTeX-on-Windows-using-TeXworks/Kannada
From Script | Spoken-Tutorial
Revision as of 15:01, 16 October 2019 by Nancyvarkey (Talk | contribs)
Title of script: LaTeX on Windows using TeXworks
Author: Rupak Rokade
Keywords: video tutorial, LaTeX, TeXworks, windows, MikTeX,
Time | Narration |
00:01 | “LaTeX on Windows using TeXworks” ಎಂಬ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ. |
00:06 | ಈ ಟ್ಯುಟೋರಿಯಲ್ ನಲ್ಲಿ ನಾವು: MikTeX ಅನ್ನು ಡೌನ್ಲೋಡ್ ಮತ್ತು ಇನ್ಸ್ಟಾಲ್ ಮಾಡಲು, |
00:12 | TeXworks ಅನ್ನು ಬಳಸಿ, ಸಾಮಾನ್ಯ LaTeX ಡಾಕ್ಯುಮೆಂಟನ್ನು ಬರೆಯಲು, |
00:15 | ಕಳೆದುಹೋದ ಪ್ಯಾಕೇಜ್ ಗಳನ್ನು ಡೌನ್ಲೋಡ್ ಮಾಡಲಿಕ್ಕಾಗಿ MikTeXಅನ್ನು ಕಾನ್ಫಿಗರ್ ಮಾಡಲು ಕಲಿಯಲಿದ್ದೇವೆ. |
00:19 | ನಾನು ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು, ವಿಂಡೋಸ್ 7 ಆಪರೇಟಿಂಗ್ ಸಿಸ್ಟಂ ಮತ್ತು ಮಿಕ್ಟೆಕ್ 2.9 ಇವುಗಳನ್ನು ಉಪಯೋಗಿಸುತ್ತಿದ್ದೇನೆ. |
00:27 | ನಾವೀಗ TeXworksನ ಮುಖ್ಯ ಲಕ್ಷಣಗಳನ್ನು ನೋಡೋಣ. |
00:31 | ಇದು ಒಂದು ಸ್ವತಂತ್ರವಾದ ಪ್ಲ್ಯಾಟ್ಫಾರ್ಮ್ (platform) ಆಗಿದೆ . |
00:34 | ಇದು, ಒಂದು ‘ಎಂಬೆಡೆಡ್ ಪಿ.ಡಿ.ಎಫ್ ರೀಡರ್’ ಅನ್ನು ಹೊಂದಿದೆ. |
00:36 | ಇದು ಭಾರತೀಯ ಭಾಷೆಗಳ ಟೈಪ್-ಸೆಟಿಂಗ್ ಗೆ ಸಹಾಯ ಮಾಡುತ್ತದೆ. |
00:40 | ಟೆಕ್ವರ್ಕ್ (TeXworks) ಅನ್ನು ಆರಂಭಿಸುವ ಮೊದಲು, ನಾವು ಮಿಕ್ಟೆಕ್ (MikTeX) ಅನ್ನು ಇನ್ಸ್ಟಾಲ್ ಮಾಡಬೇಕು. |
00:45 | ಮಿಕ್ಟೆಕ್, ವಿಂಡೋಸ್ ಗಾಗಿ, ಟೆಕ್ ಅಥವಾ ಲೇಟೆಕ್ ಮತ್ತು ಸಂಬಂಧಿಸಿದ ಪ್ರೋಗ್ರಾಂ ಗಳ ಅಪ್-ಟು-ಡೇಟ್ ಬೆಳವಣಿಗೆ ಆಗಿದೆ. |
00:52 | ಇದು ವಿಂಡೋಸ್ ನಲ್ಲಿ, ಲೇಟೆಕ್ ನಲ್ಲಿ ಸಾಮಾನ್ಯ ಡಾಕ್ಯುಮೆಂಟ್ ಗಳನ್ನು ರಚಿಸಲು ಅವಶ್ಯಕವಾದ ಪಾಕೇಜ್ ಗಳನ್ನು ಹೊಂದಿದೆ. ಅಲ್ಲದೆ, ಟೆಕ್ವರ್ಕ್ಸ್, ಮಿಕ್ಟೆಕ್ ಇನ್ಟಾಲೇಶನ್ ಜೊತೆಗೆ ಸಿಗುವ ಒಂದು ಡೀಫಾಲ್ಟ್ ಎಡಿಟರ್ ಆಗಿದೆ. |
01:04 | ಈ ವೆಬ್ಸೈಟ್ ಗೆ ಹೋಗಿ: |
01:10 | ಸೂಚಿಸಿರುವ ಮಿಕ್ಟೆಕ್ ಇನ್ಸ್ಟಾಲರ್ ಗಾಗಿ ಡೌನ್ಲೋಡ್ ಲಿಂಕ್ ಮೇಲೆ ಕ್ಲಿಕ್ ಮಾಡಿ. ಇದು ಮಿಕ್ಟೆಕ್ ಇನ್ಸ್ಟಾಲರ್ ಅನ್ನು ಡೌನ್ಲೋಡ್ ಮಾಡುತ್ತದೆ. |
01:19 | ಅದನ್ನು ಡೌನ್ಲೋಡ್ ಮಾಡಿ ನಿಮ್ಮ Desktop ನಲ್ಲಿ ಸೇವ್ ಮಾಡಿ. |
01:22 | ಇದು 154 ಮೆಗಾ ಬೈಟ್ಸ್ ಇರುವ ದೊಡ್ಡ ಫೈಲ್ ಆಗಿದೆ. ಆದ್ದರಿಂದ ಇದು ಡೌನ್ಲೋಡ್ ಆಗಲು ಸ್ವಲ್ಪ ಸಮಯ ಬೇಕು. |
01:28 | ನಾನು ಈಗಾಗಲೇ ಈ ಫೈಲ್ ಅನ್ನು ಡೌನ್ಲೋಡ್ ಮಾಡಿದ್ದೇನೆ. ಅದು ಇಲ್ಲಿದೆ. |
01:32 | ಇನ್ಸ್ಟಾಲೇಶನ್ ಶುರು ಮಾಡಲು ಈ ಫೈಲ್ ಮೇಲೆ ಡಬಲ್ ಕ್ಲಿಕ್ ಮಾಡಿ. |
01:36 | ಚೆಕ್-ಬಾಕ್ಸ್ ಅನ್ನು ಚೆಕ್ ಮಾಡಿ ಮತ್ತು Next ಮೇಲೆ ಕ್ಲಿಕ್ ಮಾಡಿ. |
01:40 | ಎಲ್ಲಾ ಡೀಫಾಲ್ಟ್ ಆಯ್ಕೆಗಳನ್ನು ಆರಿಸಿಕೊಳ್ಳಿ. |
01:44 | ಇನ್ಸ್ಟಾಲೇಶನ್ ಆಗಲು 5 ರಿಂದ 10 ನಿಮಿಷಗಳು ಬೇಕಾಗುವುದು. |
01:47 | ನಾನು ಈಗಾಗಲೇ ಮಿಕ್ಟೆಕ್ ಅನ್ನು ನನ್ನ ಕಂಪ್ಯೂಟರ್ ನಲ್ಲಿ ಇನ್ಸ್ಟಾಲ್ ಮಾಡಿದ್ದೇನೆ. ಆದ್ದರಿಂದ ನಾನು ಮತ್ತೊಮ್ಮೆ ಇನ್ಸ್ಟಾಲೇಶನ್ ಮಾಡುವುದಿಲ್ಲ. |
01:55 | ನಿಮ್ಮ ಕಂಪ್ಯೂಟರ್ ನಲ್ಲಿ 'ಮಿಕ್ಟೆಕ್ ' ಅನ್ನು ಪೂರ್ಣವಾಗಿ ಇನ್ಸ್ಟಾಲ್ ಮಾಡಿದ ನಂತರ, |
01:58 | ಮಿಕ್ಟೆಕ್ ಜೊತೆಗೆ ಬರುವ ಟೆಕ್ವರ್ಕ್ಸ್ ಎಡಿಟರ್ ಅನ್ನು ಹೇಗೆ ಬಳಸುವುದು ಎಂದು ನೋಡೋಣ. |
2:04 | Windows Start ಬಟನ್ ನ ಮೇಲೆ ಕ್ಲಿಕ್ ಮಾಡಿ. |
02:07 | All Programs ಅನ್ನು ಆರಿಸಿ. |
02:10 | MikTeX 2.9 ಮೇಲೆ ಕ್ಲಿಕ್ ಮಾಡಿ. |
02:12 | ನಂತರ TeXworks (ಟೆಕ್ವರ್ಕ್ಸ್) ಮೇಲೆ ಕ್ಲಿಕ್ ಮಾಡಿ. |
02:15 | TeXworks ಎಡಿಟರ್ (ಟೆಕ್ವರ್ಕ್ಸ್) ತೆರೆದುಕೊಳ್ಳುತ್ತದೆ. |
02:18 | ನಾನು ಈಗಾಗಲೇ ಇರುವ ಲೇಟೆಕ್ ಡಾಕ್ಯುಮೆಂಟ್ ಅನ್ನು ತೆರೆಯುತ್ತೇನೆ. |
02:22 | ನಾನು ಕ್ರಮವಾಗಿ File >> Open ಗಳ ಮೇಲೆ ಕ್ಲಿಕ್ ಮಾಡಿ ಡೈರೆಕ್ಟರಿ ಯನ್ನು ಆಯ್ಕೆ ಮಾಡುತ್ತೇನೆ. ನಂತರ hello.tex ಫೈಲ್ ಅನ್ನು ತೆರೆಯುತ್ತೇನೆ. |
02:33 | ಈ ಫೈಲ್ ನಲ್ಲಿ ಬರೆದಿರುವ ಟೆಕ್ಸ್ಟ್, ಬಣ್ಣದಲ್ಲಿ ಇರುವುದನ್ನು ನೀವು ನೋಡಬಹುದು. |
02:38 | ಇದನ್ನು syntax highlighting ಎಂದು ಕರೆಯುತ್ತಾರೆ. ಇದು ಯೂಸರ್ ಕಂಟೆಂಟ್ ಮತ್ತು ಲೇಟೆಕ್ ಸಿಂಟ್ಯಾಕ್ಸ್ ಗಳನ್ನು ಪ್ರತ್ಯೇಕಿಸಲು ಯೂಸರ್ ಗೆ ಸಹಾಯ ಮಾಡುತ್ತದೆ. |
02:47 | ಒಂದುವೇಳೆ, ಲೇಟೆಕ್ ಸಿಂಟೆಕ್ಸ್ ಹೈಲೈಟ್ ಆಗಿಲ್ಲದಿದ್ದರೆ, ಈ ಕೆಳಗಿನವುಗಳನ್ನು ಮಾಡಿ. |
02:52 | ಟೆಕ್ವರ್ಕ್ ವಿಂಡೋವಿನಲ್ಲಿ, ಮೆನು ಬಾರ್ ನಲ್ಲಿರುವ Format ಎಂಬ ಬಟನ್ ನ ಮೇಲೆ ಕ್ಲಿಕ್ ಮಾಡಿ. |
02:59 | Syntax Colouring ಅನ್ನು ಆಯ್ಕೆ ಮಾಡಿ ಮತ್ತು LaTeX (ಲೇಟೆಕ್) ಮೇಲೆ ಕ್ಲಿಕ್ ಮಾಡಿ. |
03:03 | ಪ್ರತಿ ಬಾರಿ ಲೇಟೆಕ್ ಡಾಕ್ಯುಮೆಂಟ್ ಅನ್ನು ರಚಿಸಿದಾಗ, ಟೆಕ್ವರ್ಕ್ಸ್, ಸಿಂಟೆಕ್ಸ್ ಹೈಲೈಟಿಂಗ್ ಅನ್ನು ಅನ್ವಯ ಮಾಡುವುದು ನಿಮಗೆ ಬೇಕಾಗಿದ್ದರೆ, ಆಗ ಕೆಳಗಿನಂತೆ ಮಾಡಿ. |
03:11 | ಮೆನು ಬಾರ್ ನ ಮೇಲಿರುವ Edit ಮೇಲೆ ಕ್ಲಿಕ್ ಮಾಡಿ. ನಂತರ Preferences ಮೇಲೆ ಕ್ಲಿಕ್ ಮಾಡಿ. |
03:16 | Editor ಟ್ಯಾಬ್ ನಲ್ಲಿ, ಡ್ರಾಪ್ ಡೌನ್ ಬಟನ್ ಮೇಲೆ ಕ್ಲಿಕ್ ಮಾಡಿ. ಅದು Syntax Colouring ಗೆ ಆಯ್ಕೆಗಳನ್ನು ನೀಡುತ್ತದೆ. |
03:22 | LaTeX (ಲೇಟೆಕ್) ಅನ್ನು ಆಯ್ಕೆ ಮಾಡಿ, ನಂತರ Ok ಮೇಲೆ ಕ್ಲಿಕ್ ಮಾಡಿ. |
03:27 | ಈ ರೀತಿಯಲ್ಲಿ, syntax highlighting ಅನ್ನು ಮುಂದೆ ಕ್ರಿಯೇಟ್ ಮಾಡುವ ಎಲ್ಲಾ ಡಾಕ್ಯುಮೆಂಟ್ ಗಳಿಗೆ ಅನ್ವಯಿಸಲಾಗುವುದು. |
03:33 | ಈಗ ನಾವು ನಮ್ಮ ಲೇಟೆಕ್ ಡಾಕ್ಯುಮೆಂಟನ್ನು ಕಂಪೈಲ್ ಮಾಡಲು ಸಿದ್ಧರಾಗಿದ್ದೇವೆ. |
03:37 | ಕಂಪೈಲ್ ಮಾಡುವುದನ್ನು ಶುರು ಮಾಡಲು Ctrl ಮತ್ತು t ಕೀ ಗಳನ್ನು ಒಟ್ಟಿಗೆ ಒತ್ತಿ. |
03:43 | ಒಂದು ಬಾರಿ ಡಾಕ್ಯುಮೆಂಟ್, ತಪ್ಪುಗಳು ಇರದಂತೆ ಕಂಪೈಲ್ ಆದಮೇಲೆ, ತಯಾರಾದ pdf ತೆರೆದುಕೊಳ್ಳುವುದು. |
03:49 | ಗಮನಿಸಿ, ಈ pdf ರೀಡರ್, ಟೆಕ್ವರ್ಕ್ಸ್ ನ ಜೊತೆಯಲ್ಲೇ ಬರುತ್ತದೆ. |
03:53 | ಇದು , ಕಂಪೈಲ್ ಮಾಡಲಾದ ‘pdf’ ಡಾಕ್ಯುಮೆಂಟ್ ಗಳನ್ನು ತೋರಿಸಲು, ಟೆಕ್ವರ್ಕ್ಸ್ ನಿಂದ ಬಳಸಲಾಗುವ ಡೀಫಾಲ್ಟ್ ‘pdf’ ರೀಡರ್ ಆಗಿದೆ. |
04:00 | ನಾವು LATEX ನ ಇನ್ಸ್ಟಾಲ್ಲೆಶನ್ ಅನ್ನು ಮುಗಿಸಿದ್ದೇವೆ. |
04:04 | ಫಾರ್ಮ್ಯಾಟ್ ಮಾಡಲು ಬೇಕಾದ ಅವಶ್ಯಕತೆಗಳಿಗೆ ಇಷ್ಟು ಸಾಕಾಗುತ್ತದೆ. |
04:07 | ಈಗ ನೀವು ಈ ಟ್ಯುಟೋರಿಯಲ್ ಅನ್ನು ಬಿಡಬಹುದು. ಪ್ಲೇ ಲಿಸ್ಟ್ ನಲ್ಲಿಯ ಉಳಿದ LATEX ಟ್ಯುಟೋರಿಯಲ್ ಗಳನ್ನು ಅಭ್ಯಾಸಮಾಡಿ. |
04:14 | ಬೇರೆ ಟ್ಯುಟೋರಿಯಲ್ ಗಳನ್ನು ಅಭ್ಯಾಸಮಾಡುವಾಗ, ನಿಮಗೆ ಈ ಕೆಳಗಿನ ಎರರ್ ಮೆಸೇಜ್ ಸಿಗಬಹುದು: “The required file ABC is missing. |
04:21 | It is a part of the following package: XYZ”. |
04:25 | ಇಲ್ಲಿ ABC, XYZ ಪ್ಯಾಕೇಜ್ ನಲ್ಲಿಯ ಒಂದು ಫೈಲ್ ಆಗಿದೆ. |
04:29 | ABC ಮತ್ತು XYZ, ನಿಮ್ಮ ಸಂದರ್ಭಕ್ಕೆ ತಕ್ಕಂತೆ ನಿರ್ದಿಷ್ಟವಾಗಿರುತ್ತವೆ. |
04:33 | ನಿಮಗೆ ಈ ರೀತಿಯ ಎರರ್ ಮೆಸೇಜ್ ಸಿಕ್ಕಾಗ, ಈ ಟ್ಯುಟೋರಿಯಲ್ ನ ಉಳಿದ ಭಾಗವನ್ನು ಕೇಳಿ. |
04:38 | ಆ ಸಮಸ್ಯೆಯನ್ನು ಬಗೆಹರಿಸಲು, ಎರಡು ವಿಧಾನಗಳನ್ನು ಈ ಟ್ಯುಟೋರಿಯಲ್ ನ ಉಳಿದ ಭಾಗದಲ್ಲಿ ವಿವರಿಸಲಾಗಿದೆ. ಅವುಗಳಲ್ಲಿ ಒಂದಾದರೂ ನಿಮಗೆ ಉಪಯೋಗವಾಗುತ್ತದೆ. |
04:46 | ಸಧ್ಯಕ್ಕೆ ವಿದಾಯ ಹೇಳೋಣ. |
04:48 | ಈ ಕೆಳಗಿನಂತಹ ಒಂದು ಸಮಸ್ಯೆಗೆ ಹೇಗೆ ಉತ್ತರ ಕಂಡುಹಿಡಿಯುವುದೆಂದು ನಿಮಗೆ ತಿಳಿಯಬೇಕಾಗಿದೆಯೇ: ಈ ಟ್ಯುಟೋರಿಯಲ್ ನ ಉಳಿದ ಭಾಗವನ್ನು ಕೇಳಿ ಮತ್ತು ನನ್ನ ಜೊತೆಗೆ ಅಭ್ಯಾಸಮಾಡಿ. |
04:56 | ಈಗ ನಾವು ಒಂದು Beamer (ಬೀಮರ್) ಡಾಕ್ಯುಮೆಂಟ್ ಅನ್ನು ಕಂಪೈಲ್ ಮಾಡೋಣ. |
04:59 | ನಾವು ಇನ್ಸ್ಟಾಲ್ ಮಾಡಿರುವ ಮಿಕ್ಟೆಕ್ ಸೆಟ್-ಅಪ್ ನಲ್ಲಿ, ಡೀಫಾಲ್ಟ್ ಆಗಿ, ಬೀಮರ್ ಪ್ಯಾಕೇಜ್ ಸೇರಿಕೊಂಡಿಲ್ಲ. |
05:05 | ಇದರ ಅರ್ಥ- ನಾವು ಇದನ್ನು ಯಾವುದಾದರೂ ಮೂಲದಿಂದ ಡೌನ್ಲೋಡ್ ಮಾಡಿ, ಅದನ್ನು, ನಮ್ಮ ಈಗಿನ ಮಿಕ್ಟೆಕ್ನ (MikTeX) ಡಿಸ್ಟ್ರೀಬ್ಯೂಶನ್ ಗೆ ಸೇರಿಸಬೇಕು. |
05:12 | ಕಳೆದುಹೋಗಿರುವ ಪ್ಯಾಕೇಜನ್ನು ಇನ್ಸ್ಟಾಲ್ ಮಾಡಲು ಎರಡು ಮಾರ್ಗಗಳಿವೆ. |
05:16 | ನಾವು ಲೇಟೆಕ್ ಡಾಕ್ಯುಮೆಂಟನ್ನು ಕಂಪೈಲ್ ಮಾಡುವಾಗಲೇ ಇದನ್ನುಇನ್ಸ್ಟಾಲ್ ಮಾಡುವುದು ಒಂದು ವಿಧವಾಗಿದೆ. |
05:21 | ಈ ಲೇಟೆಕ್ ಡಾಕ್ಯುಮೆಂಟ್ ಗೆ, ಸಾಮಾನ್ಯವಾಗಿ ನಿಮ್ಮ ಮಿಕ್ಟೆಕ್ ಡಿಸ್ಟ್ರೀಬ್ಯೂಶನ್ ನಲ್ಲಿ ಲಭ್ಯವಿಲ್ಲದ ಒಂದು ಪ್ಯಾಕೇಜ್ ಬೇಕಾಗುತ್ತದೆ. |
05:28 | ಇನ್ನೊಂದು ಮಾರ್ಗವೆಂದರೆ, ಸ್ವತಃ ಮಿಕ್ಟೆಕ್ ನ ಪ್ಯಾಕೆಜ್ ಮ್ಯಾನೇಜರನ್ನು ಬಳಸಿಕೊಂಡು ಒಂದು ಪ್ಯಾಕೇಜನ್ನು ಆಯ್ಕೆಮಾಡಿ ಇನ್ಸ್ಟಾಲ್ ಮಾಡುವುದು. |
05:35 | ನಾವು ಮೊದಲನೆಯ ವಿಧಾನವನ್ನು ನೋಡೋಣ. |
05:37 | ನಾವು ಒಂದು ಲೇಟೆಕ್ ಡಾಕ್ಯುಮೆಂಟನ್ನು ತೆರೆದು ಅದನ್ನು ಕಂಪೈಲ್ ಮಾಡುತ್ತೇವೆ. ಇದಕ್ಕಾಗಿ, ಇಂಟರ್ನೆಟ್ ನಿಂದ ಪ್ಯಾಕೇಜ್ ಗಳನ್ನು ಇನ್ಸ್ಟಾಲ್ ಮಾಡಲು, ಮಿಕ್ಟೆಕ್ ನ ಅಗತ್ಯವಿದೆ. |
05:44 | ಮೊದಲು, TeXworks (ಟೆಕ್ವರ್ಕ್ಸ್) ಎಡಿಟರ್ ಅನ್ನು ಕ್ಲೋಸ್ ಮಾಡಿ. |
05:48 | ನಾವು tex ಫೈಲನ್ನು, ಅಡ್ಮಿನಿಸ್ಟ್ರೇಟರ್ (administrator) ನ ಹಕ್ಕುಗಳೊಂದಿಗೆ ತೆರೆಯುವುದು ಅವಶ್ಯಕವಾಗಿದೆ. |
05:53 | ಕ್ರಮವಾಗಿ start >> All programs >> MikTeX 2.9 (ಮಿಕ್ಟೆಕ್) ಗಳ ಮೇಲೆ ಕ್ಲಿಕ್ ಮಾಡಿ. |
06:02 | TeXworks (ಟೆಕ್ವರ್ಕ್ಸ್) ನ ಮೇಲೆ ರೈಟ್-ಕ್ಲಿಕ್ ಮಾಡಿ , ಮತ್ತು Run as Administrator ಅನ್ನು ಆಯ್ಕೆ ಮಾಡಿ. |
06:08 | ಇದು, 'ಅಡ್ಮಿನಿಸ್ಟ್ರೇಟರ್' ನ ವಿಶೇಷ ಹಕ್ಕುಗಳೊಂದಿಗೆ, 'ಟೆಕ್ವರ್ಕ್ಸ್ ಎಡಿಟರ್’ ಅನ್ನು ಆರಂಭಿಸುತ್ತದೆ. |
06:13 | ಈಗ, ಕ್ರಮವಾಗಿ File >> Open ಗಳ ಮೇಲೆ ಕ್ಲಿಕ್ ಮಾಡಿ ಮತ್ತು beamer.tex ಫೈಲ್ ಅನ್ನು ಆಯ್ಕೆ ಮಾಡಿ. |
06:21 | ಕಂಪೈಲೇಶನ್ ಅನ್ನು ಶುರು ಮಾಡಲು Ctrl ಮತ್ತು t ಕೀ ಗಳನ್ನು ಒಟ್ಟಿಗೆ ಒತ್ತಿ. |
06:26 | Package Installation ಎಂಬ ಡೈಲಾಗ್-ಬಾಕ್ಸ್ ತೆರೆದುಕೊಳ್ಳುತ್ತದೆ. |
06:30 | ಇದು ಕಳೆದು ಹೋಗಿರುವ beamer.cls ಪ್ಯಾಕೇಜನ್ನು ಇನ್ಸ್ಟಾಲ್ ಮಾಡಲು ಕೇಳುತ್ತದೆ. |
06:35 | ಈ ಡೈಲಾಗ್ ಬಾಕ್ಸ್ ನಲ್ಲಿರುವ Change ಬಟನ್ ನ ಮೇಲೆ ಕ್ಲಿಕ್ ಮಾಡಿ. |
06:40 | Change Package Repository ಎಂಬ ಡೈಲಾಗ್-ಬಾಕ್ಸ್ ತೆರೆದುಕೊಳ್ಳುತ್ತದೆ. |
06:44 | Packages shall be installed from the internet ಎಂಬ ಆಯ್ಕೆಯನ್ನು ಆರಿಸಿಕೊಳ್ಳಿ. |
06:49 | Connection Settings ನ ಮೇಲೆ ಕ್ಲಿಕ್ ಮಾಡಿ. |
06:52 | ಇದು, ನಿಮಗೆ ‘ಪ್ರಾಕ್ಸಿ ಸೆಟಿಂಗ್ಸ್’ ಗಳನ್ನು ಕಾನ್ಫಿಗರ್ ಮಾಡಲು ಸೂಚಿಸುತ್ತದೆ. |
06:56 | ಒಂದು ವೇಳೆ ನೀವು ಪ್ರಾಕ್ಸಿ ನೆಟ್ವರ್ಕ್ ನಲ್ಲಿ ಇಲ್ಲದಿದ್ದರೆ, Use proxy server ಎಂಬ ಚೆಕ್-ಬಾಕ್ಸ್ ಅನ್ನು ಕ್ಲಿಕ್ ಮಾಡಬೇಡಿ. |
07:03 | ನಾನು ಪ್ರಾಕ್ಸಿ ನೆಟ್ವರ್ಕ್ ನಲ್ಲಿ ಇರುವುದರಿಂದ , ಚೆಕ್-ಬಾಕ್ಸ್ ಅನ್ನು ಕ್ಲಿಕ್ ಮಾಡಿ ಈ ಆಯ್ಕೆಯನ್ನು ಸಕ್ರಿಯಗೊಳಿಸುತ್ತೇನೆ. |
07:09 | ನಾನು proxy ಅಡ್ರೆಸ್ ಅನ್ನು ಬರೆಯುವೆನು. |
07:13 | ಮತ್ತು proxy port number ಅನ್ನು ನಮೂದಿಸುವೆನು. |
07:16 | ನಾನು Authentication required ಎಂಬ ಆಯ್ಕೆಯ ಚೆಕ್-ಬಾಕ್ಸ್ ನ ಮೇಲೆ ಕ್ಲಿಕ್ ಮಾಡಿ, ಅದನ್ನು ಸಕ್ರಿಯಗೊಳಿಸುವೆನು. |
07:23 | Ok ಮೇಲೆ, ನಂತರ Next ನ ಮೇಲೆ ಕ್ಲಿಕ್ ಮಾಡಿ. |
07:27 | ಇದು ನನಗೆ proxy username ಮತ್ತು ಪಾಸ್ವರ್ಡ್ ಅನ್ನು ಕೇಳುವುದು. |
07:31 | ನಾನು ಮಾಹಿತಿಯನ್ನು ನಮೂದಿಸಿ OK ಮೇಲೆ ಕ್ಲಿಕ್ ಮಾಡುವೆನು. |
07:36 | ಇದು ವಿವಿಧ ‘ರಿಮೋಟ್ ಪ್ಯಾಕೇಜ್ ರಿಪಾಸಿಟರೀಸ್’ ಗಳ ಲಿಸ್ಟ್ ಅನ್ನು ತೋರಿಸುತ್ತದೆ. |
07:41 | ಪಟ್ಟಿಯಿಂದ ಒಂದನ್ನು ಆಯ್ಕೆ ಮಾಡಿ ಮತ್ತು Finish ನ ಮೇಲೆ ಕ್ಲಿಕ್ ಮಾಡಿ. |
07:45 | Install ನ ಮೇಲೆ ಕ್ಲಿಕ್ ಮಾಡಿ. |
07:48 | ಇದು beamer.cls ಪ್ಯಾಕೇಜ್ ಅನ್ನು ಇನ್ಸ್ಟಾಲ್ ಮಾಡುವುದು. |
07:52 | ಮತ್ತೊಮ್ಮೆ Package Installation ಡಯಲಾಗ್-ಬಾಕ್ಸ್ ತೆರೆದುಕೊಳ್ಳುವುದು. |
07:57 | ಇದು, ಇಲ್ಲಿ ಇರದ pgfcore.sty ಎಂಬ (ಪಿ ಜಿ ಎಫ್ ಕೋರ್ ಡಾಟ್ ಎಸ್ ಟಿ ವಯ್) ಪ್ಯಾಕೇಜ್ ಅನ್ನು ಇನ್ಸ್ಟಾಲ್ ಮಾಡಲು ಸೂಚಿಸುವುದು. |
08:03 | ನೀವು Always show this dialog before installing packages ಎಂಬ ಆಯ್ಕೆಯನ್ನು ಅನ್-ಚೆಕ್ ಮಾಡಬಹುದು. |
08:09 | ನೀವು ಹೀಗೆ ಮಾಡಿದರೆ, ಮಿಕ್ಟೆಕ್, ಕಳೆದುಹೋದ ಪ್ಯಾಕೇಜ್ ಎದುರಾದಾಗ, ಮತ್ತೆ ನಿಮಗೆ ಸೂಚಿಸುವುದಿಲ್ಲ. |
08:16 | Install ನ ಮೇಲೆ ಕ್ಲಿಕ್ ಮಾಡಿ. |
08:18 | ಈಗ, ಕಾಣದಿರುವ ಪ್ಯಾಕೇಜ್ ಗಳು ಇನ್ನೂ ಹಲವು ಇದ್ದರೆ, ಅದು ನಿಮ್ಮ ಅನುಮತಿಯನ್ನು ಕೇಳದೆ, ತನ್ನಷ್ಟಕ್ಕೆ ತಾನೆ ಇನ್ಸ್ಟಾಲ್ ಮಾಡುತ್ತದೆ. |
08:28 | ಒಮ್ಮೆ ಇನ್ಸ್ಟಾಲೇಶನ್ ಪೂರ್ತಿಗೊಂಡರೆ, ಅದು ಕಂಪೈಲೇಶನ್ ಅನ್ನು ಮುಗಿಸುತ್ತದೆ ಮತ್ತು pdf ಔಟ್ಪುಟ್ ಅನ್ನು ಓಪನ್ ಮಾಡುತ್ತದೆ. |
08:35 | ಒಂದು Beamer ಡಾಕ್ಯುಮೆಂಟ್ ಅನ್ನು, ನಾವು ಯಶಸ್ವಿಯಾಗಿ ಕಂಪೈಲ್ ಮಾಡಿರುವುದನ್ನು ನೋಡಬಹುದು. |
08:39 | ಈಗ, ನಾವು ‘ಮಿಸ್ಸಿಂಗ್ ಪ್ಯಾಕೇಜ್’ ಗಳನ್ನು ಇನ್ಸ್ಟಾಲ್ ಮಾಡುವ ಎರಡನೇ ವಿಧಾನವನ್ನು ನೋಡೋಣ. |
08:44 | Windows Start ಬಟನ್ ನ ಮೇಲೆ ಕ್ಲಿಕ್ ಮಾಡಿ. |
08:47 | All Programs ನ ಮೇಲೆ ಕ್ಲಿಕ್ ಮಾಡಿ. |
08:49 | MikTeX2.9 ನ ಮೇಲೆ ಕ್ಲಿಕ್ ಮಾಡಿ. |
08:52 | Maintenance (Admin) ನ ಮೇಲೆ ಕ್ಲಿಕ್ ಮಾಡಿ. |
08:55 | Package Manager (Admin) ನ ಮೇಲೆ ಕ್ಲಿಕ್ ಮಾಡಿ. |
09:00 | ಇದು, ಲಭ್ಯವಿರುವ ವಿವಿಧ ಪ್ಯಾಕೇಜ್ ಗಳ ಒಂದು ಪಟ್ಟಿಯನ್ನು ತೋರಿಸುವುದು. |
09:04 | ಈಗ ನಾವು ಪಟ್ಟಿಯನ್ನು ನೋಡೋಣ. |
09:07 | ಈ ಪಟ್ಟಿಯಲ್ಲಿ ಆರು ವಿಭಾಗಗಳಿವೆ. |
09:10 | ಅವುಗಳು ಹೀಗಿವೆ: Name, Category, Size, Packaged date, Installed on date ಮತ್ತು Title. |
09:18 | Installed on ಎಂಬ ಕಾಲಂ, ನಮಗೆ ತುಂಬಾ ಮುಖ್ಯವಾಗಿದೆ. |
09:22 | ಯಾವ ಪ್ಯಾಕೇಜ್ ಗಳಿಗಾಗಿ ಈ ವಿಭಾಗವು ಖಾಲಿ ಇದೆಯೋ, ಆ ಪ್ಯಾಕೇಜ್ ಗಳು ಇನ್ಸ್ಟಾಲ್ ಆಗಿಲ್ಲ ಎಂದು ಇದು ತೋರಿಸುತ್ತದೆ. |
09:29 | ಒಂದು ನಿರ್ದಿಷ್ಟ ಪ್ಯಾಕೇಜ್ ಅನ್ನು, ಹೇಗೆ ಇನ್ಸ್ಟಾಲ್ ಮಾಡುವುದೆಂದು ನಾವು ನೋಡೋಣ. |
09:33 | ಉದಾಹರಣೆಗಾಗಿ, ನಾನು abc ಪ್ಯಾಕೇಜ್ ಅನ್ನು ಆಯ್ಕೆ ಮಾಡುತ್ತೇನೆ. |
09:38 | ಗಮನಿಸಿ: ಪ್ಯಾಕೇಜ್ ಅನ್ನು ನಾನು ಆಯ್ಕೆ ಮಾಡಿದ ತಕ್ಷಣ, ಮೇಲ್ತುದಿಯ ಎಡಭಾಗದಲ್ಲಿ ಇರುವ plus ಬಟನ್ ಸಕ್ರಿಯವಾಗುತ್ತದೆ. |
09:45 | plus ಬಟನ್, install ಬಟನ್ ಆಗಿದೆ. plus ಬಟನ್ ನ ಮೇಲೆ ಕ್ಲಿಕ್ ಮಾಡಿ. |
09:50 | ಇನ್ಸ್ಟಾಲ್ ಅಥವಾ ಅನ್-ಇನ್ಸ್ಟಾಲ್ ಮಾಡಲು, ನೀವು ಆಯ್ಕೆ ಮಾಡಿರುವ ಪ್ಯಾಕೇಜ್ ಗಳ ಸಂಖ್ಯೆಯನ್ನು ತೋರಿಸುವ ಒಂದು ವಿಂಡೋ ತೆರೆದುಕೊಳ್ಳುತ್ತದೆ. |
09:58 | Proceed ನ ಮೇಲೆ ಕ್ಲಿಕ್ ಮಾಡಿ. |
10:01 | ನಾನು ಒಂದು ‘ಪ್ರಾಕ್ಸಿ ನೆಟ್ವರ್ಕ್-ಕನೆಕ್ಶನ್’ ಅನ್ನು ಕಾನ್ಫಿಗರ್ ಮಾಡಿದ್ದರಿಂದ, ಅದು ನನ್ನನ್ನು proxy username ಮತ್ತು password ಗಾಗಿ ಕೇಳುತ್ತದೆ. |
10:08 | ನಾನು ನನ್ನ username ಮತ್ತು password ಗಳನ್ನು ಟೈಪ್ ಮಾಡುತ್ತೇನೆ. |
10:11 | Ok ಅನ್ನು ಕ್ಲಿಕ್ ಮಾಡಿ. |
10:13 | ಒಂದು ವಿಂಡೋ ತೆರೆದುಕೊಳ್ಳುತ್ತದೆ. ಅದು, ಇನ್ಸ್ಟಾಲೇಶನ್ ಗಾಗಿ ಆಯ್ಕೆ ಮಾಡಿದ ಪ್ಯಾಕೇಜ್, ಡೌನ್ಲೋಡ್ ಆಗುತ್ತಿರುವುದನ್ನು ತೋರಿಸುತ್ತದೆ. |
10:20 | ರಿಮೋಟ್ ಸರ್ವರ್ ನ ಕನೆಕ್ಟಿವಿಟಿ ಯಲ್ಲಿ ಸಮಸ್ಯೆಯಿದ್ದರೆ, ಆಯ್ಕೆ ಮಾಡಿದ ಪ್ಯಾಕೇಜ್ ಡೌನ್ಲೋಡ್ ಆಗದೇ ಇರಬಹುದು. |
10:26 | ಹಾಗಿದ್ದಾಗ, ಪ್ಯಾಕೇಜ್ ರಿಪಾಸಿಟರಿ ಅನ್ನು ಬದಲಾಯಿಸಿ, ಮತ್ತೆ ಪ್ರಯತ್ನಿಸಿ. |
10:31 | ಆಯ್ಕೆ ಮಾಡಿದ ಪ್ಯಾಕೇಜ್ ನ ಇನ್ಸ್ಟಾಲೇಶನ್, ಪೂರ್ಣವಾಗಿರುವುದನ್ನು ನಾವು ನೋಡಬಹುದು. |
10:36 | Close ನ ಮೇಲೆ ಕ್ಲಿಕ್ ಮಾಡಿ. |
10:38 | ಪ್ಯಾಕೇಜ್ ಲಿಸ್ಟ್, ರಿಫ್ರೆಶ್ ಆಗುತ್ತದೆ. |
10:41 | ಗಮನಿಸಿ: abc (ಎ ಬಿ ಸಿ) ಪ್ಯಾಕೇಜ್ ಗಾಗಿ, Installed on ಕಾಲಂ ನಲ್ಲಿ, 11 September 2013 ಎಂದು ಕಾಣಿಸಿಕೊಳ್ಳುತ್ತದೆ. |
10:49 | ಇಲ್ಲಿಗೆ ನಾವು ಈ ಟ್ಯುಟೋರಿಯಲ್ ನ ಕೊನೆಗೆ ಬಂದಿದ್ದೇವೆ. |
10:54 | ಈ ಟ್ಯುಟೋರಿಯಲ್ ನಲ್ಲಿ ನಾವು : ಮಿಕ್ಟೆಕ್ ಅನ್ನು ಡೌನ್ಲೋಡ್ ಮಾಡುವುದು ಮತ್ತು ಇನ್ಸ್ಟಾಲ್ ಮಾಡುವುದು, |
10:59 | ಟೆಕ್ವರ್ಕ್ಸ್ ಅನ್ನು ಬಳಸಿ, ಒಂದು ಸಾಮಾನ್ಯವಾದ ಲೇಟೆಕ್ ಡಾಕ್ಯುಮೆಂಟ್ ಅನ್ನು ಬರೆಯುವುದು, |
11:03 | ಮತ್ತು ಕಳೆದುಹೋದ ಪ್ಯಾಕೇಜ್ ಗಳನ್ನು ಎರಡು ವಿಧದಲ್ಲಿ ಡೌನ್ಲೋಡ್ ಮಾಡಲು, ಮಿಕ್ಟೆಕ್ ಅನ್ನು ಕಾನ್ಫಿಗರ್ ಮಾಡುವುದನ್ನು ಕಲಿತಿದ್ದೇವೆ. |
11:08 | ಈ ಕೆಳಗಿನ ಲಿಂಕ್ ನಲ್ಲಿರುವ ವೀಡಿಯೋವನ್ನುನೋಡಿ. |
11:12 | ಇದು ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ನ ಸಾರಾಂಶವಾಗಿದೆ. ನಿಮ್ಮಲ್ಲಿ ಉತ್ತಮ ಬ್ಯಾಂಡ್ವಿಡ್ತ್ ಇಲ್ಲವಾದಲ್ಲಿ, ಇದನ್ನು ಡೌನ್ಲೋಡ್ ಮಾಡಿ ನೋಡಿ. |
11:18 | ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ತಂಡವು: ಸ್ಪೋಕನ್ ಟ್ಯುಟೋರಿಯಲ್ ಗಳನ್ನು ಬಳಸಿ ಕಾರ್ಯಶಾಲೆಯನ್ನು ನಡೆಸುತ್ತದೆ. ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ. |
11:28 | ಹೆಚ್ಚಿನ ಮಾಹಿತಿಗಾಗಿ ಕೆಳಗಿನ ಲಿಂಕ್ ಗೆ ಬರೆಯಿರಿ.
contact@spoken-tutorial.org |
11:33 | Spoken Tutorial ಪ್ರೊಜೆಕ್ಟ್, ‘ಟಾಕ್ ಟು ಎ ಟೀಚರ್’ ಎಂಬ ಪ್ರೊಜೆಕ್ಟ್ ನ ಒಂದು ಭಾಗವಾಗಿದೆ. ಇದು ರಾಷ್ಟ್ರೀಯ ಸಾಕ್ಷರತಾ ಮಿಷನ್ ICT, MHRD, ಭಾರತ ಸರ್ಕಾರದ ಆಧಾರವನ್ನು ಪಡೆದಿದೆ. |
11:45 | ಇದರ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆಳಗಿರುವ ಲಿಂಕ್ ಅನ್ನುನೋಡಿ. |
11:56 | ಈ ಟ್ಯುಟೋರಿಯಲ್ ನ ಅನುವಾದಕರು ವಾದಿರಾಜ ಮತ್ತು ಪ್ರವಾಚಕಿ IIT Bombay ಯಿಂದ ಗ್ಲೋರಿಯಾ.
ಧನ್ಯವಾದಗಳು. |