LaTeX-Old-Version/C2/LaTeX-on-Windows-using-TeXworks/Kannada

From Script | Spoken-Tutorial
Jump to: navigation, search

Title of script: LaTeX on Windows using TeXworks

Author: Rupak Rokade

Keywords: video tutorial, LaTeX, TeXworks, windows, MikTeX,


Time Narration
00:01 “LaTeX on Windows using TeXworks” ಎಂಬ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ.
00:06 ಈ ಟ್ಯುಟೋರಿಯಲ್ ನಲ್ಲಿ ನಾವು: MikTeX ಅನ್ನು ಡೌನ್ಲೋಡ್ ಮತ್ತು ಇನ್ಸ್ಟಾಲ್ ಮಾಡಲು,
00:12 TeXworks ಅನ್ನು ಬಳಸಿ, ಸಾಮಾನ್ಯ LaTeX ಡಾಕ್ಯುಮೆಂಟನ್ನು ಬರೆಯಲು,
00:15 ಕಳೆದುಹೋದ ಪ್ಯಾಕೇಜ್ ಗಳನ್ನು ಡೌನ್ಲೋಡ್ ಮಾಡಲಿಕ್ಕಾಗಿ MikTeXಅನ್ನು ಕಾನ್ಫಿಗರ್ ಮಾಡಲು ಕಲಿಯಲಿದ್ದೇವೆ.
00:19 ನಾನು ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು, ವಿಂಡೋಸ್ 7 ಆಪರೇಟಿಂಗ್ ಸಿಸ್ಟಂ ಮತ್ತು ಮಿಕ್ಟೆಕ್ 2.9 ಇವುಗಳನ್ನು ಉಪಯೋಗಿಸುತ್ತಿದ್ದೇನೆ.
00:27 ನಾವೀಗ TeXworksನ ಮುಖ್ಯ ಲಕ್ಷಣಗಳನ್ನು ನೋಡೋಣ.
00:31 ಇದು ಒಂದು ಸ್ವತಂತ್ರವಾದ ಪ್ಲ್ಯಾಟ್ಫಾರ್ಮ್ (platform) ಆಗಿದೆ .
00:34 ಇದು, ಒಂದು ‘ಎಂಬೆಡೆಡ್ ಪಿ.ಡಿ.ಎಫ್ ರೀಡರ್’ ಅನ್ನು ಹೊಂದಿದೆ.
00:36 ಇದು ಭಾರತೀಯ ಭಾಷೆಗಳ ಟೈಪ್-ಸೆಟಿಂಗ್ ಗೆ ಸಹಾಯ ಮಾಡುತ್ತದೆ.
00:40 ಟೆಕ್ವರ್ಕ್ (TeXworks) ಅನ್ನು ಆರಂಭಿಸುವ ಮೊದಲು, ನಾವು ಮಿಕ್ಟೆಕ್ (MikTeX) ಅನ್ನು ಇನ್ಸ್ಟಾಲ್ ಮಾಡಬೇಕು.
00:45 ಮಿಕ್ಟೆಕ್, ವಿಂಡೋಸ್ ಗಾಗಿ, ಟೆಕ್ ಅಥವಾ ಲೇಟೆಕ್ ಮತ್ತು ಸಂಬಂಧಿಸಿದ ಪ್ರೋಗ್ರಾಂ ಗಳ ಅಪ್-ಟು-ಡೇಟ್ ಬೆಳವಣಿಗೆ ಆಗಿದೆ.
00:52 ಇದು ವಿಂಡೋಸ್ ನಲ್ಲಿ, ಲೇಟೆಕ್ ನಲ್ಲಿ ಸಾಮಾನ್ಯ ಡಾಕ್ಯುಮೆಂಟ್ ಗಳನ್ನು ರಚಿಸಲು ಅವಶ್ಯಕವಾದ ಪಾಕೇಜ್ ಗಳನ್ನು ಹೊಂದಿದೆ. ಅಲ್ಲದೆ, ಟೆಕ್ವರ್ಕ್ಸ್, ಮಿಕ್ಟೆಕ್ ಇನ್ಟಾಲೇಶನ್ ಜೊತೆಗೆ ಸಿಗುವ ಒಂದು ಡೀಫಾಲ್ಟ್ ಎಡಿಟರ್ ಆಗಿದೆ.
01:04 ಈ ವೆಬ್ಸೈಟ್ ಗೆ ಹೋಗಿ:

http://www.miktex.org

01:10 ಸೂಚಿಸಿರುವ ಮಿಕ್ಟೆಕ್ ಇನ್ಸ್ಟಾಲರ್ ಗಾಗಿ ಡೌನ್ಲೋಡ್ ಲಿಂಕ್ ಮೇಲೆ ಕ್ಲಿಕ್ ಮಾಡಿ. ಇದು ಮಿಕ್ಟೆಕ್ ಇನ್ಸ್ಟಾಲರ್ ಅನ್ನು ಡೌನ್ಲೋಡ್ ಮಾಡುತ್ತದೆ.
01:19 ಅದನ್ನು ಡೌನ್ಲೋಡ್ ಮಾಡಿ ನಿಮ್ಮ Desktop ನಲ್ಲಿ ಸೇವ್ ಮಾಡಿ.
01:22 ಇದು 154 ಮೆಗಾ ಬೈಟ್ಸ್ ಇರುವ ದೊಡ್ಡ ಫೈಲ್ ಆಗಿದೆ. ಆದ್ದರಿಂದ ಇದು ಡೌನ್ಲೋಡ್ ಆಗಲು ಸ್ವಲ್ಪ ಸಮಯ ಬೇಕು.
01:28 ನಾನು ಈಗಾಗಲೇ ಈ ಫೈಲ್ ಅನ್ನು ಡೌನ್ಲೋಡ್ ಮಾಡಿದ್ದೇನೆ. ಅದು ಇಲ್ಲಿದೆ.
01:32 ಇನ್ಸ್ಟಾಲೇಶನ್ ಶುರು ಮಾಡಲು ಈ ಫೈಲ್ ಮೇಲೆ ಡಬಲ್ ಕ್ಲಿಕ್ ಮಾಡಿ.
01:36 ಚೆಕ್-ಬಾಕ್ಸ್ ಅನ್ನು ಚೆಕ್ ಮಾಡಿ ಮತ್ತು Next ಮೇಲೆ ಕ್ಲಿಕ್ ಮಾಡಿ.
01:40 ಎಲ್ಲಾ ಡೀಫಾಲ್ಟ್ ಆಯ್ಕೆಗಳನ್ನು ಆರಿಸಿಕೊಳ್ಳಿ.
01:44 ಇನ್ಸ್ಟಾಲೇಶನ್ ಆಗಲು 5 ರಿಂದ 10 ನಿಮಿಷಗಳು ಬೇಕಾಗುವುದು.
01:47 ನಾನು ಈಗಾಗಲೇ ಮಿಕ್ಟೆಕ್ ಅನ್ನು ನನ್ನ ಕಂಪ್ಯೂಟರ್ ನಲ್ಲಿ ಇನ್ಸ್ಟಾಲ್ ಮಾಡಿದ್ದೇನೆ. ಆದ್ದರಿಂದ ನಾನು ಮತ್ತೊಮ್ಮೆ ಇನ್ಸ್ಟಾಲೇಶನ್ ಮಾಡುವುದಿಲ್ಲ.
01:55 ನಿಮ್ಮ ಕಂಪ್ಯೂಟರ್ ನಲ್ಲಿ 'ಮಿಕ್ಟೆಕ್ ' ಅನ್ನು ಪೂರ್ಣವಾಗಿ ಇನ್ಸ್ಟಾಲ್ ಮಾಡಿದ ನಂತರ,
01:58 ಮಿಕ್ಟೆಕ್ ಜೊತೆಗೆ ಬರುವ ಟೆಕ್ವರ್ಕ್ಸ್ ಎಡಿಟರ್ ಅನ್ನು ಹೇಗೆ ಬಳಸುವುದು ಎಂದು ನೋಡೋಣ.
2:04 Windows Start ಬಟನ್ ನ ಮೇಲೆ ಕ್ಲಿಕ್ ಮಾಡಿ.
02:07 All Programs ಅನ್ನು ಆರಿಸಿ.
02:10 MikTeX 2.9 ಮೇಲೆ ಕ್ಲಿಕ್ ಮಾಡಿ.
02:12 ನಂತರ TeXworks (ಟೆಕ್ವರ್ಕ್ಸ್) ಮೇಲೆ ಕ್ಲಿಕ್ ಮಾಡಿ.
02:15 TeXworks ಎಡಿಟರ್ (ಟೆಕ್ವರ್ಕ್ಸ್) ತೆರೆದುಕೊಳ್ಳುತ್ತದೆ.
02:18 ನಾನು ಈಗಾಗಲೇ ಇರುವ ಲೇಟೆಕ್ ಡಾಕ್ಯುಮೆಂಟ್ ಅನ್ನು ತೆರೆಯುತ್ತೇನೆ.
02:22 ನಾನು ಕ್ರಮವಾಗಿ File >> Open ಗಳ ಮೇಲೆ ಕ್ಲಿಕ್ ಮಾಡಿ ಡೈರೆಕ್ಟರಿ ಯನ್ನು ಆಯ್ಕೆ ಮಾಡುತ್ತೇನೆ. ನಂತರ hello.tex ಫೈಲ್ ಅನ್ನು ತೆರೆಯುತ್ತೇನೆ.
02:33 ಈ ಫೈಲ್ ನಲ್ಲಿ ಬರೆದಿರುವ ಟೆಕ್ಸ್ಟ್, ಬಣ್ಣದಲ್ಲಿ ಇರುವುದನ್ನು ನೀವು ನೋಡಬಹುದು.
02:38 ಇದನ್ನು syntax highlighting ಎಂದು ಕರೆಯುತ್ತಾರೆ. ಇದು ಯೂಸರ್ ಕಂಟೆಂಟ್ ಮತ್ತು ಲೇಟೆಕ್ ಸಿಂಟ್ಯಾಕ್ಸ್ ಗಳನ್ನು ಪ್ರತ್ಯೇಕಿಸಲು ಯೂಸರ್ ಗೆ ಸಹಾಯ ಮಾಡುತ್ತದೆ.
02:47 ಒಂದುವೇಳೆ, ಲೇಟೆಕ್ ಸಿಂಟೆಕ್ಸ್ ಹೈಲೈಟ್ ಆಗಿಲ್ಲದಿದ್ದರೆ, ಈ ಕೆಳಗಿನವುಗಳನ್ನು ಮಾಡಿ.
02:52 ಟೆಕ್ವರ್ಕ್ ವಿಂಡೋವಿನಲ್ಲಿ, ಮೆನು ಬಾರ್ ನಲ್ಲಿರುವ Format ಎಂಬ ಬಟನ್ ನ ಮೇಲೆ ಕ್ಲಿಕ್ ಮಾಡಿ.
02:59 Syntax Colouring ಅನ್ನು ಆಯ್ಕೆ ಮಾಡಿ ಮತ್ತು LaTeX (ಲೇಟೆಕ್) ಮೇಲೆ ಕ್ಲಿಕ್ ಮಾಡಿ.
03:03 ಪ್ರತಿ ಬಾರಿ ಲೇಟೆಕ್ ಡಾಕ್ಯುಮೆಂಟ್ ಅನ್ನು ರಚಿಸಿದಾಗ, ಟೆಕ್ವರ್ಕ್ಸ್, ಸಿಂಟೆಕ್ಸ್ ಹೈಲೈಟಿಂಗ್ ಅನ್ನು ಅನ್ವಯ ಮಾಡುವುದು ನಿಮಗೆ ಬೇಕಾಗಿದ್ದರೆ, ಆಗ ಕೆಳಗಿನಂತೆ ಮಾಡಿ.
03:11 ಮೆನು ಬಾರ್ ನ ಮೇಲಿರುವ Edit ಮೇಲೆ ಕ್ಲಿಕ್ ಮಾಡಿ. ನಂತರ Preferences ಮೇಲೆ ಕ್ಲಿಕ್ ಮಾಡಿ.
03:16 Editor ಟ್ಯಾಬ್ ನಲ್ಲಿ, ಡ್ರಾಪ್ ಡೌನ್ ಬಟನ್ ಮೇಲೆ ಕ್ಲಿಕ್ ಮಾಡಿ. ಅದು Syntax Colouring ಗೆ ಆಯ್ಕೆಗಳನ್ನು ನೀಡುತ್ತದೆ.
03:22 LaTeX (ಲೇಟೆಕ್) ಅನ್ನು ಆಯ್ಕೆ ಮಾಡಿ, ನಂತರ Ok ಮೇಲೆ ಕ್ಲಿಕ್ ಮಾಡಿ.
03:27 ಈ ರೀತಿಯಲ್ಲಿ, syntax highlighting ಅನ್ನು ಮುಂದೆ ಕ್ರಿಯೇಟ್ ಮಾಡುವ ಎಲ್ಲಾ ಡಾಕ್ಯುಮೆಂಟ್ ಗಳಿಗೆ ಅನ್ವಯಿಸಲಾಗುವುದು.
03:33 ಈಗ ನಾವು ನಮ್ಮ ಲೇಟೆಕ್ ಡಾಕ್ಯುಮೆಂಟನ್ನು ಕಂಪೈಲ್ ಮಾಡಲು ಸಿದ್ಧರಾಗಿದ್ದೇವೆ.
03:37 ಕಂಪೈಲ್ ಮಾಡುವುದನ್ನು ಶುರು ಮಾಡಲು Ctrl ಮತ್ತು t ಕೀ ಗಳನ್ನು ಒಟ್ಟಿಗೆ ಒತ್ತಿ.
03:43 ಒಂದು ಬಾರಿ ಡಾಕ್ಯುಮೆಂಟ್, ತಪ್ಪುಗಳು ಇರದಂತೆ ಕಂಪೈಲ್ ಆದಮೇಲೆ, ತಯಾರಾದ pdf ತೆರೆದುಕೊಳ್ಳುವುದು.
03:49 ಗಮನಿಸಿ, ಈ pdf ರೀಡರ್, ಟೆಕ್ವರ್ಕ್ಸ್ ನ ಜೊತೆಯಲ್ಲೇ ಬರುತ್ತದೆ.
03:53 ಇದು , ಕಂಪೈಲ್ ಮಾಡಲಾದ ‘pdf’ ಡಾಕ್ಯುಮೆಂಟ್ ಗಳನ್ನು ತೋರಿಸಲು, ಟೆಕ್ವರ್ಕ್ಸ್ ನಿಂದ ಬಳಸಲಾಗುವ ಡೀಫಾಲ್ಟ್ ‘pdf’ ರೀಡರ್ ಆಗಿದೆ.
04:00 ನಾವು LATEX ನ ಇನ್ಸ್ಟಾಲ್ಲೆಶನ್ ಅನ್ನು ಮುಗಿಸಿದ್ದೇವೆ.
04:04 ಫಾರ್ಮ್ಯಾಟ್ ಮಾಡಲು ಬೇಕಾದ ಅವಶ್ಯಕತೆಗಳಿಗೆ ಇಷ್ಟು ಸಾಕಾಗುತ್ತದೆ.
04:07 ಈಗ ನೀವು ಈ ಟ್ಯುಟೋರಿಯಲ್ ಅನ್ನು ಬಿಡಬಹುದು. ಪ್ಲೇ ಲಿಸ್ಟ್ ನಲ್ಲಿಯ ಉಳಿದ LATEX ಟ್ಯುಟೋರಿಯಲ್ ಗಳನ್ನು ಅಭ್ಯಾಸಮಾಡಿ.
04:14 ಬೇರೆ ಟ್ಯುಟೋರಿಯಲ್ ಗಳನ್ನು ಅಭ್ಯಾಸಮಾಡುವಾಗ, ನಿಮಗೆ ಈ ಕೆಳಗಿನ ಎರರ್ ಮೆಸೇಜ್ ಸಿಗಬಹುದು: “The required file ABC is missing.
04:21 It is a part of the following package: XYZ”.
04:25 ಇಲ್ಲಿ ABC, XYZ ಪ್ಯಾಕೇಜ್ ನಲ್ಲಿಯ ಒಂದು ಫೈಲ್ ಆಗಿದೆ.
04:29 ABC ಮತ್ತು XYZ, ನಿಮ್ಮ ಸಂದರ್ಭಕ್ಕೆ ತಕ್ಕಂತೆ ನಿರ್ದಿಷ್ಟವಾಗಿರುತ್ತವೆ.
04:33 ನಿಮಗೆ ಈ ರೀತಿಯ ಎರರ್ ಮೆಸೇಜ್ ಸಿಕ್ಕಾಗ, ಈ ಟ್ಯುಟೋರಿಯಲ್ ನ ಉಳಿದ ಭಾಗವನ್ನು ಕೇಳಿ.
04:38 ಆ ಸಮಸ್ಯೆಯನ್ನು ಬಗೆಹರಿಸಲು, ಎರಡು ವಿಧಾನಗಳನ್ನು ಈ ಟ್ಯುಟೋರಿಯಲ್ ನ ಉಳಿದ ಭಾಗದಲ್ಲಿ ವಿವರಿಸಲಾಗಿದೆ. ಅವುಗಳಲ್ಲಿ ಒಂದಾದರೂ ನಿಮಗೆ ಉಪಯೋಗವಾಗುತ್ತದೆ.
04:46 ಸಧ್ಯಕ್ಕೆ ವಿದಾಯ ಹೇಳೋಣ.
04:48 ಈ ಕೆಳಗಿನಂತಹ ಒಂದು ಸಮಸ್ಯೆಗೆ ಹೇಗೆ ಉತ್ತರ ಕಂಡುಹಿಡಿಯುವುದೆಂದು ನಿಮಗೆ ತಿಳಿಯಬೇಕಾಗಿದೆಯೇ: ಈ ಟ್ಯುಟೋರಿಯಲ್ ನ ಉಳಿದ ಭಾಗವನ್ನು ಕೇಳಿ ಮತ್ತು ನನ್ನ ಜೊತೆಗೆ ಅಭ್ಯಾಸಮಾಡಿ.
04:56 ಈಗ ನಾವು ಒಂದು Beamer (ಬೀಮರ್) ಡಾಕ್ಯುಮೆಂಟ್ ಅನ್ನು ಕಂಪೈಲ್ ಮಾಡೋಣ.
04:59 ನಾವು ಇನ್ಸ್ಟಾಲ್ ಮಾಡಿರುವ ಮಿಕ್ಟೆಕ್ ಸೆಟ್-ಅಪ್ ನಲ್ಲಿ, ಡೀಫಾಲ್ಟ್ ಆಗಿ, ಬೀಮರ್ ಪ್ಯಾಕೇಜ್ ಸೇರಿಕೊಂಡಿಲ್ಲ.
05:05 ಇದರ ಅರ್ಥ- ನಾವು ಇದನ್ನು ಯಾವುದಾದರೂ ಮೂಲದಿಂದ ಡೌನ್ಲೋಡ್ ಮಾಡಿ, ಅದನ್ನು, ನಮ್ಮ ಈಗಿನ ಮಿಕ್ಟೆಕ್ನ (MikTeX) ಡಿಸ್ಟ್ರೀಬ್ಯೂಶನ್ ಗೆ ಸೇರಿಸಬೇಕು.
05:12 ಕಳೆದುಹೋಗಿರುವ ಪ್ಯಾಕೇಜನ್ನು ಇನ್ಸ್ಟಾಲ್ ಮಾಡಲು ಎರಡು ಮಾರ್ಗಗಳಿವೆ.
05:16 ನಾವು ಲೇಟೆಕ್ ಡಾಕ್ಯುಮೆಂಟನ್ನು ಕಂಪೈಲ್ ಮಾಡುವಾಗಲೇ ಇದನ್ನುಇನ್ಸ್ಟಾಲ್ ಮಾಡುವುದು ಒಂದು ವಿಧವಾಗಿದೆ.
05:21 ಈ ಲೇಟೆಕ್ ಡಾಕ್ಯುಮೆಂಟ್ ಗೆ, ಸಾಮಾನ್ಯವಾಗಿ ನಿಮ್ಮ ಮಿಕ್ಟೆಕ್ ಡಿಸ್ಟ್ರೀಬ್ಯೂಶನ್ ನಲ್ಲಿ ಲಭ್ಯವಿಲ್ಲದ ಒಂದು ಪ್ಯಾಕೇಜ್ ಬೇಕಾಗುತ್ತದೆ.
05:28 ಇನ್ನೊಂದು ಮಾರ್ಗವೆಂದರೆ, ಸ್ವತಃ ಮಿಕ್ಟೆಕ್ ನ ಪ್ಯಾಕೆಜ್ ಮ್ಯಾನೇಜರನ್ನು ಬಳಸಿಕೊಂಡು ಒಂದು ಪ್ಯಾಕೇಜನ್ನು ಆಯ್ಕೆಮಾಡಿ ಇನ್ಸ್ಟಾಲ್ ಮಾಡುವುದು.
05:35 ನಾವು ಮೊದಲನೆಯ ವಿಧಾನವನ್ನು ನೋಡೋಣ.
05:37 ನಾವು ಒಂದು ಲೇಟೆಕ್ ಡಾಕ್ಯುಮೆಂಟನ್ನು ತೆರೆದು ಅದನ್ನು ಕಂಪೈಲ್ ಮಾಡುತ್ತೇವೆ. ಇದಕ್ಕಾಗಿ, ಇಂಟರ್ನೆಟ್ ನಿಂದ ಪ್ಯಾಕೇಜ್ ಗಳನ್ನು ಇನ್ಸ್ಟಾಲ್ ಮಾಡಲು, ಮಿಕ್ಟೆಕ್ ನ ಅಗತ್ಯವಿದೆ.
05:44 ಮೊದಲು, TeXworks (ಟೆಕ್ವರ್ಕ್ಸ್) ಎಡಿಟರ್ ಅನ್ನು ಕ್ಲೋಸ್ ಮಾಡಿ.
05:48 ನಾವು tex ಫೈಲನ್ನು, ಅಡ್ಮಿನಿಸ್ಟ್ರೇಟರ್ (administrator) ನ ಹಕ್ಕುಗಳೊಂದಿಗೆ ತೆರೆಯುವುದು ಅವಶ್ಯಕವಾಗಿದೆ.
05:53 ಕ್ರಮವಾಗಿ start >> All programs >> MikTeX 2.9 (ಮಿಕ್ಟೆಕ್) ಗಳ ಮೇಲೆ ಕ್ಲಿಕ್ ಮಾಡಿ.
06:02 TeXworks (ಟೆಕ್ವರ್ಕ್ಸ್) ನ ಮೇಲೆ ರೈಟ್-ಕ್ಲಿಕ್ ಮಾಡಿ , ಮತ್ತು Run as Administrator ಅನ್ನು ಆಯ್ಕೆ ಮಾಡಿ.
06:08 ಇದು, 'ಅಡ್ಮಿನಿಸ್ಟ್ರೇಟರ್' ನ ವಿಶೇಷ ಹಕ್ಕುಗಳೊಂದಿಗೆ, 'ಟೆಕ್ವರ್ಕ್ಸ್ ಎಡಿಟರ್’ ಅನ್ನು ಆರಂಭಿಸುತ್ತದೆ.
06:13 ಈಗ, ಕ್ರಮವಾಗಿ File >> Open ಗಳ ಮೇಲೆ ಕ್ಲಿಕ್ ಮಾಡಿ ಮತ್ತು beamer.tex ಫೈಲ್ ಅನ್ನು ಆಯ್ಕೆ ಮಾಡಿ.
06:21 ಕಂಪೈಲೇಶನ್ ಅನ್ನು ಶುರು ಮಾಡಲು Ctrl ಮತ್ತು t ಕೀ ಗಳನ್ನು ಒಟ್ಟಿಗೆ ಒತ್ತಿ.
06:26 Package Installation ಎಂಬ ಡೈಲಾಗ್-ಬಾಕ್ಸ್ ತೆರೆದುಕೊಳ್ಳುತ್ತದೆ.
06:30 ಇದು ಕಳೆದು ಹೋಗಿರುವ beamer.cls ಪ್ಯಾಕೇಜನ್ನು ಇನ್ಸ್ಟಾಲ್ ಮಾಡಲು ಕೇಳುತ್ತದೆ.
06:35 ಈ ಡೈಲಾಗ್ ಬಾಕ್ಸ್ ನಲ್ಲಿರುವ Change ಬಟನ್ ನ ಮೇಲೆ ಕ್ಲಿಕ್ ಮಾಡಿ.
06:40 Change Package Repository ಎಂಬ ಡೈಲಾಗ್-ಬಾಕ್ಸ್ ತೆರೆದುಕೊಳ್ಳುತ್ತದೆ.
06:44 Packages shall be installed from the internet ಎಂಬ ಆಯ್ಕೆಯನ್ನು ಆರಿಸಿಕೊಳ್ಳಿ.
06:49 Connection Settings ನ ಮೇಲೆ ಕ್ಲಿಕ್ ಮಾಡಿ.
06:52 ಇದು, ನಿಮಗೆ ‘ಪ್ರಾಕ್ಸಿ ಸೆಟಿಂಗ್ಸ್’ ಗಳನ್ನು ಕಾನ್ಫಿಗರ್ ಮಾಡಲು ಸೂಚಿಸುತ್ತದೆ.
06:56 ಒಂದು ವೇಳೆ ನೀವು ಪ್ರಾಕ್ಸಿ ನೆಟ್ವರ್ಕ್ ನಲ್ಲಿ ಇಲ್ಲದಿದ್ದರೆ, Use proxy server ಎಂಬ ಚೆಕ್-ಬಾಕ್ಸ್ ಅನ್ನು ಕ್ಲಿಕ್ ಮಾಡಬೇಡಿ.
07:03 ನಾನು ಪ್ರಾಕ್ಸಿ ನೆಟ್ವರ್ಕ್ ನಲ್ಲಿ ಇರುವುದರಿಂದ , ಚೆಕ್-ಬಾಕ್ಸ್ ಅನ್ನು ಕ್ಲಿಕ್ ಮಾಡಿ ಈ ಆಯ್ಕೆಯನ್ನು ಸಕ್ರಿಯಗೊಳಿಸುತ್ತೇನೆ.
07:09 ನಾನು proxy ಅಡ್ರೆಸ್ ಅನ್ನು ಬರೆಯುವೆನು.
07:13 ಮತ್ತು proxy port number ಅನ್ನು ನಮೂದಿಸುವೆನು.
07:16 ನಾನು Authentication required ಎಂಬ ಆಯ್ಕೆಯ ಚೆಕ್-ಬಾಕ್ಸ್ ನ ಮೇಲೆ ಕ್ಲಿಕ್ ಮಾಡಿ, ಅದನ್ನು ಸಕ್ರಿಯಗೊಳಿಸುವೆನು.
07:23 Ok ಮೇಲೆ, ನಂತರ Next ನ ಮೇಲೆ ಕ್ಲಿಕ್ ಮಾಡಿ.
07:27 ಇದು ನನಗೆ proxy username ಮತ್ತು ಪಾಸ್ವರ್ಡ್ ಅನ್ನು ಕೇಳುವುದು.
07:31 ನಾನು ಮಾಹಿತಿಯನ್ನು ನಮೂದಿಸಿ OK ಮೇಲೆ ಕ್ಲಿಕ್ ಮಾಡುವೆನು.
07:36 ಇದು ವಿವಿಧ ‘ರಿಮೋಟ್ ಪ್ಯಾಕೇಜ್ ರಿಪಾಸಿಟರೀಸ್’ ಗಳ ಲಿಸ್ಟ್ ಅನ್ನು ತೋರಿಸುತ್ತದೆ.
07:41 ಪಟ್ಟಿಯಿಂದ ಒಂದನ್ನು ಆಯ್ಕೆ ಮಾಡಿ ಮತ್ತು Finish ನ ಮೇಲೆ ಕ್ಲಿಕ್ ಮಾಡಿ.
07:45 Install ನ ಮೇಲೆ ಕ್ಲಿಕ್ ಮಾಡಿ.
07:48 ಇದು beamer.cls ಪ್ಯಾಕೇಜ್ ಅನ್ನು ಇನ್ಸ್ಟಾಲ್ ಮಾಡುವುದು.
07:52 ಮತ್ತೊಮ್ಮೆ Package Installation ಡಯಲಾಗ್-ಬಾಕ್ಸ್ ತೆರೆದುಕೊಳ್ಳುವುದು.
07:57 ಇದು, ಇಲ್ಲಿ ಇರದ pgfcore.sty ಎಂಬ (ಪಿ ಜಿ ಎಫ್ ಕೋರ್ ಡಾಟ್ ಎಸ್ ಟಿ ವಯ್) ಪ್ಯಾಕೇಜ್ ಅನ್ನು ಇನ್ಸ್ಟಾಲ್ ಮಾಡಲು ಸೂಚಿಸುವುದು.
08:03 ನೀವು Always show this dialog before installing packages ಎಂಬ ಆಯ್ಕೆಯನ್ನು ಅನ್-ಚೆಕ್ ಮಾಡಬಹುದು.
08:09 ನೀವು ಹೀಗೆ ಮಾಡಿದರೆ, ಮಿಕ್ಟೆಕ್, ಕಳೆದುಹೋದ ಪ್ಯಾಕೇಜ್ ಎದುರಾದಾಗ, ಮತ್ತೆ ನಿಮಗೆ ಸೂಚಿಸುವುದಿಲ್ಲ.
08:16 Install ನ ಮೇಲೆ ಕ್ಲಿಕ್ ಮಾಡಿ.
08:18 ಈಗ, ಕಾಣದಿರುವ ಪ್ಯಾಕೇಜ್ ಗಳು ಇನ್ನೂ ಹಲವು ಇದ್ದರೆ, ಅದು ನಿಮ್ಮ ಅನುಮತಿಯನ್ನು ಕೇಳದೆ, ತನ್ನಷ್ಟಕ್ಕೆ ತಾನೆ ಇನ್ಸ್ಟಾಲ್ ಮಾಡುತ್ತದೆ.
08:28 ಒಮ್ಮೆ ಇನ್ಸ್ಟಾಲೇಶನ್ ಪೂರ್ತಿಗೊಂಡರೆ, ಅದು ಕಂಪೈಲೇಶನ್ ಅನ್ನು ಮುಗಿಸುತ್ತದೆ ಮತ್ತು pdf ಔಟ್ಪುಟ್ ಅನ್ನು ಓಪನ್ ಮಾಡುತ್ತದೆ.
08:35 ಒಂದು Beamer ಡಾಕ್ಯುಮೆಂಟ್ ಅನ್ನು, ನಾವು ಯಶಸ್ವಿಯಾಗಿ ಕಂಪೈಲ್ ಮಾಡಿರುವುದನ್ನು ನೋಡಬಹುದು.
08:39 ಈಗ, ನಾವು ‘ಮಿಸ್ಸಿಂಗ್ ಪ್ಯಾಕೇಜ್’ ಗಳನ್ನು ಇನ್ಸ್ಟಾಲ್ ಮಾಡುವ ಎರಡನೇ ವಿಧಾನವನ್ನು ನೋಡೋಣ.
08:44 Windows Start ಬಟನ್ ನ ಮೇಲೆ ಕ್ಲಿಕ್ ಮಾಡಿ.
08:47 All Programs ನ ಮೇಲೆ ಕ್ಲಿಕ್ ಮಾಡಿ.
08:49 MikTeX2.9 ನ ಮೇಲೆ ಕ್ಲಿಕ್ ಮಾಡಿ.
08:52 Maintenance (Admin) ನ ಮೇಲೆ ಕ್ಲಿಕ್ ಮಾಡಿ.
08:55 Package Manager (Admin) ನ ಮೇಲೆ ಕ್ಲಿಕ್ ಮಾಡಿ.
09:00 ಇದು, ಲಭ್ಯವಿರುವ ವಿವಿಧ ಪ್ಯಾಕೇಜ್ ಗಳ ಒಂದು ಪಟ್ಟಿಯನ್ನು ತೋರಿಸುವುದು.
09:04 ಈಗ ನಾವು ಪಟ್ಟಿಯನ್ನು ನೋಡೋಣ.
09:07 ಈ ಪಟ್ಟಿಯಲ್ಲಿ ಆರು ವಿಭಾಗಗಳಿವೆ.
09:10 ಅವುಗಳು ಹೀಗಿವೆ: Name, Category, Size, Packaged date, Installed on date ಮತ್ತು Title.
09:18 Installed on ಎಂಬ ಕಾಲಂ, ನಮಗೆ ತುಂಬಾ ಮುಖ್ಯವಾಗಿದೆ.
09:22 ಯಾವ ಪ್ಯಾಕೇಜ್ ಗಳಿಗಾಗಿ ಈ ವಿಭಾಗವು ಖಾಲಿ ಇದೆಯೋ, ಆ ಪ್ಯಾಕೇಜ್ ಗಳು ಇನ್ಸ್ಟಾಲ್ ಆಗಿಲ್ಲ ಎಂದು ಇದು ತೋರಿಸುತ್ತದೆ.
09:29 ಒಂದು ನಿರ್ದಿಷ್ಟ ಪ್ಯಾಕೇಜ್ ಅನ್ನು, ಹೇಗೆ ಇನ್ಸ್ಟಾಲ್ ಮಾಡುವುದೆಂದು ನಾವು ನೋಡೋಣ.
09:33 ಉದಾಹರಣೆಗಾಗಿ, ನಾನು abc ಪ್ಯಾಕೇಜ್ ಅನ್ನು ಆಯ್ಕೆ ಮಾಡುತ್ತೇನೆ.
09:38 ಗಮನಿಸಿ: ಪ್ಯಾಕೇಜ್ ಅನ್ನು ನಾನು ಆಯ್ಕೆ ಮಾಡಿದ ತಕ್ಷಣ, ಮೇಲ್ತುದಿಯ ಎಡಭಾಗದಲ್ಲಿ ಇರುವ plus ಬಟನ್ ಸಕ್ರಿಯವಾಗುತ್ತದೆ.
09:45 plus ಬಟನ್, install ಬಟನ್ ಆಗಿದೆ. plus ಬಟನ್ ನ ಮೇಲೆ ಕ್ಲಿಕ್ ಮಾಡಿ.
09:50 ಇನ್ಸ್ಟಾಲ್ ಅಥವಾ ಅನ್-ಇನ್ಸ್ಟಾಲ್ ಮಾಡಲು, ನೀವು ಆಯ್ಕೆ ಮಾಡಿರುವ ಪ್ಯಾಕೇಜ್ ಗಳ ಸಂಖ್ಯೆಯನ್ನು ತೋರಿಸುವ ಒಂದು ವಿಂಡೋ ತೆರೆದುಕೊಳ್ಳುತ್ತದೆ.
09:58 Proceed ನ ಮೇಲೆ ಕ್ಲಿಕ್ ಮಾಡಿ.
10:01 ನಾನು ಒಂದು ‘ಪ್ರಾಕ್ಸಿ ನೆಟ್ವರ್ಕ್-ಕನೆಕ್ಶನ್’ ಅನ್ನು ಕಾನ್ಫಿಗರ್ ಮಾಡಿದ್ದರಿಂದ, ಅದು ನನ್ನನ್ನು proxy username ಮತ್ತು password ಗಾಗಿ ಕೇಳುತ್ತದೆ.
10:08 ನಾನು ನನ್ನ username ಮತ್ತು password ಗಳನ್ನು ಟೈಪ್ ಮಾಡುತ್ತೇನೆ.
10:11 Ok ಅನ್ನು ಕ್ಲಿಕ್ ಮಾಡಿ.
10:13 ಒಂದು ವಿಂಡೋ ತೆರೆದುಕೊಳ್ಳುತ್ತದೆ. ಅದು, ಇನ್ಸ್ಟಾಲೇಶನ್ ಗಾಗಿ ಆಯ್ಕೆ ಮಾಡಿದ ಪ್ಯಾಕೇಜ್, ಡೌನ್ಲೋಡ್ ಆಗುತ್ತಿರುವುದನ್ನು ತೋರಿಸುತ್ತದೆ.
10:20 ರಿಮೋಟ್ ಸರ್ವರ್ ನ ಕನೆಕ್ಟಿವಿಟಿ ಯಲ್ಲಿ ಸಮಸ್ಯೆಯಿದ್ದರೆ, ಆಯ್ಕೆ ಮಾಡಿದ ಪ್ಯಾಕೇಜ್ ಡೌನ್ಲೋಡ್ ಆಗದೇ ಇರಬಹುದು.
10:26 ಹಾಗಿದ್ದಾಗ, ಪ್ಯಾಕೇಜ್ ರಿಪಾಸಿಟರಿ ಅನ್ನು ಬದಲಾಯಿಸಿ, ಮತ್ತೆ ಪ್ರಯತ್ನಿಸಿ.
10:31 ಆಯ್ಕೆ ಮಾಡಿದ ಪ್ಯಾಕೇಜ್ ನ ಇನ್ಸ್ಟಾಲೇಶನ್, ಪೂರ್ಣವಾಗಿರುವುದನ್ನು ನಾವು ನೋಡಬಹುದು.
10:36 Close ನ ಮೇಲೆ ಕ್ಲಿಕ್ ಮಾಡಿ.
10:38 ಪ್ಯಾಕೇಜ್ ಲಿಸ್ಟ್, ರಿಫ್ರೆಶ್ ಆಗುತ್ತದೆ.
10:41 ಗಮನಿಸಿ: abc (ಎ ಬಿ ಸಿ) ಪ್ಯಾಕೇಜ್ ಗಾಗಿ, Installed on ಕಾಲಂ ನಲ್ಲಿ, 11 September 2013 ಎಂದು ಕಾಣಿಸಿಕೊಳ್ಳುತ್ತದೆ.
10:49 ಇಲ್ಲಿಗೆ ನಾವು ಈ ಟ್ಯುಟೋರಿಯಲ್ ನ ಕೊನೆಗೆ ಬಂದಿದ್ದೇವೆ.
10:54 ಈ ಟ್ಯುಟೋರಿಯಲ್ ನಲ್ಲಿ ನಾವು : ಮಿಕ್ಟೆಕ್ ಅನ್ನು ಡೌನ್ಲೋಡ್ ಮಾಡುವುದು ಮತ್ತು ಇನ್ಸ್ಟಾಲ್ ಮಾಡುವುದು,
10:59 ಟೆಕ್ವರ್ಕ್ಸ್ ಅನ್ನು ಬಳಸಿ, ಒಂದು ಸಾಮಾನ್ಯವಾದ ಲೇಟೆಕ್ ಡಾಕ್ಯುಮೆಂಟ್ ಅನ್ನು ಬರೆಯುವುದು,
11:03 ಮತ್ತು ಕಳೆದುಹೋದ ಪ್ಯಾಕೇಜ್ ಗಳನ್ನು ಎರಡು ವಿಧದಲ್ಲಿ ಡೌನ್ಲೋಡ್ ಮಾಡಲು, ಮಿಕ್ಟೆಕ್ ಅನ್ನು ಕಾನ್ಫಿಗರ್ ಮಾಡುವುದನ್ನು ಕಲಿತಿದ್ದೇವೆ.
11:08 ಈ ಕೆಳಗಿನ ಲಿಂಕ್ ನಲ್ಲಿರುವ ವೀಡಿಯೋವನ್ನುನೋಡಿ.

[1]

11:12 ಇದು ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ನ ಸಾರಾಂಶವಾಗಿದೆ. ನಿಮ್ಮಲ್ಲಿ ಉತ್ತಮ ಬ್ಯಾಂಡ್ವಿಡ್ತ್ ಇಲ್ಲವಾದಲ್ಲಿ, ಇದನ್ನು ಡೌನ್ಲೋಡ್ ಮಾಡಿ ನೋಡಿ.
11:18 ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ತಂಡವು: ಸ್ಪೋಕನ್ ಟ್ಯುಟೋರಿಯಲ್ ಗಳನ್ನು ಬಳಸಿ ಕಾರ್ಯಶಾಲೆಯನ್ನು ನಡೆಸುತ್ತದೆ. ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ.
11:28 ಹೆಚ್ಚಿನ ಮಾಹಿತಿಗಾಗಿ ಕೆಳಗಿನ ಲಿಂಕ್ ಗೆ ಬರೆಯಿರಿ.

contact@spoken-tutorial.org

11:33 Spoken Tutorial ಪ್ರೊಜೆಕ್ಟ್, ‘ಟಾಕ್ ಟು ಎ ಟೀಚರ್’ ಎಂಬ ಪ್ರೊಜೆಕ್ಟ್ ನ ಒಂದು ಭಾಗವಾಗಿದೆ. ಇದು ರಾಷ್ಟ್ರೀಯ ಸಾಕ್ಷರತಾ ಮಿಷನ್ ICT, MHRD, ಭಾರತ ಸರ್ಕಾರದ ಆಧಾರವನ್ನು ಪಡೆದಿದೆ.
11:45 ಇದರ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆಳಗಿರುವ ಲಿಂಕ್ ಅನ್ನುನೋಡಿ.

http://spoken-tutorial.org/NMEICT-Intro.

11:56 ಈ ಟ್ಯುಟೋರಿಯಲ್ ನ ಅನುವಾದಕರು ವಾದಿರಾಜ ಮತ್ತು ಪ್ರವಾಚಕಿ IIT Bombay ಯಿಂದ ಗ್ಲೋರಿಯಾ.

ಧನ್ಯವಾದಗಳು.

Contributors and Content Editors

Nancyvarkey